ಅದ್ವೈತ ವೇದಾಂತದಲ್ಲಿ ಕಾರಣ ಮತ್ತು ಕಾರ್ಯ

ಕಾರಣ ಮತ್ತು ಕಾರ್ಯಗಳು ವೇದಾಂತದ ಎಲ್ಲ ಪಂಥಗಳಲ್ಲಿ ಮುಖ್ಯವಾದ ವಿಷಯವಾಗಿದೆ.

ಹಿಂದೂ ಧರ್ಮ ಮತ್ತು ಇತರ ಭಾರತೀಯ ಧರ್ಮಗಳ ಪ್ರಾಚೀನ ಮತ್ತು ಮಧ್ಯಯುಗದ ಪಠಗಳಲ್ಲಿ ಈ ಪರಿಕಲ್ಪನೆಗಳನ್ನು ಸಮಾನ ಅರ್ಥದ ಪದಗಳನ್ನು ಬಳಸಿ ಚರ್ಚಿಸಲಾಗಿದೆ. ಕಾರಣವನ್ನು ಬೇರೆ ಪದಗಳಿಂದ ನಿರ್ದೇಶಿಸಲಾಗುತ್ತದೆ, ಉದಾಹರಣೆಗೆ ನಿದಾನ, ಹೇತು, ಮೂಲ, ಮತ್ತು ಕಾರ್ಯವನ್ನು ಬೇರೆ ಪದಗಳಿಂದ ನಿರ್ದೇಶಿಸಲಾಗುತ್ತದೆ, ಉದಾಹರಣೆಗೆ ಫಲ, ಪರಿಣಾಮ ಅಥವಾ ಶುಂಗ. ವೇದಾಂತದ ಉಪಪಂಥಗಳು ಭಿನ್ನ ಕಾರಣತ್ವ ಸಿದ್ಧಾಂತಗಳನ್ನು ಪ್ರಸ್ತಾಪಿಸಿ ಚರ್ಚಿಸಿವೆ.

ವೇದಾಂತದ ಎಲ್ಲ ಪಂಥಗಳು ಸತ್ಕಾರ್ಯವಾದದ ಸಿದ್ಧಾಂತಕ್ಕೆ ಒಪ್ಪುತ್ತವೆ, ಇದರರ್ಥ ಪರಿಣಾಮವು ಕಾರಣದಲ್ಲಿ ಮೊದಲೇ ಅಸ್ತಿತ್ವದಲ್ಲಿರುತ್ತದೆ. ಆದರೆ ತತ್ವ ಮೀಮಾಂಸೆಯ ಬ್ರಹ್ಮದ ದೃಷ್ಟಿಯಿಂದ, ಕಾರಣ ಸಂಬಂಧ ಮತ್ತು ಅನುಭವಾತ್ಮಕ ಪ್ರಪಂಚದ ಸ್ವರೂಪದ ಮೇಲೆ ಭಿನ್ನ ದೃಷ್ಟಿಕೋನಗಳಿವೆ. ಬ್ರಹ್ಮ ಸೂತ್ರಗಳು, ಪ್ರಾಚೀನ ವೇದಾಂತಿಗಳು, ವೇದಾಂತದ ಬಹುತೇಕ ಉಪಪಂಥಗಳು, ಜೊತೆಗೆ ಹಿಂದೂ ತತ್ವಶಾಸ್ತ್ರದ ಸಾಂಖ್ಯ ಪಂಥಗಳು ಪರಿಣಾಮವಾದವನ್ನು ಬೆಂಬಲಿಸುತ್ತವೆ. ಪರಿಣಾಮವಾದ ಎಂದರೆ ವಿಶ್ವವು ಬ್ರಹ್ಮದ ವಾಸ್ತವ ರೂಪಾಂತರವಾಗಿದೆ (ಪರಿಣಾಮ) ಎಂಬ ಕಲ್ಪನೆ.

ಆದಿ ಶಂಕರರು ಮತ್ತು ಅವರ ಅದ್ವೈತ ವೇದಾಂತವು ವಿವರ್ತದ ಮೂಲಕ ಕಾರಣತ್ವವನ್ನು ವಿವರಿಸಿತೇ ಎಂಬ ಬಗ್ಗೆ ವಿದ್ವಾಂಸರು ಭೇದ ಹೊಂದಿದ್ದಾರೆ. ನಿಕೋಲ್ಸನ್‌ರ ಪ್ರಕಾರ, ಪರಿಣಾಮವಾದದ ಬದಲಾಗಿ, ವಿವರ್ತವಾದವು ಪ್ರತಿಸ್ಪರ್ಧಿ ಕಾರಣತ್ವ ಸಿದ್ಧಾಂತವಾಗಿದೆ. "ವಿಶ್ವವು ಕೇವಲ ಬ್ರಹ್ಮದ ಅವಾಸ್ತವ ಅಭಿವ್ಯಕ್ತಿಯಾಗಿದೆ (ವಿವರ್ತ)" ಎಂದು ವಿವರ್ತವಾದವು ಹೇಳುತ್ತದೆ. ಬ್ರಹ್ಮವು ಮಾರ್ಪಾಡು ಹೊಂದುವಂತೆ ತೋರುತ್ತದಾದರೂ, ವಾಸ್ತವದಲ್ಲಿ ಯಾವುದೇ ನಿಜವಾದ ಬದಲಾವಣೆಯಾಗುವುದಿಲ್ಲ ಎಂದು ವಿವರ್ತವಾದವು ಹೇಳುತ್ತದೆ. ಅಸಂಖ್ಯಾತ ಜೀವಿಗಳು ಅವಾಸ್ತವ ಅಭಿವ್ಯಕ್ತಿಯಾಗಿವೆ, ಏಕೆಂದರೆ ಬ್ರಹ್ಮ ಮಾತ್ರ ನಿಜವಾದ ಜೀವಿಯಾಗಿದೆ, ಮತ್ತು ಹುಟ್ಟಿರದ, ಬದಲಾಗದ ಮತ್ತು ಸಂಪೂರ್ಣವಾಗಿ ಭಾಗಗಳನ್ನು ಹೊಂದಿರದ ಇದು ಅಂತಿಮ ಸತ್ಯತೆಯಾಗಿದೆ. ಆದಿ ಶಂಕರರ ಅನುಯಾಯಿಗಳಾದ ಅದ್ವೈತಿಗಳು ಈ ಭ್ರಾಮಕ, ಅವಾಸ್ತವ ರೂಪಾಂತರ ಆಧಾರಿತ ಕಾರಣತ್ವ ಸಿದ್ಧಾಂತದ ಪ್ರತಿಪಾದಕರಾಗಿದ್ದಾರೆ ಎಂದು ನಿಕೋಲ್ಸನ್ ಹೇಳುತ್ತಾರೆ. "ವಿಶ್ವವನ್ನು ವಾಡಿಕೆಯಾಗಿ ವಾಸ್ತವ ಎಂದು ವಿವರಿಸಬಹುದಾದರೂ, ವೈಯಕ್ತಿಕ ಆತ್ಮವು ಮುಕ್ತವಾಗುವುದಕ್ಕೆ ಮೊದಲು ಬ್ರಹ್ಮದ ಎಲ್ಲ ಪರಿಣಾಮಗಳನ್ನು ಅಂತಿಮವಾಗಿ ಅವಾಸ್ತವ ಎಂದು ಒಪ್ಪಿಕೊಳ್ಳಬೇಕು ಎಂದು ಅದ್ವೈತಿಗಳು ಸಾಧಿಸುತ್ತಾರೆ", ಎಂದು ನಿಕೋಲ್ಸನ್ ಸೇರಿಸುತ್ತಾರೆ.

ಉಲ್ಲೇಖಗಳು

Tags:

ವೇದಾಂತ

🔥 Trending searches on Wiki ಕನ್ನಡ:

ಶ್ರೀಕೃಷ್ಣದೇವರಾಯಅಡಿಕೆಮಯೂರವರ್ಮಜೀವಸತ್ವಗಳುಸಹಕಾರಿ ಸಂಘಗಳುಭಾರತದ ನದಿಗಳುಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್‌ಸದಾನಂದ ಮಾವಜಿಕಾಲಾಯ ತಸ್ಮೈ ನಮಃ (ಚಲನಚಿತ್ರ)ಸತಿರಾಯಲ್ ಚಾಲೆಂಜರ್ಸ್ ಬೆಂಗಳೂರುಆರ್ಚ್ ಲಿನಕ್ಸ್ನೀತಿ ಆಯೋಗನಿರುದ್ಯೋಗಚಾಲುಕ್ಯಅಸಹಕಾರ ಚಳುವಳಿವಿಜಯಪುರ ಜಿಲ್ಲೆಹಗ್ಗಗದ್ದಕಟ್ಟುವಿನಾಯಕ ಕೃಷ್ಣ ಗೋಕಾಕಕರ್ನಾಟಕದ ರಾಜ್ಯಪಾಲರುಗಳ ಪಟ್ಟಿನವಶಿಲಾಯುಗಯೇಸು ಕ್ರಿಸ್ತಕರ್ನಾಟಕ ಸ್ವಾತಂತ್ರ್ಯ ಚಳವಳಿಕನ್ನಡ ರಂಗಭೂಮಿರಾಷ್ಟ್ರೀಯ ಸೇವಾ ಯೋಜನೆನಾಗಮಂಡಲ (ಚಲನಚಿತ್ರ)ಮುಖ್ಯ ಪುಟಗುವಾಮ್‌‌‌‌ವಿಧಾನ ಸಭೆಹನುಮಂತಅರವಿಂದ್ ಕೇಜ್ರಿವಾಲ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುವಿತ್ತೀಯ ನೀತಿಭಾರತೀಯ ಕಾವ್ಯ ಮೀಮಾಂಸೆಕನ್ನಡ ರಾಜ್ಯೋತ್ಸವಸತಿ ಪದ್ಧತಿಸ್ತ್ರೀಪ್ರಬಂಧ ರಚನೆಗಣಿತಗ್ರಾಹಕರ ಸಂರಕ್ಷಣೆಅಗ್ನಿ(ಹಿಂದೂ ದೇವತೆ)ಯುಗಾದಿಸರ್ ಐಸಾಕ್ ನ್ಯೂಟನ್ಕೆಮ್ಮುಭತ್ತನಿರ್ವಹಣೆ ಪರಿಚಯಭಾರತದ ಸಂಸತ್ತುಪಂಚಾಂಗಆಲಮಟ್ಟಿ ಆಣೆಕಟ್ಟುಕರ್ನಾಟಕ ಲೋಕಸೇವಾ ಆಯೋಗಸಿಂಧೂ ನದಿಸಂಚಿ ಹೊನ್ನಮ್ಮಸಂಯುಕ್ತ ಕರ್ನಾಟಕನೀನಾದೆ ನಾ (ಕನ್ನಡ ಧಾರಾವಾಹಿ)ಡಿ. ದೇವರಾಜ ಅರಸ್ಸರ್ಪ ಸುತ್ತುಭಾರತೀಯ ಸಂವಿಧಾನದ ತಿದ್ದುಪಡಿಪ್ರಕಾಶ್ ರೈವಚನಕಾರರ ಅಂಕಿತ ನಾಮಗಳುಗೋಕಾಕ ಜಲಪಾತಶಬ್ದ ಮಾಲಿನ್ಯಭಾರತದ ರಾಷ್ಟ್ರಪತಿಚುನಾವಣೆನಯನ ಸೂಡರಾಜಸ್ಥಾನ್ ರಾಯಲ್ಸ್ಶಿವರಾಮ ಕಾರಂತರಾಮರವಿಚಂದ್ರನ್ಕಪ್ಪು ಇಲಿಸಾರ್ವಜನಿಕ ಆಡಳಿತಕಾವ್ಯಮೀಮಾಂಸೆಹದ್ದುನಾಲ್ವಡಿ ಕೃಷ್ಣರಾಜ ಒಡೆಯರುಲಂಚ ಲಂಚ ಲಂಚಉಪ್ಪಿನ ಸತ್ಯಾಗ್ರಹಮಾಹಿತಿ ತಂತ್ರಜ್ಞಾನ🡆 More