ಕ್ಲೌನ್ ಮೀನು: ಮೀನುಗಳ ಉಪಕುಟುಂಬ

Amphiprion Bloch & Schneider, 1801 Premnas Cuvier, 1816

ಅನಿಮೋನ್ ಮೀನು (ಕ್ಲೌನ್ ಮೀನು)
ಕ್ಲೌನ್ ಮೀನು: ವಿಂಗಡನೆ  ಮತ್ತು  ಆವಾಸಗಳು, ಪರಿಶತ್ತು, ಸಂತಾನೊತ್ಪತ್ತಿ
Ocellaris clownfish, Amphiprion ocellaris
Scientific classification
Genera

ಕ್ಲೌನ್ ಮೀನು (ಆಂಫಿಪ್ರಿಯನ್ಆಸಿಲೇರಿಸ್) ಅಥವಾ ಅನೆಮೋನ್ ಮೀನುಗಳು ಸಮುದ್ರದ ಮೀನುಗಳಲ್ಲೊ೦ದು ವಿಧ. ಕ್ಲೌನ್ ಮೀನಿನ 30 ಪ್ರಭೇದಗಳು ಪರಿಸರದಲ್ಲಿ ಗುರುತಿಸಲ್ಪಟ್ಟಿವೆ. ಇವುಗಳು ಉಭಯಾವಲಂಭೀ ಜೀವಿಗಳಾಗಿವೆ. ಕ್ಲೌನ್ ಮೀನುಗಳು ಸಾಮಾನ್ಯವಾಗಿ ಹಳದಿ , ಕಿತ್ತಳೆ, ಕೆಂಪು ಅಥವಾ ಕಪ್ಪುಬಣ್ಣ ಮತ್ತು ಹಲವು ಬಿಳಿ ಪಟ್ಟಿಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ಅತ್ಯಂತ ಉದ್ದದ ವಿಧದವು 15 – 16 cm ( 5.9 – 6.3 in ) ಆಗಿದ್ದು, ಅತ್ಯ೦ತ ಚಿಕ್ಕವು 7.8 ( 2.8 – 3.1 in ) ಉದ್ದ ಬೆಳೆಯಬಲ್ಲವು.

ವಿಂಗಡನೆ ಮತ್ತು ಆವಾಸಗಳು

ಕ್ಲೌನ್ ಮೀನುಗಳು ಬೆಚ್ಚನೆಯ ನೀರಿಗೆ ಹೊಂದಿಕೊಂಡಿವೆ ಹಾಗಾಗಿ ಇವುಗಳು ಹಿಂದೂಮಹಾಸಾಗರ, ಫೆಸಿಫಿಕ್ ಮಹಾಸಾಗರ, ದೊಡ್ಡ ಹವಳದಬಂಡೆ ಮತ್ತು ಕೆಂಪು ಸಾಗರಗಳಲ್ಲಿ ಕಂಡುಬರುತ್ತವೆ. ಕ್ಲೌನ್ ಮೀನುಗಳು ಆಳವಿಲ್ಲದ ಸಮುದ್ರದ ತಳಗಳಲ್ಲಿ ಹವಳದ ಬಂಡೆಗಳ ನಡುವೆ ಜೀವಿಸುತ್ತವೆ. ಅಂಟ್ಲಾಟಿಕ್ ಸಾಗರಗಳಲ್ಲಿ ಯಾವುದೇ ಕ್ಲೌನ್ ಮೀನುಗಳು ಕಂಡುಬಂದಿಲ್ಲ.

ಪರಿಶತ್ತು

ಕ್ಲೌನ್ ಮೀನುಗಳು ಮಿಶ್ರಹಾರಿ. ಇವುಗಳು ಸಮುದ್ರದ ಅನಿಮೊನ್ -ಗಳೊಂದಿಗೆ ಉಭಯಾವಲಂಬಿ ಜೀವನ ನಡೆಸುತ್ತವೆ. ಇದರ ಮಲ ಅನಿಮೊನ್ ಗೆ ಗೊಬ್ಬರದಂತೆ ಪೋಷಕಾ೦ಶವನ್ನು ನೀಡುತ್ತದೆ ಮತ್ತು ಅನಿಮೊನ್-ಗಳನ್ನು ಮತ್ತು ಅನಿಮೊನ್ ನ ಮಲವನ್ನು ಕ್ಲೌನ್ ಮೀನುಗಳು ಆಹಾರವಾಗಿ ಸೇವಿಸುತ್ತವೆ. ಕ್ಲೌನ್ ಮೀನುಗಳ ಪ್ರಾರ೦ಭದಲ್ಲಿ ಸೀಗ್ಡಿಯನ್ನು ಸೇವಿಸುತ್ತವೆ .

ಸಂತಾನೊತ್ಪತ್ತಿ

ಕ್ಲೌನ್ ಮೀನುಗಳ ಗುಂಪಿನಲ್ಲಿನ-ಮೀನುಗಳು ಒಂದು ನಿರ್ದಿಷ್ಟ ಕ್ರಮ-ಶ್ರೇಣೀಕರಣಕ್ಕೆ ಒಳಪಟ್ತಿರುತ್ತವೆ. .ಶ್ರೇಣಿಯಲ್ಲಿ ಅತ್ಯಂತ ಪ್ರಮುಖವಾದದ್ದು ಹೆಣ್ಣು ಕ್ಲೌನ್ ಮೀನು ಅದರನಂತರದ ಸ್ಥಾನದಲ್ಲಿ ಸಂತಾನೋತ್ಪತ್ತಿಯಲ್ಲಿ ಭಾಗವಹಿಸುವ ಗಂಡು ಪ್ರಮುಖ ವಾಗಿರುತ್ತದೆ . ಗುಂಪಿನಲ್ಲಿ ಪ್ರಮುಖ ಗಂಡು ಮತ್ತು ಪ್ರಮುಖ ಹೆಣ್ಣು ಮಾತ್ರ ಸಂತಾನೋತ್ಪತ್ತಿಯಲ್ಲಿ ತೊಡಗಲು ಸಾಧ್ಯ. ಅದು ಬಾಹ್ಯ ಫಲೀಕರಣದ ಮೂಲಕ ನಡೆಯುತ್ತದೆ. ಕ್ಲೌನ್ ಮೀಗಳು ಲಿಂಗ ಬದಲಾವಣೆಗೊಳ್ಳಬಲ್ಲವು. ಹುಟ್ಟಿನಲ್ಲಿ ಎಲ್ಲ ಕ್ಲೌನ್ ಮೀನುಗಳು ಗಂಡುಗಳಾಗಿ ಹುಟ್ಟುತ್ತವೆ. ಒಂದು ಗುಂಪಿನಲ್ಲಿನ ಹೆಣ್ಣು ಕ್ಲೌನ್ ಮೀನು ಸತ್ತುಹೋದರೆ ಅಥವಾ ಗುಂಪಿನಿಂದ ಕಳೆದುಹೋದರೆ ಅತ್ಯಂತ ದೊಡ್ಡ ಗಂಡು ಕ್ಲೌನ್ ಮೀನು ಹೆಣ್ಣಾಗಿ ಲಿಂಗ ಪರಿವರ್ತನೆಯಾಗುತ್ತದೆ . ಉಳಿದ ಗಂಡುಗಳ ಸ್ಥಾನವು ಶ್ರೇಣಿಯಲ್ಲಿ ಒಂದುಮಟ್ಟ ಹೆಚ್ಚುತ್ತದೆ . ಕ್ಲೌನ್ ಮೀನುಗಳು ತಮ್ಮ ಮೊಟ್ಟೆಗಳನ್ನು ಸಮತಟ್ಟದ ಮತ್ತು ತಮ್ಮ ವಾಸಸ್ಥಾನದ ಸಮೀಪದಲ್ಲಿಡುತ್ತವೆ . ಹುಣ್ಣಿಮೆಯ ದಿನದಲ್ಲಿ ಕ್ಲೌನ್ ಮೀನುಗಳು ಸಂತಾನೊತ್ಪತ್ತಿ ನಡೆಸುತ್ತವೆ . ಅವುಗಳ ಪ್ರಭೇದಗಳ ಅನುಸಾರವಾಗಿ ಅವುಗಳು 100 ರಿಂದ 1000 ಮೊಟ್ಟೆಗಳನ್ನಿಡಬಹುದು . ಗಂಡು ಕ್ಲೌನ್ ಮೀನು ಮೊಟ್ಟೆಗಳನ್ನು ರಕ್ಷಿಸುತ್ತವ ಹೊಣೆ ಹೊತ್ತಿರುತ್ತವೆ. 6 – 10 ದಿನಗಳಲ್ಲಿ ಮೊಟ್ಟೆ ಗಳು ಮುಸ್ಸಂಜೆಯ ನಂತರದ 2 ಗಂಟೆಗಳಲ್ಲಿ, ಕತ್ತಲಲ್ಲಿ ಒಡೆಯತ್ತವೆ.

ರೂಪವಿಜ್ಞಾನದಲೀನ ವೈವಿದ್ಯತೆ

Notes

References

Tags:

ಕ್ಲೌನ್ ಮೀನು ವಿಂಗಡನೆ ಮತ್ತು ಆವಾಸಗಳುಕ್ಲೌನ್ ಮೀನು ಪರಿಶತ್ತುಕ್ಲೌನ್ ಮೀನು ಸಂತಾನೊತ್ಪತ್ತಿಕ್ಲೌನ್ ಮೀನು ರೂಪವಿಜ್ಞಾನದಲೀನ ವೈವಿದ್ಯತೆಕ್ಲೌನ್ ಮೀನು

🔥 Trending searches on Wiki ಕನ್ನಡ:

ಕನಕದಾಸರುಗಂಡಬೇರುಂಡಪ್ರಬಂಧ ರಚನೆಚೋಮನ ದುಡಿಯೋನಿಅರ್ಜುನಆದಿವಾಸಿಗಳುಸಂವಹನಫೇಸ್‌ಬುಕ್‌ಸಿದ್ದರಾಮಯ್ಯದೇವರ/ಜೇಡರ ದಾಸಿಮಯ್ಯಚಂದ್ರಗುಪ್ತ ಮೌರ್ಯಕನ್ನಡ ರಾಜ್ಯೋತ್ಸವಏಕರೂಪ ನಾಗರಿಕ ನೀತಿಸಂಹಿತೆವಿನಾಯಕ ಕೃಷ್ಣ ಗೋಕಾಕಕಂಸಾಳೆಇಂಡೋನೇಷ್ಯಾವಿಮರ್ಶೆಲಕ್ಷ್ಮೀಶರೋಸ್‌ಮರಿಧಾರವಾಡಟಿಪ್ಪು ಸುಲ್ತಾನ್ಜನ್ನಭಾರತೀಯ ಮೂಲಭೂತ ಹಕ್ಕುಗಳುಶಕ್ತಿಭಾರತಹಂಪೆಮಾಸಮಲಬದ್ಧತೆಅಕ್ಕಮಹಾದೇವಿಐಹೊಳೆಕಾವ್ಯಮೀಮಾಂಸೆಕನ್ನಡ ಸಾಹಿತ್ಯ ಸಮ್ಮೇಳನಕರ್ನಾಟಕ ವಿಧಾನ ಪರಿಷತ್ಭಾರತದ ಸಂವಿಧಾನಕುಮಾರವ್ಯಾಸಎಂ. ಕೆ. ಇಂದಿರವಿಜಯ್ ಮಲ್ಯಮುಖ್ಯ ಪುಟಎ.ಎನ್.ಮೂರ್ತಿರಾವ್ಕೃತಕ ಬುದ್ಧಿಮತ್ತೆಕನ್ನಡಪ್ರಭದಾಳಿಂಬೆಜೋಗಿ (ಚಲನಚಿತ್ರ)ಶಬ್ದ ಮಾಲಿನ್ಯ೧೬೦೮ಕನ್ನಡ ಅಭಿವೃದ್ಧಿ ಪ್ರಾಧಿಕಾರಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಚೆನ್ನಕೇಶವ ದೇವಾಲಯ, ಬೇಲೂರುಚುನಾವಣೆಬಾದಾಮಿಒನಕೆ ಓಬವ್ವಕನ್ನಡ ಅಕ್ಷರಮಾಲೆಮತದಾನ ಯಂತ್ರಚಾಣಕ್ಯಮಾಹಿತಿ ತಂತ್ರಜ್ಞಾನವಿಧಾನಸೌಧಅಂತರ್ಜಲಮಲೇರಿಯಾಸೂಫಿಪಂಥನೀರಿನ ಸಂರಕ್ಷಣೆಶುಕ್ರರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಯೂಟ್ಯೂಬ್‌ರಕ್ತದೊತ್ತಡಕರ್ಣಪುನೀತ್ ರಾಜ್‍ಕುಮಾರ್ಅ.ನ.ಕೃಷ್ಣರಾಯನವಿಲುಜಿ.ಎಸ್.ಶಿವರುದ್ರಪ್ಪಆಂಧ್ರ ಪ್ರದೇಶಅಶೋಕನ ಶಾಸನಗಳುತಾಳೀಕೋಟೆಯ ಯುದ್ಧರಾಷ್ಟ್ರೀಯತೆ🡆 More