ಸೀ. Sr. ಬಲ್ಬೀರ್ ಸಿಂಗ್

ಬಲ್ಬೀರ್ ಸಿಂಗ್ Sr.

ಒಲಂಪಿಕ್ ಪದಕ ಪಟ್ಟಿ
Men's field hockey
Representing ಸೀ. Sr. ಬಲ್ಬೀರ್ ಸಿಂಗ್ ಭಾರತ
Gold medal – first place 1948 London Team
Gold medal – first place 1952 Helsinki Team
Gold medal – first place 1956 Melbourne Team

ಇವರು 1971 ರ ಪುರುಷರ ಹಾಕಿ ವಿಶ್ವಕಪ್ ಗಾಗಿ ಭಾರತ ತಂಡಕ್ಕೆ ತರಬೇತಿ ನೀಡಿದ್ದರು. ಅಲ್ಲದೇ ಇದರಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತ್ತು. ಇವರು 1975 ರ ಪುರುಷರ ಹಾಕಿ ವಿಶ್ವಕಪ್ ಗಾಗಿ ಭಾರತ ತಂಡದ ನಿರ್ವಾಹಕರಾಗಿದ್ದರು.ಈ ಪಂದ್ಯಾವಳಿಯನ್ನು ಭಾರತ ಗೆದ್ದುಕೊಂಡಿತು.

ಆರಂಭಿಕ ವರ್ಷಗಳು

ಅವರು ಭಾರತದ 1936 ರ ಒಲಿಂಪಿಕ್ ಹಾಕಿ ತಂಡದ ದಿಗ್ವಿಜಯ ಕುರಿತ ಸಿನಿಮಾವೊಂದನ್ನು ವೀಕ್ಷಿಸಿದರು. ಇದು ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತು. ಮಾತ್ರವಲ್ಲ ಇವರು ಹಾಕಿ ಸ್ಟಿಕ್ (ದಾಂಡು ಅಥವಾ ಹಾಕಿ ಕೋಲು)ನೊಂದಿಗೆ ಧ್ಯಾನ್‌‌ಚಂದ್‌‌ ಮಾಡಿದ ಚಮತ್ಕಾರದಿಂದ ಗಾಢವಾಗಿ ಪ್ರೇರೇಪಿತರಾದರು. ಸಾಂದರ್ಭಿಕವಾಗಿ, ಧ್ಯಾನ್‌‌ಚಂದ್ ಅವರು ಆಡುತ್ತಿದ್ದ ಸ್ಥಾನದಿಂದಲೇ ಇವರೂ ಕೂಡ ಆಡಿದರು: ಮಧ್ಯದ ಮುಂಚೂಣಿ ಆಟಗಾರ.

ಬಲ್ಬೀರ್ ರವರನ್ನು ಖಾಲ್ಸ ಕಾಲೇಜಿನ ಹಾಕಿ ತಂಡದ ತರಬೇತುದಾರರಾದ ಹರ್ಬೇಲ್ ಸಿಂಗ್ ರವರು ಭರವಸೆಯ ಹಾಕಿ ಆಟಗಾರನೆಂದು ಮೊದಲೆ ಗುರುತಿಸಿದ್ದರು. ಹರ್ಬೇಲ್ ರವರು ಮಾಡಿದ ಒತ್ತಾಯದಿಂದಾಗಿಯೇ ಬಲ್ಬೀರ್‌‌ರವರು ಲಾಹೋರ್ ನ ಸಿಖ್ ನ್ಯಾಷನಲ್ ಕಾಲೇಜ್ ನಿಂದ ಅಮೃತ್‌‌ಸರದ ಖಾಲ್ಸ ಕಾಲೇಜಿಗೆ ವರ್ಗಾವಣೆ ಮಾಡಿಸಿಕೊಂಡರು. ಅಂತಿಮವಾಗಿ , ಬಲ್ಬೀರ್ ರವರು 1942 ರಲ್ಲಿ ಖಾಲ್ಸ ಕಾಲೇಜ್ ಗೆ ವರ್ಗಾವಣೆ ಮಾಡಿಸಿಕೊಳ್ಳಲು ಅವರ ಕುಟುಂಬದಿಂದ ಅನುಮತಿ ಪಡೆದುಕೊಂಡರು. ತದನಂತರ ಅವರು ಹರ್ಬೇಲ್ ರ ಮಾರ್ಗದರ್ಶನದಡಿ ಕಠಿಣ ತರಬೇತಿ ಮತ್ತು ಅಭ್ಯಾಸದಲ್ಲಿ ನಿರತರಾದರು. ಅನಂತರ, ಹರ್ಬೇಲ್‌‌ರವರು ಹೆಲ್ಸಿಂಕಿ ಒಲಿಂಪಿಕ್ಸ್ ಮತ್ತು ಮೆಲ್ಬರ್ನ್ ನಲ್ಲಿ ಭಾರತದ ರಾಷ್ಟ್ರೀಯ ಯಶಸ್ವಿ ಹಾಕಿ ತಂಡಕ್ಕೆ ತರಬೇತಿ ನೀಡಿದರು.

ಖಾಲ್ಸ ಕಾಲೇಜ್ ನಾಲ್ಕು ಹಾಕಿ ಪಿಚ್ ಗಳೊಡನೆ ಅತ್ಯುತ್ತಮ ಕ್ರೀಡಾ ವಾತಾವರಣ ಹೊಂದಿತ್ತು. 1942-43 ರಲ್ಲಿ ಬಲ್ಬೀರ್ ರವರು ಪಂಜಾಬ್ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲು ಆಯ್ಕೆಯಾದರು. ಆ ಕಾಲದಲ್ಲಿ ಇದು ಅಖಂಡ ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಸಿಂಧ್ ಮತ್ತು ರಾಜಸ್ಥಾನಗಳನ್ನೊಳಗೊಂಡ ದೊಡ್ಡ ದೊಡ್ಡ ಪ್ರದೇಶಗಳ ಕಾಲೇಜ್ ಗಳನ್ನು ಒಳಗೊಂಡಿತ್ತು. ಪಂಜಾಬ್ ವಿಶ್ವವಿದ್ಯಾನಿಲಯದ ತಂಡವು ಭಾರತದ ಎಲ್ಲಾ ಅಂತರ್-ವಿಶ್ವವಿದ್ಯಾನಿಲಯ ಶೀರ್ಷಿಕೆಯನ್ನು(ಟೈಟಲ್) ಸಾಲಾಗಿ 3 ವರ್ಷಗಳ ಕಾಲ ಗೆದ್ದುಕೊಂಡಿತು- 1943, 1944 ಮತ್ತು 1945.

ಬಲ್ಬೀರ್ ರವರು ಅಖಂಡ ಪಂಜಾಬ್ ನ ಕೊನೆಯ ತಂಡದ ಸದಸ್ಯರಾಗಿದ್ದರು. ಈ ತಂಡವು 1947 ರ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕರ್ನಲ್ AIS ದಾರಾರವರ ನಾಯಕತ್ವದಡಿ ಈ ಪ್ರಶಸ್ತಿಗರಿಯ ಶೀರ್ಷಿಕೆಯನ್ನು ಗೆದ್ದುಕೊಂಡಿತು. ಬಲ್ಬೀರ್ ರವರು ಈ ತಂಡದಲ್ಲಿ ಮಧ್ಯಭಾಗದ ಮುಂಚೂಣಿ ಆಟಗಾರನ ಸ್ಥಾನದಲ್ಲಿದ್ದು ಆಟವಾಡಿದರು. ಈ ಗೆಲುವಿನ ನಂತರ ಅವರನ್ನು ಲಾಹೋರ್ ನಲ್ಲಿ ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು. ಆದರೆ ಆ ಸಮಯದಲ್ಲಿಯೇ ಭಾರತದ ವಿಭಜನೆ ಎಂಬ ರಕ್ತಸಿಕ್ತ ಅಧ್ಯಾಯ ಪ್ರಾರಂಭವಾಗಿ ಹೋಗಿತ್ತು. ತಮ್ಮ ಕುಟುಂಬವನ್ನು ಲೂಧಿಯಾನ ಕ್ಕೆ ಬದಲಾಯಿಸಿದರು. ಅಲ್ಲಿ ಅವರಿಗೆ ಪಂಜಾಬ್ ಪೋಲಿಸ್‌‌ನಲ್ಲಿ ಉದ್ಯೋಗ ದೊರೆಯಿತು.

ಭಾರತದ ವಿಭಜನೆಯು ಪಂಜಾಬ್ ಹಾಕಿ ತಂಡದ ಮೇಲೆ ತನ್ನದೇ ಆದ ರೀತಿಯಲ್ಲಿ ಪ್ರಭಾವ ಬೀರಿತು. ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ನಡುವೆ ತಂಡವೂ ಹರಿದು ಹಂಚಿ ಹೋಯಿತು.

1948 - 1956

ಲಂಡನ್ ಒಲಿಂಪಿಕ್ಸ್(1948)

ಇವರು ಅರ್ಜೆಂಟೀನ ವಿರುದ್ಧ, ಎರಡನೆಯ ಪಂದ್ಯದಲ್ಲಿ ಮೊದಲನೆಯ ಬಾರಿಗೆ ಕಾಣಿಸಿಕೊಂಡರು. ಈ ಪಂದ್ಯದಲ್ಲಿ , ಹ್ಯಾಟ್ ಟ್ರಿಕ್ ಅನ್ನು( ಮೂರು ಗೋಲುಗಳ ವಿಕ್ರಮ) ಒಳಗೊಂಡಂತೆ 6 ಗೋಲುಗಳನ್ನು ಗಳಿಸಿದರು. ಭಾರತವು 9-1 ಗೋಲ್ ಗಳಿಂದ ಗೆಲವು ಸಾಧಿಸಿತು. ತರುವಾಯ ಅವರು ಗ್ರೇಟ್ ಬ್ರಿಟನ್‌ ನ ವಿರುದ್ಧ ಅಂತಿಮ ಪಂದ್ಯವನ್ನು ಆಡಿದರು. ಇದು ಒಲಿಂಪಿಕ್ಸ್ ನಲ್ಲಿ ಭಾರತ ಮತ್ತು ಗ್ರೇಟ್ ಬ್ರಿಟನ್‌ ನಡುವೆ ನಡೆದ ಮೊದಲನೆಯ ಪಂದ್ಯವಾಗಿದೆ.

ಬಲ್ಬೀರ್ ಎರಡು ಬಾರಿ ಸ್ಕೋರ್(ಗೋಲ್) ಗಳಿಸಿದರು ಮತ್ತು ಭಾರತ 4-0 ಗೋಲ್ ಗಳಿಂದ ಜಯಸಾಧಿಸಿತು. ಈ ಚಿನ್ನದ ಪದಕವು ಕ್ರೀಡಾ ಜಗತ್ತಿನಲ್ಲಿ ಸ್ವತಂತ್ರ ಭಾರತದ ಮೊದಲನೆಯ ಪ್ರಮುಖ ಸಾಧನೆಯಾಗಿದೆ. 

ಹೆಲ್ಸಿಂಕಿ ಒಲಿಂಪಿಕ್ಸ್(1952)

ಬಲ್ಬೀರ್ ತಂಡದ ಉಪನಾಯಕರಾಗಿದ್ದರು ಹಾಗು K. D. ಸಿಂಗ್ ಬಾಬು ರವರು ನಾಯಕರಾಗಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಬಲ್ಬೀರ್ ರವರು ಭಾರತದ ಧ್ವಜ ಹೊತ್ತವರಾಗಿದ್ದರು. ಗ್ರೇಟ್ ಬ್ರಿಟನ್‌ ನ ವಿರುದ್ಧ ಸೆಮಿಫೈನಲ್ ನಲ್ಲಿ ಮೂರು ಗೋಲ್ ಗಳನ್ನು ಬಾರಿಸಿ ವಿಕ್ರಮ ಸಾಧಿಸಿದರು. ಈ ಪಂದ್ಯವನ್ನು ಭಾರತ 3-1 ಗೋಲ್ ಗಳಿಂದ ಗೆದ್ದುಕೊಂಡಿತು. ಹಾಲೆಂಡ್ ನ ವಿರುದ್ಧ ಫೈನಲ್ ಪಂದ್ಯದಲ್ಲಿ(ಅಂತಿಮ ಪಂದ್ಯ) ಮತ್ತೊಮ್ಮೆ ಮೂರು ಗೋಲ್ ಬಾರಿಸಿ ವಿಕ್ರಮ ಸಾಧಿಸಿದರು. ಅಲ್ಲದೇ ಹಾಲೆಂಡ್ ನ ವಿರುದ್ಧ 6-1 ಪರಿಮಿತಿಯ ಮಾರ್ಜಿನ್ ಗಳಿಂದ ಭಾರತದ ಗೆಲುವಿನಲ್ಲಿ 5 ಗೋಲ್ ಗಳನ್ನು ಗಳಿಸಿದ್ದರು. ಹೆಲ್ಸಿಂಕಿಯಲ್ಲಿ ಅವರು ಒಟ್ಟು 9 ಗೋಲ್ ಗಳನ್ನು ಗಳಿಸಿದ್ದರು.

ಮೆಲ್ಬರ್ನ್ ಒಲಿಂಪಿಕ್ಸ್(1956)

ಬಲ್ಬೀರ್, ತಂಡದ ನಾಯಕರಾಗಿದ್ದು, ಅಫ್ಘಾನಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿ 5 ಗೋಲ್ ಗಳನ್ನು ಗಳಿಸಿದ್ದರು.ಆದರೆ ಅನಂತರ ತೀವ್ರವಾಗಿ ಗಾಯಗೊಂಡರು. ರಣಧೀರ್ ಸಿಂಗ್ ಜೆಂಟ್ಲೆಯವರು, ಉಳಿದ ತಂಡದ ಪಂದ್ಯಗಳ ನಾಯಕರಾದರು. ಬಲ್ಬೀರ್ ರವರು ತಂಡದ ಸಮೂಹ ಪಂದ್ಯಗಳನ್ನು ತ್ಯಜಿಸಬೇಕಾಯಿತು, ಆದರೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಆಟವಾಡಿದರು. ಭಾರತವು ಪಾಕಿಸ್ತಾನದ ವಿರುದ್ಧ ಅಂತಿಮ ಪಂದ್ಯವನ್ನು 1-0 ಗೋಲ್ ಗಳೊಂದಿಗೆ ಗೆದ್ದುಕೊಂಡಿತು.

1956 ರ ಅನಂತರ

ಇವರು 1957ರಲ್ಲಿ, ಕ್ರೀಡಾ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಗೌರವ ಸ್ವೀಕರಿಸಿದ ಮೊದಲನೆಯ ಕ್ರೀಡಾಳು ಎನಿಸಿದ್ದಾರೆ. ಇವರು 1958ರ ಏಷ್ಯನ್ ಕ್ರೀಡಾಕೂಟಗಳಲ್ಲಿ ಮತ್ತು 1962ರ ಏಷ್ಯನ್ ಕ್ರೀಡಾಕೂಟಗಳಲ್ಲಿ ಬೆಳ್ಳಿಯ ಪದಕ ಗೆದ್ದ ಭಾರತ ಹಾಕಿ ತಂಡದ ಸದಸ್ಯರಾಗಿದ್ದರು. ಇವರು ವಿಶ್ವ ಕಪ್ ಹಾಕಿ ಗಾಗಿ 1971ರ ಭಾರತ ಹಾಕಿ ತಂಡಕ್ಕೆ ತರಬೇತಿ ನೀಡಿದ್ದರು. ಇದರಲ್ಲಿ ಭಾರತವು ಕಂಚಿನ ಪದಕ ಗೆದ್ದುಕೊಂಡಿತ್ತು. 1975 ರಲ್ಲಿ ವಿಶ್ವ ಕಪ್ ಹಾಕಿಯನ್ನು ಗೆದ್ದುಕೊಂಡ ಭಾರತ ಹಾಕಿ ತಂಡದ ನಿರ್ವಾಹಕರಾಗಿದ್ದರು.

ಪ್ರಶಸ್ತಿಗಳು ಮತ್ತು ಸಾಧನೆಗಳು

ಬಲ್ಬೀರ್ ಸಿಂಗ್ ರವರು 1957 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾದ ಮೊದಲನೆಯ ಕ್ರೀಡಾ ವ್ಯಕ್ತಿಯಾಗಿದ್ದಾರೆ. ಇವರು ನವ ದೆಹಲಿಯಲ್ಲಿ ನಡೆದ 1982 ರ ಏಷ್ಯನ್ ಕ್ರೀಡಾಕೂಟದಲ್ಲಿ ಪವಿತ್ರ ಕ್ರೀಡಾ ಜ್ಯೋತಿ ಹೊತ್ತಿಸಿದರು. ವರ್ಷ 2006 ರಲ್ಲಿ ಇವರನ್ನು ಬೆಸ್ಟ್ ಸಿಖ್ ಹಾಕಿ ಪ್ಲೇಯರ್ ಆಫ್ ಆಲ್ ಟೈಮ್ (ಎಲ್ಲಾ ಕಾಲದ ಅತ್ಯುತ್ತಮ ಸಿಖ್ ಹಾಕಿ ಆಟಗಾರ) ಎಂದು ಹೆಸರಿಸಲಾಯಿತು. ಅಲ್ಲದೇ, 1982 ರಲ್ಲಿನ ಜನಾಭಿಪ್ರಾಯ ಸಂಗ್ರಹಣೆಯಲ್ಲಿ, ಇವರನ್ನು ಪ್ಲೇಯರ್ ಆಫ್ ದಿ ಸೆಂಚುರಿ (ಶತಮಾನದ ಆಟಗಾರನೆಂದು) ಎಂದು ಪರಿಗಣಿಸಲಾಯಿತು.

ಕುಟುಂಬ

ಇವರ ತಂದೆಯ ಪೂರ್ವಿಕರು (ತಂದೆತಾಯಿಗಳು) ದೊಸಾಂಜ್ರಾಗಿದ್ದರು ಮತ್ತು ತಾಯಿಯ ತಂದೆತಾಯಿಗಳು ಪಂಜಾಬ್ ನ ಹರಿಪುರ್ ಖಾಲ್ಸದವರಾಗಿದ್ದರು. ಬಲ್ಬೀರ್‌‌ ಅವರ ತಂದೆ ದಲೀಪ್ ಸಿಂಗ್‌‌ರವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬಲ್ಬೀರ್‌‌ರವರ ಪತ್ನಿ ಸುಶೀಲ್, ಲಾಹೋರ್ ನಲ್ಲಿನ ಮಾಡೆಲ್ ಟೌನ್ ಪ್ರದೇಶದವರಾಗಿದ್ದಾರೆ. ಇವರು 1946 ರಲ್ಲಿ ವಿವಾಹವಾದರು. ಇವರಿಗೆ ಸುಷ್ಬೀರ್ ಎಂಬ ಪುತ್ರಿಯಿದ್ದು, ಕನ್ವಾಲ್ಬಿರ್, ಕರಣ್ಬಿರ್, ಗುರ್ಬಿರ್ ಎಂಬ ಮೂವರು ಪುತ್ರರಿದ್ದಾರೆ.

ಬಾಹ್ಯ ಕೊಂಡಿಗಳು

Tags:

ಸೀ. Sr. ಬಲ್ಬೀರ್ ಸಿಂಗ್ ಆರಂಭಿಕ ವರ್ಷಗಳುಸೀ. Sr. ಬಲ್ಬೀರ್ ಸಿಂಗ್ 1948 - 1956ಸೀ. Sr. ಬಲ್ಬೀರ್ ಸಿಂಗ್ 1956 ರ ಅನಂತರಸೀ. Sr. ಬಲ್ಬೀರ್ ಸಿಂಗ್ ಪ್ರಶಸ್ತಿಗಳು ಮತ್ತು ಸಾಧನೆಗಳುಸೀ. Sr. ಬಲ್ಬೀರ್ ಸಿಂಗ್ ಕುಟುಂಬಸೀ. Sr. ಬಲ್ಬೀರ್ ಸಿಂಗ್ ಬಾಹ್ಯ ಕೊಂಡಿಗಳುಸೀ. Sr. ಬಲ್ಬೀರ್ ಸಿಂಗ್ಒಲಂಪಿಕ್ ಕ್ರೀಡಾಕೂಟಪಂಜಾಬ್ಭಾರತ

🔥 Trending searches on Wiki ಕನ್ನಡ:

ಲಕ್ಷ್ಮೀಶಭಗತ್ ಸಿಂಗ್ಸಹಕಾರಿ ಸಂಘಗಳುಟೊಮೇಟೊಭೂಕಂಪಭಾರತದಲ್ಲಿ ಪಂಚಾಯತ್ ರಾಜ್ಸೂರ್ಯಭಾರತದ ಸಂವಿಧಾನಉಪ್ಪಿನ ಸತ್ಯಾಗ್ರಹಬೆಂಗಳೂರುಎಳ್ಳೆಣ್ಣೆಸವರ್ಣದೀರ್ಘ ಸಂಧಿರಸ(ಕಾವ್ಯಮೀಮಾಂಸೆ)ಅರ್ಥಶಾಸ್ತ್ರಚಂಡಮಾರುತಪಂಚ ವಾರ್ಷಿಕ ಯೋಜನೆಗಳುನಿರುದ್ಯೋಗಮಾಸ್ಕೋಭಾರತದಲ್ಲಿ ತುರ್ತು ಪರಿಸ್ಥಿತಿಅಶ್ವತ್ಥಮರಸಾಲ್ಮನ್‌ಬ್ರಹ್ಮಪೆಟ್ರೋಮ್ಯಾಕ್ಸ್ (ಚಲನಚಿತ್ರ)ಹಾರೆಸಲಿಂಗ ಕಾಮಪುರಂದರದಾಸಶಾಂತರಸ ಹೆಂಬೆರಳುಕರ್ನಾಟಕದ ಮುಖ್ಯಮಂತ್ರಿಗಳುಕುವೆಂಪುಬೆಳಕುಭಾರತೀಯ ಧರ್ಮಗಳುಅಷ್ಟ ಮಠಗಳುಭಾರತದ ಪ್ರಧಾನ ಮಂತ್ರಿರೈತ ಚಳುವಳಿಮಳೆಗಾಲಮಹೇಂದ್ರ ಸಿಂಗ್ ಧೋನಿರಾಹುಲ್ ಗಾಂಧಿವಸ್ತುಸಂಗ್ರಹಾಲಯಎಸ್.ಎಲ್. ಭೈರಪ್ಪಖ್ಯಾತ ಕರ್ನಾಟಕ ವೃತ್ತಭಾರತೀಯ ಕಾವ್ಯ ಮೀಮಾಂಸೆಬುಡಕಟ್ಟುಬಿಳಿ ರಕ್ತ ಕಣಗಳುಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರಾವಣಜೀವನಮಧ್ವಾಚಾರ್ಯಚಂದ್ರಯಾನ-೩ಋಗ್ವೇದಭಾರತದ ರೂಪಾಯಿಕನ್ನಡಮಹಾವೀರಸಾಹಿತ್ಯಕೃತಕ ಬುದ್ಧಿಮತ್ತೆಹವಾಮಾನಅವ್ಯಯಯೂಟ್ಯೂಬ್‌ವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಪಿ.ಲಂಕೇಶ್ತ್ರಿವೇಣಿಕರ್ನಾಟಕ ಹೈ ಕೋರ್ಟ್ಸುಮಲತಾಯಮಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುವ್ಯಾಪಾರ ಸಂಸ್ಥೆಉತ್ತರ ಕನ್ನಡಗುಡಿಸಲು ಕೈಗಾರಿಕೆಗಳುಕಂಪ್ಯೂಟರ್ನಾಟಕಗೋತ್ರ ಮತ್ತು ಪ್ರವರಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಪ್ರಾಥಮಿಕ ಶಿಕ್ಷಣನಾಯಕ (ಜಾತಿ) ವಾಲ್ಮೀಕಿಸೆಸ್ (ಮೇಲ್ತೆರಿಗೆ)ನೀರಾವರಿಅಳಿಲುಏಡ್ಸ್ ರೋಗಕೇಶಿರಾಜ🡆 More