ಟಾಕಮೀನಿ ಜೊಕಿಚಿ

ಟಾಕಮೀನಿ ಜೊಕಿಚಿ (1854-1922).

ಜಪಾನೀ ಅಮೆರಿಕನ್ ರಸಾಯನ ವಿಜ್ಞಾನಿ. ಹೃದ್ರೋಗಚಿಕಿತ್ಸೆಯಲ್ಲಿ ಹೃದಯೋತ್ತೇಜಕ ವಾಗಿಯೂ ಉಬ್ಬಸ ಮುಂತಾದ ರೋಗಗಳ ಚಿಕಿತ್ಸೆಯಲ್ಲಿ ಔಷಧಿಯಾಗಿಯೂ ಬಳಸುವ ಆಡ್ರಿನಲಿನ್ ಅಥವಾ ಎಪಿನೆಫ್ರೀನನ್ನು ಅಡ್ರೀನಲ್ ಗ್ರಂಥಿಗಳಿಂದ ಬೇರ್ಪಡಿಸಿ ಮೊತ್ತಮೊದಲ ಬಾರಿಗೆ ಹಾರ್ಮೋನ್ ಒಂದನ್ನು ತಯಾರಿಸಿ ಖ್ಯಾತಿಪಡೆದ.

ಟಾಕಮೀನಿ ಜೊಕಿಚಿ

ಬದುಕು

ಟಾಕಮೀನಿ ಜಪಾನಿನ ಟಕ ಓಕ ಎಂಬಲ್ಲಿ 1854ರ ನವೆಂಬರ್ 3ರಂದು ಜನಿಸಿದ. ಅಮೆರಿಕನ್ ನೌಕಾ ಬಲದ ಅಧಿಕಾರಿ ಕಮಡೋರ್ ಪೆರ್ರಿಯ ಪ್ರಯತ್ನದ ಫಲವಾಗಿ ಪಾಶ್ಚಾತ್ಯರು ಜಪಾನಿನ ಷಿಮೋಡ ಮತ್ತು ಹಕೊಡಾಟೆ ಬಂದರುಗಳಿಗೆ ಪ್ರವೇಶ ದೊರಕಿಸಿಕೊಂಡದ್ದು ಅದೇ ವರ್ಷ. ಆಗ ಉಭಯ ರಾಷ್ಟ್ರಗಳೂ ಮಾಡಿಕೊಂಡ ಕನಗಾವ ಕರಾರು ಜಪಾನಿನ ಪಾಶ್ಚಾತ್ಯೀಕರಣಕ್ಕೆ ದಾರಿ ಮಾಡಿಕೊಟ್ಟಿತು ಎನ್ನಬಹುದು. ಅದರ ಪರಿಣಾಮವಾಗಿ ಪಾಶ್ಚಾತ್ಯ ಶಿಕ್ಷಣ ಪಡೆದ ಮೊದಲಿಗರಲ್ಲಿ ಟಾಕಮೀನಿಯೂ ಒಬ್ಬ. ಅವನು 1879ರಲ್ಲಿ ಟೋಕಿಯೊ ನಗರದ ಇಂಪಿರಿಯಲ್ ವಿಶ್ವವಿದ್ಯಾಲಯದ ಪದವೀಧರನಾದ. ರಾಸಾಯನಿಕ ಎಂಜಿನಿಯರಿಂಗಿನಲ್ಲಿ ವಿಶೇಷ ಶಿಕ್ಷಣ ಪಡೆದ ಟಾಕಮೀನಿ 1887ರಲ್ಲಿ ಟೋಕಿಯೊದಲ್ಲಿ ಸೂಪರ್‍ಫಾಸ್ಟೇಟ್ ಕಾರ್ಖಾನೆಯನ್ನು ಸ್ಥಾಪಿಸುವ ಮೂಲಕ ಜಪಾನಿನ ರಾಸಾಯನಿಕ ಗೊಬ್ಬರ ಕೈಗಾರಿಕೆಯ ಆದ್ಯ ಪ್ರವರ್ತಕನಾದ. 1890ರಲ್ಲಿ ಈತ ಅಮೆರಿಕಕ್ಕೆ ವಲಸೆ ಹೋಗಿ ನ್ಯೂಜೆರೆಸಿ ಸಂಸ್ಥಾನದ ಕ್ಲಿಫ್ಟನ್‍ನಲ್ಲಿ ಒಂದು ಸಂಶೋಧನಾಲಯವನ್ನು ಸ್ಥಾಪಿಸಿದ. ತನ್ನ ಜೀವಮಾನದ ಕೊನೆಯ ವರೆಗೂ ಅಮೆರಿಕದಲ್ಲೇ ಉಳಿದು 1922ರ ಜುಲೈ 22ರಂದು ನ್ಯೂಯಾರ್ಕ್‍ನಲ್ಲಿ ಮಡಿದ.

ಸಾಧನೆ

ಟಾಕಮೀನಿಯ ಅತ್ಯಂತ ಮುಖ್ಯ ವೈಜ್ಞಾನಿಕ ಸಾಧÀನೆಯೆಂದರೆ ಅಡ್ರೀನಲ್ ಗ್ರಂಥಿಗಳಿಂದ ಅಡ್ರಿನಲೀನನ್ನು ಪ್ರತ್ಯೇಕಿಸಿದ್ದು (1901). ಅದರ ರಾಸಾಯನಿಕ ನಾಮ ಎಪಿನೆಫ್ರೀನ್. ಆಗ ಇನ್ನೂ ಹಾರ್ಮೋನ್ ಸಿದ್ಧಾಂತ ರೂಪುಗೊಂಡಿರಲಿಲ್ಲವಾದ್ದರಿಂದ ತಾನು ತಯಾರಿಸಿದುದು ಒಂದು ಹಾರ್ಮೋನು ಎಂಬುದೂ ತಾನೇ ಮೊತ್ತÀಮೊದಲ ಹಾರ್ಮೋನನ್ನು ತಯಾರಿಸಿದವನು ಎಂಬುದೂ ಅವನಿಗೆ ಗೊತ್ತಿರಲಿಲ್ಲ. ಅಡ್ರಿನಲೀನ್ ಎಂಬ ವಾಣಿಜ್ಯನಾಮದಿಂದ ಅದು ಈಗ ಪ್ರಸಿದ್ಧವಾಗಿದೆ ಮತ್ತು ವೈದ್ಯಕೀಯದಲ್ಲಿ ಬಹಳ ಉಪಯುಕ್ತವೆನಿಸಿದೆ. ಪಿಷ್ಟವನ್ನು (ಸ್ಟಾರ್ಚ್) ಜಲವಿಚ್ಛೇದಿಸಬಲ್ಲ ಎಂಜೈಮ್ ಒಂದನ್ನು ಅಕ್ಕಿಯಿಂದ ಬೇರ್ಪಡಿಸಿದುದು ಅವನ ಇನ್ನೊಂದು ವೈಜ್ಞಾನಿಕ ಸಾಧನೆ. ಸುಮಾರು ಎಂಬತ್ತು ವರ್ಷ ಮುಂಚೆ, 1833ರಲ್ಲಿ ಫ್ರೆಂಚ್ ರಸಾಯನವಿಜ್ಞಾನಿ ಪಾಯೆನ್, ಮಾಲ್ಟ್‍ನಿಂದ ತಯಾರಿಸಿದ ಡಯಾಸ್ಟೇಸ್ ಸಹ ಪಿಷ್ಟವನ್ನು ಜಲವಿಚ್ಛೇದಿಸಬಲ್ಲದಾದ್ದರಿಂದ ಟಾಕಮೀನಿ ತಯಾರಿಸಿದ ಎಂಜೈಮಿಗೆ ಟಾಕಾಡಯಾಸ್ಪೇಸ್ ಎಂಬ ಹೆಸರು ಬಂತು. ಕೈಗಾರಿಕೆಗಳಲ್ಲಿ ಅದನ್ನು ಉಪಯೋಗಿಸುವ ವಿಧಾನಗಳನ್ನೂ ಟಾಕಮೀನಿ ರೂಪಿಸಿದ.

ಟಾಕಮೀನಿ ಜೊಕಿಚಿ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಅಡ್ರಿನಲ್ ಗ್ರಂಥಿಗಳುಹಾರ್ಮೋನ್

🔥 Trending searches on Wiki ಕನ್ನಡ:

ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಚುನಾವಣೆಮುಖ್ಯ ಪುಟಬುಡಕಟ್ಟುಚಿತ್ರಲೇಖಫಿರೋಝ್ ಗಾಂಧಿಕನ್ನಡ ರಾಜ್ಯೋತ್ಸವರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಭಾರತೀಯ ರೈಲ್ವೆವೇಶ್ಯಾವೃತ್ತಿಛತ್ರಪತಿ ಶಿವಾಜಿಚಾಮರಾಜನಗರಖಗೋಳಶಾಸ್ತ್ರಭಾರತೀಯ ಸಂಸ್ಕೃತಿಅಂತರಜಾಲಮಲಬದ್ಧತೆಸರ್ವಜ್ಞಹನುಮ ಜಯಂತಿರಾಯಲ್ ಚಾಲೆಂಜರ್ಸ್ ಬೆಂಗಳೂರುಸಚಿನ್ ತೆಂಡೂಲ್ಕರ್ಕನ್ನಡ ಜಾನಪದಹೈದರಾಬಾದ್‌, ತೆಲಂಗಾಣಸಾಮಾಜಿಕ ಸಮಸ್ಯೆಗಳುಜೀವವೈವಿಧ್ಯಮಂಕುತಿಮ್ಮನ ಕಗ್ಗಬಂಡಾಯ ಸಾಹಿತ್ಯಯಕ್ಷಗಾನಮಾಸರಕ್ತದೊತ್ತಡಕನ್ನಡದಲ್ಲಿ ಕಾದಂಬರಿ ಸಾಹಿತ್ಯಮಲೈ ಮಹದೇಶ್ವರ ಬೆಟ್ಟತ್ಯಾಜ್ಯ ನಿರ್ವಹಣೆಆಮ್ಲಗಳು ಮತ್ತು ಪ್ರತ್ಯಾಮ್ಲಗಳುಮಹಮದ್ ಬಿನ್ ತುಘಲಕ್ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಸಿದ್ದರಾಮಯ್ಯಧರ್ಮರಾಯ ಸ್ವಾಮಿ ದೇವಸ್ಥಾನಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಪಾಲಕ್ಕೇಶಿರಾಜಮಾತೃಭಾಷೆಶ್ರೀ ರಾಮಾಯಣ ದರ್ಶನಂಜೀನುಪುರಂದರದಾಸಕನ್ನಡ ಸಾಹಿತ್ಯ ಸಮ್ಮೇಳನಡಾ ಬ್ರೋಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಇಸ್ಲಾಂ ಧರ್ಮಜೋಡು ನುಡಿಗಟ್ಟುಕೇಂದ್ರಾಡಳಿತ ಪ್ರದೇಶಗಳುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಯುಗಾದಿಕರ್ನಾಟಕಬೆಳಕುಯೂಟ್ಯೂಬ್‌ಪ್ರಜಾವಾಣಿಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ರಾಜಕೀಯ ಪಕ್ಷಝಾನ್ಸಿ ರಾಣಿ ಲಕ್ಷ್ಮೀಬಾಯಿಮಂತ್ರಾಲಯಉತ್ತರ ಕರ್ನಾಟಕಮೂಲಧಾತುವ್ಯವಸಾಯರಾಷ್ಟ್ರೀಯತೆರಾಷ್ಟ್ರೀಯ ಸೇವಾ ಯೋಜನೆಹಯಗ್ರೀವಸಂಧಿಕಾಗೋಡು ಸತ್ಯಾಗ್ರಹವಿಜಯನಗರವಾದಿರಾಜರುಕರ್ಣಶಾಸನಗಳುದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),🡆 More