ಟಿಮ್ ಪೈನ್

ಟಿಮೋತಿ ಡೇವಿಡ್ ಪೈನ್, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ.

ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬಲಗೈ ಆಟಗಾರ. ಇವರು ವಿಕೇಟ್ ಕೀಪಿಂಗ್ ಸಹ ಮಾಡುತ್ತಾರೆ. ದೇಶೀಯ ಕ್ರಿಕೆಟ್ನಲ್ಲಿ ಟ್ಯಾಸ್ಮೆನಿಯ ಹಾಗೂ ಹೊಬರ್ಟ್ ಹರ್ರಿಕೆನ್ಸ್ ತಂಡಗಳಿಗೆ ಆಡುತ್ತಾರೆ. ೨೦೧೧ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ತಂಡಕ್ಕೆ ಆಡಿದ್ದರು, ನಂತರ ಐಪಿಎಲ್ ಸರಣಿಯಲ್ಲಿ ಪಾಲ್ಗೊಳ್ಳಲಿಲ್ಲ.

ಟಿಮ್ ಪೈನ್
ಟಿಮ್ ಪೈನ್

ಆರಂಭಿಕ ಜೀವನ

ಟಿಮ್ ಪೈನ್ ರವರು ಡಿಸೆಂಬರ್ ೦೮, ೧೯೮೪ರಲ್ಲಿ ಆಸ್ಟ್ರೇಲಿಯಾದ ಟ್ಯಾಸ್ಮೆನಿಯದ ಹೋಬರ್ಟ್ನಲ್ಲಿ ಜನಿಸಿದರು. ಟಿಮ್ ಪೈನ್ ಟ್ಯಾಸ್ಮೆನಿಯಾದ ೧೫ ಹಾಗೂ ೧೭ ವಯೋಮಿತಿ ತಂಡಗಳ ನಾಯಕರಾಗಿದ್ದರು. ತಮ್ಮ ೧೫ನೇ ವಯಸ್ಸಿನಲ್ಲೇ ಇವರು ೧೯ರ ವಯೋಮಿತಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಆಸ್ಟ್ರೇಲಿಯಾದ ೧೭ರ ವಯೋಮಿತಿ ಕ್ರಿಕೆಟ್ ತಂಡದ ಉಪನಾಯಕರಾಗುದ್ದರು. ೨೦೦೩ರಲ್ಲಿ ಆಸ್ಟ್ರೇಲಿಯಾದ ೧೯ರ ವಯೋಮಿತಿ ತಂಡದ ನಾಯಕರಾದರು. ೨೦೦೪ರ ವರ್ಲ್ಡ್ ಕಪ್ ಸರಣಿಯಲ್ಲಿ ಸಹ ನಾಯಕತ್ವ ವಹಿಸಿದ್ದರು.

ವೃತ್ತಿ ಜೀವನ

ಟಿಮ್ ಪೈನ್ ರವರು ಡಿಸೆಂಬರ್ ೧೨, ೨೦೦೫ರಂದು ಹೋಬರ್ಟ್ನಲ್ಲಿ ಟ್ಯಾಸ್ಮೆನಿಯ ಹಾಗೂ ದಕ್ಷಿಣ ಆಸ್ಟ್ರೇಲಿಯಾ ತಂಡದ ನಡುವೆ ನಡೆದ ಪಂದ್ಯದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.

ಅಂತರರಾಷ್ಟ್ರೀಯ ಕ್ರಿಕೆಟ್

ಅಗಸ್ಟ್ ೨೮, ೨೦೦೯ರಲ್ಲಿ ಸ್ಕಾಟ್ಲೆಂಡ್ ವಿರುಧ್ಧ ನಡೆದ ಏಕೈಕ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಅಗಸ್ಟ್ ೩೦, ೨೦೦೯ರಂದು ಮ್ಯಾಂಚೆಸ್ಟರ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟಿ-೨೦ ಪಂದ್ಯದಿಂದ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಗೆ ಪಾದಾರ್ಪನೆ ಮಾಡಿದರು. ಜುಲೈ ೧೩, ೨೦೧೦ ರಂದು ಲಾರ್ಡ್ಸ್ ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಮೊದಲನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿದರು.

ಪಂದ್ಯಗಳು

  • ಏಕದಿನ ಕ್ರಿಕೆಟ್ : ೩೫ ಪಂದ್ಯಗಳು
  • ಟೆಸ್ಟ್ ಕ್ರಿಕೆಟ್ : ೨೪ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೧೨ ಪಂದ್ಯಗಳು

ಶತಕಗಳು

  1. ಏಕದಿನ ಪಂದ್ಯಗಳಲ್ಲಿ : ೦೧

ಅರ್ಧ ಶತಕಗಳು

  1. ಟೆಸ್ಟ್ ಪಂದ್ಯಗಳಲ್ಲಿ : ೦೫
  2. ಏಕದಿನ ಪಂದ್ಯಗಳಲ್ಲಿ : ೦೫

ಉಲ್ಲೇಖಗಳು

Tags:

ಟಿಮ್ ಪೈನ್ ಆರಂಭಿಕ ಜೀವನಟಿಮ್ ಪೈನ್ ವೃತ್ತಿ ಜೀವನಟಿಮ್ ಪೈನ್ ಪಂದ್ಯಗಳುಟಿಮ್ ಪೈನ್ ಉಲ್ಲೇಖಗಳುಟಿಮ್ ಪೈನ್ಇಂಡಿಯನ್ ಪ್ರೀಮಿಯರ್ ಲೀಗ್ಕ್ರಿಕೆಟ್

🔥 Trending searches on Wiki ಕನ್ನಡ:

ಮಲ್ಲಿಗೆಭಾರತೀಯ ರಿಸರ್ವ್ ಬ್ಯಾಂಕ್ಧಾರವಾಡಕರ್ನಾಟಕದ ನದಿಗಳುಭಾಮಿನೀ ಷಟ್ಪದಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕನಕದಾಸರುರಾಷ್ಟ್ರಕೂಟಧರ್ಮರಾಯ ಸ್ವಾಮಿ ದೇವಸ್ಥಾನಸಿದ್ದಪ್ಪ ಕಂಬಳಿಮಾವುಸುಮಲತಾಅಷ್ಟ ಮಠಗಳುಸಲಿಂಗ ಕಾಮಪರಿಸರ ವ್ಯವಸ್ಥೆಪಪ್ಪಾಯಿಭೂತಾರಾಧನೆಚಿನ್ನವ್ಯಾಪಾರ ಸಂಸ್ಥೆಕನ್ನಡ ಚಳುವಳಿಗಳುಸರಾಸರಿಜಿ.ಪಿ.ರಾಜರತ್ನಂಆದಿಚುಂಚನಗಿರಿಚುನಾವಣೆದಾಳಿಂಬೆತತ್ಪುರುಷ ಸಮಾಸಪುಟ್ಟರಾಜ ಗವಾಯಿಕನ್ನಡ ಸಾಹಿತ್ಯ ಸಮ್ಮೇಳನಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಜಯಂತ ಕಾಯ್ಕಿಣಿಕನ್ನಡ ರಾಜ್ಯೋತ್ಸವಗೊರೂರು ರಾಮಸ್ವಾಮಿ ಅಯ್ಯಂಗಾರ್ಭಾರತೀಯ ಧರ್ಮಗಳುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುವಿಕಿರಣಸೀತೆಮಳೆನೀರು ಕೊಯ್ಲುಬಹುವ್ರೀಹಿ ಸಮಾಸಅಸ್ಪೃಶ್ಯತೆವಿಧಾನಸೌಧಕರ್ಣಗೂಗಲ್ಹಾಸನಚೆನ್ನಕೇಶವ ದೇವಾಲಯ, ಬೇಲೂರುರಕ್ತದೊತ್ತಡಜಾಹೀರಾತುರಾಹುಲ್ ಗಾಂಧಿಅಮೃತಧಾರೆ (ಕನ್ನಡ ಧಾರಾವಾಹಿ)ನದಿಎ.ಎನ್.ಮೂರ್ತಿರಾವ್ವಿಜಯದಾಸರುಆವಕಾಡೊಚಾಮರಾಜನಗರಮಂಟೇಸ್ವಾಮಿಜಾಗತಿಕ ತಾಪಮಾನಗುರುರಾಜ ಕರಜಗಿನಗರವಿನಾಯಕ ದಾಮೋದರ ಸಾವರ್ಕರ್ಅಸಹಕಾರ ಚಳುವಳಿಮಣ್ಣುಛತ್ರಪತಿ ಶಿವಾಜಿಶಿವಪ್ಪ ನಾಯಕಎಕರೆಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುವಾಲ್ಮೀಕಿರಾಷ್ಟ್ರೀಯತೆಕನ್ನಡ ಛಂದಸ್ಸುಮೂಕಜ್ಜಿಯ ಕನಸುಗಳು (ಕಾದಂಬರಿ)ಪಾಕಿಸ್ತಾನಕ್ರಿಕೆಟ್ವಿಷ್ಣುವರ್ಧನ್ (ನಟ)ಜಯಪ್ರಕಾಶ್ ಹೆಗ್ಡೆದಿಯಾ (ಚಲನಚಿತ್ರ)ರತ್ನತ್ರಯರುಅಮೇರಿಕ ಸಂಯುಕ್ತ ಸಂಸ್ಥಾನ🡆 More