ಪ್ರಭಾಸ್

ಪ್ರಭಾಸ್ ಇವರ ಪೂರ್ಣ ಹೆಸರು ವೆಂಕಟ ಸತ್ಯನಾರಾಯಣ ಪ್ರಭಾಸ್ ರಾಜು ಉಪಲಪತಿ.

ಸಿನಿಮಾರಂಗದಲ್ಲಿ ಇವರಿಗೆ ಕೊಟ್ಟ ಹೆಸರು ಯಂಗ್ ರೆಬಲ್ ಸ್ಟಾರ್.ಅವರು ಬಿ.ಟೆಕ್/ಬಿ.ಇ ಪದವಿಯನ್ನು ಪಡೆದಿದ್ದಾರೆ . ಪ್ರಭಾಸ್ ೨೦೦೨ ರ ತೆಲುಗು ಆಕ್ಷನ್ ಚಿತ್ರ ಈಶ್ವರ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮಿರ್ಚಿ ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ಅತ್ಯುತ್ತಮ ನಟ ಎಂಬ ಬಿರುದನ್ನುಗಳಿಸಿ ರಾಜ್ಯ ನಂದಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇವರು ಪ್ರಭುದೇವ ರವರ ೨೦೧೪ ರ ಹಿಂದಿ ಚಲನಚಿತ್ರ ಆಕ್ಷನ್ ಜಾಕ್ಸನ್ ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಇವರು ಮಹೀಂದ್ರ ಟಿಯುವಿ ೩೦೦ ಕಾರ್‌ನ ಗ್ರಾಂಡ್ ಅಂಬಾಸಿದಾರ್.

ಪ್ರಭಾಸ್
ಪ್ರಭಾಸ್
Born
ವೆಂಕಟ ಸತ್ಯನಾರಾಯಣ ಪ್ರಭಾಸ್ ರಾಜು ಉಪಲಪತಿ

(1979-10-23) ೨೩ ಅಕ್ಟೋಬರ್ ೧೯೭೯ (ವಯಸ್ಸು ೪೪)
ಮದ್ರಾಸ್, ಭಾರತ.
Alma materಶ್ರೀ ಚೈತನ್ಯ ಕಾಲೇಜು , ಹೈದರಾಬಾದ್
Occupationನಟ
Years active೨೦೦೨ –
Parent
  • ಉಪಲಪತಿ ಸೂರ್ಯ ನಾರಾಯಣ ರಾಜು (father)
Relativesಕೃಷ್ಣಂ ರಾಜು ಉಪಲಪತಿ (ಮಾವ)
Awardsಐಫಾ ಅವಾರ್ಡ್, ನಂದಿ ಅವಾರ್ಡ್, ಫಿಲ್ಮ್‌ಫೇರ್
Websitewww.prabhas.com

ಜನನ , ಜೀವನ ಮತ್ತು ಶಿಕ್ಷಣ

ಇವರ ಹುಟ್ಟೂರು ಭೀಮಾವರಂ, ಆಂಧ್ರ ಪ್ರದೇಶ. ಇವರ ತಂದೆ ಉಪಕುಲಪತಿ ಸೂರ್ಯ ನಾರಾಯಣ ರಾಜು ಮತ್ತು ತಾಯಿ ಶಿವಕುಮಾರಿ. ಇವರ ತಂದೆ ತಾಯಿಯರಿಗೆ ಮೂರು ಜನ ಮಕ್ಕಳು. ಅದರಲ್ಲಿ ಪ್ರಭಾಸ್ ಕಿರಿಯ ಮಗ. ಇವರ ಅಣ್ಣ ಪ್ರಮೋದ್ ಮತ್ತು ಅಕ್ಕ ಪ್ರಗತಿ. ಪ್ರಭಾಸ್ ತೆಲುಗು ನಟ ಕೃಷ್ಣ ರಾಜು ಉಪಲಪತಿ ಅವರ ಸೋದರಳಿಯ. ಅವರ ಮೂಲಕ ಪ್ರಭಾಸ್ ಸಿನಿಮಾ ರಂಗಕ್ಕೆ ಕಾಲಿಟ್ಟರು. ಪ್ರಭಾಸ್ ಹುಟ್ಟಿದ ದಿನಾಂಕ ೨೩ ಅಕ್ಟೋಬರ್ ೧೯೭೯ ತಮಿಳುನಾಡಿನ ಚೆನ್ನೈ ನಲ್ಲಿ. ಡಿ.ಎಸ್.ಆರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಇವರು ಪದವಿ ಪೂರ್ವ ಶಿಕ್ಷಣ ಹೈದರಾಬಾದಿನ ಶ್ರೀ ಚೈತನ್ಯ ಕಾಲೇಜಿನಲ್ಲಿ ಪಡೆದರು .

ಸಿನಿಮಾಗಳು

ಈಶ್ವರ್ (೨೦೦೨) ಎಂಬ ಸಿನಿಮಾದ ಮೂಲಕ ತಮ್ಮ ಅಭಿನಯ ವೃತ್ತಿಯನ್ನು ಪ್ರಾರಂಭಿಸಿದರು. ಇವರ ಎರಡನೆಯ ಚಿತ್ರ ರಾಘವೇಂದ್ರ (೨೦೦೩). ೨೦೦೪ ರಲ್ಲಿ ಇವರ ಮೂರನೆಯ ಚಿತ್ರ ವರ್ಷಂ ಮತ್ತು ಅಡವಿ ರಾಯುಡು. ೨೦೦೫ ರಲ್ಲಿ ಚಕ್ರಂ ಮತ್ತು ಚತ್ರಪತಿ. ೨೦೦೬ ರಲ್ಲಿ ಪೌರ್ಣಮಿ, ೨೦೦೭ ರಲ್ಲಿ ಯೋಗಿ ಮತ್ತು ಮುನ್ನ, ೨೦೦೮ ರಲ್ಲಿ ಬುಜ್ಜಿಗಾಡು, ೨೦೦೯ ರಲ್ಲಿ ಬಿಲ್ಲ ಮತ್ತು ಏಕ್ ನಿರಂಜನ್, ೨೦೧೦ ರಲ್ಲಿ ಡಾರ್ಲಿಂಗ್, ೨೦೧೧ ರಲ್ಲಿ ಮಿಸ್ಟರ್ ಪರ್ಫೆಕ್ಟ್, ೨೦೧೨ ರಲ್ಲಿ ರೆಬೆಲ್, ೨೦೧೩ ರಲ್ಲಿ ಮಿರ್ಚಿ, ೨೦೧೫ ರಲ್ಲಿ ಬಾಹುಬಲಿ ದಿ ಬಿಗಿನಿಂಗ್, ೨೦೧೭ ರಲ್ಲಿ ಬಾಹುಬಲಿ ದಿ ಕನ್‌ಕ್ಲೂಷನ್, ೨೦೧೭ ರಲ್ಲಿ ಭಾಗ್‌ಮತಿ, ದಂಡ, ಸೆಪ್ಟೆಂಬರ್ ೨೦೦೫ ರಲ್ಲಿ ಎಸ್.ಎಸ್.ರಾಜಮೌಳಿ ನಿರ್ದೇಶಿಸಿರುವ ಚತ್ರಪತಿ ಸಿನಿಮಾದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ ಮತ್ತು ೨೦೧೫ ರಲ್ಲಿ ರಾಜಮೌಳಿ ನಿರ್ದೇಶನದ ಬಾಹುಬಲಿಯಲ್ಲಿ ನಟರಾಗಿ ಅಭಿನಯಿಸಿದ್ದಾರೆ. ಇತ್ತೀಚಿನ ಸುದ್ದಿಯಂತೆ ನಟ ಪ್ರಭಾಸ್ ಸಾಹೋ ಎಂಬ ಹೊಸ ಚಲನಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

ವೃತ್ತಿಜೀವನ ಮತ್ತು ಸಿನಿಮಾದ ಪಾತ್ರಗಳು

ಪ್ರಭಾಸ್ ತಮ್ಮ ವೃತ್ತಿಜೀವನವನ್ನು ೨೦೦೨ ರಲ್ಲಿ ಜಯಂತ್ ಸಿ ಪರಂಜೀ ನಿರ್ದೇಶನದ ಈಶ್ವರ್ ಸಿನಿಮಾದಲ್ಲಿ ತಾಯಿ ಇಲ್ಲದ ಮಗುವಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ೧೧ ನವೆಂಬರ್ ೨೦೦೨ ರಲ್ಲಿ ಬಿಡುಗಡೆ ಮಾಡಿದರು. ಸುರೇಶ್ ಕೃಷ್ಣ ನಿರ್ದೇಶನದ ರಾಘವೇಂದ್ರ ಸಿನಿಮಾದಲ್ಲಿ ರಾಘವ ಎಂಬ ಹೆಸರಿನಲ್ಲಿ ಅನ್ಯಾಯದ ವಿರುದ್ಧ ಹೋರಾಟಗಾರನಾಗಿ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ೨೦೦೩ ರಲ್ಲಿ ಬಿಡುಗಡೆ ಮಾಡಿದರು. ಶೋಭನ್ ನಿರ್ದೇಶನದ ವರ್ಷ ಸಿನಿಮಾದಲ್ಲಿ ರಾಮು ಎಂಬ ಹೆಸರಿನಿಂದ ಅಭಿನಯಿಸಿದ್ದಾರೆ. ವರ್ಷ ಸಿನಿಮಾವು ೫೦ ದಿನಗಳ ಕಾಲ ೧೨೫ ಕಡೆ ಪ್ರದರ್ಶನವಾಗಿತ್ತು ಮತ್ತು ೧೦೦ ದಿನಗಳ ಕಾಲ ೬೮ ಕಡೆ ಪ್ರಸಾರವಾಗಿತ್ತು. ಬಿ.ಗೋಪಾಲ್ ನಿರ್ದೇಶನದ ಅಡವಿರಾಯುಡು ಸಿನಿಮಾವನ್ನು ೨೧ ಮೇ ೨೦೦೪ ರಲ್ಲಿ ಬಿಡುಗಡೆ ಮಾಡಿದರು. ಕೃಷ್ಣ ವಂಶಿ ನಿರ್ದೇಶನದ ಚಕ್ರಂ ಸಿನಿಮಾದಲ್ಲಿ ಒಂದು ಆಸ್ಪತ್ರೆಯನ್ನು ಕಟ್ಟಿ ಬಡವರಿಗೆ ಸಹಾಯ ಮಾಡುವ ಆಸೆ ಕನಸನ್ನು ತುಂಬಿಕೊಂಡವನಂತೆ ಮತ್ತು ಕ್ಯಾನ್ಸರ್ ವ್ಯಾದಿಯಿಂದ ಬಳಲುತ್ತಿದ್ದು ಸಾವಿಗೆ ಹತ್ತಿರವಾಗಿದ್ದು ಎಲ್ಲರನ್ನು ಸಂತೋಷದಿಂದ ನಕ್ಕುನಲಿಸುವನಂತೆ ಅಭಿನಯಿಸಿದ್ದಾರೆ. ಈ ಸಿನಿಮಾ ೨೫ ಮಾರ್ಚ್ ೨೦೦೫ ರಲ್ಲಿ ಬಿಡುಗಡೆಯಾಯಿತು. ಎಸ್.ಎಸ್.ರಾಜಮೌಳಿ ನಿರ್ದೇಶನದ ಚತ್ರಪತಿ ಸಿನಿಮಾದಲ್ಲಿ ಶಿವಾಜಿ ಎಂಬ ಹೆಸರಿನಿಂದ ತಾನು ತನ್ನ ಅಮ್ಮನಿಂದ ದೂರವಾದವನಂತೆ ಅಭಿನಯಿಸಿದ್ದಾರೆ. ಈ ಸಿನಿಮಾ ೧೦೦ ದಿನ ೫೪ ಕಡೆ ಪ್ರದರ್ಶನವಾಯಿತು. ಪ್ರಭುದೇವಾ ನಿರ್ದೇಶನದ ಪೌರ್ಣಮಿ ಸಿನಿಮಾವನ್ನು ೨೧ ಏಪ್ರಿಲ್ ೨೦೦೬ ರಲ್ಲಿ ಬಿಡುಗಡೆ ಮಾಡಲಾಯಿತು. ಈ ಸಿನಿಮಾದಲ್ಲಿ ಶಿವಕೇಶವ ಎಂಬ ಹೆಸರಿನಿಂದ ಎಲ್ಲಾ ಕಲೆಯನ್ನು ಹೊಂದಿದವರಂತೆ ಅಭಿನಯಿಸಿದ್ದಾರೆ. ವಿ.ವಿ.ವಿನಾಯಾ ನಿರ್ದೇಶನದ ಯೋಗಿ ಸಿನಿಮಾದಲ್ಲಿ ಈಶ್ವರ ಚಂದ್ರ ಪ್ರಸಾದ್ ಎಂಬ ಹೆಸರಿನಿಂದ ಅಭಿನಯಿಸಿದ್ದಾರೆ. ಈ ಸಿನಿಮಾದಿಂದ ೨೫ ಕೋಟಿ ಸಂಪಾದನೆಯಾಯಿತು. ಯೋಗಿ ಯಶಸ್ಸನ್ನು ಕೊಟ್ಟ ಸಿನಿಮಾ. ವಂಶಿ ಪೈಡಿಪಲ್ಲಿ ನಿರ್ದೇಶನದ ಮುನ್ನ ಸಿನಿಮಾವನ್ನು ೨೭ ಏಪ್ರಿಲ್ ೨೦೦೭ ರಲ್ಲಿ ಬಿಡುಗಡೆ ಮಾಡಿದರು. ಮುನ್ನ ಎಂಬ ಹೆಸರಿನಿಂದ ಕಾಲೇಜಿನ ವಿದ್ಯಾರ್ಥಿಯಾಗಿ ಅಭಿನಯಿಸಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ಬುಜ್ಜಿಗಾಡು ಸಿನಿಮಾದಲ್ಲಿ ಬುಜ್ಜಿ ಎಂಬ ಹೆಸರಿನಿಂದ ಅಭಿನಯಿಸಿದ್ದಾರೆ. ಮೆಹೆರ್ ರಮೇಶ್ ನಿರ್ದೇಶನದ ಬಿಲ್ಲಾ ಸಿನಿಮಾದಲ್ಲಿ ಭೂಗತರ ದೊರಯಾಗಿ ಬಿಲ್ಲಾ ಎಂಬ ಹೆಸರಿನಿಂದ ಅಭಿನಯಿಸಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ಏಕ್ ನಿರಂಜನ ಸಿನಿಮಾ ೩೦ ಅಕ್ಟೋಬರ್ ೨೦೦೯ ರಲ್ಲಿ ಇಡೀ ಆಂದ್ರಪ್ರದೇಶದಾದ್ಯಂತ ೭೦೦ ಚಿತ್ರಮಂದಿರಗಳಲ್ಲಿ ಪ್ರಸಾರವಾಗಿತ್ತು. ಮೊದಲನೇ ವಾರದಲ್ಲಿ ೨೧ ಕೋಟಿ ಸಂಪಾದನೆ ಮಾಡಿತು. ಚೋಟು ಎಂಬ ಹೆಸರಿನಿಂದ ಪೊಲೀಸರಿಗೆ ಕಳ್ಳರನ್ನು ಹಿಡಿದುಕೊಳ್ಳಲು ಸಹಾಯ ಮಾಡುವನಂತೆ ಮತ್ತು ತನ್ನ ತಂದೆ ತಾಯಿಯನ್ನು ಹುಡುಕುವ ಮಗನಂತೆ ಅಭಿನಯಿಸಿದ್ದಾರೆ. ಕರುಣಾಕರನ್ ನಿರ್ದೇಶನದ ಡಾರ್ಲಿಂಗ್ ಸಿನಿಮಾ ೨೩ ಏಪ್ರಿಲ್ ೨೦೧೦ ರಲ್ಲಿ ಮೊದಲನೇ ವಾರದಲ್ಲಿ ೧೦ ಕೋಟಿ ಆಂದ್ರದಲ್ಲಿ, ೮ ಕೋಟಿ ನಿಜಾಮ್‌ನಲ್ಲಿ ಸಂಪಾದನೆ ಮಾಡಿತು. ೧೫ ಕಡೆ ೧೦೦ ದಿನಗಳ ಕಾಲ ಪ್ರದರ್ಶನವಾಯಿತು. ಪ್ರಭು ಎಂಬ ಹೆಸರಿನಿಂದ ತಾನು ಪ್ರೀತಿಸಿದ ಹುಡುಗಿಯನ್ನು ಪಡೆದುಕೊಳ್ಳುವನಂತೆ ಅಭಿನಯಿಸಿದ್ದಾರೆ. ಮಿಸ್ಟರ್ ಪರ್‌ಫೆಕ್ಟ್ ಸಿನಿಮಾ ೨೨ ಏಪ್ರಿಲ್ ೨೦೧೧ ರಲ್ಲಿ ಬಿಡುಗಡೆಯಾಗಿ ೨೮ ಕೋಟಿ ಸಂಪಾದಿಸಿತು. ೧೦೦ ದಿನಗಳ ಕಾಲ ಪ್ರದರ್ಶನವಾಯಿತು. ವಿಕ್ಕಿ ಎಂಬ ಹೆಸರಿನಿಂದ ಸಾಫ್ಟ್‌ವೇರ್ ಆಗಿ ಅಭಿನಯಿಸಿದ್ದಾರೆ. ೨೦೧೧ ರಲ್ಲಿ ಈ ಸಿನಿಮಾ ಇವರಿಗೆ ಒಂದು ದೊಡ್ಡ ತಿರುವನ್ನು ಕೊಟ್ಟಿತು. ರಾಘವ ಲಾರೆನ್ಸ್ ನಿರ್ದೇಶನದ ರೆಬಲ್ ಸಿನಿಮಾ ೨೮ ಸೆಪ್ಟೆಂಬರ್ ೨೦೧೨ ರಲ್ಲಿ ಬಿಡುಗಡೆಯಾಗಿ ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಿದರು. ರಿಶಿ ಎಂಬ ಹೆಸರಿನಿಂದ ತಂದೆಗೆ ತಕ್ಕ ಮಗನಂತೆ ಅಭಿನಯಿಸಿದ್ದಾರೆ. ಕೋರಟಾಲ ಶಿವ ನಿರ್ದೇಶನದ ಮಿರ್ಚಿ ಸಿನಿಮಾದಲ್ಲಿ ಜೈ ಎಂಬ ಹೆಸರಿನಿಂದ ಅಭಿನಯಿಸಿದ್ದಾರೆ. ೫೦ ದಿನಗಳ ಕಾಲ ೨೩೮ ಕಡೆ ಪ್ರದರ್ಶನವಾಗಿತ್ತು. ಇದರಲ್ಲಿ ತನ್ನ ಕುಟುಂಬವನ್ನು ಶತೃಗಳಿಂದ ಕಾಪಾಡುವ ಮಗನಾಗಿ ಅಭಿನಯಿಸಿದ್ದಾರೆ.

ಫಿಲ್ಮೋಗ್ರಾಫಿ

ಪ್ರಭಾಸ್ 
ಬಾಹುಬಲಿ ೨: ದಿ ಕನ್‌ಕ್ಲೂಷನ್ ‌ನ ಹಿಂದಿ ಆವೃತ್ತಿಯ ಟ್ರೈಲರ್ ಲಾಂಚ್‌ನಲ್ಲಿ ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ಎಸ್.ಎಸ್.ರಾಜಮೌಳಿ, ಕರಣ್ ಜೋಹರ್, ಪ್ರಭಾಸ್, ರಾಣ ದಗ್ಗುಬಾಟಿ
Key
ಪ್ರಭಾಸ್  Denotes films that have not yet been released
ವರ್ಷ ಶೀರ್ಷಿಕೆ ಪಾತ್ರ ಭಾಷೆ ಟಿಪ್ಪಣಿ
೨೦೦೨ ಈಸ್ವರ್ ಈಸ್ವರ್ ತೆಲುಗು ಡೆಬ್ಯೂಟ್
೨೦೦೩ ರಾಘವೇಂದ್ರ ರಾಘವೇಂದ್ರ
೨೦೦೪ ವರ್ಷಂ ವೆಂಕಟ್
೨೦೦೪ ಅಡವಿ ರಾಮುಡು ರಾಮುಡು
೨೦೦೫ ಚಕ್ರಂ ಚಕ್ರಂ
೨೦೦೫ ಚತ್ರಪತಿ ಸಿವ / ಚತ್ರಪತಿ
೨೦೦೬ ಪೌರ್ಣಮಿ ಸಿವ ಕೇಸವ
೨೦೦೭ ಯೋಗಿ ಈಸ್ವರ್ ಪ್ರಸಾದ್/ ಯೋಗಿ
೨೦೦೭ ಮುನ್ನ ಮುನ್ನ
೨೦೦೮ ಬುಜ್ಜಿಗಾಡು ಬುಜ್ಜಿ / ಲಿಂಗ ರಾಜು/ ರಜಿನಿಕಾಂತ್
2009 ಬಿಲ್ಲ ಬಿಲ್ಲ / ರಂಗ
2009 ಏಕ್‌ ನಿರಂಜನ್ ಚೋಟು
2010 ಡಾರ್ಲಿಂಗ್ ಪ್ರಭಾಸ್ / ಪ್ರಭಾ
೨೦೧೧ ಮಿಸ್ಟರ್‌ ಪರ್ಫೆಕ್ಟ್ ವಿಕ್ಕಿ
೨೦೧೨ ರೆಬೆಲ್ ರಿಷಿ / ರೆಬೆಲ್
೨೦೧೨ Denikaina Ready ಸ್ವತಃ ಹಿನ್ನಲೆ ಧ್ವನಿ; ಕಿರು ಪಾತ್ರ
೨೦೧೩ ಮಿರ್ಚಿ ಜೈ
೨೦೧೪ ಆಕ್ಷನ್ ಜಾಕ್ಸನ್ ಸ್ವತಃ ಹಿಂದಿ ವಿಶೇಷ ಪಾತ್ರ
೨೦೧೫ ಬಾಹುಬಲಿ:ದಿ ಬಿಗಿನಿಂಗ್ ಮಹೇಂದ್ರ ಬಾಹುಬಲಿ / ಶಿವುಡು / ಶಿವು
ಅಮರೇಂದ್ರ ಬಾಹುಬಲಿ
Telugu
Tamil
First non-English film screened at Royal Albert Hall
೨೦೧೭ ಬಾಹುಬಲಿ ೨: ದಿ ಕನ್‌ಕ್ಲೂಷನ್ Second highest grossing Indian film of 2018
೨೦೧೯ ಸಾಹೋ ಅಶೋಕ ಚಕ್ರವರ್ತಿ / ಸಿದ್ದಾಂತ್ ನಂದನ್ ಸಾಹೊ ತೆಲುಗು
ತಮಿಳು
ಹಿಂದಿ
Bollywood debut
೨೦೨೦ ರಾಧೆ ಶ್ಯಾಮ್ ವಿಕ್ರಮಾದಿತ್ಯ ತೆಲುಗು

ಹಿಂದಿ

releasing on 14 February 2022
೨೦೨೨ ಆದಿಪುರುಷ್ ಶ್ರೀರಾಮ ತೆಲುಗು ಹಿಂದಿ Releasing on 2022

ಪ್ರಶಸ್ತಿಗಳು

ಇವರು ವರ್ಷಂ ಸಿನಿಮಾಗೆ ೨೦೦೪ ರಲ್ಲಿ ಫಿಲಂಫೇರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು . ೨೦೧೦ ರಲ್ಲಿ ಸಿನಿಮಾ ಪ್ರಶಸ್ತಿ, ೨೦೧೨ ರಲ್ಲಿ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಸಿನಿಮಾ ಪ್ರಶಸ್ತಿ, ಲಕ್ಸ್ ಸಿನಿಮಾ ಅವಾರ್ಡ್‌ನಲ್ಲಿ ೨೦೧೧ ರಲ್ಲಿ ಉತ್ತಮ ನಟ ಪ್ರಶಸ್ತಿ,ಬಾಹುಬಲಿ ಸಿನಿಮಾಗೆ ನ್ಯಾಷನಲ್ ಅವಾರ್ಡ್ ಪ್ರಶಸ್ತಿ ಪಡೆದರು. ೨೦೧೨ ರಲ್ಲಿ ಪ್ರಭಾಸ್ ಟಿ.ಟೌನ್‌ನಲ್ಲಿ ಹ್ಯಾಡ್‌ಸಮ್ ನಾಯಕನಟ ಎಂದು ಆಯ್ಕೆಯಾದರು. ೨೦೦೪ ರಲ್ಲಿ ವರ್ಷಂ ಸಿನಿಮಾಗೆ ಉತ್ತಮ ನಾಯಕ ನಟ, ೨೦೦೫ ರಲ್ಲಿ ಚತ್ರಪತಿ ಸಿನಿಮಾಗೆ ಫಿಲಂಫೇರ್ ಪ್ರಶಸ್ತಿಗೆ ಉತ್ತಮ ನಾಯಕನಟ ಎಂದು, ೨೦೦೯ ರಲ್ಲಿ ಏಕ್ ನಿರಂಜನ್ ಎಂಬ ಸಿನಿಮಾದ ಉತ್ತಮ ನಟ ಪ್ರಶಸ್ತಿಗೆ, ೨೦೧೧ ರಲ್ಲಿ ಮಿಸ್ಟರ್ ಪರ್‌ಫೆಕ್ಟ್ ಸಿನಿಮಾಗೆ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಸಿನಿಮಾ ಪ್ರಶಸ್ತಿಗೆ ಇವರ ಹೆಸರು ಆಯ್ಕೆಯಾಗಿತ್ತು.

ಗ್ಯಾಲರಿ

ಉಲ್ಲೇಖಗಳು


Tags:

ಪ್ರಭಾಸ್ ಜನನ , ಜೀವನ ಮತ್ತು ಶಿಕ್ಷಣಪ್ರಭಾಸ್ ಸಿನಿಮಾಗಳುಪ್ರಭಾಸ್ ವೃತ್ತಿಜೀವನ ಮತ್ತು ಸಿನಿಮಾದ ಪಾತ್ರಗಳುಪ್ರಭಾಸ್ ಫಿಲ್ಮೋಗ್ರಾಫಿಪ್ರಭಾಸ್ ಪ್ರಶಸ್ತಿಗಳುಪ್ರಭಾಸ್ ಗ್ಯಾಲರಿಪ್ರಭಾಸ್ ಉಲ್ಲೇಖಗಳುಪ್ರಭಾಸ್

🔥 Trending searches on Wiki ಕನ್ನಡ:

ಬರಗೂರು ರಾಮಚಂದ್ರಪ್ಪಮಂಜಮ್ಮ ಜೋಗತಿಭೌಗೋಳಿಕ ಲಕ್ಷಣಗಳುದ್ರವ್ಯಪಿ.ಲಂಕೇಶ್ರಾಮಕರಾವಳಿ ಚರಿತ್ರೆರೇಣುಕಸರ್ ಐಸಾಕ್ ನ್ಯೂಟನ್ಬಿ.ಎ.ಸನದಿಬ್ಯಾಬಿಲೋನ್ಪಲ್ಸ್ ಪೋಲಿಯೋಕೃಷಿಬೆಸಗರಹಳ್ಳಿ ರಾಮಣ್ಣಕನ್ನಡ ರಂಗಭೂಮಿಗ್ರಾಹಕರ ಸಂರಕ್ಷಣೆಸಂಸ್ಕೃತಹಂಸಲೇಖಸರಸ್ವತಿಮೈಸೂರು ರಾಜ್ಯಧನಂಜಯ್ (ನಟ)ಕಿತ್ತೂರು ಚೆನ್ನಮ್ಮವಿಜಯನಗರ ಸಾಮ್ರಾಜ್ಯಮಗುವಿನ ಬೆಳವಣಿಗೆಯ ಹಂತಗಳುಲಿಂಗ ವಿವಕ್ಷೆಪುರಂದರದಾಸಜನಪದ ಕಲೆಗಳುಅರ್ಥಶಾಸ್ತ್ರತೆಲುಗುಸಂಚಿ ಹೊನ್ನಮ್ಮಭಾರತದ ರಾಜಕೀಯ ಪಕ್ಷಗಳುಬೌದ್ಧ ಧರ್ಮವಿಶ್ವ ಕನ್ನಡ ಸಮ್ಮೇಳನಗೋತ್ರ ಮತ್ತು ಪ್ರವರಹಣಕಾಸುದ್ರಾವಿಡ ಭಾಷೆಗಳುರಾಮ ಮನೋಹರ ಲೋಹಿಯಾಭಾರತೀಯ ವಿಜ್ಞಾನ ಸಂಸ್ಥೆಯುರೋಪ್ಸಿದ್ಧರಾಮತಾಜ್ ಮಹಲ್ಮೊಘಲ್ ಸಾಮ್ರಾಜ್ಯಸಂವಹನಮಾದಿಗಭಾರತದ ಸಂಸತ್ತುಕರ್ಮಧಾರಯ ಸಮಾಸಬಾಲ ಗಂಗಾಧರ ತಿಲಕವಿಭಕ್ತಿ ಪ್ರತ್ಯಯಗಳುಬಾಬು ಜಗಜೀವನ ರಾಮ್ಗೋಲ ಗುಮ್ಮಟಕರ್ನಾಟಕ ವಿಧಾನ ಪರಿಷತ್ಸಮಾಸಕಾಡ್ಗಿಚ್ಚುದುರ್ಯೋಧನಕಟ್ಟುಸಿರುಸಂಭೋಗಕಯ್ಯಾರ ಕಿಞ್ಞಣ್ಣ ರೈಮೊಗಳ್ಳಿ ಗಣೇಶಕರ್ನಾಟಕ ಐತಿಹಾಸಿಕ ಸ್ಥಳಗಳುದಾಸ ಸಾಹಿತ್ಯರಷ್ಯಾಬಿ.ಎಲ್.ರೈಸ್ದುರ್ಗಸಿಂಹಬ್ಯಾಸ್ಕೆಟ್‌ಬಾಲ್‌ಐಹೊಳೆರಾಣೇಬೆನ್ನೂರುಕಲೆಚೋಳ ವಂಶರೈಲು ನಿಲ್ದಾಣರಾಹುಲ್ ಗಾಂಧಿಆಲೂರು ವೆಂಕಟರಾಯರುದಲಿತಪಂಜೆ ಮಂಗೇಶರಾಯ್ಚಾಮುಂಡರಾಯಗಾಂಧಿ ಮತ್ತು ಅಹಿಂಸೆಕರ್ನಾಟಕ ಪೊಲೀಸ್ಮರುಭೂಮಿವಿಷ್ಣುಶರ್ಮದಾಸವಾಳ🡆 More