ಚಂದ್ರನಾಥ ಸ್ವಾಮಿ ಬಸದಿ, ಎರ್ಮಾಳು

ಶ್ರೀ ಚಂದ್ರನಾಥ ಸ್ವಾಮಿ ಬಸದಿಯು ಕರ್ನಾಟಕ ಜೈನ ಬಸದಿಗಳಲ್ಲಿ ಒಂದು.

ಸ್ಥಳ

ಚಂದ್ರನಾಥ ಸ್ವಾಮಿಯ ಬಸದಿಯು ಉಡುಪಿ ತಾಲೂಕು ತೆಂಕ ಎರ್ಮಾಳು ಗ್ರಾಮದ ಎರ್ಮಾಳಿನಲ್ಲಿದೆ. ಇದರ ಬಳಿ ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನ, ಉತ್ತರಕ್ಕೆ ಕಾಪು ಧರ್ಮನಾಥ ಸ್ವಾಮಿ ಬಸದಿಯು ಕಿಲೋ ಮೀಟರ್ ದೂರ, ದಕ್ಷಿಣಕ್ಕೆ ಪಡುಬಿದ್ರಿ ಮುನಿವೃತ ಸ್ವಾಮಿ ಬಸದಿಯು 4 ಕಿ.ಮೀ ದೂರದಲ್ಲಿವೆ. ಎರ್ಮಾಳು ಬೀಡಿನವರು ಮತ್ತು ಶ್ರಾವಕರು ಈ ಬಸದಿಗೆ ಸಂಬಂಧಿಸಿದವರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿದೆ ಹಾಗೂ ಇದು ಮೂಡುಬಿದಿರೆ ಶ್ರೀ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಬರುತ್ತದೆ. ಎರ್ಮಾಳು ಬಸದಿ ಕುಟುಂಬದವರು ಈ ಬಸದಿಯನ್ನು ನಡೆಸುತ್ತಿದ್ದಾರೆ.

ಇತಿಹಾಸ

ಈ ಬಸದಿಯನ್ನು ಎರ್ಮಾಳು ಬೀಡಿನ ಪೂರ್ವಿಕರು ಸುಮಾರು ೭೦೦ ವರ್ಷಗಳ ಹಿಂದೆ ನಿರ್ಮಿಸಿದರು ಎಂದು ಹೇಳುತ್ತಾರೆ. ಮೂಲ ಸ್ವಾಮಿಯ ಮೂರ್ತಿಯೂ ಪಸ್ತುತ ಬಸದಿಯ ಹಿಂದೆ ಸಮುದ್ರದಲ್ಲಿ ಸಿಕ್ಕಿದೆ. ಇದು ಜೈನ ವ್ಯಾಪಾರಸ್ಥರು ಸಮುದ್ರದಲ್ಲಿ ಮುತ್ತು ರತ್ನದ ವ್ಯಾಪಾರ ಮಾಡುವಾಗ ಹಡಗಿಗೆ ಅಡ್ಡಲಾಗಿ ಕಲ್ಲು ಇತ್ತು. ಅದನ್ನು ಎತ್ತಲು ಹೋದಾಗ ಜೈನ ವ್ಯಾಪಾರಿಗೆ ಮೂರ್ತಿ ಸಿಕ್ಕಿತ್ತು. ಪ್ರಸ್ತುತ ಬಸದಿಯ ಸುಮಾರು ೩ ಎಕರೆ ವಿಸ್ತೀರ್ಣದಲ್ಲಿ ಯಾರೂ ವಾಸವಿಲ್ಲದ ಜಾಗದಲ್ಲಿ ಬಸದಿಯ ನಿರ್ಮಾಣವಾಗುತ್ತದೆ. ಇದು ಮಧ್ವಾಚಾರ್ಯರ ಸಮಕಾಲೀನವೆನ್ನಬಹುದು. ಬಸದಿಗೆ ಮೇಗಿನ ನೆಲೆ ಇಲ್ಲ. ಆದರೆ ಬಸದಿಯಲ್ಲಿ ಚತುರ್ವಿಂಶತಿ ತೀರ್ಥಂಕರರು, ಶ್ಯಾಮ ಯಕ್ಷ, ಜ್ವಾಲಾಮಾಲಿನೀ ಯಕ್ಷಿ, ಪಾಶ್ರ್ವನಾಥ, ಅನಂತನಾಥ ಪದ್ಮಾವತೀ ದೇವಿ ಮೂರ್ತಿ ಇದೆ. ಈ ಬಸದಿಗೆ ಮಾನಸ್ತಂಭ ಇಲ್ಲ.

ವಿಶೇಷತೆ

ಗೋಪುರದಲ್ಲಿ ವಿಶೇಷ ಪೂಜಾ ಸಮಯವನ್ನು ವಾಲಗದವರು ವಾಲಗ ಊದಲು ಕುಳಿತುಕೊಳ್ಳುತ್ತಾರೆ. ಬಸದಿಯ ಅಧಿಷ್ಠಾನವನ್ನು ಏರಲು ಹೋಗುವಾಗ ಸಿಗುವ ಜಗಲಿಯಲ್ಲಿ ೨ ಕಂಬಗಳಿವೆ. ಅಲ್ಲಿಂದ ಮುಂದುವರಿದಾಗ ಪ್ರಾರ್ಥನಾ ಮಂಟಪವು ಸಿಗುತ್ತದೆ. ಅದಕ್ಕಿಂತ ಮುಂದುವರಿದು ಹೋದಾಗ ತೀರ್ಥಂಕರ ಮಂಟಪ ಸಿಗುತ್ತದೆ. ಇಲ್ಲಿ ಗಂಧ ಕುಟಿ ಸಿಗುತ್ತದೆ. ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿ ಕುಕ್ಕುಟ ಸರ್ಪದೊಂದಿಗೆ ಇದೆ. ಇದು ಪೂರ್ವಕ್ಕೆ ಮುಖ ಮಾಡಿದೆ. ಇಲ್ಲಿ ಜ್ವಾಲಾಮಾಲಿನೀ ಮತ್ತು ಪದ್ಮಾವತಿ ದೇವರಿಗೆ ಪಾಯಸ ಪೂಜೆ ಇದೆ.

ಪೂಜಾ ವಿಶೇಷತೆ

ಬಸದಿಯ ಮೂಲ ನಾಯಕನ ಬಿಂಬವು ಶಿಲೆಯದ್ದಾಗಿದೆ. ನಾಲ್ಕು ಅಡಿ ಅಂದಾಜು ಎತ್ತರ ಕುಳಿತ ಭಂಗಿಯಲ್ಲಿದೆ. ದಿನವೂ ಸ್ವಾಮಿ ಚಂದ್ರನಾಥನಿಗೆ ಪಂಚಾಮೃತ ಅಭಿಷೇಕ ನಡೆಯುತ್ತದೆ. ಬಿಂಬಕ್ಕೆ ವಜ್ರಲೇಪನವಾಗಿಲ್ಲ. ಯುಗಾದಿ, ನಾಗಪಂಚಮಿ, ಶ್ರಾವಣ ಶುಕ್ರವಾರ, ನವರಾತ್ರಿ ಪೂಜೆ, ದೀಪಾವಳಿ ಮತ್ತು ತುಲಾ ಸಂಕ್ರಮಣ ಇತ್ಯಾದಿಗಳನ್ನು ಶ್ರದ್ಧೆಯಿಂದ ಮಾಡಲಾಗುತ್ತಿದೆ. ಬಸದಿಯಲ್ಲಿ ಒಂದು ಬಾರಿ ಮಾತ್ರ ಬೆಳಿಗ್ಗೆ ಪೂಜೆ ಮಾಡಲಾಗುತ್ತದೆ. ದೇವರ ಬಲ ಬದಿಯಲ್ಲಿ ತ್ರಿಶೂಲ ಕ್ಷೇತ್ರಪಾಲ, ನಾಗ ದೇವರ ಬಿಂಬಗಳಿವೆ. ಬಸದಿಯ ಸುತ್ತಲೂ ಮುರ ಕಲ್ಲಿನಿಂದ ನಿರ್ಮಿಸಿದ ರಕ್ಷಣಾ ಗೋಡೆಯಿದೆ.

ಉಲ್ಲೇಖಗಳು

Tags:

ಚಂದ್ರನಾಥ ಸ್ವಾಮಿ ಬಸದಿ, ಎರ್ಮಾಳು ಸ್ಥಳಚಂದ್ರನಾಥ ಸ್ವಾಮಿ ಬಸದಿ, ಎರ್ಮಾಳು ಇತಿಹಾಸಚಂದ್ರನಾಥ ಸ್ವಾಮಿ ಬಸದಿ, ಎರ್ಮಾಳು ವಿಶೇಷತೆಚಂದ್ರನಾಥ ಸ್ವಾಮಿ ಬಸದಿ, ಎರ್ಮಾಳು ಪೂಜಾ ವಿಶೇಷತೆಚಂದ್ರನಾಥ ಸ್ವಾಮಿ ಬಸದಿ, ಎರ್ಮಾಳು ಉಲ್ಲೇಖಗಳುಚಂದ್ರನಾಥ ಸ್ವಾಮಿ ಬಸದಿ, ಎರ್ಮಾಳು

🔥 Trending searches on Wiki ಕನ್ನಡ:

ಪ್ಲ್ಯಾಸ್ಟಿಕ್ ಸರ್ಜರಿಗೋಲ ಗುಮ್ಮಟನೇಮಿಚಂದ್ರ (ಲೇಖಕಿ)ವರ್ಣಕೋಶ(ಕ್ರೋಮಟೊಫೋರ್)ಭೂಮಿಕಿಸ್ (ಚಲನಚಿತ್ರ)ಭರತನಾಟ್ಯರಂಗಭೂಮಿಚಂದನಾ ಅನಂತಕೃಷ್ಣಹೊಯ್ಸಳ ವಾಸ್ತುಶಿಲ್ಪಯೋಗ ಮತ್ತು ಅಧ್ಯಾತ್ಮಚಂದ್ರಲೋಕಕಾವ್ಯಮೀಮಾಂಸೆಶಂಕರ್ ನಾಗ್ಚೋಮನ ದುಡಿತ್ಯಾಜ್ಯ ನಿರ್ವಹಣೆಜ್ವರಮೇರಿ ಕೋಮ್ಗಣೇಶ್ (ನಟ)ಭಾರತೀಯ ಮೂಲಭೂತ ಹಕ್ಕುಗಳುಹಗ್ಗಪ್ರಕಾಶ್ ರೈಕಾಂತಾರ (ಚಲನಚಿತ್ರ)ಶ್ರೀಶೈಲವಿಕಿಪೀಡಿಯಕ್ರೈಸ್ತ ಧರ್ಮಮೋಡನೀರುಕನ್ನಡದಲ್ಲಿ ಕಾದಂಬರಿ ಸಾಹಿತ್ಯಮಳೆನಿರುದ್ಯೋಗನೀನಾದೆ ನಾ (ಕನ್ನಡ ಧಾರಾವಾಹಿ)ರಾಷ್ಟ್ರೀಯ ವರಮಾನಕನಕದಾಸರುಕೈವಾರ ತಾತಯ್ಯ ಯೋಗಿನಾರೇಯಣರುತ್ರಿಪದಿವೃತ್ತಪತ್ರಿಕೆಗಿಡಮೂಲಿಕೆಗಳ ಔಷಧಿಕರ್ನಾಟಕ ಪೊಲೀಸ್ಗೋಕಾಕ ಜಲಪಾತಪ್ರಬಂಧ ರಚನೆರಾಮಕೃಷ್ಣ ಪರಮಹಂಸಭಾರತದ ರಾಷ್ಟ್ರೀಯ ಉದ್ಯಾನಗಳುಅಂಬರೀಶ್ಪ್ರೀತಿಕನ್ನಡ ವ್ಯಾಕರಣರಾಷ್ಟ್ರಕೂಟಪ್ರಧಾನ ಖಿನ್ನತೆಯ ಅಸ್ವಸ್ಥತೆಪೊನ್ನನಾಗಮಂಡಲ (ಚಲನಚಿತ್ರ)ಪ್ಯಾರಾಸಿಟಮಾಲ್ಶಬ್ದರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಭರತ-ಬಾಹುಬಲಿಪಿ.ಲಂಕೇಶ್ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕ್ರಿಯಾಪದಕಲಬುರಗಿಪಾಲಕ್ಅದ್ವೈತಇತಿಹಾಸಸುಮಲತಾವಿಶ್ವಕೋಶಗಳುದಯಾನಂದ ಸರಸ್ವತಿಕೊಪ್ಪಳಕೋಲಾರಸೇನಾ ದಿನ (ಭಾರತ)ಅಜಂತಾಎಸ್.ಎಲ್. ಭೈರಪ್ಪಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕುದುರೆಸಂಸ್ಕೃತ ಸಂಧಿಕೇಂದ್ರ ಲೋಕ ಸೇವಾ ಆಯೋಗ🡆 More