ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು

ಭಾರತದ ಹಲವು ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ವೈಮಾನಿಕ ನಿಲ್ದಾಣಗಳನ್ನು ಕಾಣಬಹುದಾಗಿದೆ.

ಕೆಲವು ಜನದಟ್ಟಣೆಯ ಸಾಂದ್ರತೆಯಲ್ಲಿ ಪ್ರಮುಖವಾಗಿದ್ದರೆ ಇನ್ನೂ ಹಲವು ಪ್ರಶಾಂತಮಯ ಪರಿಸರದಿಂದ ಹೆಸರುವಾಸಿಯಾಗಿವೆ.

ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬಯಿ

ಮುಂಬಯಿನಲ್ಲಿರುವ ಈ ವಿಮಾನ ನಿಲ್ದಾಣವು 1,500 ಎಕರೆಯಷ್ಟು ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿದೆ. ಹಲವು ದೇಶಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳು ಲಭ್ಯವಿರುವ ಈ ನಿಲ್ದಾಣವು ಮೊದಲಿಗೆ ಸಾಹರ್ ವಿಮಾನ ನಿಲ್ದಾಣ ಎಂಬ ಹೆಸರನ್ನು ಹೊಂದಿತ್ತು.

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ

ನವದೆಹಲಿಯ ನೈರುತ್ಯ ದಿಕ್ಕಿಗೆ 16 ಕಿ.ಮೀ ದೂರದಲ್ಲಿರುವ ಪಾಲಂ ಎಂಬಲ್ಲಿ ಈ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣವಿದೆ. ಪ್ರಸ್ತುತ, ಭಾರತದ ಅತಿ ಜನದಟ್ಟಣೆಯಿರುವ ಈ ವಿಮಾನ ನಿಲ್ದಾಣಕ್ಕೆ ಭಾರತದ ಮಾಜಿ ಪ್ರಧಾನಿ ಇಂದಿರಾಗಂಧಿ ಅವರ ಹೆಸರನ್ನು ಅವರ ಗೌರವಾರ್ಥವಾಗಿ ಇದಕ್ಕಿಡಲಾಗಿದೆ. 5,220 ಎಕರೆಯಷ್ಟು ವಿಸ್ತೀರ್ಣದಲ್ಲಿ ಈ ನಿಲ್ದಾಣ ಹರಡಿದೆ.

ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ

ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣ ಭಾರತದ ಮಹಾನಗರ ಚೆನ್ನೈನ ಮೀನಂಬಕ್ಕಂ, ಪಲ್ಲವರಂ ಹಾಗು ತಿರುಸುಲಂ ಪ್ರದೇಶಗಳಲ್ಲಿ ವಿಸ್ತಾರವಾಗಿ ಹಬ್ಬಿದೆ. ಪ್ರಯಾಣಿಕರಿಗೆ ಪ್ರವೇಶ ಭಾಗವನ್ನು ತಿರುಸುಲಂ ನಲ್ಲಿ ಕಲ್ಪಿಸಲಾಗಿದೆ.ಇದರ ಅಧಿಕೃತ ಹೆಸರು ಅರೀಂಗರಣ್ಣಾ ಅಥವಾ ಅಣ್ಣಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

ನೇತಾಜಿ ಸುಭಾಸ ಚಂದ್ರ ಬೋಸ್ ನಿಲ್ದಾಣ, ಕೊಲ್ಕತ್ತಾ

ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕಾತ್ತಾದಲ್ಲಿದೆ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಕೊಲ್ಕತ್ತಾ ನಗರ ಕೇಂದ್ರದಿಂದ ಸುಮಾರು 17 ಕಿ.ಮೀ ದೂರದಲ್ಲಿದೆ. 1670 ಎಕರೆಯಷ್ಟು ವಿಸ್ತಾರವಾಗಿರುವ ಈ ನಿಲ್ದಾಣವು ಮೊದಲಿಗೆ ದಮ್ ದಮ್ ವಿಮಾನ ನಿಲ್ದಾಣ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರಿನ ಹೊರವಲಯದಲ್ಲಿ ಸುಮಾರು 40 ಕಿ.ಮೀ ದೂರದಲ್ಲಿ ನಿರ್ಮಿಸಲಾಗಿದೆ. 5,130 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಈ ವಿಮಾನ ನಿಲ್ದಾಣವು ಬೆಂಗಳೂರು ಮುಖ್ಯ ರೈಲು ನಿಲ್ದಾಣದಿಂದ ಕೇವಲ 30 ಕಿ.ಮೀ ದೂರವಿದೆ. ಈಗ ಇದು ೩ನೇ ಅತಿ ಜನ ದಟ್ಟಣೆಯ ವಿಮಾನ ನಿಲ್ದಾಣವಾಗಿದೆ.

ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊಚ್ಚಿ

ಕೇರಳದ ಕೊಚ್ಚಿ ನಗರದ ನೆಡುಂಬಾಶೇರಿ ಎಂಬಲ್ಲಿ ಈ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣವಿದೆ. ಇದು ಕೊಚ್ಚಿ ನಗರದಿಂದ 30 ಕಿ.ಮೀ ದೂರದಲ್ಲಿದೆ.

ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊಳಿಕೋಡ್

ಹಿಂದೆ ಕ್ಯಾಲಿಕಟ್ ಎಂದು ಕರೆಯಲಾಗುತ್ತಿದ್ದ ಕೇರಳದ ಇಂದಿನ ಕೊಳಿಕೋಡ್ ನಲ್ಲಿ ಈ ನಿಲ್ದಾಣವಿದೆ. ಕರಿಪುರ್ ನಿಲ್ದಾಣ ಎಂತಲೂ ಕರೆಯಲಾಗುವ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರಿಪುರ್ ನಲ್ಲಿ ನೆಲೆಸಿದ್ದು ಕೊಳಿಕೋಡ್ ನಿಂದ 28 ಕಿ.ಮೀ ದೂರವಿದೆ.

ತ್ರಿವೇಂದ್ರಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ತಿರುವನಂತಪುರಂ

ಕೇರಳದ ರಾಜಧಾನಿ ನಗರ ತಿರುವನಂತಪುರಂ ನಗರ ಕೇಂದ್ರದಿಂದ ಕೇವಲ 3.7 ಕಿ.ಮೀ ದೂರದಲ್ಲಿ ಈ ನಿಲ್ದಾಣವಿದೆ. ಭಾರತದ ನಾಲ್ಕು ಮಹಾನಗರಗಳ ನಂತರ ಬೇರೆಡೆ ನಿರ್ಮಿಸಲಾದ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ ಈ ವಾಯು ನಿಲ್ದಾಣ.

ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗೋವಾ

ಹೆಚ್ಚು ಜನಪ್ರಿಯವಾಗಿ ದಾಬೋಲಿಮ್ ನಿಲ್ದಾಣವೆಂದು ಕರೆಯಲ್ಪಡುವ ಈ ವಿಮಾನ ನಿಲ್ದಾಣವು ಗೋವಾದ ದಾಬೋಲಿಮ್ ಎಂಬ ಪ್ರದೇಶದಲ್ಲಿ ನೆಲೆಸಿದೆ. ವಾಸ್ಕೊ ಡ ಗಾಮಾದಿಂದ ಕೇವಲ 4 ಕಿ.ಮೀ ದೂರದಲ್ಲಿರುವ ಈ ನಿಲ್ದಾಣವು ರಾಜಧಾನಿ ಪಣಜಿಯಿಂದ 30 ಕಿ.ಮೀ ದೂರದಲ್ಲಿದೆ.

ಸರ್ದಾರ್ ವಲ್ಲಭಭಾಯ್ ಪಟೇಲ್ ನಿಲ್ದಾಣ, ಅಹ್ಮದಾಬಾದ್

ಸರ್ದಾರ್ ವಲ್ಲಭಭಾಯ್ ಪಟೇಲ್ ಹೆಸರಿನ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವುದು ಗುಜರಾತ್ ರಾಜ್ಯದ ಅಹ್ಮದಾಬಾದ್ ನಲ್ಲಿ. ಅಹ್ಮದಾಬಾದ್ ನಗರದಿಂದ 8 ಕಿ.ಮೀ ದೂರವಿರುವ ಈ ನಿಲ್ದಾಣಕ್ಕೆ ಹೆಸರು ಭಾರತದ ಮಾಜಿ ಉಪಪ್ರಧಾನಿ ಹಾಗು ಉಕ್ಕಿನ ಮನುಷ್ಯನೆಂದೆ ಖ್ಯಾತಿ ಪಡೆದಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ರಿಂದ ಬಂದಿದೆ.

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು ಆಂಧ್ರದ ರಾಜಧಾನಿ ನಗರ ಹೈದರಾಬಾದ್ ನಲ್ಲಿ. ಈ ವಿಮಾನ ನಿಲ್ದಾಣವು ಕೊಚ್ಚಿ ನಂತರದಲ್ಲಿ ಎರಡನೆಯ ಸಾರ್ವಜನಿಕ ಹಾಗು ಖಾಸಗಿ ವಲಯಗಳ ಜಂಟಿ ಪಾಲುದಾರಿಕೆಯ ಯೋಜನೆಯಾಗಿದೆ.

ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ನಿಲ್ದಾಣ, ಗುವಾಹಟಿ

ಮೊದಲಿಗೆ ಗುವಾಹಟಿ ಅಥವಾ ಬೊರ್ಝರ್ ನಿಲ್ದಾಣ ಎಂದು ಕರೆಯಲ್ಪಡುತ್ತಿದ್ದ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವುದು ಈಶಾನ್ಯ ಭಾರತದ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ ನಿರ್ವಹಿಸಲ್ಪಡುವ ಈ ನಿಲ್ದಾಣವು ಭಾರತೀಯ ವಾಯು ಸೇನೆಗೂ ಕೂಡ ಸೇವೆ ಸಲ್ಲಿಸುತ್ತದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು , ಕರ್ನಾಟಕ

ಮೊದಲಿಗೆ ಬಜ್ಪೆ ವಿಮಾನ ನಿಲ್ದಾಣವೆಂದು ಕರೆಯಲ್ಪಡುತ್ತಿದ್ದ ಮಂಗಳೂರಿನ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 1951 ಡಿಸೆಂಬರ್ 25 ರಂದು ಪ್ರಾರಂಭವಾಯಿತು. ಮಧ್ಯ ಪ್ರಾಚ್ಯ ರಾಷ್ಟ್ರಗಳೊಂದಿಗೆ ಮಂಗಳೂರನ್ನು ಸಂಪರ್ಕಿಸುವ ಈ ವಿಮಾನ ನಿಲ್ದಾಣವು ಕರ್ನಾಟಕದಲ್ಲೆ ಮೊದ ಎರಡು ರನ್ ವೇ ಗಳುಳ್ಳ ನಿಲ್ದಾಣವಾಗಿತ್ತು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿಮಾನ ನಿಲ್ದಾಣ, ನಾಗಪುರ, ಮಹಾರಾಷ್ಟ್ರ

ಮಹಾರಾಷ್ಟ್ರದ ನಾಗ್ಪುರ್ ನಲ್ಲಿದೆ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಭಾರತದ ಮ್ರಮುಖ ನಗರಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕ ಸಾಧಿಸುವ ಈ ನಿಲ್ದಾಣವು ಶಾರ್ಜಾ ದೇಶಕ್ಕೂ ಕೂಡ ವಿಮಾನ ಹರ್ರಟವನ್ನು ಒದಗಿಸುತ್ತದೆ.

ಬಿಜು ಪಟ್ನಾಯಕ್ ಏರ್ಪೋರ್ಟ್, ಭುವನೇಶ್ವರ, ಒಡಿಶಾ

ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಪ್ರಸ್ತುತ, ಒಡಿಶಾ ರಾಜ್ಯದಲ್ಲಿ ಇದೊಂದೆ ಪ್ರಮುಖ ವಾಯು ನೆಲೆಯಾಗಿದೆ.

ತಿರುಚಿರಾಪಳ್ಳಿ ವಿಮಾನ ನಿಲ್ದಾಣ, ತಿರುಚಿರಾಪಳ್ಳಿ, ತಮಿಳುನಾಡು

ತಮಿಳುನಾಡಿನ ತಿರುಚಿರಾಪಳ್ಳಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 210 ರ ಬಳಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಅಕ್ಟೋಬರ್ 4, 2012 ರಂದು ಇದನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಘೋಷಿಸಲಾಯಿತು.

ಕೊಯಮತ್ತೂರು ವಿಮಾನ ನಿಲ್ದಾಣ, ಕೊಯಮತ್ತೂರು, ತಮಿಳುನಾಡು

ತಮಿಳುನಾಡಿನ ಕೊಯಮತ್ತೂರಿನ ಪೀಲಮೆಡು ಎಂಬಲ್ಲಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಕೊಯಮತ್ತೂರು ನಗರದಿಂದ ಕೇವಲ 11 ಕಿ.ಮೀ ದೂರದಲ್ಲಿದೆ.

ಚೌಧರಿ ಚರಣ್ ಸಿಂಗ್ ನಿಲ್ದಾಣ, ಲಖನೌ, ಉತ್ತರ ಪ್ರದೇಶ

ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಪ್ರದೇಶ ರಾಜ್ಯದ ರಾಜಧಾನಿ ಲಖನೌ ನಗರದಲ್ಲಿದೆ. ಅಕ್ಟೋಬರ್ 4, 2012 ರಂದು ಇದನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಘೋಷಿಸಲಾಯಿತು.

ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ನಿಲ್ದಾಣ, ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್

ಭಾರತದ ಅಂಡಮಾನ್ ಮತ್ತು ನಿಕೋಬಾರ್ ಗಳ ಪ್ರಮುಖ ವಾಯು ನಿಲ್ದಾಣವಾಗಿದೆ ಇದು. ಪೋರ್ಟ್ ಬ್ಲೇರ್ ನಗರದಿಂದ ಕೇವಲ 2 ಕಿ.ಮೀ ದೂರದಲ್ಲಿದೆ.shivaraju s Heggadahalli

Tags:

ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬಯಿಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ನೇತಾಜಿ ಸುಭಾಸ ಚಂದ್ರ ಬೋಸ್ ನಿಲ್ದಾಣ, ಕೊಲ್ಕತ್ತಾಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರುಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊಚ್ಚಿಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊಳಿಕೋಡ್ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ತ್ರಿವೇಂದ್ರಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ತಿರುವನಂತಪುರಂಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗೋವಾಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಸರ್ದಾರ್ ವಲ್ಲಭಭಾಯ್ ಪಟೇಲ್ ನಿಲ್ದಾಣ, ಅಹ್ಮದಾಬಾದ್ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ನಿಲ್ದಾಣ, ಗುವಾಹಟಿಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು , ಕರ್ನಾಟಕಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿಮಾನ ನಿಲ್ದಾಣ, ನಾಗಪುರ, ಮಹಾರಾಷ್ಟ್ರಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಬಿಜು ಪಟ್ನಾಯಕ್ ಏರ್ಪೋರ್ಟ್, ಭುವನೇಶ್ವರ, ಒಡಿಶಾಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ತಿರುಚಿರಾಪಳ್ಳಿ ವಿಮಾನ ನಿಲ್ದಾಣ, ತಿರುಚಿರಾಪಳ್ಳಿ, ತಮಿಳುನಾಡುಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಕೊಯಮತ್ತೂರು ವಿಮಾನ ನಿಲ್ದಾಣ, ಕೊಯಮತ್ತೂರು, ತಮಿಳುನಾಡುಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಚೌಧರಿ ಚರಣ್ ಸಿಂಗ್ ನಿಲ್ದಾಣ, ಲಖನೌ, ಉತ್ತರ ಪ್ರದೇಶಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ನಿಲ್ದಾಣ, ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು

🔥 Trending searches on Wiki ಕನ್ನಡ:

ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಸಮಾಜಶಾಸ್ತ್ರಆಟಿಸಂಭರತನಾಟ್ಯಕಾರ್ಮಿಕರ ದಿನಾಚರಣೆಬೆಳಗಾವಿಮಂಕುತಿಮ್ಮನ ಕಗ್ಗಚದುರಂಗದ ನಿಯಮಗಳುಕನ್ನಡ ರಾಜ್ಯೋತ್ಸವಬ್ಲಾಗ್ಕೃಷ್ಣಮಹಮದ್ ಬಿನ್ ತುಘಲಕ್ಸಹಕಾರಿ ಸಂಘಗಳುವರದಕ್ಷಿಣೆಚಿತ್ರದುರ್ಗಪ್ರೇಮಾಕಂದಷಟ್ಪದಿಕನ್ನಡ ಅಭಿವೃದ್ಧಿ ಪ್ರಾಧಿಕಾರಸುಮಲತಾಕನ್ನಡತಿ (ಧಾರಾವಾಹಿ)ಮಳೆಗಾಲತಲಕಾಡುಹನುಮ ಜಯಂತಿಸಂವತ್ಸರಗಳುಜಾನಪದಕರ್ನಾಟಕದ ಹಬ್ಬಗಳುಫಿರೋಝ್ ಗಾಂಧಿಭತ್ತಕಾದಂಬರಿಜೈನ ಧರ್ಮದೇವತಾರ್ಚನ ವಿಧಿಖ್ಯಾತ ಕರ್ನಾಟಕ ವೃತ್ತತಾಳೀಕೋಟೆಯ ಯುದ್ಧಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುವ್ಯಾಸರಾಯರುರತ್ನತ್ರಯರುಶಿರ್ಡಿ ಸಾಯಿ ಬಾಬಾಮೂಲಧಾತುಅಮ್ಮಕೆ.ಎಲ್.ರಾಹುಲ್ಗಣೇಶಕನ್ನಡ ಛಂದಸ್ಸುನೀರಾವರಿಸಂಶೋಧನೆಬಾಬು ಜಗಜೀವನ ರಾಮ್ಕನ್ನಡದಲ್ಲಿ ವಚನ ಸಾಹಿತ್ಯತತ್ಪುರುಷ ಸಮಾಸವಿಧಾನ ಸಭೆಸಂಚಿ ಹೊನ್ನಮ್ಮಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಚೆನ್ನಕೇಶವ ದೇವಾಲಯ, ಬೇಲೂರುಬಿಳಿ ರಕ್ತ ಕಣಗಳುಸಮುಚ್ಚಯ ಪದಗಳುಭಾರತದಲ್ಲಿ ಮೀಸಲಾತಿಪ್ರಜ್ವಲ್ ರೇವಣ್ಣವ್ಯಾಪಾರಹಸ್ತ ಮೈಥುನಜಾಪತ್ರೆರವಿಚಂದ್ರನ್ಎಲೆಕ್ಟ್ರಾನಿಕ್ ಮತದಾನಸಮಾಜ ವಿಜ್ಞಾನಶಿಕ್ಷಣಗುಡಿಸಲು ಕೈಗಾರಿಕೆಗಳುಭಗತ್ ಸಿಂಗ್ಹಳೆಗನ್ನಡತತ್ತ್ವಶಾಸ್ತ್ರಶ್ರೀವಿಜಯಸಂಭೋಗಸಮುದ್ರಗುಪ್ತಕನ್ನಡದಲ್ಲಿ ಕಾದಂಬರಿ ಸಾಹಿತ್ಯಕೃಷ್ಣಾ ನದಿಅಲಂಕಾರಬಹಮನಿ ಸುಲ್ತಾನರುಸಂಜಯ್ ಚೌಹಾಣ್ (ಸೈನಿಕ)🡆 More