ಪ, ಮುಂಬಯಿ ಸಂಕಟ ವಿಮೋಚನ್ ಹನುಮಾನ್ ಮಂದಿರ್, ಘಾಟ್ಕೋಪರ್

ಮುಂಬಯಿ, ನಗರದ ಘಾಟ್ಕೋಪರ್ ಉಪನಗರದ, ಅಸಾಲ್ಫಾ ವಿಲೇಜ್' ನ 'ಗೋವಿಂದ್ ನಗರ್' ನಲ್ಲಿ 'ಸಂಕಟ ವಿಮೋಚನ ಹನುಮಾನ್ ಮಂದಿರ'ವಿದೆ.

ಇದು ಪುರಾತನ ದೇವಾಲಯ. 'ಹನುಮಾನ್ ಗುಡಿ'ಯ ಬದಿಯಲ್ಲೇ, ಶಿವಲಿಂಗವಿದೆ. ಪಕ್ಕದಲ್ಲಿ ಒಂದು 'ಬಾವಿ'ಯೂ ಇದೆ. ಈ ದೇವಾಲಯ ಒಂದು 'ಟ್ರಸ್ಟ್' ಗೆ ಸೇರಿದೆ. 'ಹನುಮದ್ಜಯಂತಿ', ಚೆನ್ನಾಗಿ ನಡೆಯುತ್ತದೆ. ಮಂದಿರ ಸುತ್ತಲೂ ಗಿಡ ಮರಗಳಿವೆ. ತೆಂಗಿನ ಮರಗಳೂ ಇವೆ. ಈ ಪುರಾತನ ಮಂದಿರಕ್ಕೆ ಘಾಟ್ಕೋಪರ್ (ಪ)ದಿಂದ ಬರಲು 'ಬಸ್' ಮತ್ತು 'ರಿಕ್ಷಾ' ಸೌಲಭ್ಯಗಳಿವೆ. ಎಲ್.ಬಿ.ಎಸ್.ಮಾರ್ಗದ ಮುಖಾಂತರ ಬಂದು, ಮಹೇಂದ್ರ-ಮಹೇಂದ್ರ ಹೌಸಿಂಗ್ ವಲಯದಿಂದ, ಸಾಗುವ ಗಲ್ಲಿಯಲ್ಲಿ ಸಾಗಿ, 'ಎನ್.ಎಸ್.ಎಸ್.ರಸ್ತೆ'ಯಲ್ಲಿ ಬರಬಹುದು. ಇಲ್ಲವೇ 'ಭಟ್ವಾಡಿ' ಯೂ ತೀರ ಹತ್ತಿರದಲ್ಲಿದೆ. 'ಹಿಮಾಲಯೇಶ್ವರ ಮಹದೇವ್ ದೇವಸ್ಥಾನ', 'ಶ್ರೀ ಗೀತಾಂಬಿಕಾ ದೇವಸ್ಥಾನ'ಗಳೂ ಹತ್ತಿರದಲ್ಲೇ ಇವೆ.

ಚಿತ್ರ:Himalaya Joggers' Park 003.JPG
'ಹನುಮಜ್ಜಯಂತಿಯ ಸಮಾರಂಭದ ದಿನದಂದು'
ಪ, ಮುಂಬಯಿ ಸಂಕಟ ವಿಮೋಚನ್ ಹನುಮಾನ್ ಮಂದಿರ್, ಘಾಟ್ಕೋಪರ್
'ಸ್ವಯಂಭು ಒಡಮೂಡಿರುವ ಹನುಮಾನ್ ವಿಗ್ರಹ'
'ಅರಳಿಮರದ ಕೆಳಗಿರುವ ದೇವತೆಗಳು'
'ಅರಳಿಮರದ ಕೆಳಗಿರುವ ದೇವತೆಗಳು'
ಪ, ಮುಂಬಯಿ ಸಂಕಟ ವಿಮೋಚನ್ ಹನುಮಾನ್ ಮಂದಿರ್, ಘಾಟ್ಕೋಪರ್
'ಶಿವಲಿಂಗ ಕ್ಕೆ ಪ್ರತಿದಿನವೂ ಹಾಲಿನ ಅಭಿಷೇಕ ನಡೆಯುತ್ತದೆ'

ಅರಳೀಮರದ ಕೆಳಗೆ ಹಲವಾರು ಚಿಕ್ಕಪುಟ್ಟ ದೇವತೆಗಳ ಮೂರ್ತಿಗಳಿವೆ

ಭಕ್ತಾದಿಗಳು, ಮುಖ್ಯವಾಗಿ ಹೆಣ್ಣುಮಕ್ಕಳು, ಈ ದೇವತೆಗಳಿಗೆ ಪೂಜೆ ಮಾಡಲು ಬರುತ್ತಾರೆ. ದೇವರ ಬಗ್ಗೆ ಜನರಿಗೆ ಭಕ್ತಿ ಕಡಿಮೆಯಾಗಿಲ್ಲ. ಹಬ್ಬ ಹರಿದಿನಗಳ ವೇಳೆಯಲ್ಲಿ, ಮಂಗಳವಾರ, ಶನಿವಾರಗಳಲ್ಲಿ ಭಕ್ತರು ಸಾಲುಗಟ್ಟಿ ನಿಂತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿರುತ್ತದೆ. ಎಕ್ಕದ ಎಲೆಯ ಸರಗಳು ಮತ್ತು 'ದೀಪದ ಎಣ್ಣೆಯ ಕುಡಿಕೆಗಳು' ಮಂದಿರದ ಹೊರಗೆ 'ಹೂವಿನ ಹಾರದ ಅಂಗಡಿ'ಗಳಲ್ಲಿ ದೊರೆಯುತ್ತವೆ.

ಸನ್,೨೦೧೧ ರ ಹನುಮಜ್ಜಯಂತಿ ಉತ್ಸವ

೧೮, ಏಪ್ರಿಲ್, ೨೦೧೧ ರ ಸೋಮವಾರದಂದು ಜರುಗಿದ 'ಹನುಮಜ್ಜಯಂತಿ ಉತ್ಸವ' ದಿನ ಪೂರ್ತಿ ಮಾರುತಿಯ ಪೂಜೆ, ಆರತಿ, ಭಜನೆ, ಮತ್ತು ಸತ್ಸಂಗಗಳಿಂದ ಸಂಪನ್ನವಾಯಿತು. ಭಕ್ತಾದಿಗಳು ಎಲ್ಲ ಕಡೆಗಳಿಂದ ಧಾವಿಸಿ ಬಂದು 'ಹನುಮಜ್ಜಯಂತಿ'ಯಲ್ಲಿ ಭಾಗಿಯಾದರು.

Tags:

ಶಿವಲಿಂಗಸಂಕಟ ವಿಮೋಚನ ಹನುಮಾನ್ ಮಂದಿರ

🔥 Trending searches on Wiki ಕನ್ನಡ:

ಆದಿ ಶಂಕರವ್ಯವಸಾಯರಾಮಸೂಳೆಕೆರೆ (ಶಾಂತಿ ಸಾಗರ)ರಾಜಸ್ಥಾನ್ ರಾಯಲ್ಸ್ನೀತಿ ಆಯೋಗವರ್ಣಕೋಶ(ಕ್ರೋಮಟೊಫೋರ್)ಚಿನ್ನಇಮ್ಮಡಿ ಬಿಜ್ಜಳಕರ್ನಾಟಕದ ಶಾಸನಗಳುಆಸ್ಪತ್ರೆರಾಜ್ಯಬರವಣಿಗೆದ್ರಾವಿಡ ಭಾಷೆಗಳುಭೂತಾರಾಧನೆಜೀವಸತ್ವಗಳುಕಂಪ್ಯೂಟರ್ಭಾರತದ ರಾಜಕೀಯ ಪಕ್ಷಗಳುಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆವಡ್ಡಾರಾಧನೆಭಾರತ ರತ್ನಕರ್ನಾಟಕಹೆಚ್.ಡಿ.ದೇವೇಗೌಡಭಾರತದ ನದಿಗಳುಹರಿದಾಸನಾಯಕನಹಟ್ಟಿಸವದತ್ತಿಭಾರತದ ಚುನಾವಣಾ ಆಯೋಗಚದುರಂಗ (ಆಟ)ವಿಜಯನಗರ ಸಾಮ್ರಾಜ್ಯರಾಜ್ಯಸಭೆಬಾಗಲಕೋಟೆಯಕೃತ್ತುಭಾರತದ ಮುಖ್ಯಮಂತ್ರಿಗಳುಗಣರಾಜ್ಯೋತ್ಸವ (ಭಾರತ)ಸಂಭೋಗಶಂಕರ್ ನಾಗ್ಭಾರತ ಸಂವಿಧಾನದ ಪೀಠಿಕೆಕೆ. ಎಸ್. ನರಸಿಂಹಸ್ವಾಮಿರಾಯಲ್ ಚಾಲೆಂಜರ್ಸ್ ಬೆಂಗಳೂರು೧೯೭೧ರ ಭಾರತ-ಪಾಕಿಸ್ತಾನ ಯುದ್ಧಐಹೊಳೆಚಿಪ್ಕೊ ಚಳುವಳಿಬ್ರಾಹ್ಮಣಕೇಂದ್ರ ಲೋಕ ಸೇವಾ ಆಯೋಗರಜಪೂತಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಆಧುನಿಕ ವಿಜ್ಞಾನಆರೋಗ್ಯಹಯಗ್ರೀವಸಿಮ್ಯುಲೇಶನ್‌ (=ಅನುಕರಣೆ)ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮೆಂತೆಅವರ್ಗೀಯ ವ್ಯಂಜನಪ್ರೀತಿಕನಕದಾಸರುಯೇತಿಕೃಷಿಕುದುರೆಕನ್ನಡ ಅಂಕಿ-ಸಂಖ್ಯೆಗಳುಮಾನವನ ನರವ್ಯೂಹಕಿರುಧಾನ್ಯಗಳುಹುಣಸೆಸಂಶೋಧನೆದ್ವಿರುಕ್ತಿಸಂಯುಕ್ತ ರಾಷ್ಟ್ರ ಸಂಸ್ಥೆಮೈಸೂರು ಅರಮನೆದಲಿತಡಾ ಬ್ರೋಕಪ್ಪೆ ಅರಭಟ್ಟದುಂಬಿಕೂದಲುಸಂತಾನೋತ್ಪತ್ತಿಯ ವ್ಯವಸ್ಥೆಭಾರತದಲ್ಲಿ ಕೃಷಿಅಬೂ ಬಕರ್ನಿರ್ವಹಣೆ, ಕಲೆ ಮತ್ತು ವಿಜ್ಞಾನ🡆 More