ಸ್ವರಾಜ್ ಶೆಟ್ಟಿ

ಸ್ವರಾಜ್ ಶೆಟ್ಟಿ ಭಾರತೀಯ ನಟ, ರಂಗಭೂಮಿ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತುಳು ಹಾಗೂ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲದೇ ನಾಟಕದಲ್ಲಿಯೂ ಅಭಿನಯಿಸುತ್ತಾರೆ. ತಮ್ಮ ವೃತ್ತಿ ಜೀವನವನ್ನು ಕಂಠದಾನ ಕಲಾವಿದರಾಗಿ ಹಾಗೂ ರಂಗಭೂಮಿ ಕಲಾವಿದರಾಗಿ ಪ್ರಾರಂಭಿಸಿದರು.

ಸ್ವರಾಜ್ ಶೆಟ್ಟಿ
Born
ಅಶ್ವಿನ್ ಶೆಟ್ಟಿ

ಅಕ್ಟೋಬರ್ ೩೦,೧೯೯೦
Alma materಅಧಿಯಮಾನ್ ಎಂಜಿನಿಯರಿಂಗ್ ಕಾಲೇಜು ಹೊಸುರು
Occupations
  • ನಟ
  • ರಂಗಭೂಮಿ ಕಲಾವಿದ
  • ಕಿರುತೆರೆ ನಟ
Known forಕಾಂತಾರದಲ್ಲಿ ಗುರುವ ಮತ್ತು ಶಿವಧೂತ ಗುಳಿಗ ನಾಟಕದಲ್ಲಿ ಗುಳಿಗ
Spouseಆಶನಿ ಶೆಟ್ಟಿ

ವೆಯಕ್ತಿಕ ಜೀವನ

ಸ್ವರಾಜ್ ಶೆಟ್ಟಿಯವರು ದಕ್ಷಿಣ ಕನ್ನಡ ಜಲ್ಲೆಯ ಮಂಗಳೂರಿನಲ್ಲಿ ಅಕ್ಟೋಬರ್ ೩೦, ೧೯೯೦ ರಲ್ಲಿ ಅಶ್ವಿನ್ ಶೆಟ್ಟಿಯಾಗಿ ತಂದೆ ಅಶೋಕ.ಬಿ.ಶೆಟ್ಟಿ ತಾಯಿ ಪ್ರಮಿಳಾ.ಶೆಟ್ಟಿ ಮಗನಾಗಿ ಜನಿಸಿದರು. ೨೦೧೮,ಡಿಸೆಂಬರ್ ೩೧ ರಂದು ಆಶನಿ ಶೆಟ್ಟಿ ಅವರನ್ನು ಮದುವೆಯಾದರು.

ವಿದ್ಯಾಭ್ಯಾಸ

ತಮ್ಮ ಪ್ರಾಥಮಿಕ ಶಿಕ್ಷಣವನ್ನು ನಾರಾಯಣ ಗುರು ಶಾಲೆ ಮಂಗಳೂರಿನಲ್ಲಿ ಪೂರ್ಣಗೊಳಿಸಿದರು. ಆರ್.ವಿ.ಜಿ ಜನರಲ್ ಮಿಷಿನಿಸ್ಟ್ ಗ್ರೂಪ್ ಹೊಸುರು ತಮಿಳುನಾಡಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದರು. ೨೦೧೨ರಲ್ಲಿ ಪದವಿ ಶಿಕ್ಷಣ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅನ್ನು ಅಧಿಯಮಾನ್ ಎಂಜಿನಿಯರಿಂಗ್ ಕಾಲೇಜು ಹೊಸುರು( ತಮಿಳುನಾಡು) ಮುಗಿಸಿದರು. ತಮ್ಮ ನಟನೆಯ ಮೇಲೆ ಹೆಚ್ಚಿನ ಒಲವನ್ನು ಹೊಂದಿದ್ದ, ಇವರು ತಮ್ಮ ಕಾಲೇಜು ದಿನಗಳಲ್ಲಿ ಹಲವಾರು ನಾಟಕಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ೨೦೦೯ ರಲ್ಲಿ ಹೈದರಾಬಾದ್ ನಲ್ಲಿ ಮಿಸ್ಟರ್.ವಿಜ್ಞಾನ ಎಂಬ ಬಿರುದನ್ನು ಪಡೆದಿದ್ದಾರೆ. ಮುಂದೆ ಮನರಂಜನಾ ಮಾಧ್ಯಮದಲ್ಲಿ ತಮ್ಮ ಜೀವನವನ್ನು ಮುಂದುವರಿಸಲು ಮಂಗಳೂರಿಗೆ ಮರಳಿದರು.

ವೃತ್ತಿ ಜೀವನ

ಸ್ವರಾಜ್ ಶೆಟ್ಟಿ ತಮ್ಮ ವೃತ್ತಿ ಜೀವನವನ್ನು ೨೦೧೨ರಲ್ಲಿ ಮಾಮಿ ಎಂಬ ನಾಟಕದಲ್ಲಿ ಅಭಿನಯಿಸಿದರು. ೨೦೧೪ ರಲ್ಲಿ ಬರ್ಕೆ ಎಂಬ ತುಳು ಸಿನಿಮಾದಲ್ಲಿ ನಟಿಸಿದರು. ಸ್ವರಾಜ ಶೆಟ್ಟಿ ೮೫೦ ಕ್ಕಿಂತ ಹೆಚ್ಚಿನ ರಂಗ ಪದರ್ಶನವನ್ನು ನೀಡಿದ್ದಾರೆ. ಅವರು ರಾಜ್ ಬಿ. ಶೆಟ್ಟಿ ನಿರ್ದೇಶನದ ೫ ಲೆಟರ್ಸ್ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಡೈಜಿ ವರ್ಲ್ಡ ವತಿಯಿಂದ ಅತ್ಯುತ್ತಮ ನಟ ಎಂಬ ಪ್ರಶಸ್ತಿಯನ್ನು ಪಡೆದಿದ್ದಾರೆ. ಸ್ಟಾರ್ ಸುವರ್ಣ ವತಿಯಿಂದ ರಗಡ್ ಸ್ಟಾರ್ ಎಂಬ ಬಿರುದನ್ನು ಪಡೆದಿದ್ದಾರೆ. ವಿವಿಧ ಸಂಸ್ಥೆಗಳಿಂದ ರಂಗದರಸೆ ಮತ್ತು ಕಲಾರತ್ನ ಎಂಬ ಬಿರುದನ್ನು ಗಳಿಸಿದ್ದಾರೆ.

ಫಿಲ್ಮೋಗ್ರಾಫಿ

ವರ್ಷ ಚಲನಚಿತ್ರಗಳು ಪಾತ್ರ ಭಾಷೆ
೨೦೧೪ ಬರ್ಕೆ ಮುಖ್ಯಪಾತ್ರ ತುಳು ಚೊಚ್ಚಲ ತುಳು ಸಿನಿಮಾ
೨೦೧೬ ೫ ಲೆಟರ್ಸ್ ಮುಖ್ಯಪಾತ್ರ ಕನ್ನಡ ಕಿರುಚಿತ್ರ
೨೦೧೭ ಒಂದು ಮೊಟ್ಟೆಯ ಕಥೆ ಅತಿಥಿ ಪಾತ್ರ ಕನ್ನಡ ಚೊಚ್ಚಲ ಕನ್ನಡ ಸಿನಿಮಾ
೨೦೧೮ ಹುಚ್ಚ೨ ಖಳನಾಯಕ ಕನ್ನಡ
೨೦೨೧ ಟೂ & ಮಿ ಮುಖ್ಯಪಾತ್ರ ತುಳು ನಟ,ನಿರ್ದೇಶಕ,ಬರಹಗಾರ
೨೦೨೨ ಪೋಲಿಸ್ ಫೈಲ್ಸ್ ಖಳನಾಯಕ ಕನ್ನಡ
ಕಾಂತಾರ ಗುರುವ ಪಂಜುರ್ಲಿ ಕನ್ನಡ ಅಂತಾರಾಷ್ಟ್ರೀಯ ಬಿಡುಗಡೆ
೨೦೨೩ ಪಿಲಿ ಖಳನಾಯಕ ತುಳು
ಬೇರ ಪೋಷಕ ಪಾತ್ರ ಕನ್ನಡ
ಬಿರ್ದದ್ ಕಂಬುಲ ಮುಖ್ಯಪಾತ್ರ ಕನ್ನಡ, ತುಳು
ಪುಳಿ ಮುಂಚಿ ಖಳನಾಯಕ ತುಳು

ಧಾರಾವಾಹಿ

ವರ್ಷ ಹೆಸರು ಪಾತ್ರ ಭಾಷೆ
೨೦೧೮ ಕೃಷ್ಣ ತುಳಸಿ ಮುಖ್ಯಪಾತ್ರ ಕನ್ನಡ ಸ್ಟಾರ್ ಸುವರ್ಣ
೨೦೧೯ ರಾಧಾ ಕಲ್ಯಾಣ ಖಳನಾಯಕ ಕನ್ನಡ ಝೀ ಕನ್ನಡ
೨೦೨೧ ಅಣ್ಣ ತಂಗಿ ಖಳನಾಯಕ ಕನ್ನಡ ಉದಯ ಟಿ.ವಿ
೨೦೨೩ ತ್ರಿಪುರ ಸುಂದರಿ ಅತಿಥಿ ಪಾತ್ರ ಕನ್ನಡ ಕಲರ್ಸ್ ಕನ್ನಡ

ನಾಟಕ

ಶಿವಧೂತ ಗುಳಿಗ
ಮಾಮಿ
ಒರಿಯಾರ್ದೊರಿ ಅಸಲ್
ಸೀತಾ ಟೀಚರ್
ಅಪ್ಪೆ ಮುಕಾಂಬಿಕಾ
ಮಣಿಕಂಠ ಮಹಿಮೆ
ಅಣ್ಣೆ ಬರ್ಪೆಗೆ

ಡಬ್ಬಿಂಗ್ ಕಲಾವಿದ

ಸ್ವರಾಜ್ ಶೆಟ್ಟಿ ಅವರು ತುಳು ಭಾಷೆಯಲ್ಲಿ ಬೀರಬಲ್, ಬದ್ಮಾಷ್, ಹವಳ, ಅಭಿಸಾರಿಕೆ, ಪಂಚತಂತ್ರ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಅಯೋಗ್ಯ ಸಿನಿಮಾಗಳಿಗೆ ಡಬ್ಬಿಂಗ್ ಮಾಡಿದ್ದಾರೆ

ಉಲ್ಲೇಖಗಳು

Tags:

ಸ್ವರಾಜ್ ಶೆಟ್ಟಿ ವೆಯಕ್ತಿಕ ಜೀವನಸ್ವರಾಜ್ ಶೆಟ್ಟಿ ವಿದ್ಯಾಭ್ಯಾಸಸ್ವರಾಜ್ ಶೆಟ್ಟಿ ವೃತ್ತಿ ಜೀವನಸ್ವರಾಜ್ ಶೆಟ್ಟಿ ಫಿಲ್ಮೋಗ್ರಾಫಿಸ್ವರಾಜ್ ಶೆಟ್ಟಿ ಧಾರಾವಾಹಿಸ್ವರಾಜ್ ಶೆಟ್ಟಿ ನಾಟಕಸ್ವರಾಜ್ ಶೆಟ್ಟಿ ಡಬ್ಬಿಂಗ್ ಕಲಾವಿದಸ್ವರಾಜ್ ಶೆಟ್ಟಿ ಉಲ್ಲೇಖಗಳುಸ್ವರಾಜ್ ಶೆಟ್ಟಿ

🔥 Trending searches on Wiki ಕನ್ನಡ:

ಸಮುದ್ರಗುಪ್ತಮಹಾಲಕ್ಷ್ಮಿ (ನಟಿ)ಮೈಸೂರು ದಸರಾಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕುವೆಂಪುಮಲ್ಟಿಮೀಡಿಯಾಬಿ.ಎಸ್. ಯಡಿಯೂರಪ್ಪಹೈನುಗಾರಿಕೆನಿರ್ವಹಣೆ ಪರಿಚಯವಾಟ್ಸ್ ಆಪ್ ಮೆಸ್ಸೆಂಜರ್ಇಮ್ಮಡಿ ಪುಲಕೇಶಿಸಂಧಿದಕ್ಷಿಣ ಕನ್ನಡಹಿಂದೂ ಧರ್ಮರಾಜಕೀಯ ಪಕ್ಷಮಂಕುತಿಮ್ಮನ ಕಗ್ಗವಚನ ಸಾಹಿತ್ಯಬಾಬರ್ಗುರು (ಗ್ರಹ)ಭಾರತದ ಇತಿಹಾಸಗಂಗ (ರಾಜಮನೆತನ)ಮಂತ್ರಾಲಯನೇಮಿಚಂದ್ರ (ಲೇಖಕಿ)ವೀಣೆರಾಶಿಒಂದನೆಯ ಮಹಾಯುದ್ಧರಕ್ತದುಂಡು ಮೇಜಿನ ಸಭೆ(ಭಾರತ)ಸುಭಾಷ್ ಚಂದ್ರ ಬೋಸ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಜಾನಪದಬೆಳಗಾವಿಕಾಮಸೂತ್ರನೀತಿ ಆಯೋಗಶ್ರೀಮಧ್ವಾಚಾರ್ಯಗೋಲ ಗುಮ್ಮಟಹನುಮಂತಭಾರತೀಯ ಭಾಷೆಗಳುಭಾರತದ ಸರ್ವೋಚ್ಛ ನ್ಯಾಯಾಲಯಪ್ರಜಾಪ್ರಭುತ್ವಕೆ. ಎಸ್. ನರಸಿಂಹಸ್ವಾಮಿಕೊಡಗಿನ ಗೌರಮ್ಮಜಗನ್ನಾಥದಾಸರುಬೆಂಗಳೂರು ಕೋಟೆಪ್ರವಾಸ ಸಾಹಿತ್ಯಕೋಪಜಾಗತಿಕ ತಾಪಮಾನಪಿ.ಲಂಕೇಶ್ಸಂಗ್ಯಾ ಬಾಳ್ಯಹೊಯ್ಸಳಬಂಜಾರತುಳುಝಾನ್ಸಿತರಕಾರಿಮಿಥುನರಾಶಿ (ಕನ್ನಡ ಧಾರಾವಾಹಿ)ವಿರಾಮ ಚಿಹ್ನೆಸಂಸ್ಕಾರಅಡಿಕೆಪ್ರಜಾವಾಣಿಸೆಸ್ (ಮೇಲ್ತೆರಿಗೆ)ಹಿಂದೂ ಮಾಸಗಳುಕನ್ನಡ ಅಕ್ಷರಮಾಲೆವಿಧಾನಸೌಧಗೋತ್ರ ಮತ್ತು ಪ್ರವರನಿರುದ್ಯೋಗಪರಿಸರ ರಕ್ಷಣೆಹುಣಸೆಬೆಂಗಳೂರಿನ ಇತಿಹಾಸಅಕ್ಷಾಂಶ ಮತ್ತು ರೇಖಾಂಶಚಿಪ್ಕೊ ಚಳುವಳಿಬಿ. ಎಂ. ಶ್ರೀಕಂಠಯ್ಯಕುಮಾರವ್ಯಾಸಕರ್ನಾಟಕದ ಮುಖ್ಯಮಂತ್ರಿಗಳುಎಳ್ಳೆಣ್ಣೆಆಟಕಲ್ಪನಾ🡆 More