ಅವೆಂಜ್ಡ್ ಸೆವೆನ್‌‍ಫೋಲ್ಡ್‌‌‌‌‌‍

ಅಮೆರಿಕದ ಖ್ಯಾತ ರಾಕ್ ಸಂಗೀತ ತಂಡವಾದ ಅವೆಂಜ್ಡ್ ಸೆವೆನ್‌ಫೋಲ್ಡ್ ಕ್ಯಾಲಿಫೋರ್ನಿಯಾ ಬಳಿಯ ಹಂಟಿಂಗ್‌ ಟನ್ ಬೀಚ್‌ನಲ್ಲಿ 1999ರಲ್ಲಿ ಪ್ರಾರಂಭವಾಯಿತು.

ಈ ಬ್ಯಾಂಡ್‌ನ ಪ್ರಧಾನ ಗಾಯಕರಾಗಿದ್ದವರು ಎಮ್.ಶಾಡೋ, ಇನ್ನುಳಿದಂತೆ ಗಿಟಾರ್ ವಾದಕರಾಗಿ ಸಿನಿಸ್ಟರ್ ಗೇಟ್ಸ್, ರಿದಂ ಗಿಟಾರ್ ವಾದಕರಾಗಿ ಝಾಕಿ ವೆಂಜೆಯಾನ್ಸ್ ಹಾಗೂ ಬಾಸಿಸ್ಟ್ ಆಗಿ ಜಾನಿ ಕ್ರಿಸ್ಟ್ ಬ್ಯಾಂಡ್‌ನಲ್ಲಿ ಗುರುತಿಸಿಕೊಂಡಿದ್ದರು. ತಮ್ಮ ಚೊಚ್ಚಲ ಪ್ರಯತ್ನವಾದ ಸೌಂಡಿಂಗ್ ದಿ ಸೆವೆಂತ್ ಟ್ರಂಫೆಟ್ [ಸೂಕ್ತ ಉಲ್ಲೇಖನ ಬೇಕು] ಆಲ್ಬಂನಲ್ಲಿ ಅವೆಂಜ್ಡ್ ಸೆವೆನ್‌ಫೋಲ್ಡ್ ಕಿರುಚು ಧ್ವನಿಯ ಸಂಗೀತ ಹಾಗೂ ಪುನರಾವರ್ತನೆಗೊಳ್ಳುವ ಹೆವಿ ಗಿಟಾರ್ ಸಂಗೀತವನ್ನು ಒಳಗೊಂಡ ಮೆಟಾಕ್ಲೋರ್ ಸಂಗೀತವನ್ನು ಅಳವಡಿಸಿಕೊಳ್ಳುವ ಮೂಲಕ ಸಂಗೀತ ಕ್ಷೇತ್ರದ ಗಮನ ಸೆಳೆಯಿತು. ಆದರೆ ಮೂರನೇ ಆಲ್ಬಂ ಸಿಟಿ ಆಫ್ ಈವಿಲ್‌ ನ ಬಿಡುಗಡೆಯಾಗುವ ಹೊತ್ತಿಗಾಗಲೇ ಬ್ಯಾಂಡ್ ತನ್ನ ಮೆಟಾಕ್ಲೋರ್ ಸಂಗೀತಕ್ಕೆ ಶರಣು ಹೊಡೆದು ಮುಖ್ಯವಾಹಿನಿ ಸಂಗೀತ ಶೈಲಿ ರಾಕ್‌ಗೆ ಮರಳಿತ್ತು.[ಸೂಕ್ತ ಉಲ್ಲೇಖನ ಬೇಕು] ಆ ನಂತರವೂ ಬ್ಯಾಂಡ್ ಹೊಸ ಸಂಗೀತಗಳ ಅನ್ವೇಷಣೆಯನ್ನು ಕೈ ಬಿಡಲಿಲ್ಲ. ಹೊಸ ಬಗೆಯ ತಮ್ಮದೇ ಶೇರ್ಷಿಕೆಯ ಸಂಗೀತಗಳಿಗೆ ಜನ್ಮ ನೀಡುತ್ತಲೇ ಅವೆಂಜ್ಡ್ ಸೆವೆನ್‌ಫೋಲ್ಡ್ ಮುಖ್ಯವಾಹಿನಿ ಜನಪ್ರಿಯತೆಯನ್ನು ಗಳಿಸುತ್ತಾ ಯಶಸ್ಸಿನ ತುತ್ತ ತುದಿಗೇರಿತು. ಹೀಗೆ ಆನೆ ನಡೆದದ್ದೇ ಹಾದಿ ಎಂಬಂತೆ ಯಶಸ್ಸಿನೆಡೆಗೆ ದಾಪುಗಾಲಿಕ್ಕುತ್ತಾ ಹೊರಟಿದ್ದ ತಂಡಕ್ಕೆ ಮೊದಲ ಬಾರಿಗೆ ಆಘಾತ ನೀಡಿದ್ದು 2009ರಲ್ಲಾದ ತಂಡದ ಡ್ರಮ್ಮರ್ ಜೇಮ್ಸ್ ಸುಲ್ಲಿವನ್, ದ ರೇವ್ ಅವರ ಅಕಾಲಿಕ ಮರಣ. ಅತಿಯಾದ ಮಾದಕಸೇವನೆಯಿಂದ ಜೇಮ್ಸ್ ಮರಣ ಹೊಂದುವುದರೊಂದಿಗೆ ತಂಡ ಬಸವಳಿದಂತಾದರೂ, ಆಘಾತದಿಂದ ಶೀಘ್ರಗತಿಯಲ್ಲಿ ಚೇತರಿಸಿಕೊಂಡ ನೈಟ್‌ಮೇರ್ ತಂಡ ಡ್ರೀಮ್ ಥಿಯೇಟರ್ ಡ್ರಮ್ಮರ್ ಮೈಕ್ ಪೊರ್ಟ್‌ನೋಯ್ ಅವರೊಂದಿಗೆ ತನ್ನ ನಡೆ ಕಾಯ್ದುಕೊಂಡು 2010ರಲ್ಲಿ ತನ್ನ ಐದನೇ ಆಲ್ಬಂ ನೈಟ್‌ಮೇರ್ ಅನ್ನು ಬಿಡುಗಡೆ ಮಾಡಿತು. ಅವೆಂಜ್ಡ್ ಸೆವೆನ್‌ಫೊಲ್ಡ್ ತಂಡ ಈವರೆಗೆ ಐದು ಸ್ಟುಡಿಯೋ ಆಲ್ಬಂಗಳು, ಒಂದು ಲೈವ್ ಆಲ್ಬಂ/ಸಂಕಲನ ಹಾಗೂ ಸುಮಾರು ಹದಿನೈದು ಏಕಗೀತೆಗಳನ್ನು ಲೋಕಾರ್ಪಣೆ ಮಾಡಿದೆ.

ಅವೆಂಜ್ಡ್ ಸೆವೆನ್‌‍ಫೋಲ್ಡ್‌‌‌‌‌‍
ಅವೆಂಜ್ಡ್ ಸೆವೆನ್‌‍ಫೋಲ್ಡ್‌‌‌‌‌‍
ಹಿನ್ನೆಲೆ ಮಾಹಿತಿ
ಮೂಲಸ್ಥಳHuntington Beach, California, USA
ಸಂಗೀತ ಶೈಲಿHard rock, heavy metal, metalcore (early)
ಸಕ್ರಿಯ ವರ್ಷಗಳು1999–present
L‍abelsGood Life, Hopeless, Warner Bros.
Associated actsPinkly Smooth, Suburban Legends, Brian Haner, Atreyu, Bleeding Through, Dream Theater, Burn Halo, Good Charlotte
ಅಧೀಕೃತ ಜಾಲತಾಣwww.avengedsevenfold.com
ಸಧ್ಯದ ಸದಸ್ಯರುM. Shadows
Zacky Vengeance
Synyster Gates
Johnny Christ
ಮಾಜಿ ಸದಸ್ಯರುThe Rev
Dameon Ash
Justin Sane
Matt Wendt

ಮಾತ್ರವಲ್ಲ, ಒಂದು ಸಂಗೀತ ತಂಡವಾಗಿ ಜಗತ್ತಿನಾದ್ಯಂತ ತಾವು ಹೊಂದಿದ ಮುಖ್ಯವಾಹಿನಿ ಯಶಸ್ಸಿನ ಸಾಕಷ್ಟು ಫಲವುಂಡದ್ದು ಮಾತ್ರವಲ್ಲದೇ, ಅಮೆರಿಕದ ಹೆವಿಮೆಟಲ್ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿದ ಸಂಗೀತ ತಂಡಗಳಲ್ಲಿಯೇ ಮುಂಚೂಣಿಯಲ್ಲಿರುವ ಹಾಗೂ ಪ್ರಮುಖ ಸಂಗೀತ ತಂಡ ಎಂಬ ಹೆಗ್ಗಳಿಕೆ ಕೂಡ ಅವೆಂಜ್ಡ್ ಸೆವೆನ್‌ಫೋಲ್ಡ್ ಪಾಲಿಗೆ ಸಂದಿದೆ. ಅವೆಂಜ್ಡ್ ಸೆವೆನ್‌ಫೋಲ್ಡ್ ತಂಡ ದಶಕದ ಅಲ್ಟಿಮೇಟ್ ಗಿಟಾರ್‌ನ ಟಾಪ್ ಟೆನ್ ಸಂಗೀತ ತಂಡಗಳಲ್ಲಿಯೇ ಎರಡನೇ ಸ್ಥಾನದಲ್ಲಿದೆ.

ಬ್ಯಾಂಡ್ ಇತಿಹಾಸ

ಪ್ರಾರಂಭ (1999-2004)

ಚಿತ್ರ:Avenged sevenfold logo.jpg
ಬ್ಯಾಂಡಿನ ಲೋಗೊ

ಈ ಸಂಗೀತ ತಂಡ 1999ರಲ್ಲಿ ಕ್ಯಾಲಿಫೋರ್ನಿಯಾದ ಹಂಟಿಂಗ್‌ಟನ್ ಬೀಚ್‌ನಲ್ಲಿ ಪ್ರಾರಂಭಗೊಂಡಾಗ ತಂಡದಲ್ಲಿದ್ದದ್ದು ಎಮ್.ಶಾಡೋಸ್, ಝಾಕಿ ವೆಂಜೆಯನ್ಸ್, ದಿ ರೇವ್ ಹಾಗೂ ಮ್ಯಾಟ್ ವೆಂಡಟ್. ಈ ಸಂಗೀತ ತಂಡವೇನೂ ಧಾರ್ಮಿಕ ಉದ್ದೇಶ ಹೊಂದಿರಲಿಲ್ಲ. ಎಮ್.ಶಾಡೋಸ್ ತಮ್ಮ ತಂಡದ ಹೆಸರನ್ನು ಬೈಬಲ್‌ನ ಪರ್ವ 4:24ರಲ್ಲಿ ಉಲ್ಲೇಖಗೊಂಡಿರುವ ಕೇನ್ ಹಾಗೂ ಅಬೆಲ್ ಕಥೆಯಿಂದ ಹೆಕ್ಕಿಕೊಂಡಿದ್ದರು. ತಂಡದ ರಚನೆಯ ನಂತರ ತಂಡದ ಸದಸ್ಯರೆಲ್ಲರೂ ಇಟ್ಟುಕೊಂಡ ಗುಪ್ತನಾಮಗಳು ಹೆಚ್ಚಾಗಿ ಅವರ ಶಾಲಾ ದಿನಗಳ ಅಡ್ಡ ಹೆಸರುಗಳು. ತಮ್ಮ ಚೊಚ್ಚಲ ಆಲ್ಬಂ ಅನ್ನು ಬಿಡುಗಡೆ ಮಾಡುವ ಮೊದಲು ತಂಡ 1999 ಹಾಗೂ 2000ದಲ್ಲಿ ಎರಡು ಡೆಮೊ ಆಲ್ಬಂಗಳನ್ನು ಮುದ್ರಿಸಿದ್ದರು. ಅವೆಂಜ್ಡ್ ಸೆವೆನ್‌ಫೋಲ್ಡ್ ತಂಡದ ಮೊಟ್ಟಮೊದಲ ಆಲ್ಬಂ ಸೌಂಡಿಂಗ್ ದಿ ಸೆವೆಂತ್ ಟ್ರಂಪೆಟ್ ರೂಪು ತಳೆದಾಗ ತಂಡದ ಸದಸ್ಯರಿನ್ನೂ 18ರ ಹರೆಯದ, ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿದ್ದರು. ಅದು ಅವರ ಮೊದಲ ಲೇಬಲ್, ಗುಡ್ ಲೈಫ್ ರೆಕಾರ್ಡಿಂಗ್ಸ್‌ನಲ್ಲಿ ೨೦೦೧ರಲ್ಲಿ ಬಿಡುಗಡೆಯಾಯಿತು. ಪ್ರಮುಖ ಗಿಟಾರ್‌ವಾದಕ ಸಿನಿಸ್ಟರ್ ಗೇಟ್ಸ್ ತಂಡಕ್ಕೆ 1999ರ ಅಂತ್ಯದಲ್ಲಿ ಸೇರ್ಪಡೆಗೊಂಡ ಹಾಗೂ ಟು ಎಂಡ್ ದಿ ರಾಪ್ಚರ್ ಎಂಬ ಪರಿಚಯಾತ್ಮಕ ಹಾಡಿನ ಪುನರ್‌ಮುದ್ರಣವಾದಾಗ ಆತನಿಗೆ ಕೇವಲ 18 ವರ್ಷ ವಯಸ್ಸಾಗಿತ್ತು. ಸದರಿ ಆಲ್ಬಂ 2002ರಲ್ಲಿ ಹೋಪ್‌ಲೆಸ್ ರೆಕಾರ್ಡ್ಸ್ ಮೂಲಕ ಎರಡನೇ ಬಾರಿ ಮರುಬಿಡುಗಡೆಯಾಯಿತು. ಕ್ರಮೇಣ ಸಂಗೀತ ಕ್ಷೇತ್ರದಲ್ಲಿ ಮನ್ನಣೆಗಳಿಸಲಾರಂಭಿಸಿದ ಅವೆಂಜ್ಡ್ ಸೆವೆನ್‌ಫೋಲ್ಡ್ ಸಂಗೀತ ತಂಡ ಮಶ್‌‍ರೂಮ್‌‌ಹೆಡ್ ಹಾಗೂ ಶಾಡೋಸ್ ಫಾಲ್ ರೀತಿಯ ಪ್ರಖ್ಯಾತ ಸಂಗೀತ ತಂಡಗಳ ಕೂಡ ಪ್ರದರ್ಶನ ನೀಡುವ ಮಟ್ಟಿಗೆ ತನ್ನ ಛಾಪು ಮೂಡಿಸಿತು. ಮಾತ್ರವಲ್ಲ, ಟೇಕ್ ಆಕ್ಷನ್ ಟೂರ್‌‍‌‌‍ನಲ್ಲೂ ತನ್ನ ಪ್ರತಿಭೆ ಮೆರೆಯಿತು. ಓರ್ಥ ಬಾಸ್ಸಿಸ್ಟ್ ಜಾನಿ ಕ್ರಿಸ್ಟ್ ತಂಡದೊಂದಿಗೆ ಒಡಂಬಡಿಕೆ ಮಾಡಿಕೊಂಡ ಬಳಿಕ 2003 ಆಗಸ್ಟ್ ತಿಂಗಳಲ್ಲಿ ಹೋಪ್‌ಲೆಸ್ ರೆಕಾರ್ಡ್ಸ್ ಮೂಲಕ ವೇಕಿಂಗ್ ದಿ ಫಾಲನ್ ಆಲ್ಬಂ ಬಿಡುಗಡೆ ಮಾಡಲಾಯಿತು. ಮುಂಚಿನ ಅವರೆಲ್ಲಾ ಆಲ್ಬಂಗಳಿಗೆ ಹೋಲಿಸಿದರೆ ಇದು ಅತ್ಯಂತ ಸುಧಾರಿತ, ಪ್ರಬುದ್ಧ ಸಂಗೀತವನ್ನು ಒಳಗೊಂಡಿತ್ತು. ಸಂಗೀತ ತಂಡ ಬಿಲ್‌ಬೋರ್ಡ್ ಹಾಗೂ ದ ಬೋಸ್ಟನ್ ಗ್ಲೋಬ್‌ ಗಳಿಂದ ಹಲವಾರು ಪ್ರೊಫೈಲ್‌ಗಳನ್ನು ತಂಡ ಸ್ವೀಕರಿಸಿತು. ವ್ಯಾನ್ಸ್ ವಾರ್ಪಡ್ ಪ್ರವಾಸದಲ್ಲೂ ಪ್ರದರ್ಶನ ನೀಡಿತು. 2004ರಲ್ಲಿ ಅವೆಂಜ್ಡ್ ಸೆವೆನ್‌ಫೋಲ್ಡ್ ತಂಡ ಮತ್ತೊಮ್ಮೆ ವ್ಯಾನ್ಸ್ ವಾರ್ಪಡ್ ಪ್ರವಾಸ ಕೈಗೊಂಡಿತು ಹಾಗೂ ತಮ್ಮ ಅನ್‌ಹೋಲಿ ಕನ್‌ಫೆಶನ್ಸ್ ಹಾಡಿಗೆ ವೀಡಿಯೋ ಚಿತ್ರೀಕರಣವನ್ನೂ ಮಾಡಿತು. ಅದು ನಂತರ ಎಮ್‌ಟಿವಿ2ನ ಹೆಡ್‌ಬ್ಯಾಂಗರ‍್ಸ್ ಬಾಲ್ ಹಲವಾರು ಬಾರಿ ಪ್ರಸಾರವಾಗಿ ಜನಮನ್ನಣೆ ಗಳಿಸಿತು. ವೇಕಿಂಗ್ ದಿ ಫಾಲನ್ ಆಲ್ಬಂ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅವೆಂಜ್ಡ್ ಸೆವೆನ್‌ಫೋಲ್ಡ್ ಹೋಪ್‌ಲೆಸ್ ರೆಕಾರ್ಡ್ಸ್ ಜೊತೆ ತನ್ನ ಸಂಬಂಧವನ್ನು ಕಡಿದುಕೊಂಡಿತು ಹಾಗೂ ವಾರ್ನರ್ ಬ್ರದರ್ಸ್ ರೆಕಾರ್ಡ್ಸ್ ಜೊತೆ ಒಡಂಬಡಿಕೆ ಮಾಡಿಕೊಂಡಿತು.

ಸಿಟಿ ಆಫ್ ಈವಿಲ್ (2005—2007)

ತಂಡದ ಮೂರನೇ ಹಾಗೂ ಅತ್ಯಂತ ಪ್ರಮುಖ ಸಿಟಿ ಆಫ್ ಈವಿಲ್ 2005 ಜೂನ್ 7ರಂದು ಬಿಡುಗಡೆಯಾಯಿತು. ಅತ್ಯಂತ ಜನಪ್ರಿಯಗೊಂಡಿದ್ದ ಈ ಆಲ್ಬಂ ಬಿಲ್‌ಬೋರ್ಡ್ 200ರ ಚಾರ್ಟ್‌ನಲ್ಲಿ #30ನೇ ಸ್ಥಾನಗಳಿಸಿತ್ತು. ಬಿಡುಗಡೆಯಾದ ಮೊದಲ ವಾರದಲ್ಲಿಯೇ 30 ಸಾವಿರಕ್ಕಿಂತಲೂ ಹೆಚ್ಚು ಪ್ರತಿಗಳು ಬಿಕರಿಯಾಗಿದ್ದವು. ಮೆಟಾಕ್ಲೋರ್ ಪ್ರಕಾರಕ್ಕೆ ಒಳಗೊಂಡಿದ್ದ ಅವೆಂಜ್ಡ್ ಸೆವೆನ್‌ಫೋಲ್ಡ್‌ನ ಈ ಮೊದಲ ಆಲ್ಬಂಗಳಿಗೆ ಹೋಲಿಸಿದರೆ ಈ ಆಲ್ಬಂನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಲಾಸಿಕ್ ಅನ್ನಬಹುದಾದ ಮೆಟಲ್ ಸಂಗೀತವನ್ನು ಬಳಸಿಕೊಳ್ಳಲಾಗಿತ್ತು. ಕಿರುಚು ಧ್ವನಿ ಹಾಗೂ ಗ್ರೌಲ್‌ ಸಂಗೀತದಿಂದ ಹೊರತಾದ ಈ ಆಲ್ಬಂ ಆ ಕಾರಣಕ್ಕಾಗಿಯೇ ಜನರ ಗಮನ ಸೆಳೆದಿತ್ತು. ಆಲ್ಬಂ ಬಿಡುಗಡೆಯಾಗುವ ಹಲವು ತಿಂಗಳುಗಳ ಕಾಲ ಹಾಡುಗಾರಿಕೆಯ ತರಬೇತಿದಾರ ರಾನ್‌ ಆಂಡರ್ಸನ್‌ (ಅವರ ಸಹಾಯ ಪಡೆದುಕೊಂಡವರಲ್ಲಿ ಆಕ್ಸಲ್‌ ರೋಸ್‌ ಹಾಗೂ ಕ್ರಿಸ್‌ ಕಾರ್ನೆಲ್‌ ಕೂಡ ಸೇರಿದ್ದಾರೆ) ಜೊತೆ ಕೆಲಸ ಮಾಡಿದ ಎಮ್‌.ಶಾಡೋಸ್‌ ಹೊಸದೊಂದು ಸಾಧನೆಗೆ ನಾಂದಿ ಹಾಡಿದರು. “ಧ್ವನಿ ಹೊಂದಿಯೂ ’ಗ್ರಿಟ್‌’ ಉಳಿಸಿಕೊಂಡ ಆಲ್ಬಂ” ಎಂಬ ಮೆಚ್ಚುನುಡಿ ಎಲ್ಲಿಂದಲೂ ಕೇಳಿ ಬಂತು. ಹಲವಾರು ಮ್ಯಾಗಜೀನ್‌ಗಳಲ್ಲಿ, ವೆಬ್‌ಸೈಟ್‌ಗಳಲ್ಲಿ ಆಲ್ಬಂ ಕುರಿತು ಉತ್ತಮ ವಿಮರ್ಶೆಗಳು ಪ್ರಕಟವಾದವು. ಇವೆಲ್ಲವುಗಳ ದೆಸೆಯಿಂದಾಗಿ ಅವೇಂಜ್ಡ್‌ ಸೆವೆನ್‌ಫೋಲ್ಡ್‌ ತಂಡ ಅಂತರರಾಷ್ಟ್ರೀಯ ಮಟ್ಟದ ಜನಪ್ರಿಯತೆಯನ್ನು ಗಳಿಸಿತು 2006ರಲ್ಲಿ ಒಝಾಫೆಸ್ಟ್‌ ನಲ್ಲಿ ಪ್ರದರ್ಶನ ನೀಡಿದ ಬಳಿಕ ಅವೇಂಜ್ಡ್‌ ಸೆವೆನ್‌ಫೋಲ್ಡ್‌ ಮತ್ತೆ ಹಿಂದಿರುಗಿ ನೋಡಲಿಲ್ಲ. ಆರ್&ಬಿ ಸಿಂಗರ್ಸ್‌, ರಿಹನ್ನಾ ಹಾಗೂ ಕ್ರಿಸ್‌ ಬ್ರೌನ್, ಪ್ಯಾನಿಕ್‌ ! ಎಟ್‌ ದಿ ಡಿಸ್ಕೋ, ಎಂಜೆಲ್ಸ್ ಹಾಗೂ ಏರ್ ವೇವ್ಸ್‌ ಹಾಗೂ ಜೇಮ್ಸ್‌ ಬ್ಲಂಟ್ ತಂಡಗಳನ್ನು ಹಿಂದಿಕ್ಕಿದ ಅವೇಂಜ್ಡ್‌ ಸೆವೆನ್‌ಫೋಲ್ಡ್‌ ತಂಡ, ಫಿಯರ್ ಅಂಡ್ ಲೋಥಿಂಗ್ ಇನ್‌ ಲಾಸ್‌ ವೆಗಾಸ್‌ ಕೃತಿಯಿಂದ ಪ್ರೇರಣೆಪಡೆದ ತಮ್ಮ “ಬ್ಯಾಟ್ ಕಂಟ್ರಿ” ಹಾಡಿಗೆ MTV ವೀಡಿಯೋ ಮ್ಯೂಸಿಕ್‌ ಅವಾರ್ಡ್‌ನಲ್ಲಿ ಬೆಸ್ಟ್‌ ನ್ಯೂ ಆರ್ಟಿಸ್ಟ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಪುನಃ ವ್ಯಾನ್ಸ್‌ ವಾರ್ಪಡ್ ‍ಟೂರ್‌‌‌ಗೆ ಹಿಂದಿರುಗಿದ ತಂಡ ಈ ಬಾರಿ ತನ್ನದೇ ಆದ “ಸಿಟೀಸ್‌ ಆಫ್‌ ಈವಿಲ್‌ ಟೂರ್” ಎಂಬ ಹಣೆಪಟ್ಟಿ ಹಚ್ಚಿಕೊಂಡು ಪ್ರವಾಸ ಕೈಗೊಂಡಿತು. ಈ ನಡುವೆ ಅವರ “ಬ್ಯಾಟ್ ಕಂಟ್ರಿ” ಹಾಡು ಬಿಲ್‌ಬೋರ್ಡ್‌ನ ಮೇನ್‌ಸ್ಟ್ರೀಮ್ ರಾಕ್ ಚಾರ್ಟ್ಸ್ ನಲ್ಲಿ #2ನೇ ಸ್ಥಾನಕ್ಕೆ ಹಾಗೂ ಬಿಲ್‌ಬೋರ್ಡ್‌ನ ಮಾಡರ್ನ್‌ ರಾಕ್‌ ಚಾರ್ಟ್‌ನಲ್ಲಿ #6ನೇ ಸ್ಠಾನಕ್ಕೇರಿತು ಹಾಗೂ ಅದರ ವೀಡಿಯೋ ಆವೃತ್ತಿ MTV’s ಟೋಟಲ್‌ ರಿಕ್ವೆಸ್ಟ್‌‍ನಲ್ಲಿ #1ನೇ ಸ್ಥಾನಕ್ಕೇರಿತು. ಈ ಯಶಸ್ಸಿನಿಂದಾಗಿ ಆಲ್ಬಂ ದೊಡ್ಡ ಪ್ರಮಾಣದಲ್ಲಿಯೇ ಮಾರಾಟವಾಯಿತು ಹಾಗೂ ಅವೇಂಜ್ಡ್‌ ಸೆವೆನ್‌ಫೋಲ್ಡ್‌ ನ ಮೊದಲ ಸುವರ್ಣ ದಾಖಲೆಯಾಗಿ ಇತಿಹಾಸದಲ್ಲಿ ಚಿರಸ್ಥಾಯಿಯಾಯಿತು. ಇದು ನಂತರ 2009ರಲ್ಲಿ ಪ್ಲಾಟೀನಂ ಪ್ರಶಸ್ತಿಗೂ ಭಾಜನವಾಯಿತು.

ಸೆಲ್ಫ್‌ ಟೈಟಲ್ಡ್‌ ಆಲ್ಬಂ (2007—2008)

ಅವೆಂಜ್ಡ್ ಸೆವೆನ್‌‍ಫೋಲ್ಡ್‌‌‌‌‌‍ 
2007ರಲ್ಲಿಯ ಜಾಕೀ ವೆಂಗೆಯನ್ಸ್.

ಅವೇಂಜ್ಡ್‌ ಸೆವೆನ್‌ಫೋಲ್ಡ್‌ ತಂಡದ ಯಶಸ್ಸು ಅವರಿಗೆ 2006ರ ಓಝ್‌ಫೆಸ್ಟ್‌ನಲ್ಲಿ ಡ್ರ್ಯಾಗನ್‌ಫೋರ್ಸ್‌, ಲ್ಯಾಕುನಾ ಕಾಯಿಲ್‌, ಹೇಟ್‌ಬ್ರೀಡ್‌, ಡಿಸ್ಟರ್ಬಡ್‌ ಹಾಗೂ ಸಿಸ್ಟಮ್‌ ಆಫ್‌ ಎ ಡಾನ್‌ ಮುಂತಾದ ಖ್ಯಾತ ಹಾರ್ಡ್ ರಾಕ್‌ನ ಹೆವಿ ಮೆಟಲ್ ತಂಡಗಳ ಜೊತೆಗೂಡಿ ಪ್ರದರ್ಶನ ನೀಡುವ ಅವಕಾಶ ಕಲ್ಪಿಸಿತು. ಅದೇ ವರ್ಷದಲ್ಲಿ ತಂಡ ತನ್ನ ಜಾಗತಿಕ ಪ್ರವಾಸವನ್ನು ಪೂರೈಸಿತು. ಈ ಪ್ರವಾಸದಲ್ಲಿ ಅವೇಂಜ್ಡ್‌ ಸೆವೆನ್‌ಫೋಲ್ಡ್‌ ತಂಡ ಅಮೆರಿಕ, ಇಂಗ್ಲೆಂಡ್‌, (ಯೂರೋಪ್‌ನ ಮುಖ್ಯಭೂಭಾಗದಲ್ಲಿ), ಜಪಾನ್‌, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ರಾಷ್ಟ್ರಗಳಲ್ಲಿ ತನ್ನ ಸಂಗೀತ ಸುಧೆ ಹರಿಸಿತು. ತಮ್ಮ ಸಿಟಿ ಆಫ್‌ ಈವಿಲ್‌ ಆಲ್ಬಂ ಪ್ರಚಾರಕ್ಕಾಗಿ ಸುಮಾರು ಹದಿನಾರು ತಿಂಗಳುಗಳ ಕಾಲ ಪ್ರವಾಸ ಕೈಗೊಂಡ ತಂಡ ಕೊನೆಗೆ ತಾವು ಹೊಸ ಆಲ್ಬಂನ ರೆಕಾರ್ಡಿಂಗ್‌ನಲ್ಲಿ ತೊಡಗಿಸಿಕೊಳ್ಳುವುದಕ್ಕೋಸ್ಕರ ತಮ್ಮ 2006ರ ಪ್ರವಾಸವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿತು. ಎಮ್‌.ಶಾಡೋಸ್‌, ತಮ್ಮ ನಾಲ್ಕನೇ ಸ್ಟುಡಿಯೋ ಆಲ್ಬಂನ ಹೆಸರನ್ನು-ತಂಡ ಇದಕ್ಕೆ ತಾನೇ ಹೆಸರು ಇಟ್ಟಿದ್ದಲ್ಲದೇ, ತಾನೇ ನಿರ್ಮಿಸಿತು- “ಸಿಟಿ ಆಫ್‌ ಈವಿಲ್‌ ಭಾಗ 2” ಅಥವಾ “ವೇಕಿಂಗ್‌ ದಿ ಫಾಲನ್‌ ಭಾಗ 2” ಎಂದು ಘೋಷಿಸಿದರು. ಮೇಲ್ತೋರಿಕೆಗೆ ಹಳೆಯ ಆಲ್ಬಂಗಳ ಮುಂದುವರಿದ ಭಾಗ ಎಂಬಂತೆ ಕಂಡುಬಂದರೂ ಈ ಆಲ್ಬಂ ಹೊಸ ಬಗೆಯ ಗ್ರಿಟ್ಟಿಯರ್ ಸಂಗೀತವನ್ನು ಒಳಗೊಂಡಿತ್ತು. ಈ ಆಲ್ಬಂಗಳ ಸರಣಿಯಲ್ಲಿ ಬಂಧಿಸಿ, ಮಂತ್ರಮುಗ್ದರನ್ನಾಗಿಸುವುದಕ್ಕೋಸ್ಕರ ತಂಡ “ಆಲ್‌ ಎಕ್ಸೆಸ್ ‌” ಎಂಬ ಹೆಸರಿನ ತಮ್ಮ ಪ್ರಥಮ ಡಿ.ವಿ.ಡಿಯನ್ನು 2007 ಜುಲೈ 17ರಲ್ಲಿ ಬಿಡುಗಡೆ ಮಾಡಿತು. ಅಮೆರಿಕದಲ್ಲಿ #1 ಡಿ.ವಿ.ಡಿ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡ “ಆಲ್‌ ಎಕ್ಸೆಸ್‌ ” ತಂಡದ 8 ವರ್ಷಗಳ ಲೈವ್‌ ಪ್ರದರ್ಶನಗಳನ್ನು ಹಾಗೂ ಬ್ಯಾಕ್‌ಸ್ಟೇಜ್ ದೃಶ್ಯಾವಳಿಗಳನ್ನು ಒಳಗೊಂಡಿತ್ತು. Strung Out on Avenged Sevenfold: Bat Wings and Broken Strings ಹಾಗೂ Strung Out on Avenged Sevenfold: The String Tribute ಎಂಬ ಎರಡು ಟ್ರೈಬ್ಯೂಟ್‌ ಆಲ್ಬಂಗಳು ಕೂಡ 2007 ಅಕ್ಟೋಬರ್ ತಿಂಗಳಲ್ಲಿ ಲೋಕಾರ್ಪಣೆಗೊಂಡವು. 2007 ಅಕ್ಟೋಬರ್ 30ರಂದು ತಂಡದ ನಾಲ್ಕನೇ ಆಲ್ಬಂ, ಅವೇಂಜ್ಡ್‌ ಸೆವೆನ್‌ಫೋಲ್ಡ್‌ , ಬಿಡುಗಡೆಯಾಯಿತು. ಬಿಲ್‌ಬೋರ್ಡ್‌ 200ರಲ್ಲಿ #4 ನೇ ಸ್ಥಾನಗಳಿಸಿದ್ದು ಮಾತ್ರವಲ್ಲ ಸುಮಾರು 90 ಸಾವಿರ ಪ್ರತಿಗಳು ಮಾರಾಟವಾಗಿದ್ದವು. ಆಲ್ಬಂ ಬಿಡುಗಡೆಯಾಗುವ ಮೊದಲೇ ಎರಡು ಏಕ ಸಂಗೀತಗಳಾದ, “ಕ್ರಿಟಿಕಲ್ ಅಕ್ಲೇಮ್‌” ಹಾಗೂ “ಆಲ್ಮೋಸ್ಟ್‌ ಈಸಿ” ಮಾರುಕಟ್ಟೆಗೆ ಬಂದಿದ್ದವು. 2007 ಡಿಸೆಂಬರ್‌‌ನಲ್ಲಿ “ಎ ಲಿಟ್ಲ್‌ ಪೀಸ್‌ ಆಫ್‌ ಹೆವನ್‌” ಹಾಡಿಗೆ ಎನಿಮೇಷನ್‌ ಒಳಗೊಂಡ ವೀಡಿಯೋ ಅನ್ನು ನಿರ್ಮಿಸಲಾಯಿತು. ಆದಾಗ್ಯೂ ಹಾಡಿನ ವಿಷಯ ವಿವಾದಾಸ್ಪದವಾಗಿದ್ದರಿಂದ ವಾರ್ನರ್ ಸಹೋದರರು ಅದನ್ನು ಇಂಟರ್ನೆಟ್‌ನ MVI ಬಳಕೆದಾರರಿಗೆ ಮಾತ್ರ ಲಭ್ಯವಾಗುವಂತೆ ಬಿಡುಗಡೆ ಮಾಡಿದರು. ಮೂರನೇಯ ಏಕಸಂಗೀತ , “ಆಫ್ಟರ್ ಲೈಪ್‌” ಹಾಗೂ ಅದರ ವೀಡಿಯೋ 2008 ಜನವರಿಯಲ್ಲಿ ಬಿಡುಗಡೆಯಾಯಿತು. ಅವರ ನಾಲ್ಕನೇ ಏಕಸಂಗೀತ, “ಡಿಯರ್ ಗಾಡ್‌” 2008 ಸೆಪ್ಟೆಂಬರ್ 30ಕ್ಕೆ ಬಿಡುಗಡೆಯಾಯಿತು. ಹಾಗಿದ್ದೂ, ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಸ್ವ-ಶೀರ್ಷಿಕೆಯುಳ್ಳ ಆಲ್ಬಂನ ಐದುಲಕ್ಷಕ್ಕೂ ಹೆಚ್ಚಿನ ಪ್ರತಿಗಳು ಬಿಕರಿಯಾದವು ಮಾತ್ರವಲ್ಲ ಕೆರಾಂಗ್! ಅವಾರ್ಡ್‌ನಲ್ಲಿ “ಆಲ್ಬಂ ಆಫ್‌ ದಿ ಇಯರ್” ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿತು

ಲೈವ್ ಇನ್ ದಿ ಎಲ್‌ಬಿಸಿ ಆಂಡ್‌‌ ಡೈಮಂಡ್ಸ್‌ ಇನ್‌ ದಿ ರಫ್‌ (2008—2009)

ಅವೆಂಜ್ಡ್‌ ಸೆವೆನ್‌ಫೋಲ್ಡ್‌ ತನ್ನ 2008ರ ಟೇಸ್ಟ್‌ ಆಫ್‌ ಕೆಯಾಸ್‌ ಪ್ರವಾಸವನ್ನು ಆಟ್ರೆಯು, ಬುಲೆಟ್‌ ಫಾರ್ ಮೈ ವಾಲೆಂಟೈನ್, ಬ್ಲೆಸ್‌ ದಿ ಫಾಲ್‌ ಹಾಗೂ ಈಡಿಯಟ್‌ ಪೈಲಟ್‌ಗಳಿಂದ ಹಚ್ಚಹಸಿರಾಗಿಸಿತು. ಅವರು ತಮಗೆ ಬೇಕಾದ ದೃಶ್ಯಾವಳಿಗಳನ್ನು 2008 ಸೆಪ್ಟೆಂಬರ್ 16ರಂದು ಬಿಡುಗಡೆಯಾದ ಲಾಂಗ್‌ ಬೀಚ್‌ನಲ್ಲಿನ ತಮ್ಮ ಕೊನೆಯ ಪ್ರದರ್ಶನ ಲೀವ್ ಇನ್‌ ದಿ ಎಲ್‌ಬಿಸಿ & ಡೈಮಂಡ್ಸ್‌ ಇನ್ ದಿ ರಫ್‌ ನ ಎರಡು-ಡಿಸ್ಕ್‌, ಬಿ-ಸೈಡ್ಸ್‌ ಸಿಡಿ ಹಾಗೂ ಲೈವ್ ಡಿ.ವಿ.ಡಿಯಿಂದ ಆಯ್ದುಕೊಳ್ಳಲಾಯಿತು. ತಮ್ಮದು ಮಾತ್ರವಲ್ಲದೇ ಅವರು, ಪಂಥೇರಾದ “ವಾಕ್‌”, ಐರನ್‌ ಮೈಡನ್‌ನ “ಫ್ಲ್ಯಾಷ್‌ ಆಫ್‌ ದಿ ಬ್ಲೇಡ್‌” ಹಾಗೂ ಬ್ಲ್ಯಾಕ್‌ ಸಬ್ಬತ್‌ನ “ಪ್ಯಾರನಾಯ್ಡ್‌” ಮುಂತಾದ ಪ್ರಧಾನ ಹಾಡುಗಳನ್ನೂ ಮುದ್ರಸಿದರು. ಅವರು ಆಫ್ಟರ್ ಲೈಫ್‌, ಆಲ್ಮೋಸ್ಟ್‌ ಈಸಿ, ಬ್ಯಾಟ್‌ ಕಂಟ್ರಿ, ಬೀಸ್ಟ್ ಅಂಡ್‌ ದಿ ಹ್ಯಾರ್ಲೊಟ್ ಹಾಗೂ ಟ್ಯಾಷ್ಡ್‌ ಅಂಡ್‌ ಸ್ಕ್ಯಾಟರ್ಡ್‌ ಎಂಬ ಐದು ಟ್ರ್ಯಾಕ್‌ಗಳನ್ನು ಒಳಗೊಂಡ ಗಿಟಾರ್ ಟ್ಯುಟೋರಿಯಲ್ ಡಿ.ವಿ.ಡಿಯೊಂದನ್ನು ಬಿಡುಗಡೆ ಮಾಡಲಿದ್ದಾರೆ. ಪ್ರತಿಯೊಂದು ಹಾಡಿನಲ್ಲೂ ಗಿಟಾರ್ ಸೋಲೋ ಅನ್ನು ಹಾಗೂ ರಿಫ್‌ಗಳನ್ನು ಬಳಸಲಿದ್ದಾರೆ. ಲೀಡ್ಸ್‌ ಅಂಡ್‌ ರೀಡಿಂಗ್‌ನ ಸೋಲ್ಡ್‌-ಔಟ್‌ ಸಂಗೀತಹಬ್ಬದಲ್ಲಿ ಪಾಲ್ಗೊಂಡಿದ್ದ ತಂಡ ಎಮ್‌.ಶಾಡೋ ಅವರ ಗಂಟಲುನೋವಿನಿಂದಾಗಿ ತನ್ನ ಲೀಡ್ಸ್‌ ಪ್ರದರ್ಶನವನ್ನು ಮೊಟಕುಗೊಳಿಸುವ ಹಾಗೂ ಅವರ ರೀಡಿಂಗ್ ಪ್ರದರ್ಶನವನ್ನು ರದ್ದುಗೊಳಿಸುವ ಅನಿವಾರ್ಯತೆಗೊಳಗಾಯಿತು. ಹಲವು ದಿನಗಳ ಬಳಿಕ, ತಂಡ ತನ್ನ ಸೆಪ್ಟೆಂಬರ್ ಪ್ರದರ್ಶನಗಳನ್ನು ರದ್ದುಗೊಳಿಸಿ ಅದನ್ನು ಅಕ್ಟೋಬರ್ 15ಕ್ಕೆ ಮುಂದೂಡಿತು.

ನೈಟ್‌ಮೇರ್ (2009—ಇಲ್ಲಿಯವರೆಗೂ)

2009 ಜನವರಿಯಲ್ಲಿ ಎಮ್‌.ಶಾಡೋಸ್‌ ಮುಂದಿನ ತಿಂಗಳಲ್ಲಿ ನಾಲ್ಕನೇ ಸೆಲ್ಫ್‌-ಟೈಟಲ್ಡ್‌ ಆಲ್ಬಂ ಅನ್ನು ಹೊರತರಲಿದ್ದು ಅದಕ್ಕಾಗಿ ಅವಶ್ಯವಿರುವ ಬರವಣಿಗೆಯ ಕೆಲಸಗಳನ್ನು ನಡೆಸುತ್ತಿರುವುದಾಗಿ ಹೇಳಿದ್ದರು. ಇದರ ಜೊತೆಗೆ 2009ರ ಮೇ 16-17ರಂದು ನಡೆಯಲಿದ್ದ ರಾಕ್‌ ಆನ್‌ ದಿ ರೇಂಜ್‌ನಲ್ಲೂ ಪ್ರದರ್ಶನ ನೀಡುವುದಾಗಿ ಅವೇಂಜ್ಡ್‌ ಸೆವೆನ್‌ಫೋಲ್ಡ್‌ ತಂಡ ಹೇಳಿತ್ತು. ಏಪ್ರಿಲ್‌ 16ರಂದು ಲಾಸ್‌ ಏಂಜೆಲ್ಸ್ ನ ನೋಕಿಯಾ ಥೇಟರ್ ನಲ್ಲಿ ಮತ್ತೊಂದು ತಂಡ ಸ್ಲ್ಯಾಷ್‌ ಜೊತೆಗೂಡಿ ಗನ್ಸ್‌ ಎನ್‌’ ರೋಸಸ್‌ನ ಆವೃತ್ತಿಯಾದ “ಇಟ್ಸ್‌ ಸೋ ಈಸೀ” ಯ ಪ್ರದರ್ಶನವನ್ನು ನೀಡಿದ್ದರು. ಸ್ಲ್ಯಾಷ್‌ನ ಚೊಚ್ಚಲ ಸೋಲೋ ಆಲ್ಬಂ “ಸ್ಲ್ಯಾಷ್ ‌”ನ “ನಥಿಂಗ್ ಟು ಸೇ” ಹಾಡಿನಲ್ಲಿ ಎಮ್‌.ಶಾಡೋಸ್‌ ಕೂಡ ಕಾಣಿಸಿಕೊಂಡಿದ್ದರು. ಎಮ್‌.ಶಾಡೋಸ್‌ ಹಾಗೂ ತಂಡದ ಇತರರು ತಮ್ಮ ಸೆಲ್ಫ್‌-ಟೈಟಲ್ಡ್‌ ರೆಕಾರ್ಡ್‌ಗೆ ಫಾಲೋ-ಅಪ್‌ ಮಾಡಲು ತೀವ್ರ ಆಸಕ್ತಿ ತೋರಿಸಿದ್ದರು. ಜೂನ್‌ 2009ರಲ್ಲಿ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿ 2009ರ ಅಕ್ಟೋಬರ್‌‌‌‌ನಲ್ಲಿಯೇ ತಮ್ಮ ರೆಕಾರ್ಡಿಂಗ್‌ ಅನ್ನೂ ಪ್ರಾರಂಭಿಸುವ ಯೋಜನೆ ಇರುವುದಾಗಿ ಘೋಷಿಸಿದರು. ಎಮ್‌.ಶಾಡೋಸ್‌ ಲವ್‌ಲೈನ್‌‌ ಗೆ ನೀಡಿದ ಸಂದರ್ಶನವೊಂದರಲ್ಲಿ ಸೆಲ್ಫ್‌-ಟೈಟಲ್ಡ್‌ ರೆಕಾರ್ಡ ಮೂಲತಃ ಹೊಸತನದಿಂದ ಕೂಡಿದ್ದರಿಂದ ನಂತರದ ರೆಕಾರ್ಡ್‌ ಮೊದಲಿಗಿಂತಲೂ ಹೆಚ್ಚು ಸಾಂಪ್ರದಾಯಿಕ ಹೆವಿ ಮೆಟಲ್‌, ಹೆಚ್ಚು ರಾಕ್‌ ಪ್ರಣೀತ ರೆಕಾರ್ಡ್‌ ಆಗಲಿದೆ ಎಂಬ ಸೂಚನೆಯನ್ನೂ ನೀಡಿದ್ದರು. ಅದು ಅತ್ಯಂತ ಪ್ರಗತಿಶೀಲವೂ ಮತ್ತು ಹೆಚ್ಚು ದೀರ್ಘಗತಿಯ ಹಾಡುಗಳನ್ನು ಒಳಗೊಂಡಿರುತ್ತದೆ ಎಂದೂ ಅವರು ಹೇಳಿದ್ದರು. “ಅವೇಂಜ್ಡ್‌ ಸೆವೆನ್‌ಫೊಲ್ಡ್‌ ರೆಕಾರ್ಡ್‌ಗಳಲ್ಲಿಯೇ ಅತ್ಯಂತ ದೊಡ್ಡ ಪ್ರಮಾಣದ ರೆಕಾರ್ಡ್‌ ಇದಾಗಿರುತ್ತದೆ” ಎಂದೂ ಶಾಡೋಸ್‌ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಇದರೊಂದಿಗೆ ಪರಿಕಲ್ಪನಾ ರೆಕಾರ್ಡ್‌ ಕುರಿತು ಚಿಂತನೆ ನಡೆಸಿರುವುದಾಗಿಯೂ ಅವರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದ್ದರು. 2009 ಜುಲೈ 15ರಂದು ನವೀಕರಣಗೊಂಡ ತಮ್ಮ ವೆಬ್‌ಸೈಟ್‌ ಹಾಗೂ ಮೈಸ್ಪೇಸ್‌ ಪ್ರೊಫೈಲ್‌ನಲ್ಲಿ ತಾವೆಲ್ಲವೂ ಮುಂದಿನ ಆಲ್ಬಂ ಕುರಿತು ಕೆಲಸ ಪ್ರಾರಂಭಿಸಿರುವುದಾಗಿ ಹೇಳಿದ ಶಾಡೋಸ್‌, ಹಾಗಿದ್ದೂ, ತಾವಿನ್ನೂ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿದ್ದೇವೆ ಎಂದೂ ಹೇಳಿದ್ದರು. ನವೀಕರಣಗೊಂಡ ದಿನವೇ ವೇಕಿಂಗ್‌ ದಿ ಫಾಲನ್‌ ಗೋಲ್ಡ್‌‌‍ಗೆ ಹೋಗಿದ್ದನ್ನೂ ಖಚಿತಪಡಿಸಲಾಯಿತು. ಸಂದರ್ಶನವೊಂದರಲ್ಲಿ ಎಮ್‌.ಶಾಡೋಸ್‌ ಆಗಸ್ಟ್‌ 2ರಂದು ನಡೆಯುವ ಸೋನಿಸ್‌ಸ್ಪಿಯ್‌ ಉತ್ಸವದಲ್ಲಿ ತಮ್ಮ ತಂಡ ಅಂತಿಮ ಪ್ರದರ್ಶನ ನೀಡುವುದರೊಂದಿಗೆ ತನ್ನ ಪ್ರವಾಸವನ್ನು ಕೊನೆಗೊಳಿಸುತ್ತದೆ ಎಂದು ಬಹಿರಂಗಪಡಿಸಿದ್ದರು. ಇದಾದ ಬಳಿಕ ತಾವೆಲ್ಲರೂ ಸ್ಟೂಡಿಯೋಗೆ ತೆರಳಿ ಹೊಸ ಸ್ಟುಡಿಯೋ ಆಲ್ಬಂ ತಯಾರಿಸುವ ನಿಟ್ಟಿನಲ್ಲಿ ಬರವಣಿಗೆ ಹಾಗೂ ರೆಕಾರ್ಡ್‌‌ನ್ನು ಪ್ರಾರಂಭಿಸುವುದಾಗಿಯೂ, ತಮ್ಮ ಸೆಲ್ಫ್‌-ಟೈಟಲ್ಡ್‌ ಆಲ್ಬಂಗೆ ಫಾಲೋ ಅಪ್‌ ಅನ್ನು ಮಾಡುವುದಾಗಿಯೂ ಅವರು ಹೇಳಿದ್ದರು.

ಚಿತ್ರ:Erikkalaurenpic.jpg
2007ರಲ್ಲಿ ಅವೆಂಜ್ಡ್ ಸೆವೆನ್ಫೋಲ್ಡ್.

2009 ನವೆಂಬರ್ 5ರಂದು ತಂಡದ ಇನ್ನೊಬ್ಬ ಸದಸ್ಯ ಝಾಕಿ ವೆಂಜೆಯಾನ್ಸ್‌ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂದೇಶವೊಂದನ್ನು ಹರಿಯಬಿಟ್ಟರು. ಅದರ ಪ್ರಕಾರ, ಅವರು ಈಗಾಗಲೇ ಪ್ರವಾಸದಿಂದ ಹಿಂದಿರುಗಿದ್ದು ತಮ್ಮದೇ ಆಲ್ಬಂ ತಯಾರಿಕೆಯ ನಿಟ್ಟಿನಲ್ಲಿ ಸ್ವಂತದ್ದಾದ ಒಂದು ನಿರ್ಮಾಣ ತಂಡವೊಂದನ್ನು ಕಟ್ಟುವ ಕಡೆ ಗಮನ ಹರಿಸಿದ್ದರು. “ಪ್ರತಿಯೊಂದು ಸ್ವರಚಿಹ್ನೆಗಳೂ ನಮಗೆ ಹಾಗೂ ನಿಮಗೆ ನ್ಯಾಯವೊದಗಿಸಿವೆ ಎಂಬ ಭಾವನೆ ಬರುವವರೆ ನಾವು ನಮ್ಮ ಹಾಡುಗಳನ್ನು ತಿದ್ದಿ-ತೀಡುತ್ತಲೇ ಇರುತ್ತೇವೆ. ಇದರ ಜೊತೆಗೆ ನಾವು ನಮ್ಮ ನಿರ್ಮಾಣ ತಂಡ, ಸ್ಟುಡಿಯೋಗಳು ಹಾಗೂ ಎಂಜಿನೀಯರ್‌‍ಗಳನ್ನು ಆಯ್ಕೆ ಮಾಡುವ ಅಂತಿಮ ಹಂತದಲ್ಲಿ ನಾವಿದ್ದೇವೆ. ನಮ್ಮ ಈ ಕನಸು ನನಸು ಮಾಡಿಕೊಳ್ಳುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ನಾವು ನಮ್ಮ ಸ್ಟುಡಿಯೋದಲ್ಲಿಯೇ ಹಗಲು ರಾತ್ರಿ ಕಳೆಯುತ್ತಿದ್ದೇವೆ. ಈ ಆಲ್ಬಂ ನಿಮ್ಮನ್ನು ಹೊಸದೊಂದು ವಿಶಿಷ್ಟ ಪ್ರಯಾಣಕ್ಕೆ ಕರೆದೊಯ್ಯುವುದಂತೂ ಖಚಿತ...” ಎಂದು ಝಾಕಿ ವೆಂಜೆಯಾನ್ಸ್‌ ತಮ್ಮೊಳಗನ್ನು ತೋಡಿಕೊಂಡಿದ್ದರು. ಅವೇಂಜ್ಡ್‌ ಸೆವೆನ್‌ಫೋಲ್ಡ್‌ ಅಲ್ಟಿಮೇಟ್‌ ಗಿಟಾರ್‌‌‍ನ ದಶಕದ ಟಾಪ್‌ ಟೆನ್‌ ಬ್ಯಾಂಡ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾಗಿ 2009 ಡಿಸೆಂಬರ್ 24ರಂದು ಪ್ರಕಟಣೆ ಹೊರಬಿತ್ತು. ಮೊದಲ ಸ್ಥಾನ ಮೆಟಾಲಿಕಾ ಪಾಲಾಗಿತ್ತು. ಕೆರಾಂಗ್! ಮ್ಯಾಗಜೀನ್‌ನ 2009 ಡಿಸೆಂಬರ್ 31ರ ಸಂಚಿಕೆಯಲ್ಲಿ ಎಮ್‌.ಶಾಡೋಸ್‌ ಅವರ ಸಂದರ್ಶನ ಪ್ರಕಟವಾಗಿತ್ತು. ಈ ಸಂದರ್ಶನದಲ್ಲಿ ಶಾಡೋಸ್‌, “ಇದು ನಿಜಕ್ಕೂ ಸಂಕೀರ್ಣ ರೆಕಾರ್ಡ್‌. ಸಂಗೀತ ಭಾವಪೂರ್ಣವಾಗಿದೆ. ಈ ಆಲ್ಬಂನ ಚಿಕ್ಕ ಚಿಕ್ಕ ಭಾಗಗಳು ಕೂಡ ಬಹುಕಾಲ ಜನಮಾನಸದಲ್ಲಿ ಹಚ್ಚಹಸಿರಾಗಿರಬೇಕು ಎಂಬುದು ನಮ್ಮ ಗುರಿ. ಸಂಗೀತ ಅಪ್ಪಟ ಇಲ್ಲಿಯ ಮಣ್ಣಿನದೇ ಆಗಿರುತ್ತದೆ ಹಾಗೂ ಜೀವಂತಿಕೆಯ ಪ್ರತಿಕ್ರಿಯೆಗಳನ್ನು ಪ್ರಚೋದಿಸುವಂತಿರುತ್ತದೆ. ದೊಡ್ಡ ಪ್ರಮಾಣದ ರಾಕ್‌ ಲಾವಣಿಗಳನ್ನು, ತಮಾಷೆಯ ಸಂಗತಿಗಳನ್ನು, ಪಿಯಾನೋ, ಕಾಯರ್, ಆರ್ಕೇಸ್ಟ್ರಾ ಹಾಗೂ ನೀವು ನಿರೀಕ್ಷಿಸುವ ದೃಶ್ಯಾವಳಿಗಳು ನವೀನ ಮಾದರಿಯಲ್ಲಿ ಮೂಡಿಬರಲಿವೆ. ಇನ್ನು ಸಾಹಿತ್ಯವನ್ನು ಕುರಿತು ಮಾತನಾಡಬೇಕೆಂದರೆ, ಇಂದಿನ ಮಕ್ಕಳನ್ನು ಪಾಲನೆ ಮಾಡುವ ಸಂಗತಿಗಳಿಂದ ಹಿಡಿದು ಶಾಲಾ ವ್ಯವಸ್ಥೆ, ಹಣಕಾಸು, ಧರ್ಮ, ಯುದ್ಧ, ನಮ್ಮದೇ ಸರ್ಕಾರಗಳ ವರ್ತನೆ ಹೀಗೆ ಪ್ರತಿಯೊಂದು ಸಂಗತಿಯಿಂದಲೂ ಪ್ರೇರಣೆ ಪಡೆದುಕೊಂಡಿದ್ದೇನೆ. ಅದೆಲ್ಲವೂ ಇಲ್ಲಿಯ ಹಾಡುಗಳಲ್ಲಿ ಪ್ರತಿಫಲಿತಗೊಳ್ಳಲಿದೆ. ಕಂದಮ್ಮಗಳು ಹೇಗೆ ಈ ಜಗತ್ತಿನ ವಾಸ್ತವದಿಂದ ಭಾವನಾತ್ಮಕವಾಗಿ ಅಂತರ ಕಾಪಾಡಿಕೊಂಡಿರುತ್ತವೆ ಎಂಬುದು ಕೂಡ ಇಲ್ಲಿನ ಹಾಡುಗಳಲ್ಲಿ ಅಭಿವ್ಯಕ್ತಗೊಂಡಿದೆ” ಎಂದು ತಮ್ಮ ಆಲ್ಬಂ ಕುರಿತು ತುಂಬು ಉತ್ಸಾಹದಿಂದ ಮಾತನಾಡಿದ್ದರು. 2010 ಏಪ್ರಿಲ್‌ 17ರಂದು ಅವೇಂಜ್ಡ್‌ ಸೆವೆನ್‌ಫೋಲ್ಡ್‌ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಝಾಕಿ ವೆಂಜೆಯಾನ್ಸ್‌ ಅವರ ಒಂದು ಚಿಕ್ಕ ಸಂದೇಶ ಉಲಿದಿತ್ತು. “ಟ್ರ್ಯಾಕಿಂಗ್‌ ಕೆಲಸ ಪೂರ್ಣಗೊಂಡಿದೆ. ಬೆಳಿಗ್ಗೆ 4 ಗಂಟೆಗೆ ಮನೆಗೆ ಒಬ್ಬಂಟಿಯಾಗಿ ಡ್ರೈವ್‌ ಮಾಡುವಾಗ ಈ ಹಾಡು ಕೇಳುತ್ತಾ ಹೋಗುವ ಅನುಭವವಿದೆಯಲ್ಲಾ ಅದನ್ನು ಮಾತುಗಳಲ್ಲಿ ವರ್ಣಿಸುವುದು ಅಸಾಧ್ಯ” ಎಂದಿದ್ದರು ಝಾಕಿ. ಅವೇಂಜ್ಡ್‌ ಸೆವೆನ್‌ಫೋಲ್ಡ್‌ನ ಏಕಗಾನ “ನೈಟ್‌ಮೇರ್” ನ ಡಿಜಿಟಲ್‌ ಆವೃತ್ತಿಯನ್ನು 2010 ಮೇ 18ರಂದು ಬಿಡುಗಡೆ ಮಾಡಲಾಯಿತು. ತಂಡದ ಈ ಐದನೇ ಸ್ಟುಡೀಯೋ ಆಲ್ಬಂ 2010 ಜುಲೈ 27ರಂದು ಬಿಡುಗಡೆಯಾಯಿತು. ಹಾಡಿನ ಪೂರ್ವವೀಕ್ಷಣಾ ಆವೃತ್ತಿಯನ್ನು Amazon.com , ವೆಬ್‌ಸೈಟ್‌ನಲ್ಲಿ 2020 ಮೇ 6ರಂದು ಪ್ರಕಟಿಸಲಾಯಿತಾದರೂ ಕೆಲವೊಂದು ಅನಿವಾರ್ಯ ಕಾರಣಗಳಿಂದಾಗಿ ಅಲ್ಲಿಂದ ಅದನ್ನು ತೆಗೆದು ಹಾಕಲಾಯಿತು. ನೈಟ್‌ಮೇರ್ ಬಿಡುಗಡೆಯಾಗುವ ಮೊದಲೇ, 2010 ಮೇ 12ರಂದು, ಹಾರ್ಡ್‌ಡ್ರೈವ್‌ ಎಂಬ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಎಮ್‌.ಶಾಡೋಸ್‌ ಹಾಗೂ ಸಿನಿಸ್ಟರ್ ಗೇಟ್ಸ್‌ ಅದರ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದರು.

[...] The new album, Nightmare, is dedicated to The Rev memory and although it's not exactly a concept album, it does center around The Rev. The eeriest thing about it is there is a song on the album called "Fiction" (a nickname The Rev gave himself) which started out with the title "Death". And the song was the last song The Rev wrote for the album, and when he handed it in, he said, that’s it, that’s the last song for this record. And then 3 days later, he died.

ಅವರು ಹೇಳಿದ ಪ್ರಕಾರ, ಆಲ್ಬಂನ ಮಿಕ್ಸಿಂಗ್‌ ಕಾರ್ಯ ನ್ಯೂಯಾರ್ಕ್‌ ನಗರದಲ್ಲಿಯೇ ಪೂರ್ಣಗೊಂಡಿತ್ತು ಹಾಗೂ ಜುಲೈ 27ರಂದು ಜಗತ್ತಿನಾದ್ಯಂತ ಅದು ಬಿಡುಗಡೆಯಾಯಿತು. ಸಂಗೀತ ವಿಶ್ಲೇಷಕರಿಂದ ಈ ಆಲ್ಬಂ ಕುರಿತು ಸಕಾರಾತ್ಮಕ ವಿಮರ್ಶೆಗಳು ಬಂದಿದ್ದವು. ಅದರ ಜೊತೆಗೆ, ಆಲ್ಬಂ ಅನ್ನು ಸಂಗೀತಾಭಿಮಾನಿಗಳು ತೆರೆದ ಹೃದಯದಿಂದ ಒಪ್ಪಿಕೊಂಡಿದ್ದರು.’ಮೆಟಾಕ್ರಿಟಿಕ್‌’ನಲ್ಲಿ ಆಲ್ಬಂಗೆ 9.1 ಅಂಕ ದೊರಕಿದ್ದು ಅಭಿಮಾನಿಗಳ ಪ್ರೀತಿಗೆ ಸಾಕ್ಷಿ.

ದಿ ರೇವ್ ಅವರ ಅಕಾಲಿಕ ಮರಣ

2009 ಡಿಸೆಂಬರ್ 28ರಂದು 28ರ ಹರೆಯದ ಡ್ರಮ್ಮರ್ ಜೇಮ್ಸ್‌ “ದಿ ರೇವ್” ಸಲ್ಲಿವನ್ ತಮ್ಮ ಮನೆಯಲ್ಲಿ ಮೃತಪಟ್ಟಿರುವುದು ಗಮನಕ್ಕೆ ಬಂತು. ಮರಣೋತ್ತರ ಪರೀಕ್ಷೆ ನಡೆಸಲಾಯಿತಾದರೂ ಸಾವಿನ ರಹಸ್ಯ ಬಗೆ ಹರಿಯಲಿಲ್ಲ. ಅಂತೂ 2010 ಜೂನ್‌ 9ರಂದು ಮರಣದ ಹಿಂದಿನ ರಹಸ್ಯ ಹೊರಬಿತ್ತು. “ಆಕ್ಸಿಕೊಡೋನ್‌, ಆಕ್ಸಿಮಾರ್ಫೋನ್‌, ಡೈಯಾಜೆಪಮ್‌/ನಾರ್ಡಿಯಾಜೆಪಮ್‌ ಹಾಗೂ ಇಥನಾಲ್‌ ಗಳ ಒಟ್ಟಾರೆ ಪರಿಣಾಮದಿಂದಾಗಿ ಪಾಲಿಡ್ರಗ್ ಇಂಟಾಕ್ಸಿನೇಷನ್‌ನಿಂದ” ಸಾವು ಸಂಭವಿಸಿದೆ ಎಂದು ಹೇಳಲಾಯಿತು . ಈ ಕುರಿತು ಒಂದು ಸಾರ್ವಜನಿಕ ಹೇಳಿಕೆ ಬಿಡುಗಡೆ ಮಾಡಿದ ಸಂಗೀತ ತಂಡ, ದಿ ರೇವ್‌ ಅವರ ಸಾವಿಗೆ ಮರುಗಿದ್ದಲ್ಲದೇ, ಅವರ ಕುಟುಂಬದ ಖಾಸಗಿತನವನ್ನು ಗೌರವಿಸುವುದಾಗಿ ಹೇಳಿತು.

It is with great sadness and heavy hearts that we tell you of the passing today of Jimmy “The Rev” Sullivan. Jimmy was not only one of the world's best drummers, but more importantly he was our best friend and brother. Our thoughts and prayers go out to Jimmy's family and we hope that you will respect their privacy during this difficult time.

ಅವೇಂಜ್ಡ್‌ ಸೆವೆನ್‌ಫೋಲ್ಡ್‌ ತಂಡದ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂದೇಶ ಪ್ರಕಟಿಸಿದ ಸಲ್ಲಿವನ್‌ ಕುಟುಂಬ ಇಲ್ಲಿಯವರೆಗೆ ಆತನನ್ನು ಪೊರೆದ, ಪ್ರೋತ್ಸಾಹಿಸಿದ ಆತನ ಅಭಿಮಾನಿ ಬಳಗಕ್ಕೆ ಕೃತಜ್ಞತೆ ಸಲ್ಲಿಸಿತು.

"We would like to thank all of Jimmy's fans for the heartfelt comments that have been posted – it is comforting to know that his genius and antics were appreciated and that he was loved so much. Our hearts are broken – he was much too young to fall. Óg agus saor go deo (forever young and free)"

ಸಲ್ಲಿವಾನ್‌ರ ಸಾವಿನ ಕುರಿತಾಗಿ ಕೇಳಿಬಂದ ಅನುಕಂಪದ ಮಾತುಗಳ ಜೊತೆಗೆ ಬ್ಯಾಂಡ್‌ನ ಮೆನೆಜರ್ ಲ್ಯಾರಿ ಜಾಕೊಬ್ಸನ್‌ ಅವರು ಸಲ್ಲಿವಾನ್ ಹೇಗೆ ಎಲ್ಲರ ಜೊತೆಗೆ ಹೇಗೆ ದಯಾಳುವಾಗಿ ವರ್ತಿಸುತ್ತಿದ್ದರು ಎಂದು ತಿಳಿಸಿದರು. ಜಾಕೋಬ್ಸನ್‌ ಅದೇ ಸಂದರ್ಶನದಲ್ಲಿ

He was expressive. He'd tell you how he felt about you – you didn't wonder because he'd put his arm around you," he said. "He knew how to tell his friends he loved them."

ಸುಮಾರು 50ಕ್ಕೂ ಹೆಚ್ಚು ಸಂಗೀತಗಾರರು ಸಲ್ಲಿವಾನ್‌ನ ಸಾವಿಗೆ ದುಃಖ ವ್ಯಕ್ತಪಡಿಸಿದ್ದರು ಎಂದು ಹೇಳಿದರು.

ಜನವರಿ 5, 2010ರಂದು ಖಾಸಗಿ ದೇಹ ಧಫನ್‌ ಮಾಡುವ ಕಾರ್ಯವನ್ನು ದಿ ರೆವ್‌ಗಾಗಿ ಮಾಡಲಾಯಿತು. ಆ ಖಾಸಗಿ ಕಾರ್ಯಕ್ರಮದಲ್ಲಿ ತಂಡದ ಸ್ನೇಹಿತರಾದ ಲಾಸ್ಟ್‌ ಪ್ರೊಫೆಟ್ಸ್ ಮತ್ತು ಸಿನಿಯರ್, ಬ್ರಿಯಾನ್ ಹ್ಯಾನರ್ ಭಾಗವಹಿಸಿದ್ದರು. ಜನವರಿ 6, 2010ರಲ್ಲಿ ಜೇಮ್ಸ್ ಸಲ್ಲಿವಾನ್‌ರ ದೇಹವು ಕ್ಯಾಲಿಪೋರ್ನಿಯಾದ ಹಂಟಿಂಗ್‌ಟಾನ್ ಬೀಚ್‌ನ ಗುಡ್ ಶೆಫರ್ಡ್ ಸಿಮೆಟ್ರಿಯಲ್ಲಿ ಕೊನೆಯ ಕಾರ್ಯವನ್ನು ನೆರವೇರಿಸಲಾಯಿತು. 2010 ಜನವರಿ 13ರಂದು ಕೆರಾಂಗ್!ನ ಆವೃತ್ತಿಯೊಂದರಲ್ಲಿ ದಿ ರೇವ್‌ ಅವರ ಮರಣದ ಕುರಿತ ನುಡಿಚಿತ್ರವೊಂದು ಪ್ರಕಟಗೊಂಡಿತ್ತು. ಅದರಲ್ಲಿ ದಿ ರೇವ್‌ ಅವರ ಅಭಿಮಾನಿಗಳು ಮಾತ್ರವಲ್ಲದೇ ಬಹಳಷ್ಟು ಸ್ಟಾರ್‌ಗಳು ಕೂಡ ಮಡಿದ ಸಂಗೀತಕಾರನಿಗೆ ಅಂತಿಮ ನಮನ ಸಲ್ಲಿಸಿದ್ದರು. ಅದೇ ಸಂದರ್ಭದಲ್ಲಿ, ಝಾಕಿ ವಿಂಜೆಯಾನ್ಸ್‌ ತನ್ನ ಸಹೋದ್ಯೋಗಿ ಸ್ನೇಹಿತನ ಅಕಾಲಿಕ ಮರಣದ ಕುರಿತು ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತಾ, “ನಾನು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಜಿಮ್ಮಿ ನನ್ನೊಂದಿಗಿರುತ್ತಾನೆ. ಮನೆಯಲ್ಲಿ ಕುಳಿತು ಕಣ್ಣೀರುಗರೆಯುವುದಕ್ಕಿಂತ ಇಂದಿನಿಂದ ನಾನು ಹೊಸ ಬದುಕನ್ನು ಪ್ರಾರಂಭಿಸಲಿದ್ದೇನೆ..ಎಂದೆಂದಿಗೂ” ಎಂದು ಕಂಬನಿ ಮಿಡಿದಿದ್ದರು.

ಪರಿಣಾಮಗಳು

ದಿ ರೇವ್‌ ಅವರ ಮರಣದ ಕುರಿತ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಎಮ್‌.ಶಾಡೋಸ್‌ ಜುಲೈ ತಿಂಗಳಲ್ಲಿಯೇ ಅವೇಂಜ್ಡ್‌ ಸೆವೆನ್‌ಫೋಲ್ಡ್‌ನ ಐದನೇ ಆಲ್ಬಂ ಬಿಡುಗಡೆ ಮಾಡುವುದಾಗಿ ಮತ್ತೊಮ್ಮೆ ಖಚಿತಪಡಿಸಿದ್ದಾರೆ. “ನಾನು ಹೇಳಬೇಕೆಂದಿರುವ ಸಂಗತಿಗಳು ಬಹಳಷ್ಟಿವೆ. ಆದರೆ ಅವೆಲ್ಲವಕ್ಕೂ ಅಭಿವ್ಯಕ್ತಿಯ ನ್ಯಾಯವೊದಗಿಸುವ ಮಟ್ಟಿಗಿನ ಶಬ್ದ ಭಂಡಾರ ನನ್ನಲ್ಲಿಲ್ಲ. ಆದ್ದರಿಂದ, ನನ್ನನ್ನು ನಾನು ಅಭಿವ್ಯಕ್ತಿಗೊಳಿಸಲು ಸಮಯ ಎಂದು ಸಮ್ಮತಿಸುತ್ತದೋ ಅಲ್ಲಿಯವರೆಗೆ ಸಹನೆಯಿಂದ ಕಾಯುತ್ತೇನೆ. ಇನ್ನುಳಿದವರ ಬಗ್ಗೆ ಹೇಳಬೇಕೆಂದರೆ ನಮ್ಮ ಮುಂದಿನ ಹೆಜ್ಜೆಯೇನು ಎಂಬುದರ ಬಗ್ಗೆ ನಮ್ಮೆಲ್ಲರಿಗೂ ಸ್ಪಷ್ಟತೆ ಇದೆ. ಜಿಮ್ಮಿಯೊಂದಿಗಿನ ಬರವಣಿಗೆ ಹಾಗೂ ರೆಕಾರ್ಡಿಂಗ್ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ನಮ್ಮೆಲ್ಲರ ಮುಂದಿನ ಭವಿಷ್ಯ ಹೇಗಿದೆ ಎಂಬುದರ ಕುರಿತು ನಾನು ಯಾವ ರೀತಿಯಿಂದಲೂ ಭರವಸೆ ನೀಡಲು ಸಾಧ್ಯವಿಲ್ಲ. ಅದರ ಕುರಿತು ಈಗ ಯೋಚಿಸುವುದೇ ಯಾತನಾಮಯ. ಆದರೆ, ನಾವು ಕೈಗೆತ್ತಿಕೊಂಡ ಈ ಕೆಲಸವನ್ನು ಅಂದರೆ ರೆಕಾರ್ಡಿಂಗ್ ಅನ್ನು ಪೂರೈಸಬೇಕು ಹಾಗೂ ನಮ್ಮನ್ನು ಅಗಲಿದ ಜಿಮ್ಮಿಗೆ, ಜಿಮ್ಮಿಯ ನೆನಪಿಗೆ ಅರ್ಪಿಸಬೇಕು. ಆತ ಪ್ರತಿ ರಾತ್ರಿ ನನ್ನೊಂದಿಗೆ ಹಾಡುಗಳ ಕುರಿತು ಚರ್ಚಿಸುತ್ತಿದ್ದ ಹಾಗೂ ಹಾಗೆ ಚರ್ಚಿಸುತ್ತಲೇ, “ನೋಡ್ತಾ ಇರು, ಈ ಹಾಡು ಮಾತ್ರ ಇಡೀ ಜಗತ್ತಿನ ದೃಷ್ಟಿಯನ್ನೇ ಬದಲಿಸುತ್ತದೆ” ಎಂದು ಹುಮ್ಮಸ್ಸಿನಿಂದ ನುಡಿಯುತ್ತಿದ್ದ. ಆಗ ನಾನೂ ಒಪ್ಪಿಕೊಳ್ಳುತ್ತಿದ್ದೆ. ಆದರೆ ಆತ ಹೇಳಿದ್ದು ಈ ಅರ್ಥದಲ್ಲಿ ಎಂದು ನನಗೆ ಖಂಡಿತಾ ಗೊತ್ತಿರಲಿಲ್ಲ. ದಯವಿಟ್ಟು ನಮ್ಮ ಕುರಿತು ಸಹನೆ ಇರಲಿ. ನಾವು ಇನ್ನೆಷ್ಟು ಸಂಕಟದಾಯಕ ಸನ್ನಿವೇಶಗಳನ್ನು ಎದುರಿಸಬೇಕೋ ನಮಗಂತೂ ಗೊತ್ತಿಲ್ಲ. ಆದರೆ ಆತನ ನೆನಪಿಗೋಸ್ಕರವಾದರೂ ನಾವಿದನ್ನೂ ಮಾಡಿಯೇ ಮಾಡುತ್ತೇವೆ. ಆ ನಂತರ, ಯಾರಿಗೆ ಗೊತ್ತು?” ಎಂದು ನಿಟ್ಟುಸಿರು ಬಿಟ್ಟಿದ್ದರು. ಹಂಟಿಂಗ್‌ಟನ್‌ ಬೀಚ್‌ ಇಂಡಿಪೆಂಡೆಂಟ್‌ ದಿನಪತ್ರಿಕೆಯೊಂದು ನಡೆಸಿದ ಇತ್ತೀಚಿನ ಸಂದರ್ಶನದಲ್ಲಿ, ಜಿಮ್ಮಿ ಸಲ್ಲಿವನ್‌ ನ ಪೋಷಕರಾದ ಬಾರ್ಬರಾ ಹಾಗೂ ಜೋಸೆಫ್‌ ಅವೇಂಜ್ಡ್‌ ಸೆವೆನ್‌ಫೊಲ್ಡ್‌‌ನ ಈ ಹೊಸ ಆಲ್ಬಂ ಕುರಿತು ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದರು. “ಆತನ ಕುರಿತು ಅತ್ಯಂತ ಮಹತ್ವದ ಸಂಗತಿ ಎಂದರೆ, ಅವೇಂಜ್ಡ್‌ ಸೆವೆನ್‌ಫೋಲ್ಡ್‌‌‌ಗೆ ಹಾಡುಗಳನ್ನು ಬರೆದು ಪೂರೈಸಿದ್ದ-ಅದನ್ನು ಆತ ತನ್ನ ಹಲವು ಶ್ರೇಷ್ಠ ಕೃತಿಗಳಲ್ಲಿ ಇದೂ ಒಂದು ಎಂದೂ ಹೇಳಿಕೊಂಡಿದ್ದ. ಹಾಡು ಬರೆದ ನಂತರ ಆತ ತನ್ನ ಹಾಡುಗಳ, ಪಿಯಾನೋ ಹಾಗೂ ಡ್ರಮ್‌ನ ಟ್ರ್ಯಾಕ್‌ಗಳನ್ನು ರೆಕಾರ್ಡ್‌ ಮಾಡಿಕೊಳ್ಳುತ್ತಿದ್ದ. ಅದೆಲ್ಲದನ್ನೂ ಮಾಡಿದ ಬಳಿಕ ಅವುಗಳನ್ನು ನನ್ನೆದುರು ನುಡಿಸುವಾಗ ನಂತರ ಸೇರಿಸಬಹುದಾದ ಗಿಟಾರ್‌‌‍ನ ಭಾಗಗಳನ್ನೂ ನುಡಿಸುತ್ತಿದ್ದ. ಆತನ ಹಾಡುಗಳನ್ನು ಹಾಗೂ ಸಂಗೀತವನ್ನು ನಾನೆಷ್ಟು ಇಷ್ಟ ಪಡುತ್ತೇನೆ, ಗೌರವಿಸುತ್ತೇನೆ ಎಂಬುದನ್ನು ಆತನೆದುರಿಗೇ ಹೇಳಿದ್ದೆ. ನಂತರ ಮಾತನಾಡಿದ ಬಾರ್ಬರಾ, “ಜಿಮ್ಮಿ ಕೆಲವೊಂದು ಅತ್ಯುತ್ತಮ ಹಾಡುಗಳನ್ನು ಬರೆದಿದ್ದ. ಆತನ ಬಗ್ಗೆ ನನ್ನಲ್ಲಿ ಅಪರಿಮಿತ ಗೌರವವಿದೆ ಹಾಗೂ ಇದು ಬ್ಯಾಂಡ್‌ ಮಟ್ಟಿಗೆ ಅತ್ಯಂತ ಕಷ್ಟವಾಗಬಹುದಾದರೂ ಆತನ ಹಾಡುಗಳನ್ನು ಮುಂಚಿತವಾಗಿಯೇ ರೆಕಾರ್ಡ್‌ ಮಾಡಿಕೊಂಡು ತುಂಬಾ ಒಳ್ಳೆಯ ಕೆಲಸ ಮಾಡಿತು. ಈ ಎಲ್ಲಾ “ಜಿಮ್ಮಿ”ಯ ಹಾಡುಗಳನ್ನು ಹೊರತುಪಡಿಸಿ ಯಾವ ರೆಕಾರ್ಡಿಂಗ್‌ ಅನ್ನೂ ಕೇಳಲು ನನಗೆ ಸಾಧ್ಯವಿಲ್ಲ ಎಂಬುದನ್ನು ಬೇರೆ ಹೊಸದಾಗಿ ಹೇಳಬೇಕಿಲ್ಲ. ಆತ ನಮ್ಮ ಪಾಲಿಗೆ ದೊರೆತ ವರ” ಎಂದಿದ್ದಾರೆ. ಅವರ ಹೊಸ ಆಲ್ಬಂ ಅನ್ನು ದಿ ರೇವ್‌ಗೆ ಸಮರ್ಪಿಸಲು ಚಿಂತನೆ ನಡೆಸುತ್ತಿದ್ದಾರೆ. 2010 ಫೆಬ್ರುವರಿ 17ರಂದು ಅವೇಂಜ್ಡ್‌ ಸೆವೆನ್‌ಫೋಲ್ಡ್‌ ತಾವು ದ ರೇವ್‌ ಅವರ ಸ್ಥಾನ ತುಂಬಿದ್ದ ಡ್ರೀಮ್‌ ಥಿಯೇಟರ್ ಡ್ರಮ್‌ ವಾದಕ ಮೈಕ್‌ ಪೊರ್ಟನೊಯ್‌ ಅವರೊಂದಿಗೆ ಸ್ಟುಡೀಯೋವನ್ನು ಪ್ರವೇಶಿಸಿರುವುದಾಗಿ ಹೇಳಿಕೊಂಡರು. “ನಮ್ಮ ಹೃದಯದ ತುಂಬಾ ಜಿಮ್ಮಿಯನ್ನು ತುಂಬಿಕೊಂಡು ನಮ್ಮ ಮುಂದಿನ ರೆಕಾರ್ಡಿಂಗ್‌ಗಳಿಗೆ ಅಧಿಕೃತ ಚಾಲನೆ ನೀಡಿದ್ದೇವೆ ಎಂಬುದನ್ನು ನಮ್ಮ ಅಭಿಮಾನಿಗಳ ಗಮನಕ್ಕೆ ತರಲು ಇಚ್ಛಿಸುತ್ತೇವೆ. ಜಿಮ್ಮಿ ಈ ಪ್ರಪಂಚವನ್ನು ಅತ್ಯದ್ಭುತ ಕೊಡುಗೆಯ ರೂಪದಲ್ಲಿ ನೀಡಿ ನಿರ್ಗಮಿಸಿದ್ದಾನೆ. ಆ ಕೊಡುಗೆಯನ್ನು ನಮ್ಮ ಅಭಿಮಾನಿಗಳಿಗೆ ಹಸ್ತಾಂತರಿಸುವುದು ಈಗ ನಮ್ಮ ಹೊಣೆ. ಜಿಮ್ಮಿಯ ಹೃದಯಕ್ಕೆ ಹತ್ತಿರವಾಗಿದ್ದ ಮೈಕ್‌ ಪೊರ್ಟನೊಯ್‌ ಅವರಿಗೆ ಜಿಮ್ಮಿಯ ಸ್ಥಾನದಲ್ಲಿ ಮುಂದಿನ ಡ್ರಮ್‌ ವಾದನದ ಹೊಣೆ ಹೊತ್ತುಕೊಳ್ಳುವಂತೆ ಕೇಳಿಕೊಂಡಿದ್ದೇವೆ. ಇದನ್ನು ತನ್ನ ಪಾಲಿಗೆ ಒದಗಿದ ಗೌರವ ಎಂದುಕೊಂಡು ಮೈಕ್‌ ಅವರೂ ಮರುಮಾತನಾಡದೇ ಜವಾಬ್ದಾರಿಗೆ ಹೆಗಲು ನೀಡಿದ್ದಾರೆ. ಇದನ್ನೇ ಜಿಮ್ಮೀ ಕೂಡ ಬಯಸಿದ್ದ. ಅತ್ಯಂತ ಪ್ರತಿಭಾಶಾಲಿ ಹಾಗೂ ಜನಪ್ರಿಯ ಡ್ರಮ್‌ ವಾದಕ ಮೈಕ್‌‌ನಂಥ ಪ್ರತಿಭೆ ಜಿಮ್ಮಿಯ ಸಾಮರ್ಥ್ಯದ ಕುರಿತು ಅಷ್ಟೊಂದು ಆರಾಧನಾಭಾವನೆ ಹಾಗೂ ಗೌರವ ಹೊಂದಿರುವುದನ್ನು ನೋಡಿದರೆ ಮನಸ್ಸಿಗೆ ನಿರಾಳ ಎನಿಸುತ್ತದೆ. ನಮ್ಮೆಲ್ಲರ ಆ ಸಹೋದರ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಆತನ ಸಹಾಯದಿಂದ ಒಡಮೂಡಿದ ಸಂಗೀತದ ಮೂಲಕ ಆತನ ಸತ್ವ ನಮ್ಮ ಹೃದಯದಲ್ಲಿ ಚಿರಕಾಲ ನೆಲೆಸಿರುತ್ತದೆ. ಯಾವುದೇ ಯಶಸ್ಸಿಗಿಂತ ಮುಂಚಿತವಾಗಿ ಆತ ಒಂದು ದಂತಕತೆ ಅಥವಾ, ಅದನ್ನು ಹೀಗೂ ಹೇಳಬಹುದು, ಅದೆಲ್ಲವನ್ನೂ ಆತನ ಅಭಿಮಾನಗಳ ಮಡಿಲಿಗೆ ಹಾಕಲು, ವಿಶೇಷವಾಗಿ ಜಿಮ್ಮಿಯ ನೆನಪಿಗೆ ಅರ್ಪಿಸಲು ನಾವೂ ಉತ್ಸುಕರಾಗಿದ್ದೇವೆ” ಎಂದು ಮನಬಿಚ್ಚಿ ನುಡಿದಿದ್ದರು ಅವೇಂಜ್ಡ್‌ ಸೆವೆನ್‌ಫೋಲ್ಡ್‌ ತಂಡದವರು. ಈ ಹೊಸ ಆಲ್ಬಂ ಜೊತೆಯೇ ಪ್ರವಾಸ ಕೈಗೊಳ್ಳಲು ತಂಡ ಸನ್ನದ್ಧವಾಗಿದೆ. ಎಮ್‌.ಶಾಡೋಸ್‌, “ಈ ಪ್ರವಾಸ ಸರಣಿಯ ಬಳಿಕ ಏನಾಗುವುದು ಎಂಬುದರ ಕುರಿತು ನಮಗ್ಯಾರಿಗೂ ಖಚಿತತೆ ಇಲ್ಲ. ಪ್ರತಿಯೊಬ್ಬ ಮಗುವಿಗೂ ಈ ಹಾಡುಗಳನ್ನು ಕೇಳಿಸುವುದಷ್ಟೇ ನಮ್ಮ ಮುಂದಿರುವ ಗುರಿ. ಏಕೆಂದರೆ, ಅವರೆಲ್ಲರ ಮನದಲ್ಲೂ ರೇವ್‌ ಚಿರಕಾಲ ಬಾಳಬೇಕು ಎಂಬುದೇ ನಮ್ಮ ಆಸೆ” ಎಂದಿದ್ದರು. ಅವೇಂಜ್ಡ್‌ ಸೆವೆನ್‌ಫೋಲ್ಡ್‌‌ನ ಅಂತಿಮ ಆಲ್ಬಂ ಹಾಗೂ ಸಲ್ಲಿವನ್‌ನ ಬರವಣಿಗೆಯಾದ ನೈಟ್‌ಮೇರ್ ಅನ್ನೂ ಹೊಂದಿದ ಆಲ್ಬಂ ಅನ್ನು ವಾರ್ನರ್ ಸಹೋದರರು ಜುಲೈ 27ರಂದು ಬಿಡುಗಡೆ ಮಾಡಿದರು. ( ಡ್ರೀಮ್‌ ಥಿಯೇಟರ್ ಡ್ರಮ್‌ ವಾದಕ ಮೈಕ್‌ ಪೊಟೊನಾಯ್ ಸಲ್ಲಿವನ್‌ ಬರೆದ ಹಾಡುಗಳಿಗೆ ಡ್ರಮ್‌ ನುಡಿಸಿದ್ದಾರೆ. ಹಾಗೂ ತಂಡದೊಂದಿಗೆ ಪ್ರವಾಸಕ್ಕೂ ಹೋಗಲಿದ್ದಾರೆ.) ನೈಟ್‌ಮೇರ್ ಹಾಡುಗಳು ದೊಡ್ಡ ಪ್ರಮಾಣದಲ್ಲಿಯೇ ಮಾರಾಟವಾಗುತ್ತಿವೆ. ಬಿಲ್‌ಬೋರ್ಡ್ ‌200ನಲ್ಲಿ ಮೊದಲ ಸ್ಥಾನ ಗಳಿಸಿದೆ. ಇವೆಲ್ಲವಕ್ಕೂ ಸಾಕ್ಷಿ ಎಂಬಂತೆ, 163,000 ಘಟಕಗಳಷ್ಟು ಮೊದಲ ವಾರದಲ್ಲಿಯೇ ಮಾರಾಟವಾಗಿವೆ.

ಸಂಗೀತದ ಗುಣಲಕ್ಷಣಗಳು

ಶೈಲಿ

ಅವೇಂಜ್ಡ್‌ ಸೆವೆನ್‌ಫೋಲ್ಡ್‌ನ ಬತ್ತಳಿಕೆಯಲ್ಲಿರುವ ಸಂಗೀತ ಹಲವು ಪ್ರಕಾರಗಳನ್ನು ಒಳಗೊಂಡಿರುವಂಥದ್ದು. ತಂಡದ ಹತ್ತು ವರ್ಷಗಳ ಅನುಭವದ ಮೂಸೆಯಲ್ಲಿ ಫಲವತ್ತಾಗಿ ಬೆಳೆದಿರುವಂಥದ್ದು. ಪ್ರಾರಂಭದಲ್ಲಿ, ತಂಡದ ಚೊಚ್ಚಲ ಆಲ್ಬಂ ಸೌಂಡಿಂಗ್ ದಿ ಸೆವೆಂಥ್‌ ಟ್ರಂಪೆಟ್‌ ಮೆಟಕೋರ್ ಸದ್ದಿನಿಂದಲೇ ಮೂಡಿಬಂದಿತ್ತು. ಹಾಗಿದ್ದೂ ಈ ಪ್ರಕಾರಕ್ಕೆ ಹಲವಾರು ಬಗೆಯ ತಿರುವುಗಳಿವೆ. ಇಲ್ಲಿ ಗಮನಿಸಬಹುದಾದ ಉದಾಹರಣೆಗಳೆಂದರೆ, ಪಂಕ್‌ ಶೈಲಿಯಲ್ಲಿ ಮೈದಳೆದ “ಸ್ಟ್ರೀಟ್ಸ್‌” ಹಾಗೂ ಪಿಯಾನೋ ಪ್ರಧಾನ ಲಾವಣಿ “ವಾರ್ಮನೆಸ್‌ ಆನ್ ದಿ ಸೋಲ್‌”. ವೇಕಿಂಗ್ ದಿ ಫಾಲನ್‌‌ ನಲ್ಲಿ ತಂಡ ಸಮಕಾಲೀನ ಮೆಟಾಕ್ಲೋರ್ ಶೈಲಿಯನ್ನು ಮತ್ತೊಮ್ಮೆ ಪ್ರದರ್ಶಿಸಿತು. ಆದರೆ, ಮೊದಲಿಗಿಂತಲೂ ಹೆಚ್ಚು ಸ್ಪಷ್ಟ ಹಾಡುಗಳನ್ನು ಮತ್ತು ಹೆಚ್ಚು ಪ್ರಬುದ್ಧ, ಸಂಕೀರ್ಣ ಸಂಗೀತದ ಆಯಾಮಗಳನ್ನು ಈ ಆಲ್ಬಂನಲ್ಲಿ ಶೋಧಿಸುವ ಪ್ರಯತ್ನ ಮಾಡಿತು. ತಂಡದ ಆಲ್‌ ಎಕ್ಸೆಸ್‌ ಡಿ.ವಿ.ಡಿಯಲ್ಲಿ ನಿರ್ಮಾಪಕ ಆಂಡ್ರ್ಯೂ ಮುಡ್‌ರಾಕ್‌ ಈ ಮೀರುವಿಕೆಯ ಕುರಿತು ಮಾತನಾಡುತ್ತಾರೆ, “ಸೌಂಡಿಂಗ್ ದಿ ಸವೆಂಥ್ ಟ್ರಂಫೆಟ್ ‌” ನಂತರ ತಂಡವನ್ನು ನಾನು ಭೇಟಿ ಮಾಡಿದೆ. ಆಗ ಅವರು ತಮ್ಮ ವೇಕಿಂಗ್ ದ ಫಾಲನ್‌‌ ನನ್ನು ಆಲ್ಬಂನಿಂದ ಹೊರಗಿಟ್ಟಿದ್ದರು. ಆ ರೆಕಾರ್ಡ್‌ ಪೂರ್ತಿ ಕಿರುಚುವಿಕೆಯೇ ಇದೆ. ನಾವು ಮಾಡಬೇಕೆಂದಿರುವ ಆಲ್ಬಂ ಅರ್ಧ ಹಾಡು ಹಾಗೂ ಇನ್ನರ್ಧ ಕಿರುಚುವಿಕೆಯನ್ನು ಪ್ರಧಾನವಾಗಿಟ್ಟುಕೊಂಡಿರುತ್ತದೆ. ಇನ್ನು ಮುಂದೆ ಕಿರುಚಾಡಲು, ಕೂಗಲು ನನಗೆ ಇಷ್ಟವಿಲ್ಲ. ಆ ರೆಕಾರ್ಡ್‌ ನಂತರ ಕೇವಲ ಹಾಡುಗಳೇ ಇರುತ್ತವೆ ಎಂದು ಎಮ್‌.ಶಾಡೋಸ್‌ ನನಗೆ ಹೇಳಿದ್ದರು” ಎಂದಿದ್ದರು ಆಂಡ್ರ್ಯೂ ಮುಡ್‌ರಾಕ್‌. ಅವೇಂಜ್ಡ್‌ ಸೆವೆನ್‌ಫೋಲ್ಡ್‌‌‌ನ ಮೂರನೇ ಆಲ್ಬಂ, ಸಿಟಿ ಆಫ್‌ ಈವಿಲ್‌ ನಲ್ಲಿ, ತಂಡ ತನ್ನ ಎಂದಿನ ಮೆಟಾಕ್ಲೋರ್ ಪ್ರಕಾರವನ್ನು ಕೈಬಿಟ್ಟು ಇನ್ನಷ್ಟು ಹಾರ್ಡ್‌ ಕೋರ್ ರಾಕ್‌ ಶೈಲಿಯನ್ನು ರೂಢಿಸಿಕೊಳ್ಳತೊಡಗಿತು. ಅವೆಂಜ್ಡ್ ಸೆವೆನ್‌ಫೋಲ್ಡ್‌ನ ಸೆಲ್ಫ್‌-ಟೈಟಲ್ಡ್‌ ಆಲ್ಬಂ, ಮತ್ತೊಮ್ಮೆ, ಹಲವಾರು ಬದಲಾವಣೆಗಳನ್ನು, ತಿರುವುಗಳನ್ನು ಒಳಗೊಂಡಿತ್ತು. ಇದರಿಂದ ಪ್ರಕಾರಗಳನ್ನು ಹಾಗೂ ಶೈಲಿಗಳಿಂದ ಆಲ್ಬಂನ ಮುಖ್ಯ ಹಾರ್ಡ್‌ ರಾಕ್‌ ಶೈಲಿ ಹಾಗೂ ಹೆವಿ ಮೆಟಲ್ ಹಾಡುಗಳ ಏಕತಾನತೆಯನ್ನು ಮೀರಲು ಸಾಧ್ಯವಾಗಿತ್ತು. “ಡಿಯರ್ ಗಾಡ್‌” ಗ್ರಾಮ್ಯಶೈಲಿಯನ್ನು ಒಳಗೊಂಡಿತ್ತು ಹಾಗೂ ಬ್ರಾಡ್‌ವೇ ಶೋ ರಾಗಗಳ ಪ್ರಭಾವದ ಮಡುವಿನಲ್ಲಿಯೇ ಮುಳುಗೇಳುವ “ಎ ಲಿಟ್ಲ್‌ ಪೀಸ್‌ ಆಫ್‌ ಹೆವನ್‌”ನಲ್ಲಿ ಬಾಸ್‌ ಉಪಕರಣಗಳನ್ನು ಹಾಗೂ ಆರ್ಕೇಷ್ಟ್ರಾಗಳನ್ನು ಮುಂಚೂಣಿಯ ಹಾಗೂ ಲಹರಿಯ ಗಿಟಾರ್ ಬದಲು ಬಳಸಲಾಗಿತ್ತು. ಅವರ ಮೊದಲ ಆಲ್ಬಂಗೆ ಹೋಲಿಸಿದರೆ ಈಗ ತಂಡದಲ್ಲಿ ಗಮನಾರ್ಹ ಬದಲಾವಣೆ ಬಂದಿತ್ತು. ಆ ಸಂದರ್ಭದಲ್ಲಿ ಅವರಿಗೆ “ಹೆವಿ ಬ್ಯಾಂಡ್‌” ಎಂಬ ಹಣೆಪಟ್ಟಿ ಹಚ್ಚಲಾಗಿತ್ತು. ಒಮ್ಮೆ ಮೆಟಾಕ್ಲೋರ್‌ನಿಂದ ನಿರೀಕ್ಷಿಸಬಹುದಾಗಿದ್ದ ಕಿರುಚು ಧ್ವನಿಯ, ಗ್ರೋವಲ್‌ ಶೈಲಿಯ ಹಾಡುಗಾರಿಕೆ, ಸ್ಫೋಟಕ ಧ್ವನಿಯ ಗಿಟಾರ್ ರಿಫ್‌ಗಳು ಮತ್ತು ಬ್ರೆಕ್‌ಡೌನ್‌‍ ಇವೆಲ್ಲವೂ ಇಲ್ಲಿ ಲಭ್ಯವಿದ್ದವು.

ಪ್ರಭಾವಗಳು

ಅವೇಂಜ್ಡ್‌ ಸೆವೆನ್‌ಫೋಲ್ಡ್ ತಂಡ ತನ್ನ ಸಂಗೀತ ಪ್ರೇರಣೆಯನ್ನು ಹಲವಾರು ತಂಡಗಳಿಂದ ಪಡೆದುಕೊಂಡಿದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿತ್ತು. ಅವರ ಮೇಲೆ ಪ್ರಭಾವ ಬೀರಿದ ಸಂಗೀತ ತಂಡಗಳ ಪಟ್ಟಿಯಲ್ಲಿ, ಬ್ಯಾಡ್ ರಿಲಿಜನ್‌, ಗನ್ಸ್ ಎನ್‌’ ರೋಸಸ್‌, ಐರನ್ ಮೈಡನ್, ಪಂಥೇರಾ, ಡ್ರೀಮ್ ಥಿಯೇಟರ್, ಮೆಟಾಲಿಕಾ, NOFX , ಅಲಿಸ್ ಇನ್ ಚೈನ್ಸ್, ಬ್ಲ್ಯಾಕ್ ಫ್ಲ್ಯಾಗ್, ಕರೋಶನ್‌ ಆಫ್ ಕನ್‌ಫರ್ಮಿಟಿ, ದ ಮಿಸ್‌ಫಿಟ್ಸ್‌, ಸ್ಲೇಯರ್, ದ ವಾಂಡಲ್ಸ್, ರೇಜ್ ಅಗೈನೆಸ್ಟ್ ದ ಮಿಷಿನ್, ಕಾರ್ನ್‌, ಡೆಫ್‌ಟೋನ್ಸ್‌ ಹಾಗೂ AFI ಮುಂತಾದ ಪ್ರಖ್ಯಾತ ಸಂಗೀತ ತಂಡಗಳಿವೆ [೩].

ತಂಡದ ಹೆಸರು ಹಾಗೂ ಸಾಹಿತ್ಯ ವಸ್ತು

ಈ ಸಂಗೀತ ತಂಡದ ಹೆಸರಿನ ಜಾಡು ಹಿಡಿದು ಹೊರಟರೆ ಅದು ನಮ್ಮನ್ನು ಬೈಬಲ್‌ನ ಬುಕ್‌ ಆಫ್‌ ಜೆನೆಸಿಸ್‌ಗೆ ಕರೆದೊಯ್ಯುತ್ತದೆ. ಅದರಲ್ಲೂ ಸಹೋದರನನ್ನು ಕೊಂದ ತಪ್ಪಿಗೆ ಅಜೀವ ನಿಷೇಧ ಅನುಭವಿಸುವ ಕೇನ್‌ನ ಪ್ರಸ್ತಾಪವಾಗುವ 4:24 ಇಲ್ಲಿ ಮುಖ್ಯ. ಶಿಕ್ಷೆಯ ಅವಧಿ ಮುಗಿಯುವ ಮೊದಲೇ ಯಾರಾದರೂ ಆತನನ್ನುಕೊಲೆ ಮಾಡಬಹುದು ಎಂಬ ಕಾರಣಕ್ಕೆ ದೇವರು ಆತನ ಮೇಲೆ ಗುರುತು ಮಾಡುತ್ತಾನೆ. ಅದು ಆತನ ಪಾಪದ ಗುರುತು. ಯಾರು ಕೇನ್‌ನನ್ನು ಕೊಲೆಗೈಯುತ್ತಾರೋ ಅವರು “ಏಳು ಬಾರಿ ದೇವರ ದ್ವೇಷ”ಕ್ಕೆ ಗುರಿಯಾಗಬೇಕಾಗಿತ್ತು.[original research?] “A7X” ಎಂಬ ಸಂಕ್ಷಿಪ್ತ ರೂಪವನ್ನ ತಮ್ಮ ಸಂಗೀತ ತಂಡದ ಹೆಸರನ್ನಾಗಿ ಬಳಸಿಕೊಳ್ಳಬಹುದು ಎಂಬುದು ತಂಡದ ಝಾಕಿ ವೆಂಜೆಯಾನ್ಸ್ ಅವರ ಸಲಹೆಯಾಗಿತ್ತು. ಅವೇಂಜ್ಡ್‌ ಸೆವೆನ್‌ಫೋಲ್ಡ್ ಆಲ್ಬಂನಲ್ಲಿ ಬರುವ ಹಾಡು “ಚಾಪ್ಟರ್ ಫೋರ್” ಜೆನೆಸಿಸ್‌ನ ನಾಲ್ಕನೇ ಅಧ್ಯಾಯವನ್ನು ಪ್ರಸ್ತಾಪಿಸುತ್ತದೆ. ಇದೇ ಅಧ್ಯಾಯದಲ್ಲಿಯೇ ಅಬೆಲ್‌ ಹಾಗೂ ಕೇನ್‌ ಸಹೋದರರ ದ್ವೇಷದ ಕಥೆ ಬರುತ್ತದೆ. ಆ ಹಾಡಿನ ಕೇಂದ್ರ ವಸ್ತುವು ಕೂಡ ಅದೇ ಕಥೆಯನ್ನೇ ಹೋಲುವಂತಿದೆ. “ಬೀಸ್ಟ್‌ ಅಂಡ್ ದ ಹಾರ್ಲೊಟ್” ಹಾಡು ಕೂಡ ಬೈಬಲ್‌ನಿಂದ ಪ್ರೇರೇಪಣೆ ಪಡೆದಿರುವಂಥದ್ದು. ಪ್ರಥಮ ವ್ಯಕ್ತಿ ನಿರೂಪಣೆಯಲ್ಲಿರುವ ಬುಕ್‌ ಆಫ್‌ ರಿವಿಲೇಷನ್‌ ಮೂಲದ ಈ ಕಥೆ ಬ್ಯಾಬಿಲೋನ್‌ ದ ಗ್ರೇಟ್‌ನಲ್ಲಿನ ಶಿಕ್ಷೆಗಳು ಹಾಗೂ ಹುಸಿ ಧರ್ಮವನ್ನು ಕುರಿತಾದಂಥದ್ದು. “ದ ವಿಕೆಡ್‌ ಎಂಡ್‌” ಹಾಡಿನಲ್ಲಿಯೂ ಬೈಬಲ್‌ನ ಪ್ರಸ್ತಾಪವಾಗುತ್ತದೆ. ಈ ಹಾಡಿನಲ್ಲಿ, “ಸೇಬಿನ ಮೇಲಿನ ಧೂಳು ಒರೆಸು, ಹಣ್ಣಿನ ಪ್ರತಿಯೊಂದು ಚೂರನ್ನೂ ಸವಿ, ಆಗ ಮಾತ್ರ ಆಡಮ್‌ ಎಷ್ಟು ಸರಿ ಎನ್ನುವುದು ನಿಮಗೆ ತಿಳಿಯುತ್ತದೆ” ಎಂಬ ಸಾಲು ಹಲವಾರು ಬಾರಿ ಬಂದಿದೆ. ಇದು ಪಾಪಭರಿತ, ನಿಷೇಧಿತ ಹಣ್ಣನ್ನು ಸವಿಯುತ್ತಿರುವ ಈವ್‌ಳನ್ನು ಕುರಿತು ಬರೆದದ್ದು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಸಂಗೀತ ತಂಡದ ಬಹುತೇಕ ಹಾಡುಗಳು ಹಾಗೂ ಸದಸ್ಯರ ಹೆಸರುಗಳು ಮೇಲ್ನೋಟಕ್ಕೆ ಧಾರ್ಮಿಕವೆಂಬಂತೆ ಕಂಡು ಬಂದರೂ, ಶಾಡೋಸ್‌ ಸಂದರ್ಶನವೊಂದರಲ್ಲಿ ಹೇಳಿದಂತೆ, ಅವರದ್ದು ಧಾರ್ಮಿಕ ತಂಡವಲ್ಲ. “ನಮ್ಮ ಸಾಹಿತ್ಯವನ್ನು ಓದಿದ ಹಾಗೂ ನಮ್ಮ ಕುರಿತು ತಿಳಿದ ಪ್ರತಿಯೊಬ್ಬರಿಗೂ ನಾವು ಯಾವ ಧರ್ಮವನ್ನೂ ಎತ್ತಿ ಹಿಡಿಯುತ್ತಿಲ್ಲ ಎಂಬುದು ತಿಳಿಯುತ್ತದೆ” ಎನ್ನುವ ಶಾಡೋಸ್‌, “ನಮ್ಮ ತಂಡದ ಕುರಿತ ಸಂಗತಿಗಳಲ್ಲಿ ನಾನು ತುಂಬಾ ಮೆಚ್ಚಿಕೊಳ್ಳುವುದು ಹಾಗೂ ಪ್ರೀತಿಸುವುದು ಏನೆಂದರೆ ನಮ್ಮ ತಂಡ ಇಂದಿಗೂ ಯಾವುದೇ ಧಾರ್ಮಿಕ ಹಾಗೂ ರಾಜಕೀಯ ಸಿದ್ಧಾಂತಗಳನ್ನು ಅಭಿಮಾನಿಗಳ ಮೇಲೆ ಹೇರಿಲ್ಲ. ಸಂಗೀತ ಏನಿದ್ದರೂ ಮನೋರಂಜನೆಯ ಹಾದಿ. ಹಾಗೆಯೇ ಕೆಲವೊಮ್ಮೆ ಚಿಂತನೆಗೆ ಹಚ್ಚುವುದೂ ಇದೆ. ಆದರೆ ನಾವೆಂದೂ ಉದ್ದೇಶಪೂರ್ವಕವಾಗಿ ಅಂಥ ಯತ್ನಕ್ಕೆ ಕೈ ಹಾಕಿಲ್ಲ. ಯಾರ ಹೆಗಲ ಮೇಲೂ ಸಿದ್ಧಾಂತದ ಭಾರ ಹೊರಿಸಿಲ್ಲ. ನನ್ನ ಪ್ರಕಾರ ಇಂದಿನ ಬಹುತೇಕ ಸಂಗೀತ ತಂಡಗಳು ಇದೇ ಕೆಲಸ ಮಾಡುತ್ತವೆ” ಎನ್ನುತ್ತಾರೆ. ಮೇಲ್ನೋಟಕ್ಕೆ ರಾಜಕೀಯ ಪ್ರೇರಿತ ಎಂಬಂತೆ ಕಂಡುಬರುವ “ಕ್ರಿಟಿಕಲ್ ಅಕ್ಲೈಮ್‌”, “ಗನ್ಸ್‌ ಲಿಂಗರ್” ಹಾಗೂ “ಬ್ಲೈಂಡೆಡ್ ಇನ್ ಚೈನ್ಸ್” ರೀತಿಯ ಹಾಡುಗಳೂ ಈ ಸಂಗೀತ ತಂಡದ ಬತ್ತಳಿಕೆಯಲ್ಲಿವೆ. ಸಿಟಿ ಆಫ್‌ ಈವಿಲ್‌ ಆಲ್ಬಂನ “ಬಿಟ್ರೇಯ್ಡ್” ಹಾಡನ್ನು “ಡಿಮೆಬಾಗ್ ಡಾರೆಲ್‌‌ನ ಮರಣ”ದ ಕುರಿತು ಬರೆದಿರುವಂಥದ್ದು.

ಡೆತ್‌ಬ್ಯಾಟ್‌

ಈ ಸಂಗೀತ ತಂಡ ಹೊಂದಿರುವ ಚಿಹ್ನೆಯನ್ನು “ಡೆತ್‌ಬ್ಯಾಟ್‌” ಎಂದೇ ಕರೆಯಲಾಗುತ್ತದೆ. ಅವೇಂಜ್ಡ್‌ ಸೆವೆನ್‌ಫೋಲ್ಡ್‌ ತಂಡದ ಹೈಸ್ಕೂಲು ಸ್ನೇಹಿತ ಮಿಖಾ ಮಾಂಟೇಜ್‌ ವಿನ್ಯಾಸಿಸಿದ್ದಾರೆ ಎನ್ನಲಾಗುವ ಈ ಚಿಹ್ನೆ ಬ್ಯಾಂಡ್‌ನ ಮೊದಲ ಡಿವಿಡಿ, ಆಲ್‌ ಎಕ್ಸೆಸ್‌‌ ನಲ್ಲಿ ಕಾಣಿಸಿಕೊಂಡಿದೆ. ಆಲ್ಬಂನ ಪ್ರತಿಯೊಂದು ಕವರ್ ಮೇಲೂ ಈ ಚಿಹ್ನೆ ರಾರಾಜಿಸಿದೆ. ಅದೆಲ್ಲವನ್ನೂ ತಂಡದ ಗೆಳೆಯ ಕ್ಯಾಮೆರಾನ್ ರಕಮ್‌ ರಚಿಸಿದ್ದು. ಪ್ರಾರಂಭದಲ್ಲಿ ಬಾವಲಿಗಳ ರೆಕ್ಕೆಗಳನ್ನು ಹೊಂದಿದ ಬುರುಡೆಯಾಗಿದ್ದ ಡೆತ್‌ಬ್ಯಾಟ್‌ ಚಿಹ್ನೆಯನ್ನು ನಂತರ ಬಾವಲಿಗಳ ರೆಕ್ಕೆ ಹೊಂದಿದ ಪೂರ್ತಿ ಮನುಷ್ಯಾಕೃತಿಯ ಅಸ್ತಿಪಂಜರವಾಗಿ ಸುಧಾರಣೆಗೊಂಡಿತು. ಅದನ್ನು ಸಿಟಿ ಆಫ್‌ ಈವಿಲ್‌ ಆಲ್ಬಂನ ಕವರ್ ಮೇಲೆ ಬಳಸಿಕೊಳ್ಳಲಾಗಿದೆ. ಸೌಂಡಿಂಗ್ ದ ಸೆವೆಂಥ್ ಟ್ರಂಫೆಟ್ ಕವರ್ ಮೇಲೆ ಇಬ್ಬರು ವ್ಯಕ್ತಿಗಳ ಆಕೃತಿ ಗೋಚರಿಸುತ್ತದೆ (ಪ್ರಾಯಶಃ ಅವರು ಕೇನ್‌ ಹಾಗೂ ಎಬೆಲ್‌ ಇರಬಹುದು). ಹಾಗೆಯೇ ಅದರ ಕೆಳಗೆ ಗಂಧರ್ವ ಕನ್ಯೆಯಂತೆ ಕಂಡುಬರುವ ಡೆತ್‌ಬ್ಯಾಟ್‌ ಕಂಡುಬರುತ್ತದೆ. ಹಾಗೆಯೇ “ಬ್ಯಾಟ್ ಕಂಟ್ರಿ”, “ವಾರ್ಮ್‌ನೆಸ್ ಆನ್ ದ ಸೋಲ್” ಹಾಗೂ “ಕ್ರಿಟಿಕಲ್ ಅಕ್ಲೈಮ್‌” ರೀತಿಯ ಹಲವಾರು ಏಕಗೀತೆಗಳ ಕವರ್‌ಗಳ ಮೇಲೂ ಡೆತ್‌ಬ್ಯಾಟ್‌ ಚಿಹ್ನೆಯನ್ನು ಯಥೇಚ್ಛವಾಗಿ ಬಳಸಿಕೊಳ್ಳಲಾಗಿದೆ.

ವಾದ್ಯ-ವೃಂದದ ಸದಸ್ಯರು

ಬ್ಯಾಂಡ್ ಸದಸ್ಯರು ಕೆಲವೊಮ್ಮೆ ತಾವು ಬಳಸುತ್ತಿರುವ ಉಪಕರಣವಲ್ಲದೆ ಬೇರೆಯದನ್ನು ನುಡಿಸುತ್ತಾರೆ. ಅವೆಂದರೆ

    ಸ್ಟುಡಿಯೊ ಸದಸ್ಯರು
  • ಮೈಕ್ ಪೋರ್ಟ್‌ನೋಯ್ – ಡ್ರಮ್ಸ್ (2010)
  • ಬ್ರೈನ್ ಹೇನರ್, ಸೀನಿಯರ್. – ಗಿಟಾರ್ (2005–ಇಲ್ಲಿಯವರೆಗೂ)
    ಸಂಚರಿಸುವ ಸದಸ್ಯರು
  • ಮೈಕ್ ಪೋರ್ಟ್‌ನೋಯ್ – ಡ್ರಮ್ಸ್(2010)

ಕಾಲಾನುಕ್ರಮಣಿ

ಅವೆಂಜ್ಡ್ ಸೆವೆನ್‌‍ಫೋಲ್ಡ್‌‌‌‌‌‍

ಸಂಗೀತ ಧ್ವನಿಮುದ್ರಿಕೆಗಳ ಅನುಕ್ರಮಣಿಕೆ

    ಸ್ಟುಡಿಯೊ ಆಲ್ಬಮ್‌ಗಳು
  • ಸೌಂಡಿಂಗ್ ದ ಸೆವೆಂತ್ ಟ್ರಂಪೆಟ್ (2001)
  • ವಾಕಿಂಗ್ ದ ಫಾಲೆನ್ (2003)
  • ಸಿಟಿ ಆಫ್ ಎವಿಲ್ (2005)
  • ಅವೆಂಜ್ಡ್ ಸೆವೆನ್ಫೊಲ್ಡ್ (2007)
  • ನೈಟ್‌ಮೇರ್ (2010)

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಅವೆಂಜ್ಡ್ ಸೆವೆನ್‌‍ಫೋಲ್ಡ್‌‌‌‌‌‍ ಬ್ಯಾಂಡ್ ಇತಿಹಾಸಅವೆಂಜ್ಡ್ ಸೆವೆನ್‌‍ಫೋಲ್ಡ್‌‌‌‌‌‍ ಸಂಗೀತದ ಗುಣಲಕ್ಷಣಗಳುಅವೆಂಜ್ಡ್ ಸೆವೆನ್‌‍ಫೋಲ್ಡ್‌‌‌‌‌‍ ವಾದ್ಯ-ವೃಂದದ ಸದಸ್ಯರುಅವೆಂಜ್ಡ್ ಸೆವೆನ್‌‍ಫೋಲ್ಡ್‌‌‌‌‌‍ ಸಂಗೀತ ಧ್ವನಿಮುದ್ರಿಕೆಗಳ ಅನುಕ್ರಮಣಿಕೆಅವೆಂಜ್ಡ್ ಸೆವೆನ್‌‍ಫೋಲ್ಡ್‌‌‌‌‌‍ ಉಲ್ಲೇಖಗಳುಅವೆಂಜ್ಡ್ ಸೆವೆನ್‌‍ಫೋಲ್ಡ್‌‌‌‌‌‍ ಬಾಹ್ಯ ಕೊಂಡಿಗಳುಅವೆಂಜ್ಡ್ ಸೆವೆನ್‌‍ಫೋಲ್ಡ್‌‌‌‌‌‍ಡ್ರೀಮ್ ಥಿಯೇಟರ್ವಿಕಿಪೀಡಿಯ:Citation needed೨೦೦೯೨೦೧೦

🔥 Trending searches on Wiki ಕನ್ನಡ:

ಹೈದರಾಲಿನೀರುಗೋಪಾಲಕೃಷ್ಣ ಅಡಿಗದ್ವಿರುಕ್ತಿವಾಣಿ ಹರಿಕೃಷ್ಣಶಿವಗಂಗೆ ಬೆಟ್ಟಯುಗಾದಿಭಾರತದ ರೂಪಾಯಿಗೂಗಲ್ವ್ಯಾಪಾರಭೂಕಂಪಕುಟುಂಬಜೋಗವಿಭಕ್ತಿ ಪ್ರತ್ಯಯಗಳುರತ್ನತ್ರಯರುಗುರು (ಗ್ರಹ)ದೇಶಗಳ ವಿಸ್ತೀರ್ಣ ಪಟ್ಟಿಭಾರತ ಸಂವಿಧಾನದ ಪೀಠಿಕೆಶಿಶುನಾಳ ಶರೀಫರುಕಪ್ಪೆ ಅರಭಟ್ಟಪಟ್ಟದಕಲ್ಲುಗಂಗಾಕಾರ್ಮಿಕರ ದಿನಾಚರಣೆಎ.ಪಿ.ಜೆ.ಅಬ್ದುಲ್ ಕಲಾಂತೆರಿಗೆಹಾಗಲಕಾಯಿಆಂಧ್ರ ಪ್ರದೇಶಜನಪದ ಕಲೆಗಳುವೃತ್ತಪತ್ರಿಕೆಭೀಮಾ ತೀರದಲ್ಲಿ (ಚಲನಚಿತ್ರ)ಚಾಮರಾಜನಗರವ್ಯಂಜನಚಂದ್ರಶೇಖರ ಪಾಟೀಲಗ್ರಾಮ ಪಂಚಾಯತಿಕರ್ನಾಟಕ ಸಂಗೀತಕರ್ಬೂಜಕೆ. ಅಣ್ಣಾಮಲೈಶಬ್ದಮಣಿದರ್ಪಣಜೆಕ್ ಗಣರಾಜ್ಯಅಂತಿಮ ಸಂಸ್ಕಾರವಿವಾಹಸಂಚಿ ಹೊನ್ನಮ್ಮಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುರೈತವಾರಿ ಪದ್ಧತಿವ್ಯಕ್ತಿತ್ವದೆಹಲಿಗೋವಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಬಿ. ಎಂ. ಶ್ರೀಕಂಠಯ್ಯಹೇಮರೆಡ್ಡಿ ಮಲ್ಲಮ್ಮರಾಮಾಯಣವಸಿಷ್ಠಗಿರೀಶ್ ಕಾರ್ನಾಡ್ಸರಸ್ವತಿಎಂಜಿನಿಯರಿಂಗ್‌ಭ್ರಷ್ಟಾಚಾರಇಂದಿರಾ ಗಾಂಧಿಎಕರೆಕೇಂದ್ರ ಸಾಹಿತ್ಯ ಅಕಾಡೆಮಿಪಿತ್ತಕೋಶಕೊತ್ತುಂಬರಿಶನಿ (ಗ್ರಹ)ಕರ್ನಾಟಕದ ಸಂಸ್ಕೃತಿಹಲ್ಮಿಡಿ ಶಾಸನಭಾರತದ ರಾಷ್ಟ್ರೀಯ ಚಿನ್ಹೆಗಳುಆದಿ ಶಂಕರಕನ್ನಡ ಸಾಹಿತ್ಯ ಪ್ರಕಾರಗಳುಸಂಸ್ಕೃತಓಂ ನಮಃ ಶಿವಾಯಶಬರಿಮಾವುಮೇರಿ ಕ್ಯೂರಿಭಾರತೀಯ ಜನತಾ ಪಕ್ಷಬೀಚಿಪೊನ್ನಪಪ್ಪಾಯಿ21ನೇ ಶತಮಾನದ ಕೌಶಲ್ಯಗಳು🡆 More