ಈಟಿ

ಉದ್ದವಾದ ಕೋಲಿನ ತುದಿಗೆ ಮೊನಚಾದ ಉಕ್ಕಿನ ಅಲಗನ್ನು ಸಿಕ್ಕಿಸಿರುವ ಭರ್ಜಿಯಂಥ ಒಂದು ಆಯುಧ (ಲ್ಯಾನ್ಸ್).

ಇದನ್ನು ಬಲುಮಟ್ಟಿಗೆ ಕುದುರೆ ಸವಾರರು ಹಿಡಿದಿರುತ್ತಾರೆ. ಆಯುಧವಾಗಿ ಇದು ಪರಿಣಾಮಕಾರಿಯೇ ಎಂಬ ಬಗ್ಗೆ ವಿವಾದವಿದೆ. ಕತ್ತಿ ಇದಕ್ಕಿಂತ ಹೆಚ್ಚು ಉಪಯುಕ್ತವೆಂದೂ ಕೊಲ್ಲಲು ಹೆಚ್ಚು ಶಕ್ತವೆಂದೂ ಪರಿಗಣಿತವಾಗಿದೆ. ಈಟಿ ತಲ್ಲಣಗೊಳಿಸುವ ಶಸ್ತ್ರ. ಆದರೆ ಕ್ಷಿಪ್ರ ಪ್ರಯೋಗಕ್ಕೆ ಕತ್ತಿಯೇ ಲೇಸು. ಆಧುನಿಕ ಯುದ್ಧಕ್ರಮದಲ್ಲಿ ಈಟಿ ಅನುಪಯುಕ್ತ ಆಯುಧ. ಈಗ ಅದನ್ನು ಕುದುರೆ ಸವಾರರು ಉತ್ಸವ ಸಮಾರಂಭಗಳಲ್ಲಿ ಅಲಂಕಾರ ಸಂಕೇತವಾಗಿ ಹಿಡಿದಿರುತ್ತಾರೆ. ಈಟಿಯ ಉದ್ದ ಪ್ರಾರಂಭದಲ್ಲಿ ೧೬' ಇದ್ದು ಈಗ ೧೯' ೧" ಆಗಿದೆ. ಅದರ ತುದಿ ಮೊನಚು ಮತ್ತು ಕತ್ತಿಯಂತೆ ಅಗಲವಾಗಿ ಅಥವಾ ಎಲೆಯಾಕಾರದಲ್ಲಿ ಇದೆ. ಮೊದಮೊದಲು ಈಟಿಯ ಕೋಲನ್ನು ಬೂದಿ ಮರದಿಂದ ಮಾಡುತ್ತಿದ್ದರು. ಈಗ ಗಟ್ಟಿ ಬಿದಿರಿನ ಗಳೆಯನ್ನು ಉಪಯೋಗಿಸುತ್ತಾರೆ. ಈಟಿಗೆ ಚರ್ಮದಿಂದ ಮಾಡಿದ ತೂಗಾಸರೆಯುಂಟು. ಸವಾರಿ ಮಾಡುವಾಗ ಅದರ ಬುಡ ಒಂದು ಸಣ್ಣ ಚರ್ಮಕೋಶದಲ್ಲಿ ತಂಗಿರುತ್ತದೆ.

ಈಟಿಯ ಇತಿಹಾಸ

ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಈ ಆಯುಧ ಎಂದು ಹುಟ್ಟಿತೆಂಬುದು ಗೊತ್ತಾಗಿಲ್ಲ. ಅಸ್ಸೀರಿಯ, ಗ್ರೀಕ್ ಮತ್ತು ರೋಮ್ ದೇಶಗಳಲ್ಲಿ ಇದು ಉಪಯೋಗದಲ್ಲಿತ್ತು. ೧೬೫೫ರಲ್ಲಿ ಈ ಆಯುಧವುಳ್ಳ ಕೆಲವೇ ಸ್ಪೇನ್ ಸೈನಿಕರು ಸ್ಯಾನ್ ಡಾಮಿಂಗೊ ಎಂಬ ಪ್ರದೇಶದಲ್ಲಿ, ಇದನ್ನು ಹೊಂದಿರದ ಬ್ರಿಟಿಷ್ ಯೋಧರನ್ನು ಸೋಲಿಸಿದರೆಂದು ತಿಳಿದುಬಂದಿದೆ. ೧೮೧೧ರಲ್ಲಿ ನೆಪೋಲಿಯನ್ ವಾಟರ್ಲು ಎಂಬಲ್ಲಿ ಈಟಿ ಹಿಡಿದ ತನ್ನ ಸವಾರರ ಮೂಲಕ ಬ್ರಿಟಿಷರನ್ನು ಸೋಲಿಸಿ ಪ್ರಶಂಸಾರ್ಹ ಜಯಗಳಿಸಿದ. ಇದರಿಂದ ಪಾಠ ಕಲಿತ ಬ್ರಿಟಿಷರು ತಮ್ಮ ಅನೇಕ ದಳಗಳನ್ನು ಈಟಿ ಪಡೆಗಳನ್ನಾಗಿ ಮಾರ್ಪಡಿಸಿದರು. ಭಾರತ ಸೇನೆಯ ಚರಿತ್ರೆಯಲ್ಲಿ ಈಟಿ ದಳದವರು ಬಹಳ ಹಿರಿಮೆಯ ಪಾತ್ರವನ್ನು ವಹಿಸಿದ್ದಾರೆ. ೧೯೧೬ರಲ್ಲಿ ಇಪ್ಪತ್ತೊಂದನೆಯ ಈಟಿ ಪಡೆಯವರು ವಾಯವ್ಯ ಪ್ರದೇಶದ ಮಹಮಂಡ್ ಎಂಬ ಜನರಲ್ಲಿ ಬಹಳ ಹಾವಳಿ ನಡೆಸಿದರು. ಎಸ್‍ಡ್ರಿಲಾನ್ ಎಂಬ ಬಯಲಿನಲ್ಲಿ ಮುಂದುವರಿಯುತ್ತಿದ್ದಾಗ್ಗೆ ಲೆಜ್ಜುನ್ ಎಂಬ ಸ್ಥಳದಲ್ಲಿ ಭಾರತದ ಎರಡನೆಯ ಈಟಿ ಪಡೆ ತುರ್ಕಿಯವರನ್ನು ಓಡಿಸಿತು.

ಉಲ್ಲೇಖ

http://www.indifferentlanguages.com/translate/kannada-english/%E0%B2%88%E0%B2%9F%E0%B2%BF https://www.duhoctrungquoc.vn/dict/kn/%E0%B2%88%E0%B2%9F%E0%B2%BF_%E0%B2%8E%E0%B2%B8%E0%B3%86%E0%B2%A4

Tags:

ಆಯುಧಕುದುರೆಚರ್ಮಮರ

🔥 Trending searches on Wiki ಕನ್ನಡ:

ಪಿ.ಬಿ.ಶ್ರೀನಿವಾಸ್ದಶಾವತಾರವಿನಾಯಕ ಕೃಷ್ಣ ಗೋಕಾಕಕಳಿಂಗ ಯುದ್ಧಚುನಾವಣೆಹೆಸರುಕನ್ನಡ ಸಾಹಿತ್ಯ ಪರಿಷತ್ತುಆದ್ಯಾ (ಚಲನಚಿತ್ರ)ಹೆಚ್.ಡಿ.ದೇವೇಗೌಡಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುನರೇಂದ್ರ ಮೋದಿಎಸ್.ಎಲ್. ಭೈರಪ್ಪದೇವತಾರ್ಚನ ವಿಧಿಮೊದಲನೇ ಅಮೋಘವರ್ಷಬುಧನವ್ಯಹೆಳವನಕಟ್ಟೆ ಗಿರಿಯಮ್ಮವೈದಿಕ ಯುಗಭಾರತದ ಸ್ವಾತಂತ್ರ್ಯ ಚಳುವಳಿಕರ್ನಾಟಕದ ವಾಸ್ತುಶಿಲ್ಪಬುಡಕಟ್ಟುಕರ್ನಾಟಕ ಪೊಲೀಸ್ಮೀನುಭಾರತೀಯ ಸಂವಿಧಾನದ ತಿದ್ದುಪಡಿಭಾರತದಲ್ಲಿ ತುರ್ತು ಪರಿಸ್ಥಿತಿಬಿ.ಎಫ್. ಸ್ಕಿನ್ನರ್ಎಚ್.ಡಿ.ರೇವಣ್ಣನುಡಿಗಟ್ಟುಗೋಪಾಲಕೃಷ್ಣ ಅಡಿಗಅಶೋಕ ಚಕ್ರವಲ್ಲಭ್‌ಭಾಯಿ ಪಟೇಲ್ಜಯಮಾಲಾಅಮೇರಿಕ ಸಂಯುಕ್ತ ಸಂಸ್ಥಾನಸರ್ಪ ಸುತ್ತುಕಿತ್ತೂರು ಚೆನ್ನಮ್ಮಏಕಲವ್ಯಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವಿಜಯಪುರವಿಷ್ಣುಶರ್ಮಶನಿಯೇಸು ಕ್ರಿಸ್ತಧರ್ಮಸ್ಥಳಕ್ರೀಡೆಗಳುಅನುಭವ ಮಂಟಪಮೂಢನಂಬಿಕೆಗಳುಶ್ರೀ ರಾಘವೇಂದ್ರ ಸ್ವಾಮಿಗಳುಕನ್ನಡ ಸಾಹಿತ್ಯ ಪ್ರಕಾರಗಳುಜಮಖಂಡಿಸುಭಾಷ್ ಚಂದ್ರ ಬೋಸ್ಕರ್ನಾಟಕದ ಹೋಬಳಿಗಳುಭಾರತದ ಮುಖ್ಯಮಂತ್ರಿಗಳುಕುವೆಂಪುಸಮಾಜ ವಿಜ್ಞಾನಸಂಚಿ ಹೊನ್ನಮ್ಮದಸರಾಕಂಪ್ಯೂಟರ್ವಾಟ್ಸ್ ಆಪ್ ಮೆಸ್ಸೆಂಜರ್ಯೋನಿಗೌತಮಿಪುತ್ರ ಶಾತಕರ್ಣಿಜೋಳಪ್ರಜಾಪ್ರಭುತ್ವಮಲ್ಲಿಕಾರ್ಜುನ್ ಖರ್ಗೆನೊಳಂಬಮೈಸೂರುಭಕ್ತಿ ಚಳುವಳಿಋತುಚಕ್ರಗುರು (ಗ್ರಹ)ಶ್ರೀಲೀಲಾ (ನಟಿ)ಕರ್ಣಾಟಕ ಬ್ಯಾಂಕ್ಜನಪದ ಕಲೆಗಳುಭೂಗೋಳ ಶಾಸ್ತ್ರಸರ್ವೆಪಲ್ಲಿ ರಾಧಾಕೃಷ್ಣನ್ಚಂದ್ರಶೇಖರ ಕಂಬಾರಯೋಗಮುಪ್ಪಿನ ಷಡಕ್ಷರಿಯಕ್ಷಗಾನ🡆 More