ಸಾಮಾಜಿಕ ತಾಣ

ಸ್ನೇಹಿತರೊಂದಿಗೆ ಮತ್ತು ಬಂಧುವರ್ಗದವರೊಂದಿಗೆ ಸಂಪರ್ಕ ಸಾಧಿಸಲು ಅವರನ್ನು ಮುಖತಃ ಭೇಟಿಯಾಗುವುದು ಅಥವಾ ಅವರೊಂದಿಗೆ ಪತ್ರ ವ್ಯವಹಾರ ಇಟ್ಟುಕೊಳ್ಳುವುದು ಹಿಂದೊಮ್ಮೆ ಅನಿವಾರ್ಯವಾಗಿತ್ತು.

ಎಲೆಕ್ಟ್ರಾನಿಕ್ ಸಂಪರ್ಕ ಸಾಧನಗಳು ಲಭ್ಯವಾದ ನಂತರ ಇ-ಮೇಲ್ ("ಮಿಂಚೆ", ಎಲೆಕ್ಟ್ರಾನಿಕ್ ಮೇಲ್) ಜನಪ್ರಿಯವಾಯಿತು. ತದನಂತರ ಸಾಮಾಜಿಕ ತಾಣಗಳು (ಸೋಷಿಯಲ್ ನೆಟ್‍ವರ್ಕಿಂಗ್) ಎಂಬ ಪರಿಕಲ್ಪನೆ ಹುಟ್ಟಿತು. ಫೇಸ್‍ಬುಕ್, ಗೂಗಲ್+, ವಾಟ್ಸಪ್ ಮೊದಲಾದ ತಾಣಗಳು ಜನಪ್ರಿಯವಾದವು ,. ಈ ತಾಣಗಳನ್ನು ಬಳಸಲು ಖಾತೆ (ಅಕೌಂಟ್) ಅಗತ್ಯ; ಇಂಥ ಅಕೌಂಟ್ ಪಡೆಯಲು ಕೆಲವು ನಿಯಮಾವಳಿಗಳು ಇರುತ್ತವೆ, ಉದಾಹರಣೆಗೆ ಹದಿಮೂರು ವರ್ಷಕ್ಕೆ ಮೇಲ್ಪಟ್ಟವರಾಗಿರಬೇಕು, ಇತ್ಯಾದಿ. ಈ ತಾಣಗಳು ಅನೇಕ ಭಾಷೆಗಳಲ್ಲಿ ಲಭ್ಯವಾಗಿರುವುದರಿಂದ ಜಗತ್ತಿನಲ್ಲಿ ಅನೇಕ ದೇಶಗಳಲ್ಲಿ ಜನಪ್ರಿಯವಾಗಿವೆ. ಒಂದು ತಾಣದಲ್ಲಿ ನೀವು ಖಾತೆ ತೆರೆದರೆ ಅದೇ ತಾಣದಲ್ಲಿ ಖಾತೆಯನ್ನು ಹೊಂದಿದ ನಿಮ್ಮ ಮಿತ್ರರಿಗೆ ಅಥವಾ ಬಂಧುಗಳಿಗೆ ಸಂದೇಶ ಕಳಿಸಿ ಸಂಪರ್ಕ ಸಾಧಿಸಬಹುದು. ಸಾಮಾಜಿಕ ತಾಣಗಳನ್ನು ಬಳಸಲು ಯಾವುದೇ ಶುಲ್ಕ ಬೇಡ - ಏಕೆಂದರೆ ನೀವು ಕಲಿಸುವ ಸಂದೇಶಗಳನ್ನು ಗಮನಿಸಿ ನಿಮ್ಮ ಇಷ್ಟಗಳನ್ನು ಅರ್ಥ ಮಾಡಿಕೊಂಡು ಸೂಕ್ತವಾದ ಜಾಹೀರಾತುಗಳನ್ನು ನಿಮ್ಮ ತೆರೆಯ ಮೇಲೆ ಬಿಂಬಿಸುವ ತಂತ್ರಜ್ಞಾನ ಇಂದು ಲಭ್ಯ. ಜಾಹೀರಾತುಗಳ ಮೂಲಕ ಸಾಮಾಜಿಕ ತಾಣಗಳು ಗಳಿಸುತ್ತವೆ.

ಅನುಕೂಲಗಳು

ಸಾಮಾಜಿಕ ತಾಣಗಳಲ್ಲಿ ಸಾಮಾನ್ಯವಾಗಿ ಲಭ್ಯವಾದ ಅನುಕೂಲಗಳು -

  • ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ನಿಮ್ಮ ಮಿತ್ರರಿಗೆ ತಿಳಿಸುವುದು - ಉದಾಹರಣೆಗೆ ನೀವು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಹೊರಟಿದ್ದರೆ ಅದನ್ನು ನಿಮ್ಮ ಸ್ಟೇಟಸ್‍ನಲ್ಲಿ ಹಾಕಬಹುದು (ಸ್ಥಿತಿ). ಇದನ್ನು ಗಮನಿಸಿದ ಮಿತ್ರರು ಪ್ರತಿಕ್ರಿಯೆ ನೀಡಬಹುದು. ಉದಾಹರಣೆಗೆ ದೇಹಲಿಯಲ್ಲಿರುವ ನಿಮ್ಮ ಮಿತ್ರರು "ನಮ್ಮ ಮನೆಗೆ ಬನ್ನಿ" ಎಂದು ನಿಮ್ಮನ್ನು ಸಂಪರ್ಕಿಸಬಹುದು. ಇದೇ ರೀತಿ ನೀವು ಮನೆ ಬದಲಾಯಿಸಿದರೆ, ಉದ್ಯೋಗ ಬದಲಾಯಿಸಿದರೆ, ಮದುವೆಯಾದರೆ, ಮಕ್ಕಳಾದರೆ ನಿಮ್ಮ ಮಿತ್ರರಿಗೆ/ಬಂಧುಗಳಿಗೆ ತಿಳಿಸಬಹುದು.
  • ನಿಮ್ಮ ಬಂಧುಗಳ ಜನ್ಮದಿನ ಮೊದಲಾದವನ್ನು ಕುರಿತು ಸಾಮಾಜಿಕ ತಾಣವು ನಿಮಗೆ ನೆನಪಿಸುವುದು.
  • ಕಾರ್ಯಕ್ರಮಗಳಿಗೆ ಬನ್ನಿ ಎಂದು ನಿಮ್ಮ ಮಿತ್ರರಿಗೆ ಸಂದೇಶ ಕಳಿಸಲು ಅನುಕೂಲ ಕಲ್ಪಿಸಲಾಗಿದೆ. "ಈವೆಂಟ್" (ಕಾರ್ಯಕ್ರಮ) ಸೃಷ್ಟಿಸಿ ಅದಕ್ಕೆ ಆಹ್ವಾನ ಕಳಿಸಿದರೆ ಅದನ್ನು ನಿಮ್ಮ ಮಿತ್ರರು ಸ್ವೀಕರಿಸಬಹುದು ಅಥವಾ "ಬರಲಾಗುವುದಿಲ್ಲ" ಎಂದು ತಿಳಿಸಬಹುದು.
  • ಸ್ಟೇಟಸ್ ಮೂಲಕ ಸಮಾಜದ ಆಗುಹೋಗುಗಳಿಗೆ ನಿಮ್ಮ ಪ್ರತಿಕ್ರಿಯೆ, ನಗೆಹನಿ, ಕವಿತೆ ಇತ್ಯಾದಿ ಹಂಚಿಕೊಳ್ಳಬಹುದು.
  • ಚಿತ್ರಗಳನ್ನು, ಆಡಿಯೋ-ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳಬಹುದು.
  • ಸಾಮಾಜಿಕ ನೆಟ್‌ವರ್ಕಿಂಗ್ ಸೇವೆಗಳು ಯುವಜನರ ಮೇಲೆ ಪರಿಣಾಮ ಬೀರುವ ಮತ್ತು ಆಸಕ್ತಿ ಹೊಂದಿರುವ ಸಮಸ್ಯೆಗಳು ಮತ್ತು ಕಾರಣಗಳ ಮೇಲೆ ಹೈಲೈಟ್ ಮಾಡಲು ಮತ್ತು ಕಾರ್ಯನಿರ್ವಹಿಸಲು ಪ್ರವೇಶಿಸಬಹುದಾದ ಮತ್ತು ಶಕ್ತಿಯುತವಾದ ಟೂಲ್‌ಕಿಟ್ ಅನ್ನು ಒದಗಿಸಬಹುದು.

ಅನಾನುಕೂಲಗಳು

  • ಸಾಮಾಜಿಕ ತಾಣದ ಬಳಕೆ ಒಂದು ಗೀಳಾಗಿ ಪರಿಣಮಿಸುವುದು, ಸಮಯ ಹಾಳಾಗುವುದು
  • ಸಾಮಾಜಿಕ ತಾಣದ ಕೃತಕ ವಿಶ್ವದಲ್ಲಿ ಬದುಕುತ್ತಾ ನಿಜಜೀವನವನ್ನು ನಿರ್ಲಕ್ಷಿಸುವುದು
  • ಸಂಬಂಧಗಳಲ್ಲಿ ಏರುಪೇರಾಗುವುದು ಉದಾ. ಗಂಡ-ಹೆಂಡಿರಲ್ಲಿ ಸಾಮಾಜಿಕ ತಾಣಗಳ ಬಳಕೆಯಿಂದ ಇರುಸು-ಮುರುಸು ಉಂಟಾಗುವುದು
  • ಅಪರಾಧ ಕಾರ್ಯಗಳಿಗೆ ಸಾಮಾಜಿಕ ತಾಣಗಳನ್ನು ಬಳಸುವುದು - ಉದಾ. ಅಸಭ್ಯ ಚಿತ್ರಗಳನ್ನು ಹಂಚುವುದು, ಹೆಣ್ಣುಮಕ್ಕಳನ್ನು ಪೀಡಿಸುವುದು, ಮಕ್ಕಳನ್ನು/ದುರ್ಬಲರನ್ನು ಪೀಡಿಸುವುದು, ಮಾದಕದ್ರವ್ಯಗಳ ಮಾರಾಟ, ಇತ್ಯಾದಿ
  • ರಾಜಕಾರಣ ಪ್ರಚಾರಕ್ಕಾಗಿ ಸಾಮಾಜಿಕ ತಾಣಗಳ ಬಳಕೆ
  • ಜನರ ಸ್ಥಿತಿಗತಿಗಳನ್ನು ಗಮನಿಸುತ್ತಾ ಸಮಾಜ ಯಾವ ಕಡೆ ಸಾಗುತ್ತಿದೆ (ಟ್ರೆಂಡ್ಸ್) ಎಂಬುದನ್ನು ತಂತ್ರಾಂಶದ ಮೂಲಕ ಅಳೆಯುವುದು ಮತ್ತು ಅದನ್ನು ನಿಯಂತ್ರಿಸಲು ಪ್ರಯತ್ನಿಸುವುದು

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ವಾರ್ಧಕ ಷಟ್ಪದಿಶಾಮನೂರು ಶಿವಶಂಕರಪ್ಪಮನೋಜ್ ನೈಟ್ ಶ್ಯಾಮಲನ್ಪರಮ ವೀರ ಚಕ್ರಮಾರ್ಕ್ಸ್‌ವಾದಮೂಲಧಾತುಕನ್ನಡಪ್ರಜಾಪ್ರಭುತ್ವಗರ್ಭಧಾರಣೆಹದಿಬದೆಯ ಧರ್ಮವಿಜಯನಗರಗಂಗಾಸೂರ್ಯಹಲ್ಮಿಡಿಮಂತ್ರಾಲಯಕರ್ನಾಟಕದ ಸಂಸ್ಕೃತಿಮಾಲಿನ್ಯಕ್ಯಾನ್ಸರ್ಗೋವಗಣೇಶ ಚತುರ್ಥಿಕದಂಬ ರಾಜವಂಶಮೊಗಳ್ಳಿ ಗಣೇಶಕನ್ನಡದಲ್ಲಿ ಶಾಸ್ತ್ರ ಸಾಹಿತ್ಯಕೆಳದಿಯ ಚೆನ್ನಮ್ಮಭಾವನೆವಿಜಯನಗರ ಸಾಮ್ರಾಜ್ಯಭಾರತೀಯ ಭೂಸೇನೆಎಂ. ಎಂ. ಕಲಬುರ್ಗಿಕೊಳ್ಳೇಗಾಲಅರಿಸ್ಟಾಟಲ್‌ಕಲ್ಯಾಣ್ಕಾಂತಾರ (ಚಲನಚಿತ್ರ)ಶಂ.ಬಾ. ಜೋಷಿಬಾಬು ಜಗಜೀವನ ರಾಮ್ಧಾರವಾಡಭಾರತೀಯ ಮೂಲಭೂತ ಹಕ್ಕುಗಳುಅಲಂಕಾರಊಳಿಗಮಾನ ಪದ್ಧತಿಅಂಚೆ ವ್ಯವಸ್ಥೆಶ್ರೀರಂಗಪಟ್ಟಣಗಿರೀಶ್ ಕಾರ್ನಾಡ್ಚಂದ್ರಗುಪ್ತ ಮೌರ್ಯಶಿರ್ಡಿ ಸಾಯಿ ಬಾಬಾಮ್ಯಾಂಚೆಸ್ಟರ್ನಾಗೇಶ ಹೆಗಡೆಗುಣ ಸಂಧಿದ್ರವ್ಯವೀರೇಂದ್ರ ಹೆಗ್ಗಡೆಇತಿಹಾಸಭಾಮಿನೀ ಷಟ್ಪದಿರಾಜಧಾನಿಗಳ ಪಟ್ಟಿಕೊರೋನಾವೈರಸ್ಹಂಸಲೇಖಮೌರ್ಯ ಸಾಮ್ರಾಜ್ಯಭಾರತೀಯ ಸಶಸ್ತ್ರ ಪಡೆತೆರಿಗೆಆದಿ ಶಂಕರಕನ್ನಡ ಚಂಪು ಸಾಹಿತ್ಯಕಾದಂಬರಿಜೀವಕೋಶಕೈವಾರ ತಾತಯ್ಯ ಯೋಗಿನಾರೇಯಣರುಸಾರ್ವಜನಿಕ ಹಣಕಾಸುಯೋಗತತ್ಪುರುಷ ಸಮಾಸಬ್ರಿಟಿಷ್ ಆಡಳಿತದ ಇತಿಹಾಸಕನ್ನಡದಲ್ಲಿ ವಚನ ಸಾಹಿತ್ಯಕನ್ನಡಪ್ರಭಅವರ್ಗೀಯ ವ್ಯಂಜನಮಾಧ್ಯಮಎ.ಪಿ.ಜೆ.ಅಬ್ದುಲ್ ಕಲಾಂಪರಿಸರ ವ್ಯವಸ್ಥೆಕಾವ್ಯಮೀಮಾಂಸೆವಿಕಿಸುಭಾಷ್ ಚಂದ್ರ ಬೋಸ್ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ಜಯಮಾಲಾವಾಯು ಮಾಲಿನ್ಯಸಾಮ್ರಾಟ್ ಅಶೋಕಮುಖ್ಯ ಪುಟ🡆 More