ವಾತಾಪಿ ಕದನ

ವಾತಾಪಿ ಕದನವು 642 ರಲ್ಲಿ ಚಾಲುಕ್ಯರ ರಾಜಧಾನಿ ವಾತಾಪಿ ಸಮೀಪ (ಇಂದಿನ ಬಾದಾಮಿ) ಪಲ್ಲವರು ಮತ್ತು ಚಾಲುಕ್ಯರ ನಡುವೆ ನಡೆದ ನಿರ್ಣಾಯಕ ಕದನ.

ಈ ಯುದ್ದವು ಚಾಲುಕ್ಯರ ದೊರೆ ಇಮ್ಮಡಿ ಪುಲಕೇಶಿಯ ಸೋಲು ಮತ್ತು ಮರಣಕ್ಕೆ ಕಾರಣವಾಯಿತು. ಈ ಯುದ್ದವು 654 ರವರೆಗೆ ಪಲ್ಲವರು ವಾತಾಪಿಯನ್ನು ಆಳುವಂತೆ ಮಾಡಿತು.

ಕಾರಣಗಳು

ಸುಮಾರು 617-18 ರಲ್ಲಿ, ಇಮ್ಮಡಿ ಪುಲಕೇಶಿಯು ಪಲ್ಲವ ಸಾಮ್ರಾಜ್ಯದ ಮೆಲೆ ದಾಳಿ ನಡೆಸಿ ರಾಜ ಮಹೇಂದ್ರವರ್ಮನ್ ಅನ್ನು ಸೋಲಿಸಿ ಚೋಳ ಸಾಮ್ಯಾಜ್ಯದ ಉತ್ತರದ ಗಡಿಯಲ್ಲಿ ಕಾವೇರಿ ನದಿಯವರೆಗೆ ದಕ್ಷಿಣಕ್ಕೆ ಸಾಗಿದನು. ಇಮ್ಮಡಿ ಪುಲಕೇಶಿಯ ಕೈಯಲ್ಲಿ ಅನುಭವಿಸಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಬಯಸಿದ ಪಲ್ಲವರು ಮುಂದಿನ ಕೆಲವು ವರ್ಷಗಳಲ್ಲಿ, ಪ್ರತಿದಾಳಿಯ ಸಿದ್ಧತೆಗಾಗಿ ತಮ್ಮ ಪಡೆಗಳನ್ನು ಬಲಪಡಿಸಿದರು.

630 ರಲ್ಲಿ, ಒಂದನೇ ಮಹೇಂದ್ರವರ್ಮನ್ ಅವರ ಮಗ ಒಂದನೇ ನರಸಿಂಹವರ್ಮನ್ ಅಧಿಕಾರಕ್ಕೆ ಬಂದ ನಂತರ ಪಲ್ಲವ ರಾಜ್ಯವು ಪ್ರಬಲ ರಾಜ್ಯವಾಗಿ ಹೊರಹೊಮ್ಮಿತು. ಇದು ಇಮ್ಮಡಿ ಪುಲಕೇಶಿಗೆ ಪಲ್ಲವ ದೇಶಕ್ಕೆ ಎರಡನೇ ದಂಡಯಾತ್ರೆಯನ್ನು ಮುನ್ನಡೆಸಲು ಪ್ರೇರೇಪಿಸಿತು. ಕೆಎ ನೀಲಕಂಠ ಶಾಸ್ತ್ರಿ, ಪ್ರಕಾರ ಇಮ್ಮಡಿ ಪುಲಕೇಶಿಯು ಪಲ್ಲವ ರಾಜ್ಯದೊಳಗೆ ಪ್ರವೇಶಿಸುವ ಮೊದಲು ಪಲ್ಲವರ ಸಾಮಂತರಾದ ಬನಾಸ್ ರನ್ನು ಸೋಲಿಸಿದನು. ಒಂದನೇ ನರಸಿಂಹವರ್ಮನ್ ಮತ್ತು ಚಾಲುಕ್ಯ ಪಡೆಯ ಮುಖಾಮುಖಿಯಲ್ಲಿ ಪಲ್ಲವರ ರಾಜಧಾನಿ ಕಂಚಿಗೆ ಸಮೀಪವಿರುವ ಪರಿಯಾಲ, ಸೂರಮಾನ ಮತ್ತು ಮಣಿಮಂಗಲದಲ್ಲಿ ಮೂರು ಪ್ರತ್ಯೇಕ ಹಣಾಹಣಿಯಲ್ಲಿ ಚಾಲುಕ್ಯರನ್ನು ಸೋಲಿಸಿ ಅವರನ್ನು ಹಿಮ್ಮೆಟ್ಟಿಸಲಾಯಿತು. ಈ ಸಂದರ್ಭದಲ್ಲಿ ಓಡಿಹೋಗುತ್ತಿದ್ದ ಚಾಲುಕ್ಯ ಪಡೆಗಳನ್ನು ಅವರ ಸೀಮೆಯವರೆಗೂ ಹಿಂಬಾಲಿಸಿ ಹಿಮ್ಮಟ್ಟಿಸಲಾಯಿತು.

ಘಟನೆಗಳು

642 ರಲ್ಲಿ, ಚಾಲುಕ್ಯರ ರಾಜಧಾನಿಯಾದ ವಾತಾಪಿಯನ್ನು ವಶಪಡಿಸಿಕೊಳ್ಳಲು ಒಂದನೇ ನರಸಿಂಹವರ್ಮನ್ ಪರಂಜ್ಯೋತಿಯ ಎಂಬ ಸೇನಾನಾಯಕನ ಅಡಿಯಲ್ಲಿ ಶಕ್ತಿಶಾಲಿಯಾದ ಪಲ್ಲವ ಪಡೆಯನ್ನು ಕಳುಹಿಸಿದನು. ಇಮ್ಮಡಿ ಪುಲಕೇಶಿಯು ತನ್ನ ರಾಜಧಾನಿಯ ಹೊರವಲಯದಲ್ಲಿ ಪಲ್ಲವರನ್ನು ಎದುರಿಸಿ ಯುದ್ಧದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡನು ಎಂದು ನಂಬಲಾಗಿದೆ. ಈ ಯುದ್ದದ ಮೂಲಕ ಪಲ್ಲವರು ಇಮ್ಮಡಿ ಪುಲಕೇಶಿಯ ಮೇಲೆ ವಿಜಯವನ್ನು ಸಾಧಿಸಿ ವಾತಾಪಿಯನ್ನು 12 ವರ್ಷಗಳ ಕಾಲ (642-654) ಆಳಿದರು.

ಒಂದನೇ ಪರಮೇಶ್ವರವರ್ಮನ ಕುರಂ ಫಲಕಗಳು ಯುದ್ಧವನ್ನು ಹೀಗೆ ವಿವರಿಸುತ್ತವೆ

Narasimhavarman... who wrote the syllables of (the word) vijaya, as on a plate, on Pulikesin's back, which was caused to be visible in the battles of Pariyala, Manmangala, Suramara, etc., and who destroyed Vatapi, just as the pitcher born (Agastya) (destroyed the demon) Vatapi

ಉದಯಚಂದ್ರಮಂಗಲಂ ಫಲಕಗಳು ಹೀಗೆ ಹೇಳುತ್ತವೆ

Narasimhavarman, the equal of Agastya, the crushed of Vatapi, who frequently conquered Vallabharaja at Periyar-Bhumanimangala, Shuramara and other places.

ವೇಲುರ್ಪಾಳ್ಯಂ ಫಲಕಗಳ ಪ್ರಕಾರ

Narasimhavarman I famous like Upendra (Vishnu) who defeating the host of his enemies took from them the pillar of victory standing in the centre of Vatapi

ಪರಿಣಾಮ

ಒಂದನೆ ನರಸಿಂಹವರ್ಮನ್ ತನ್ನ ವಿಜಯದ ಸ್ಮರಣಾರ್ಥ ವಾತಾಪಿಯಲ್ಲಿ ಮಲ್ಲಿಕಾರ್ಜುನ ದೇವಾಲಯವನ್ನು ನಿರ್ಮಿಸಿದನು. ಅವರು "ವಾತಾಪಿ-ಕೊಂಡನ್" ಅಥವಾ "ವಾತಾಪಿ ತೆಗೆದುಕೊಂಡವನು" ಎಂಬ ಬಿರುದನ್ನು ಅಳವಡಿಸಿಕೊಂಡನು. ವಾತಾಪಿಯ ತೆಗ್ಗಿನ-ಈರಪ್ಪ ದೇವಾಲಯದ ಗೋಡೆಗಳ ಮೇಲೆ ತನ್ನ ವಿಜಯವನ್ನು ದಾಖಲಿಸುವ ಶಾಸನವನ್ನು ಕೆತ್ತಿದನು. ಪರಂಜೋತಿಯು ವಾತಾಪೈಯಿಂದ ಪಲ್ಲವ ರಾಜ್ಯಕ್ಕೆ ಯುದ್ಧದ ಕೊಳ್ಳೆಯ ಹಲವಾರು ವಸ್ತುಗಳನ್ನು ತಂದನು, ಅದರಲ್ಲಿ ವಾತಾಪಿ ಗಣಪತಿ ಎಂಬ ಸುಪ್ರಸಿದ್ದ ಗಣೇಶ (ಗಣಪತಿ) ಮೂರ್ತಿ ಕೂಡಾ ಸೇರಿತ್ತು. ಈ ಮೂರ್ತಿಯನ್ನು ಆತನು ತನ್ನ ಹುಟ್ಟೂರಿನಲ್ಲಿ ಪ್ರತಿಷ್ಠಾಪಿಸಿದನು.

ಜನಪ್ರಿಯ ಸಂಸ್ಕೃತಿಯಲ್ಲಿ

ಕಲ್ಕಿ ಕೃಷ್ಣಮೂರ್ತಿಯವರ ತಮಿಳು ಐತಿಹಾಸಿಕ ಕಾಲ್ಪನಿಕ ಕಾದಂಬರಿ ಶಿವಗಾಮಿಯಿನ್ ಸಪಥಂನಲ್ಲಿನ ವಾತಾಪಿ ಕದನವು ಅಂತಿಮ ಭಾಗವಾಗಿದ್ದು, ಅಲ್ಲಿ ಚಾಲುಕ್ಯ ರಾಜ ಇಮ್ಮಡಿ ಪುಲಕೇಶಿಯು ಪಲ್ಲವ ಸೈನ್ಯದ ಜನರಲ್ ಪ್ರಂಜೋತಿಯಿಂದ ಸೋಲಿಸಲ್ಪಟ್ಟನು ಮತ್ತು ಕೊಲ್ಲಲ್ಪಟ್ಟನು. ಈ ಘಟನೆಯನ್ನು ಪುಲ್ಲಲೂರ್ ಯುದ್ದದಲ್ಲಿ ಒಂದನೇ ಮಹೇಂದ್ರವರ್ಮನ್ ಎದುರಿಸಿದ ಸೋಲಿಗೆ ಪ್ರತೀಕಾರ. ಮತ್ತು ಶಿವಗಾಮಿಯ ಸೇಡಿನ ಪ್ರತಿಜ್ಞೆಯಾಗಿ ಪರಿಗಣಿಸಲಾಗಿದೆ

ಉಲ್ಲೇಖಗಳು

 

ಗ್ರಂಥಸೂಚಿ

  • Dikshit, D. P. (1980). Political History of the Chalukyas of Badami. Abhinav Publications.
  • Heras, H. (1933). Studies in Pallava History. Madras: B. G. Paul and Co.

Tags:

ವಾತಾಪಿ ಕದನ ಕಾರಣಗಳುವಾತಾಪಿ ಕದನ ಘಟನೆಗಳುವಾತಾಪಿ ಕದನ ಪರಿಣಾಮವಾತಾಪಿ ಕದನ ಜನಪ್ರಿಯ ಸಂಸ್ಕೃತಿಯಲ್ಲಿವಾತಾಪಿ ಕದನ ಉಲ್ಲೇಖಗಳುವಾತಾಪಿ ಕದನ ಗ್ರಂಥಸೂಚಿವಾತಾಪಿ ಕದನಇಮ್ಮಡಿ ಪುಲಕೇಶಿಚಾಲುಕ್ಯಪಲ್ಲವಬಾದಾಮಿ

🔥 Trending searches on Wiki ಕನ್ನಡ:

ಕನ್ನಡ ಸಂಧಿಕರ್ನಾಟಕ ಸಂಗೀತಸಮೂಹ ಮಾಧ್ಯಮಗಳುತೆಲುಗುಕರ್ನಾಟಕದಲ್ಲಿ ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯಯಶ್(ನಟ)ಸ್ವಾಮಿ ವಿವೇಕಾನಂದಕಾರ್ಲ್ ಮಾರ್ಕ್ಸ್ದೂರದರ್ಶನತೋಟಕೇಶಿರಾಜಹದಿಬದೆಯ ಧರ್ಮಬೆಂಗಳೂರುಟೈಗರ್ ಪ್ರಭಾಕರ್ಋತುಸಾಕ್ರಟೀಸ್ಭರತ-ಬಾಹುಬಲಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಭಾರತೀಯ ಭೂಸೇನೆಶಾಮನೂರು ಶಿವಶಂಕರಪ್ಪನಿರಂಜನಹರಿಹರ (ಕವಿ)ಪರಮಾಣುಬೌದ್ಧ ಧರ್ಮವಿಜಯನಗರ ಸಾಮ್ರಾಜ್ಯಪ್ರಬಂಧಮಯೂರವರ್ಮಮಡಿವಾಳ ಮಾಚಿದೇವಕರ್ನಾಟಕದ ಮಹಾನಗರಪಾಲಿಕೆಗಳುಬುದ್ಧಮೌರ್ಯ ಸಾಮ್ರಾಜ್ಯಭಾರತದ ಜನಸಂಖ್ಯೆಯ ಬೆಳವಣಿಗೆಅಶ್ವತ್ಥಮರಮ್ಯಾಂಚೆಸ್ಟರ್ಭೋವಿಶಬ್ದಓಂ (ಚಲನಚಿತ್ರ)ಚೋಮನ ದುಡಿಚನ್ನಬಸವೇಶ್ವರದ್ರಾವಿಡ ಭಾಷೆಗಳುಆಂಡಯ್ಯಧರ್ಮ (ಭಾರತೀಯ ಪರಿಕಲ್ಪನೆ)ಹಿಪ್ಪಲಿಫ್ರೆಂಚ್ ಕ್ರಾಂತಿಕೃಷ್ಣಹಸಿರುಮನೆ ಪರಿಣಾಮಅಂತರಜಾಲಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭಾರತದಲ್ಲಿನ ಜಾತಿ ಪದ್ದತಿವಾಲ್ಮೀಕಿಭಾರತಅಲಾವುದ್ದೀನ್ ಖಿಲ್ಜಿಚಂಪೂಜ್ಞಾನಪೀಠ ಪ್ರಶಸ್ತಿಬಿ. ಆರ್. ಅಂಬೇಡ್ಕರ್ರಾಜ್ಯಪಾಲಆತ್ಮಚರಿತ್ರೆಅಂಗವಿಕಲತೆಕರ್ನಾಟಕ ಪತ್ರಿಕೋದ್ಯಮ ಇತಿಹಾಸತತ್ಪುರುಷ ಸಮಾಸಜಿ.ಎಸ್.ಶಿವರುದ್ರಪ್ಪಬೆಳಗಾವಿಜೈಮಿನಿ ಭಾರತಎ.ಕೆ.ರಾಮಾನುಜನ್ಶ್ರೀಶೈಲಭಾರತದಲ್ಲಿನ ಶಿಕ್ಷಣಸುಭಾಷ್ ಚಂದ್ರ ಬೋಸ್ಕಂಠೀರವ ನರಸಿಂಹರಾಜ ಒಡೆಯರ್ಕನ್ನಡದಲ್ಲಿ ಪ್ರವಾಸ ಸಾಹಿತ್ಯಅರ್ಥಶಾಸ್ತ್ರಕುಮಾರವ್ಯಾಸಭಾರತ ಗಣರಾಜ್ಯದ ಇತಿಹಾಸಕರ್ನಾಟಕ ಪೊಲೀಸ್ಕರ್ನಾಟಕ ಸರ್ಕಾರವಿದ್ಯುತ್ ಮಂಡಲಗಳುಕಪ್ಪೆ ಅರಭಟ್ಟಇಸ್ಲಾಂ ಧರ್ಮಅ. ರಾ. ಮಿತ್ರ🡆 More