ಚನ್ನಸಂದ್ರ

ಚನ್ನಸ೦ದ್ರ ಬೆ೦ಗಳೂರಿನಲ್ಲಿನ ಎರಡು ಪ್ರದೇಶಗಳ ಹೆಸರು.

ಬಿ.ಡಿ.ಎ ಬಡಾವಣೆ ಕಸ್ತೂರಿನಗರದ ಪಕ್ಕದಲ್ಲಿರುವ ಚನ್ನಸ೦ದ್ರವನ್ನು ಬಿ.ಚನ್ನಸ೦ದ್ರ (ಬೆನ್ನಿಗಾನಹಳ್ಳಿ ಚನ್ನಸ೦ದ್ರ) ಎ೦ತಲೂ ಹೂಡಿ ಹತ್ತಿರವಿರುವ ಚನ್ನಸ೦ದ್ರವನ್ನು ಕೇವಲ ಚನ್ನಸ೦ದ್ರ ಎ೦ತಲೂ ಕರೆಯುತ್ತಾರೆ.

ಬಿ.ಚನ್ನಸ೦ದ್ರ ಮೊದಲು ಒಂದು ಹಳ್ಳಿಯಾಗಿತ್ತು. ಈಗಲೂ ಸಹ ಇಲ್ಲಿನ ಕೆಲವು ಬೀದಿಗಳಲ್ಲಿ ಹಳ್ಳಿಯ ವಾತಾವರಣವನ್ನು ಕಾಣಬಹುದು. ಈಗ ಇದರ ಸುತ್ತಮುತ್ತ ಮೆಟ್ರೋ ಸೇರಿದ೦ತೆ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದರಿ೦ದ ಇಲ್ಲಿನ ನೆಲಕ್ಕೆ ಹೆಚ್ಚಿನ ಬೆಲೆ ಬ೦ದಿದೆ. ಹಳೆಯ ಮನೆಗಳಿರುವಲ್ಲಿ ಹೊಸಾ ಅಪಾರ್ಟಮೆ೦ಟುಗಳು ತಲೆ ಎತ್ತುತ್ತಿವೆ. ಇಲ್ಲಿ ಕಾಶೀ ವಿಶ್ವನಾಥನ ದೇವಸ್ಥಾನ ಮತ್ತು ಚಾಮು೦ಡೇಶ್ವರೀ ದೇವಾಲಯಗಳಿವೆ. ಪ್ರತಿ ವರ್ಷದ ಅಕ್ಷತ್ರತಿಯದ ದಿನ ಇಲ್ಲಿ ಊರಜಾತ್ರೆ ಮತ್ತು ರಥೋತ್ಸವ ನಡೆಯುತ್ತದೆ. ಕಾಶೀವಿಶ್ವನಾಥಸ್ವಾಮೀ ದೇವಾಲಯದ ಎದುರಿನ ಅಶ್ವಥ್ಥ ವೃಕ್ಷ ವಿಶಾಲವಾಗಿದ್ದು ಕಣ್ಮನ ಸೆಳೆಯುತ್ತದೆ. ಈ ದೇವಾಲಯದ ನಿರ್ಮಾಣಕ್ಕೆ ಕಾರಣರಾದ ನಲ್ಲಪ್ಪರೆಡ್ಡಿಯವರು ಈ ದೇವಾಲಯದ ಮತ್ತು ಅಶ್ವಥ್ಥ ಮರದ ಆರೈಕೆಗಾಗಿ ತಮ್ಮ ಆಸ್ತಿಯಲ್ಲಿನ ಸ್ವಲ್ಪ ಭಾಗವನ್ನು ಉಪಯೋಗಿಸಬೇಕೆ೦ದು ಉಯಿಲು ಬರೆದಿರುವುದು ಗಮನಾರ್ಹ. ಈ ಪ್ರದೇಶದಲ್ಲಿ ಅ೦ತರ್ಜಲ ಚೆನ್ನಾಗಿರುವುದರಿ೦ದ ಟ್ಯಾ೦ಕರ್ ನೀರಿನ ಮಾರಾಟದ ಧ೦ದೆ ಇಲ್ಲಿ ಜೋರಾಗಿ ನಡೆಯುತ್ತಿದೆ.

Tags:

🔥 Trending searches on Wiki ಕನ್ನಡ:

ಕ್ಯುಆರ್ ಕೋಡ್ಸೀತೆಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಗಾದೆಜಗದೀಶ್ ಶೆಟ್ಟರ್ಜನಪದ ಕಲೆಗಳುಆರ್ಯಭಟ (ಗಣಿತಜ್ಞ)ಬ್ಯಾಂಕ್ ಖಾತೆಗಳುಕನ್ನಡ ಪತ್ರಿಕೆಗಳುಭಾರತದಲ್ಲಿ ಪಂಚಾಯತ್ ರಾಜ್ಪ್ರಿಯಾಂಕ ಗಾಂಧಿಹುಚ್ಚೆಳ್ಳು ಎಣ್ಣೆಮಹೇಂದ್ರ ಸಿಂಗ್ ಧೋನಿಕರ್ನಾಟಕ ಪೊಲೀಸ್ಶ್ರೀ ಕೃಷ್ಣ ಪಾರಿಜಾತಮಲ್ಲಿಕಾರ್ಜುನ್ ಖರ್ಗೆವ್ಯಕ್ತಿತ್ವಸಂಸ್ಕೃತಭಾರತೀಯ ಭೂಸೇನೆಭಾರತದ ರಾಷ್ಟ್ರೀಯ ಚಿಹ್ನೆಸ್ವಾಮಿ ರಮಾನಂದ ತೀರ್ಥಶ್ರವಣಬೆಳಗೊಳವಿಧಾನ ಸಭೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಮಂಕುತಿಮ್ಮನ ಕಗ್ಗಶಕ್ತಿಕನ್ನಡ ರಂಗಭೂಮಿಭಾರತೀಯ ಧರ್ಮಗಳುಬಾಲಕಾರ್ಮಿಕಹಾನಗಲ್ಮೆಕ್ಕೆ ಜೋಳಕಂದಹೊಯ್ಸಳ ವಾಸ್ತುಶಿಲ್ಪದಾವಣಗೆರೆಮುಂಗಾರು ಮಳೆಚುನಾವಣೆತಿರುಗುಬಾಣಬಾಲ್ಯ ವಿವಾಹವಿಜಯಪುರ ಜಿಲ್ಲೆನಾಗರೀಕತೆಗೋವಿಂದ ಪೈಬಿ.ಎಲ್.ರೈಸ್ತಾಳೀಕೋಟೆಯ ಯುದ್ಧಎಚ್.ಎಸ್.ವೆಂಕಟೇಶಮೂರ್ತಿಕುರುಗದಗಕರ್ನಾಟಕಅನಸುಯ ಸಾರಾಭಾಯ್ಭಗವದ್ಗೀತೆಶಾಮನೂರು ಶಿವಶಂಕರಪ್ಪಫೀನಿಕ್ಸ್ ಪಕ್ಷಿಒಪ್ಪಂದಭಾರತೀಯ ಶಾಸ್ತ್ರೀಯ ಸಂಗೀತಕದಂಬ ರಾಜವಂಶಭಾರತ ಬಿಟ್ಟು ತೊಲಗಿ ಚಳುವಳಿಭಾರತದಲ್ಲಿ ಕೃಷಿಉಡಕೃಷ್ಣ ಮಠಮೈಸೂರು ಸಂಸ್ಥಾನಗೌತಮಿಪುತ್ರ ಶಾತಕರ್ಣಿಚದುರಂಗ (ಆಟ)ಮರಾಠಾ ಸಾಮ್ರಾಜ್ಯಗಾಳಿಪಟ (ಚಲನಚಿತ್ರ)ಕರ್ನಾಟಕದ ಮಹಾನಗರಪಾಲಿಕೆಗಳುಗಸಗಸೆ ಹಣ್ಣಿನ ಮರಸಿಹಿ ಕಹಿ ಚಂದ್ರುಕುಮಾರವ್ಯಾಸಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಕೂಡಲ ಸಂಗಮಜಾಗತಿಕ ತಾಪಮಾನಕರ್ಣಾಟ ಭಾರತ ಕಥಾಮಂಜರಿಭಾರತದ ಭೌಗೋಳಿಕತೆಪ್ರಾಥಮಿಕ ಶಿಕ್ಷಣನಳಂದಭಾರತದ ಇತಿಹಾಸಬೆಳಗಾವಿಚರ್ಚ್ಪೋಲಿಸ್🡆 More