ಕೆಂಪು ಟಿಟ್ಟಿಭ: ಪಕ್ಷಿಗಳ ಜಾತಿಗಳು

Hoplopterus indicus Lobivanellus indicus Lobivanellus goensis Tringa indica Sarcogrammus indicus

ಕೆಂಪು ಟಿಟ್ಟಿಭ Red-wattled Lapwing
ಕೆಂಪು ಟಿಟ್ಟಿಭ: ವಿವರ, ಪ್ರಸಾರ, ವರ್ತನೆ ಮತ್ತು ಪರಿಸರ
V. i. indicus from India
ಕೆಂಪು ಟಿಟ್ಟಿಭಗಳ ಕೂಗು
Conservation status
ಕೆಂಪು ಟಿಟ್ಟಿಭ: ವಿವರ, ಪ್ರಸಾರ, ವರ್ತನೆ ಮತ್ತು ಪರಿಸರ
Least Concern  (IUCN 3.1)
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
Charadriiformes
ಕುಟುಂಬ:
Charadriidae
ಕುಲ:
Vanellus
ಪ್ರಜಾತಿ:
V. indicus
Binomial name
Vanellus indicus
(Boddaert, 1783)
Synonyms

ಕೆಂಪು ಟಿಟ್ಟಿಭ (Red-wattled Lapwing), ಚರಾಡ್ರಿಡೇ ವಂಶದ (Charadriidae) ಒಂದು ಬಗೆಯ ಲ್ಯಾಪ್ವಿಂಗ್ (lapwing) ಅಥವ ದೊಡ್ಡ ಪ್ಲವರ್ (plover). ಇದರ ಕೂಗು ಎತ್ತರದ ಧ್ವನಿಯ ಎಚ್ಚರಿಕೆಯ ಕೂಗಾಗಿದ್ದು , ಅದು ಬಗೆ ಬಗೆಯಲ್ಲಿ "ಅವನು ಮಾಡಿದ್ದು" ("did he do it ") ಎಂಬಂತೆ ಕೇಳಿ ಬರುತ್ತದೆ . ಸಹಜವಾಗಿ ಜೋಡಿಯಲ್ಲಿ ನೀರಿನ ಸಮೀಪ ಕಾಣಿಸಿಕೊಳ್ಳುವ ಈ ಹಕ್ಕಿ - ಚಳಿಗಾಲದಲ್ಲಿ ದೊಡ್ಡ ಗುಂಪುಗಳಲ್ಲೂ ಕಾಣಿಸಿ ಕೊಳ್ಳುತ್ತವೆ.

ಕೆಂಪು ಟಿಟ್ಟಿಭ: ವಿವರ, ಪ್ರಸಾರ, ವರ್ತನೆ ಮತ್ತು ಪರಿಸರ
V. i. aigneri from Turkey
ಕೆಂಪು ಟಿಟ್ಟಿಭ: ವಿವರ, ಪ್ರಸಾರ, ವರ್ತನೆ ಮತ್ತು ಪರಿಸರ
V. i. atronuchalis

ವಿವರ

ಕೆಂಪು ಟಿಟ್ಟಿಭ, ವೇಡರ್ ಗುಂಪಿನ ದೊಡ್ಡ ಹಕ್ಕಿಗಳಲ್ಲೊಂದು - ಕೊಕ್ಕಿನಿಂದ ಬಾಲದ ತುದಿಯ ಅಳತೆ ೩೫ cm. ಕೋಳಿ ಗಾತ್ರದ ಕಂದು ಹಕ್ಕಿ. ಇವುಗಳ ಬೆನ್ನು ಮತ್ತು ರೆಕ್ಕೆ ಯ ಭಾಗಗಳು ನೀಲಿ ಹೊಳಪಿನ ಕಂದು ಬಣ್ಣವಾಗಿದ್ದು, ತಲೆ, ಎದೆ ಮತ್ತು ಕಂಠ ಕಪ್ಪು ಆಗಿದ್ದು, ಕಣ್ಣಿನ ಹಿಂಭಾಗದಿಂದ ಕತ್ತಿನವರೇಗೆ ಬಿಳಿ ಪಟ್ಟಿ ಇದ್ದು, ಹೊಟ್ಟೆ ಮತ್ತು ಬಾಲದ ತಳ ಭಾಗ ಬಿಳಿಯಾಗಿದ್ದು, ಕಂದು ಮತ್ತು ಕಪ್ಪಿನ ನಡುವೆ ಬಿಳಿಯ ಪಟ್ಟೆ ಪ್ರಧಾನವಾಗಿ ಕಾಣುತ್ತದೆ. ಬಿಳಿ ಅಂಚಿನ ಕಪ್ಪು ಮೋಟು ಬಾಲ, ಕೊಕ್ಕಿನ ಬುಡ ಕೆಂಪಾದರೂ - ತುದಿ ಕಪ್ಪು , ನೀಳವಾದ ಹಳದಿ ಕಾಲುಗಳನ್ನು ಹೊಂದಿದ್ದು, ಗಮನ ಸೆಳೆಯುವ ಗಾಢ ಕೆಂಪು ಪಟ್ಟೆ (wattle) ಹುಬ್ಬಿನಂತೆ ಕಣ್ಣಿನಿಂದ ಮುಂದೆ, ಕೊಕ್ಕಿನ ಬುಡದವರೆಗೆ ಚಾಚಿರುತ್ತದೆ . ಹೆಣ್ಣು ಗಂಡುಗಳಲ್ಲಿ ವ್ಯತ್ಯಾಸವಿಲ್ಲ..

ಟರ್ಕಿ, ಇರಾನ್, ಇರಾಕ್ ಆಫ್ಗಾನಿಸ್ತಾನ್, ಬಂಗ್ಲಾದೇಶ, ಪಾಕೀಸ್ತಾನ, ಸಿಲೋನ್, ಬರ್ಮಾ, ಮತ್ತು ಭಾರತ ಈಶಾನ್ಯದ "ಐಜಿನಿರಿ" ಪಂಗಡದ ಕೆಂಪು ಟಿಟ್ಟಿಭಗಳು, ಭಾರತದ ಅನ್ಯ ಭಾಗಗಳಲ್ಲಿನ ಕೆಂಪು ಟಿಟ್ಟಿಭ ಗಳಿಗಿಂತ ಸ್ವಲ್ಪ ಗಾತ್ರದಲ್ಲಿ ದೊಡ್ಡದು. ಶ್ರೀಲಂಕಾದ, "ಲಾಂಕಿ" ಪಂಗಡದ ಕೆಂಪು ಟಿಟ್ಟಿಭ ಗಾಢವೂ ಮತ್ತು ಗಾತ್ರದಲ್ಲಿ ಸ್ವಲ್ಪ ಚಿಕ್ಕದು.

ಗಂಡು ಮತ್ತು ಹೆಣ್ಣು ಕೆಂಪು ಟಿಟ್ಟಿಭಗಳ ಬಣ್ಣ ಒಂದೇ ಆದರೂ ಗಂಡು ಹಕ್ಕಿಯ ರೆಕ್ಕೆ ೫% ನಷ್ಟು ಉದ್ದವಿದ್ದು , ಪಾದದ ಮೂಳೆಗಳು ಉದ್ದವಾಗಿರುತ್ತವೆ. ಹಕ್ಕಿಯ ದೇಹದ (ಕೊಕ್ಕಿನಿಂದ - ಬಾಲದವರೆಗು) ಅಳತೆ ೨೨೩–೨೧೭ mm., ರೆಕ್ಕೆ ೨೪೭–೨೦೮ mm ಕೊಕ್ಕು ೩೧–೩೬ mm., ಮಧ್ಯಬಾಗ ೭೦–೮೩ mm. ಮತ್ತು ಬಾಲ ೧೨೮–೧೦೪ mm.

ಸಾಧಾರಣವಾಗಿ ಜೋಡಿ ಹಕ್ಕಿಗಳಾಗಿ ಇವು ಕೆರೆ, ಸರೋವರ ಮತ್ತು ಅನ್ಯ ಜಲ ಮೂಲಗಳು , ಹೊಲಗಳು, ಗೋಮಾಳಗಳಲ್ಲಿ ಕಾಣಿಸಿಕೊಳ್ಳುತ್ತವೆ, ಕೆಂಪು ಟಿಟ್ಟಿಭಗಳು ಸಂತಾನ ಅಭಿವೃದ್ಧಿ ಯ ಕಾಲಗಳಲ್ಲಿ ೨೬ ರಿಂದ ೨೦೦ ಪಕ್ಷಿಗಳು ಗುಂಪುಗಳಲ್ಲೂ ಕಣಿಸಿಕೊಳ್ಳಬಹುದು .

ಕೆಂಪು ಟಿಟ್ಟಿಭಗಳು ರಾತ್ರಿಯಲ್ಲೂ ಎಚ್ಚರ ಇರಬಲ್ಲವು. ಅವು ಪೌರ್ಣಮಿಯ ರಾತ್ರಿಯ ಚಂದ್ರನ ಬೆಳಕಿನಲ್ಲಿ ಆಹಾರ ಹುಡುಕುತ್ತವೆ . ಹಗಲಿರಲಿ, ರಾತ್ರಿಯಾಗಿರಲಿ ಇವುಗಳ ಗಮನ ಅತೀ ಸೂಕ್ಷ್ಮ . ಆಪತ್ತಿನ ಸುಳಿವಾದ ಕೂಡಲೆ ಜೋರಾದ ಎಚ್ಚರಿಕೆಯ ಕೂಗನ್ನು ಮೊಳಗಿಸುವ ಇವು ಬೇಟೆಗಾರರ ಅವಕಾಶಗಳನ್ನು ಕೆಡಿಸುತ್ತವೆ. ನೆಲದ ಮೇಲೆ ಕೆಲ ದೂರ ನಡೆಯಬಲ್ಲ, ಓಡಬಲ್ಲ ಇವು ಹಾರುವಾಗ ರೆಕ್ಕೆಯನ್ನು ಬಡೆದು, ಅಲ್ಪ ವೇಗಿಯಂತೆ ತೋರಿಸಿಕೊಂಡರೂ, ಆಪತ್ತಿನಿಂದ ತಪ್ಪಿಸಿಕೊಳ್ಳುವಾಗ ಮತ್ತು ತಮ್ಮ ಗೂಡಿನ ರಕ್ಷಣಾ ಸಮಯದಲ್ಲಿ ಅಥವಾ ಬೇಟೆಗೆ ಬಲಿಯಾಗುವ ಸಂದರ್ಭಗಳಲ್ಲಿ ಅತೀ ಚುರುಕಾಗಿ ವರ್ತಿಸುತ್ತವೆ.

ಭಾರತದಲ್ಲಿ ಕೆಂಪು ಟಿಟ್ಟಿಭಕ್ಕೆ ವಿವಿದ ಸ್ಥಳೀಯ ಹೆಸರುಗಳುಂಟು. ತಿತೀರಿ (ಹಿಂದಿ), ತತೀರ (ಸಿಂಧಿ), ತಿತೋಡಿ(ಗುಜರಾತಿ), ಹತತೂತ್ (ಕಾಶ್ಮೀರಿ), ಬಲಿಗೋರ (ಅಸಾಮಿ), ಏನಪ್ಪ ಚಿಟವ (ತೆಲುಗು), ಆಳ್-ಕಾಟಿ (ತಮಿಳ್ - ಅರ್ಥ ಮಾನವನನ್ನು ಗುರುತಿಸು). ಕರ್ನಾಟಕದ ವಿವಿಧ ಭಾಗಗಳಲ್ಲಿ / ಭಾಷೆಗಳಲ್ಲಿ ಇವುಗಳ ಹೆಸರು ಉತ್ತುತ್ತಿ (ಹಳ್ಳಿ) ಟಿಟ್ಟಿರಿಪಕ್ಕಿ (ತುಳು) ಉಪ್ಪು ತೀತಿ (ಕೊಡವ) ಕಟದೇವನಹಕ್ಕಿ (ಸೋಲಿಗ) ತೀವಕ್ಕಿ(ಶಿಳ್ಳೆಕ್ಯಾತ) ಟಿಚೋಡಿ (ಲಂಬಾಣಿ) ಕಿತಗಿರ್ನ್ ( ಬೆಟ್ಟಕುರುಬ) ಟಿಬೋಯಿ (ಹಕ್ಕಿಪಿಕ್ಕಿ) ಉತ್ತುತ್ತಿಗಾಡು (ಹಗಲುವೇಷಗಾರರು) ಟ್ಯಾಂಟ್ರ್ ಹಕ್ಕಿ (ಕರಾವಳಿ,ಕುಂದಾಪುರ ಕನ್ನಡ) ಬೆಳದಿಂಗಳ ಹಕ್ಕಿ (ಮಲೆನಾಡು). .

ಪ್ರಸಾರ

ಕೆಂಪು ಟಿಟ್ಟಿಭಗಳ ಸಂತತಿ ಪಶ್ಚಿಮ ಇರಾಕ್ ನಿಂದ , ಇರಾನ್, ಅರಬಿ ಕೊಲ್ಲಿ , ಆಫ್ಗಾನಿಸ್ತಾನ್, ಪಾಕಿಸ್ತಾನ್ ಹಾಗೂ ಇಡೀ ಭಾರತದ ಉಪಖಂಡದಲ್ಲೇ ಅಲ್ಲದೆ ೧೮೦೦ m. ಎತ್ತರದವರೆಗೂ ಕಾಶ್ಮೀರ್ ಹಾಗೂ ನೇಪಾಳದ ಹಿಮಾಲಯ ಪ್ರದೇಶಗಳಲ್ಲಿ ಹರಡಿದ್ದು, ಇದರ ಉಪಗಣ ಗಳಾಗಿ ಅಗ್ನೇಯ ದಿಕ್ಕಿನಲ್ಲಿ ಮುಂದುವರೆಯುತ್ತವೆ. ಬಹುತೇಕವಾಗಿ ಇವು ಸ್ಥಳೀಯ (ವಲಸೆ ಹೋಗದ) ಹಕ್ಕಿಗಳಾದರೂ - ಹಿಮಾಲಯ ಹಾಗೂ ಇತರ ಪರ್ವತ ಪ್ರದೇಶಗಳಲ್ಲಿ, ಚಳಿಗಾಲದಲ್ಲಿ ಇವು ಪರ್ವತಗಳಿಂದ ಅವರೋಹಿಸುತ್ತವೆ. ಮಿಕ್ಕಲ್ಲಿ ಮುಂಗಾರು ಮಳೆಗಾಲದಲ್ಲಿ ಕೆರೆ ಹಳ್ಳಗಳು ತುಂಬುತ್ತಿದ್ದಂತೆ ಇವೂ ಹರಡುತ್ತವೆ.

ಪಶ್ಚಿಮದಲ್ಲಿ ಇವುಗಳ ಸಂತತಿ ಕ್ಷೀಣಿಸುತ್ತಿದ್ದರೂ, ದಕ್ಷಿಣ ಏಷ್ಯಾದಲ್ಲಿ ಇವುಗಳ ಸಂತತಿ ಅಪಾರವಾಗಿದ್ದು ನೀರಿನ ಪ್ರದೇಶಗಳಲ್ಲೆಲ್ಲ ಕೆಂಪು ಟಿಟ್ಟಿಭಗಳ ಸಂತತಿ ಹರಡಿದೆ.

ವರ್ತನೆ ಮತ್ತು ಪರಿಸರ

ಸಂತಾನ ಅಭಿವೃದ್ಧಿ ಪ್ರಮುಖವಾಗಿ ಮಾರ್ಚ್ ನಿಂದ ಆಗಸ್ಟ್‌ ತಿಂಗಳುಗಳಲ್ಲಿ ಸಾಗುತ್ತದೆ. ಸಲ್ಲಾಪದ ಸಮಯದಲ್ಲಿ ಹಲವು ಗಂಡು ಕೆಂಪು ಟಿಟ್ಟಿಭಗಳು ಒಟ್ಟಿಗೆ ತಮ್ಮ ಪುಕ್ಕಗಳನ್ನು ಉಬ್ಬಿಸಿ, ಕೊಕ್ಕುನ್ನು ಮೇಲ್ಮುಖ ಮಾಡಿ ಹೆಣ್ಣು ಹಕ್ಕಿಯನ್ನು ಸುತ್ತುತ್ತವೆ. ನೆಲವನ್ನು ಕೆದರಿ ಸಣ್ಣ ಕಲ್ಲುಗಳ ಮಧ್ಯೆ ಕೆಲವೊಮ್ಮೆ ಗೂಡಿನ ಸುತ್ತಲೂ ಕುರಿ ಹಾಗೂ ಮೊಲದ ಪಿಚಕೆಯನ್ನು ಹರಡಿ ಗೂಡನ್ನು ಮಾಡಿ, ೩-೪ ಮೊಟ್ಟೆಗಳನ್ನು ಇಟ್ಟು, ಮರಿ ಮಾಡುತ್ತದೆ.. ಮೊಟ್ಟೆಗಳು ಕಂದು ಬಣ್ಣದ ಮೇಲೆ ವಿವಿದ ಗಾತ್ರದ ಗಾಢ ಮಣ್ಣಿನ ಬೊಟ್ಟುಗಳಿದ್ದು ಇವುಗಳ ಅಳತೆ ಸರಾಸರಿ ೪೨x೩೦ mm ಆಗಿರುತ್ತದೆ. ಗೂಡುಗಳು ಮತ್ತು ಮೊಟ್ಟೆಗಳು ಅವುಗಳಿರುವ ನೆಲದ ಬಣ್ಣ ಹಾಗೂ ಸುತ್ತಲಿನ ವಸ್ತುಗಳನ್ನು ಹೋಲುವುದರಿಂದ ಅವುಗಳನ್ನು ಗುರುತಿಸುವುದು ಸುಲಭವಲ್ಲ.

ಪಟ್ಟಣ ಹಾಗೂ ನಗರಗಳಲ್ಲಿ ಇವು ಮನೆಯ ಮೇಲ್ಚಾವಣಿಯ ಮೇಲೆ, ಕಲ್ಲುಗಳ ಸಂಧಿಗಳಲ್ಲಿ ಗೂಡು ಮಾಡುತ್ತವೆ.

ರೈಲ್ವೆ ಹಳಿಯ ಸಂಧಿಗಳಲ್ಲಿ ಗೂಡುಮಾಡಿ ರೈಲು ಸಮೀಪಿಸುತ್ತಿದ್ದಂತೆ ಗೂಡಿನಿಂದ ಹೊರಬಂದು ರೈಲು ಹಾದು ಹೋದಮೇಲೆ ಗೂಡಿಗೆ ಹಿಂದಿರುಗುವ ವರ್ತನೆಯನ್ನೂ ಗಮನಿಸಲಾಗಿದೆ.

ವ್ಯವಸಾಯ ಅಥವಾ ಇತರ ಕಾರಣಗಳಿಂದ ಗೂಡಿಗೆ ತೊಂದರೆ ಕಂಡುಬಂದಲ್ಲಿ ಮೊಟ್ಟೆಗಳೊಂದಿಗೆ ಗೂಡನ್ನೂ ಸುರಕ್ಷಿತ ಸ್ಥಳಕ್ಕೆ ವರ್ಗ ಮಾಡಬಲ್ಲವು .

ಗೂಡನ್ನು ಕಟ್ಟುವಾಗ ಅನ್ಯಭಕ್ಷಕರ ಗಮನವನ್ನು ಗೊಂದಲಗೊಳಿಸುತ್ತವೆ ಇಲ್ಲವೆ ಮೇಲಿನಿಂದ ಹಾರಿಬಂದು ಕುಕ್ಕಿ ಅದನ್ನು ಓಡಿಸುತ್ತವೆ

ಹೆಣ್ಣು ಮತ್ತು ಗಂಡು ಕೆಂಪು ಟಿಟ್ಟಿಭಗಳೆರಡೂ ಕಾವು ಕೊಡುವ, ಅನ್ಯಭಕ್ಷಕರನ್ನು ಅಟ್ಟುವ ಜವಾಬ್ಧಾರಿಯನ್ನು ನಿಭಾಯಿಸುತ್ತವೆ. ದಿನದ ಅತೀ ಬಿಸಿಲಿನ ಮಧ್ಯಾಹ್ನದ ಸಮಯದಲ್ಲಿ ಗಂಡು ಹಕ್ಕಿಗಳು ಸಂತತಿ ಹಾಗು ಕ್ಷೇತ್ರ ಪಾಲನಾ ಜವಾಬ್ಧಾರಿಗಳನ್ನು ವಹಿಸಿಕೊಳ್ಳುತ್ತವೆ.

ಮರಿಗಳು ೨೮-೩೦ ದಿನಗಳಲ್ಲಿ ಮೊಟ್ಟೆ ಒಡೆದು ಹೊರಬರುತ್ತವೆ. ಇಷ್ಟಾದರೂ ಸಂತಾನ ಅಭಿವೃದ್ಧಿಯ ಯಶಸ್ಸು ೪೦%. ಮುಂಗುಸಿ, ಕಾಗೆ, ಗಿಡುಗ, ಗರುಡಗಳು ಮತ್ತು ಇತರ ಭಕ್ಷಕಗಳಿಂದಾಗಿ ಮೊಟ್ಟೆ ಅವಸ್ತೆಯಲ್ಲಿ ೪೩% ಸಂತತಿ ನಾಶವಾಗುತ್ತವೆ. ವಾರ ಮೀರಿದ ಮರಿಗಳಾದ ಮೇಲೆ ಬದುಕುಳಿವ ಸಾಧ್ಯತೆ ಬಹಳವಾಗಿ ಹೆಚ್ಚುತ್ತದೆ (೮.೩% ನಷ್ಟು ಅಪಮೃತ್ಯುವಿಗೊಳಗಾಗುತ್ತವೆ) .

ಗೂಡಿನಲ್ಲಿನ ಮರಿಗಳಿಗೆ ನೀರುಣಿಸಲು ಮತ್ತು ಬೇಸಿಗೆಯಲ್ಲಿ ಮೊಟ್ಟೆಗಳನ್ನು ತಂಪಾಗಿಸಲು ಅವು ತಮ್ಮ ಕೆಳಭಾಗದ ಪುಕ್ಕಗಳನ್ನು ನೀರಿನಲ್ಲಿ ನೆನೆಸಿ ತರುತ್ತವೆ.

ನೀರಿನಲ್ಲಿ ಮಿಂದ ಮೇಲೆ, ಗೂಡನ್ನು ಬಿಡುವ ಮುನ್ನ ಮತ್ತು ಮಿಥುನದ ನಂತರ ಅವು ತಮ್ಮ ಪುಕ್ಕಗಳನ್ನು ಕೊಕ್ಕಿನಿಂದ ಬಾಚಿ ತೀಡಿ ಕೊಳ್ಳುತ್ತವೆ. ಕೆಲವೊಮ್ಮೆ ತಮ್ಮ ಕೆಳಭಾಗನ್ನು ನೆಲಕ್ಕೊತ್ತರಿಸಿ ವಿಶ್ರಮಿಸಿದರೆ,ಇನ್ನು ಕೆಲವೊಮ್ಮೆ ಒಂಟಿಕಾಲಿನ ಮೇಲೆ ನಿಂತು ವಿಶ್ರಮಿಸುತ್ತವೆ.

ದೃಢ ವಯಸ್ಕ ಕೆಂಪು ಟಿಟ್ಟಿಭಗಳಿಗೆ ಪರಭಕ್ಷಕರು ವಿರಳ. ಕೆಲ ಲಾಡಿಹುಳ ಮತ್ತು ಟ್ರೆಮಟೋಡ್ ಪರಾವಲಂಬಿಗಳು ಇವುಗಳಿಗೆ ಧಕ್ಕೆಯುಂಟು ಮಾಡಬಲ್ಲವು.

ಆಹಾರ

ಕೆಂಪು ಟಿಟ್ಟಿಭಗಳ ಆಹಾರ - ಬಲು ಬಗೆಯ ಕೀಟಗಳು, ಶಂಖುಹುಳ, ಅಕಶೇರುಕಗಳು. ಕೆಲವೊಮ್ಮೆ ಧಾನ್ಯಗಳನ್ನೂ ತಿನ್ನುತ್ತವೆ. ಮುಖ್ಯವಾಗಿ ಹಗಲಲ್ಲಿ ಆಹಾರ ಸೇವಿಸುವ ಇವು ಕೆಲವೊಮ್ಮೆ ರಾತ್ರಿಯಲ್ಲೂ ಈ ಕಾರ್ಯ ಮುಂದುವರಿಸುತ್ತವೆ.

ಸಂಸ್ಕೃತಿಯಲ್ಲಿ

ಭಾರತದ ಹಲವೆಡೆಯಲ್ಲಿ ಕೆಂಪು ಟಿಟ್ಟಿಭಗಳನ್ನು ಜಾನಪದ ಕಥೆ, ಗಾದೆ ಮತ್ತು ಹಾಡುಗಳಲ್ಲಿ ವಿಮರ್ಶಿಸಲಾಗಿದೆ. ಇವು ಕಾಲ್ಮೇಲ್ಮಾಡಿ (ಆಕಾಶದೆಡೆಗೆ ಚಾಚಿ) ಮಲಗುವ ನಂಬಿಕೆಗೆ ಹಿಂದಿಯಲ್ಲಿನ ಒಂದು ನಾಣ್ನುಡಿ: “ತಿತರಿ ಸೆ ಆಸ್ಮಾನ್ ಥಾಮಾ ಜಾಯೇಗ ಕ್ಯ?” (ಕೆಂಪು ಟಿಟ್ಟಿಭ ಆಕಾಶವನ್ನು ಹೊರಬಲ್ಲದೆ) - ಸಾಮರ್ಥ್ಯಕ್ಕೆ ಮೀರಿದ ಕೆಲಸಕ್ಕೆ ಕೈಹಾಕಿದವರಿಗೆ ಅನ್ವಯಿಸುತ್ತದೆ. ರಾಜಾಸ್ಥಾನದಲ್ಲಿ, ಕೆಂಪು ಟಿಟ್ಟಿಭಗಳು ಎತ್ತರ ಪ್ರದೇಶಗಳಲ್ಲಿ ಗೂಡು ಮಾಡಿದರೆ ಉತ್ತಮ ಮಳೆಯ ಮುನ್ಸೂಚನೆ ಎಂಬ ನಂಬಿಕೆ ಇದೆ. ಮೊಟ್ಟೆಗಳು ನಾಟಿ ಔಷದಿಯಾಗಿ ಕೆಲವೆಡೆ ಬಳಸುತ್ತಾರೆ.

ಗ್ಯಾಲರೀ

ಉಲ್ಲೇಖಗಳು

ಅನ್ಯ ಮೂಲಗಳು

  • Anon. (1991) Flocking of Red Wattled Lapwings. Newsletter for Birdwatchers 31(5–6):1.
  • Dharmakumarsinhji, RS (1965) Small displacement by ground nesting birds. Newsletter for Birdwatchers 5(9):10.
  • Gay,Thomas (1975). "More about the nesting of the Red-wattled Lapwing". Newsletter for Birdwatchers. 15 (4): 9.
  • Jamdar,Nitin (1985) Redwattled Lapwing (Vanellus indicus) suffering from cataract. J. Bombay Nat. Hist. Soc. 82(1):197.
  • Kalsi,RS; Khera,S (1986) Some observations on breeding and displacement behaviour of the Redwattled Lapwing Vanellus indicus indicus (Aves: Charadriidae). Res. Bull. Panjab Univ. 37:131–141.
  • Khajuria,H (1972) Nestlings of the redwattled lapwing, Vanellus i. indicus (boddaert). Pavo 8(1&2):82–83.
  • Koshy,MS (1989) Lapwings on a roof. Newsletter for Birdwatchers 29(7–8):7.
  • Krishnan, M (1998) Ubiquitous alarmist. Blackbuck. 14(3&4):88–90.
  • Jackson,P (1976) Redwattled Lapwing. Newsletter for Birdwatchers 16(3):11–12.
  • Saxena,VS (1973) Unusual nesting by Redwattled Lapwing. Indian Forester 99:33–35.

ಬಾಹ್ಯ ಕೊಂಡಿಗಳು

Tags:

ಕೆಂಪು ಟಿಟ್ಟಿಭ ವಿವರಕೆಂಪು ಟಿಟ್ಟಿಭ ಪ್ರಸಾರಕೆಂಪು ಟಿಟ್ಟಿಭ ವರ್ತನೆ ಮತ್ತು ಪರಿಸರಕೆಂಪು ಟಿಟ್ಟಿಭ ಸಂಸ್ಕೃತಿಯಲ್ಲಿಕೆಂಪು ಟಿಟ್ಟಿಭ ಗ್ಯಾಲರೀಕೆಂಪು ಟಿಟ್ಟಿಭ ಉಲ್ಲೇಖಗಳುಕೆಂಪು ಟಿಟ್ಟಿಭ ಅನ್ಯ ಮೂಲಗಳುಕೆಂಪು ಟಿಟ್ಟಿಭ ಬಾಹ್ಯ ಕೊಂಡಿಗಳುಕೆಂಪು ಟಿಟ್ಟಿಭ

🔥 Trending searches on Wiki ಕನ್ನಡ:

ಭಗವದ್ಗೀತೆಲಿನಕ್ಸ್ವಿಚ್ಛೇದನಶಿವನ ಸಮುದ್ರ ಜಲಪಾತಜಾನಪದಡಿ.ವಿ.ಗುಂಡಪ್ಪಭಗತ್ ಸಿಂಗ್ಭಾರತದಲ್ಲಿನ ಶಿಕ್ಷಣಕನ್ನಡ ಅಕ್ಷರಮಾಲೆಚದುರಂಗ (ಆಟ)ಕಾಂತಾರ (ಚಲನಚಿತ್ರ)ಹಂಸಲೇಖಮಂಡ್ಯಕರ್ಬೂಜಗುಬ್ಬಚ್ಚಿಇಮ್ಮಡಿ ಪುಲಕೇಶಿಕವಿಗಳ ಕಾವ್ಯನಾಮಗೌತಮಿಪುತ್ರ ಶಾತಕರ್ಣಿಕೈಗಾರಿಕಾ ಕ್ರಾಂತಿಮಹೇಂದ್ರ ಸಿಂಗ್ ಧೋನಿಮಲೆನಾಡುಕಲಬುರಗಿಕಬ್ಬುಹಾಕಿಜೋಳಗಸಗಸೆ ಹಣ್ಣಿನ ಮರಮೂಲಧಾತುಆಶೀರ್ವಾದಚಿತ್ರದುರ್ಗಹಾನಗಲ್ಕಾರವಾರಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಹುಬ್ಬಳ್ಳಿಕೊಳ್ಳೇಗಾಲಹಂಪೆಶೈಕ್ಷಣಿಕ ಮನೋವಿಜ್ಞಾನಜಗದೀಶ್ ಶೆಟ್ಟರ್ಹುಚ್ಚೆಳ್ಳು ಎಣ್ಣೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ದಾಳಿಂಬೆಟಿ.ಪಿ.ಕೈಲಾಸಂಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಮೈಸೂರು ಸಂಸ್ಥಾನದೇವನೂರು ಮಹಾದೇವಸೀತೆವಿಜ್ಞಾನಚಾಮರಾಜನಗರಉತ್ತರಾಖಂಡಹಾಗಲಕಾಯಿಗೋಪಾಲಕೃಷ್ಣ ಅಡಿಗರುಮಾಲುಸಾರಜನಕಉತ್ತರ ಪ್ರದೇಶಅವಯವವೀಳ್ಯದೆಲೆದ್ವಿರುಕ್ತಿವಾಯು ಮಾಲಿನ್ಯಕೇಂದ್ರ ಸಾಹಿತ್ಯ ಅಕಾಡೆಮಿಗೋತ್ರ ಮತ್ತು ಪ್ರವರಬಿ.ಎಸ್. ಯಡಿಯೂರಪ್ಪಶ್ರೀ. ನಾರಾಯಣ ಗುರುಊಟಅನಸುಯ ಸಾರಾಭಾಯ್ತುಳಸಿರತ್ನತ್ರಯರುಚುನಾವಣೆಅವತಾರಬಾದಾಮಿ ಗುಹಾಲಯಗಳುವಂದೇ ಮಾತರಮ್ಭಾರತದ ರಾಜಕೀಯ ಪಕ್ಷಗಳುತೀರ್ಥಹಳ್ಳಿಬಲಭಾವಗೀತೆಶಬ್ದಮಣಿದರ್ಪಣಹೆಳವನಕಟ್ಟೆ ಗಿರಿಯಮ್ಮಭಾರತದ ಜನಸಂಖ್ಯೆಯ ಬೆಳವಣಿಗೆಭಾರತ ಸಂವಿಧಾನದ ಪೀಠಿಕೆಭಾರತೀಯ ರೈಲ್ವೆಪ್ರಜಾವಾಣಿ🡆 More