ಮಹಾಕವಿ ರನ್ನನ ಗದಾಯುದ್ಧ

’ಕವಿಚಕ್ರವರ್ತಿ’, ’ಕವಿರತ್ನ’ ಮುಂತಾದ ಬಿರುದುಗಳನ್ನು ಪಡೆದಿದ್ದ ಕವಿ 'ರನ್ನ'ನು ಕನ್ನಡ ಸಾಹಿತ್ಯ ಮಹಾಮಕುಟದಲ್ಲಿನ ಮೂರು ಅನರ್ಘ್ಯ ರತ್ನಗಳಲ್ಲಿ ಒಬ್ಬ.

ಹತ್ತನೇ ಶತಮಾನದಲ್ಲಿ ಜೀವಿಸಿದ್ದ ಈ ಜೈನಕವಿಯು ’ಅಜಿತನಾಥ ಪುರಾಣ’, ’ಸಾಹಸಭೀಮ ವಿಜಯಂ/ಗದಾಯುದ್ಧ’ ಮುಂತಾದ ೫ ಕೃತಿಗಳನ್ನು ರಚಿಸಿದ್ದಾನೆ.

ಮಹಾಕವಿ ರನ್ನನ ಗದಾಯುದ್ಧ

  • ’ಗದಾಯುದ್ಧ’ವನ್ನು ರನ್ನನು ತನ್ನ ಆಶ್ರಯದಾತ ಅರಸನಾದ ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿ, ಭೀಮನನ್ನೇ ಕಥಾನಾಯಕನನ್ನಾಗಿ ಕಲ್ಪಿಸಿ(ಕೊನೆಯಲ್ಲಿ ಪಟ್ಟಾಭಿಷೇಕವಾಗುವುದು ಭೀಮನಿಗೇ) ಬರೆದಿದ್ದಾನೆ. ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿಯು ಕೇವಲ ಗದಾಯುದ್ಧದ ಪ್ರಸಂಗವನ್ನಷ್ಟೇ ಕಥಾವಸ್ತುವನ್ನಾಗಿ ಹೊಂದಿದ್ದರೂ, ಸಮಗ್ರ ಮಹಾಭಾರತದ ಸಿಂಹಾವಲೋಕನವನ್ನಿಲ್ಲಿ ಕಾಣಬಹುದು.
  • ಭೀಮನ ಪರಾಕ್ರಮವನ್ನಷ್ಟೇ ಅಲ್ಲ, ಕರ್ಣ-ದುರ್ಯೋಧನರ ಸ್ನೇಹದ ಆಳ-ವಿಸ್ತಾರವನ್ನಿಲ್ಲಿ ಕಾಣುತ್ತೇವೆ. ಕರ್ಣನ ಸಾವಿಗಾಗಿ ಮರುಗುವ ದುರ್ಯೋಧನ ನನ್ನು ಕಂಡು ನಮಗೂ ಅಷ್ಟೇ ವ್ಯಥೆಯಾಗದೇ ಇರದು. ಎಲ್ಲೋ ಒಮ್ಮೆ ದುರ್ಯೋಧನನೂ ತುಂಬ ಇಷ್ಟವಾಗಿಬಿಡುತ್ತಾನೆ ಇಲ್ಲಿ! ಹಾಗಿದೆ ಆ ಪಾತ್ರದ ಪೋಷಣೆ.
  • ಕವಿಯು ತನ್ನ ಆಶ್ರಯದಾತನನ್ನು ಭೀಮನಿಗೆ ಹೋಲಿಸಿ ಈ ಕಾವ್ಯವನ್ನು ರಚಿಸಿದ್ದಾನೆ. ಹಾಗಾಗಿ ಹಲವಾರು ಐತಿಹಾಸಿಕ ಘಟನೆಗಳೂ(ಸತ್ಯಾಶ್ರಯನ ಬಗೆಗಿನ ಘಟನೆಗಳೂ) ಈ ಕಾವ್ಯದಲ್ಲಿ ಪ್ರಸ್ತಾಪಿತವಾಗಿವೆ. ಕೃತಿಯ ಆದಿಯಲ್ಲಿಯೇ ಕವಿಯು ತಾನು ಈ ಕೃತಿಯನ್ನು ಏಕೆ ಬರೆಯು ತ್ತಿರುವುದಾಗಿ ಹೇಳಿಬಿಡುತ್ತಾನೆ.


ಎನಿಸಿದ ಸತ್ಯಾಶ್ರಯದೇ
ವನೆ ಪೃಥ್ವೀವಲ್ಲಭಂ ಕಥಾನಾಯಕನಾ
ಗನಿಲಜನೊಳ್ ಪೋಲಿಸಿ ಪೇ
ೞ್ದನೀ ಗದಾಯುದ್ಧಮಂ ಮಹಾಕವಿ ರನ್ನಂ ||೧.೩೧||

ಕೃತಿ ನೆಗೞ್ದ ಗದಾಯುದ್ಧಂ
ಕೃತಿಗೀಶಂ ಚಕ್ರವರ್ತಿ ಸಾಹಸಭೀಮಂ
ಕೃತಿಯಂ ವಿರಚಿಸಿದನಲಂ
ಕೃತಿಯಂ ಕವಿರತ್ನನೆಂದೊಡೇವಣ್ಣಿಪುದೋ ||೧.೩೨||

ಮೊದಲೊಳ್ ಬದ್ಧವಿರೋಧದಿಂ ನೆಗೞ್ದ ಕುಂತೀಪುತ್ರರೊಳ್ ಭೀಮನಂ
ಕದ ಗಾಂಧಾರಿಯ ಪುತ್ರರೊಳ್ ಮೊದಲಿಗಂ ದುರ್ಯೋಧನಂ ಧರ್ಮಯು
ದ್ಧದೊಳಂತಾತನನಿಕ್ಕಿ ಕೊಂದನದಱಿಂ ಭೀಮಂ ಜಯೋದ್ಧಾಮನೆಂ
ಬುದನೆಂಬಂತಿದು ವಸ್ತುಯುದ್ಧಮೆನಿಸಲ್ ಪೇೞ್ದಂ ಗದಾಯುದ್ಧಮಂ ||೧.೩೩||

Tags:

ಕನ್ನಡರನ್ನ

🔥 Trending searches on Wiki ಕನ್ನಡ:

ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಧರ್ಮಹನುಮ ಜಯಂತಿಸ್ವಾಮಿ ವಿವೇಕಾನಂದಕನ್ನಡ ಜಾನಪದಭೂಮಿ ದಿನದೇವಸ್ಥಾನಲಸಿಕೆಜಾಗತೀಕರಣಸಿ.ಎಮ್.ಪೂಣಚ್ಚಜಯಮಾಲಾಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕರ್ನಾಟಕದ ಇತಿಹಾಸಔಡಲಯೋಗ ಮತ್ತು ಅಧ್ಯಾತ್ಮರಾಜಕೀಯ ವಿಜ್ಞಾನಮಂಗಳೂರುಭಾರತದ ವಿಶ್ವ ಪರಂಪರೆಯ ತಾಣಗಳುಹಿಂದೂ ಧರ್ಮತೆನಾಲಿ ರಾಮಕೃಷ್ಣನಾಗೇಶ ಹೆಗಡೆಚಾಮರಾಜನಗರರಾಯಲ್ ಚಾಲೆಂಜರ್ಸ್ ಬೆಂಗಳೂರುಕಾಲಾಯ ತಸ್ಮೈ ನಮಃ (ಚಲನಚಿತ್ರ)ಆಂಡಯ್ಯಸಮುದ್ರಶಾಸ್ತ್ರಜ್ಞಾನಪೀಠ ಪ್ರಶಸ್ತಿಹಲ್ಮಿಡಿ ಶಾಸನಶ್ರೀರಂಗಪಟ್ಟಣಬುಧಭೂತಕೋಲಪಕ್ಷಿಆಯ್ದಕ್ಕಿ ಲಕ್ಕಮ್ಮನಾಯಕ (ಜಾತಿ) ವಾಲ್ಮೀಕಿಬ್ರಾಹ್ಮಣಭಾರತದಲ್ಲಿನ ಚುನಾವಣೆಗಳುವೃದ್ಧಿ ಸಂಧಿಮಾನವನ ವಿಕಾಸಅಶ್ವತ್ಥಮರಶ್ರೀಲಂಕಾ ಕ್ರಿಕೆಟ್ ತಂಡಶಾತವಾಹನರುನೀರಚಿಲುಮೆಬಸವೇಶ್ವರಆಟಿಸಂಆರ್ಥಿಕ ಬೆಳೆವಣಿಗೆಹಂಪೆಭಾಷಾ ವಿಜ್ಞಾನಭಾರತೀಯ ಜನತಾ ಪಕ್ಷಮುಹಮ್ಮದ್ಕೃತಕ ಬುದ್ಧಿಮತ್ತೆದ್ರೌಪದಿನಿರ್ವಹಣೆ ಪರಿಚಯಅಮೃತಬಳ್ಳಿಒಗಟುಕಾಂತಾರ (ಚಲನಚಿತ್ರ)ಭಾರತದಲ್ಲಿ ಮೀಸಲಾತಿಬಿಸಿನೀರಿನ ಚಿಲುಮೆಯೂಟ್ಯೂಬ್‌ರೈತವಾರಿ ಪದ್ಧತಿಯಜಮಾನ (ಚಲನಚಿತ್ರ)ಎ.ಎನ್.ಮೂರ್ತಿರಾವ್ರಾಶಿಅಮ್ಮಕೋಲಾರಕಾದಂಬರಿಎಲಾನ್ ಮಸ್ಕ್ಅರಣ್ಯನಾಶರಾಘವಾಂಕರಾಜ್ಯಸಭೆರತ್ನಾಕರ ವರ್ಣಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುವಿಜಯಾ ದಬ್ಬೆಪೆಟ್ರೋಮ್ಯಾಕ್ಸ್ (ಚಲನಚಿತ್ರ)ಬಂಜಾರಮುಟ್ಟಿದರೆ ಮುನಿತ್ರಿದೋಷ🡆 More