ಅಕಬರ ಅಲಿ

ಎಂ.ಅಕಬರ ಅಲಿಯವರು ನವೋದಯ ಕಾಲದ ಪ್ರಮುಖ ಸಾಹಿತಿ.

ಚುಟುಕು ಕವಿಯೆಂದೂ ಹೆಸರಾಗಿದ್ದರು.ಕನ್ನಡದಲ್ಲಿ ಮೊದಲ ಬಾರಿಗೆ ಕಾವ್ಯ ಸಂಕಲನವನ್ನು ಪ್ರಕಟಿಸಿದ (1951) ಕೀರ್ತಿ ಸಂಪಾದಿಸಿದ್ದರು

ಅಕಬರ ಅಲಿ
ಚಿತ್ರ[[File:|200px]]
ಜನನದ ದಿನಾಂಕ೩ ಮಾರ್ಚ್ 1925
ಹುಟ್ಟಿದ ಸ್ಥಳಖಾನಾಪುರ
ಸಾವಿನ ದಿನಾಂಕ೨೧ ಫೆಬ್ರವರಿ 2016
ವೃತ್ತಿಕವಿ
ರಾಷ್ಟ್ರೀಯತೆಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ಮಾತನಾಡುವ ಅಥವಾ ಬರೆಯುವ ಭಾಷೆಗಳುಕನ್ನಡ
ಪೌರತ್ವಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ದೊರೆತ ಪ್ರಶಸ್ತಿBangla Academy Literary Award
ಲಿಂಗಪುರುಷ

ಜನನ

ಡಾ| ಎಂ.ಅಕಬರ ಅಲಿ ಇವರು ೧೯೨೫ ಮಾರ್ಚ್ ೩ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಉಳ್ಳಾಗಡ್ಡಿ ಖಾನಾಪುರದಲ್ಲಿ ಜನಿಸಿದರು. ಇವರ ತಾಯಿ ಅಮೀರಬಿ; ತಂದೆ ಅಪ್ಪಾ ಸಾಹೇಬ.

ಶಿಕ್ಷಣ

ಅಕಬರ ಅಲಿಯವರ ಅವರ ಪ್ರಾಥಮಿಕ ಶಿಕ್ಷಣ ಉಳ್ಳೇಗಡ್ಡಿ ಖಾನಾಪುರದಲ್ಲಿ ಉರ್ದು ಮಾಧ್ಯಮದಲ್ಲಿ ನಡೆಯಿತು. 5ರಿಂದ 10ನೇತರಗತಿಯವರೆಗೆ ಬೆಳಗಾವಿಯ ಜಿಎ ಪ್ರೌಢ ಶಾಲೆಯಲ್ಲಿ ನಡೆಯಿತು. ಅಲ್ಲಿ ಅವರು ಕನ್ನಡ ಮಾಧ್ಯಮದಲ್ಲಿ ಓದಿದರು. ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿ.ಎ.(ಆನರ್ಸ್) ಮಾಡಿ , ಪುಣೆ ವಿಶ್ವವಿದ್ಯಾಲಯದಲ್ಲಿ ಎಂ.ಎ.ಮಾಡಿದರು. ಅಧ್ಯಯನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅಲಿ ಅವರು 1983ರಲ್ಲಿ 'ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ' ಎಂಬ ಮಹಾ ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದರು.

ವೃತ್ತಿಜೀವನ

ಅವರು ಕೆಲ ವರ್ಷಗಳವರೆಗೆ ಕಾರವಾರದ ಶಾಲೆಯಲ್ಲಿ ಶಿಕ್ಷಕರಾಗಿ, ನಂತರ ಮೈಸೂರು ವಿವಿಯ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಸಾಂಸಾರಿಕ ಜೀವನ

ಅಕಬರ ಅಲಿಯವರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ.

ಸೇವೆ

ಅಕಬರ ಅಲಿ ಅವರು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪ್ರವರ್ತಕ ಸಹಕಾರಿ ಸಂಘದ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿ, ಜಿಲ್ಲಾ ಸಾಹಿತ್ಯ ಸಂಘಟನೆಯಲ್ಲಿ ಕೈಜೋಡಿಸಿದ್ದರು. ರಾಜ್ಯ ಪಠ್ಯ ಪುಸ್ತಕ ನಿರ್ದೇಶನಾಲಯದ ಕಿರಿಯರ ವಿಶ್ವಕೋಶವಾದ 'ಜ್ಞಾನಗಂಗೋತ್ರಿ'ಯ ಎಂಟನೆಯ ಸಂಪುಟದ ಸಂಪಾದಕ ಮಂಡಲಿಯ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ (1981-83) ಸೇವೆ ಸಲ್ಲಿಸಿದ್ದಾರೆ.

ಕೃತಿಗಳು

ಅಕಬರ ಅಲಿಯವರು 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಕವನ ಸಂಕಲನ

  1. ವಿಷಸಿಂಧು (1951)
  2. ಅನ್ನ
  3. ನವಚೇತನ (1961)
  4. ಸುಮನಸೌರಭ (1965)
  5. ಗಂಧಕೇಶರ (1972)
  6. ತಮಸಾ ನದಿ ಎಡಬಲದಿ (ಸಮಗ್ರ)
  7. ಅಕಬರ ಅಲಿಯವರ ಚುಟುಕಗಳು (1989)

ಕಾದಂಬರಿ

  1. ನಿರೀಕ್ಷೆಯಲ್ಲಿ (1942)

ಸಂಶೋಧನೆ

  1. ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ (ಪಿಎಚ್.ಡಿ. ಪ್ರಬಂಧ)

ಆತ್ಮಕಥೆ

  1. ಒಂದು ರೋಚಕ ಪಯಣ (ಕಿರು ಆತ್ಮವೃತ್ತಾಂತ)

ಪ್ರಶಸ್ತಿ ಗೌರವ

  • ಸುಮನ ಸೌರಭ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ (1967)
  • ಗಂಧಕೇಶರ ಕೃತಿಗೆ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಮಂತ್ರಾಲಯದ ಗೌರವ,
  • 1975ರಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
  • ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ (ಪಿಎಚ್.ಡಿ. ಪ್ರಬಂಧ) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ (1984)
  • ಹುಬ್ಬಳ್ಳಿಯ ಜಗದ್ಗುರು ಮೂರು ಸಾವಿರ ಮಠದಿಂದ ಬಹುಮಾನ,
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1984),
  • ಡಿವಿಜಿ ಮುಕ್ತಕ ಪ್ರಶಸ್ತಿ
  • ೧೯೮೪ ರಲ್ಲಿ ಇವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಕಿದೆ.
  • 1985ರಲ್ಲಿ ಬೀದರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು.
  • ೧೯೮೯‍ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.
  • 2009ರಲ್ಲಿ ನಡೆದ ಮೈಸೂರು ಜಿಲ್ಲಾ 9ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
  • ಸಂಕೇಶ್ವರದಲ್ಲಿ 2011ರಲ್ಲಿ ಜರುಗಿದ ತಾಲೂಕು ಸಮ್ಮೇಳನದ ಅಧ್ಯಕ್ಷರಾಗಿದ್ದರು.

ನಿಧನ

ಉಲ್ಲೇಖಗಳು

ಉಲ್ಲೇಖ

Tags:

ಅಕಬರ ಅಲಿ ಜನನಅಕಬರ ಅಲಿ ಶಿಕ್ಷಣಅಕಬರ ಅಲಿ ವೃತ್ತಿಜೀವನಅಕಬರ ಅಲಿ ಸಾಂಸಾರಿಕ ಜೀವನಅಕಬರ ಅಲಿ ಸೇವೆಅಕಬರ ಅಲಿ ಕೃತಿಗಳುಅಕಬರ ಅಲಿ ಪ್ರಶಸ್ತಿ ಗೌರವಅಕಬರ ಅಲಿ ನಿಧನಅಕಬರ ಅಲಿ ಉಲ್ಲೇಖಗಳುಅಕಬರ ಅಲಿ ಉಲ್ಲೇಖಅಕಬರ ಅಲಿ

🔥 Trending searches on Wiki ಕನ್ನಡ:

ಬೌದ್ಧ ಧರ್ಮನರ್ಮದಾ ನದಿಮದಕರಿ ನಾಯಕಸಮಾಜ ವಿಜ್ಞಾನಅಕ್ಬರ್ಶಿಕ್ಷಣಡಿ.ವಿ.ಗುಂಡಪ್ಪಜಾತ್ರೆಶಬ್ದಸುಮಲತಾಕಂಪ್ಯೂಟರ್ಪಿತ್ತಕೋಶಹಿಂದೂ ಮಾಸಗಳುಮೂಲಭೂತ ಕರ್ತವ್ಯಗಳುದಲಿತಹೈದರಾಲಿಅಲಾವುದ್ದೀನ್ ಖಿಲ್ಜಿಚಾಲುಕ್ಯಭಾರತದ ರಾಜಕೀಯ ಪಕ್ಷಗಳುನಾಗಮಂಡಲ (ಚಲನಚಿತ್ರ)ಬಾಹುಬಲಿರಗಳೆಭಾರತದ ಪಂಚಾಯತ್ ರಾಜ್ ವ್ಯವಸ್ಥೆಸಂವತ್ಸರಗಳುಜ್ಞಾನಪೀಠ ಪ್ರಶಸ್ತಿಭಾಷೆಪ್ಯಾರಾಸಿಟಮಾಲ್ಭಾರತದ ವಿಭಜನೆವಾಲ್ಮೀಕಿರಾಷ್ಟ್ರೀಯ ಶಿಕ್ಷಣ ನೀತಿಕ್ಷಯಕರ್ನಾಟಕ ವಿಧಾನ ಪರಿಷತ್ಭಾರತದ ಸ್ವಾತಂತ್ರ್ಯ ದಿನಾಚರಣೆಕೆಂಪು ಮಣ್ಣುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಮೈಸೂರು ಅರಮನೆಹಸ್ತ ಮೈಥುನನಾಲ್ವಡಿ ಕೃಷ್ಣರಾಜ ಒಡೆಯರುಮರಣದಂಡನೆಚಂದ್ರಶೇಖರ ಕಂಬಾರಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳುಬುದ್ಧಮಂತ್ರಾಲಯವಾಣಿಜ್ಯ ಪತ್ರಕನ್ನಡ ರಂಗಭೂಮಿಮಾತೃಕೆಗಳುತೆರಿಗೆಒಂದನೆಯ ಮಹಾಯುದ್ಧಪ್ರಬಂಧ ರಚನೆಭಾರತೀಯ ಅಂಚೆ ಸೇವೆನೈಸರ್ಗಿಕ ಸಂಪನ್ಮೂಲರೇಣುಕಗೋತ್ರ ಮತ್ತು ಪ್ರವರಮಾದಿಗಛತ್ರಪತಿ ಶಿವಾಜಿಬಸವೇಶ್ವರಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನಅಮೀಬಾಕರ್ನಾಟಕ ಐತಿಹಾಸಿಕ ಸ್ಥಳಗಳುಇಸ್ಲಾಂ ಧರ್ಮಮೈಸೂರು ಸಂಸ್ಥಾನದ ದಿವಾನರುಗಳುಶಾಂತರಸ ಹೆಂಬೆರಳುರಾಜ್ಯಸಭೆದಯಾನಂದ ಸರಸ್ವತಿಅಮ್ಮಕ್ಯಾರಿಕೇಚರುಗಳು, ಕಾರ್ಟೂನುಗಳುಚಂದ್ರಗುಪ್ತ ಮೌರ್ಯಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ನೇಮಿಚಂದ್ರ (ಲೇಖಕಿ)ರಾಘವಾಂಕಅಸ್ಪೃಶ್ಯತೆಕೈವಾರ ತಾತಯ್ಯ ಯೋಗಿನಾರೇಯಣರುವಿಶ್ವ ರಂಗಭೂಮಿ ದಿನಕನ್ನಡಕನ್ನಡ ಸಾಹಿತ್ಯಪ್ರೇಮಾರಾಮ ಮಂದಿರ, ಅಯೋಧ್ಯೆಅಮೇರಿಕ ಸಂಯುಕ್ತ ಸಂಸ್ಥಾನ🡆 More