ಪಟದ ಕುಣಿತ

ಪಟದ ಕುಣಿತ ವು ವೈಷ್ಣವ ಸಂಪ್ರದಾಯದ ಕುಣಿತಗಳಲ್ಲಿ ಒಂದು.

ಇದು ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಂಡುಬರುವುದು. ಈ ಕುಣಿತವನ್ನು ಕಂಡಾಗ ಸುಗ್ಗಿಯ ಕುಣಿತದಂತಿದ್ದರೂ ಕಲಾವಿದರ ಕೈಯಲ್ಲಿ ಹಿಡಿದಂತಹ ಪಟಗಳಿಂದ ವಿಶಿಷ್ಟ ಕಲೆಯೆನಿಸಿರುವುದು. ಹತ್ತು, ಹದಿನೈದು ಅಡಿ ಉದ್ದದ ಪಟದ ಬಿದಿರಿನ ಕೋಲಿಗೆ ಬಣ್ಣದ ರೇಷ್ಮೆ ಜಾಲರಿ ಬಟ್ಟೆಯಿಂದ ಸುತ್ತಿ ಅಲಂಕಾರವನ್ನು ಮಾಡಿರುತ್ತಾರೆ.ಪಟದ ತುದಿಯಲ್ಲಿ ಹಿತ್ತಾಳೆ ಅಥವಾ ಬೆಳ್ಳಿಯ ಛತ್ರಿಯನ್ನು ಅಳವಡಿಸಿರುತ್ತಾರೆ. ಪಟದ ಕುಣಿತವು ಸಾಮಾನ್ಯವಾಗಿ ಒಂದೇ ಸಾಲಿನಲ್ಲಿ, ಎದುರು ಬದುರಿನ ಸಾಲಿನಲ್ಲಿ ಕುಣಿತವು ನಡೆಯುವುದನ್ನು ಕಾಣಬಹುದು. ಈ ಕುಣಿತವನ್ನು ಕಂಡಾಗ ವಿಜಯದ ಸಂಭ್ರಮದ ಸಂಕೇತವಾಗಿ ಗೋಚರಿಸುವುದು. ಕೆಲವು ಕಡೆ ಈ ಕುಣಿತವು ಭಾಗವಂತಿಕೆಯ ಜೊತೆಯಲ್ಲಿ ಪಟದ ಕುಣಿತ ನಡೆಯುವುದುಂಟು. ಮಂಡ್ಯ ಜಿಲ್ಲೆಯ ಸ್ಥಳಗಳಲ್ಲಿ ದೀವಳಿಗೆ ತಿಂಗಳಲ್ಲಿ ಮಾತ್ರ ಪಟವನ್ನು ಮುಟ್ಟುವ ಸಂಪ್ರದಾಯವಿದೆ ಎಂದು ಹೇಳುವುದು ತಿಳಿಯುತ್ತದೆ.

ಇತಿವೃತ್ತ

  • ಒಕ್ಕಲಿಗ ಸಂಪ್ರದಾಯದವರು ಈ ಪಟದ ಕುಣಿತವನ್ನು ಹಬ್ಬ,ಜಾತ್ರೆ, ಉತ್ಸವಗಳಲ್ಲಿ ಮಾಡುವರು. ನಗಾರಿಗಳ ಬಡಿತವು ಈ ಪಟದ ಕುಣಿತಕ್ಕೆ ಹಿನ್ನೆಲೆಯ ವಾದ್ಯವಾಗಿರುವುದು. ಬಿಳಿಯ ಕಾಸೆಪಂಚೆ, ಬಿಳಿಯ ನಿಲುವಂಗಿ, ಬಿಳಿಯ ರುಮಾಲು, ಸೊಂಟಕ್ಕೆ ಬಿಗಿದ ಬಣ್ಣದ ವಸ್ತ್ರ, ಕೊರಳಿಗೆ ಮಣಿಸರ, ಒಂದು ಕೈಯಲ್ಲಿ ಬಿಳಿಯ ಚೌಕ, ಕಾಲಿಗೆ ಗೆಜ್ಜೆಯನ್ನು ಕಲಾವಿದರು ಧರಿಸಿರುತ್ತಾರೆ.
  • ಹೆಗಲಿಗೆ ಅಡ್ಡವಾಗಿ ಹಾಕಿಕೊಂಡಂತಹ ಬಟ್ಟೆಯ ’ನವಾರ’ದಲ್ಲಿ ಸಿಕ್ಕಿಸಿದ ಪಟದ ಕೋಲನ್ನು ಬಲಗೈಯಲ್ಲಿ ಹಿಡಿದು ವಾದ್ಯದ ದಾಟಿಗೆ ತಕ್ಕಂತೆ ವಿವಿಧ ಭಂಗಿಯಲ್ಲಿ ಕುಣಿಯುವುದು ಕಂಡುಬರುವುದು. ಪಟದ ಕುಣಿತಕ್ಕೆ ಇಷ್ಟೆ ಕಲಾವಿದರೂ ಇರಬೇಕೆಂಬ ನಿಯಮವೇನೂ ಇಲ್ಲ . ಪಟದ ಕುಣಿತದ ಸಂದರ್ಭದಲ್ಲಿ ಪಟದ ಜವಳಿಗಳು ಬಾಗುವಾಗುವುದು.

ವಿಧಗಳು

ಪಟದ ಕುಣಿತದಲ್ಲಿ-

  1. ಗೆಜ್ಜೆ ಕುಣಿತ,
  2. ಎರಡ್ಹೆಜ್ಜೆ ಕುಣಿತ,
  3. ಪೂಜಾ ಕುಣಿತ.
  4. ಮೂರು ಹೆಜ್ಜೆ ಕುಣಿತ ಮೊದಲಾದ ವಿಧಗಳಿರುವುದು.

Tags:

ಜಿಲ್ಲೆ

🔥 Trending searches on Wiki ಕನ್ನಡ:

ಕೃಷ್ಣಚೋಮನ ದುಡಿಯೇಸು ಕ್ರಿಸ್ತಕರ್ನಾಟಕದ ಮಹಾನಗರಪಾಲಿಕೆಗಳುನಿರ್ಮಲಾ ಸೀತಾರಾಮನ್ಜಯಮಾಲಾಪಂಚಾಂಗರವೀಂದ್ರನಾಥ ಠಾಗೋರ್ಓಝೋನ್ ಪದರಕರ್ನಾಟಕ ವಿಧಾನ ಸಭೆಭಾರತೀಯ ಸ್ಟೇಟ್ ಬ್ಯಾಂಕ್ದ.ರಾ.ಬೇಂದ್ರೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುರಾಜಕೀಯ ಪಕ್ಷಪ್ಲೇಟೊಕರ್ನಾಟಕ ಪೊಲೀಸ್ಪಂಚತಂತ್ರಬಾಬು ಜಗಜೀವನ ರಾಮ್ಲಕ್ಷ್ಮಣಕೈಗಾರಿಕಾ ನೀತಿಹಸಿರುಮನೆ ಪರಿಣಾಮಕನ್ನಡ ಚಂಪು ಸಾಹಿತ್ಯಕಿತ್ತಳೆದೇವನೂರು ಮಹಾದೇವಶಿವಮೊಗ್ಗಕಲಿಯುಗಕಬ್ಬಿಣಜಿ.ಎಸ್.ಶಿವರುದ್ರಪ್ಪರಾಜ್ಯಸಭೆಲಿಂಗಸೂಗೂರುತಂತ್ರಜ್ಞಾನದ ಉಪಯೋಗಗಳುದೇವತಾರ್ಚನ ವಿಧಿಪ್ಯಾರಾಸಿಟಮಾಲ್ಚಂಡಮಾರುತಕನ್ನಡದಲ್ಲಿ ವಚನ ಸಾಹಿತ್ಯಮಲ್ಲಿಕಾರ್ಜುನ್ ಖರ್ಗೆಸಮಾಜಶಾಸ್ತ್ರಕೆಂಪು ಕೋಟೆಹಳೇಬೀಡುಭೂಕಂಪಪ್ರವಾಸಿಗರ ತಾಣವಾದ ಕರ್ನಾಟಕದೇವಸ್ಥಾನಭಾರತದ ರಾಷ್ಟ್ರಪತಿಗಳ ಪಟ್ಟಿಭಾರತೀಯ ಜನತಾ ಪಕ್ಷಮಂಗಳಮುಖಿಹುರುಳಿಯಕ್ಷಗಾನವಿಶ್ವ ಪರಂಪರೆಯ ತಾಣಚಾಲುಕ್ಯಕಲಬುರಗಿಭರತನಾಟ್ಯಬಾಬರ್ಮ್ಯಾಕ್ಸ್ ವೆಬರ್ವೆಂಕಟೇಶ್ವರ ದೇವಸ್ಥಾನಸಮಾಸಚಕ್ರವ್ಯೂಹಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುರತ್ನಾಕರ ವರ್ಣಿ೧೮೬೨ಉಪೇಂದ್ರ (ಚಲನಚಿತ್ರ)ಹರಿಹರ (ಕವಿ)ಹೆಣ್ಣು ಬ್ರೂಣ ಹತ್ಯೆಪ್ರವಾಸ ಸಾಹಿತ್ಯವೈದೇಹಿಗುಣ ಸಂಧಿಮನರಂಜನೆಅಲ್ಲಮ ಪ್ರಭುಶ್ರೀನಿವಾಸ ರಾಮಾನುಜನ್ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿದಲಿತಭಾರತೀಯ ರಿಸರ್ವ್ ಬ್ಯಾಂಕ್ಅಂತಾರಾಷ್ಟ್ರೀಯ ಸಂಬಂಧಗಳುಲೋಕಸಭೆದಾಸ ಸಾಹಿತ್ಯಭಾರತದ ಚುನಾವಣಾ ಆಯೋಗಕನ್ನಡ ಚಿತ್ರರಂಗಭಾರತದಲ್ಲಿನ ಜಾತಿ ಪದ್ದತಿಗದಗಅಕ್ಬರ್🡆 More