ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್

ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್ ಪೂರ್ಣಚಂದ್ರ ತೇಜಸ್ವಿಯವರ ಒಂದು ಕೃತಿ.

ಪ್ರಕಾಶಕರು: ಪುಸ್ತಕ ಪ್ರಕಾಶನ.

ಬಗ್ಗೆ

ಈ ಪುಸ್ತಕವು ತೇಜಸ್ವಿಯವರ ಎರಡು ಕೃತಿಗಳ ಸಂಕಲನ. ಮೊದಲನೆಯದು 'ಅಲೆಮಾರಿಯ ಅಂಡಮಾನ್' ಎಂಬ ಅಂಡಮಾನ್ ಪ್ರವಾಸ ಕಥನ ಹಾಗು ಎರಡನೆಯದು 'ಮಹಾನದಿ ನೈಲ್' ಎಂಬ ನೈಲ್ ನದಿಯ ಇತಿಹಾಸದ ಹಾಗು ಆ ನದಿಯ ಮೇಲೆ ನಡೆದ ಐತಿಹಾಸಿಕ ಪರಿಶೋಧನೆಗಳ ಕಥೆ. "ಅಲೆಮಾರಿಯ ಅಂಡಮಾನ್ ಮತ್ತು ವಂಡೂರಿನ ಹವಳದ ದಂಡೆಗಳು" ಒಂದು ಅದ್ಬುತ ಪ್ರವಾಸ ಕಥನ. ಈ ಕೃತಿಯು ಕನ್ನಡ ಸಾಹಿತ್ಯ ರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಕಾಲ ಮತ್ತು ದೇಶಗಳಲ್ಲಿ ಏಕಕಾಲಕ್ಕೆ ಚಲಿಸುವ ಲೇಖಕರ ಪ್ರಜ್ಞೆ ಹೊಸ ಅನುಭವವನ್ನು ನೀಡುತ್ತದೆ. ತೇಜಸ್ವಿಯವರ ಮಗು ಸಹಜ ಕುತೋಹಲವು, ಈ ಕೃತಿಯನ್ನು ಒಂದು ಅದ್ಬುತ ಪತ್ತೆದಾರಿ ಕಾದಂಬರಿಯನ್ನಾಗಿ ಪರಿವರ್ತಿಸಿದೆ. "ಮಹಾನದಿ ನೈಲ್" ಒಂದು ಅನ್ವೇಷನಾ ಕಥನ. ಇದು ಕೇವಲ ನೈಲ್ ನದಿಯ ಇತಿಹಾಸದ ಕಥೆಯಾಗಿರದೆ, ಇಡೀ ಈಜಿಪ್ಟ್ ಜನರ ಶತ-ಶತಮಾನಗಳ ಜೀವನದ ಸಂಷ್ಕಿಪ್ತ ಪರಿಚಯವಾಗಿದೆ. ನಿಜ. ತೇಜಸ್ವಿಯವರ ಈ ಕೃತಿ ಅಪ್ರತಿಮ ಕೃತಿ. ಯಾವುದೇ ಪ್ರವಾಸ ಹೊರಟಾಗ ನಾವು ಸುಮ್ಮನೆ ಮೇಲೆ ಮೇಲೆ ನೋಡುತ್ತಾ ಬಂದುಬಿಡುತ್ತೇವೆ. ಆ ಸ್ಥಳದ ಪೂರ್ತಿ ಮಾಹಿತಿ ವಿವರ ತಿಳಿಯುವುದೇ ಇಲ್ಲ. ಹಾ ಆ ಸ್ಥಳ ನೋಡಿದ್ದೇನೆ ಇಷ್ಟೆ. ತೇಜಸ್ವಿ ಹೇಳುತ್ತಾರೆ. ಯಾವುದೇ ಒಂದು ಪ್ರವಾಸ ಹೊರಟಾಗ ಆ ಸ್ಥಳ ನಿಮ್ಮೆದುರು ತೆರೆಯಬೇಕೆಂದರೆ ನಿಮ್ಮ ಬಳಿ ಒಂದು ಕೀಲಿ ಕೈಯಿರಲಿ. ಅದೂ ಎಂತದ್ದು? ಒಂದು ಕ್ಯಾಮರಾ, ಒಂದು ಮೀನಿನ ಗಾಳ, ಒಂದು ಬೈನಾಕುಲರ್ ಇತ್ಯಾದಿ ಆ ಪ್ರವಾಸಿ ಸ್ಥಳ ನಿಮ್ಮೆದುರು ತೆರೆಯುತ್ತಾ ಹೋಗುತ್ತದೆ.

ಅಂಡಮಾನ್ ಕೃತಿ ಓದುತ್ತಿದ್ದರೆ ನಾವೇ ಅಂಡಮಾನ್ ನಲ್ಲಿರುವಂತೆ ಭಾಸವಾಗುತ್ತದೆ. ಆ ವರ್ಣನೆ, ನವಿರು ಹಾಸ್ಯ ಸೂಪರ್ಬ್. ಅಂಡಮಾನಿನ ಸ್ಫಟಿಕ ಸಮುದ್ರ ಶುದ್ದ ಮರಳು ತೀರ ಬಣ್ಣ ಬಣ್ಣದ ಮೀನು ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನಾನು ಎಂದೂ ಜಿಂಗಾ ತಿಂದಿಲ್ಲ. ಆ ಕೃತಿಯಿಂದ ಆ ರುಚಿ ಆಸ್ವಾದಿಸಿದ್ದೇನೆ. ಆ ರುಚಿ ತಿನ್ನದೇ ನನ್ನ ಬಾಯಲ್ಲಿದೆ.

ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್  ಈ ಲೇಖನ ಪೂರ್ಣಚಂದ್ರ ತೇಜಸ್ವಿಯವರ ಕೃತಿಯೊಂದನ್ನು ಕುರಿತದ್ದು


Tags:

ಪೂರ್ಣಚಂದ್ರ ತೇಜಸ್ವಿ

🔥 Trending searches on Wiki ಕನ್ನಡ:

ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಅವಿಭಾಜ್ಯ ಸಂಖ್ಯೆಬಹುವ್ರೀಹಿ ಸಮಾಸಅರಣ್ಯನಾಶಸಂವತ್ಸರಗಳುಬೇಲೂರುಮಾಲ್ಡೀವ್ಸ್ಅದ್ವೈತಕಪ್ಪೆ ಅರಭಟ್ಟಶೈಕ್ಷಣಿಕ ಮನೋವಿಜ್ಞಾನಕಿತ್ತೂರುಸ್ವಚ್ಛ ಭಾರತ ಅಭಿಯಾನಕನ್ನಡದಲ್ಲಿ ಸಣ್ಣ ಕಥೆಗಳುಕುರುಬಮೈಗ್ರೇನ್‌ (ಅರೆತಲೆ ನೋವು)ಪ್ಯಾರಾಸಿಟಮಾಲ್ಅರ್ಥಶ್ರೀ ರಾಮಾಯಣ ದರ್ಶನಂಆದಿವಾಸಿಗಳುಒಲಂಪಿಕ್ ಕ್ರೀಡಾಕೂಟಪ್ರೀತಿದೇವನೂರು ಮಹಾದೇವಭಾರತೀಯ ಮೂಲಭೂತ ಹಕ್ಕುಗಳುಪತ್ರಎಮ್.ಎ. ಚಿದಂಬರಂ ಕ್ರೀಡಾಂಗಣಅಡಿಕೆಚದುರಂಗದ ನಿಯಮಗಳುಭಾರತದ ರಾಷ್ಟ್ರಪತಿಗಳ ಪಟ್ಟಿಕಂಪ್ಯೂಟರ್ಕ್ಯಾನ್ಸರ್ಕಾವೇರಿ ನದಿಜೈನ ಧರ್ಮಹಿಂದೂ ಕೋಡ್ ಬಿಲ್ಮಣ್ಣುಬಾಲಕೃಷ್ಣಭಾರತದ ಭೌಗೋಳಿಕತೆಗ್ರಾಮ ಪಂಚಾಯತಿಔಡಲಸೀತಾ ರಾಮರಾಷ್ಟ್ರಕವಿಕರ್ಮಧಾರಯ ಸಮಾಸವಿಭಕ್ತಿ ಪ್ರತ್ಯಯಗಳುಮಸೂರ ಅವರೆಕನ್ನಡ ಅಭಿವೃದ್ಧಿ ಪ್ರಾಧಿಕಾರಕರ್ನಾಟಕದ ಮುಖ್ಯಮಂತ್ರಿಗಳುಮಾನವ ಸಂಪನ್ಮೂಲ ನಿರ್ವಹಣೆಕದಂಬ ಮನೆತನರಾಯಲ್ ಚಾಲೆಂಜರ್ಸ್ ಬೆಂಗಳೂರುದ್ರಾವಿಡ ಭಾಷೆಗಳುಗಾಳಿ/ವಾಯುರವೀಂದ್ರನಾಥ ಠಾಗೋರ್ಕರ್ನಾಟಕ ಐತಿಹಾಸಿಕ ಸ್ಥಳಗಳುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಅಂತಾರಾಷ್ಟ್ರೀಯ ಸಂಬಂಧಗಳುಕನ್ನಡ ಸಂಧಿಕೋವಿಡ್-೧೯ಕರ್ಣಾಟ ಭಾರತ ಕಥಾಮಂಜರಿಕುಮಾರವ್ಯಾಸಜಾತ್ಯತೀತತೆಬ್ಲಾಗ್ವ್ಯವಸಾಯಬೀಚಿಅಮ್ಮಚಂದ್ರಶೇಖರ ಕಂಬಾರಕರ್ನಾಟಕ ಸಂಗೀತಭಾರತೀಯ ಸಂವಿಧಾನದ ತಿದ್ದುಪಡಿಪ್ಲಾಸಿ ಕದನಎಕರೆಜೋಗಿ (ಚಲನಚಿತ್ರ)ತತ್ತ್ವಶಾಸ್ತ್ರವ್ಯಂಜನಧೃತರಾಷ್ಟ್ರಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಡಾ ಬ್ರೋ🡆 More