ಆಸ್ಫಾಲ್ಟ್‌

ಆಸ್ಫಾಲ್ಟ್ (150) : ಇದನ್ನು ಆಸ್ ಫಾಲ್ಟಂ, ಮಿನರಲ್ ಪಿಚ್, ಕಪ್ಪುರಾಳಿ, ಕಲ್ಲರಗು, ಟಾರೆಣ್ಣೆ ಮುಂತಾಗಿ ಕರೆಯುತ್ತಾರೆ.

ಯಾವ ತೆರನಾದ ಸ್ಪಷ್ಟ ಒಳರಚನೆಯಿರದ ಕಾರಣ ಮುದ್ದೆಯಾಗಿರುತ್ತದೆ. ಹೀಗೆಯೇ ಇದಕ್ಕೆ ನಿರ್ದಿಷ್ಟ ರಾಸಾಯನಿಕ ಸಂಯೋಜನೆಯಿಲ್ಲ. ಬಣ್ಣದಲ್ಲಿ ಕಂದು, ಕಪ್ಟು ಅಥವಾ ಅಚ್ಚಕಪ್ಪು; ಟಾರೆಣ್ಣೆಯ ಹೊಳಪು, ವಾಸನೆಯೂ ಟಾರೆಣ್ಣೆಯದೇ. ಸಾಪೇಕ್ಷಸಾಂದ್ರತೆ 1-1.8. ಕೆಲವು ಬಗೆಯ ಟಾರೆಣ್ಣೆ ಕಾಕಂಬಿಯಂತೆ ಜಿಗುಟಾದ ದ್ರವರೂಪವನ್ನು ಹೊಂದಿರುತ್ತದೆ. ಈ ಬಗೆಯ ಕಪ್ಪುರಾಳವನ್ನು ಗಾಳಿಗೊಡ್ಡಿದಾಗ ಕ್ರಮೇಣ ಗಟ್ಟಿಯಾಗುತ್ತದೆ. ಟರ್ಪೆಂಟೈನ್, ಈಥರ್ ಮತ್ತು ಆಲ್ಕೊಹಾಲ್‍ಗಳಲ್ಲಿ ಆಸ್ಫಾಲ್ಟ್ ಸುಲಭವಾಗಿ ಕರಗುತ್ತದೆ. ಇದು ಭೂಚರಿತ್ರೆಯ ನಾನಾ ಯುಗದ ಶಿಲೆಗಳಲ್ಲಿ ಕಂಡುಬಂದಿದೆ. ಸಾಮಾನ್ಯವಾಗಿ ಕಪ್ಪುರಾಳದ ವಿಸ್ತಾರವಾದ ನಿಕ್ಷೇಪಗಳು ಭೂಮಿಯ ಮೇಲ್ಭಾಗದಲ್ಲಿ ಅಥವಾ ಹೆಚ್ಚು ಆಳವಿಲ್ಲದ ಪ್ರದೇಶಗಳಲ್ಲಿ ಕಂಡುಬಂದಿದೆ. ಬಲು ಮಟ್ಟಿಗೆ ಇದು ಬಿಟ್ಯುಮಿನಸ್ ಪದಾರ್ಥ ಅಥವಾ ಸಸ್ಯಾವಶೇಷಗಳು ಶೇಖರವಾಗಿರುವ ಪ್ರದೇಶಗಳಲ್ಲಿ ಸಿಗುತ್ತದೆ.

ಇಸ್ರೇಲಿನ ಡೆಡ್ ಸೀ ಸುತ್ತಮುತ್ತ ಕಪ್ಪುರಾಳದ ಉತ್ತಮ ನಿಕ್ಷೇಪಗಳಿವೆ. ಇತಿಹಾಸಕಾರರು ಇದನ್ನು ಆಸ್‍ಫಾಲ್ಟೈಟಿಸ್ ಸರೋವರವೆಂದೇ ಹೆಸರಿಸಿದ್ದಾರೆ. ಟ್ರಿನಿಡಾಡ್‍ನಲ್ಲಿ ಕಪ್ಪುರಾಳದ ಸರೋವರವೊಂದಿದೆ. ಇದರ ಸುತ್ತಳತೆ ಸುಮಾರು ಒಂದೂವರೆ ಮೈಲಿ. ಸರೋವರ ಮಧ್ಯ ಭಾಗ ಉಷ್ಣತೆಯಿಂದ ಕೂಡಿ ದ್ರವರೂಪವಾಗಿ ಇದೆ. ಅಂಚುಗಳು ತಣ್ಣಗೆ ಮತ್ತು ಘನರೊಪದಲ್ಲಿ ಇವೆ. ಈ ಪ್ರದೇಶದಲ್ಲಿ ಸಮೃದ್ಧವಾದ ಸಸ್ಯ ಸಂಪತ್ತನ್ನು ಹೆಮ್ಮರಗಳನ್ನು ಕಾಣಬಹುದು. ಅಂದರೆ ಇದಿರುವ ಭೂಮಿ ಫಲವತ್ತಾದುದು. ಸಾಮಾನ್ಯವಾಗಿ ತೈಲನಿಕ್ಷೇಪಗಳಿರುವ ಕಡೆ ಆಸ್ಫಾಲ್ಟನ್ನು ವಿವಿಧ ಪ್ರಮಾಣಗಳಲ್ಲಿ ದೊರಕಿಸಿಕೊಳ್ಳಬಹುದು. ಕಪ್ಪುರಾಳದಲ್ಲಿ ಹಲವಾರು ಬಗೆಗಳನ್ನು ಭೂವಿಜ್ಞಾನಿಗಳು ಗುರುತಿಸಿದ್ದಾರೆ. ಇವುಗಳಲ್ಲಿ ಮುಖ್ಯವಾದವು-ಎಲಾಟರೈಟ್, ಆಲ್ಬರ್ಟೈಟ್, ಗ್ರಹಾಮೈಟ್, ಗಿಲ್ಸನೈಟ್, ನಿಗ್ರೈಟ್, ಥೊಕೊಲೈಟ್. [[file;https://upload.wikimedia.org/wikipedia/commons/thumb/2/28/Bitumen.jpg/330px-Bitumen.jpg%7Cthumb%7C[ಶಾಶ್ವತವಾಗಿ ಮಡಿದ ಕೊಂಡಿ]]]


ಉಲ್ಲೇಖನಗಳು:

Tags:

ಈಥರ್‍ಗಳು

🔥 Trending searches on Wiki ಕನ್ನಡ:

ವಿನಾಯಕ ಕೃಷ್ಣ ಗೋಕಾಕನಾಗರೀಕತೆರಮ್ಯಾತ್ಯಾಜ್ಯ ನಿರ್ವಹಣೆಭೂತಾರಾಧನೆದಾಸ ಸಾಹಿತ್ಯವಚನಕಾರರ ಅಂಕಿತ ನಾಮಗಳುಬಾಬು ಜಗಜೀವನ ರಾಮ್ಬಿ. ಎಂ. ಶ್ರೀಕಂಠಯ್ಯಶಾಂತರಸ ಹೆಂಬೆರಳುಮೊಘಲ್ ಸಾಮ್ರಾಜ್ಯಮಣ್ಣುವಾಸ್ತುಶಾಸ್ತ್ರರವಿಕೆಸಮುದ್ರಗುಪ್ತಚಿಲ್ಲರೆ ವ್ಯಾಪಾರಇತಿಹಾಸದಯಾನಂದ ಸರಸ್ವತಿಭಾರತದ ಪ್ರಧಾನ ಮಂತ್ರಿಕರ್ನಾಟಕದ ಇತಿಹಾಸತಾಳೀಕೋಟೆಯ ಯುದ್ಧಷಟ್ಪದಿಭಾರತದ ಸರ್ವೋಚ್ಛ ನ್ಯಾಯಾಲಯಅರಬ್ಬೀ ಸಾಹಿತ್ಯದೇವತಾರ್ಚನ ವಿಧಿಸಂಶೋಧನೆಕನ್ನಡ ಸಾಹಿತ್ಯಲಗೋರಿನಗರೀಕರಣನಾಡ ಗೀತೆಸಹಕಾರಿ ಸಂಘಗಳುಮಾನವ ಸಂಪನ್ಮೂಲ ನಿರ್ವಹಣೆಖ್ಯಾತ ಕರ್ನಾಟಕ ವೃತ್ತತಾಜ್ ಮಹಲ್ಮಿಥುನರಾಶಿ (ಕನ್ನಡ ಧಾರಾವಾಹಿ)ಉತ್ತರ ಪ್ರದೇಶಕನ್ನಡ ಅಕ್ಷರಮಾಲೆಉದಯವಾಣಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಸರಸ್ವತಿರೋಸ್‌ಮರಿಕನ್ನಡ ಸಾಹಿತ್ಯ ಪ್ರಕಾರಗಳುಪ್ರಬಂಧಅಭಿಮನ್ಯುಸರ್ವೆಪಲ್ಲಿ ರಾಧಾಕೃಷ್ಣನ್ಮಹಿಳೆ ಮತ್ತು ಭಾರತವಿಶ್ವದ ಅದ್ಭುತಗಳುಅಶೋಕನ ಶಾಸನಗಳುಮೂಕಜ್ಜಿಯ ಕನಸುಗಳು (ಕಾದಂಬರಿ)ರಾಜ್‌ಕುಮಾರ್ಹಯಗ್ರೀವದಿಕ್ಸೂಚಿದೇವಸ್ಥಾನಕೃಷ್ಣದೇವರಾಯಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಹಿಂದೂ ಮಾಸಗಳುಕನ್ನಡದಲ್ಲಿ ಕಾದಂಬರಿ ಸಾಹಿತ್ಯಶ್ರೀ ರಾಮಾಯಣ ದರ್ಶನಂಚಾಣಕ್ಯಭಾರತದ ಸಂವಿಧಾನಕಲ್ಯಾಣಿಕರ್ನಾಟಕ ಲೋಕಸಭಾ ಚುನಾವಣೆ, 2019ಕನ್ನಡ ಕಾವ್ಯಈಸೂರುಗ್ರಹಕುಂಡಲಿಖೊಖೊವೀರಪ್ಪನ್ವಿಧಾನ ಸಭೆಭಾರತೀಯ ಮೂಲಭೂತ ಹಕ್ಕುಗಳುಕರ್ನಾಟಕದ ಮಹಾನಗರಪಾಲಿಕೆಗಳುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕವಿಗಳ ಕಾವ್ಯನಾಮದಿಕ್ಕುಗಾಂಧಿ- ಇರ್ವಿನ್ ಒಪ್ಪಂದದ.ರಾ.ಬೇಂದ್ರೆಕೆ. ಅಣ್ಣಾಮಲೈಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳು🡆 More