ಬನಶಂಕರಿ ದೇವಸ್ಥಾನ, ಬೆಂಗಳೂರು

ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ 'ಬನಶಂಕರಿ ದೇವಾಲಯ', ಕನಕಪುರ ರಸ್ತೆಯಲ್ಲಿದೆ.

ಈ ದೇವಸ್ಥಾನ ಬೆಂಗಳೂರಿನ ಶ್ರದ್ಧಾಳುಗಳ ನೆಚ್ಚಿನ ತಾಣ. ಬೆಂಗಳೂರಿನ ಅಕ್ಕಪಕ್ಕದ ಸ್ಥಳಗಳ ಭಕ್ತಾದಿಗಳು ಮತ್ತು ದೂರದೂರದಿಂದ ಶ್ರದ್ಧೆ ಆಸಕ್ತಿಗಳಿಂದ ಭಕ್ತಾದಿಗಳು ಈ ದೇವಾಲಯಕ್ಕೆ ಭೆಟ್ಟಿನೀಡಿ ತಮ್ಮ ಮನದ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಇದಲ್ಲದೆ, ಹಳೆಯ ದೇವಸ್ಥಾನದ ಜಾಗದಲ್ಲಿ ಒಂದು ಹೊಸ ಸುಂದರ ದೇವಾಲಯ ಈಗ ಸಿದ್ಧಗೊಂಡಿದೆ.

ಚಿತ್ರ:P1010015.JPG
'ಬನಶಂಕರಿ ಅಮ್ಮನವರ ಹೊಸ ದೇವಾಲಯ'
ಚಿತ್ರ:1-PA250210.JPG
'ಈಶ್ವರ ಪಾರ್ವತಿ ದೇವಾಲಯ'

ಐತಿಹ್ಯ

ಚಿತ್ರ:CTA, Ananth 025.JPG
'ಪುರಾತನ ಬನಶಂಕರಿ ಅಮ್ಮನವರ ಮಂದಿರ'

ಸ್ಥಳ ಪುರಾಣದ ರೀತ್ಯ , ಈ ದೇವಸ್ಥಾನ ಅಸ್ತಿತ್ವಕ್ಕೆ ಬಂದಿದ್ದು, ೧೯೧೫ ರಲ್ಲಿ. ಸೋಮಣ್ಣ ಶೆಟ್ಟಿ ಎಂಬುವವರು ಬನಶಂಕರಮ್ಮನವರ ವಿಗ್ರಹವನ್ನು ಬಿಜಾಪುರಜಿಲ್ಲೆಯ ಬಾದಾಮಿಯಿಂದ ತೆಗೆದುಕೊಂಡು ಬಂದು ಬೆಂಗಳೂರಿನ 'ಬನಶಂಕರಿ ದೇವಾಲಯ'ದಲ್ಲಿ ಸ್ಥಾಪಿಸಿದರು. ಬಹಳ ವರ್ಷಗಳಿಂದ ಈ ಮಂದಿರ ಭಕ್ತಾದಿಗಳ ಮನೋಕಾಮನೆಯನ್ನು ಈಡೇರಿಸುತ್ತಿತ್ತು. ಸಮಯ ಸರಿದಂತೆ ಶ್ರದ್ಧಾಳುಗಳು ಹೆಚ್ಚಾಗತೊಡಗಿದರು. ಭಕ್ತಾದಿಗಳ ಉದಾರ ಕಾಣಿಕೆಯಿಂದಾಗಿ ಈಗ ಕಾಣಿಸುತ್ತಿರುವ ಭವ್ಯ ದೇವಸ್ಥಾನವನ್ನು ನಿರ್ಮಿಸಲು ಸಾಧ್ಯವಾಯಿತು.

ವೈಶಿಷ್ಠ್ಯತೆ

ಚಿತ್ರ:BA12.JPG
'ಹೊಸದಾಗಿ ನಿರ್ಮಾಣಗೊಂಡಿರುವ ಭವ್ಯ ಬನಶಂಕರಿ ಅಮ್ಮನವರ ದೇಗುಲ'

ಸಾಮಾನ್ಯವಾಗಿ ಹಿಂದುಗಳಿಗೆ ರಾಹುಕಾಲದಲ್ಲಿ ಯಾವ ವ್ರತ-ನಿಯಮಾದಿಗಳೂ ವರ್ಜಿತವಾಗಿವೆ. ಹಾಗಾಗಿ, ಅಮ್ಮನವರ ಪೂಜೆಯನ್ನು 'ರಾಹುಕಾಲ'ದ ಸಮಯದಲ್ಲಿ ನಡೆಸುವ ವಿಧಾನವು ಅತಿ ವಿಶೇಷವಾಗಿದೆ. 'ಪಂಚಾಂಗ'ದಲ್ಲೂ ಇದರ ಉಲ್ಲೇಖವಿದೆ. ಆದರೆ ರಾಹುಕಾಲದಲ್ಲೂ ನಡೆಯುವ ಈ ವಿಶೇಷ ಪೂಜಾವಿಧಾನದಿಂದಾಗಿ ಈ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಅಪಾರವಾಗಿದೆ. ಶುಕ್ರವಾರ, ಮಂಗಳವಾರ ಮತ್ತು ರವಿವಾರದಂದು ಭಕ್ತರ ದೊಡ್ಡ ಗುಂಪುನ್ನು ದೇವಾಲಯದಲ್ಲಿ ಕಾಣಬಹುದಾಗಿದೆ. ಬನಶಂಕರಿ ಅಮ್ಮನವರಿಗೆ ಅರ್ಧ ಕತ್ತರಿಸಿದ ನಿಂಬೆಹಣ್ಣಿನ ರಸಿಕೆ ತೆಗೆದು, ಅದರಲ್ಲಿ ಎಣ್ಣೆದೀಪವನ್ನು ಹಚ್ಚಿಡುವ ವಿಧಿ ಅನನ್ಯವಾದದ್ದು.

ಜಾತ್ರಾ ಮಹೋತ್ಸವ

ಪ್ರತಿವರ್ಷವೂ ಅಮ್ಮನವರ ಜಾತ್ರೆ, ಡಿಸೆಂಬರ್ ತಿಂಗಳ ಕೊನೆಯವಾರ ಇಲ್ಲವೇ ಜನವರಿ ತಿಂಗಳ ಮೊದಲವಾರದಲ್ಲಿ ವಿಜೃಂಭಣೆಯಿಂದ ನೆರವೇರುತ್ತದೆ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬರುವ ದಸರಾ ಹಬ್ಬದಲ್ಲೂ ಕೂಡ ಬನಶಂಕರಿದೇವಿಯ ಪೂಜಾವಿಧಿಗಳು ಬಹಳ ಸುಂದರವಾಗಿಯೂ ವಿಧಿವತ್ತಾಗಿಯೂ ಜರುಗುತ್ತವೆ.

ವರ್ತಮಾನ ಹಾಗೂ ಭವಿಷ್ಯ

ಚಿತ್ರ:BS14.JPG
ಹೊಸದಾಗಿ ನಿರ್ಮಿಸಿರುವ ಛಾವಣಿಯಡಿ ಭಕ್ತಾದಿಗಳು ಸೇರುವ ಸ್ಥಳ

ಕರ್ನಾಟಕ ಸರಕಾರಧರ್ಮಾರ್ಥ ಸೇವೆಯ ಅಡಿಯಲ್ಲಿ ಈ ದೇವಾಲಯ ಬರುವುದರಿಂದ ಸರಕಾರದ ಕೃಪಾಪೋಷಿತದ ವಲಯದಲ್ಲಿ ಪೂಜಾ-ವಿಧಿಗಳು ಚೆನ್ನಾಗಿ ನೆರವೇರುತ್ತವೆ.

ತಲುಪುವ ವಿಧಾನ

ಈ ಪುರಾತನ ದೇವಾಲಯಕ್ಕೆ ಬೆಂಗಳೂರು ನಗರದ ಎಲ್ಲಾ ಕಡೆಯಿಂದಲೂ ಬಂದು ತಲುಪಲು ಸರಕಾರಿ ಬಸ್ ಸೌಕರ್ಯಗಳಿವೆ. 'ಮೆಜೆಸ್ಟಿಕ್', ನಿಂದ ಬನಶಂಕರಿಗೆ ಬರಲು ೧೨ನೇ ಸಂಖ್ಯೆಯ ಅಂಕಣದಲ್ಲಿ ಸೂಕ್ತವಾದ ಬಸ್ಸನ್ನು ಹತ್ತಬಹುದು. ಜಯನಗರ ೪ ನೇ ಬ್ಲಾಕ್ ಹಾಗೂ ಕತ್ರಿಗುಪ್ಪೆಗೆ ಇದು ಹತ್ತಿರವಿದೆ.ಸಾರಕ್ಕಿಬಡಾವಣೆ ಹತ್ತಿರದಲ್ಲಿದೆ.

ಉಲ್ಲೇಖಗಳು

Tags:

ಬನಶಂಕರಿ ದೇವಸ್ಥಾನ, ಬೆಂಗಳೂರು ಐತಿಹ್ಯಬನಶಂಕರಿ ದೇವಸ್ಥಾನ, ಬೆಂಗಳೂರು ವೈಶಿಷ್ಠ್ಯತೆಬನಶಂಕರಿ ದೇವಸ್ಥಾನ, ಬೆಂಗಳೂರು ಜಾತ್ರಾ ಮಹೋತ್ಸವಬನಶಂಕರಿ ದೇವಸ್ಥಾನ, ಬೆಂಗಳೂರು ವರ್ತಮಾನ ಹಾಗೂ ಭವಿಷ್ಯಬನಶಂಕರಿ ದೇವಸ್ಥಾನ, ಬೆಂಗಳೂರು ತಲುಪುವ ವಿಧಾನಬನಶಂಕರಿ ದೇವಸ್ಥಾನ, ಬೆಂಗಳೂರು ಉಲ್ಲೇಖಗಳುಬನಶಂಕರಿ ದೇವಸ್ಥಾನ, ಬೆಂಗಳೂರು

🔥 Trending searches on Wiki ಕನ್ನಡ:

ಲೋಪಸಂಧಿಭಾರತದ ರಾಷ್ಟ್ರಪತಿಗಳ ಪಟ್ಟಿರಕ್ತಪೂರಣಭಾರತದಲ್ಲಿ ಕೃಷಿಮೈಸೂರು ಸಂಸ್ಥಾನದ್ವೈತ ದರ್ಶನಗಣೇಶ್ (ನಟ)ಯೇತಿಕ್ಷಯಚಂದ್ರಯಾನ-೩ಎಚ್.ಎಸ್.ವೆಂಕಟೇಶಮೂರ್ತಿರಾಬರ್ಟ್ (ಚಲನಚಿತ್ರ)ವಾಯು ಮಾಲಿನ್ಯಲಕ್ಷ್ಮೀಶಹೊನೊಲುಲುನವಶಿಲಾಯುಗಚುನಾವಣೆಮೈಸೂರು ಅರಮನೆಎರಡನೇ ಎಲಿಜಬೆಥ್ಶ್ರೀವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುನೀತಿ ಆಯೋಗಅಶೋಕನ ಶಾಸನಗಳುಭಾರತದಲ್ಲಿ ಪಂಚಾಯತ್ ರಾಜ್ದರ್ಶನ್ ತೂಗುದೀಪ್ಓಂ ನಮಃ ಶಿವಾಯಕರ್ಣಕಲ್ಲಂಗಡಿಪ್ರಧಾನ ಖಿನ್ನತೆಯ ಅಸ್ವಸ್ಥತೆಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಚಂಪೂಮತದಾನಡಾ ಬ್ರೋಕಾನೂನುಭಂಗ ಚಳವಳಿಭೂಕಂಪಹಬ್ಬನುಗ್ಗೆಕಾಯಿವಿಧಾನ ಸಭೆರಾಮಾನುಜಕರ್ಣಾಟ ಭಾರತ ಕಥಾಮಂಜರಿಪಂಜಾಬ್ಸಿದ್ಧರಾಮಮಲೇರಿಯಾಭಾರತದ ಸಂಸತ್ತುಕರ್ನಾಟಕದ ನದಿಗಳು೧೭೮೫ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಕಲಾವಿದದಾಳಿಂಬೆಗ್ರಾಮ ಪಂಚಾಯತಿಇಂದಿರಾ ಗಾಂಧಿವಿಜಯಪುರ ಜಿಲ್ಲೆಜಾಹೀರಾತುತ್ರಿಕೋನಮಿತಿಯ ಇತಿಹಾಸಮೊಘಲ್ ಸಾಮ್ರಾಜ್ಯಆಡಮ್ ಸ್ಮಿತ್ಜವಾಹರ‌ಲಾಲ್ ನೆಹರುಅಕ್ಟೋಬರ್ಬುಧಕ್ರೀಡೆಗಳುಕಾದಂಬರಿಮಳೆಭಾರತದ ಚುನಾವಣಾ ಆಯೋಗಒಕ್ಕಲಿಗಯಕೃತ್ತುವ್ಯಾಪಾರಪಾಲುದಾರಿಕೆ ಸಂಸ್ಥೆಗಳುಗೋವಿಂದ ಪೈಕಥೆಆದಿ ಶಂಕರಪುನೀತ್ ರಾಜ್‍ಕುಮಾರ್ಚಂದ್ರಶ್ರೀ. ನಾರಾಯಣ ಗುರುಕರ್ಬೂಜಜೈಮಿನಿ ಭಾರತದಲ್ಲಿ ನವರಸಗಳುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಹಸ್ತ ಮೈಥುನ🡆 More