ಮುಖ್ತಾರ್ ಅಹಮದ್ ಅನ್ಸಾರಿ

ಮುಖ್ತಾರ್ ಅಹಮದ್ ಅನ್ಸಾರಿ(೧೮೮೦-೧೯೩೬) ರಾಷ್ಟ್ರೀಯತಾಭಾವನೆ ಎಲ್ಲರಲ್ಲೂ ಬೆಳೆಯುವುದೊಂದೇ ಸುಭದ್ರ ಭವ್ಯ ಭಾರತ ನಿರ್ಮಾಣಕ್ಕೆ ದಾರಿ ಎಂದು ನಂಬಿ, ಹಿಂದೂ ಮುಸ್ಲಿಂ ಐಕ್ಯಕ್ಕಾಗಿ ಭಾರತದಲ್ಲಿ ಅಜೀವಪರ್ಯಂತ ದುಡಿದ ದೇಶಭಕ್ತ.

ಮುಖ್ತಾರ್ ಅಹಮದ್ ಅನ್ಸಾರಿ
ಮುಖ್ತಾರ್ ಅಹಮದ್ ಅನ್ಸಾರಿ

ಬಾಲ್ಯ

ಸಂಯುಕ್ತಪ್ರಾಂತ್ಯದ ಶ್ರೀಮಂತ ಮನೆತನವೊಂದರಲ್ಲಿ ಜನ್ಮವೆತ್ತಿ (1880), ಮದರಾಸ್ ವಿಶ್ವವಿದ್ಯಾನಿಲಯದ ಬಿ.ಎ. ಪದವಿಗಳಿಸಿದರು. ವೈದ್ಯಕೀಯ ಶಿಕ್ಷಣಕ್ಕೆಂದು 1900ರಲ್ಲಿ ಇಂಗ್ಲೆಂಡಿಗೆ ತೆರಳಿ ಅಲ್ಲಿ ಎಂ.ಡಿ., ಎಂ.ಎಸ್., ಮತ್ತು ಎಲ್.ಆರ್.ಸಿ.ಪಿ. ಪ್ರೌಢಪದವಿಗಳನ್ನು ಸಂಪಾದಿಸಿದರು. 1911ರವರೆಗೂ ಇಂಗ್ಲೆಂಡಿನಲ್ಲೇ ನಿಂತು, ಹೌಸ್ ಸರ್ಜನ್, ರೆಸಿಡೆಂಟ್ ಮೆಡಿಕಲ್ ಆಫೀಸರ್ ಹುದ್ಧೆಗಳಲ್ಲಿ ದುಡಿದು, ಅಪಾರ ಅನುಭವ ಹಾಗೂ ಜನಾನುರಾಗವನ್ನು ಗಳಿಸಿ ಸ್ವದೇಶಕ್ಕೆ ಹಿಂತಿರುಗಿದರು. ದೆಹಲಿಯಲ್ಲಿ ವೈದ್ಯವೃತ್ತಿಯನ್ನು ಪ್ರಾರಂಭಿಸಿ, ಕೆಲವು ದಿನಗಳಲ್ಲೇ ದೇಶದ ಅತ್ಯಂತ ಸಮರ್ಥ ವೈದ್ಯರಲ್ಲೊಬ್ಬರೆಂಬ ಖ್ಯಾತಿಗಳಿಸಿ, ಶ್ರೀಮಂತರು ಬಡವರು ಎಂಬ ಭೇದಭಾವವಿಲ್ಲದೆ, ಎಲ್ಲ ರೋಗಿಗಳನ್ನೂ ಉಪಚರಿಸಿ, ವೈದ್ಯನ ಮನೋಧರ್ಮ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟರು.

ರಾಜಕೀಯ ಜೀವನ

ಆಗಿನ ರಾಜಕೀಯ ಪರಿಸ್ಥಿತಿಯಿಂದಾಗ ಜನತೆಯಲ್ಲಿ ಉಂಟಾಗಿದ್ದ ಅಲ್ಲೋಲಕಲ್ಲೋಲ, ಹಿಂದೂಗಳಿಗೂ ಮುಸ್ಲಿಮರಿಗೂ ಮಧ್ಯೆ ವೈರವನ್ನುಂಟುಮಾಡಲು ನಡೆಯುತ್ತಿದ್ದ ಸಂಚು ಸಂಧಾನಗಳು. ಆರ್ಥಿಕ-ಶೋಷಣೆಯಿಂದಾಗಿ ಜನರಲ್ಲಿ ಹರಡಿದ್ದ ದಾರಿದ್ರ್ಯ, ನಿರಾಶೆ, ಇವನ್ನು ಸರಿಪಡಿಸಿ ನಾಡಿನ ಭವ್ಯ ಭವಿಷ್ಯವನ್ನು ರೂಪಿಸಲೆತ್ನಿಸುತ್ತಿದ್ದ ಗಾಂಧೀಜಿಯವರ ವ್ಯಕ್ತಿತ್ವ ಅನ್ಸಾರಿಯವರ ಹೃದಯವನ್ನು ಸೆಳೆಯಿತು. ರಾಜಕೀಯವೇನೂ ಇವರಿಗೆ ಹೊಸದಾಗಿರಲಿಲ್ಲ. 1899ರಲ್ಲೇ ಮದರಾಸಿನಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು. 1912-13ರಲ್ಲಿ ತುರ್ಕಿ-ಬಾಲ್ಕನ್ ರಾಷ್ಟ್ರಗಳ ನಡುವೆ ಯುದ್ಧ ನಡೆದಾಗ, ಗಾಯಗೊಂಡವರ ಶುಶ್ರೂಷೆಗಾಗಿ ವೈದ್ಯಕೀಯ ತಂಡವೊಂದನ್ನು ಕಳುಹಿಸಿದ್ದರು. 1918ರಲ್ಲಿ ಮುಸ್ಲಿಂ ಲೀಗ್ ಕಾಂಗ್ರೇಸ್‍ನೊಂದಿಗೆ ವಿಲೀನವಾದಾಗ ಲೀಗಿನ ಸ್ವಾಗತಾಧ್ಯಕ್ಷರಾಗಿ ದುಡಿದಿದ್ದರು. ಪ್ರತಿಯೊಂದು ಕಾಂಗ್ರೆಸ್ ಅಧಿವೇಶನದಲ್ಲೂ ಹಾಜರಿದ್ದು ಅದರ ಕಾರ್ಯಕಲಾಪಗಳಲ್ಲಿ ಭಾಗವಹಿಸಿದ್ದರು. ಹಿಂದೂ ಮುಸ್ಲಿಂ ಐಕ್ಯತೆ ಅವರ ಜೀವನದ ಉಸಿರಾಗಿತ್ತು. ಮುಸ್ಲಿಂರಲ್ಲಿ ರಾಷ್ಟ್ರೀಯತಾ ಮನೋಭಾವವನ್ನು ಬಲಗೊಳಿಸಲು ರಾಷ್ಟ್ರೀಯ ಮುಸ್ಲಿಂ ದಳವನ್ನು ನಿರ್ಮಿಸಿದ್ದರು. 1927ರಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾದರು. ಗಾಂಧೀಜಿಯವರು ಪ್ರಾರಂಭಿಸಿದ ಅಸಹಕಾರ ಚಳುವಳಿಯಲ್ಲಿ ಎಲ್ಲರೊಟ್ಟಾಗಿ ಯಶಸ್ಸನ್ನು ತಂದರೂ ಕೂಡಿಬಾಳುವ ವಿಷಯದಲ್ಲಿ ವಿಫಲರಾಗಿರುವ ಜನತೆಯ ವಿಷಯದಲ್ಲಿ ತಮಗಿದ್ದ ದುಃಖಾತಂಕಗಳನ್ನು ತೋಡಿಕೊಂಡರು. ಕೌನ್ಸಿಲ್ ಪ್ರವೇಶಕ್ಕೆ ಅವರ ವಿರೋಧವಿದ್ದರೂ 1934ರ ಚುನಾವಣೆಯಲ್ಲಿ ಹೋರಾಡಬೇಕೆಂದು ನಿರ್ಣಯವಾದಾಗ ಅದಕ್ಕೆ ತಮ್ಮ ಬೆಂಬಲ ನೀಡಿದರು; ಆದರೆ ತಾವು ಮಾತ್ರ ಚುನಾವಣೆಗೆ ನಿಲ್ಲಲಿಲ್ಲ. ಗಾಂಧೀಜಿಯವರು ಇವರ ಸರಳತೆ, ನಿವ್ರ್ಯಾಜಮನೋಭಾವ, ರಾಷ್ಟ್ರಪೇಮ ಇವುಗಳನ್ನು ತುಂಬಾ ಮೆಚ್ಚಿದ್ದರು. ಅನ್ಸಾರಿಯಂಥ ದೇಶಭಕ್ತರು ಸೂತ್ರಧಾರಿಗಳಾಗಿರುವಾಗ ನಾಡಿನ ಅಭ್ಯುದಯಕ್ಕೆ ಯಾವ ಕೊರತೆಯೂ ಇಲ್ಲ ಎಂದು ಅವರು ಹೇಳಿದರು. ವೈದ್ಯನಾಗಿ, ರಾಜಕೀಯ ಮುಂದಾಳಾಗಿ, ನಿರಂತರ ದುಡಿದು ತಮ್ಮ ಐವತ್ತಾರನೆಯ ವಯಸ್ಸಿನಲ್ಲಿ ಅನ್ಸಾರಿ ಕಾಲವಾದರು.

Tags:

🔥 Trending searches on Wiki ಕನ್ನಡ:

ತೀ. ನಂ. ಶ್ರೀಕಂಠಯ್ಯಭಾರತೀಯ ಮೂಲಭೂತ ಹಕ್ಕುಗಳುವಿಷ್ಣುಎಂ.ಬಿ.ಪಾಟೀಲಪ್ರವಾಸಿಗರ ತಾಣವಾದ ಕರ್ನಾಟಕಕೃಷ್ಣದೇವರಾಯಉತ್ತರ ಕರ್ನಾಟಕಮಲ್ಲಿಕಾರ್ಜುನ್ ಖರ್ಗೆಹೊಂಗೆ ಮರಪ್ರಜಾಪ್ರಭುತ್ವಗುರು (ಗ್ರಹ)ದಶಾವತಾರಗೋವಿನ ಹಾಡುಖ್ಯಾತ ಕರ್ನಾಟಕ ವೃತ್ತಭಾವನಾ(ನಟಿ-ಭಾವನಾ ರಾಮಣ್ಣ)ಅಂಕಗಣಿತಜನಪದ ಆಭರಣಗಳುವಿಜಯನಗರ ಸಾಮ್ರಾಜ್ಯಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಜಾತ್ರೆಸಮುಚ್ಚಯ ಪದಗಳುಕನ್ನಡ ವಿಶ್ವವಿದ್ಯಾಲಯಮಂಗಳ (ಗ್ರಹ)ಭಾರತದಲ್ಲಿ ತುರ್ತು ಪರಿಸ್ಥಿತಿತತ್ತ್ವಶಾಸ್ತ್ರಚೋಳ ವಂಶಭಾರತದ ಮಾನವ ಹಕ್ಕುಗಳುವಿಜಯನಗರವೈದಿಕ ಯುಗಕುವೆಂಪುಜಿ.ಎಸ್. ಘುರ್ಯೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಶಿವರಾಮ ಕಾರಂತದೆಹಲಿ ಸುಲ್ತಾನರುತೆಂಗಿನಕಾಯಿ ಮರಚದುರಂಗ (ಆಟ)ಕನ್ನಡ ಸಾಹಿತ್ಯ ಪರಿಷತ್ತುಸಂಯುಕ್ತ ಕರ್ನಾಟಕಕೊರೋನಾವೈರಸ್ ಕಾಯಿಲೆ ೨೦೧೯ಭರತ-ಬಾಹುಬಲಿವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುದಕ್ಷಿಣ ಕನ್ನಡಹಾಗಲಕಾಯಿಭೂಮಿಕಾಮಾಲೆರಾಸಾಯನಿಕ ಗೊಬ್ಬರಕೃಷ್ಣರಾಜಸಾಗರಶಿವಪ್ಪ ನಾಯಕಅಲ್ಲಮ ಪ್ರಭುಬೆಂಗಳೂರುಕುಮಾರವ್ಯಾಸಹಿಂದೂ ಮದುವೆಭಾರತದ ರಾಜಕೀಯ ಪಕ್ಷಗಳುಗುರುರಾಜ ಕರಜಗಿಮುಂಗಾರು ಮಳೆಭಾರತೀಯ ಭಾಷೆಗಳುಗೂಗಲ್ಬಿ.ಎಸ್. ಯಡಿಯೂರಪ್ಪಉಡಮೋಕ್ಷಗುಂಡಂ ವಿಶ್ವೇಶ್ವರಯ್ಯಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಕೆಳದಿ ನಾಯಕರುರತ್ನತ್ರಯರುಸರಸ್ವತಿರೇಣುಕಭಾರತದ ರಾಷ್ಟ್ರಪತಿಗಳ ಪಟ್ಟಿಶ್ರೀನಿವಾಸ ರಾಮಾನುಜನ್ಶಂಕರ್ ನಾಗ್ಕರ್ನಾಟಕ ಪೊಲೀಸ್ಲೋಪಸಂಧಿಜಿ.ಪಿ.ರಾಜರತ್ನಂಪಟ್ಟದಕಲ್ಲುಯಶ್(ನಟ)ಬಂಗಾರದ ಮನುಷ್ಯ (ಚಲನಚಿತ್ರ)ಕೈಮೀರಪಪ್ಪಾಯಿವೀಳ್ಯದೆಲೆ🡆 More