ಟೆಗೂಸಿಗ್ಯಾಲ್ಪ

ಟೆಗೂಸಿಗ್ಯಾಲ್ಪ- ಹಾಂಡುರಾಸ್ ಗಣರಾಜ್ಯದ ರಾಜಧಾನಿ, ಫ್ರ್ಯಾನ್ಸಿಸ್ಕೋ ಮೋರಜಾನ್ ಡಿಪಾರ್ಟ್‍ಮೆಂಟಿನ (ಆಡಳಿತ ವಿಭಾಗ) ಆಡಳಿತ ಕೇಂದ್ರ.

ಟೆಗೂಸಿಗ್ಯಾಲ್ಪ
View of Tegucigalpa.

ಹವಾಗುಣ

ಉ.ಅ.15' ಮತ್ತು ಪ.ರೇ. 86' 30' ಮೇಲೆ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಈ ನಗರ ಸಮುದ್ರಮಟ್ಟದಿಂದ 3,200' (975 ಮೀ.) ಎತ್ತರದಲ್ಲಿದೆ. ಜನಸಂಖ್ಯೆ 2,18,510 (1969). ಚಿನ್ನ ಮತ್ತು ಬೆಳ್ಳಿ ಗಣಿಗಾರಿಕೆ ಕೇಂದ್ರವಾಗಿ ಇದು ಬೆಳೆಯತೊಡಗಿತು. ಇದು ಉಷ್ಣವಲಯದಲ್ಲಿದ್ದರೂ ವಾಯುಗುಣ ಹಿತಕರ. ಜೂನಿನ ದೈನಿಕ ಸರಾಸರಿ ಉಷ್ಣತೆ 75ಲಿ ಈ. (24ಲಿ ಅ). ಜನವರಿಯದು 65ಲಿ ಈ. (18ಲಿ ಅ.). ಮೇಯಿಂದ ಅಕ್ಟೋಬರ್ ವರೆಗೆ ಮಳೆಗಾಲ.

ಸಾರಿಗೆ ಸಂಪರ್ಕ

ರೈಲ್ವೆ ಸಂಪರ್ಕವಿಲ್ಲದ, ಪ್ರಪಂಚದ ಕೆಲವೇ ರಾಜಧಾನಿಗಳ ಪೈಕಿ ಟೆಗೂಸಿಗ್ಯಾಲ್ಪವೂ ಒಂದು. ಟಾನ್ ಕಾನ್ ಟಿನ್ ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಪಂಚದ ಇತರ ಭಾಗಗಳೊಡನೆ ಇದಕ್ಕೆ ಸಂಪರ್ಕ ಏರ್ಪಟ್ಟಿದೆ. ದಕ್ಷಿಣ ಹೆದ್ದಾರಿ ಸರ್ವಋತುಗಳಲ್ಲೂ ಬಳಕೆಗೆ ಬರುತ್ತದಾದ್ದರಿಂದ ಪೆಸಿಫಿಕ್ ತೀರದಿಂದ ಮತ್ತು ನೆರೆಯ ಎಲ್ ಸಾಲ್ವಡಾರ್ ಮತ್ತು ನಿಕರಾಗ್ವ ದೇಶಗಳಿಂದ ಇಲ್ಲಿಗೆ ಸರಕು ಸಾಗಿಸಬಹುದು. ಆದರೆ ಉತ್ತರದಿಂದ ಬರುವ ಸರಕುಗಳನ್ನು ಹಡಗುಗಳ ಮೂಲಕ ಪ್ವೆರ್ಟೊ ಕಾರ್ಟಿಸ್ ಗೆ ತಂದು ಅಲ್ಲಿಂದ ರೈಲ್ವೆ ಅಥವಾ ಒಣ ಋತು ರಸ್ತೆಯಲ್ಲಿ ಪಾಟ್ರೆರಿಲೋಸಿಗೂ ಅನಂತರ ಸರ್ವಋತು ರಸ್ತೆಯ ಮೂಲಕ ಟೆಗೂಸಿಗ್ಯಾಲ್ಪಕ್ಕೂ ಸಾಗಿಸಬೇಕಾಗುತ್ತದೆ.

ಪ್ರಮುಖ ಕಟ್ಟಡಗಳು.

ರಾಷ್ಟ್ರಪತಿ ಭವನ, ಹಾಂಡುರಾಸ್, ಕೇಂದ್ರೀಯ ಬ್ಯಾಂಕು, ವಿಧಾನ ಭವನ, ರಾಷ್ಟ್ರೀಯ ವಿಶ್ವವಿದ್ಯಾಲಯ-ಇವು ಮಲ್ಲೋಲ್ ಸೇತುವೆಯ ಬಳಿ ಇರುವ ಪ್ರಮುಖ ಕಟ್ಟಡಗಳು. ರಾಷ್ಟ್ರದ ಮಹಾವೀರನೊಬ್ಬನ ಹೆಸರಿನ ಮೋರ್ ಸಾನ್ ಉದ್ಯಾನದ ಎದುರಿಗಿನ ಕತೀಡ್ರಲ್ ಆಕರ್ಷಕವಾಗಿದೆ. ಕೈಗಾರಿಕೆಯಲ್ಲಿ ಟೆಗೂಸಿಗ್ಯಾಲ್ಪ ಅಷ್ಟು ಮುಂದುವರಿದಿಲ್ಲ.

ಕೈಗಾರಿಕೆಗಳು

ಸ್ಥಳೀಯ ಬೇಡಿಕೆಗಳನ್ನು ಪೂರೈಸುವ ಕೆಲವು ಸಣ್ಣಪುಟ್ಟ ಕೈಗಾರಿಕೆಗಳಿವೆ. ಜವಳಿ, ಸಕ್ಕರೆ, ಸಿಗರೇಟ್ ತಯಾರಿಕೆಗಳು ಮುಖ್ಯ ಕೈಗಾರಿಕೆಗಳು.


ಟೆಗೂಸಿಗ್ಯಾಲ್ಪ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಟೆಗೂಸಿಗ್ಯಾಲ್ಪ ಹವಾಗುಣಟೆಗೂಸಿಗ್ಯಾಲ್ಪ ಸಾರಿಗೆ ಸಂಪರ್ಕಟೆಗೂಸಿಗ್ಯಾಲ್ಪ ಪ್ರಮುಖ ಕಟ್ಟಡಗಳು.ಟೆಗೂಸಿಗ್ಯಾಲ್ಪ ಕೈಗಾರಿಕೆಗಳುಟೆಗೂಸಿಗ್ಯಾಲ್ಪಹೊಂಡುರಾಸ್

🔥 Trending searches on Wiki ಕನ್ನಡ:

ಸಿದ್ಧರಾಮಅಮಿತ್ ಶಾಮೊದಲನೇ ಅಮೋಘವರ್ಷಭಾರತದ ರಾಷ್ಟ್ರಪತಿಆಲಿವ್ಸಂಯುಕ್ತ ರಾಷ್ಟ್ರ ಸಂಸ್ಥೆಪ್ರಜಾವಾಣಿಜೋಡು ನುಡಿಗಟ್ಟುದ್ರಾವಿಡ ಭಾಷೆಗಳುಭಕ್ತಿ ಚಳುವಳಿಹಾವೇರಿವಸುಧೇಂದ್ರನಾಲಿಗೆಮಂಜುಳಹವಾಮಾನಸಿಂಧನೂರುರಾಹುಲ್ ಗಾಂಧಿನಿರ್ವಹಣೆ ಪರಿಚಯಹಾನಗಲ್ರಸ(ಕಾವ್ಯಮೀಮಾಂಸೆ)ಬೀಚಿಛತ್ರಪತಿ ಶಿವಾಜಿಮಧ್ವಾಚಾರ್ಯವಿಧಾನಸೌಧಚಿತ್ರದುರ್ಗಲಿಂಗಾಯತ ಪಂಚಮಸಾಲಿಅತ್ತಿಮಬ್ಬೆಜಲ ಮಾಲಿನ್ಯಮಲೆನಾಡುಭಾರತೀಯ ರಿಸರ್ವ್ ಬ್ಯಾಂಕ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮಹಾತ್ಮ ಗಾಂಧಿತೇಜಸ್ವಿ ಸೂರ್ಯಸ್ವಾಮಿ ವಿವೇಕಾನಂದ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆರಾಷ್ಟ್ರಕವಿಹರ್ಯಂಕ ರಾಜವಂಶಕರ್ನಾಟಕ ರತ್ನ೨೦೧೬ಕೆ. ಸುಧಾಕರ್ (ರಾಜಕಾರಣಿ)ಸಮಂತಾ ರುತ್ ಪ್ರಭುಪರಶುರಾಮಫೀನಿಕ್ಸ್ ಪಕ್ಷಿಪಪ್ಪಾಯಿಪಂಜೆ ಮಂಗೇಶರಾಯ್ಉಡುಪಿ ಜಿಲ್ಲೆಊಳಿಗಮಾನ ಪದ್ಧತಿಸಮಾಜಶಾಸ್ತ್ರಬಯಕೆವೈದೇಹಿಸೀತೆಕುವೆಂಪುಸಮಾಜ ಸೇವೆಮಳೆಬಿಲ್ಲುಭಾರತದಲ್ಲಿ ಪರಮಾಣು ವಿದ್ಯುತ್ಅಲೆಕ್ಸಾಂಡರ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಅಂಕಗಣಿತಹರಿಹರ (ಕವಿ)ಶಾಮನೂರು ಶಿವಶಂಕರಪ್ಪಯಶ್(ನಟ)ಶಾಸನಗಳುಭಾಷೆಮಹಾವೀರವಿಜಯನಗರಚಂಪೂಕಲ್ಯಾಣ ಕರ್ನಾಟಕಕೆ ವಿ ನಾರಾಯಣಲೋಪಸಂಧಿವೆಂಕಟೇಶ್ವರ ದೇವಸ್ಥಾನಜ್ಞಾನಪೀಠ ಪ್ರಶಸ್ತಿಮಲ್ಲಿಕಾರ್ಜುನ್ ಖರ್ಗೆಧರ್ಮಸ್ಥಳಮರಾಠಾ ಸಾಮ್ರಾಜ್ಯರಾಶಿ🡆 More