ಉಸ್ಮಾನಿಯಾ ವಿಶ್ವವಿದ್ಯಾಲಯ

ಉಸ್ಮಾನಿಯಾ ವಿಶ್ವವಿದ್ಯಾಲಯ (ತೆಲುಗು- ఉస్మానియా విశ్వవిద్యాలయము, Osmania University) ಭಾರತದ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯ,ಇದು ತೆಲಂಗಾಣ ರಾಜ್ಯದ ಹೈದ್ರಾಬಾದ್ನಲ್ಲಿದೆ.ಇದು ದಕ್ಷಿಣ ಭಾರತದ ಮೂರನೇ ಅತಿ ಹಳೆಯ ಮತ್ತು ಮುಂಚಿನ ಹೈದರಾಬಾದ್ ರಾಜ್ಯದ ಮೊದಲ ವಿಶ್ವವಿದ್ಯಾಲಯವಾಗಿದೆ.ಇದು ಬೋಧನಾ ಮಾಧ್ಯಮವಾಗಿ ಉರ್ದು ಭೊದಿಸಿದ ಪ್ರಥಮ ಭಾರತೀಯ ವಿಶ್ವವಿದ್ಯಾಲಯ,೧೯೪೮ರಿಂದ ಉರ್ದು ಮಾಧ್ಯಮದಿಂದ,ಇಂಗ್ಲಿಷ್ ಮಾಧ್ಯಮದಲ್ಲಿ ಭೋದನೆ ಪ್ರಾರಂಭಿಸಿತು.

2012 ರಲ್ಲಿ ಈ ವಿಶ್ವವಿದ್ಯಾಲಯವು ಮಾನವಿಕ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳು ದೇಶದ ಪ್ರಧಾನ ವಿಶ್ವವಿದ್ಯಾಲಯಗಳ ಪೈಕಿ ಆರನೇಯ ಸ್ಥಾನ ಪಡೆಯಿತು.ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಅದರ ಸಂಸ್ಥಾಪರಾದ ನವಾಬ್ ಮೀರ್ ಉಸ್ಮಾನ್ ಅಲಿ ಖಾನ್ ಅವರ ಹೆಸರಿಡಲಾಗಿದೆ.

ಉಸ್ಮಾನಿಯಾ ವಿಶ್ವವಿದ್ಯಾಲಯ
ಒಸ್ಮಾನಿಯಾ ವಿಶ್ವವಿದ್ಯಾಲಯ
ఉస్మానియా విశ్వవిద్యాలయము 123 جامعہ عثمانیہ
ಧ್ಯೇಯತೆಲುಗು:తమసోమా జ్యోతిర్గమయ
ಸಂಸ್ಕೃತ:तमसो मा ज्योतिर्गमय
Motto in English
Lead us from Darkness to Light
ಪ್ರಕಾರಸಾರ್ವಜನಿಕ
ಸ್ಥಾಪನೆ1918
ಸಂಸ್ಥಾಪಕಅಕ್ಬರ್ ಹೈದರಿ ರೋಸ್ ಮಸೂದ್
ವಿಳಾಸOsmania University, ಹೈದರಾಬಾದ್‌, ತೆಲಂಗಾಣ, ಭಾರತ
ಆವರಣUrban, 1600 acres (6 km²)
ಮಾನ್ಯತೆಗಳುUGC, NAAC, AIU
ಜಾಲತಾಣOsmania University

ಇತಿಹಾಸ

1884ರಲ್ಲಿ ಹೈದರಾಬಾದ್ ರಾಜ್ಯದಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪಿಸಲು ಯೋಜನೆ ಆರಂಭಿಸಲಾಯಿತು.ಬ್ರಿಟಿಷ್ ಶಿಕ್ಷಣ ತಜ್ಞ,Wilfred Sewen Blunt ಯೋಜನೆಯ ಪ್ರಸ್ತಾಪವನ್ನು ತಯಾರಿಸಿ,ಹೈದರಾಬಾದ್ ನಿಜಾಮರಿಗೆ ಸಲ್ಲಿಸಿದರು.ಆಗಸ್ಟ್ 1917ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಸ್ಥಾಪನೆಗೆ ಅಧಿಕೃತ ಆಜ್ಞೆ ಬಿಡುಗಡೆ ಮಾಡಲಾಯಿತು.೧೯೧೮ರಲ್ಲಿ ವಿಶ್ವವಿದ್ಯಾಲಯ ಉದ್ಘಾಟನೆಯಾಯಿತು,ವಿಶ್ವವಿದ್ಯಾಲಯವು 28 ಆಗಸ್ಟ್ 1919ರಿಂದ 225 ವಿದ್ಯಾರ್ಥಿಗಳ ಆರಂಭಿಕ ದಾಖಲಾತಿ ಮಾಡಿಕೊಳ್ಳುವದರ ಜೊತೆಗೆ ಕಾರ್ಯರಂಭ ಮಾಡಿತು .ಸ್ಥಾಪನೆಯ ಮೊದಲ ದಶಕದಲ್ಲಿ ಔಷಧ ಮತ್ತು ಎಂಜಿನಿಯರಿಂಗ್ ಬೋಧನೆ ಪ್ರಾರಂಭಿಸಲಾಯಿತು.1926ರಲ್ಲಿ ಮಹಿಳೆಯರಿಗೆ ಯೂನಿವರ್ಸಿಟಿ ಕಾಲೇಜ್ ಮತ್ತು 1936ರಲ್ಲಿ ಕಲಾ ಕಾಲೇಜು ಆರಂಭಿಸಲಾಯಿತು.ಈ ವಿಶ್ವವಿದ್ಯಾಲಯವು ಸ್ಥಳೀಯ ಮತ್ತು ಉರ್ದು ಭಾಷೆಗಳಲ್ಲಿ ಶಿಕ್ಷಣ ನೀಡಿದ ಭಾರತ ಉಪಖಂಡದ ಮೊದಲ ವಿಶ್ವವಿದ್ಯಾಲಯ ಎನಿಸಿತು.ಅನುವಾದ ಬ್ಯೂರೋ ಮತ್ತು ಪ್ರಕಟಣೆ ವಿಭಾಗ ಪ್ರಾರಂಭಿಸಿ, ವಿದೇಶಿ ಮತ್ತು ಪ್ರಾದೇಶಿಕ ಭಾಷೆಗಳ ಸಾಹಿತ್ಯ,ವಿಜ್ಞಾನ ಮತ್ತು ಕಲಾಕೃತಿಗಳ ಪುಸ್ತಕಗಳನ್ನು ಸಂಗ್ರಹಿಸಿ ಅವನ್ನು ಉರ್ದು ಭಾಷೆಗೆ ಅನುವಾದಿಸಲಾಯಿತು.

ಇತರೆ ಸ್ವಾಯತ್ತ ಕೇಂದ್ರಗಳು

  1. ಇನ್ಸ್ಟಿಟ್ಯೂಷನ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನೀರ್ಸ್, ಹೈದೆರಾಬಾದ್
  2. ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್, ಹೈದೆರಾಬಾದ್
  3. ಸೆಂಟರ್ ಫಾರ್ ಪ್ಲಾಂಟ್ ಮೊಲೆಕ್ಯುಲರ್ ಬಯಾಲಜಿ ಮೊಲೆಕ್ಯುಲರ್
  4. ಸೆಂಟರ್ ಫಾರ್ ಇಂಡಿಯನ್ ಓಷನ್ ಸ್ಟಡೀಸ್
  5. ಜಪಾಲ್-ರಂಗಪುರ್ಖ ಗೋಳ ಸಮೀಕ್ಷಾ ಮಂದಿರ
  6. ಸಮುದ್ರಯಾನ ಎಲೆಕ್ಟ್ರಾನಿಕ್ಸ್ ಸಂಶೋಧನೆ ಮತ್ತು ತರಬೇತಿ ಘಟಕ.
  7. ನಗರ ಮತ್ತು ಪರಿಸರ ಅಧ್ಯಯನ ಪ್ರಾದೇಶಿಕ ಕೇಂದ್ರ.
  8. ರಾಷ್ಟ್ರೀಯ ಪೌಷ್ಟಿಕತೆ ಸಂಸ್ಥೆಯ.
  9. ಸಿಟಿ ಕಾಲೇಜ್ ಹೈದರಾಬಾದ್
  10. ಸೆಂಟರ್ ಫಾರ್ ಸ್ಟೆಮ್ ಸೆಲ್ ಸೈನ್ಸ್, ಹೈದೆರಾಬಾದ್
  11. ಅನ್ವರ್ ಉಲ್ ಉಲೂಮ್ ಕಾಲೇಜು, ಹೈದೆರಾಬಾದ್
  12. ಪ್ರೊಫೆಸರ್. ಜಿ. ರಾಮ್ ರೆಡ್ಡಿ ಸೆಂಟರ್ ಫಾರ್ ಡಿಸ್ಟೆನ್ಸ್ ಎಜುಕೇಶನ್.

ಒಳಪಡುವ ಕಾಲೇಜುಗಳು

ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಕಾಲೇಜುಗಳು ಹೈದರಾಬಾದ್ ಜಿಲ್ಲೆಯಲ್ಲಿ,ವಿವಿಧ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ನೀಡುತ್ತಿವೆ.ಈ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ೪೦೦ ಕಾಲೇಜುಗಳು ಉಸ್ಮಾನಿಯಾ ವಿಶ್ವವಿದ್ಯಾಲಯದ ಸಂಯೋಗದೊಂದಿಗೆ ಕಾರ್ಯನಿರ್ವಹಿಸುತ್ತವೆ.

ವಿಭಾಗಗಳು

ವಿಶ್ವವಿದ್ಯಾಲಯದ ಗ್ರಂಥಾಲಯ

ವಿಶ್ವವಿದ್ಯಾಲಯದ ಗ್ರಂಥಾಲಯ 1918 ರಲ್ಲಿ ಸ್ಥಾಪಿಸಲಾಯಿತು.ಈ ಲೈಬ್ರರಿ ಸುಮಾರು 500,000 ಪುಸ್ತಕಗಳು ಹೊಂದಿದೆ.6000ಕ್ಕೂ ಹೆಚ್ಚು ಹಸ್ತಪ್ರತಿಗಳು,ಇದರಲ್ಲಿ ಅಪರೂಪದ ಪಾಮ್ ಲೀವ್ ಹಸ್ತಪ್ರತಿಗಳು ಸೇರಿವೆ.ಇದು ಸುಮಾರು 400 ನಿಯತಕಾಲಿಕಗಳು ಮತ್ತು ಪಾಂಡಿತ್ಯಪೂರ್ಣ ಜರ್ನಲ್ಸ್ಗಳನ್ನೂ ತರಿಸಿಕೊಳ್ಳುತ್ತದೆ.ಸ್ಪರ್ಧಾತ್ಮಕ ಪರೀಕ್ಷೆಗಳ ಉಲ್ಲೇಖ ವಿಭಾಗವಿದ್ದು ಇದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳೀಗೆ ತಯಾರಿ ನಡೆಸುವ ಅಭ್ಯರ್ಥಿಗಳ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಗ್ರಂಥಗಳನ್ನೂ ಹೊಂದಿದೆ.

ಸಂಶೋಧನೆ ಮತ್ತು ತರಬೇತಿ ಕೇಂದ್ರಗಳು

ಉಸ್ಮಾನಿಯಾ ವಿಶ್ವವಿದ್ಯಾಲಯ ಸಂಶೋಧನೆ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ.2009ರಲ್ಲಿ,ವಿಶ್ವವಿದ್ಯಾಲಯ ಸಂಶೋಧನೆ ಚಟುವಟಿಕೆ ಗಟ್ಟಿಗೊಳಿಸಲು,ಯುಜಿಸಿ XI ಪ್ಲಾನ್ ಯೋಜನೆಯಡಿಯಲ್ಲಿ ಆರ್ಥಿಕ ಬೆಂಬಲ ಪಡೆದಿದೆ.ಇದು ಸೆಂಟ್ರಲ್ ಇನ್ಸ್ಟ್ರುಮೆಂಟೇಷನ್ ಲ್ಯಾಬ್,ಮಾಹಿತಿ ತಂತ್ರಜ್ಞಾನ ಮತ್ತು ಸಂವಹನಲ್ಯಾಬ್ ಸೌಲಭ್ಯಗಳನ್ನು ಹೊಂದಿದೆ.

ಉಲ್ಲೇಖಗಳು

Tags:

ಉಸ್ಮಾನಿಯಾ ವಿಶ್ವವಿದ್ಯಾಲಯ ಇತಿಹಾಸಉಸ್ಮಾನಿಯಾ ವಿಶ್ವವಿದ್ಯಾಲಯ ಇತರೆ ಸ್ವಾಯತ್ತ ಕೇಂದ್ರಗಳುಉಸ್ಮಾನಿಯಾ ವಿಶ್ವವಿದ್ಯಾಲಯ ಒಳಪಡುವ ಕಾಲೇಜುಗಳುಉಸ್ಮಾನಿಯಾ ವಿಶ್ವವಿದ್ಯಾಲಯ ವಿಭಾಗಗಳುಉಸ್ಮಾನಿಯಾ ವಿಶ್ವವಿದ್ಯಾಲಯ ವಿಶ್ವವಿದ್ಯಾಲಯದ ಗ್ರಂಥಾಲಯಉಸ್ಮಾನಿಯಾ ವಿಶ್ವವಿದ್ಯಾಲಯ ಸಂಶೋಧನೆ ಮತ್ತು ತರಬೇತಿ ಕೇಂದ್ರಗಳುಉಸ್ಮಾನಿಯಾ ವಿಶ್ವವಿದ್ಯಾಲಯ ಉಲ್ಲೇಖಗಳುಉಸ್ಮಾನಿಯಾ ವಿಶ್ವವಿದ್ಯಾಲಯm:en:Hyderabad Statem:en:Osman Ali Khan, Asaf Jah VIIm:en:Public universitym:en:State Universitiesತೆಲಂಗಾಣತೆಲುಗುಭಾರತಹೈದ್ರಾಬಾದ್

🔥 Trending searches on Wiki ಕನ್ನಡ:

ಜ್ಯೋತಿಷ ಶಾಸ್ತ್ರಕವಿಹಿಂದೂ ಧರ್ಮಹೊನ್ನಾವರಜಿಡ್ಡು ಕೃಷ್ಣಮೂರ್ತಿಮುರುಡೇಶ್ವರಕುಕ್ಕೆ ಸುಬ್ರಹ್ಮಣ್ಯ ದೇವಾಲಯಮಲ್ಲಿಗೆಮೆಕ್ಕೆ ಜೋಳಮೈಸೂರುಕ್ಯಾನ್ಸರ್ಪಂಚ ವಾರ್ಷಿಕ ಯೋಜನೆಗಳುಶಬ್ದ ಮಾಲಿನ್ಯಕರ್ನಾಟಕದ ಮುಖ್ಯಮಂತ್ರಿಗಳುಶಿವರಾಜ್‍ಕುಮಾರ್ (ನಟ)ನಾಲ್ವಡಿ ಕೃಷ್ಣರಾಜ ಒಡೆಯರುಮಲೈ ಮಹದೇಶ್ವರ ಬೆಟ್ಟಚಂದ್ರಯಾನ-೩ಆಧುನಿಕ ವಿಜ್ಞಾನಕದಂಬ ರಾಜವಂಶಭಾರತೀಯ ಜನತಾ ಪಕ್ಷಗೋವಿಂದ ಪೈಯುಗಾದಿಮಾಸಕೊಡವರುಡಿ.ಕೆ ಶಿವಕುಮಾರ್ಸನ್ನಿ ಲಿಯೋನ್ಕನ್ನಡ ಚಿತ್ರರಂಗಮೈಸೂರು ದಸರಾವಿನಾಯಕ ದಾಮೋದರ ಸಾವರ್ಕರ್ಶ್ರವಣಬೆಳಗೊಳವಿಕಿರಣಶ್ರೀನಿವಾಸ ರಾಮಾನುಜನ್ಸ್ತ್ರೀಹೊಯ್ಸಳೇಶ್ವರ ದೇವಸ್ಥಾನಶಕ್ತಿಕರ್ನಾಟಕದ ಸಂಸ್ಕೃತಿಅವರ್ಗೀಯ ವ್ಯಂಜನಬೆಂಗಳೂರು ಗ್ರಾಮಾಂತರ ಜಿಲ್ಲೆನ್ಯೂಟನ್‍ನ ಚಲನೆಯ ನಿಯಮಗಳುಶಿವರಾಮ ಕಾರಂತಭಾರತದ ಸ್ವಾತಂತ್ರ್ಯ ಚಳುವಳಿಮಾಸ್ತಿ ವೆಂಕಟೇಶ ಅಯ್ಯಂಗಾರ್ಭೋವಿಮಣ್ಣುಒಂದನೆಯ ಮಹಾಯುದ್ಧಇ-ಕಾಮರ್ಸ್ದರ್ಶನ್ ತೂಗುದೀಪ್ಕನ್ನಡ ಸಾಹಿತ್ಯಮಾನವನಲ್ಲಿ ನಿರ್ನಾಳ ಗ್ರಂಥಿಗಳುರೇಡಿಯೋಹಸ್ತ ಮೈಥುನಭಕ್ತಿ ಚಳುವಳಿಪಪ್ಪಾಯಿಕನ್ನಡ ಜಾನಪದಪೌರತ್ವರಾಮನೀರಿನ ಸಂರಕ್ಷಣೆಟೊಮೇಟೊಎಸ್.ಜಿ.ಸಿದ್ದರಾಮಯ್ಯಪಾರ್ವತಿಭಾರತದಲ್ಲಿ ಪಂಚಾಯತ್ ರಾಜ್ಕಲಿಯುಗಶಬ್ದಕಲ್ಯಾಣ್ವಿದ್ಯಾರಣ್ಯಬಾರ್ಲಿರಾಮ ಮಂದಿರ, ಅಯೋಧ್ಯೆಜಾತ್ಯತೀತತೆಪ್ರಿನ್ಸ್ (ಚಲನಚಿತ್ರ)ದಶಾವತಾರಕರ್ನಾಟಕ ಸ್ವಾತಂತ್ರ್ಯ ಚಳವಳಿವೃದ್ಧಿ ಸಂಧಿಸಾಲುಮರದ ತಿಮ್ಮಕ್ಕಭಾರತೀಯ ರಿಸರ್ವ್ ಬ್ಯಾಂಕ್ವಿಷ್ಣುಆರೋಗ್ಯಚೆನ್ನಕೇಶವ ದೇವಾಲಯ, ಬೇಲೂರುಕರ್ನಾಟಕದ ಮಹಾನಗರಪಾಲಿಕೆಗಳು🡆 More