ಜಸ್‌ಲಾಲ್ ಪ್ರಧಾನ್

ಜಸ್‌ಲಾಲ್ ಪ್ರಧಾನ್‌ರವರು ಭಾರತೀಯ ಬಾಕ್ಸರ್‌ರಾಗಿದ್ದಾರೆ.

ಜಸ್‌ಲಾಲ್ ಪ್ರಧಾನ್
ಜಸ್‌ಲಾಲ್ ಪ್ರಧಾನ್
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತೀಯ
ಜನನ (1957-04-24) ೨೪ ಏಪ್ರಿಲ್ ೧೯೫೭ (ವಯಸ್ಸು ೬೭)
Sport
ಕ್ರೀಡೆಬಾಕ್ಸರ್

ಜನನ ಮತ್ತು ಬಾಲ್ಯ ಜೀವನ

ಜಸ್‌ಲಾಲ್ ಪ್ರಧಾನ್‌ರವರು ಭಾರತೀಯ ಬಾಕ್ಸರ್‌ರಾಗಿದ್ದಾರೆ. ಇವರು ಏಪ್ರಿಲ್ ೨೪, ೧೯೫೭ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಇವರು ಶ್ರೀಮತಿ ಮತ್ತು ಶ್ರೀಮಾನ್ ಬಹದ್ದೂರ್ ಪ್ರಧಾನ್‌ರವರ ಪುತ್ರನಾಗಿ ಸಿಕ್ಕಿಂನ ಸಿಂಗ್ಟಮ್ ನಗರದಲ್ಲಿರುವ ಖಾಮ್‌‌ಡಾಂಗ್ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರು ತಮ್ಮ ಹುಟ್ಟೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಉತ್ತರಕಾಂಡದ ರೂರ್ಕಿಗೆ ತೆರಳಿದರು ಮತ್ತು ತಮ್ಮ ೧೫ನೇ ವಯಸ್ಸಿನಲ್ಲಿ ಬಾಕ್ಸಿಂಗ್‌ನಲ್ಲಿ ಆಸಕ್ತಿ ತೋರಿಸಿದರು.

ವೃತ್ತಿಜೀವನ

ಜಸ್‌ಲಾಲ್ ಪ್ರಧಾನ್ ರವರು ವಿದ್ಯಾಭ್ಯಾಸ ಮುಗಿಸಿದ ನಂತರ ಭಾರತೀಯ ಸೈನ್ಯಕ್ಕೆ ಸೈನಿಕರಾಗಿ ಸೇರಿಕೊಂಡರು. ಆದರೆ ಅವರು ಸೇವೆಯಲ್ಲಿರುವಾಗಲೂ ತಮ್ಮ ಬಾಕ್ಸಿಂಗನ್ನು ಮುಂದುವರೆಸಿದರು. ಇವರು ೧೯೮೨ರಲ್ಲಿ ನ್ಯೂದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಂಚಿನ ಪದಕವನ್ನು ಗೆದ್ದರು. ಹೀಗಾಗಿ ಹಿಮಾಲಯ ರಾಜ್ಯದ ಕ್ರೀಡಾ ಪ್ರಿಯರಿಗೆ ೧೯೮೩ ಮರೆಯಲಾಗದ ವರ್ಷವಾಗಿತ್ತು. ಇದು ಅವರ ಜೀವನದ ಒಂದು ಮುಖ್ಯ ಘಟನೆಯಾಗಿದೆ. ಅವರು ೧೯೮೪ ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಪುರುಷರ ಲೈಟ್ ವೆಲ್ಟರ್ ವೇಟ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು. [೧] ೧೯೮೪ ರ ಬೇಸಿಗೆ ಒಲಿಂಪಿಕ್ಸ್ನಲ್ಲಿ, ಅವರು ಥೈಲ್ಯಾಂಡ್ನ ಧವೀ ಉಂಪೊನ್ಮಹಾ ವಿರುದ್ಧ ಸೋತರು.

ಅಂತರ ರಾಷ್ಟೀಯ ಸಾಧನೆಗಳು

-೧೯೮೨ ರಲ್ಲಿ ಥೈಲ್ಯಾಂಡ್‌ನ, ಬ್ಯಾಂಕಾಕ್‌ನಲ್ಲಿ ೮ ನೇ ಕಿಂಗ್ಸ್ ಕಪ್ ನಲ್ಲಿ ಪಾಲ್ಗೊಂಡರು.

-೧೯೮೪ ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಪುರುಷರ ಲೈಟ್ ವೆಲ್ಟರ್ ವೇಟ್ ಸ್ಪರ್ಧೆಯಲ್ಲಿ ಪಾಲ್ಗೊಂಡರು.

ರಾಷ್ಟ್ರೀಯ ಸಾಧನೆಗಳು

-೧೯೭೫ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಜೂನಿಯರ್ ನ್ಯಾಷನಲ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದರು.

-೧೯೮೧ರಲ್ಲಿ ಜಮ್‌ಶೆಡ್‌ಪುರದಲ್ಲಿ ನಡೆದ ಹಿರಿಯ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನದ ಪದಕ ಪಡೆದರು.

ಸಹಕಾರ ಸಾಧನೆಗಳು

-೧೯೯೦ ಏಷ್ಯನ್ ಗೇಮ್ಸ್ ಸಮಯದಲ್ಲಿ ರಾಷ್ಟ್ರೀಯ ತರಬೇತಿ ಶಿಬಿರದ ಕೋಚ್(ತರಬೇತಿದಾರ) ಆಗಿ ನೇಮಕಗೊಂಡರು.

-ಉಜ್ಬೇಕಿಸ್ತಾನ್‌ನ ಟಸ್ಕೆಂಟ್‌ನಲ್ಲಿ ನಡೆದ ೧ನೇ ಉಜ್ಬೇಕಿಸ್ತಾನ್ ಇಂಡಿಪೆಂಡೆನ್ಸ್ ಕಪ್- ೧೯೯೭ರ ಕೋಚ್ ಆಗಿ ಸೇವೆ ಸಲ್ಲಿಸಿದರು.

-೧೯೯೫ ರಲ್ಲಿ ನವದೆಹಲಿಯಲ್ಲಿ ನಡೆದ ವೈಎಮ್‌ಸಿಎ ಅಂತರರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಇವರು ಭಾರತ ತಂಡಕ್ಕೆ ತರಬೇತುದಾರರಾಗಿ ನೇಮಕರಾದರು. ಅವರ ತಂಡ ನಾಲ್ಕು ಚಿನ್ನದ ಪದಕ ಐದು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಗೆದ್ದುಕೊಂಡಿತು.

-ಥೈಲ್ಯಾಂಡ್‌ನ ಬ್ಯಾಂಕಾಕ್ ನಲ್ಲಿ ನಡೆದ ಬಾಕ್ಸರ್ ಚಾಂಪಿಯನ್ ಷಿಪ್ ನಲ್ಲಿ ಅವರ ತಂಡ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿತು.

ಪ್ರಶಸ್ತಿಗಳು

ಭಾರತ ಸರ್ಕಾರವು ೧೯೮೩ರಲ್ಲಿ ಇವರಿಗೆ ಅರ್ಜುನ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. ಭಾರತೀಯ ಅಮೆಚೂರ್ ಬಾಕ್ಸಿಂಗ್ ಒಕ್ಕೂಟವು ೧೯೮೧ ಮತ್ತು ೧೯೮೨ ರವರೆಗೆ ಎರಡು ವರ್ಷಗಳ ಕಾಲ ಅತ್ಯುತ್ತಮ ಬಾಕ್ಸರ್ ಎಂದು ಘೋಷಿಸಿದರು. ಸಿಕ್ಕಿಂ ಸರ್ಕಾರವು ೨೦೧೨ರ ಮೇ ತಿಂಗಳಿನಲ್ಲಿ ಖೇಲ್ ಸಮ್ಮನ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ನಿವೃತ್ತ ಜೀವನ

ಪ್ರಸ್ತುತ ಅವರು ಸಿಕ್ಕಿಂ ರಾಜ್ಯದ ಬಾಕ್ಸಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನಿವೃತ್ತ ಸೇನಾ ಅಧಿಕಾರಿಗಳ ಆರ್ಮಿ ಪದವಿ ಮತ್ತು ಕ್ರೀಡಾ ಡಿಪ್ಲೋಮವನ್ನು ಸ್ವಾಧೀನಪಡಿಸಿಕೊಂಡರು.

ಉಲ್ಲೇಖಗಳು

Tags:

ಜಸ್‌ಲಾಲ್ ಪ್ರಧಾನ್ ಜನನ ಮತ್ತು ಬಾಲ್ಯ ಜೀವನಜಸ್‌ಲಾಲ್ ಪ್ರಧಾನ್ ವೃತ್ತಿಜೀವನಜಸ್‌ಲಾಲ್ ಪ್ರಧಾನ್ ಅಂತರ ರಾಷ್ಟೀಯ ಸಾಧನೆಗಳುಜಸ್‌ಲಾಲ್ ಪ್ರಧಾನ್ ರಾಷ್ಟ್ರೀಯ ಸಾಧನೆಗಳುಜಸ್‌ಲಾಲ್ ಪ್ರಧಾನ್ ಸಹಕಾರ ಸಾಧನೆಗಳುಜಸ್‌ಲಾಲ್ ಪ್ರಧಾನ್ ಪ್ರಶಸ್ತಿಗಳುಜಸ್‌ಲಾಲ್ ಪ್ರಧಾನ್ ನಿವೃತ್ತ ಜೀವನಜಸ್‌ಲಾಲ್ ಪ್ರಧಾನ್ ಉಲ್ಲೇಖಗಳುಜಸ್‌ಲಾಲ್ ಪ್ರಧಾನ್ಭಾರತೀಯ

🔥 Trending searches on Wiki ಕನ್ನಡ:

ಶಿಶುನಾಳ ಶರೀಫರುಇಂಡೋನೇಷ್ಯಾಭಾರತದ ರೂಪಾಯಿಗಾಂಧಿ- ಇರ್ವಿನ್ ಒಪ್ಪಂದರಾಜಕೀಯ ಪಕ್ಷಸೂರ್ಯವ್ಯೂಹದ ಗ್ರಹಗಳುಕರಗ (ಹಬ್ಬ)ಖ್ಯಾತ ಕರ್ನಾಟಕ ವೃತ್ತಕುವೆಂಪುಐಹೊಳೆಕಲ್ಯಾಣ್ಶಿವಪ್ಪ ನಾಯಕಬಂಡಾಯ ಸಾಹಿತ್ಯಏಕರೂಪ ನಾಗರಿಕ ನೀತಿಸಂಹಿತೆರೋಸ್‌ಮರಿಶಬ್ದಕರ್ನಾಟಕದ ಕಲೆ ಮತ್ತು ಸಂಸ್ಕೃತಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಶಿವರಾಜ್‍ಕುಮಾರ್ (ನಟ)ಕೃಷಿರಾಷ್ಟ್ರೀಯ ಶಿಕ್ಷಣ ನೀತಿಮತದಾನ ಯಂತ್ರಬಯಲಾಟಮಲ್ಟಿಮೀಡಿಯಾಜ್ಞಾನಪೀಠ ಪ್ರಶಸ್ತಿಹಿಂದೂ ಧರ್ಮಹೊಂಗೆ ಮರವ್ಯವಸಾಯಕನ್ನಡತಿ (ಧಾರಾವಾಹಿ)ಮಂಟೇಸ್ವಾಮಿಉಪೇಂದ್ರ (ಚಲನಚಿತ್ರ)ಕೊಡವರುಆದಿ ಶಂಕರತಾಜ್ ಮಹಲ್ಅಂತರಜಾಲಟೊಮೇಟೊಮಧ್ವಾಚಾರ್ಯಚದುರಂಗದ ನಿಯಮಗಳುವ್ಯಾಪಾರ ಸಂಸ್ಥೆಅಂತರ್ಜಲಖಗೋಳಶಾಸ್ತ್ರಸಾಲುಮರದ ತಿಮ್ಮಕ್ಕಮುಪ್ಪಿನ ಷಡಕ್ಷರಿರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಜಿ.ಎಸ್.ಶಿವರುದ್ರಪ್ಪಕನ್ನಡ ಸಾಹಿತ್ಯ ಪ್ರಕಾರಗಳುಪೂನಾ ಒಪ್ಪಂದದೇವಸ್ಥಾನಸುದೀಪ್ಸ್ಯಾಮ್ ಪಿತ್ರೋಡಾ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಜಿ.ಪಿ.ರಾಜರತ್ನಂಗಂಡಬೇರುಂಡತಾಳಗುಂದ ಶಾಸನಉಪನಯನದಿಕ್ಕುಎಸ್.ಜಿ.ಸಿದ್ದರಾಮಯ್ಯಮೈಸೂರು ಮಲ್ಲಿಗೆಅಶ್ವತ್ಥಮರಕನ್ನಡ ಕಾವ್ಯಕರ್ನಾಟಕ ಲೋಕಸಭಾ ಚುನಾವಣೆ, 2019ಶಾಂತಲಾ ದೇವಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಇನ್ಸ್ಟಾಗ್ರಾಮ್ರಾಷ್ಟ್ರೀಯತೆಈಸೂರುಸಂಯುಕ್ತ ರಾಷ್ಟ್ರ ಸಂಸ್ಥೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಸಂಯುಕ್ತ ಕರ್ನಾಟಕನುಗ್ಗೆಕಾಯಿಋಗ್ವೇದನ್ಯೂಟನ್‍ನ ಚಲನೆಯ ನಿಯಮಗಳುಭೋವಿಗಾಳಿ/ವಾಯುಎಸ್.ಎಲ್. ಭೈರಪ್ಪಭಾರತದ ಸ್ವಾತಂತ್ರ್ಯ ದಿನಾಚರಣೆ🡆 More