ಟೆಗೂಸಿಗ್ಯಾಲ್ಪ

ಟೆಗೂಸಿಗ್ಯಾಲ್ಪ- ಹಾಂಡುರಾಸ್ ಗಣರಾಜ್ಯದ ರಾಜಧಾನಿ, ಫ್ರ್ಯಾನ್ಸಿಸ್ಕೋ ಮೋರಜಾನ್ ಡಿಪಾರ್ಟ್‍ಮೆಂಟಿನ (ಆಡಳಿತ ವಿಭಾಗ) ಆಡಳಿತ ಕೇಂದ್ರ.

ಟೆಗೂಸಿಗ್ಯಾಲ್ಪ
View of Tegucigalpa.

ಹವಾಗುಣ

ಉ.ಅ.15' ಮತ್ತು ಪ.ರೇ. 86' 30' ಮೇಲೆ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಈ ನಗರ ಸಮುದ್ರಮಟ್ಟದಿಂದ 3,200' (975 ಮೀ.) ಎತ್ತರದಲ್ಲಿದೆ. ಜನಸಂಖ್ಯೆ 2,18,510 (1969). ಚಿನ್ನ ಮತ್ತು ಬೆಳ್ಳಿ ಗಣಿಗಾರಿಕೆ ಕೇಂದ್ರವಾಗಿ ಇದು ಬೆಳೆಯತೊಡಗಿತು. ಇದು ಉಷ್ಣವಲಯದಲ್ಲಿದ್ದರೂ ವಾಯುಗುಣ ಹಿತಕರ. ಜೂನಿನ ದೈನಿಕ ಸರಾಸರಿ ಉಷ್ಣತೆ 75ಲಿ ಈ. (24ಲಿ ಅ). ಜನವರಿಯದು 65ಲಿ ಈ. (18ಲಿ ಅ.). ಮೇಯಿಂದ ಅಕ್ಟೋಬರ್ ವರೆಗೆ ಮಳೆಗಾಲ.

ಸಾರಿಗೆ ಸಂಪರ್ಕ

ರೈಲ್ವೆ ಸಂಪರ್ಕವಿಲ್ಲದ, ಪ್ರಪಂಚದ ಕೆಲವೇ ರಾಜಧಾನಿಗಳ ಪೈಕಿ ಟೆಗೂಸಿಗ್ಯಾಲ್ಪವೂ ಒಂದು. ಟಾನ್ ಕಾನ್ ಟಿನ್ ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಪಂಚದ ಇತರ ಭಾಗಗಳೊಡನೆ ಇದಕ್ಕೆ ಸಂಪರ್ಕ ಏರ್ಪಟ್ಟಿದೆ. ದಕ್ಷಿಣ ಹೆದ್ದಾರಿ ಸರ್ವಋತುಗಳಲ್ಲೂ ಬಳಕೆಗೆ ಬರುತ್ತದಾದ್ದರಿಂದ ಪೆಸಿಫಿಕ್ ತೀರದಿಂದ ಮತ್ತು ನೆರೆಯ ಎಲ್ ಸಾಲ್ವಡಾರ್ ಮತ್ತು ನಿಕರಾಗ್ವ ದೇಶಗಳಿಂದ ಇಲ್ಲಿಗೆ ಸರಕು ಸಾಗಿಸಬಹುದು. ಆದರೆ ಉತ್ತರದಿಂದ ಬರುವ ಸರಕುಗಳನ್ನು ಹಡಗುಗಳ ಮೂಲಕ ಪ್ವೆರ್ಟೊ ಕಾರ್ಟಿಸ್ ಗೆ ತಂದು ಅಲ್ಲಿಂದ ರೈಲ್ವೆ ಅಥವಾ ಒಣ ಋತು ರಸ್ತೆಯಲ್ಲಿ ಪಾಟ್ರೆರಿಲೋಸಿಗೂ ಅನಂತರ ಸರ್ವಋತು ರಸ್ತೆಯ ಮೂಲಕ ಟೆಗೂಸಿಗ್ಯಾಲ್ಪಕ್ಕೂ ಸಾಗಿಸಬೇಕಾಗುತ್ತದೆ.

ಪ್ರಮುಖ ಕಟ್ಟಡಗಳು.

ರಾಷ್ಟ್ರಪತಿ ಭವನ, ಹಾಂಡುರಾಸ್, ಕೇಂದ್ರೀಯ ಬ್ಯಾಂಕು, ವಿಧಾನ ಭವನ, ರಾಷ್ಟ್ರೀಯ ವಿಶ್ವವಿದ್ಯಾಲಯ-ಇವು ಮಲ್ಲೋಲ್ ಸೇತುವೆಯ ಬಳಿ ಇರುವ ಪ್ರಮುಖ ಕಟ್ಟಡಗಳು. ರಾಷ್ಟ್ರದ ಮಹಾವೀರನೊಬ್ಬನ ಹೆಸರಿನ ಮೋರ್ ಸಾನ್ ಉದ್ಯಾನದ ಎದುರಿಗಿನ ಕತೀಡ್ರಲ್ ಆಕರ್ಷಕವಾಗಿದೆ. ಕೈಗಾರಿಕೆಯಲ್ಲಿ ಟೆಗೂಸಿಗ್ಯಾಲ್ಪ ಅಷ್ಟು ಮುಂದುವರಿದಿಲ್ಲ.

ಕೈಗಾರಿಕೆಗಳು

ಸ್ಥಳೀಯ ಬೇಡಿಕೆಗಳನ್ನು ಪೂರೈಸುವ ಕೆಲವು ಸಣ್ಣಪುಟ್ಟ ಕೈಗಾರಿಕೆಗಳಿವೆ. ಜವಳಿ, ಸಕ್ಕರೆ, ಸಿಗರೇಟ್ ತಯಾರಿಕೆಗಳು ಮುಖ್ಯ ಕೈಗಾರಿಕೆಗಳು.


ಟೆಗೂಸಿಗ್ಯಾಲ್ಪ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಟೆಗೂಸಿಗ್ಯಾಲ್ಪ ಹವಾಗುಣಟೆಗೂಸಿಗ್ಯಾಲ್ಪ ಸಾರಿಗೆ ಸಂಪರ್ಕಟೆಗೂಸಿಗ್ಯಾಲ್ಪ ಪ್ರಮುಖ ಕಟ್ಟಡಗಳು.ಟೆಗೂಸಿಗ್ಯಾಲ್ಪ ಕೈಗಾರಿಕೆಗಳುಟೆಗೂಸಿಗ್ಯಾಲ್ಪಹೊಂಡುರಾಸ್

🔥 Trending searches on Wiki ಕನ್ನಡ:

ರಾಜ್ಯಕೃಷ್ಣರಾಜಸಾಗರಮೈಸೂರುಗುಡುಗುಧರ್ಮರಾಜಕೀಯ ಪಕ್ಷಮಾದಿಗದಲಿತಎ.ಪಿ.ಜೆ.ಅಬ್ದುಲ್ ಕಲಾಂಭಾಮಿನೀ ಷಟ್ಪದಿಸಂಪತ್ತಿಗೆ ಸವಾಲ್ಮದುವೆಹಳೆಗನ್ನಡಜಶ್ತ್ವ ಸಂಧಿಮುತ್ತುಗಳುಪರ್ವತ ಬಾನಾಡಿಕನ್ನಡಕುರುಬಗಿಡಮೂಲಿಕೆಗಳ ಔಷಧಿಯಣ್ ಸಂಧಿಬಾಹುಬಲಿವಿಕ್ರಮಾರ್ಜುನ ವಿಜಯಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಕರ್ನಾಟಕದ ಕಲೆ ಮತ್ತು ಸಂಸ್ಕೃತಿಹಸ್ತಪ್ರತಿಸ್ವಚ್ಛ ಭಾರತ ಅಭಿಯಾನಶ್ರೀ ರಾಮ ನವಮಿಮಧ್ವಾಚಾರ್ಯಟಿಪ್ಪು ಸುಲ್ತಾನ್ಇಮ್ಮಡಿ ಪುಲಿಕೇಶಿದ್ರಾವಿಡ ಭಾಷೆಗಳುಕಿತ್ತೂರು ಚೆನ್ನಮ್ಮಆತ್ಮರತಿ (ನಾರ್ಸಿಸಿಸಮ್‌)ಚಿಲ್ಲರೆ ವ್ಯಾಪಾರಯಶ್(ನಟ)ಕನಕದಾಸರುನಂಜನಗೂಡುವಚನಕಾರರ ಅಂಕಿತ ನಾಮಗಳುಯಕೃತ್ತುಸುಮಲತಾಪರಶುರಾಮಸಂಸ್ಕೃತ ಸಂಧಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಹರಿಶ್ಚಂದ್ರಹೆಚ್.ಡಿ.ಕುಮಾರಸ್ವಾಮಿಹಿಂದೂ ಧರ್ಮಚದುರಂಗದ ನಿಯಮಗಳುಪ್ರಾಥಮಿಕ ಶಿಕ್ಷಣವಿಭಕ್ತಿ ಪ್ರತ್ಯಯಗಳುಪುರಂದರದಾಸಶೈಕ್ಷಣಿಕ ಮನೋವಿಜ್ಞಾನಸ್ಟಾರ್‌ಬಕ್ಸ್‌‌ಭಾರತದ ಸಂವಿಧಾನಸಾಲ್ಮನ್‌ಉಪ್ಪಿನ ಸತ್ಯಾಗ್ರಹಇನ್ಸ್ಟಾಗ್ರಾಮ್ಅಕ್ಬರ್ಸೂರತ್ಕರ್ಬೂಜಭಾರತೀಯ ಸಂವಿಧಾನದ ತಿದ್ದುಪಡಿಭಾರತೀಯ ಭಾಷೆಗಳುಗಿರೀಶ್ ಕಾರ್ನಾಡ್ಝಾನ್ಸಿ ರಾಣಿ ಲಕ್ಷ್ಮೀಬಾಯಿಭಾರತದ ಸಂವಿಧಾನ ರಚನಾ ಸಭೆಭಾರತೀಯ ರಿಸರ್ವ್ ಬ್ಯಾಂಕ್ವ್ಯವಸಾಯದೂರದರ್ಶನಭಾರತೀಯ ಸಂಸ್ಕೃತಿತತ್ಪುರುಷ ಸಮಾಸಕರ್ನಾಟಕದ ಹಬ್ಬಗಳುಕರ್ನಾಟಕದ ಮಹಾನಗರಪಾಲಿಕೆಗಳುತಾಳೀಕೋಟೆಯ ಯುದ್ಧಕೊರೋನಾವೈರಸ್ಮಹಿಳೆ ಮತ್ತು ಭಾರತಹಯಗ್ರೀವಪ್ರಜಾಪ್ರಭುತ್ವಕವಲುಕೊಪ್ಪಳ🡆 More