೧೦೮, ಸಂಕಟ್ ಮೋಚನ್ ಧಾಮ್ ಹನುಮಾನ್ ಮಂದಿರ್, ಕರೋಲ್ ಬಾಗ್, ನವ ದೆಹಲಿ

ಹೊಸ ದೆಹಲಿಯ ಕರೋರ್ ಬಾಗ್ ನಲ್ಲಿರುವ ಸಂಕಟ್ ಮೋಚನ್ ಧಾಮ್ ಹನುಮಾನ್ ಮಂದಿರದ ಸ್ಥಾಪಕ, ಮಹಂತ್ ನಾಗ್ ಬಾಬ ಸೇವಾಗಿರ್ ಜಿ ಮಹಾರಾಜ್ ಅವರು.

ತಮ್ಮ ಶಿಷ್ಯರಿಗೆ ತಮ್ಮ ಯುವಾವಸ್ಥೆಯಲ್ಲಿ ಒಂದು ಹನುಮಾನ್ ಪೂಜಾಗೃಹವನ್ನು ನಿರ್ಮಿಸಲು ಕನಸು ಕಾಣುತ್ತಿದ್ದರು. ಕೊನೆಗೆ ಅದು ಅವರಿಗೆ ಸಿದ್ಧಿಸಿತು. ಈಗಿನ ದೇವಸ್ಥಾನವಿರುವ ಜಾಗದಲ್ಲಿ ಧುನ (ಶಿವನ ಭಸ್ಮ) ಮತ್ತು ಹನುಮಾನ್ ಜಿ ಯವರ ಚಿಕ್ಕ ಮೂರ್ತಿ ಇದ್ದಿತು. ಬಾಬಾಜಿಯವರು ಈ ಸ್ಥಳದಲ್ಲಿ ಕುಳಿತು, ಹಲವಾರು ವರ್ಷಗಳ ಕಠಿಣ ತಪಸ್ಸಿನಿಂದ ಹನುಮಾನ್ ಜಿ ಪ್ರಕಟಗೊಂಡು, ಈಗಿರುವ ಸ್ಥಳದಲ್ಲಿ ತನ್ನ ಬೃಹತ್ ಮೂರ್ತಿಯನ್ನು ಸ್ಥಾಪಿಸಬೇಕೆಂದು ಆಜ್ಞೆಯಾಯಿತು. ಅದನ್ನು ಶಿರಸಾವಹಿಸಿ ಮುಂದುವರೆದ ಬಾಬಾ ತಮ್ಮ ಭಕ್ತಗಣದ ನೆರವಿನಿಂದ ಹನುಮಾನ್ ದೇವಸ್ಥಾನದ ನಿರ್ಮಾಣ ಕಾರ್ಯ, ಸನ್, ೧೯೯೪ ರಲ್ಲಿ ಆರಂಭವಾಯಿತು. ಸುಮಾರು ೧೩ ವರ್ಷಗಳ ಬಳಿಕ ನಿರ್ಮಾಣವಾದ ೧೦೮ ಅಡಿ ಎತ್ತರದ ಹನುಮಾನ್ ಮೂರ್ತಿ, ವಿಶ್ವದಲ್ಲೇ ಅತಿ ದೊಡ್ಡಮೂರ್ತಿಯೆಂದು ಪ್ರಸಿದ್ಧವಾಗಿದೆ.

ಚಿತ್ರ:Hrl.png
ಸಂಕಟ್ ಮೋಚನ್ ಧಾಮ್ ಹನುಮಾನ್ ಮಂದಿರ್

ಮಾರುತಿಯ ಎದೆ ಹರಿದು, ಭಗವಾನ್ ರಾಮ್, ಸೀತಾ, ಲಕ್ಷ್ಮಣ್ ದರ್ಶನ

ವಾರದಲ್ಲಿ ಎರಡು ಬಾರಿ ಮಂಗಳವಾರ ಮತ್ತು ಶನಿವಾರ, ಬೆಳಿಗ್ಗೆ, ೮.೧೫ ರಿಂದ ಸಾಯಂಕಾಲ, ೮.೧೫ ರ ವರೆಗೆ ಪೂಜೆ ನಡೆಯುತ್ತದೆ. (ಎಲಕ್ಟ್ರಾನಿಕ್ ಮಾಧ್ಯಮದ ಉಪಯೋಗ ಪಡೆದು), ಭಗವಾನ್ ರಾಮ್, ಸೀತಾಜಿ ಮತ್ತು ಲಕ್ಷ್ಮಣ್ ರ ದರ್ಶನವನ್ನು ಭಜರಂಗ್ ಬಲಿ, ಹನುಮಾನ್ ಜಿ ಎದೆ ಹರಿದು ತೋರಿಸುವ ಸುಯೋಗ, ಭಕ್ತಾದಿಗಳಿಗೆ ಆ ದಿನಗಳಲ್ಲಿ ಉಪಲಭ್ದವಿದೆ. ಧುನ್ ಅತಿ ಜನಪ್ರಿಯತೆ ಗಳಿಸಿತು. ವೈಷ್ಣುದೇವಿಯ ಮಂದಿರವೂ ಹನುಮಾನ್ ಮಂದಿರದ ಭಾಗವಾಗಿದೆ. ಇಲ್ಲಿ ವೈಷ್ಣುಮಾತೆಯು ಪಿಂಡಿಯ ರೂಪದಲ್ಲಿ ಗುಹೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಗಂಗಾಮಾತೆಯ ದರ್ಶನ ೨೦೦೬ ರ ಮಾರ್ಚ್, ೩೦ ರಂದು, ಪಾವನ ಜ್ಯೊತಿ ಬಾಬಾಜಿ ಹಿಮಾಚಲ ಪ್ರದೇಶದ ಕಾಂಗ್ರಾದಿಂದ ತಂದರು. ಸಂಕಟ್ ಮೋಚನ್ ಧಾಮ್ ಗೆ ಭೇಟಿ ನೀಡುವವರ ಸಂಖ್ಯೆ ಲಕ್ಷಾಂತರ. ಭಕ್ತರು ಕಪ್ಪುವಸ್ತ್ರವನ್ನು ಅರ್ಪಿಸುತ್ತಾರೆ. ಚೂರಿ. ಸಾಸುವೆ ಎಣ್ಣೆ, ಒಂದು ಪ್ರಣತಿ, ಬೆಲ್ಲ, ಕಡಲೆ, ಉದಕ್ ದಾಲ್, ಎಳ್ಳು, ಮತ್ತು ಯಾವುದಾದರೂ ರೂಪದಲ್ಲಿ ಲೋಹ, ಹೂವಿನ ಹಾರ, ನಿಂಬೆಹಣ್ಣು ಇತ್ಯಾದಿಗಳನ್ನು ಸಮರ್ಪಿಸುವ ಪರಿಪಾಠವಿದೆ.

ನಾಗಾ ಬಾಬಾಜಿಯವರ ಸಮಾಧಿ

ಮಂದಿರದ ಕಾರ್ಯ ನೆರವೇರುತ್ತಿದ್ದಂತೆ, ಬಾಬಾಜಿರವರು ತಮ್ಮ ದೇಹತ್ಯಾಗಮಾಡಲು ಆಶಿಸಿದ್ದರು. ಸನ್ ೨೦೦೮ರ ಜನವರಿ ೨೫ ರಂದು ನಾಗಾಬಾಬಾರವರು ದೇಹತ್ಯಾಗ ಮಾಡಿದರು. ಭಕ್ತರು ಬಾಬಾರವರ ಸಮಾಧಿಯನ್ನು ದೇವಸ್ಥಾನದ ಸಮ್ಮುಖದಲ್ಲೇ ಸ್ಥಾಪಿಸಿದ್ದಾರೆ. ಹನುಮಾನ್ ಮಂದಿರದ ಒಳಗೇ ಬಾಬಾರವರ ಸಮಾಧಿಯನ್ನು ಸ್ಥಾಪಿಸಲು ಭಕ್ತಗಣ ಇಷ್ಟಪಟ್ಟಿದ್ದರು. ಆ ಸ್ಥಳದಲ್ಲೇ ಶಿವಲಿಂಗವನ್ನು ಸ್ಥಾಪಿಸಿದ್ದಾರೆ. ಅಲ್ಲಿ ಅಖಂಡವಾಗಿ ದೀಪ ಉರಿಯುತ್ತಿರುತ್ತದೆ. ಮಹಂತ್ ನಾಗಾಬಾಬಾ ಸ್ಮಾರಕ ಟ್ರಸ್ಟ್ ನ ವತಿಯಿಂದ, ಬಾಬಾಜಿಯವರ ದೇಹಾಂತವಾದ ದಿನ, ಜನವರಿ ೨೫ ರಂದು, ದೇಶದ ವಿವಿಧ ಕಡೆಗಳಿಂದ ಸಾಧು-ಸಂತರು, ಮಹಂತರು, ಪೂಜಾರಿಗಳು, ಹನುಮಾನ್ ಮಂದಿರದ ಬಳಿ ಬಂದು ನೆರೆದರು. ಹೀಗೆ ಆ ಭಂಡಾರದ ವ್ಯವಸ್ಥೆಯಾಯಿತು. ಅವರೆಲ್ಲರೂ ಒಮ್ಮತದಿಂದ ಪ್ರತಿವರ್ಷವೂ ಪೂಜಾಪಾಠಗಳನ್ನು ನಡೆಸುವ ನಿಶ್ಚಯಮಾಡಿದರು.

ಹನುಮಾನ್ ಜಿ, ಮಂದಿರ ತಲುಪಲು

ಕೀರ್ತಿನಗರ ಕಡೆಯಿಂದ ಮೆಟ್ರೋದಲ್ಲಿ ಪ್ರಯಾಣಿಸಿದರೆ-ಶಾದಿಪುರ್- ಪಟೇಲ್ ನಗರ -ರಾಜೇಂದ್ರ ಪ್ಲೇಸ್ -ಕರೋಲ್ ಬಾಗ್ -ಝಂಡೆವಾಲನ್ ನಲ್ಲಿಳಿದು ಮಂದಿರಕ್ಕೆ ಹೋಗಬಹುದು. ಹೊಸ ದೆಹಲಿಯ ಝಂಡೆವಾಲನ್ ಮೆಟ್ರೋ ರೈಲ್ವೆ ನಿಲ್ದಾಣದ ಹತ್ತಿರದಲ್ಲೇ ಇರುವ ಈ ಮಂದಿರ, ಪಹಾಡ್ ಗಂಜ್ ಹೊಸ ದೆಹಲಿ ರೈಲ್ವೆ ನಿಲ್ದಾಣಕ್ಕೆ ಸುಮಾರು ೧೧ ಕಿ.ಮೀ.ದೂರದಲ್ಲಿದೆ. ಆರ್ಯಸಮಾಜ್ ರಸ್ತೆ ಹನುಮಾನ್ ಮಂದಿರಕ್ಕೆ ಹತ್ತಿರದಲ್ಲಿದೆ.

ಉಲ್ಲೇಖಗಳು

Tags:

೧೦೮, ಸಂಕಟ್ ಮೋಚನ್ ಧಾಮ್ ಹನುಮಾನ್ ಮಂದಿರ್, ಕರೋಲ್ ಬಾಗ್, ನವ ದೆಹಲಿ ಮಾರುತಿಯ ಎದೆ ಹರಿದು, ಭಗವಾನ್ ರಾಮ್, ಸೀತಾ, ಲಕ್ಷ್ಮಣ್ ದರ್ಶನ೧೦೮, ಸಂಕಟ್ ಮೋಚನ್ ಧಾಮ್ ಹನುಮಾನ್ ಮಂದಿರ್, ಕರೋಲ್ ಬಾಗ್, ನವ ದೆಹಲಿ ನಾಗಾ ಬಾಬಾಜಿಯವರ ಸಮಾಧಿ೧೦೮, ಸಂಕಟ್ ಮೋಚನ್ ಧಾಮ್ ಹನುಮಾನ್ ಮಂದಿರ್, ಕರೋಲ್ ಬಾಗ್, ನವ ದೆಹಲಿ ಹನುಮಾನ್ ಜಿ, ಮಂದಿರ ತಲುಪಲು೧೦೮, ಸಂಕಟ್ ಮೋಚನ್ ಧಾಮ್ ಹನುಮಾನ್ ಮಂದಿರ್, ಕರೋಲ್ ಬಾಗ್, ನವ ದೆಹಲಿ ಉಲ್ಲೇಖಗಳು೧೦೮, ಸಂಕಟ್ ಮೋಚನ್ ಧಾಮ್ ಹನುಮಾನ್ ಮಂದಿರ್, ಕರೋಲ್ ಬಾಗ್, ನವ ದೆಹಲಿದೆಹಲಿದೇವಸ್ಥಾನ

🔥 Trending searches on Wiki ಕನ್ನಡ:

ಕನ್ನಡ ಅಕ್ಷರಮಾಲೆಭಾರತದಲ್ಲಿನ ಚುನಾವಣೆಗಳುತೇಜಸ್ವಿ ಸೂರ್ಯಉಡನೀನಾದೆ ನಾ (ಕನ್ನಡ ಧಾರಾವಾಹಿ)ಧಾರವಾಡಮಧುಮೇಹಮೈನಾ(ಚಿತ್ರ)ಮುಟ್ಟು ನಿಲ್ಲುವಿಕೆಭೀಮಸೇನಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಮತದಾನ (ಕಾದಂಬರಿ)ಸೀತಾ ರಾಮಬೌದ್ಧ ಧರ್ಮಸಿಂಧನೂರುಡಾ ಬ್ರೋಸಂಗ್ಯಾ ಬಾಳ್ಯಅಶ್ವತ್ಥಮರವಿಷ್ಣುವರ್ಧನ್ (ನಟ)ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕೃಷ್ಣರಾಜಸಾಗರಕರ್ನಾಟಕ ಜನಪದ ನೃತ್ಯಬಾಲ್ಯಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಕರ್ನಾಟಕ ಲೋಕಸಭಾ ಚುನಾವಣೆ, 2019ತುಳಸಿನಾಗವರ್ಮ-೨ವಿಜಯನಗರಕನ್ನಡ ಚಂಪು ಸಾಹಿತ್ಯಕರ್ನಾಟಕದ ಇತಿಹಾಸಜೇನು ಹುಳುಭಾರತದ ಸಂವಿಧಾನದ ೩೭೦ನೇ ವಿಧಿಯೋನಿಆರ್ಯಭಟ (ಗಣಿತಜ್ಞ)ಅಷ್ಟ ಮಠಗಳುಕೊಬ್ಬಿನ ಆಮ್ಲಸೌರಮಂಡಲಜಾಲತಾಣದಿಕ್ಕುಉಪೇಂದ್ರ (ಚಲನಚಿತ್ರ)ಹಿಂದೂ ಧರ್ಮಭಾರತೀಯ ಸಂಸ್ಕೃತಿಕಮ್ಯೂನಿಸಮ್ಹೆಣ್ಣು ಬ್ರೂಣ ಹತ್ಯೆಇಮ್ಮಡಿ ಪುಲಿಕೇಶಿಉದಯವಾಣಿಎಚ್.ಎಸ್.ಶಿವಪ್ರಕಾಶ್ಸಂಸ್ಕಾರಉಪ್ಪಿನ ಸತ್ಯಾಗ್ರಹಪಗಡೆಜಾಗತಿಕ ತಾಪಮಾನ ಏರಿಕೆರಾಮಶಂಕರ್ ನಾಗ್ಪೂರ್ಣಚಂದ್ರ ತೇಜಸ್ವಿಸಾಗುವಾನಿಸರಸ್ವತಿ ವೀಣೆಕುತುಬ್ ಮಿನಾರ್ಅರಣ್ಯನಾಶಹಲಸುಕಾಳಿದಾಸಒಗಟುಆಗಮ ಸಂಧಿಚಿತ್ರದುರ್ಗಕರ್ನಾಟಕ ವಿಧಾನ ಸಭೆಭಾರತದಲ್ಲಿ ಮೀಸಲಾತಿಸಮಯದ ಗೊಂಬೆ (ಚಲನಚಿತ್ರ)ಪಾಕಿಸ್ತಾನಹಳೆಗನ್ನಡಕನ್ನಡ ಸಾಹಿತ್ಯ ಪರಿಷತ್ತುಪಿ.ಲಂಕೇಶ್ಭಾರತದ ಸಂವಿಧಾನಪುರಂದರದಾಸಋತುಶೈಕ್ಷಣಿಕ ಮನೋವಿಜ್ಞಾನಸಮಾಜವಾದದೇವಸ್ಥಾನಟೊಮೇಟೊ🡆 More