ಟೆಲಿಗ್ರಾಂ

ಅಂಚೆ ಮತ್ತು ತಂತಿ (ಟೆಲಿಗ್ರಾಂ)


  • ಬಾರತದಲ್ಲಿ ಒಂದು ಊರಿನಿಂದ ಬೇರೆ ಊರಿಗೆ ಸಂಪರ್ಕ ಸಾಧನ ವೆಂದರೆ ಹಿಂದೆ ಶ್ರೀಮಂತರೂ, ರಾಜರೂ ಪಾರಿವಾಳಗಳನ್ನು ಉಪಯೋಗಿಸುತ್ತಿದ್ದುದಾಗಿ ಕೇಳಿದ್ದೇವೆ. ಆದರೆ ಬ್ರಿಟಿಷರು ಬಂದ ಮೇಲೆ ಅವರಿಗೆ ವ್ಯಾಪಾರ ವಾಣಿಜ್ಯಕ್ಕೆ ವ್ಯವಸ್ಥಿತ ಸಂಪರ್ಕ ವ್ಯವಸ್ಥೆ ಬೇಕಾಗಿತ್ತು. ರಾಬಟ್ ಕ್ಲೈವ್ ನು ಬಂಗಾಳದಲ್ಲಿ ೨೪-೩-೧೭೬೬ರಲ್ಲಿ ತಮ್ಮ ಕಂಪನಿಗಾಗಿ ಒಂದು ಅಂಚೆ ವ್ಯವಸ್ಥೆ ಯನ್ನು ಆರಂಭಿಸಿದನು. ನಂತರ ೩೧-೩-೧೭೭೪ ರಲ್ಲಿ ಸಾರ್ವಜನಿಕರಿಗೂ ಈ ವ್ಯವಸ್ಥೆಯ ಉಪಯೋಗಕ್ಕೆ ಅವಕಾಶಮಾಡಿ ಕೊಟ್ಟನು. ಗೌ.ಜ. ವಾರನ್ ಹೇಸ್ಟಿಂಗ್ಸನು ಅದನ್ನು ಮದ್ರಾಸ್ ಮತ್ತು ಬೊಂಬಾಯಿಗೆ (೧೭೯೨) ವಿಸ್ತರಿಸಿದನು ಮತ್ತು ಮೊಟ್ಟಮೊದಲಿಗೆ ಪೋಸ್ಟ್ ಮಾಸ್ಟರ್ ಜನರಲ್ ಹುದ್ದೆಯನ್ನು ಸೃಸ್ಟಿಸಿದನು. ಗೌ.ಜ. ಕಾರನ್ ವಾಲೀಸ್ನು ಈ ಅಂಚೆ ವ್ಯವಸ್ಥೆಯ ಖರ್ಚನ್ನು ಜಮೀನುದಾರರು ರಾಜರುಗಳು ಭರಿಸುವ ನಿಯಮ ತಂದನು ಸನ್ ೧೮೫೪ ರಲ್ಲಿ ಡಾಲ್ ಹೌಸಿಯು ಅರ್ಧ ಆಣೆ ಯ (ಆರು ಕಾಸು- ೧ ರೂ.ಯ ೧/೩೨ ಭಾಗ) ಅಂಚೆ ಕಾರ್ಡಿನ ಚಲಾವಣೆ ತಂದನು.ಅದರಲ್ಲಿ ಭಾರತದ ಯಾವ ಊರಿಗೆ ಬೇಕಾದರೂ ಬರೆದು ಸಂದೇಶ ಕಳಿಸಬಹುದಿತ್ತು. ಅದಕ್ಕೆ ವಿಕ್ಟೋರಿಯಾ ರಾಣಿಯ ಮುಖ ಮುದ್ರೆ ಯ ಅಂಚೆ ಚೀಟಿಯ ಅಚ್ಚು ಇದ್ದಿತು ಅದರ ಜೊತೆಯಲ್ಲಿ ೪ (೨೫ಪೈ) ಆಣೆಯ ಸ್ಟಾಂಪಿನ ಕವರೂ ಚಲಾವಣೆಗೆ ತರಲಾಯಿತು. (ಕಲ್ಕತ್ತಾದಲ್ಲಿ ಕಲ್ಲಚ್ಚಿನಲ್ಲಿ ಮುದ್ರಿಸಿದ ಸ್ಟಾಂಪುಗಳು). ಲಾ. ಡಾಲ್ ಹೌಸಿಯ ಕಾಲ- ೧೮೫೪ರಲ್ಲಿ ಪೋಸ್ಟಾಪೀಸ್ ಆಕ್ಟ್ ಜಾರಿಗೆ ಬಂದಿತು. ಆಗಿದ್ದ ರಾಜರುಗಳು ತಮ್ಮ ರಾಜ್ಯಕ್ಕೆ ಸೀಮಿತವಾಗಿ ತಮ್ಮದೇ ಅಂಚೆ ವ್ಯವಸ್ಥೆ - ಸ್ಟಾಂಪುಗಳನ್ನು ಹೊಂದಲು ಅವಕಾಶವಿತ್ತು.

೧೮೫೪ರ ಟೆಲಿಗ್ರಾಫ್ ಕಾನೂನು-ತಂತಿ ಸಂದೇಶ


  • ತಂತಿ ಸಂದೇಶ -(ಟೆಲಿಗ್ರಾಂ)
  • ದೂರದ ಬರಹ ಎಂಬ ಅರ್ಥವುಳ್ಳ ಟೆಲಿಗ್ರಾಫ್ ಯೂರೋಪಿನಲ್ಲಿ ೧೭೯೨ ರಿಂದ ಅದರ ಕರಡು ರೂಪದಲ್ಲಿ ಬಳಕೆಯಲ್ಲಿತ್ತು . ಅಮೇರಿಕದ ವಿಜ್ಞಾನಿ ಸಂಶೋಧಕ ಎಫ್ ಬಿ ಮೋರ್ಸ್ ಎಫ್ ಬಿ ಮೋ(ಓ)ರ್ಸ್ ೧೮೩೭ರಲ್ಲಿ ವಿದ್ಯತ್ ತರಂಗದ ಟೆಲಿಗ್ರಾಫನ್ನು ಕಂಡು ಹಿಡಿದ. ತಂತಿ ಮೂಲಕ ಸಂದೇಶ ಕಳಿಸಲು ಅದಕ್ಕೆ ಕೆಲವು ಸಂಕೇತಗಳನ್ನು ಬಳಸಿದ . ಈಗ ಅದನ್ನು ಮೋರ್ಸ್‌ ಸಂಕೇತವೆಂದೆ ಕರೆಯುತ್ತಾರೆ. ಮಾತಿನ ಬದಲು ಕಟ್ಟ - ಕಡಕಟ್ಟ -ಕಟ್ಟ (ಒಂದು ಗಿಡ್ಡ ಒಂದು ಉದ್ದ ಸಂಕೇತ) ಈ ಬಗೆಯ ಶಬ್ದ ಸಂದೇಶದಲ್ಲಿ ಇಂಗ್ಲಿಷ್ ನ ೨೬ ಅಕ್ಷರಗಳನ್ನು ಇತರೆ ವಾಕ್ಯ ಚಿನ್ಹೆ ಗಳನ್ನೂ ತಂತಿಯ ಮೂಲಕ ವಿದ್ಯತ್ ತರಂಗಗಳ ತಡೆ-ಸಂವಹನ-ತಡೆ-ಸಂವಹನ : ಹೀಗೆ ಅದನ್ನು ಈ ಕಡೆಯಿಂದ ಕಳಿಸಿದರೆ ಆ ಕಡೆ ಆ ವಿದ್ಯತ್ ತರಂಗವು ಅದೇ ರೀತಿ ರವಾನೆಯಾಗಿ ಪರಿವರ್ತಿತವಾಗುತ್ತಿತ್ತು.

ತಂತಿ ಸಂದೇಶ ರವಾನೆಯ ಬೆಳವಣಿಗೆ


ಟೆಲಿಗ್ರಾಂ 
(ದುಂಡು ನಾಬ್ ಗೆ ಎದುರಿನ ಪಟ್ಟಿ ಸೇರಿಕೊಂಡಿದೆ-ಬೆಳಕಿನ ಪ್ರತಿಫಲನದಿಂದ ಬಿಟ್ಟಂತೆ ಕಾಣುವುದಷ್ಟೆ) ಇತ್ತೀಚಿನವರೆಗೂ ಇದ್ದ ಟೆಲಿಗ್ರಾಮ್ ಕಳಿಸುವ ಯಂತ್ರ-ದುಂಡು ಹಿಡಿಯನ್ನು ಒತ್ತಿದಾಗ ವಿದ್ಯುತ್ ತಡೆ(ಕಡಿತ)-ಅದು ಡಾಟ್-/-ಹೃಸ್ವ (*) ಸಂಕೇತ~ಬಿಟ್ಟಾಗ ವಿದ್ಯುತ್ ಚಲನೆ-ಉದ್ದ ಸಂಕೇತ-ಡ್ಯಾಷ್ (-).

ಈಸ್ಟ ಇಂಡಿಯಾ ಕಂಪನಿಗೆ ಬಂದ ವ್ಶೆದ್ಯ ವಿಲಿಯಂ ಬ್ರೂಕ್ ಎಲೆಕ್ಟ್ರಿಕ್ ನಲ್ಲಿ ಆಸಕ್ತಿ ಹೊಂದಿದ್ದು ೧೮೯೯ರಲ್ಲಿ ಕಲ್ಕತ್ತಾದಲ್ಲಿ ಸುಮಾರು ೧೪ ಕಿ.ಮೀ.ನ ತಂತಿಸಂದೇಶ ರವಾನೆ ವ್ಯವಸ್ಥೆ ರೂಪಿಸಿದ. ಲಾರ್ಡ ಡಾಲ್ ಹೌಸಿಯು ವಿಲಿಯಂ ಬ್ರೂಕ್ ಓ ಶೋಹನ್ನೆಯನ್ನು ಭಾರತದಲ್ಲಿ ಟೆಲಿಗ್ರಾಫ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನೇಮಿಸಿದ.ಆರಂಭದಲ್ಲಿ , ೧೮೫೦ ರಲ್ಲಿ ಪ್ರಾಯೋಗಿಕವಾಗಿ ಕಲ್ಕತ್ತಾ ಮತ್ತು ಡೈಮಂಡ್ ಹಾರ್ಬರ್ ನಡುವೆ ತಂತಿ ಸಂದೇಶ ರವಾನೆ ವ್ಯವಸ್ಥೆ ಮಾಡಲಾಯಿತು. ನಂತರ ಈ ತಂತಿವ್ಯವಸ್ಥೆ ೧೮೫೫ ರಲ್ಲಿ ಕಾರ್ಯಾರಂಭ ಮಾಡಿತು..ವಿಳಾಸದ ಪದಗಳೂ ಸೇರಿ ಒಂದು ಪದಕ್ಕೆ ಒಂದು ರೂಪಾಯಿನಂತೆ ದರ ವಿಧಿಸಲಾಯಿತು ೪೦೦ ಮೈಲಿಗೂ ಹೆಚ್ಚು - ಎರಡರಷ್ಟುದರ ಇತ್ತು. ಅಲ್ಲಿಂದ ಟೆಲಿಗ್ರಾಫ್ ವ್ಯವಸ್ಥೆ ಭಾರತದಲ್ಲಿ ಬೆಳೆದು ಜಗತ್ತಿನಲ್ಲಿಯೇ ೬ನೆಯ ಅತಿದೊಡ್ಡ ತಂತಿ ಸಂದೇಶದ ವ್ಯವಸ್ಥೆಯಾಗಿ ಬೆಳೆಯಿತು. ೧೯೩೯ ರಲ್ಲಿಯೇ ಭಾರತದಲ್ಲಿ ೧೦೦೦೦೦ ಮೈಲು ಉದ್ದ ತಂತಿ ಮಾರ್ಗ ಇತ್ತು ಉತ್ತಮ ಟೆಲಿಫೋನ ವ್ಯವಸ್ಥೆ ಬರುವವರೆಗೂ ಶೀಘ್ರ ಸಂದೇಶ ಕಳಿಸಲು ಟೆಲಿಗ್ರಾಂ ಉತ್ತಮ ವ್ಯವಸ್ಥೆಯಾಗಿತ್ತು. ಪತ್ರಿಕೆಯವರು ಅಧಿಕಾರಿಗಳು , ಸೈನಿಕರು, ರೋಗಿಗಳು, ಇವರು ಸತತ ಬಳಸುವ ಸಾಧನವಾಗಿತ್ತು; ದೂರದ ಸಂಬಂಧಿಕರಿಗೆ ಮೃತರ ಸುದ್ದಿ ಕಳಿಸಲು ಟೆಲಿಗಾಂ ಹೆಚ್ಚು ಬಳಕೆಯಾಗುತ್ತಿತ್ತು. ಪೋಸ್ಟ್ ಆಫೀಸಿನವರು ಟೆಲಿಗ್ರಾಂ ಸಂದೇಶದ ಕವರನ್ನು ತಂದು ಕೊಟ್ಟಾಗ ಅದನ್ನು ತೆರೆದು ನೋಡುವ ಮನೆಯವರಿಗೆ ಎದೆ ಡವ-ಡವ ಎಂದು ಬಡಿದುಕೊಳ್ಳುತ್ತಿತ್ತು.

ಟೆಲಿಗ್ರಾಂ 
ಮೇಲಿನ ಯಂತ್ರದ - ಬೇರೆ ಬಗಯ ಸರಳ ರೇಖಾಚಿತ್ರ
  • ೧೯೮೫ ರಲ್ಲಿ ಸುಮಾರು ೪೫೦೦೦ ತಂತಿ ಸಂದೇಶದ ಕಾರ್ಯಾಲಯಗಳಿದ್ದವು. ವರ್ಷಕ್ಕೆ ೬ ಕೋಟಿ ಸಂದೇಶಗಳ ರವಾನೆ ಆಗುತ್ತಿತ್ತು. ದೆಹಲಿಯೊಂದಕ್ಕೇ ದಿನಕ್ಕೆ ೧೦೦೦೦೦ ಟೆಲಿಗ್ರಾಂ ಬರುತ್ತಿತ್ತು. ಅದು ಕೇವಲ ೧೦೦೦ ಕ್ಕೂ ಕಡಿಮೆಗೆ ಇಳಿಯಿತು. ಅದು (ಇಲಾಖೆಗೆ) ನಷ್ಟ ದಲ್ಲಿ ನಡೆಯುತ್ತಿತ್ತು.

ಟ್ರಾನ್ಸ್ ಅಟ್ಲಾಂಟಿಕ್ ಕೇಬಲ್


ಅಮೇರಿಕದಲ್ಲಿ ಸರ್ ಸ್ಯಾಮುವಲ್ ಅಂಡರ್ ಸನ್ ದು ಈ ಟೆಲಿಗ್ರಾಂನ್ನು ಅಟ್ಲಾಂಟಿಕ್ ಸಾಗರದ ಆಳದಲ್ಲಿ ಸಾವಿರಾರುಮೈಲಿ ಯಷ್ಟು ದೂರ ಹಾಕಿದ್ದು ದೊಡ್ಡ ಸಾಹಸ. ಸಮುದ್ರದಲ್ಲಿ ಈ ಸಂದೇಶ-ತಂತಿ ಹಾಕುವುದಕ್ಕೆ ಕೇಬಲ್ ವ್ಯವಸ್ಥೆ ಎನ್ನುತ್ತಾರೆ. ಟ್ರಾನ್ಸ್ ಅಟ್ಲಾಂಟಿಕ್ ಕೇಬಲ್ ಅಮೇರಿಕಾವನ್ನು ಸಮುದ್ರದ ಆಳದಲ್ಲಿ ಸಾವಿರಾರು ಮೈಲ್ ಕೇಬಲ್ ಹಾಕಿ ಭಾರತಕ್ಕೆ ಜೋಡಿಸಲಾಯಿತು. ಹಾಗೆ ಸಮುದ್ರದ ಕೇಬಲ್ ನಿಂದ ಕಳಿಸುವ ಸಂದೇಶಕ್ಕೆ ಕೇಬಲ್ ಗ್ರಾಂ ಎಂದು ಹೆಸರು.

ಮೋರ‍್ಸ್ ಕೋಡ್


ಟೆಲಿಗ್ರಾಂ 
ಆದುನಿಕ ಮೋರ್ಸ್ ಸಂಕೇತಗಳು.

120px|

ಇದು ಸಂಕೇತ ಭಾಷೆ , ಕೈಯಿಂದ , ಹೊಗೆಯಿಂದ , ವಿಶಲ್ ನಿಂದ ಗೆರೆಗಳಿಂದ, ಬೆಳಕನ್ನು ಬಿಟ್ಟು ಬಿಟ್ಟು ತೋರಿಸುವುದರಿಂದ; ವಿದ್ಯತ್ ತರಂಗವನ್ನು ಬಿಟ್ಟು ಬಿಟ್ಟು ಕಳಿಸುವುದರಿಂದ, ದೂರದಲ್ಲಿರವವರಿಗೆ ಸಂದೇಶ ಕಳಿಸುವ ಸಾಧನ ಅಥವಾ ವ್ಯವಸ್ಥೆ. ಈಗ ಮೊದಲಿದ್ದ ಮೋರ‍್ಸ್ ಕೋಡ್ ನ್ನು ಸ್ವಲ್ಪ ಬದಲಾಯಿಸಿ ಆದುನಿಕ ಗೊಳಿಸಿದ್ದಾರೆ. ಅದನ್ನು ಕಳಿಸುವ ಯಂತ್ರಗಳಲ್ಲೂ ತುಂಬಾ ಸುಧಾರಣೆಗಳಾಗಿವೆ. ಸೈನಿಕರು, ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಈ ಸಂಕೇತಗಳನ್ನು ಬಳಸುತ್ತವೆ

  • ಉದಾಹರಣೆಗೆ : * - =ಎ ; - * * * =ಬಿ ; - * -* =ಸಿ (ಡಾಟ್ ಅಂಡ್ ಡ್ಯಾಷ್ ಸಂಕೇತ).

ವಿಜ್ಞಾನದ ಬೆಳವಣಿಗೆ


ವಿಜ್ಞಾನ ಮುಂದುವರೆದಂತೆ ರೇಡಿಯೋ ಅಲೆಗಳ ಮೂಲಕ ಟೆಲಿಗ್ರಾಂ, ಟೆಲಿಪ್ರಿಂಟರ್ ಗಳು ಬಂದವು. ಫೋನಿನ ವ್ಯವಸ್ಥೆ ಬಂದರೂ ಅದು ತಂತಿಯಮೂಲವೇ ಹೋಗಬೇಕಾದ್ದರಿಂದ ದಟ್ಟಣಯ ಕಾರಣ ಟ್ರಂಕ್ ಕಾಲ್ ಗಳು ಸಿಗುವುದು ಕಷ್ಟವಾಗುತ್ತಿತ್ತು. ತಂತಿ ರಹಿತ ಸೆಟಲೈಟ್ ಮೂಲಕ ಫೋನಿನ ಸಂಪರ್ಕಬಂದ ಮೇಲೆ, ಮೊಬೈಲುಗಳು ಎಲ್ಲರಿಗೆ ಸುಲಭದಲ್ಲಿ ಸಿಗುವಂತಾದ ನಂತರ ಟೆಲಿಗ್ರಾಂ ವ್ಯವಸ್ಥೆ ಮೂಲೆಗೆ ಬಿತ್ತು .

ಟೆಲಿಗ್ರಾಂ ಗೆ ವಿದಾಯ

ದಿನಾಂಕ ೧೪ - ೭- ೨೦೧೩ ಭಾನುವಾರ ರಾತ್ರಿ ೯:೦೦ ಗಂಟೆಗೆ ಭಾರತದ ಅಂಚೆ ತಂತಿ ನಿಗಮ ಬಿ.ಎಸ್.ಎನ್. ಎಲ್. ಈ ೧೬೫ (೧೬೩) ವರ್ಷದ ಇತಿಹಾಸದ ಟೆಲಿಗ್ರಾಮ್ ವ್ಯವಸ್ಥೆಯನ್ನು ಕೊನೆ ಗೊಳಿಸುವುದಾಗಿ ತೀರ್ಮಾನಿಸಿದೆ. ಆದರೆ ಕೊನೆಯ ತಂತಿ ಸಂದೇಶ ಕಳಿಸಲು ಜನ ಮುಗಿಬಿದ್ದಿರಿಂದ ರಾತ್ರಿ ೧೧.೪೫ ಗಂಟೆಗೆ ಕೊನೆಯ ತಂತಿ ಸಂದೇಶ ಕಳಿಸಲಾಯಿತು ; ಅದು (ಕೊನೆಯ ತಂತಿ ಸಂದೇಶ) ಮಾಜಿ ಪ್ರಾಧಾನಿ ರಾಜೀವ್ ಗಾಂಧಿಯವರ ಮಗ ಹಾಗೂ ಈಗಿನ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ನ ಉಪಾಧ್ಯಕ್ಷರೂ ಆದ ರಾಹುಲ್ ಗಾಂಧಿ ಹಾಗೂ ಸಮಾಚಾರ ವಿಭಾಗದ ಉಪನಿರ್ದೇಶಕ ಎಪ್.ಎಮ್. ಖಾನ್ ರವರಿಗೆ ರವಾನೆಯಾಯಿತು.

ನೋಡಿ


  • ಮೇಲೆ ಎಡಗಡೆ ಇರುವ ಚರ್ಚೆ ತಾಣ ನೋಡಿ /ಸಲಹೆ ಕೊಡಲು ಈ ಮೇಲಿನ ಎಡ- ಚರ್ಚೆ ಪುಟಕ್ಕೆ ಹೋಗಿ. ಬದಲಾಯಿಸಿಗೆ ಕ್ಲಿಕ್ ಮಾಡಿ ಕೆಳಗಡೆ ಸಲಹೆ ಟೈಪು ಮಾಡಿ ;
  • ಭಾರತೀಯ ಅಂಚೆ ಸೇವೆ
  • Communications in India, the free encyclopedia
  • Telegraphy in India - Wikipedia, the free encyclopedia


ಆಧಾರ


  • Indian Postal Service, the free encyclopedia
  • http://en.wikipedia.org/wiki/Telegram
  • ಸುಮಂಗಲಾ ಎಸ್. ಅವರ ಲೇಖನ (ಪ್ರಜಾವಾಣಿ)
  • ಬಿ ಎಸ್ ಎನ್ ಎಲ್ ಸುದ್ದಿ

Tags:

ಟೆಲಿಗ್ರಾಂ ಅಂಚೆ ಮತ್ತು ತಂತಿ ()ಟೆಲಿಗ್ರಾಂ ೧೮೫೪ರ ಟೆಲಿಗ್ರಾಫ್ ಕಾನೂನು-ತಂತಿ ಸಂದೇಶಟೆಲಿಗ್ರಾಂ ತಂತಿ ಸಂದೇಶ ರವಾನೆಯ ಬೆಳವಣಿಗೆಟೆಲಿಗ್ರಾಂ ಟ್ರಾನ್ಸ್ ಅಟ್ಲಾಂಟಿಕ್ ಕೇಬಲ್ಟೆಲಿಗ್ರಾಂ ಮೋರ‍್ಸ್ ಕೋಡ್ಟೆಲಿಗ್ರಾಂ ವಿಜ್ಞಾನದ ಬೆಳವಣಿಗೆಟೆಲಿಗ್ರಾಂ ಗೆ ವಿದಾಯಟೆಲಿಗ್ರಾಂ

🔥 Trending searches on Wiki ಕನ್ನಡ:

ಲಕ್ಷ್ಮಿಕರ್ನಾಟಕ ವಿಧಾನ ಪರಿಷತ್ನಾಥೂರಾಮ್ ಗೋಡ್ಸೆರಾಜಧಾನಿಗಳ ಪಟ್ಟಿಕರ್ಕಾಟಕ ರಾಶಿಸೀತೆಬೆಟ್ಟದ ನೆಲ್ಲಿಕಾಯಿಅವತಾರಅಕ್ಕಮಹಾದೇವಿಗೋವಿಂದ ಪೈದೇಶಗಳ ವಿಸ್ತೀರ್ಣ ಪಟ್ಟಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ದಾವಣಗೆರೆಭಾರತೀಯ ಆಡಳಿತಾತ್ಮಕ ಸೇವೆಗಳುಹಿಂದೂ ಮಾಸಗಳುಮಂಗಳಮುಖಿವಿಜಯನಗರ ಜಿಲ್ಲೆಶ್ರೀಧರ ಸ್ವಾಮಿಗಳುಮೂಳೆವಿಕ್ರಮಾರ್ಜುನ ವಿಜಯಮಧ್ವಾಚಾರ್ಯಕರ್ನಾಟಕದಲ್ಲಿ ವನ್ಯಜೀವಿಧಾಮಗಳುಶ್ರವಣಬೆಳಗೊಳದಲಿತಪ್ರಗತಿಶೀಲ ಸಾಹಿತ್ಯಮೆಕ್ಕೆ ಜೋಳಟಿಪ್ಪು ಸುಲ್ತಾನ್ಪಂಡಿತಜನತಾ ದಳ (ಜಾತ್ಯಾತೀತ)ಯೂಕ್ಲಿಡ್ಜೈನ ಧರ್ಮತಂತ್ರಜ್ಞಾನದ ಉಪಯೋಗಗಳುಫೇಸ್‌ಬುಕ್‌ಬೇಲೂರುಮಿಥುನರಾಶಿ (ಕನ್ನಡ ಧಾರಾವಾಹಿ)ಹೈದರಾಬಾದ್‌, ತೆಲಂಗಾಣಮಲೇರಿಯಾವೆಂಕಟೇಶ್ವರಶಬ್ದಸಿದ್ದರಾಮಯ್ಯದಾಸ ಸಾಹಿತ್ಯಕರ್ನಾಟಕದ ಇತಿಹಾಸತುಳುಕಾವೇರಿ ನದಿಮನುಸ್ಮೃತಿಬುಡಕಟ್ಟುಕನ್ನಡ ರಂಗಭೂಮಿಗ್ರಹಕುಂಡಲಿರಾಜ್ಯಸಭೆಸ್ವಾಮಿ ವಿವೇಕಾನಂದಬಳ್ಳಾರಿಉಡುಪಿ ಜಿಲ್ಲೆಚೆನ್ನಕೇಶವ ದೇವಾಲಯ, ಬೇಲೂರುಹಣಕಾಸುಕರ್ಣಇಂದಿರಾ ಗಾಂಧಿಕಿತ್ತೂರು ಚೆನ್ನಮ್ಮಯಕ್ಷಗಾನಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಬಾಗಿಲುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿರಶ್ಮಿಕಾ ಮಂದಣ್ಣಚಾಣಕ್ಯಕನ್ನಡ ಸಂಧಿಯೂಟ್ಯೂಬ್‌ಅಮೃತಬಳ್ಳಿಕೊಳಲುಪಾಕಿಸ್ತಾನಕರ್ನಾಟಕ ಪೊಲೀಸ್ತೆಂಗಿನಕಾಯಿ ಮರವೀರಗಾಸೆಒಡೆಯರ್ಶಿಕ್ಷಣದೇವಸ್ಥಾನಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳು🡆 More