No issues specified.
This article has multiple issues. Please help improve it or discuss these issues on the talk page. (Learn how and when to remove these template messages) Please specify issues, or remove this template. |
ಮಾನವ–ಯಂತ್ರದ ಪರಸ್ಪರ ಕ್ರಿಯೆಯ ಔದ್ಯೋಗಿಕ ವಿನ್ಯಾಸ ಕ್ಷೇತ್ರದಲ್ಲಿ, ಬಳಕೆದಾರರ ಅಂತರಸಂಪರ್ಕ ವು ಮಾನವರ ಮತ್ತು ಯಂತ್ರಗಳ ನಡುವೆ ಪಾರಸ್ಪರಿಕ ಕ್ರಿಯೆ ಏರ್ಪಡುವ ಸಂದರ್ಭದ ಅಂತರವಾಗಿರುತ್ತದೆ. ಬಳಕೆದಾರರ ಅಂತರಸಂಪರ್ಕದಲ್ಲಿ ಮಾನವ ಮತ್ತು ಯಂತ್ರದ ನಡುವಿನ ಪರಸ್ಪರ ಕ್ರಿಯೆಯ ಉದ್ದೇಶವೆಂದರೆ, ಪ್ರಭಾವಪೂರ್ಣ ಕಾರ್ಯಾಚರಣೆ ಮತ್ತು ಯಂತ್ರದ ನಿಯಂತ್ರಣವಾಗಿದೆ. ಅಲ್ಲದೇ ಯಂತ್ರದಿಂದ, ಅದರ ಕಾರ್ಯಚಟುವಟಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರ್ಯನಿರ್ವಾಹಕನಿಗೆ ಸಹಾಯವಾಗುವ ಪ್ರತಿಕ್ರಿಯೆಯನ್ನು ಪಡೆಯುವುದಾಗಿದೆ. ಬಳಕೆದಾರರ ಅಂತರಸಂಪರ್ಕದ ಈ ವ್ಯಾಪಕ ಪರಿಕಲ್ಪನೆಯ ಉದಾಹರಣೆಗಳು, ಕಂಪ್ಯೂಟರ್ ಕಾರ್ಯನಿರ್ವಹಣ ಸಾಧನಗಳು , ಕೈ ಪರಿಕರಗಳು, ದೊಡ್ಡ ಶಕ್ತಿಯ ಯಂತ್ರದ, ಹೆವಿ ಮಿಷನರಿ ಕಾರ್ಯನಿರ್ವಾಹಕನ ನಿಯಂತ್ರಣಗಳು, ಮತ್ತು ಕಾರ್ಯವಿಧಾನದ ನಿಯಂತ್ರಣಗಳ, ಪಾರಸ್ಪರಿಕ ಕ್ರಿಯೆಯ ದೃಷ್ಟಿಕೋನಗಳನ್ನು ಒಳಗೊಂಡಿವೆ. ಬಳಕೆದಾರರ ಅಂತರಸಂಪರ್ಕವನ್ನು ನಿರ್ಮಿಸುವಾಗ ಅನ್ವಯವಾಗುವ ವಿನ್ಯಾಸದ ಪರಿಗಣನೆಗಳು ದಕ್ಷತಾಶಾಸ್ತ್ರ ಮತ್ತು ಮನೋವಿಜ್ಞಾನ ದಂತಹ ವಿಷಯಗಳಿಗೆ ಸಂಬಂಧಿಸಿರುತ್ತವೆ ಅಥವಾ ಇವುಗಳನ್ನು ಒಳಗೊಂಡಿರುತ್ತವೆ.
ಜನರು (ಬಳಕೆದಾರರು) ಯಂತ್ರಗಳೊಂದಿಗೆ ಸಂಪರ್ಕಿಸುವ ವ್ಯವಸ್ಥೆಯೇ ಬಳಕೆದಾರರ ಅಂತರಸಂಪರ್ಕವಾಗಿದೆ. ಬಳಕೆದಾರರ ಅಂತರಸಂಪರ್ಕ, ಯಂತ್ರಾಂಶ (ಹಾರ್ಡ್ ವೇರ್) (ಭೌತಿಕ) ಮತ್ತು ತಂತ್ರಾಂಶ (ಸಾಫ್ಟ್ ವೇರ್) (ತಾರ್ಕಿಕ)ಘಟಕಗಳನ್ನು ಒಳಗೊಂಡಿರುತ್ತದೆ. ಬಳಕೆದಾರರ ಅಂತರಸಂಪರ್ಕ, ಅನೇಕ ಸಿಸ್ಟಮ್ ಗಳಿಗಾಗಿ ಅಸ್ತಿತ್ವದಲ್ಲಿದೆಯಲ್ಲದೇ, ಕೆಳಕಂಡವುಗಳನ್ನು ಒದಗಿಸುತ್ತದೆ:
ಬಳಕೆದಾರನು ಬಯಸುವ ಫಲಿತಾಂಶ ನೀಡುವ ರೀತಿಯಲ್ಲಿ, ಒಂದು ಯಂತ್ರವನ್ನು ಸುಲಭವಾಗಿ ದಕ್ಷತೆಯಿಂದ ಮತ್ತು ಇಷ್ಟದಂತೆ ಕಾರ್ಯನಿರ್ವಹಿಸಲು ನೆರವಾಗುವ, ಬಳಕೆದಾರರ ಅಂತರಸಂಪರ್ಕವನ್ನು ನಿರ್ಮಿಸುವುದೇ ಮಾನವ-ಯಂತ್ರ ಪರಸ್ಪರ ಕ್ರಿಯೆಯನ್ನು ರಚಿಸುವ ಮುಖ್ಯ ಉದ್ದೇಶವಾಗಿದೆ. ಇದು ಅಪೇಕ್ಷಿತ ಔಟ್ ಪುಟ್ ಅನ್ನು ಪಡೆಯಲು ಕಾರ್ಯನಿರ್ವಾಹಕ ಕನಿಷ್ಠ ಇನ್ ಪುಟ್ ವನ್ನಾದರು ಒದಗಿಸಬೇಕು, ಹಾಗು ಯಂತ್ರವು ಮಾನವನಿಗೆ ಅಪೇಕ್ಷಿಸಿರದ ಔಟ್ ಪುಟ್ ಅನ್ನು ಒದಗಿಸಬಾರದು ಎಂಬ ಸಾಮಾನ್ಯ ಅರ್ಥ ನೀಡುತ್ತದೆ.
ವೈಯಕ್ತಿಕ ಕಂಪ್ಯೂಟರ್ ಗಳ ಬಳಕೆ ಹೆಚ್ಚಿದ್ದರಿಂದ ಹಾಗು ಹೆವಿ ಮಿಷನರಿಯ ಬಗ್ಗೆ ಸಾಮಾಜಿಕವಾಗಿ ಆಸಕ್ತಿ ಕಡಿಮೆಯಾಗಿದೆ.ಇದರಲ್ಲಿರುವ ಬಳಕೆದಾರರ ಅಂತರಸಂಪರ್ಕ ಪದವು (ಗ್ರಾಫಿಕ್ (ರೇಖಾಚಿತ್ರದ)) ಬಳಕೆದಾರರ ಅಂತರಸಂಪರ್ಕ ಅನ್ನು ಸೂಚಿಸುತ್ತದೆ; ಔದ್ಯೋಗಿಕ ನಿಯಂತ್ರಣ ವ್ಯವಸ್ಥೆ ಎಂದರೆ ಕಂಟ್ರೋಲ್ ಪ್ಯಾನಲ್ ಮತ್ತು ಯಂತ್ರಗಳ ನಿಯಂತ್ರಣ ವಿನ್ಯಾಸದ ವಿಷಯಾಧಾರಿತ ಚರ್ಚೆಗಳು, ಹೆಚ್ಚಾಗಿ ಮಾನವ-ಯಂತ್ರ ಅಂತರಸಂಪರ್ಕಗಳನ್ನು ಸೂಚಿಸುತ್ತವೆ.
ಬಳಕೆದಾರರ ಅಂತರಸಂಪರ್ಕಕ್ಕಿರುವ ಇತರ ಪದಗಳು, "ಮಾನವ–ಕಂಪ್ಯೂಟರ್ ಅಂತರಸಂಪರ್ಕ" (HCI) ಮತ್ತು "ಮನುಷ್ಯ–ಯಂತ್ರ ಅಂತರಸಂಪರ್ಕ" (MMI) ಪದಗಳನ್ನು ಒಳಗೊಂಡಿವೆ.
ಸಿಸ್ಟಮ್ ನೊಂದಿಗೆ ಕಾರ್ಯನಿರ್ವಹಿಸಲು, ಬಳಕೆದಾರರು ಸಿಸ್ಟಮ್ ನ ಸ್ಥಿತಿಯನ್ನು ನಿರ್ಣಯಿಸುವಂತಿರಬೇಕು ಮತ್ತು ನಿಯಂತ್ರಿಸುವಂತಿರಬೇಕು. ಉದಾಹರಣೆಗೆ, ಮೋಟಾರು ವಾಹನವನ್ನು ಓಡಿಸುವಾಗ, ಚಾಲಕನು ವಾಹನದ ದಿಕ್ಕನ್ನು ನಿಯಂತ್ರಿಸಲು ಚಾಲನ ಚಕ್ರವನ್ನು ಬಳಸುತ್ತಾನೆ.ಅಲ್ಲದೇ ವಾಹನದ ವೇಗವನ್ನು ನಿಯಂತ್ರಿಸಲು ಆಕ್ಸಲೇಟರ್ ಪೆಡಲ್, ಬ್ರೇಕ್ ಪೆಡಲ್ ಮತ್ತು ಗೇರ್ ಸ್ಟಿಕ್ ಅನ್ನು ಬಳಸುತ್ತಾನೆ. ಚಾಲಕನು ಗಾಳಿತಡೆಯಿಂದ ನೋಡುವುದರ ಮೂಲಕ ವಾಹನದ ಸ್ಥಿತಿಯನ್ನು ಗ್ರಹಿಸುತ್ತಾನೆ. ಅಲ್ಲದೇ ವಾಹನದ ನಿಖರ ವೇಗವನ್ನು, ವೇಗಮಾಪಕದೆಡೆಗೆ ಕಣ್ಣು ಹಾಯಿಸುವ ಮೂಲಕ ತಿಳಿದುಕೊಳ್ಳುತ್ತಾನೆ. ಇಲ್ಲಿ ವಾಹನದ ಬಳಕೆದಾರರ ಅಂತರಸಂಪರ್ಕ , ಚಾಲನೆಯ ಕಾರ್ಯವನ್ನು ನಿರ್ವಹಿಸಲು ಮತ್ತು ವಾಹನವನ್ನು ನಿಭಾಯಿಸಲು ಚಾಲಕ ಬಳಸುವ ಎಲ್ಲಾ ಸಾಧನಗಳ ಸಂಯೋಜನೆಯಾಗಿದೆ.
ಬಳಕೆದಾರರ ಅಂತರಸಂಪರ್ಕ ಮತ್ತು ನಿರ್ವಾಹಕ ಅಂತರಸಂಪರ್ಕ ಅಥವಾ ಮಾನವ-ಯಂತ್ರ ಅಂತರಸಂಪರ್ಕಗಳ ನಡುವೆ ವ್ಯತ್ಯಾಸವಿದೆ.
ವೈಜ್ಞಾನಿಕ ಕಾಲ್ಪನಿಕ ಕಥೆಗಳಲ್ಲಿ, HMI ಅನ್ನು ಕೆಲವೊಮ್ಮೆ ನೇರ ನರವ್ಯೂಹದ-ಕಂಪ್ಯೂಟರ್ ಅಂತರಸಂಪರ್ಕವನ್ನು ಸೂಚಿಸಲು ಬಳಸಲಾಗುತ್ತದೆ. ಅದೇನೇ ಆದರೂ, ಈ ಅನಂತರದ ಬಳಕೆಯನ್ನು ಪೂರಣಚಿಕಿತ್ಸೆಯ (ಪ್ರಾಸ್ ತೀಸಿಸ್) ನಿಜ ಜೀವನದ ಬಳಕೆಯಲ್ಲಿ(ವೈದ್ಯಕೀಯ) ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ—ನಷ್ಟವಾದ ದೇಹದ ಭಾಗಗಳನ್ನು ಮತ್ತೆ ಅಳವಡಿಸುವ ವಿಧಾನ ಅಂದರೆ ಕೃತಕ ಜೋಡಣೆಯಾಗಿದೆ.(ಉದಾಹರಣೆಗೆ ಕಿವಿಯ ಹಾನಿಗೊಳಗಾದ ಒಳಭಾಗದ ಕಸಿ ಕಾರ್ಯ ಕಾಕ್ಲಿಯರ್ ಇಂಪ್ಲಾಂಟ್ಸ್).
ಕೆಲವೊಂದು ಸಂದರ್ಭಗಳಲ್ಲಿ ಕಂಪ್ಯೂಟರ್ ಗಳು ಬಳಕೆದಾರರನ್ನು ಗಮನಿಸಬಹುದು. ಅಲ್ಲದೇ ನಿರ್ದಿಷ್ಟ ಆದೇಶಗಳಿಲ್ಲದಿದ್ದರೂ ಕೂಡ ಅವರು ನಿರ್ವಹಿಸುವ ಕಾರ್ಯಕ್ಕನುಸಾರವಾಗಿ ಪ್ರತಿಕ್ರಿಯಿಸಬಹುದು. ದೇಹದ ಭಾಗಗಳನ್ನು ಪತ್ತೆ ಹಚ್ಚುವುದರ ಅಗತ್ಯವಿದೆ. ಅಲ್ಲದೇ ತಲೆಯ ಸ್ಥಾನವನ್ನು, ನೋಟದ ದಿಕ್ಕನ್ನು ಗಮನಿಸುವ ಸಂವೇದಕವನ್ನು ಪ್ರಯೋಗಾತ್ಮಕವಾಗಿ ಬಳಸಲಾಗಿದೆ. ಇದು ವಿಶೇಷವಾಗಿ ತಲ್ಲೀನತೆಯ ಅಂತರಸಂಪರ್ಕ ಗಳಿಗೆ ಪ್ರಸಕ್ತವಾಗಿದೆ.
ಬಳಕೆದಾರರ ಅಂತರಸಂಪರ್ಕಗಳನ್ನು ಕೆಲವು ಲೇಖಕರು, ಕಂಪ್ಯೂಟರ್ ಬಳಕೆದಾರ ತೃಪ್ತಿಗಾಗಿ ಇರುವ ಪ್ರಮುಖ ಸಾಧನವೆಂದು ಪರಿಗಣಿಸುತ್ತಾರೆ.
ಬಳಕೆದಾರರ ಅಂತರಸಂಪರ್ಕದ ವಿನ್ಯಾಸವು, ನಿರ್ವಾಹಕನ ಪ್ರಯತ್ನದ ಮೇಲೆ ಪ್ರಭಾವ ಬೀರಬಹುದು. ಬಳಕೆದಾರ, ಸಿಸ್ಟಮ್ ಗೆ ಇನ್ ಪುಟ್ ಅನ್ನು ಒದಗಿಸಲು ಪ್ರಯತ್ನಿಸಲೇಬೇಕು; ಹಾಗು ಸಿಸ್ಟಮ್ ನ ಔಟ್ ಪುಟ್ ಅನ್ನು ಕೂಡ ವ್ಯಾಖ್ಯಾನಿಸಲೇಬೇಕು. ಅಲ್ಲದೇ ಇದನ್ನು ಹೇಗೆ ಮಾಡಬೇಕೆಂದು ಕಲಿಯಲು ಹೆಚ್ಚು ಪ್ರಯತ್ನ ಪಡಬೇಕಾಗುತ್ತದೆ ಎಂಬುದರ ಮೇಲೆ ಈ ವಿನ್ಯಾಸ ಪರಿಣಾಮ ಬೀರುತ್ತದೆ. ಉಪಯುಕ್ತತೆ ಎಂಬುದು, ಪ್ರತ್ಯೇಕವಾದ ಅಂತರಸಂಪರ್ಕದ ವಿನ್ಯಾಸವು ಎಷ್ಟರ ಮಟ್ಟಿಗೆ ಮಾನವ ಮನೋವಿಜ್ಞಾನ ಮತ್ತು ಬಳಕೆದಾರರ ಮನೋವಿಜ್ಞಾನವನ್ನು ಪರಿಗಣಿಸುತ್ತದೆ ಎಂಬುದಾಗಿದೆ. ಅಲ್ಲದೇ ಸಿಸ್ಟಮ್ ನ ಬಳಕೆಯ ಕಾರ್ಯವಿಧಾನವನ್ನು ಎಷ್ಟರ ಮಟ್ಟಿಗೆ ಪರಿಣಾಮಕಾರಿ, ದಕ್ಷತೆ ಮತ್ತು ತೃಪ್ತಿಯಾಗುವಂತೆ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ.
ಉಪಯುಕ್ತತೆ ಮುಖ್ಯವಾಗಿ ಬಳಕೆದಾರರ ಅಂತರಸಂಪರ್ಕದ ಗುಣಲಕ್ಷಣವಾಗಿದೆ. ಆದರೆ ಇದು ಉತ್ಪನ್ನದ ಕಾರ್ಯಗಳು ಮತ್ತು ಅದನ್ನು ವಿನ್ಯಾಸಗೊಳಿಸುವ ಕಾರ್ಯವಿಧಾನಗಳೊಂದಿಗೆಯೂ ಕೂಡ ಸಂಬಂಧಿಸಿದೆ. ಇದು ಹೇಗೆ ಉತ್ಪನ್ನವನ್ನು ಅದರ ಅಪೇಕ್ಷಿತ ಉದ್ದೇಶಕ್ಕಾಗಿ, ದಕ್ಷತೆಯೊಂದಿಗೆ ಪರಿಣಾಮಕಾರಿ, ತೃಪ್ತಿಯೊಂದಿಗೆ ಬಳಕೆದಾರನಿಂದ ಉಪಯೋಗಿಸಬಹುದು ಎಂಬುದನ್ನು ವಿವರಿಸುತ್ತದೆ. ಅಲ್ಲದೇ ಇದನ್ನು ಬಳಸುವ ಸಂದರ್ಭಗಳ ಅಗತ್ಯತೆಗಳನ್ನು ಕೂಡ ಪರಿಗಣಿಸುತ್ತದೆ.
ಕಂಪ್ಯೂಟರ್ ವಿಜ್ಞಾನದಲ್ಲಿ ಮತ್ತು ಮಾನವ-ಕಂಪ್ಯೂಟರ್ ನ ಪರಸ್ಪರ ಕ್ರಿಯೆಯಲ್ಲಿ, ಬಳಕೆದಾರರ ಅಂತರಸಂಪರ್ಕ (ಕಂಪ್ಯೂಟರ್ ಪ್ರೋಗ್ರಾಂ ನ) ರೇಖಾಚಿತ್ರ, ಅಗತ್ಯ ಪಠ್ಯ ವಿಷಯ,ಗ್ರಂಥಪಾಠ ಮತ್ತು ಬಳಕೆದಾರನಿಗೆ ನೀಡಲಾದ ಪ್ರೋಗ್ರಾಂನ ಶ್ರವಣೀಯ ಮಾಹಿತಿಯನ್ನು ಸೂಚಿಸುತ್ತದೆ. ಅಲ್ಲದೇ ಬಳಕೆದಾರ, ಪ್ರೋಗ್ರಾಂ ಅನ್ನು ನಿಯಂತ್ರಿಸಲು ಬಳಸುವ ನಿಯಂತ್ರಣಾ ಗತಿಯನ್ನು (ಕಂಪ್ಯೂಟರ್ ಕೀಲಿಮಣೆಯೊಂದಿಗೆ ಕೀಲಿಕೈ, ಕಂಪ್ಯೂಟರ್ ಮೌಸ್ ನ ಚಲನೆಗಳನ್ನು, ಸ್ಪರ್ಶ ಪಟಲದೊಂದಿಗೆ ಆಯ್ಕೆಗಳನ್ನು) ಕೂಡ ಸೂಚಿಸುತ್ತದೆ.
ಪ್ರಸ್ತುತ (as of 2009[update]) ಬಳಕೆದಾರರ ಅಂತರಸಂಪರ್ಕದ ಕೆಳಕಂಡ ವಿಧಗಳು ಅತ್ಯಂತ ಸಾಮಾನ್ಯವಾಗಿವೆ:
ಡೆಸ್ಕ್ ಟಾಪ್ ಕಂಪ್ಯೂಟರ್(ವೈಯಕ್ತಿಕ ಕಂಪ್ಯೂಟರ್) ನ ಹೊರಗೆ ಅನೇಕ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿರುವ ಬಳಕೆದಾರರ ಅಂತರಸಂಪರ್ಕಗಳು:
ಇತರ ವಿಧದ ಬಳಕೆದಾರರ ಅಂತರಸಂಪರ್ಕ ಗಳು:
ಇವನ್ನೂ ಗಮನಿಸಿ
ಬಳಕೆದಾರರ ಅಂತರಸಂಪರ್ಕಗಳ ಇತಿಹಾಸವನ್ನು, ಬಳಕೆದಾರರ ಅಂತರಸಂಪರ್ಕದ ಪ್ರಮುಖ ವಿಧಗಳ ಪ್ರಕಾರ ಕೆಳಕಂಡಂತೆ ವಿಂಗಡಿಸಬಹುದು:
ಸ್ಥಿರತೆಯು, ಉತ್ತಮ ಬಳಕೆದಾರರ ಅಂತರಸಂಪರ್ಕದ ಮುಖ್ಯ ಸಂಪತ್ತಾಗಿದೆ. ಉತ್ತಮ ಬಳಕೆದಾರರ ಅಂತರಸಂಪರ್ಕದ ವಿನ್ಯಾಸವು, ಬಳಕೆದಾರ ಸ್ಥಿರ ಪ್ರಮಾಣದಲ್ಲಿ ನಿರೀಕ್ಷೆ ಹೊಂದುವಂತೆ ಹಾಗು ಅನಂತರ ಆ ನಿರೀಕ್ಷೆಗಳನ್ನು ಮುಟ್ಟುವಂತೆ ಮಾಡುತ್ತದೆ. ಉದ್ದೇಶಕ್ಕಾಗಿ ಬಳಸದಿದ್ದಲ್ಲಿ ಹಾಗು ಕೊನೆಯಲ್ಲಿ ಇದು ಬಳಕೆದಾರನಿಗೆ ಯಾವ ಲಾಭವನ್ನು ನೀಡದಿದ್ದಾಗಲೂ ಸ್ಥಿರತೆ ಉತ್ತಮವಾಗಿರುವುದಿಲ್ಲ.
ಸ್ಥಿರತೆಯ ಮೂರು ಪ್ರಮುಖ ಅಂಶಗಳು ಮತ್ತು ದೃಷ್ಟಿಕೋನಗಳಿವೆ[dubious ]
ಮೊದಲನೆಯದು,ವಿಭಿನ್ನ ಲಕ್ಷಣಗಳಿಗೆ ಬಳಸುವ ನಿಯಂತ್ರಣಗಳು ಸ್ಥಿರವಾದ ರೀತಿಯಲ್ಲಿರಬೇಕು. ಇದರಿಂದಾಗಿ ಬಳಕೆದಾರ ಸುಲಭವಾಗಿ ನಿಯಂತ್ರಣಗಳನ್ನು ಕಾಣಬಲ್ಲ.[ಸೂಕ್ತ ಉಲ್ಲೇಖನ ಬೇಕು] ಉದಾಹರಣೆಗೆ, ಕೆಲವು ಆದೇಶಗಳು ಪರಿವಿಡಿ, ಐಕಾನ(ಚಿತ್ರಿಕೆ), ಬಲ ಕ್ಲಿಕ್ ಗಳ ಮೂಲಕ, ಕೆಲವು ತೆರೆಯ ಒಂದು ಬದಿಯಲ್ಲಿ ಪ್ರತ್ಯೇಕವಾದ ಬಟನ್ ಮೂಲಕ ದೊರೆತರೆ, ಕೆಲವನ್ನು ಕಾರ್ಯದ ಮೂಲಕ ಕ್ಷಮತೆಯನ್ನು ಗುಂಪುಗೂಡಿಸಿದ್ದರೆ, “ಎಲ್ಲದರ” ಮೂಲಕ ಗುಂಪುಗೂಡಿಸಿದ್ದರೆ, ಕೆಲವನ್ನು “ಮೊದಲೇ” ಒಟ್ಟಾಗಿಸಿದ್ದರೆ ಅಂತಹ ಸಮಯದಲ್ಲಿ ಬಳಕೆದಾರನಿಗೆ ತಂತ್ರಾಂಶವನ್ನು ಬಳಸಲು ಕಷ್ಟವಾಗಬಹುದು. ಆದೇಶಕ್ಕಾಗಿ ಹುಡುಕುವಂತಹ ಬಳಕೆದಾರ, ಅದನ್ನು ಕಂಡುಕೊಳ್ಳಲು ಸ್ಥಿರವಾದ ಶೋಧಕ ಕೌಶಲವನ್ನು ಹೊಂದಿರಬೇಕು. ಬಳಕೆದಾರ ಅಧಿಕ ಶೋಧಕ ಕಾರ್ಯತಂತ್ರಗಳನ್ನು ಬಳಸಿದಷ್ಟು ಹತಾಶನಾಗುತ್ತಾನೆ. ಗುಂಪನ್ನು ಹೆಚ್ಚು ಸ್ಥಿರವಾಗಿಸುವುದರಿಂದ ಶೋಧನೆ ಸುಲಭವಾಗುತ್ತದೆ.
ಎರಡನೆಯದು, "ಪ್ರಿನ್ಸಿಪಲ್ ಆಫ್ ಲೀಸ್ಟ್ ಅಸ್ಟಾನಿಷ್ ಮಂಟ್" ಆಗಿದ್ದು, ಇದು ನಿರ್ಣಾಯಕವಾಗಿದೆ.[ಸೂಕ್ತ ಉಲ್ಲೇಖನ ಬೇಕು] ಅನೇಕ ಲಕ್ಷಣಗಳು ಸದೃಶವಾದ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ, ಅಡೋಬ್ ಅಕ್ರೋಬ್ಯಾಟ್ ನಲ್ಲಿರುವ ಕೆಲವು ಲಕ್ಷಣಗಳು "ಆಯ್ಕೆಯ ಸಾಧನವಾಗಿರುತ್ತದೆ, ಅನಂತರ ಅನ್ವಯಿಸುವುದು ಆಯ್ಕೆಯ ಪಠ್ಯವಾಗಿರುತ್ತದೆ". "ಆಯ್ಕೆಯ ಪಠ್ಯ, ಇತರ ಲಕ್ಷಣವಾಗಿದ್ದು, ಅನಂತರ ಆಯ್ಕೆಮಾಡಿಕೊಳ್ಳಲು ಕಾರ್ಯವನ್ನು ಅನ್ವಯಿಸಬೇಕು." [೨]. ಎಲ್ಲಾ ಪ್ರಕರಣಗಳಲ್ಲೂ ಆದೇಶಗಳು ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು.
ಮೂರನೆಯದು, ಆವೃತ್ತಿ ಯಿಂದ ಆವೃತ್ತಿಗೆ ಬಳಕೆದಾರರ ಅಂತರಸಂಪರ್ಕದ ಬದಲಾವಣೆಯ ವಿರುದ್ಧವಿರುವ ಸ್ಥಿರತೆಯ ಕಾರ್ಯವಿಧಾನವಾಗಿದೆ.[ಸೂಕ್ತ ಉಲ್ಲೇಖನ ಬೇಕು] ಬದಲಾವಣೆಯನ್ನು ಕನಿಷ್ಟಗೊಳಿಸಿ ಮುಂದಿನ ಸ್ಥಿರತೆಯನ್ನು ನಿಭಾಯಿಸಬಹುದು. ಉದಾಹರಣೆಗೆ,ಮೈಕ್ರೋಸಾಫ್ಟ್ ಆಫೀಸ್ 2003 ರ ಪರಿವಿಡಿ ಪೆಟ್ಟಿಕೆಯಿಂದ, ಮೈಕ್ರೋಸಾಫ್ಟ್ ಆಫೀಸ್ 2007 ರ ರಿಬ್ಬನ್ನ್ ಟೂಲ್ ಬಾರ್(ಸಾಧನ ಪಟ್ಟಿ)ನಲ್ಲಿ ಆದಂತಹ ಬದಲಾವಣೆ, ಹೆಚ್ಚಾಗಿ ಬಳಸಿದ ಕ್ರಮವಿಧಿ ಅಂಶಗಳಿಗೆ ಪ್ರವೇಶ ಕಲ್ಪಿಸುವ ಉದ್ದೇಶದಿಂದ ಪುನರ್ವಿನ್ಯಾಸಕ್ಕೆ ಮಿಶ್ರ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಇದು "ಕೋಪ ಮತ್ತು ಹತಾಶೆಯನ್ನು," ಹಾಗು " ಸಮಯ, ತರಬೇತಿ ಮತ್ತು ವೆಚ್ಚದಲ್ಲಿ ಹೆಚ್ಚು ಶ್ರಮವನ್ನು" ಉಂಟುಮಾಡುತ್ತದೆ, ಎಂದು ಹೇಳಲಾಗುತ್ತದೆ. ವಿದ್ಯುತ್ ಬಳಕೆದಾರರು ಇದನ್ನು ಕುರಿತು ಕೆಳಕಂಡಂತೆ ಹೇಳಿದ್ದಾರೆ: ಹೊಸ ಅಂತರಸಂಪರ್ಕವನ್ನು "ಕಲಿಯಲು ಇದು ಅಧಿಕ ಸಮಯ ಮತ್ತು ಸಹನೆಯನ್ನು" ತೆಗೆದುಕೊಳ್ಳುತ್ತದೆ. ಎಕ್ಸೆಲ್ ಬಳಕೆದಾರರ ಗುಂಪಿನಿಂದ ಮಾಡಲಾದ ಆನ್ ಲೈನ್ ಸಮೀಕ್ಷೆ ಕೆಳಕಂಡಂತೆ ವರದಿ ಮಾಡಿದೆ: ಪ್ರತಿಕ್ರಿಯೆ ನೀಡಿದ 80 ಪ್ರತಿಶತ ಮಂದಿ ಬದಲಾವಣೆಯ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ. ಅಲ್ಲದೇ ಆ 80 ಪ್ರತಿಶತದಲ್ಲಿಯೇ, ಉತ್ಪಾದನೆಯಲ್ಲಿ "ಸುಮಾರು 35 ಪ್ರತಿಶತ" ಕಡಿಮೆಮಾಡಬೇಕಾಗುತ್ತದೆ ಎಂದು ಸ್ವಯಂ ಅಂದಾಜು ಮಾಡಲಾಗಿದೆ.
ಸ್ಥಿರತೆಯು ಬಳಕೆದಾರ ಅಂತರಸಂಪರ್ಕ ವಿನ್ಯಾಸದಲ್ಲಿ ವಿನಿಮಯ ಮಾಡಿಕೊಳ್ಳುವಂತಹ ಒಂದು ಗುಣವಾಗಿದೆ. ಅಷ್ಟೇ ಅಲ್ಲದೇ ವಿನ್ಯಾಸದಲ್ಲಿ ಇದು ಅತ್ಯಂತ ಮುಖ್ಯವಾಗಿದೆ. ಕೆಲವೊಂದು ಪ್ರಕರಣಗಳಲ್ಲಿ, ಸ್ಥಿರತೆಯ ತತ್ವಗಳ ಉಲ್ಲಂಘನೆ, ಸಾಕಷ್ಟು ಸ್ಪಷ್ಟ ಪ್ರಯೋಜನಗಳನ್ನು ಒದಗಿಸಬಲ್ಲದು. ಸೂಕ್ಷ್ಮ ಗ್ರಹಿಕೆ ಮತ್ತು ಎಚ್ಚರಿಕೆಯ ಬಳಕೆದಾರರ ಅಂತರಸಂಪರ್ಕದ ವಿನ್ಯಾಸಕನು, ಇತರ ಗುರಿಗಳನ್ನು ಮುಟ್ಟಲು ಹೊಂದಾಣಿಕೆಯ ಉಲ್ಲಂಘನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ, ಸಾಕಷ್ಟು ಅಭಿವೃದ್ಧಿ ಪಡಿಸಿರದ ತಂತ್ರಾಂಶವು, ಯಥಾಸ್ಥಿತಿಯನ್ನು ಉಳಿಸಿಕೊಳ್ಳುವಂತಹ ಕೆಲವೇ ಕೆಲವು ಬಳಕೆದಾರರನ್ನು ಹೊಂದಿರುತ್ತದೆ. ಹಳೆಯ, ಅತ್ಯಂತ ವ್ಯಾಪಕವಾಗಿ ಬಳಸಲಾದ ತಂತ್ರಾಂಶವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಬಳಕೆದಾರನಿಗೆ ಎಚ್ಚರಿಕೆಯಿಂದ ಹೊಂದಿಸಲಾಗುತ್ತದೆ. ಏಕೆಂದರೆ ಹಾನಿಕಾರಕ ವೆಚ್ಚ ತಡೆಯಲು ಇದನ್ನು ಹೊಂದಿಸಲಾಗುತ್ತದೆ. ಅತ್ಯಂತ ಅನುಭವವುಳ್ಳ ಬಳಕೆದಾರ ಮತ್ತು ಪ್ರೋಗ್ರಾಂ ನಿಂದ ಅತ್ಯಂತ ಲಾಭ ಪಡೆದ ಬಳಕೆದಾರ, ಬದಲಾವಣೆಯಿಂದ ಉಂಟಾಗುವ ಅಧಿಕ ವೆಚ್ಚವನ್ನು ತಡೆದುಕೊಳ್ಳುವ ಬಳಕೆದಾರರಾಗಿದ್ದಾರೆ. ಅದೇನೇ ಅದರೂ, ಆ ವಿನಿಮಯಗಳಿಗೆ ಸ್ಥಿರತೆ ಕೂಡ ಅತ್ಯಂತ ಪ್ರಮುಖ ತತ್ವಗಳಲ್ಲಿ ಒಂದಾಗಿದೆ. ಅಲ್ಲದೇ ಇದನ್ನು ಕೆಲವೊಮ್ಮೆ ಮಾತ್ರ ಉಲ್ಲಂಘಿಸಬಹುದಾಗಿದೆ. ಅಸ್ತಿತ್ವದಲ್ಲಿರುವ ಬಳಕೆದಾರ ಅಂತರಸಂಪರ್ಕಕ್ಕೆ, ಬ್ಯಾಡ್ ಯೂಸರ್ ಅಂತರಸಂಪರ್ಕ ವಿನ್ಯಾಸ ಮತ್ತು ಸರಿಯಾಗಿ ಕಾರ್ಯಗತಗೊಳಿಸದಂತಹ ಬದಲಾವಣೆಗಳು, ಬಳಕೆದಾರರ ಮೇಲೆ ಹೊರಲಾರದಷ್ಟು ವೆಚ್ಚವನ್ನು ಹೇರಬಹುದು.
ಬಳಕೆದಾರ, ಉತ್ಪನ್ನವನ್ನು ವಿಭಿನ್ನ ರೀತಿಗಳಲ್ಲಿ ಬಳಸಬಹುದೆಂಬುದನ್ನು ವಿವರಿಸಲು UI ವಿನ್ಯಾಸದಲ್ಲಿ ಎರಡು ಪದಗಳನ್ನು ಬಳಸಲಾಗುತ್ತದೆ. ಮೊಡ್ಯಾಲಿಟಿ , ಒಂದೇ ಉತ್ಪನ್ನಕ್ಕಿರುವ ಅನೇಕ ಪರ್ಯಾಯ ಅಂತರಸಂಪರ್ಕಗಳನ್ನು ಸೂಚಿಸಿದರೆ, ಮೋಡ್ ಒಂದೇ ಅಂತರಸಂಪರ್ಕದ ವಿಭಿನ್ನ ಸ್ಥಿತಿಗಳನ್ನು ವಿವರಿಸುತ್ತದೆ.
ಮೊಡ್ಯಾಲಿಟಿ ಎಂಬುದು ಸಂಪರ್ಕದ ಮಾರ್ಗವಾಗಿದ್ದು, ಇನ್ ಪುಟ್ ಮತ್ತು ಔಟ್ ಪುಟ್ ಅನ್ನು ಸಾಗಿಸಲು ಬಳಕೆದಾರರ ಅಂತರಸಂಪರ್ಕ ಇದನ್ನು ಬಳಸುತ್ತದೆ. ಮೊಡ್ಯಾಲಿಟಿಯ ಉದಾಹರಣೆಗಳು:
ಬಳಕೆದಾರರ ಅಂತರಸಂಪರ್ಕ, ಪರಸ್ಪರ ಕ್ರಿಯೆಗೆ ಯಾವುದನ್ನು ಬಳಸಬೇಕೆಂದು ಆಯ್ಕೆ ಮಾಡಿಕೊಳ್ಳಲು ಬಳಕೆದಾರನಿಗೆ ಅವಕಾಶ ನೀಡುವುದರೊಂದಿಗೆ, ಅನೇಕ ವಿಪುಲ ಇನ್ ಪುಟ್ ಆಕೃತಿ ಮತ್ತು ಔಟ್ ಪುಟ್ ಆಕೃತಿಗಳನ್ನು ಬಳಸಬಲ್ಲದು.
ಮೋಡ್, ಕಂಪ್ಯೂಟರ್ ಪ್ರೋಗ್ರಾಂ ನಲ್ಲಿಯೇ ವಿಭಿನ್ನ ರೀತಿಯ ಕಾರ್ಯವಿಧಾನವಾಗಿದ್ದು, ಇಲ್ಲಿ ಒಂದೇ ಇನ್ ಪುಟ್ ಕಂಪ್ಯೂಟರ್ ಪ್ರೋಗ್ರಾಂನ ಸ್ಥಿತಿಯನ್ನು ಆಧರಿಸಿ ಗ್ರಹಿಸಲಾದ ವಿಭಿನ್ನ ಫಲಿತಾಂಶಗಳನ್ನು ನೀಡಬಹುದು. ಉದಾಹರಣೆಗೆ, ಕ್ಯಾಪ್ಸ್ ಲಾಕ್ ಒಂದು ಇನ್ ಪುಟ್ ಮೋಡ್ ಅನ್ನು ಏರ್ಪಡಿಸುತ್ತದೆ. ಇಲ್ಲಿ ಟೈಪ್ ಮಾಡಲಾದ ಅಕ್ಷರಗಳು ಅಪ್ರಯತ್ನ ಪೂರ್ವವಾಗಿಯೇ ಅಪ್ಪರ್ ಕೇಸ್ ನಲ್ಲಿರುತ್ತವೆ; ಕ್ಯಾಪ್ಸ್ ಲಾಕ್ ಮೋಡ್ ನಲ್ಲಿ ಇಲ್ಲದಿರುವಾಗ ಇದೇ ಟೈಪ್ಪಿಂಗ್, ಲೋವರ್ ಕೇಸ್ ಅಕ್ಷರಗಳನ್ನು ನೀಡುತ್ತದೆ. ಮೋಡ್ ಅನ್ನು ಹೆಚ್ಚಾಗಿ ಬಳಸುವುದರಿಂದ ಬಳಕೆದಾರರ ಅಂತರಸಂಪರ್ಕದ ಉಪಯುಕ್ತತೆ ಕಡಿಮೆಯಾಗುತ್ತದೆ. ಬಳಕೆದಾರನು ಪ್ರಸ್ತುತದ ಮೋಡ್ ಸ್ಥಿತಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಮತ್ತು ಅಗತ್ಯವಿದ್ದಲ್ಲಿ ಮೋಡ್ ಗಳ ಸ್ಥಿತಿಗಳ ನಡುವೆ ಬದಲಾಗಲು ಹೆಚ್ಚು ಶ್ರಮಪಡಬೇಕಾಗುತ್ತದೆ.
This article uses material from the Wikipedia ಕನ್ನಡ article ಬಳಕೆದಾರರ ಅಂತರಸಂಪರ್ಕ (ಯೂಸರ್ ಇಂಟರ್ ಫೇಸ್), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.