ಲೋಕಪಾಲ ಮಸೂದೆ

ಭಾರತದಲ್ಲಿ ಲೋಕಪಾಲ ಮಸೂದೆ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೊಳಿಸಲು ಲೋಕಪಾಲರನ್ನು ನೇಮಿಸುವ ಮಸೂದೆ.

ಈ ಲೋಕಪಾಲ ಸಂಸ್ಥೆಯು ಸರ್ಕಾರದ ಅನುಮತಿಯಿಲ್ಲದೆಯೇ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆ ಹಾಗೂ ಶಿಕ್ಷೆಗೊಳಪಡಿಸುವ ಅಧಿಕಾರಗಳನ್ನು ಹೊಂದಿದ್ದು, ಚುನಾವಣಾ ಆಯೋಗದಂತೆಯೇ ಒಂದು ಸ್ವತಂತ್ರ ಸಂಸ್ಥೆಯಾಗಿರುತ್ತದೆ.

ಭ್ರಷ್ಟಾಚಾರ ವಿರೋಧಿ ಚಳವಳಿ - ಇಂಡಿಯಾ ಅಗೈನ್ಸ್ಟ್ ಕರಪ್ಷನ್ - ಐಏಸಿಯ ಮುಖಂಡರು ಮತ್ತು ನಾಗರಿಕ ಸಮಾಜದವರೊಂದಿಗೆ ಸಮಾಲೋಚಿಸಿ ಮಾಜಿ ಕಾನೂನು ಸಚಿವ ಹಾಗೂ ಹಿರಿಯ ವಕೀಲ ಶಾಂತಿ ಭೂಷಣ್, ನಿವೃತ್ತ ಭಾರತೀಯ ಆರಕ್ಷಕ ಸೇವೆ (ಐಪಿಎಸ್) ಅಧಿಕಾರಿ ಕಿರಣ್ ಬೇಡಿ, ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಮಾಜಿ ಮುಖ್ಯ ಚುನಾವಣಾಧಿಕಾರಿ ಜೆ. ಎಂ. ಲಿಂಗ್ಡೋ ಅವರು ರಚಿಸಿರುವ ಈ ಮಸೂದೆಯ ಕರಡು, ರಾಷ್ಟ್ರ ಮಟ್ಟದಲ್ಲಿ ಲೋಕಪಾಲ ಮತ್ತು ರಾಜ್ಯ ಮಟ್ಟದಲ್ಲಿ ಲೋಕಾಯುಕ್ತರನ್ನು ನೇಮಿಸುವ ಪ್ರಸ್ತಾವನೆಯನ್ನು ಹೊಂದಿದೆ. ಇದು ಭ್ರಷ್ಟಾಚಾರವನ್ನು ನಿಗ್ರಹಿಸುವ ಮತ್ತು ಮಾಹಿತಿದಾರರನ್ನು ಸೂಕ್ತವಾಗಿ ರಕ್ಷಿಸುವ ಸಲುವಾಗಿ ಭ್ರಷ್ಟಾಚಾರ ವಿರೋಧಿ ಮತ್ತು ಮತ್ತು ಅನ್ಯಾಯವನ್ನು ಸರಿಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ರೂಪಿಸಲಾಗಿದೆ.

ಲೋಕಪಾಲ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುವ ವಿಚಾರಮೊರಾರ್ಜಿ ದೇಸಾಯಿಕಾಲದಿಂದ ಮನಮೋಹನ್ ಸಿಂಗ್ ಕಾಲದವರೆಗೂ ಮುಂದುವರೆದಿದೆ.೧೯೬೯ರಲ್ಲಿಯೇ ಮೊದಲ ಬಾರಿಗೆ ಲೋಕಪಾಲ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಗಿತ್ತಾದರೂ, ರಾಜ್ಯಸಭೆಯಲ್ಲಿ ಅದು ಒಪ್ಪಿಗೆ ಪಡೆಯಲಿಲ್ಲ. ನಂತರ ೧೯೭೧, ೧೯೭೭, ೧೯೮೫, ೧೯೮೯, ೧೯೯೬, ೧೯೯೮, ೨೦೦೧, ೨೦೦೫ ಮತ್ತು ೨೦೦೮ರಲ್ಲಿ ಮತ್ತೆ ಮಂಡಿಸಲಾಗಿಯಿತಾದರೂ ಅದು ಅಂಗೀಕಾರವಾಗಿರಲಿಲ್ಲ. ಅಣ್ಣಾ ಹಜಾರೆಯವರ ನಾಲ್ಕು ದಿನದ ಉಪವಾಸದ ನಂತರ ಪ್ರಧಾನಿ ಮನಮೋಹನ ಸಿಂಗ್‌ರವರು ೨೦೧೧ರ ಮುಂಗಾರು ಅಧಿವೇಶನದಲ್ಲಿ ಇದನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದೆಂದು ಹೇಳಿದರು.


ನೋಡಿ

ಭ್ರಷ್ಟಾಚಾರ ಮಟ್ಟ ಸೂಚ್ಯಂಕದಲ್ಲಿ (ಸಿಪಿಐ) . ಭ್ರಷ್ಟಾಚಾರ ಅಣ್ಣಾ ಹಜಾರೆ ಮೇಧಾ ಪಾಟ್ಕರ್
ಭ್ರಷ್ಟಾಚಾರದ ಸುಳಿಯಲ್ಲಿ ಭಾರತ ಲೋಕಾಯುಕ್ತ . ಲೋಕಪಾಲ ಮಸೂದೆ . ಅರವಿಂದ್ ಕೇಜ್ರಿವಾಲ್ . ಬಿ.ಎಸ್. ಯಡಿಯೂರಪ್ಪ

ಉಲ್ಲೇಖಗಳು


Tags:

ಭಾರತ

🔥 Trending searches on Wiki ಕನ್ನಡ:

ಉಪನಯನಕರ್ಬೂಜವಿಜ್ಞಾನನವರತ್ನಗಳುಮಹಾಭಾರತರೋಮನ್ ಸಾಮ್ರಾಜ್ಯಲಿಂಗಾಯತ ಪಂಚಮಸಾಲಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಪರಶುರಾಮಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಸಾಲುಮರದ ತಿಮ್ಮಕ್ಕಪ್ರವಾಸಿಗರ ತಾಣವಾದ ಕರ್ನಾಟಕದ್ರೌಪದಿ ಮುರ್ಮುಕೊಡಗಿನ ಗೌರಮ್ಮವಿಕಿಪೀಡಿಯಸಂಗ್ಯಾ ಬಾಳ್ಯಕೆ ವಿ ನಾರಾಯಣಉಪ್ಪಿನ ಸತ್ಯಾಗ್ರಹಕೃಷ್ಣಾ ನದಿಬೆಂಗಳೂರಿನ ಇತಿಹಾಸಕರಗಪ್ರದೀಪ್ ಈಶ್ವರ್ಹೈದರಾಬಾದ್‌, ತೆಲಂಗಾಣಕಮಲಪಗಡೆಪ್ರಬಂಧ ರಚನೆಈಡನ್ ಗಾರ್ಡನ್ಸ್ಶೃಂಗೇರಿನಿರುದ್ಯೋಗಬಿ.ಎಸ್. ಯಡಿಯೂರಪ್ಪಉತ್ತಮ ಪ್ರಜಾಕೀಯ ಪಕ್ಷಶನಿ (ಗ್ರಹ)ಪ್ರಾರ್ಥನಾ ಸಮಾಜರಾಷ್ಟ್ರೀಯತೆಚಂದ್ರಯಾನ-೩ಮ್ಯಾಕ್ಸ್ ವೆಬರ್ಕರ್ನಾಟಕ ಸಂಗೀತವಿಜಯಪುರಅಳಲೆ ಕಾಯಿಮಾಧ್ಯಮರಾಯಲ್ ಚಾಲೆಂಜರ್ಸ್ ಬೆಂಗಳೂರುಅರಿಸ್ಟಾಟಲ್‌ಭಾರತದ ಭೌಗೋಳಿಕತೆಭಾರತದ ಚುನಾವಣಾ ಆಯೋಗಜಿ.ಎಸ್.ಶಿವರುದ್ರಪ್ಪಚಾರ್ಲಿ ಚಾಪ್ಲಿನ್ಸರ್ಕಾರೇತರ ಸಂಸ್ಥೆಎಚ್.ಎಸ್.ಶಿವಪ್ರಕಾಶ್ಫೇಸ್‌ಬುಕ್‌ಕದಂಬ ರಾಜವಂಶಜನ್ನಮಿಥುನರಾಶಿ (ಕನ್ನಡ ಧಾರಾವಾಹಿ)ಕನ್ನಡ ಬರಹಗಾರ್ತಿಯರುರಗಳೆಸಮುದ್ರಗುಪ್ತಮಣ್ಣುಫುಟ್ ಬಾಲ್ಅಲಾವುದ್ದೀನ್ ಖಿಲ್ಜಿದಾಸ ಸಾಹಿತ್ಯಸಂಚಿ ಹೊನ್ನಮ್ಮಕರ್ನಾಟಕ ಸಂಘಗಳುಆಯ್ದಕ್ಕಿ ಲಕ್ಕಮ್ಮಕಬಡ್ಡಿತಿಂಥಿಣಿ ಮೌನೇಶ್ವರಐಹೊಳೆಮಾದರ ಚೆನ್ನಯ್ಯತೆಂಗಿನಕಾಯಿ ಮರಉದಯವಾಣಿಯಲಹಂಕದ ಪಾಳೆಯಗಾರರುವಿಶ್ವವಿದ್ಯಾಲಯ ಧನಸಹಾಯ ಆಯೋಗಸಿಂಧೂತಟದ ನಾಗರೀಕತೆದೀಪಾವಳಿಅಮ್ಮಊಳಿಗಮಾನ ಪದ್ಧತಿವಿರಾಟ್ ಕೊಹ್ಲಿಕೃತಕ ಬುದ್ಧಿಮತ್ತೆ🡆 More