ಆರ್ಖಿಯಾಪ್ಟೆರಿಕ್ಸ್

ಈ ಲೇಖನ ಅಥವಾ ವಿಭಾಗವನ್ನು ಮಾರ್ಗದರ್ಶಿ ವಿನ್ಯಾಸ ಮತ್ತು ಕೈಪಿಡಿಯ ಶೈಲಿ ಪುಟಗಳಲ್ಲಿ ಸೂಚಿಸಿರುವಂತೆ ವಿಕೀಕರಣ (format) ಮಾಡಬೇಕಿದೆ.

ಪ್ರಾಚೀನ ಗ್ರೀಕ್ ಭಾಷೆಯ ಆರ್ಖಿಯೋಸ್ ಮತ್ತು ಪ್ಟೆರಿಕ್ಸ್ ಪದಗಳಿಂದ ರೂಪಿತವಾದ ಆರ್ಖಿಯಾಪ್ಟೆರಿಕ್ಸ್.ಹಾಗೆಂದರೆ ಪುರಾತನ ಗರಿ ಅಥವಾ ಪುರಾತನ ರೆಕ್ಕೆ ಎಂದರ್ಥ.

ವಾಸ್ತವವಾಗಿ ಆರ್ಖಿಯಾಪ್ಟೆರಿಕ್ಸ್ ಪಳೆಯುಳಿಕೆಯ ರೂಪದಲ್ಲಿ ಲಭಿಸಿರುವ ಹಕ್ಕಿಯೊಂದರ ಹೆಸರು.ಆರ್ಖಿಯಾಪ್ಟೆರಿಕ್ಸ್ ಖಗ ಸಂಕುಲನದ ಪ್ರಪ್ರಥಮ ಹಕ್ಕಿ .೧೮೬೧ ರಲ್ಲಿ ಜರ್ಮನಿಯಲ್ಲಿ ಲಭಿಸಿದ ಈ ಮೂಲ ಹಕ್ಕಿ ಪಳೆಯುಳಿಕೆ ಆಗಿನಿಂದಲೂ ವಿಶ್ವ ವಿಖ್ಯಾತ.ಚಾರ್ಲ್ಸ್ ಡಾರ್ವಿನ್ ನ ಜೀವ ವಿಕಾಸ ಸಿಧಾಂತ ಕುರಿತು "ದಿ ಒರಿಜಿನ್ ಆಫ್ ಸ್ಪೀಸೀಸ್" ಪ್ರಕಟಗೊಂಡ ಎರಡೇ ವರ್ಶಗಳ ನಂತರ ಲಭಿಸಿ ಆ ಸಿದ್ಧಾಂತಕ್ಕೆ ಮತ್ತೊಂದು ಭದ್ರ ಆಧಾರ ಒದಗಿಸಿದ ಪಳೆಯುಳಿಕೆ ಇದು.

  ಆರ್ಖಿಯಾಪ್ಟೆರಿಕ್ಸ್ ನ ವಿಶೇಷ ಏನೆಂದರೆ ಸರೀಸ್ರುಪಗಳಾದ ಡೈನೋಸಾರ್ಗಳ ಕೆಲವಿ ಲಕ್ಶಣಗಳ ಜೊತೆಗೆ ಆಧುನಿಕ ಹಕ್ಕಿಗಳ ಕೆಲವು ಲಕ್ಶಣಗಳನ್ನು ಮೈಗೋಡಿಸಿಕೊಂಡಿದೆ.ಆರ್ಖಿಯಾಪ್ಟೆರಿಕ್ಸ್ ನ ಬಾಯಲ್ಲಿ ಡೈನೋಸಾರ್ ಗಳಂತೆ ಚೂಪಾದ ದಂತ ಪಂಕ್ತಿಗಳಿವೆ. ಎಲುಬು ಸಹಿತವಾದ ಉದ್ದವಾದ ಬಾಲ ಇದೆ. ಜೊತೆಗೆ ಆಧುನಿಕ ಹಕ್ಕಿಗಳಂತೆ ಪುಕ್ಕ,ಗರಿ ,ರೆಕ್ಕೆಗಳಿವೆ ಹಾಗಾಗಿ ಆರ್ಖಿಯಾಪ್ಟೆರಿಕ್ಸ್ ಡೈನೋಸಾರ್ಗಳ ಮತ್ತು ಹಕ್ಕಿಗಳ ನಡುವಣ ಜೀವ ವಿಕಾಸದ  ಕೊಂಡಿಯಂತಿದೆ.ಡೈನೋಸಾರ್ಗಳಿಂದ ಎಂಬುದನ್ನು ಆರ್ಖಿಯಾಪ್ಟೆರಿಕ್ಸ್  ನಿರ್ವಿವಾದಗೊಳಿಸಿದೆ.
Archeopteryx color


ಆರ್ಖಿಯಾಪ್ಟೆರಿಕ್ಸ್ ಬದುಕಿದ್ದ ಕಾಲ ಈಗ್ಗೆ ಒಂದು ನೂರೈವತ್ತು ದಶಲಕ್ಶ ವರ್ಷಗಳ ಹಿಂದೆ.ಸಮರ್ಥ ಹಾರಾಟ ಮೈಗೂಡಿದ ಈ ಜೀವಿಯದು ಪುಕ್ಕ ಆವರಿಸಿದ,ಬಿಸಿರಕ್ತದ ಶರೀರ,ಗರಿಗಳಿಂದ ರೂಪಗೊಂಡಿದ್ದ ವಿಶಾಲ ರೆಕ್ಕೆಗಳು ಕೂಡ. ಒಂದೂವರೆ ಅಡಿ ಉದ್ದ,ಒಂದು ಕಿಲೋ ತೂಕದ ದೇಹ. ಈಗಿನ ಕಾಗೆಗಳ ಗಾತ್ರ.ನೆಲದ ಮೇಲೂ,ಪೊದೆ ಗಿಡ ಗಂಟಿ ಮರಗಳ ಮೇಲೂ ಜೀವನ.ಚಿಕ್ಕ ಪುಟ್ಟ ಪ್ರಾಣಿಗಳನ್ನು ಭೇಟೆಯಾಡಿ ತಿನ್ನುವ ಆಹಾರ ಕ್ರಮ.

ಇತ್ತೀಚೆಗೆ ಚೀನಾದಲ್ಲಿ ಪತ್ತೆಯಾದ ಮತ್ತೊಂದು ಪ್ರಾಚೀನ ಖಗ ರೂಪಿ ಡೈನೋಸಾರ್ ನ ಪಳೆಯುಳಿಕೆ ಆರ್ಖಿಯಾಪ್ಟೆರಿಕ್ಸ್ ನ ಪ್ರಪ್ರಥಮ ಹಕ್ಕಿ ಎಂಬ ಹೆಗ್ಗಳಿಕೆಯ ಸ್ಥಾನವನ್ನು ಅಲುಗಾಡಿಸಿತ್ತು.

Tags:

en:Wikipedia:Glossaryen:Wikipedia:Guide to layouten:Wikipedia:Manual of Style

🔥 Trending searches on Wiki ಕನ್ನಡ:

ವಿಶ್ವವಿದ್ಯಾಲಯ ಧನಸಹಾಯ ಆಯೋಗಪ್ರವಾಸೋದ್ಯಮಓಂ (ಚಲನಚಿತ್ರ)ಭೋವಿಪ್ಲೇಟೊಶ್ರುತಿ (ನಟಿ)ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ದೆಹಲಿಜಲ ಮಾಲಿನ್ಯಸಂಯುಕ್ತ ಕರ್ನಾಟಕಭಾರತಿ (ನಟಿ)ಕಾದಂಬರಿಸಿಂಧೂತಟದ ನಾಗರೀಕತೆಆದೇಶ ಸಂಧಿಕನ್ನಡಪ್ರಭಭಾರತದ ಉಪ ರಾಷ್ಟ್ರಪತಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಪ್ರಬಂಧಧರ್ಮಸ್ಥಳತ್ಯಾಜ್ಯ ನಿರ್ವಹಣೆವಚನಕಾರರ ಅಂಕಿತ ನಾಮಗಳುದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಮೋಕ್ಷಗುಂಡಂ ವಿಶ್ವೇಶ್ವರಯ್ಯಕರ್ಕಾಟಕ ರಾಶಿಸುಭಾಷ್ ಚಂದ್ರ ಬೋಸ್ಪ್ರವಾಸಿಗರ ತಾಣವಾದ ಕರ್ನಾಟಕಪಗಡೆಭಾರತದಲ್ಲಿನ ಚುನಾವಣೆಗಳುಪೋಕ್ಸೊ ಕಾಯಿದೆಕಲಬುರಗಿಬೇಡಿಕೆಮಹಾಕಾವ್ಯಕೆ ವಿ ನಾರಾಯಣಕರ್ನಾಟಕದ ಕಲೆ ಮತ್ತು ಸಂಸ್ಕೃತಿಭೂಮಿಟೊಮೇಟೊಪ್ಯಾರಾಸಿಟಮಾಲ್ತಂತಿವಾದ್ಯಶಾಸನಗಳುಎಸ್.ಎಲ್. ಭೈರಪ್ಪಕನ್ನಡ ಬರಹಗಾರ್ತಿಯರುಶಬ್ದಕರ್ನಾಟಕದ ಮಹಾನಗರಪಾಲಿಕೆಗಳುಶ್ರೀನಿವಾಸ ರಾಮಾನುಜನ್ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಬೀಚಿಸರ್ಪ ಸುತ್ತುನಿರುದ್ಯೋಗಸಂಭವಾಮಿ ಯುಗೇ ಯುಗೇಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮಹಾಕವಿ ರನ್ನನ ಗದಾಯುದ್ಧಕನ್ನಡದಲ್ಲಿ ಕಾದಂಬರಿ ಸಾಹಿತ್ಯಗಿಡಮೂಲಿಕೆಗಳ ಔಷಧಿಹಂಪೆದಿಯಾ (ಚಲನಚಿತ್ರ)ಕನ್ನಡ ಗುಣಿತಾಕ್ಷರಗಳುಶಿವರಾಮ ಕಾರಂತವಿಜಯನಗರ ಜಿಲ್ಲೆನೀತಿ ಆಯೋಗಭಾರತದ ಪ್ರಧಾನ ಮಂತ್ರಿಮೈಸೂರುಮಣ್ಣುಮಹಾತ್ಮ ಗಾಂಧಿರಾಜಕೀಯ ಪಕ್ಷಧಾರವಾಡಡಿ.ವಿ.ಗುಂಡಪ್ಪಕನ್ನಡದಲ್ಲಿ ಗಾದೆಗಳುಮುಟ್ಟುಊಳಿಗಮಾನ ಪದ್ಧತಿಕರ್ನಾಟಕಹೃದಯಾಘಾತಈರುಳ್ಳಿಮಳೆನೀರು ಕೊಯ್ಲುಶಿಶುನಾಳ ಶರೀಫರುವಾಟ್ಸ್ ಆಪ್ ಮೆಸ್ಸೆಂಜರ್ಸೆಸ್ (ಮೇಲ್ತೆರಿಗೆ)ಹೊಂಗೆ ಮರ🡆 More