ಸ. ಜ. ನಾಗಲೋಟಿಮಠ

ಡಾ.

ಸ. ಜ. ನಾಗಲೋಟಿಮಠರವರು ಕರ್ನಾಟಕದ ಖ್ಯಾತ ವೈದ್ಯರು ಹಾಗು ಸಾಹಿತಿಗಳು. ಸಜನಾ ಎಂದು ಖ್ಯಾತರಾಗಿರುವ ಇವರ ಪೂರ್ಣ ಹೆಸರು ಡಾ।।ಸದಾಶಿವಯ್ಯ ಜಂಬಯ್ಯ ನಾಗಲೋಟಿಮಠ.

ಸ. ಜ. ನಾಗಲೋಟಿಮಠ
ಸ. ಜ. ನಾಗಲೋಟಿಮಠ
ಜನನಜುಲೈ ೨೦, ೧೯೪೦
ಶಿರೋಳ, ಧಾರವಾಡ ಜಿಲ್ಲೆ
ಮರಣಅಕ್ಟೋಬರ್ ೨೪, ೨೦೦೬
ಬೆಳಗಾವಿ, ಬೆಳಗಾವಿ ಜಿಲ್ಲೆ
ವೃತ್ತಿವೈದ್ಯ, ಪ್ರಾಧ್ಯಾಪಕ, ಸಂಶೋಧನಾ ಪ್ರಬಂಧಕ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಕೆ.ಎಂ.ಸಿ. - ಹುಬ್ಬಳ್ಳಿ
ಪ್ರಮುಖ ಪ್ರಶಸ್ತಿ(ಗಳು)ಡಾ।।ಬಿ. ಸಿ. ರಾಯ್ ಪ್ರಶಸ್ತಿ
ಭಾರತದ ಶ್ರೇಷ್ಠ ಪೌರ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ತಂದೆಜಂಬಯ್ಯ

ಜನನ ಹಾಗೂ ವಿದ್ಯಾಭ್ಯಾಸ

೨೦ ಜುಲೈ,೧೯೪೦ರಲ್ಲಿ ಜನಿಸಿದ ನಾಗಲೋಟಿಮಠರವರಿಗೆ ಜನಿಸಿದಾಗ ಸದಾಶಿವಯ್ಯ ಎಂದು ಹೆಸರಿಡಲಾಯಿತು. ಇವರ ತಂದೆ ಜಂಬಯ್ಯನವರು ನರಗುಂದ ತಾಲೂಕಿನ ಶಿರೋಳ ಗ್ರಾಮದವರು. ನಾಗಲೋಟಿಮಠರವರು ಪ್ರಾಥಮಿಕ ಹಾಗು ಪ್ರೌಡ ಶಿಕ್ಷಣವನ್ನು ಸದಾಶಿವ ಬನಹಟ್ಟಿಯಲ್ಲಿ ಪೂರೈಸಿದರು. ವೈದ್ಯ ಶಿಕ್ಷಣವನ್ನು ಇವರು ಹುಬ್ಬಳ್ಳಿಯ ಕೆ.ಎಂ.ಸಿ ಯಲ್ಲಿ ಪೂರೈಸಿದರು ಹಾಗು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರು.

ಪ್ರಾಧ್ಯಾಪಕ ಹಾಗೂ ಪ್ರಬಂಧಕರಾಗಿ

ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ೨೦ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿ, ವಿಶ್ವಾದ್ಯಂತ ಮನ್ನಣೆಗಳಿಸಿದ್ದಾರೆ. ತಳ ಶೇಖರಣೆ ಜೀವಕೋಶ ವಿಜ್ಞಾನ (Sediment Cytology) ಹಾಗೂ ಸಾಂದರ್ಭಿಕ ಮಧುಮೇಹ (Secondary Diabetes) ಎಂಬ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮೊತ್ತಮೊದಲ ಲೇಖನಗಳಿಗೆ ಕಾರಣಕರ್ತರಾಗಿದ್ದಾರೆ. ನಾಗಲೋಟಿಮಠರವರು ಹುಬ್ಬಳ್ಳಿಯ ಕಿಮಸ್ ನ ಪ್ರಥಮ ಅಧ್ಯಕ್ಷರಾಗಿದ್ದರು. ಇವರು ಭಾರತದಲ್ಲೇ ಅತಿ ದೊಡ್ಡ ದೇಹದ ಹರಳುಗಳ ವಸ್ತು ಸಂಗ್ರಹಾಲಯವನ್ನು ಬಿಜಾಪುರದಲ್ಲಿ ಸ್ಥಾಪಿಸಿದರು. ಬೆಳಗಾವಿಯಲ್ಲಿ ಇವರು ಸ್ಥಾಪಿಸಿರುವ ಪ್ಯಾಥಾಲಜಿ ಮ್ಯೂಸಿಯಂ ಕೂಡ ಪ್ರಸಿದ್ದವಾಗಿದೆ.

ಇವಲ್ಲದೇ ಸಂದರ್ಶಕ ಪ್ರಾಧ್ಯಾಪಕರಾಗಿ, ಸಂಶೋಧನಾ ಪ್ರಬಂಧಕರಾಗಿ ಅಮೆರಿಕಾ, ಫಿಲೆಡೆಲ್ಫಿಯಾ, ಸ್ಪೈನ್, ಆಸ್ಟ್ರೇಲಿಯಾ, ಜರ್ಮನಿ ಮುಂತಾದೆಡೆ ಪ್ರವಾಸ ಮಾಡಿ ಭಾರತದ ವೈದ್ಯಕೀಯ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಕರ್ನಾಟಕ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ನಾಡಿನಲ್ಲಿಯೇ ಪ್ರಸಿದ್ಧವಾದ ಬೆಳಗಾವಿ ವಿಜ್ಞಾನ ಸಂಸ್ಥೆಯ ಸಂಸ್ಥಾಪಕರು.

ಇವರು ದಿಕ್ಸೂಚಿ ಮಾಸಪತ್ರಿಕೆಯ ಗೌರವ ಸಲಹೆಗಾರರಾಗಿದ್ದರು.

ಕೃತಿಗಳು

ಸಜನಾರವರು ಸುಮಾರು ೪೦ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದರೆ. ಅವುಗಳಲ್ಲಿ ಕೆಲವು,

ಸ. ಜ. ನಾಗಲೋಟಿಮಠ 
ಸ್ವಾಸ್ಥ್ಯ ಸಂಗಾತಿ ಪುಸ್ತಕದ ಮುಖಪುಟ
  • ಶ್ರೀಸಾಮಾನ್ಯ ಮತ್ತು ವೈದ್ಯ (ರೇಡಿಯೋ ಭಾಷಣಗಳ ಸಂಕಲನ)
  • ಸ್ವಾಸ್ಥ್ಯ ಸಂಗಾತಿ (೧೩ ಪತ್ರಿಕಾಲೇಖನಗಳ ಸಂಕಲನ)
  • ಬಾಳೆಹಣ್ಣು ಮತ್ತು ಬ್ಲಡ್ ಪ್ರೆಷರ್
  • ಬ್ರುಸೆಲ್ಲಾ ರೋಗ
  • ಕಳವು ಕಲಿಸುವ ದೇವರು - ೨೦೦೦
  • ಬಿಚ್ಚಿದ ಜೋಳಿಗೆ: ವೈದ್ಯನ ಆತ್ಮ ನಿವೇದನ - ೨೦೦೩
  • ಅನ್ನಮಾರ್ಗದಲ್ಲಿ ಅಪಘಾತಗಳು - ೧೯೮೯
  • ರಕ್ತದಾನ - ೧೯೭೬
  • ಸಜನಾ ಅಂಕಣ : ಆರೋಗ್ಯ ಕುರಿತ ವಿಚಾರಗಳು - ೨೦೦೮

ಪ್ರಶಸ್ತಿಗಳು

  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಶ್ರೀಸಾಮಾನ್ಯ ಮತ್ತು ವೈದ್ಯ)
  • ಕುವೆಂಪು ವೈದ್ಯ ಸಾಹಿತ್ಯ ಪ್ರಶಸ್ತಿ (ಶ್ರೀಸಾಮಾನ್ಯ ಮತ್ತು ವೈದ್ಯ)
  • ಡಾ।।ಬಿ. ಸಿ. ರಾಯ್ ಪ್ರಶಸ್ತಿ
  • ಭಾರತದ ಶ್ರೇಷ್ಠ ಪೌರ ಪ್ರಶಸ್ತಿ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಚಾಳುಕ್ಯ ಪ್ರಶಸ್ತಿ

ನಿಧನ

'ನಾಗಲೋಟಿಮಠ' ರವರು ೨೪ ಅಕ್ಟೋಬರ್,೨೦೦೬ರಲ್ಲಿ ಬೆಳಗಾವಿಯಲ್ಲಿ ಬಹು-ಅಂಗಾಂಗ ವೈಫಲ್ಯದಿಂದ ನಿಧನರಾದರು.

ಉಲ್ಲೇಖಗಳು

Tags:

ಸ. ಜ. ನಾಗಲೋಟಿಮಠ ಜನನ ಹಾಗೂ ವಿದ್ಯಾಭ್ಯಾಸಸ. ಜ. ನಾಗಲೋಟಿಮಠ ಪ್ರಾಧ್ಯಾಪಕ ಹಾಗೂ ಪ್ರಬಂಧಕರಾಗಿಸ. ಜ. ನಾಗಲೋಟಿಮಠ ಕೃತಿಗಳುಸ. ಜ. ನಾಗಲೋಟಿಮಠ ಪ್ರಶಸ್ತಿಗಳುಸ. ಜ. ನಾಗಲೋಟಿಮಠ ನಿಧನಸ. ಜ. ನಾಗಲೋಟಿಮಠ ಉಲ್ಲೇಖಗಳುಸ. ಜ. ನಾಗಲೋಟಿಮಠಕರ್ನಾಟಕ

🔥 Trending searches on Wiki ಕನ್ನಡ:

ಕೆ ವಿ ನಾರಾಯಣತಾಜ್ ಮಹಲ್ಕರ್ನಾಟಕ ಐತಿಹಾಸಿಕ ಸ್ಥಳಗಳುಕನ್ನಡ ಚಂಪು ಸಾಹಿತ್ಯಯೂಟ್ಯೂಬ್‌ಭಾರತದ ಸಂವಿಧಾನಭಾರತದ ಸಂಯುಕ್ತ ಪದ್ಧತಿಕಾಡ್ಗಿಚ್ಚುವೃತ್ತೀಯ ಚಲನೆವಾರ್ಧಕ ಷಟ್ಪದಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಗಣೇಶ್ (ನಟ)ಬೆಂಗಳೂರುಹೊಯ್ಸಳಎಂ. ಎಂ. ಕಲಬುರ್ಗಿಛಂದಸ್ಸುಕಾರ್ಲ್ ಮಾರ್ಕ್ಸ್ವಿಕಿಪೀಡಿಯಭಾರತೀಯ ರಿಸರ್ವ್ ಬ್ಯಾಂಕ್ಲಿಂಗ ವಿವಕ್ಷೆಸಮೂಹ ಮಾಧ್ಯಮಗಳುಪಂಚಾಂಗಮಹಾತ್ಮ ಗಾಂಧಿಹಂಸಲೇಖಭರತ-ಬಾಹುಬಲಿಗಾಂಧಿ ಮತ್ತು ಅಹಿಂಸೆಗಣೇಶಪುನೀತ್ ರಾಜ್‍ಕುಮಾರ್ಮೂಲಧಾತುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿನಾಗರಹಾವು (ಚಲನಚಿತ್ರ ೧೯೭೨)ಕವಿಗಳ ಕಾವ್ಯನಾಮಕರ್ನಾಟಕದ ಮುಖ್ಯಮಂತ್ರಿಗಳುಸಂಸ್ಕಾರಶ್ರೀಪಾದರಾಜರುಸಮಾಜವಾದಭಾರತೀಯ ರೈಲ್ವೆಐತಿಹಾಸಿಕ ನಾಟಕಮೈಸೂರು ಸಂಸ್ಥಾನವಾಯು ಮಾಲಿನ್ಯಕರ್ಮಧಾರಯ ಸಮಾಸಅಣ್ಣಯ್ಯ (ಚಲನಚಿತ್ರ)ಬೆಂಗಳೂರು ಕೋಟೆಏಕಲವ್ಯಚನ್ನಬಸವೇಶ್ವರಮೇರಿ ಕೋಮ್ಚೀನಾದ ಇತಿಹಾಸಬಹುರಾಷ್ಟ್ರೀಯ ನಿಗಮಗಳುಅಮೇರಿಕ ಸಂಯುಕ್ತ ಸಂಸ್ಥಾನಅಕ್ಷಾಂಶಜಿ.ಎಸ್.ಶಿವರುದ್ರಪ್ಪರಮ್ಯಾಕಿರುಧಾನ್ಯಗಳುಬಾಲ ಗಂಗಾಧರ ತಿಲಕಕನ್ನಡ ಸಂಧಿಮೂಲಭೂತ ಕರ್ತವ್ಯಗಳುದಾಸ ಸಾಹಿತ್ಯಸ್ತ್ರೀಮೂಢನಂಬಿಕೆಗಳುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಅಶ್ವತ್ಥಮರಅನುಪಮಾ ನಿರಂಜನಧಾರವಾಡಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಮಲ್ಲಿಗೆಕದಂಬ ಮನೆತನಕರ್ನಾಟಕದ ಜಿಲ್ಲೆಗಳುಜಾಹೀರಾತುಭಾವನೆಪರಮಾಣುತೆಲುಗುಭಾರತದ ತ್ರಿವರ್ಣ ಧ್ವಜಸರಸ್ವತಿಷಟ್ಪದಿಭಾರತದ ಸಂಸತ್ತುಕರ್ನಾಟಕದಲ್ಲಿ ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯ🡆 More