ಟೂಕಮಾನ್

ಟೂಕಮಾನ್- ಆರ್ಜೆಂಟೀನದ ಒಂದು ಉತ್ತರ ಪ್ರಾಂತ್ಯ; ಇದರ ರಾಜಧಾನಿ.

ಟೂಕಮಾನ್ ಪ್ರಾಂತ್ಯ

ಪ್ರಾಂತ್ಯದ ಉತ್ತರಕ್ಕೆ ಸಾಲ್ಟ ಪ್ರಾಂತ್ಯ, ಪೂರ್ವಕ್ಕೆ ಸ್ಯಾಂಟಿಯಾಗೋ ಡೆಲ್ ಅಸ್ಟೆರೋ ಪ್ರಾಂತ್ಯ, ದಕ್ಷಿಣ ಮತ್ತು ಪಶ್ಚಿಮಕ್ಕೆ ಕಾಟಮಾರ್ಕ ಪ್ರಾಂತ್ಯ ಇವೆ. ವಿಸ್ತೀರ್ಣ 8,697 ಚ.ಮೈ. (22.525 ಚ.ಕಿಮೀ.). ಜನಸಂಖ್ಯೆ 7,65,962 (1970).

ಇದರ ಪಶ್ಚಿಮ ಭಾಗ ಬೆಟ್ಟಗುಡ್ಡಗಳಿಂದ ಆವೃತವಾಗಿದ್ದರೆ ಪೂರ್ವ ಭಾಗ ಸಮತಟ್ಟಾಗಿ, ಮೆಕ್ಕಲಮಣ್ಣಿನಿಂದ ಕೂಡಿ ಫಲವತ್ತಾಗಿದೆ. ಪಶ್ಚಿಮದ ಕಡೆ ಇರುವ ಆಕನ್ ಕೀಯ (16400') ಪರ್ವತಶ್ರೇಣಿ ಪೂರ್ವದ ತೇವಭರಿತ ಮಾರುತಗಳನ್ನು ತಡೆದು ಅಧಿಕ ಮಳೆ ಬೀಳುವಂತೆ ಮಾಡುತ್ತದೆ. ವಾರ್ಷಿಕ ಮಳೆ 37" (940 ಮಿಮೀ.). ಪರ್ವತದಲ್ಲಿ ಅನೇಕ ಹೊಳೆಗಳು ಹುಟ್ಟಿ ಹುರಿದು, ರೀಯೋ ಡಲ್ಸ ನೆಯ ಉಪನೆಇಯಾದ ರೀಯೋ ಸಾಲಿಯನ್ನು ಸೇರುತ್ತವೆ.

ಇಲ್ಲಿಯ ವಾಯುಗುಣ ಕಬ್ಬಿನ ಬೇಳೆಗೆ ಅನುಕೂಲಕರ. ಎರಡನೆಯ ಮುಖ್ಯಯ ಬೆಳೆ ಮುಸುಕಿನ ಜೋಳ. 1880ರ ದಶಕದಲ್ಲಿ ರೈಲುಮಾರ್ಗದ ರಚನೆಯಿಂದಾಗಿ ಅಟ್ಲಾಂಟಿಕ್ ತೀರದೊಡನೆ ಇದರ ಸಂಪರ್ಕ ಬೆಳೆಯಿತು. ಇದರಿಂದಾಗಿ ಪ್ರಾಂತ್ಯದ ಕಬ್ಬಿನ ಬೆಳೆಯ ಮಹತ್ತ್ವವೂ ಹೆಚ್ಚಿತು. ಪ್ರಾಂತ್ಯದ ಒಳಭಾಗಗಳಿಂದ ಕಬ್ಬನ್ನು ಸಾಗಿಸಲು ರೈಲ್ವೆ ಸೌಲಭ್ಯವಿದೆ. 19ನೆಯ ಶತಮಾನದಿಂದ ಕಬ್ಬು ಇಲ್ಲಿಯ ಸಂಪತ್ತಿನ ಮುಖ್ಯ ಆಧಾರ. ರಾಷ್ಟ್ರೀಯ ರೈಲು ಮಾರ್ಗಗಳು ಈ ಪ್ರಾಂತ್ಯಕ್ಕೆ ಆರ್ಜೆಂಟೀನದ ಇತರ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸುತ್ತವೆ.

ಟೂಕಮಾನ್ ನಗರ

ಟೂಕಮಾನ್ ನಗರ (ಸ್ಯಾನ್ ಮಿಗೆಲ್ ಡೇ ಟೂಕಮಾನ್) ಆಕನ್ ಕೀಯದ ತಪ್ಪಲಿನಲ್ಲಿ ಸರೀಯೋ ಸಾಲಿ ನದಿಯ ದಡದ ಮೇಲಿದೆ. ಬ್ಯಾನಸ್ಯಾರೀಸ್ ನ ಈಶಾನ್ಯ ದಿಕ್ಕಿಗೆ ಸು. 700 ಮೈ. ಕೂರದಲ್ಲಿದೆ. ಈ ನಗರ ಪರ್ವತಪ್ರದೇಶದಲ್ಲಿದ್ದರೂ ಇಲ್ಲಿಯದು ಊಪೋಷ್ಣವಲಯ ವಾಯುಗುಣ. ಮಳೆ ಸಾಧಾರಣ. ಚಳಿಗಾಲದಲ್ಲಿ ಮಂಜು ವಿರಳ. ಈ ಸುತ್ತಿನ ಪ್ರದೇಶದಲ್ಲಿ ಕಬ್ಬು ಚೆನ್ನಾಗಿ ಬೆಳೆಯುತ್ತದೆ. ಇಲ್ಲಿ ಕಬ್ಬಿನಿಂದ ಸಕ್ಕರೆ ತಯಾರಿಸಿ ರವಾನೆ ಮಾಡಲಾಗುತ್ತದೆ. ಈ ನಗರ 1565ರಲ್ಲಿ ಸ್ಥಾಪಿತವಾಯಿತು. ಕಾರ್ಡಬಕ್ಕೂ ಬೊಲಿವೀಯದ ಗಣಿಗಳಿಗೂ ನಡುಗುಣ ಮಾರ್ಗದಲ್ಲಿ ಆಯಕಟ್ಟಿನ ಸ್ಥಳದಲ್ಲದ್ದುದರಿಂದ ಇದು ಬೇಗ ಬೆಳೆಯಿತು. 1776ರಲ್ಲಿ ಈ ನಗರದ ಹತೋಟಿ ಪೆರುವಿನಿಂದ ಬ್ಯಾನಸ್ಯಾರೀಸಿಗೆ ಸೇರಿತು. 1816ರಲ್ಲಿ ಲಾ ಪ್ಲಾಟ ಪ್ರಾಂತ್ಯಗಳ ಪ್ರತಿನಿಧಿಗಳು ಟೂಕಮಾನ್ ನಲ್ಲಿ ಸಭೆ ಸೇರಿ ಸ್ಪೇನಿನಿಂದ ಸ್ವಾತಂತ್ತ್ಯವನ್ನು ಘೋಷಿಸಿದರು. ಟೂಕಮಾನ್ ರಾಷ್ಟ್ರೀಯ ವಿಶ್ವವಿದ್ಯಾಲಯ 1914ರಲ್ಲಿ ಸ್ಥಾಪಿತವಾಯಿತು. ನಗರದ ಜನಸಂಖ್ಯೆ 2,71,546 (1960).

Tags:

ಅರ್ಜೆಂಟೀನ

🔥 Trending searches on Wiki ಕನ್ನಡ:

ದೇವನೂರು ಮಹಾದೇವಯು.ಆರ್.ಅನಂತಮೂರ್ತಿದಾಳಿಂಬೆವಿಧಾನಸೌಧದಿಯಾ (ಚಲನಚಿತ್ರ)ಜನತಾ ದಳ (ಜಾತ್ಯಾತೀತ)ಭಾರತೀಯ ಆಡಳಿತಾತ್ಮಕ ಸೇವೆಗಳುಜಾತ್ರೆಪ್ರವಾಸ ಸಾಹಿತ್ಯರಚಿತಾ ರಾಮ್ಕನ್ನಡ ರಂಗಭೂಮಿಪಿ.ಲಂಕೇಶ್ಗಣೇಶ್ (ನಟ)ಹುಲಿಹೈದರಾಲಿಸಮಾಜ ವಿಜ್ಞಾನಕಾದಂಬರಿದಲಿತಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಭಾರತದಲ್ಲಿನ ಚುನಾವಣೆಗಳುಭಾರತೀಯ ಮೂಲಭೂತ ಹಕ್ಕುಗಳುಎಸ್.ನಿಜಲಿಂಗಪ್ಪಅಖ್ರೋಟ್ಸಾಮ್ರಾಟ್ ಅಶೋಕಕನ್ನಡ ವ್ಯಾಕರಣಬೃಂದಾವನ (ಕನ್ನಡ ಧಾರಾವಾಹಿ)ರಾಜಕೀಯ ವಿಜ್ಞಾನಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಪ್ರಾಥಮಿಕ ಶಾಲೆಶನಿಭಾರತದಲ್ಲಿನ ಜಾತಿ ಪದ್ದತಿಸಿಂಧನೂರುತರಕಾರಿಶ್ರೀ ರಾಘವೇಂದ್ರ ಸ್ವಾಮಿಗಳುಗಣರಾಜ್ಯೋತ್ಸವ (ಭಾರತ)ಚನ್ನಬಸವೇಶ್ವರಕೊಡಗಿನ ಗೌರಮ್ಮಹಾಸನಕಾವೇರಿ ನದಿ ನೀರಿನ ವಿವಾದಬೆಂಗಳೂರು ಕೋಟೆಕನ್ನಡ ಜಾನಪದರಾಘವಾಂಕಬ್ರಹ್ಮದ್ರಾವಿಡ ಭಾಷೆಗಳುಬಾದಾಮಿ ಗುಹಾಲಯಗಳುಭಾರತದ ಭೌಗೋಳಿಕತೆಚಂದ್ರಶೇಖರ ಕಂಬಾರಸಹಕಾರಿ ಸಂಘಗಳುವೈದೇಹಿಗೋತ್ರ ಮತ್ತು ಪ್ರವರಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭಾರತೀಯ ಸಂಸ್ಕೃತಿವಿಶ್ವವಿದ್ಯಾಲಯ ಧನಸಹಾಯ ಆಯೋಗಕರ್ಣತೆಲುಗುತಿರುಪತಿಮಹಮದ್ ಬಿನ್ ತುಘಲಕ್ಕರ್ಮಧಾರಯ ಸಮಾಸಶಿವರಾಜ್‍ಕುಮಾರ್ (ನಟ)ಅಡಿಕೆಧರ್ಮಹೊಯ್ಸಳ ವಿಷ್ಣುವರ್ಧನಬಾರ್ಲಿಮುಹಮ್ಮದ್ಆಗಮ ಸಂಧಿವರ್ಗೀಯ ವ್ಯಂಜನಭಾರತೀಯ ಸಂವಿಧಾನದ ತಿದ್ದುಪಡಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಕಮಲದಹೂಕರ್ನಾಟಕದ ಮಹಾನಗರಪಾಲಿಕೆಗಳುಮಾನವ ಸಂಪನ್ಮೂಲ ನಿರ್ವಹಣೆಬಿ.ಎಸ್. ಯಡಿಯೂರಪ್ಪಮೆಂತೆಕಮ್ಯೂನಿಸಮ್ಅಲ್ಲಮ ಪ್ರಭುಅರಿಸ್ಟಾಟಲ್‌ಯಕೃತ್ತು🡆 More