ಕಂದಗಲ್ಲ ಹನುಮಂತರಾಯರು

ಕಂದಗಲ್ಲ ಹನುಮಂತರಾಯರು (೧೧-೦೧-೧೮೯೬, ೧೩-೦೫-೧೯೬೬)

ಕನ್ನಡದ ಶೇಕ್ಸ್‌ಪಿಯರ್ ಎಂದೇ ಪ್ರಸಿದ್ಧರಾಗಿದ್ದ ನಾಟಕಕಾರ ಹನುಮಂತರಾಯರು ಹುಟ್ಟಿದ್ದು ಬಾಗಲಕೋಟ (ಹಳೆಯ ಜಿಲ್ಲೆ ವಿಜಯಪುರ) ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಂದಗಲ್ಲಿನಲ್ಲಿ. ತಂದೆ ಭೀಮರಾಯರು, ತಾಯಿ ಗಂಗೂಬಾಯಿ, ಹುಟ್ಟಿದ ವರ್ಷದೊಳಗೆ ತಂದೆಯ ಪ್ರೀತಿಯಿಂದ ವಂಚಿತರು. ಪ್ರಾಥಮಿಕ ಶಿಕ್ಷಣ ಕಂದಗಲ್ಲಿನಲ್ಲಿ. ಮಾಧ್ಯಮಿಕ ಓದಿದ್ದು ವಿಜಯಪುರ. ಓದಿನ ಕಡೆ ಗಮನ ಹರಿಯದೆ ಊರಿನಲ್ಲಿ ನಡೆಯುತ್ತಿದ್ದ ಭಜನೆ, ಮೇಳ, ದೊಡ್ಡಾಟಗಳಿಂದ ಆಕರ್ಷಿತರಾದರು. ತಾಯಿಗೆ ಓದಿ ಕುಲಕರ್ಣಿ ಕೆಲಸ ಹಿಡಿಯಲೆಂಬ ಆಸೆ. ಹುಡುಗನಿಗೆ ನಾಟಕದ ಹುಚ್ಚು. ಎಲ್ಲಿ ನಾಟಕವೆಂದರೆ ಅಲ್ಲಿಗೆ ಓಡು. ಗಣೇಶೋತ್ಸವಕ್ಕಾಗಿ ಚೌತಿಚಂದ್ರ, ಸುಕನ್ಯ, ಭಕ್ತಧ್ರುವ, ಸತ್ಯವಾನ ಸಾವಿತ್ರಿ, ಕೃಷ್ಣ ಸುಧಾಮ, ತರಲಿಟೊಪಿಗಿ ಮುಂತಾದ ಏಕಾಂಕ ನಾಟಕಗಳ ರಚನೆ, ಪ್ರದರ್ಶನ.

ಕೆರೂರು ವಾಸುದೇವಾಚಾರ್ಯರ ಕೃತಿಗಳನ್ನೋದಿ ಪ್ರೇರಿತರಾಗಿ ತಾವೂ ನಾಟಕಕಾರರಾಗಬೇಕೆಂಬ ಹಂಬಲ. ಮೆಟ್ರಿಕ್‌ ನಪಾಸು. ಪುಣೆಗೆ ಪಯಣ, ಪುಣೆ ನಾಟಕಗಳ ಕೇಂದ್ರ. ಮಿಲ್ಟ್ರಿ ಕಾರಕೂನನಾಗಿ ಸೇರಿ ನೋಡಿದ್ದು ಹಲವಾರು ನಾಟಕಗಳು, ಹೆಸರಾಂತ ರಂಗ ಕರ್ಮಿಗಳಾದ ಗಡಕರಿ, ಗೋಖಲೆ, ದೇಶಪಾಂಡೆ ಮುಂತಾದವರ ಸಹವಾಸ, ಸಮಾಲೋಚನೆ. ತಾಯಿಯ ಅನಾರೋಗ್ಯದಿಂದ ವಾಪಸ್ ಊರಿಗೆ.

ಮೊದಲು ಬರೆದದ್ದು ‘ಸಂಧ್ಯಾರಾಗ’- ಮೂರಂಕದ ನಾಟಕ, ಹಲವಾರು ಪ್ರದರ್ಶನ ಕಂಡು ನಾಟಕಕಾರರೆನಿಸಿದರು. ಸೇರಿದ್ದು ಬಾಗಲಕೋಟೆಯಲ್ಲಿ ಬ್ಯಾಂಕ್ ಉದ್ಯೋಗ, ರಂಗ ಚಟುವಟಿಕೆಗಳಿಗೆ ಸಿಕ್ಕ ಅನುಕೂಲಕರವಾದ ವಾತಾವರಣ. ಗುಳೇದಗುಡ್ಡ, ಇಳಕಲ್ ಜನಕ್ಕೆ ನಾಟಕ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಇವರಿಗೆ ಸಿಕ್ಕ ಬೆಂಬಲ.

ವೀರರಾಣಿ ಕಿತ್ತೂರು ಚೆನ್ನಮ್ಮ ಮುಂತಾದ ಹಲವಾರು ನಾಟಕಗಳನ್ನು ರಚಿಸಿ ರಂಗ ಪ್ರಯೋಗ. ರಕ್ತ ರಾತ್ರಿ, ಚಿತ್ರಾಂಗದ, ಬಾಣಸಿಗ ಭೀಮ, ಅಕ್ಷಯಾಂಬರ, ರಾಜಾ ಹರಿಶ್ಚಂದ್ರ, ಬಡತನದ ಭೂತ, ಮಾತಂಗ ಕನ್ಯೆ, ಕುರುಕ್ಷೇತ್ರ ಮುಂತಾದ ನಾಟಕಗಳಿಂದ ಜನರನ್ನು ರಂಜಿಸಿ ಗಳಿಸಿದ ಖ್ಯಾತಿ.

ಇವರ ರಂಗ ತಾಲೀಮಿನಲ್ಲಿ ತಯಾರಾದ ನಟರು ಹಾಗೂ ಸಂಗೀತಗಾರರಾದ ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಸೋನುಬಾಯಿ ದೊಡ್ಡಮನಿ, ಏಣಗಿ ಬಾಳಪ್ಪ, ಸುಭದ್ರಮ್ಮ ಮನಸೂರ, ಗರೂಡ ಸದಾಶಿವರಾಯರು, ಜುಬೇದಬಾಯಿ ಸವಣೂರ, ಕೆ. ನಾಗರತ್ನ, ಅಂಬುಜಾ, ವಸಂತ ಕುಲಕರ್ಣಿ ಮುಂತಾದ ಪ್ರಸಿದ್ಧರ ಬಹುದೊಡ್ಡ ಶಿಷ್ಯವರ್ಗ.

Tags:

🔥 Trending searches on Wiki ಕನ್ನಡ:

ಕರ್ನಾಟಕದ ಅಣೆಕಟ್ಟುಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿರವಿಚಂದ್ರನ್ಬ್ಯಾಂಕ್ಪಟ್ಟದಕಲ್ಲುಕರ್ಮಸರ್ಕಾರೇತರ ಸಂಸ್ಥೆರಾಮ ಮಂದಿರ, ಅಯೋಧ್ಯೆಬೇಲೂರುಪ್ರದೀಪ್ ಈಶ್ವರ್ನಿಯತಕಾಲಿಕಸಿದ್ಧರಾಮಉಡುಪಿ ಜಿಲ್ಲೆಕರ್ನಾಟಕದ ವಾಸ್ತುಶಿಲ್ಪಕಲ್ಯಾಣಿಕನ್ನಡ ಸಾಹಿತ್ಯ ಸಮ್ಮೇಳನಕನ್ನಡ ಬರಹಗಾರ್ತಿಯರುಶಿಕ್ಷಣತಿಂಥಿಣಿ ಮೌನೇಶ್ವರಶಬ್ದಮಣಿದರ್ಪಣಬಿ. ಎಂ. ಶ್ರೀಕಂಠಯ್ಯರಮ್ಯಾಭಾರತದ ಆರ್ಥಿಕ ವ್ಯವಸ್ಥೆಅಮೃತಧಾರೆ (ಕನ್ನಡ ಧಾರಾವಾಹಿ)ಚಂದ್ರಶೇಖರ ಕಂಬಾರಓಝೋನ್ ಪದರದೀಪಾವಳಿಎಚ್ ಎಸ್ ಶಿವಪ್ರಕಾಶ್ಗಿರೀಶ್ ಕಾರ್ನಾಡ್ಶ್ರೀನಿವಾಸ ರಾಮಾನುಜನ್ಹಲ್ಮಿಡಿ ಶಾಸನಕನ್ನಡದಲ್ಲಿ ಗಾದೆಗಳುಭಾರತೀಯ ಸಂಸ್ಕೃತಿನೀರುಗ್ರಾಮ ಪಂಚಾಯತಿಉದಯವಾಣಿಪೊನ್ನಅಂತರರಾಷ್ಟ್ರೀಯ ನ್ಯಾಯಾಲಯಅಂತಿಮ ಸಂಸ್ಕಾರಹರಿಹರ (ಕವಿ)ಕೇಂದ್ರಾಡಳಿತ ಪ್ರದೇಶಗಳುಖಂಡಕಾವ್ಯರಾಹುಲ್ ಗಾಂಧಿಉತ್ತರ ಕನ್ನಡಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿದಿಕ್ಕುವಿದುರಾಶ್ವತ್ಥಜ್ಯೋತಿಷ ಶಾಸ್ತ್ರದ ನಕ್ಷತ್ರಗಳುತುಮಕೂರುಬೃಂದಾವನ (ಕನ್ನಡ ಧಾರಾವಾಹಿ)ಬಿಳಿ ರಕ್ತ ಕಣಗಳುಜಿ.ಪಿ.ರಾಜರತ್ನಂಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಕರ್ನಾಟಕ ಪೊಲೀಸ್ರಾಸಾಯನಿಕ ಗೊಬ್ಬರಕಾಳಿಂಗ ಸರ್ಪಮುಟ್ಟು ನಿಲ್ಲುವಿಕೆರಾಮಾಯಣಪ್ರೀತಿಭಾರತಿ (ನಟಿ)ಕೈಗಾರಿಕೆಗಳುಮೈಸೂರು ಅರಮನೆಗಣೇಶ್ (ನಟ)ಯುಗಾದಿಬನವಾಸಿಬಾದಾಮಿಮೂಕಜ್ಜಿಯ ಕನಸುಗಳು (ಕಾದಂಬರಿ)ಇಸ್ಲಾಂ ಧರ್ಮಕರ್ನಾಟಕ ಸಂಗೀತಭರತನಾಟ್ಯವಿವಾಹಹಲಸುಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)🡆 More