ಅಜಯ ಡಾಟ

  ಅಜಯ ಡಾಟ ಮಾಹಿತಿ ತಂತ್ರಜ್ಞಾನ ಮತ್ತು ಆಹಾರದ ಎಣ್ಣೆಗಳ ಕ್ಷೇತ್ರದ ಭಾರತೀಯ ಉದ್ಯಮಿ.

ಅವರ ಸಾರ್ವತ್ರಿಕ ಸ್ವೀಕೃತಿ ಗುಂಪಿ (ಯೂನಿವರ್ಸಲ್ ಅಕ್ಸೆಪ್ಟೆನ್ಸ್ ಸ್ಟೀರಿಂಗ್ ಗ್ರೂಪ್ (UASG)) ಅಧ್ಯಕ್ಷರು. ಅಂತರರಾಷ್ಟ್ರೀಯ ಡೊಮೈನ್ ಹೆಸರುಗಳನ್ನು ಒಳಗೊಂಡ ಪ್ರಪಂಚದ ಮೊದಲ ಭಾಷಾ ಇಮೈಲ್ ವಿಳಾಸವುಳ್ಳ ಮೊಬೈಲ್ ಅಪ್ಲಿಕೇಶನ್‌ಗಳ ರಚನೆಯನ್ನು ಅಜಯ ಡಾಟ ಮಾಡಿದ್ದರು. ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಭಾರತೀಯ ಭಾಷೆಗಳಲ್ಲಿ ಉನ್ನತ ಮಟ್ಟದ ಡೊಮೈನ್ (TLD) ಅನ್ನು ರೂಟ್ ಸರ್ವರ್‌ಗಳಿಗೆ ತರಲು ಅವರು ನಾಯಕತ್ವ ವಹಿಸಿದರು. ಈ ಸಾಧನೆಗಳಿಗಾಗಿ ಅವರು ಗ್ರಹಾಂ ಬೆಲ್ ಪ್ರಶಸ್ತಿ ಹಾಗೂ ಭಾಷೆ ಮತ್ತು ಲಿಪಿಗಳಿಗಾಗಿ ಮಾಡಿದ ಕೆಲಸಕ್ಕಾಗಿ ಪಂಡಿತ ದೀನದಯಾಳ್ ಉಪಾಧ್ಯಾಯ ಪ್ರಶಸ್ತಿಗಳನ್ನು ಪಡೆದರು. ಅವರು ಅಂತಾರಾಷ್ಟ್ರೀಯ ಡೊಮೈನ್ ಹೆಸರುಗಳನ್ನು ಅಡ್ಡಹೆಸರುಗಳೊಂದಿಗೆ ಬಳಸಲು ಮಾನದಂಡವನ್ನು ಪ್ರಸ್ತಾಪಿಸಿದ್ದರು. ಇದನ್ನು ಸಾರ್ವತ್ರಿ ಸ್ವೀಕೃತಿಯ ನಾಯಕತ್ವ ತಂಡದವರು ಉತ್ತಮ ಅಭ್ಯಾಸವೆಂದು ಸ್ವೀಕರಿಸಿದರು. ಅವರ ಮೊಬೈಲ್ ಅಪ್ಲಿಕೇಶನ್ ಸಿರಿಲಿಕ್, ಅರೇಬಿಕ್, ಥಾಯ್, ಮ್ಯಾಂಡರಿನ್, ಕೊರಿಯನ್ ಮತ್ತು 15 ಭಾರತೀಯ ಭಾಷೆಗಳನ್ನು ಒಳಗೊಂಡಂತೆ ಜಗತ್ತಿನ ೧೯ ಭಾಷೆಗಳಲ್ಲಿ ಇಮೈಲ್ ಸೌಲಭ್ಯವನ್ನು ಒದಗಿಸುತ್ತದೆ. ಇದು DataMail ಅಪ್ಲಿಕೇಶನ್ ಮೂಲಕ ಲಭ್ಯವಿದೆ.

ಅಜಯ ಡಾಟ
ಚಿತ್ರ:Ajay Data picture.jpg
Born (1973-03-22) ೨೨ ಮಾರ್ಚ್ ೧೯೭೩ (ವಯಸ್ಸು ೫೧)
ಖೈರ್ತಾಲ, ಭಾರತ
Nationalityಭಾರತೀಯ
Occupationಡಾಟಾ ಇಂಜೀನಿಯಸ್ ಗ್ಲೋಬಲ್ ಲಿ. ಕಂಪೆನಿ ಮುಖ್ಯಸ್ಥ
Spouseನಿಧಿ ಎ. ಡಾಟ
Children2
Awards೨೦೧೭ರ ಎಂಟರ್‌ಪ್ರೈಸ್ ಸೊಲ್ಯೂಷನ್ ವಿಭಾಗದಲ್ಲಿ ಅತ್ಯುತ್ತಮ ನಾವೀನ್ಯತೆಗಾಗಿ ಗ್ರಹಾಂ ಬೆಲ್ ಪ್ರಶಸ್ತಿ

ಆರಂಭಿಕ ಜೀವನ ಮತ್ತು ಶಿಕ್ಷಣ

ಅಜಯ ಡಾಟ ಅವರು ೨೨ ಮಾರ್ಚ್ ೧೯೭೩ ರಂದು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಖೈರ್ತಾಲ್‌ನಲ್ಲಿ ಜನಿಸಿದರು. ಖೈರ್ತಾಲ್‌ನ ಇಂದ್ರ ಹ್ಯಾಪಿ ಶಾಲೆ ಮತ್ತು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ಕಾಲೇಜು ಅಧ್ಯಯನಕ್ಕಾಗಿ ಜೈಪುರಕ್ಕೆ ತೆರಳಿದರು.

೧೯೯೯ ರಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅಜಯ ಅವರು ಡಾಟ ಇನ್ಫೋಸಿಸ್ ಲಿಮಿಟೆಡ್ ಎಂಬ ಕಂಪೆನಿಯನ್ನು ರಾಜಸ್ಥಾನದಲ್ಲಿ ಸ್ಥಾಪಿಸಿದರು. ಈಗ ಅದನ್ನು ಡೇಟಾ ಇಂಜಿನಿಯಸ್ ಗ್ಲೋಬಲ್ ಲಿಮಿಟೆಡ್ ಎಂದು ಕರೆಯಲಾಗುತ್ತಿದೆ.

ಐಕಾನ್‍ನಲ್ಲಿ ಅಜಯ ಡಾಟ

ಅಜಯ ಅವರು ICANN ನ ನಿಯೋ ಬ್ರಾಹ್ಮಿ ಜನರೇಷನ್ ಪ್ಯಾನೆಲ್‌ನ ಸಹ-ಅಧ್ಯಕ್ಷರಾಗಿದ್ದಾರೆ. ಅವರು UASG ನಲ್ಲಿ EAI ಸಂಯೋಜಕರಾಗಿದ್ದರು. TECH ಮತ್ತು ISPCP ಕ್ಷೇತ್ರದ ಸದಸ್ಯರಾಗಿದ್ದರು. ಅವರು ರೂಟ್ ಝೋನ್ LGR ಅಪ್ಲಿಕೇಶನ್‌ಗಾಗಿ ಎಕ್ಸ್‌ಪರ್ಟ್ ಪ್ಯಾನೆಲ್ ನ ಸದಸ್ಯರೂ ಆಗಿದ್ದಾರೆ. ಅವರು ೨೦೨೧ ರಿಂದ ೨೦೨೩ ರವರೆಗೆ UASG ಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಭಾಗೆದಾರಿಯಾದ ಇತರೆ ಸಂಘ ಸಂಸ್ಥೆಗಳು

  • ರಾಜಸ್ಥಾನ ಐಟಿ ಉದ್ಯಮಿಗಳ ಗುಂಪು,
  • ಸಂಸ್ಥಾಪಕ ಮತ್ತು ಅಧ್ಯಕ್ಷ TiE ರಾಜಸ್ಥಾನ
  • ಸಂಸ್ಥಾಪಕ ಅಧ್ಯಕ್ಷ YEO ಜೈಪುರ (ಈಗ EO ಎಂದು ಕರೆಯಲಾಗುತ್ತಿದೆ)
  • Nasscom
  • ಡಾಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ
  • ಜೈಪುರ ಸಿಟಿಜನ್ ಫೋರಮ್
  • AIESEC ನ ಸಲಹಾ ಮಂಡಳಿ
  • ಮಂಡಳಿಯ ಸದಸ್ಯ ಫ್ಯಾಕಲ್ಟಿ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಪೊದ್ದಾರ್ ಕಾಲೇಜ್) - ರಾಜಸ್ಥಾನ ವಿಶ್ವವಿದ್ಯಾಲಯ
  • ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ, FICCI - ರಾಜಸ್ಥಾನ.
  • ಸದಸ್ಯ - ರಾಜಸ್ಥಾನ ಏಂಜೆಲ್ ಇನ್ವೆಸ್ಟರ್ಸ್ ನೆಟ್ವರ್ಕ್ (RAIN).

ಬಹುಭಾಷಾ ಅಂತರಜಾಲ

ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭಾರತದ ಅಧಿಕೃತ ಭಾಷೆಗಳನ್ನು ಅಂತರಜಾಲದ ವಿಳಾಸಗಳಲ್ಲಿ ಅಳವಡಿಸಲು ಉನ್ನತ ಮಟ್ಟದ ಡೊಮೈನ್ ಹೆಸರುಗಳಿಗೆ ನಿಯಮಗಳನ್ನು ರಚಿಸಿರುವ ನಿಯೋ ಬ್ರಾಹ್ಮಿ ಜನರೇಷನ್ ಪ್ಯಾನೆಲ್ ಎಂಬ ಹೆಸರಿನ ICANN ನಿಂದ ರಚಿಸಲಾದ ಸ್ವಯಂಸೇವಕರ ತಂಡದಲ್ಲಿ ಡಾಟ ಭಾಗವಾಗಿದ್ದಾರೆ.

ಸಾರ್ವತ್ರಿಕೆ ಸ್ವೀಕೃತಿ ಮತ್ತು ಬಹುಭಾಷಾ ಅಂತರಜಾಲಕ್ಕಾಗಿ ಸ್ಟೇಕ್ ಹೋಲ್ಡರ್ ಗ್ರೂಪ್‌ನಲ್ಲಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಸಚಿವಾಲಯದಿಂದ ಅಜಯರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಪ್ರಶಸ್ತಿಗಳು ಮತ್ತು ಗೌರವಗಳು

  • ಟೈಮ್ಸ್ ಆಫ್ ಇಂಡಿಯಾದ "ಮ್ಯಾನ್ ಟು ವಾಚ್ ಇನ್ 2004"
  • ಲುಫ್ಥಾನ್ಸ "ಪಯೋನಿಯರಿಂಗ್ ಸ್ಪಿರಿಟ್" - ET ನೌ - 2011
  • "ರಾಜಸ್ಥಾನ ಗೌರವ" - ಸಂಸ್ಕೃತಿ - ಜೈಪುರ, ರಾಜಸ್ಥಾನ - 2013
  • ವರ್ಷದ ಐಟಿ ಇನ್ನೋವೇಟರ್ - ಪೀಟರ್ ಹ್ಯಾಸ್, ಯುಎಸ್ ಇಂಡೋ ಅಮೇರಿಕನ್ ಸೊಸೈಟಿ. 2013
  • ಈಟಿವಿ ರಾಜಸ್ಥಾನದಿಂದ ರಾಜಸ್ಥಾನ ಕೀ ಸೂಪರ್‌ಸ್ಟಾರ್. 2013
  • ವರ್ಷದ ಐಟಿ ಇನ್ನೋವೇಟರ್ - ಬಿಸಿನೆಸ್ ರ‍್ಯಾಂಕರ್ಸ್ ಮ್ಯಾಗಜೀನ್ 2015
  • ಶಾನ್-ಇ-ರಾಜಸ್ಥಾನ - ರಾಜಸ್ಥಾನದ ರಾಜ್ಯಪಾಲರಿಂದ ಸನ್ಮಾನ
  • ೨೦೧೭ರ ಎಂಟರ್‌ಪ್ರೈಸ್ ಸೊಲ್ಯೂಷನ್ ವಿಭಾಗದಲ್ಲಿ ಅತ್ಯುತ್ತಮ ನಾವೀನ್ಯತೆಗಾಗಿ ಗ್ರಹಾಂ ಬೆಲ್ ಪ್ರಶಸ್ತಿ
  • ಸಹ-ಅಧ್ಯಕ್ಷ NBGP - ನಿಯೋ ಬ್ರಾಹ್ಮಿ ಜನರಲ್ ಪ್ಯಾನೆಲ್ - ICANN
  • ಅಧ್ಯಕ್ಷ ಅಸೋಚಾಮ್ ರಾಜಸ್ಥಾನ

ಉಲ್ಲೇಖಗಳು

Tags:

ಅಜಯ ಡಾಟ ಆರಂಭಿಕ ಜೀವನ ಮತ್ತು ಶಿಕ್ಷಣಅಜಯ ಡಾಟ ಐಕಾನ್‍ನಲ್ಲಿ ಅಜಯ ಡಾಟ ಭಾಗೆದಾರಿಯಾದ ಇತರೆ ಸಂಘ ಸಂಸ್ಥೆಗಳುಅಜಯ ಡಾಟ ಬಹುಭಾಷಾ ಅಂತರಜಾಲಅಜಯ ಡಾಟ ಪ್ರಶಸ್ತಿಗಳು ಮತ್ತು ಗೌರವಗಳುಅಜಯ ಡಾಟ ಉಲ್ಲೇಖಗಳುಅಜಯ ಡಾಟen:Universal Acceptance

🔥 Trending searches on Wiki ಕನ್ನಡ:

ಚೋಮನ ದುಡಿಕೃಷ್ಣಬಾಬರ್ಅಲಂಕಾರಉಪೇಂದ್ರ (ಚಲನಚಿತ್ರ)ಚಾಮರಾಜನಗರಊಳಿಗಮಾನ ಪದ್ಧತಿದಿಯಾ (ಚಲನಚಿತ್ರ)ಶಿಕ್ಷಕಛತ್ರಪತಿ ಶಿವಾಜಿಪ್ರವಾಸೋದ್ಯಮಬಂಜಾರತಂತ್ರಜ್ಞಾನಕುಮಾರವ್ಯಾಸಚಾಲುಕ್ಯವಿಚ್ಛೇದನಚಿಕ್ಕಮಗಳೂರುವ್ಯಂಜನಬಾದಾಮಿಅರವಿಂದ ಘೋಷ್ಪೋಕ್ಸೊ ಕಾಯಿದೆಸಂವಿಧಾನಭಾರತದ ಬುಡಕಟ್ಟು ಜನಾಂಗಗಳುಭಾರತದ ರಾಷ್ಟ್ರೀಯ ಉದ್ಯಾನಗಳುಹೈದರಾಲಿದಂತಿದುರ್ಗಕೃತಕ ಬುದ್ಧಿಮತ್ತೆಬಾರ್ಲಿತಿರುಪತಿಮೈಸೂರು ಸಂಸ್ಥಾನಬಳ್ಳಾರಿವೈದೇಹಿರನ್ನಸಿಂಧೂತಟದ ನಾಗರೀಕತೆಭಾರತದಲ್ಲಿ ಪಂಚಾಯತ್ ರಾಜ್ಬಾಲ್ಯ ವಿವಾಹಸುಮಲತಾಅಂಬರೀಶ್ ನಟನೆಯ ಚಲನಚಿತ್ರಗಳುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಮತದಾನಕರ್ನಾಟಕ ಸಂಗೀತಜೇನು ಹುಳುಸೀತೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಣ್ಣುಕೃಷ್ಣರಾಜಸಾಗರಕನ್ನಡ ಕಾಗುಣಿತಖಂಡಕಾವ್ಯಯೂಕ್ಲಿಡ್ಪಟ್ಟದಕಲ್ಲುಚುನಾವಣೆಎರಡನೇ ಮಹಾಯುದ್ಧಕಮಲದಹೂಸಂವಹನದಶಾವತಾರರಾಷ್ಟ್ರೀಯ ಶಿಕ್ಷಣ ನೀತಿಲೋಪಸಂಧಿಅವತಾರಆವಕಾಡೊತೇಜಸ್ವಿ ಸೂರ್ಯಆಟಭಾರತ ಸಂವಿಧಾನದ ಪೀಠಿಕೆಶಿವರಾಜ್‍ಕುಮಾರ್ (ನಟ)ಪಾಂಡವರುವಿರಾಮ ಚಿಹ್ನೆಶ್ರೀಕರ್ನಾಟಕದ ಕಲೆ ಮತ್ತು ಸಂಸ್ಕೃತಿಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಚದುರಂಗದ ನಿಯಮಗಳುಹಿಂದೂ ಧರ್ಮಶಾಸನಗಳುಹಸ್ತ ಮೈಥುನಭಗತ್ ಸಿಂಗ್ಗಿರೀಶ್ ಕಾರ್ನಾಡ್ಗೋಲ ಗುಮ್ಮಟಲಿಂಗಾಯತ ಪಂಚಮಸಾಲಿಚಾಮುಂಡೇಶ್ವರಿ ದೇವಸ್ಥಾನ, ಮೈಸೂರು🡆 More