ಸಂಗೀತಾ ಶೃಂಗೇರಿ

ಸಂಗೀತಾ ಶೃಂಗೇರಿ ಮುಖ್ಯವಾಗಿ ಕನ್ನಡ ಭಾಷೆಯಲ್ಲಿ ನಟನೆ ಮಾಡುವ ಭಾರತೀಯ ನಟಿ ಆಗಿದ್ದಾರೆ.

ಕನ್ನಡ ದೈನಂದಿನ ಧಾರಾವಾಹಿ ಹರ ಹರ ಮಹಾದೇವ ದಲ್ಲಿನ ಸತಿ / ಪಾರ್ವತಿ ಪಾತ್ರಕ್ಕಾಗಿ ಅವರು ಜನಪ್ರಿಯವಾಗಿದ್ದಾರೆ. ಅವರು ೨೦೧೪ ರಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಅಗ್ರ ೧೦ರಲ್ಲಿ ಸ್ಥಾನ ಪಡೆದಿದ್ದರು. ವಿಶ್ವ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು.

ಸಂಗೀತಾ ಶೃಂಗೇರಿ
Born (1996-05-13) ೧೩ ಮೇ ೧೯೯೬ (ವಯಸ್ಸು ೨೭)
Other namesಸತಿ/ಪಾರ್ವತಿ
Citizenshipಭಾರತೀಯ
Educationಕೇಂದ್ರಿಯ ವಿದ್ಯಾಲಯ
Occupations
  • ನಟಿ
  • ರೂಪದರ್ಶಿ
Years active2016–ಪ್ರಸ್ತುತ
Notable work777 ಚಾರ್ಲಿ

ವೈಯಕ್ತಿಕ ಜೀವನ

ಸಂಗೀತಾ ಅವರು ಶೃಂಗೇರಿಯಲ್ಲಿ ಜನಿಸಿದರು. ಇವರ ತಂದೆ ಶಿವ ಕುಮಾರ್ ಕೆ ಭಾರತೀಯ ವಾಯುಪಡೆಯ ಮಾಜಿ ಸೈನಿಕ ಮತ್ತು ತಾಯಿ ಭವಾನಿ ಶಿವ ಕುಮಾರ್ ಗಿಡಮೂಲಿಕೆಗಳ ಆರೋಗ್ಯ ತರಬೇತುದಾರರಾಗಿದ್ದಾರೆ. ಶೃಂಗೇರಿ ಅವರು ಎನ್ಸಿಸಿ ಕೆಡೆಟ್ ಆಗಿದ್ದು, ೨೦೧೨ರಲ್ಲಿ ಖೋ ಖೋ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದರು.]

ವೃತ್ತಿಜೀವನ

ಸಂಗೀತಾ ಸ್ಟಾರ್ ಸುವರ್ಣದಲ್ಲಿನ ಹರ ಹರ ಮಹಾದೇವ ಕನ್ನಡ ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟರು. ಈ ಪೌರಾಣಿಕ ನಾಟಕವು ಇವರಿಗೆ ಸತಿ / ಪಾರ್ವತಿ ಎಂಬ ಅಡ್ಡಹೆಸರನ್ನು ತಂದುಕೊಟ್ಟಿತ್ತು. ನಂತರ ಅವರು ಅದೇ ಚಾನೆಲ್ ಆಯೋಜಿಸಿದ್ದ ಸೂಪರ್ ಜೋಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು.

ಅವರ ಮೊದಲ ಚಲನಚಿತ್ರ A+, ಇದು ೨೦೧೮ ರಲ್ಲಿ ಬಿಡುಗಡೆಯಾಯಿತು. ಅವರು A+ ಕನ್ನಡ ಚಲನಚಿತ್ರಕ್ಕೆ ಸಹಿ ಹಾಕುವ ಮೊದಲು ೫೦ಕ್ಕೂ ಹೆಚ್ಚು ಸ್ಕ್ರಿಪ್ಟ್‌ಗಳನ್ನು ಓದಿದ್ದರು. A+ ಉಪೇಂದ್ರ ಅವರ ಕಲ್ಟ್ ಕ್ಲಾಸಿಕ್ "ಎ" ನ ಸೂಕ್ಷ್ಮ ಉತ್ತರಭಾಗವಾಗಿದೆ; ಚಿತ್ರವನ್ನು ಉಪೇಂದ್ರ ಅವರ ಸಹವರ್ತಿ ವಿಜಯ್ ಸೂರ್ಯ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಯಶಸ್ವಿನಿ ಪಾತ್ರಕ್ಕಾಗಿ ಸಂಗೀತಾ ಅವರಿಗೆ ಈ ಚಿತ್ರವು ವಿಮರ್ಶಾತ್ಮಕ ಮೆಚ್ಚುಗೆಯನ್ನು ತಂದುಕೊಟ್ಟಿತು.

ಸಂಗೀತಾ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು, ರಕ್ಷಿತ್ ಶೆಟ್ಟಿ ನಟನೆಯ ಮತ್ತು ಪರಮವಾ ಸ್ಟುಡಿಯೋಸ್ ನಿರ್ಮಿಸಿದ ಹಾಗೂ ಪುಷ್ಕರ್ ಫಿಲ್ಮ್ಸ್ ಪ್ರಸ್ತುತಪಡಿಸಿದ ೨೦೨೨ ರಲ್ಲಿ ಬಿಡುಗಡೆಯಾದ ೭೭೭ ಚಾರ್ಲಿ ಚಿತ್ರವಾಗಿತ್ತು. ಸಂಗೀತಾ ಅವರನ್ನು ಫೇಸ್ಬುಕ್ ಮೂಲಕ ಚಲನಚಿತ್ರದ ಆಡಿಷನ್‌ಗೆ ಆಯ್ಕೆ ಮಾಡಲಾಯಿತು. ಇವರೊಂದಿಗೆ ೨,೭೦೦ ಮಂದಿಯನ್ನು ಆಡಿಷನ್‌ ನೀಡಿದ್ದರು. ಕೊನೆಗೆ ಇವ ಈ ಪಾತ್ರ ಸಿಕ್ಕಿತು. ೨೦೨೨ ರಲ್ಲಿ ಲಕ್ಕಿ ಮ್ಯಾನ್ ಮತ್ತು ಪಂಪಾ ಪಂಚಲ್ಲಿ ಪರಶಿವಮೂರ್ತಿ ಚಲನಚಿತ್ರದಲ್ಲಿ ಕೂಡ ನಟಿಸಿದರು.

ಚಲನಚಿತ್ರಗಳ ಪಟ್ಟಿ

ಸಿನಿಮಾ

  • ಎಲ್ಲಾ ಚಲನಚಿತ್ರಗಳು ಕನ್ನಡ ಭಾಷೆಯಲ್ಲಿಯೇ ಇದೆ, ಬೇರೆ ಭಾಷೆಯಲ್ಲಿದ್ದರೆ ಉಲ್ಲೇಖಿಸಲಾಗಿದೆ
ಕೀಲಿಮಣೆ.
ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷ. ಶೀರ್ಷಿಕೆ ಪಾತ್ರ ಟಿಪ್ಪಣಿ
೨೦೧೮ A+ ಯಶಸ್ವಿನಿ ಪ್ರಮುಖ ನಟಿ
೨೦೧೯ 1saw2 ಹಿಂದಿ ಕಿರುಚಿತ್ರ
೨೦೧೯ ಸಾಲಾಗರ ಸಹಕಾರ ಸಂಘ
೨೦೨೨ 777 ಚಾರ್ಲಿ ದೇವಿಕಾ
೨೦೨೨ ಲಕ್ಕಿಮ್ಯಾನ್ ಅನು.
೨೦೨೨ ಪಂಪಾ ಪಂಚಳ್ಳಿ ಪರಶಿವಮೂರ್ತಿ ಲೇಖನಾ
೨೦೨೩ ಶಿವಾಜಿ ಸುರತ್ಕಲ್ 2 ಶರ್ಮಿಳಾ ಕ್ಯಾಮಿಯೋ ನೋಟ
೨೦೨೩ ಮಾರಿಗೋಲ್ಡ್ಸಂಗೀತಾ ಶೃಂಗೇರಿ 

ದೂರದರ್ಶನ

ವರ್ಷ ಶೀರ್ಷಿಕೆ ಪಾತ್ರ ಭಾಷೆ ವಾಹಿನಿ ಇತರೆ ಟಿಪ್ಪಣಿಗಳು
೨೦೧೬ ಹರ ಹರ ಮಹಾದೇವ ಸತಿ ದಕ್ಷಾಯಾಣಿ ಕನ್ನಡ ಸ್ಟಾರ್ ಸುವರ್ಣ
೨೦೧೭ ಥೆನ್ ಮಾನಸೌಲು ಮಾನಸ ತೆಲುಗು ಈಟಿವಿ ತೆಲುಗು
೨೦೨೩ ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ಕನ್ನಡ ಕಲರ್ಸ್‌ ಕನ್ನಡ, ಜಿಯೋಸಿನಿಮಾ

ಉಲ್ಲೇಖಗಳು

Tags:

ಸಂಗೀತಾ ಶೃಂಗೇರಿ ವೈಯಕ್ತಿಕ ಜೀವನಸಂಗೀತಾ ಶೃಂಗೇರಿ ವೃತ್ತಿಜೀವನಸಂಗೀತಾ ಶೃಂಗೇರಿ ಚಲನಚಿತ್ರಗಳ ಪಟ್ಟಿಸಂಗೀತಾ ಶೃಂಗೇರಿ ಉಲ್ಲೇಖಗಳುಸಂಗೀತಾ ಶೃಂಗೇರಿಕನ್ನಡನಟ

🔥 Trending searches on Wiki ಕನ್ನಡ:

ಡಿ.ವಿ.ಗುಂಡಪ್ಪಗೌತಮ ಬುದ್ಧಅಮ್ಮಭಾರತದಲ್ಲಿ ಕೃಷಿಜೈನ ಧರ್ಮಹೈದರಾಲಿಪಕ್ಷಿಚಂಪೂಕಪ್ಪುಶ್ರೀವಿಜಯದೇವರ/ಜೇಡರ ದಾಸಿಮಯ್ಯರಕ್ತಸ್ನಾಯುರನ್ನಟಾರ್ಟನ್ಮೈಸೂರು ದಸರಾಮಾಲಿನ್ಯಹುಲಿವಲ್ಲಭ್‌ಭಾಯಿ ಪಟೇಲ್ಶ್ರೀ ರಾಮಾಯಣ ದರ್ಶನಂಕನ್ನಡ ಸಾಹಿತ್ಯ ಪ್ರಕಾರಗಳುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕನ್ನಡ ರಂಗಭೂಮಿಶ್ರವಣಬೆಳಗೊಳಕಾಂತಾರ (ಚಲನಚಿತ್ರ)ಓಂ (ಚಲನಚಿತ್ರ)ಗ್ರೀಸ್ಜನ್ನಶಿವಸಂತಾನೋತ್ಪತ್ತಿಯ ವ್ಯವಸ್ಥೆಪಾರ್ವತಿವಾದಿರಾಜರುಮಳೆನೀರು ಕೊಯ್ಲುಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಕರ್ನಾಟಕದ ಮುಖ್ಯಮಂತ್ರಿಗಳುಯುಗಾದಿಕುಮಾರವ್ಯಾಸಸಂಸ್ಕೃತಿಭಾರತದ ರಾಷ್ಟ್ರಗೀತೆಅಂಬಿಗರ ಚೌಡಯ್ಯಅಷ್ಟಾವಕ್ರಪಂಚತಂತ್ರಕನ್ನಡಪ್ರಭಮೀನುಪರಮಾಣುಅನುಭೋಗತೇಜಸ್ವಿನಿ ಗೌಡವೃತ್ತಪತ್ರಿಕೆಗೋಲ ಗುಮ್ಮಟಉಡುಪಿ ಜಿಲ್ಲೆಅಗ್ನಿ(ಹಿಂದೂ ದೇವತೆ)ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆರಾಮ್ ಮೋಹನ್ ರಾಯ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕಿತ್ತಳೆಶುಭ ಶುಕ್ರವಾರಗ್ರಾಮ ಪಂಚಾಯತಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಆಮ್ಲಬಾಲಕಾರ್ಮಿಕಅಶೋಕನ ಶಾಸನಗಳುಥಿಯೊಸೊಫಿಕಲ್ ಸೊಸೈಟಿಮಾನವನ ನರವ್ಯೂಹಸ್ವರ್ಣಯುಗಆಸ್ಟ್ರೇಲಿಯಚದುರಂಗ (ಆಟ)ಶಾಲಿವಾಹನ ಶಕೆಕರಗಬದ್ರ್ ಯುದ್ಧಭಾರತದ ಜನಸಂಖ್ಯೆಯ ಬೆಳವಣಿಗೆಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಬಿ. ಆರ್. ಅಂಬೇಡ್ಕರ್ನೀನಾದೆ ನಾ (ಕನ್ನಡ ಧಾರಾವಾಹಿ)ಮೂಕಜ್ಜಿಯ ಕನಸುಗಳು (ಕಾದಂಬರಿ)ಬ್ಯಾಸ್ಕೆಟ್‌ಬಾಲ್‌ಕಾರ್ಲ್ ಮಾರ್ಕ್ಸ್ಸೊಳ್ಳೆ🡆 More