ತಮಟೆ ವಾದನ

ಹರಿಜನರ ಅಥವಾ ಆದಿ ಕರ್ನಾಟಕದವರ ವಾದನ.

ತಮಟೆ ವಾದನದ ಇತರ ಹೆಸರುಗಳು

  1. ತಮಟೆ ವಾದ್ಯ
  2. ಹಲಗೆ ಮೇಳ
  3. ಹಲಗೆ ಮಜಲು
  4. ಹಲಗೆ ಬಾಜಿ
  5. ಹಲಗೆ ಮದಲಸಿ

ತಮಟೆಯ ಇತರ ಹೆಸರುಗಳು

  • ಕನ್ನಡದಲ್ಲಿ ಹಲಗೆ, ತಪ್ಪಡೆ, ಪಡದ, ಹರೆ ಎಂದು ಕರೆಯುತ್ತಾರೆ.
  • ತೆಲುಗಿನಲ್ಲಿ ಪಲಕ ಎಂದು ಕರೆಯುತ್ತಾರೆ.

ಇತಿಹಾಸ

ತಮಟೆಯ ಪ್ರಾಚೀನತೆ ವಡ್ಡರಾಧನೆಯ ಕಾಲಕ್ಕೆ ಹೋಗುತ್ತದೆ (ಕ್ರಿ.ಶ.೯ ನೇ ಶತಮಾನ). 'ಪರ' ಎಂದು ವಡ್ಡಾರಾಧನೆಯಲ್ಲಿ ಹೇಳಿದ್ದಾರೆ. ಅಲ್ಲಮನ ವಚನ, ಬಸವಣ್ಣನ ವಚನ, ಜೀವಂಧರ ಚರಿತ್ರೆಗಳಲ್ಲಿ ಹರೆಯ(ತಮಟೆ) ಬಗ್ಗೆ ಉಲ್ಲೇಖವಿದೆ. 'ಸನತ್ಕುಮಾರ ಚರಿತ್ರೆ'ಯಲ್ಲಿ ಸೊಬಗಿನ ಸೋಣೆ ಎಂದು ಕರೆದಿದ್ದಾರೆ. ರಾಘವಾಂಕ ಚರಿತ್ರೆ, ಚೆನ್ನಬಸವ ಪುರಾಣ, ಭರತೇಶ ವೈಭವ, ಸಿದ್ಧರಾಮ ಚರಿತೆಗಳಲ್ಲಿ ತಪ್ಪಟೆ, ತಂಬಟೆ, ತಂಬರ ಹೆಸರುಗಳಲ್ಲಿ ಕರೆದಿದ್ದಾರೆ. ಅರಸರ ಕಾಲದಲ್ಲಿ ಡಂಗುರ ಸಾರಲ್ಲು ಉಪಯೋಗಿಸುತ್ತಿದ್ದರು.

ತಯಾರಿಕೆ

ಒಂದು ವೃತ್ತಾಕಾರವಾದ ಮರದ ಅಥವಾ ಕಬ್ಬಿಣದ ಬಳೆಯನ್ನು ಸಿದ್ಧಗೊಳಿಸಲಾಗುತ್ತದೆ. ಈ ಬಳೆ ನಾಲ್ಕು ಚಕ್ಕೆಮಾಡಿ ಮೊಳೆ ಹೊಡೆದು ಬಿಗಿಗೊಳಿಸಲಾಗುತ್ತದೆ. ಮರದ ಬಳೆಯಾದರೆ , ಹೂನರು ಮರ, ಸಿಗರೇವು ಮರ, ಹಲಸಿನ ಮರವನ್ನು ಹಾಕಿ ಮಾಡುತ್ತಾರೆ. ಕಬ್ಬಿಣದ ಬಳೆಗಾದರೆ ಬಂಡಿಯ ಚಕ್ರದ ಪಟ್ಟಾವನ್ನು ಬಳಸುತ್ತಾರೆ. ಇದರ ವ್ಯಾಸ ಅರ್ಧ ಅಂಗುಲದಿಂದ ಒಂದುವರೆ ಅಡಿಯಾಗಿರುತ್ತದೆ. ಮೇಕೆ ಚರ್ಮ ಇದರ ಮುಚ್ಚವಾಗಿರುತ್ತದೆ. ಹುಣಸೆ ಬೀಜದ ಅಂಟು ಅಥವಾ ಮೇಕೆಯ ಚರ್ಮದ ದಾರದಿಂದ ಬಳೆ ಹಾಗೂ ಪಟ್ಟವನ್ನು ಸೇರಿಸಿ ಬಿಗಿಯಯಲಾಗುತ್ತದೆ. ಹಲಗೆಯ ಆಕಾರ ಮತ್ತು ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ. ಒಂದೂವರೆಯಿಂದ ಎಂಟು ಅಡಿ ವ್ಯಾಸವಿರುವ ಹಲಗೆಗಳನ್ನು ನೋಡಬಹುದು.

ನುಡಿಸುವಿಕೆ

ಹಲಗೆಯನ್ನು ನುಡಿಸುವುದಕ್ಕೆ ಬೆಂಕಿಯಲ್ಲಿ ಕಾಯಿಸಿದರೆ ನಾದ ಹಿತವಾಗಿರುತ್ತದೆ. ಹಲಗೆಯ ಕಂಠಕ್ಕೆ ತೊಗಲಿನ ಬಾರು ಇರುತ್ತದೆ. ಇದನ್ನು ಹೆಗಲಿಗೆ ಏರಿಸಿ ಎದೆಯ ಎಡಭಾಗಕ್ಕೆ ಎತ್ತರಿಸಿ ನುಡಿಸುತ್ತಾರೆ. ಎಡಗೈ ಕಂಠದ ಮೇಲೆ ಇರುತ್ತದೆ ಮತ್ತು ಬಲಗೈ ಗುಣಿಕೆ ಹಲಗೆಯ ವಿವಿಧ ಗತಿಯ ನಾದವನ್ನು ಹೊರದಿಸುತ್ತದೆ. ಈ ಕೈಗೆ ಒಂದೂವರೆ ಅಡಿ ಬೆತ್ತ ಅಥವಾ ಬಿದಿರಿನ ಛಡಿ ಇರುತ್ತದೆ. ಗತ್ತುಗಳನ್ನು ಬಾರಿಸಲು ದೊಡ್ಡ ಹಲಗೆಗಳನ್ನು ಬಳಸಿದರೆ, ಬೋಲ್ ಗಳನ್ನು ಬಾರಿಸಲು ಸಣ್ಣ ಹಲಗೆಗಳನ್ನು ಬಳಸುತ್ತಾರೆ. ಹಲಗೆಯೊಂದಿಗೆ ಸನಾದಿ, ದಿಮ್ಮು, ಟಕೂರಿ, ಜಾಗಡಿ ಮತ್ತು ತಾಸೆ ವಾದ್ಯಗಳಿರುತ್ತದೆ. ಉತ್ಸವ, ಜಾತ್ರೆ, ಕುಣಿತ, ಬಯಲಾಟ, ಮರಣ, ಮದುವೆ ಮತ್ತು ಮೆರವಣಿಗೆಗಳಲ್ಲಿ ತಮಟೆಯನ್ನು ಬಾರಿಸುತ್ತಾರೆ.

ಉಲ್ಲೇಖಗಳು

Tags:

ತಮಟೆ ವಾದನ ದ ಇತರ ಹೆಸರುಗಳುತಮಟೆ ವಾದನ ಇತಿಹಾಸತಮಟೆ ವಾದನ ತಯಾರಿಕೆತಮಟೆ ವಾದನ ನುಡಿಸುವಿಕೆತಮಟೆ ವಾದನ ಉಲ್ಲೇಖಗಳುತಮಟೆ ವಾದನಕರ್ನಾಟಕ

🔥 Trending searches on Wiki ಕನ್ನಡ:

ವಿಜಯವಾಣಿಮಧ್ವಾಚಾರ್ಯಅಂಟುಅಭಿಮನ್ಯುಡ್ರಾಮಾ (ಚಲನಚಿತ್ರ)ವಚನಕಾರರ ಅಂಕಿತ ನಾಮಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯಚಾಣಕ್ಯಭರತನಾಟ್ಯಸಲಿಂಗ ಕಾಮಸಾಲ್ಮನ್‌ಅತ್ತಿಮಬ್ಬೆನದಿವಿಧಾನಸೌಧಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಕರ್ನಾಟಕದ ಸಂಸ್ಕೃತಿಹವಾಮಾನಕುತುಬ್ ಮಿನಾರ್ಎಲೆಕ್ಟ್ರಾನಿಕ್ ಮತದಾನಕಲಿಯುಗಭಾರತದ ಪಂಚಾಯತ್ ರಾಜ್ ವ್ಯವಸ್ಥೆವಿಷ್ಣುಪಶ್ಚಿಮ ಘಟ್ಟಗಳುವೆಂಕಟೇಶ್ವರ ದೇವಸ್ಥಾನಭಾರತೀಯ ಸ್ಟೇಟ್ ಬ್ಯಾಂಕ್ಭಾರತದ ರಾಷ್ಟ್ರಪತಿಗಳ ಪಟ್ಟಿಸಂವಹನಮಲ್ಟಿಮೀಡಿಯಾಮಡಿವಾಳ ಮಾಚಿದೇವಲಗೋರಿಶಿವರಾಜ್‍ಕುಮಾರ್ (ನಟ)ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಪಂಚತಂತ್ರವಿಕಿಪೀಡಿಯಹಾಸನ ಜಿಲ್ಲೆಅಶೋಕನ ಶಾಸನಗಳುಸಂಚಿ ಹೊನ್ನಮ್ಮಶಿಶುಪಾಲಇಮ್ಮಡಿ ಪುಲಿಕೇಶಿರಾವಣವಿರೂಪಾಕ್ಷ ದೇವಾಲಯವಿಜಯ ಕರ್ನಾಟಕಚಿತ್ರದುರ್ಗ ಜಿಲ್ಲೆಆದಿಚುಂಚನಗಿರಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಊಟಪಠ್ಯಪುಸ್ತಕದೇವರ ದಾಸಿಮಯ್ಯಶಿವಪ್ಪ ನಾಯಕತೆಲುಗುಶಾಲೆಪ್ರೀತಿಗೊರೂರು ರಾಮಸ್ವಾಮಿ ಅಯ್ಯಂಗಾರ್ಮೈಸೂರು ಸಂಸ್ಥಾನಅಳಿಲುಜಾನಪದಭಾರತಇಸ್ಲಾಂ ಧರ್ಮಕನ್ನಡಪ್ರಭಯಣ್ ಸಂಧಿಸಂಸ್ಕಾರಯು. ಆರ್. ಅನಂತಮೂರ್ತಿಭಾರತದ ಸ್ವಾತಂತ್ರ್ಯ ಚಳುವಳಿಪಾಕಿಸ್ತಾನಕೈವಾರ ತಾತಯ್ಯ ಯೋಗಿನಾರೇಯಣರುರಾಮ್ ಮೋಹನ್ ರಾಯ್ಬೆಂಗಳೂರುಹನುಮಂತಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿವರದಕ್ಷಿಣೆಬೌದ್ಧ ಧರ್ಮಗಾದೆ ಮಾತುಗುರುರಾಜ ಕರಜಗಿಎತ್ತಿನಹೊಳೆಯ ತಿರುವು ಯೋಜನೆಗರ್ಭಧಾರಣೆವಿಜಯ್ ಮಲ್ಯ🡆 More