ಮರಳು ಉದ್ಯಮ

 ಯಾವುದೇ ಒಂದು ಕಟ್ಟಡವನ್ನು ಕಟ್ಟ ಬೇಕಾದರೆ ಅಂದರೆ ಆ ಕಟ್ಟಡವು ಗಟ್ಟಿಯಾಗಿ ಬಾಳ್ವಿಕೆ ಬರಬೇಕಾದರೆ ಮರಳು ಬೇಕೆ ಬೇಕು.  ಮರಳಿಗೆ ನಮ್ಮ ಕರ್ನಾಟಕದಲ್ಲಿ ಅಲ್ಲದೆ ಇಡೀ ಭಾರತದಲ್ಲಿ ತುಂಬಾ ಬೇಡಿಕೆ ಇದೆ.  ಇತ್ತೀಚಿನ ದಿನಗಳಲ್ಲಿಯಂತೂ ಇದರ ಬೇಡಿಕೆ ಅಪಾರವಾಗಿದೆ.  ಅದಕ್ಕಾಗಿಯೇ ಕೆಲವರು ಅದನ್ನು ಒಂದು ಉದ್ಯಮವಾಗಿಸಿ ಕೊಂಡಿದ್ದಾರೆ.                                                                                                                                                                                                            ಮರಳು ಎಂಬುದು ನದಿಯಲ್ಲಿ ಸಿಗುವಂತಹ ಒಂದು ಖನಿಜ ಸಂಪತ್ತು.  ಮಳೆ ಬರುವಾಗ ಎಲ್ಲಾ ಪ್ರದೇಶದಲ್ಲಿ ರಭಸವಾಗಿ ಬೀಳುವ ನೀರು ಮಣ್ಣಿನ ಕಣಗಳನ್ನು ನೀರಿನ ಜೊತೆಗೆ ಹರಿದು ಬಂದು ತೋಡುಗಳಲ್ಲಿ ಸೇರುತ್ತದೆ.  ಈ ತೋಡುಗಳಿಗೆ ಎಲ್ಲ ಕಡೆಯಿಂದ ಬಂದ ನೀರು ಸೇರಿದಾಗ ಆ ನೀರು ರಭಸವಾಗಿ ಹರಿದು ನದಿಗೆ ಬರುತ್ತದೆ.  ನದಿಯಲ್ಲಿ ರಭಸವಾಗಿ ಹರಿಯುವ ಈ ನೀರು ಮಣ್ಣಿನ ದೊಡ್ಡ ದೊಡ್ಡ ಕಣಗಳನ್ನು ಅಂದರೆ ಕಲ್ಲುಗಳನ್ನು ಅಲ್ಲಿಯೇ ಮೆಲ್ಲನೆ ಹರಿದು ನಂತರ ಸಣ್ಣ ಸಣ್ಣ ಕಣಗಳನ್ನು ಮುಂದಕ್ಕೆ ನೀರಿನ ಜೊತೆಗೆ ಎಸೆಯಲ್ಪಡಲಾಗುತ್ತದೆ, ನಂತರ ಅದು ನದಿಯಲ್ಲಿ ಮರಳಿನ ದಿನ್ನೆಗಳಾಗಿ ಸಂಗ್ರಹವಾಗುತ್ತದೆ.  ಕೆಲವು ಕಡೆ ಅದು ನೀರಿನ ಮಟ್ಟದಲ್ಲಿಯೇ ಇರುತ್ತದೆ.                                                                                                                                                                         ಈ ನದಿಯಲ್ಲಿದ್ದ ಮರಳಿನ ರಾಶಿಯನ್ನು ತೆಗೆದು ಲೋರಿಗಳಲ್ಲಿ ಬೇರೆ ಬೇರೆ ಊರುಗಳಿಗೆ ಸಾಗಟ ಮಾಡುವ ಉದ್ಯಮವನ್ನು ಮರಳಿನ ಉದ್ಯಮ ಎಂದು ಕರೆಯುತ್ತಾರೆ,  ಈ ಉದ್ಯಮವನ್ನು ಮಾಡಬೇಕಾದರೆ ಸರಕಾರದಿಂದ ಅನುಮತಿಯನ್ನು ಪಡೆಯಬೇಕು.  ಅನುಮತಿಯನ್ನು ಪಡೆದು ಅದು ಅನುಮೋದನೆಯಾದ ನಂತರ ಆ ವ್ಯಕ್ತಿಗೆ ನದಿಯಲ್ಲಿರುವ ಇಷ್ಟು ವಿಸ್ತೀರ್ನಾ ಸ್ಥಳಕ್ಕೆ ತಾತ್ಕಲಿಕ ಪರವಾಣಿಗೆಯನ್ನು ನೀಡುತ್ತಾರೆ.  ಪರವಾಣಿಗೆ ಪಡೆದ ವ್ಯಕ್ತಿಗೆ ತಿಂಗಳಿಗೆ ಇಷ್ಟೇ ಎಂದು ಪರವಾಣಿಗೆ ಪತ್ರವನ್ನು ನೀಡುತ್ತಾರೆ.  ಆ ಪರವಾಣಿಗೆ ಪತ್ರಗಳ ಆಧಾರದಲ್ಲಿ ಮಾತ್ರ ಆ ವ್ಯಕ್ತಿ ಮರಳು ಸಾಗಟವನ್ನು ಮಾಡಬಹುದು.  ಇತ್ತೀಚಿನ ದಿನಗಳಲ್ಲಿ ಹೊರ ಜಿಲ್ಲೆಗಳಿಗೂ ಮರಳು ಸಾಗಟ ಮಾಡಲು ತಾತ್ಕಲಿಕ ಪರವಾಣಿಗೆ ಪತ್ರವನ್ನು ನೀಡುತ್ತಾರೆ.  ಆದರೆ ಹೊರ ರಾಜ್ಯಗಳಿಗೆ ಮರಳು ಸಾಗಟ ಮಾಡಲು ಸರಕಾರದ ನಿರ್ಭಂದವಿದೆ.                                                                                          ಹೀಗೆ ಒಬ್ಬ ವ್ಯಕ್ತಿ ಮರಳಿನ ಉದ್ಯಮವನ್ನು ಮಾಡಬಹುದು.  ಅಲ್ಲಿ ದೋನಿಗಳನ್ನು ಹಾಕಲು ಆತ ಬಂಡವಾಳವನ್ನು ವಿನಿಯೋಗಿಸಬೇಕಾಗುತ್ತದೆ.  ಅಲ್ಲದೆ ನದಿಯಿಂದ ಮರಳನ್ನು ತೆಗೆಯುವ ನಿಪುಣರನ್ನು ತರಬೇಕಾಗುತ್ತದೆ.  ಹಾಗೂ ಅವರಿಗೂ ಉತ್ತಮ ವೇತನವನ್ನು ನೀಡಬೇಕಾಗುತ್ತದೆ.  ಹೀಗೆ ತಮ್ಮ ಉದ್ಯಮದಲ್ಲಿ ಆತ ಕಷ್ಟಪಟ್ಟು ದುಡಿದು ಲಾಭವಂತನಾಗಬಹುದು. 

ಉಲ್ಲೇಖ

Tags:

🔥 Trending searches on Wiki ಕನ್ನಡ:

ಅಂತರ್ಜಲರವೀಂದ್ರನಾಥ ಠಾಗೋರ್ಪಕ್ಷಿಕರ್ನಾಟಕದಲ್ಲಿ ಕೃಷಿಈಸ್ಟರ್ಹರಿದಾಸಕಾಟೇರಆಯ್ದಕ್ಕಿ ಲಕ್ಕಮ್ಮಎಚ್.ಎಸ್.ವೆಂಕಟೇಶಮೂರ್ತಿಜೈಮಿನಿ ಭಾರತದಲ್ಲಿ ನವರಸಗಳುವಸಾಹತುಕರ್ಣಾಟಕ ಬ್ಯಾಂಕ್ಗ್ರಾಮ ಪಂಚಾಯತಿಗೋಕಾಕ ಜಲಪಾತಚೀನಾಕೂಡಲ ಸಂಗಮಮೈಸೂರು ಅರಮನೆಫ್ರೆಂಚ್ ಕ್ರಾಂತಿಬಿ. ಆರ್. ಅಂಬೇಡ್ಕರ್ಸ್ತನ್ಯಪಾನಮುಖ್ಯ ಪುಟಬ್ರಿಟೀಷ್ ಸಾಮ್ರಾಜ್ಯಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಅಡಿಕೆನದಿಭಾರತದ ರಾಷ್ಟ್ರೀಯ ಉದ್ಯಾನಗಳುನುಗ್ಗೆಕಾಯಿಪೂರ್ಣಚಂದ್ರ ತೇಜಸ್ವಿಬಾಗಲಕೋಟೆಹಂಪೆಆರ್ಥಿಕ ಬೆಳೆವಣಿಗೆಮದರ್‌ ತೆರೇಸಾಮೈಸೂರು ಸಂಸ್ಥಾನಜಿ.ಪಿ.ರಾಜರತ್ನಂನೆಹರು ವರದಿಬಸವೇಶ್ವರಟೊಮೇಟೊಬುದ್ಧಸೂರ್ಯ ಗ್ರಹಣಮಾನವನ ಪಚನ ವ್ಯವಸ್ಥೆರಾಯಚೂರು ಜಿಲ್ಲೆಅನುಷ್ಕಾ ಶೆಟ್ಟಿಮಡಿವಾಳ ಮಾಚಿದೇವವರ್ಣಾಶ್ರಮ ಪದ್ಧತಿದೇವತಾರ್ಚನ ವಿಧಿತೇಜಸ್ವಿನಿ ಗೌಡವಿಶ್ವಕೋಶಗಳುಶಿವರಾಮ ಕಾರಂತಒಲಂಪಿಕ್ ಕ್ರೀಡಾಕೂಟಕರ್ಬೂಜಪರಿಸರ ವ್ಯವಸ್ಥೆಕೇಂದ್ರಾಡಳಿತ ಪ್ರದೇಶಗಳುಯಣ್ ಸಂಧಿಹಯಗ್ರೀವಸಮಾಜಶಾಸ್ತ್ರಕಿತ್ತೂರು ಚೆನ್ನಮ್ಮಮಹೇಶ್ವರ (ಚಲನಚಿತ್ರ)ಶಾಸನಗಳುಕನ್ನಡ ಕಾಗುಣಿತದ.ರಾ.ಬೇಂದ್ರೆಐಹೊಳೆಮೂಲವ್ಯಾಧಿಹೊನೊಲುಲುಪ್ರಲೋಭನೆರಾಮ್ ಮೋಹನ್ ರಾಯ್ಬಾಬು ಜಗಜೀವನ ರಾಮ್ಸಂಶೋಧನೆವರ್ಣಕೋಶ(ಕ್ರೋಮಟೊಫೋರ್)ರಂಜಾನ್ಹೊಯ್ಸಳಭಾರತೀಯ ಸಂವಿಧಾನದ ತಿದ್ದುಪಡಿಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಚಂದ್ರರಜಪೂತಮಹೇಂದ್ರ ಸಿಂಗ್ ಧೋನಿಕೆಂಪು ರಕ್ತ ಕಣ🡆 More