ಎಸ್. ಕೆ. ಭಗವಾನ್‌: ಭಾರತೀಯ ಚಲನಚಿತ್ರ ನಿರ್ದೇಶಕ

ಎಸ್..ಕೆ.

ಭಗವಾನ್ (ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್) ಕನ್ನಡ ಚಿತ್ರರಂಗದ ಒಬ್ಬ ಹಿರಿಯ ನಿರ್ದೇಶಕರು ಹಾಗೂ ನಿರ್ಮಾಪಕರು. ಮತ್ತೊಬ್ಬ ಹಿರಿಯ ನಿರ್ದೇಶಕ ದೊರೈರಾಜ್ ಅವರೊಡನೆ ಅವರ ಜೋಡಿ ದೊರೈ-ಭಗವಾನ್ ಎಂದೇ ಪ್ರಸಿದ್ಧ. ಇವರಿಬ್ಬರೂ ಸೇರಿ ೫೫ ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸದಭಿರುಚಿಯ ಚಿತ್ರಗಳನ್ನು ಮಾಡಿರುವ ಅವರು ೨೪ ಕಾದಂಬರಿಗಳನ್ನು ಸಿನೆಮಾಗೆ ಅಳವಡಿಸಿದ್ದಾರೆ. ಪ್ರಸ್ತುತ ಅವರು ’ಆದರ್ಶ ಸಿನೆಮಾ ಇನ್ಸ್ಟಿಟ್ಯೂಟ್‍ನ’ ಪ್ರಾಂಶುಪಾಲರಾಗಿದ್ದಾರೆ. ಸಿನೆಮಾ ನಿರ್ದೇಶನದಿಂದ ನಿವೃತ್ತಿ ಹೊಂದಿದ್ದಾರೆ.

ಎಸ್. ಕೆ. ಭಗವಾನ್
Born
ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್

(1933-02-20) ೨೦ ಫೆಬ್ರವರಿ ೧೯೩೩ (ವಯಸ್ಸು ೯೧)
ಮೈಸೂರು, ಮೈಸೂರು ರಾಜ್ಯ, ಬ್ರಿಟಿಷ್ ಭಾರತ.
Diedಫೆಬ್ರವರಿ ೨೦, ೨೦೨೩
ಬೆಂಗಳೂರು
Occupation(s)ಚಿತ್ರ ನಿರ್ದೇಶಕ, ನಿರ್ಮಾಪಕ, ನಟ
Years active1965–1994

ಜೀವನ

ಎಸ್.ಕೆ. ಭಗವಾನ್ ಅವರು ೧೯೩೩ರ ಫೆಬ್ರುವರಿ ೨೦ ರಂದು ತಮಿಳು ಬ್ರಾಹ್ಮಣ ಅಯ್ಯರ್ ಕುಟುಂಬದಲ್ಲಿ ಜನಿಸಿದರು. ಬೆಂಗಳೂರು ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಯುವಕರಾಗಿದ್ದಾಗ ’ಹಿರಣ್ಣಯ್ಯ ಮಿತ್ರ ಮಂಡಳಿ’ಯಲ್ಲಿ ನಾಟಕಗಳನ್ನು ಮಾಡುತ್ತಿದ್ದರು. ೧೯೫೬ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕರಾಗಿ ಸಿನೆಮಾ ಜೀವನ ಆರಂಭಿಸಿದರು. ೨೦ನೇ ಫೆಬ್ರವರಿ ೨೦೨೩ ರಂದು ಮುಂಜಾನೆ ೬ಗಂಟೆ ೧೦ ನಿಮಿಷಕ್ಕೆ ಅವರ ೯೦ನೇ ವರ್ಷದಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಮರಣ ಹೊಂದಿದರು. ಕಾಕತಾಳೀಯವೆಂಬಂತೆ ಭಗವಾನರ ಜನ್ಮದಿನ (ಫೆಬ್ರವರಿ ೨೦, ೧೯೩೩), ಇಹಲೋಕ ತ್ಯಜಿಸಿದ ದಿನ (ಫೆಬ್ರವರಿ ೨೦. ೨೦೨೩) ಮತ್ತು ಅವರ ಜೊತೆಗಾರ ದೊರೈರಾಜ್ ಅವರು ಇಹಲೋಕ ತ್ಯಜಿಸಿದ (ಫೆಬ್ರವರಿ ೨೦, ೨೦೦೦) ದಿನಾಂಕ ಮತ್ತು ತಿಂಗಳು ಒಂದೇ ಆಗಿವೆ.

ಸಿನಿಮಾ ರಂಗದಲ್ಲಿ

೧೯೬೬ರಲ್ಲಿ ಎಂ.ಸಿ. ನರಸಿಂಹಮೂರ್ತಿಯವರೊಡಗೂಡಿ ಸಂಧ್ಯಾರಾಗ ಸಿನೆಮಾ ನಿರ್ದೇಶಿಸಿದರು. ನಂತರ ದೊರೈ-ಭಗವಾನ್ ಜೋಡಿಯು ರಾಜಕುಮಾರ್ ನಾಯಕನಟನಾಗಿರುವ ’ಜೇಡರ ಬಲೆ’ ಚಿತ್ರವನ್ನು ನಿರ್ದೆಶಿಸಿತು. ಇದು ಕನ್ನಡದಲ್ಲಿ ಜೇಮ್ಸ್ ಬಾಂಡ್‌ ಮಾದರಿಯ ಮೊದಲ ಚಿತ್ರವಾಗಿತ್ತು. ಮುಂದಿನ ಅವರ ಎಲ್ಲಾ ಚಿತ್ರಗಳನ್ನು ಈ ನಿರ್ದೇಶಕದ್ವಯರು ಜೋಡಿಯಾಗೇ ನಿರ್ದೇಶಿಸಿದರು. ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ವಸಂತ ಗೀತ’, ‘ಆಪರೇಷನ್ ಡೈಮಂಡ್ ರಾಕೆಟ್’, ‘ಹೊಸಬೆಳಕು’, ‘ಯಾರಿವನು’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿದರು. ಇವರ ೩೨ ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ಅನಂತನಾಗ್ ಮತ್ತು ಲಕ್ಷ್ಮಿ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್.ಕೆ ಭಗವಾನ್ ಸಿನಿಮಾ ರಂಗದಲ್ಲಿ 65 ವರ್ಷದ ಸುದೀರ್ಘ ಅನುಭವ ಹೊಂದಿದ್ದಾರೆ.

  • ದೊರೈರಾಜರ ಮರಣದ ನಂತರ ಇವರು ನಿರ್ದೇಶನದಿಂದ ನಿವೃತ್ತಿ ಹೊಂದಿದರು. ೧೯೯೩ರ ’ಮಾಂಗಲ್ಯ ಬಂಧನ’ ದೊರೈ-ಭಗವಾನ್ ಜೋಡಿ ನಿರ್ದೇಶನದ ಕೊನೆಯ ಚಿತ್ರ.
  • ಭಗವಾನರು ದೊರೈ ಅವರೊಂದಿಗೆ ಜೊತೆಯಾಗಿ ಸುಮಾರು ೫೦ಕ್ಕೂ ಹೆಚ್ಚಿನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
  • ದೊರೈ-ಭಗವಾನ್ ಜೋಡಿಯಾಗಿ ವಾಣಿ, ಭಾರತೀಸುತ, ತ.ರಾ.ಸು, ಚಿತ್ರಲೇಖ, ಟಿ.ಕೆ.ರಾಮರಾವ್, ಎನ್.ಪಂಕಜಾ ಮತ್ತು ವಿಶಾಲಾಕ್ಷಿ ದಕ್ಷಿಣಮೂರ್ತಿ ಅವರ ಕಾದಂಬರಿಗಳು ಸೇರಿದಂತೆ ೨೪ ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶನ ಮಾಡಿದೆ.
  • ಆಡುವ ಗೊಂಬೆ (೨೦೧೮-೧೯) ಎಸ್. ಕೆ. ಭಗವಾನರು ನಿರ್ದೇಶಿಸಿದ ಕೊನೆಯ ಚಿತ್ರ. ೮೬ ನೇ ವಯಸ್ಸಿನಲ್ಲಿ ಚಿತ್ರ ನಿರ್ದೇಶಿಸುವ ಮೂಲಕ ಇವರು ಭಾರತದ ಅತ್ಯಂತ ಹಿರಿಯ ನಿರ್ದೇಶಕರೆನಿಸಿದ್ದಾರೆ.

ಸಿನೆಮಾ ಪಟ್ಟಿ

(ಇದು ಭಾಗಶಃ ಪಟ್ಟಿ. ಇದನ್ನು ವಿಸ್ತರಿಸಬಹುದು)

ವರ್ಷ ಸಿನೆಮಾ ನಟ-ನಟಿಯರು ಟಿಪ್ಪಣಿ
೧೯೫೬ ಭಾಗ್ಯೋದಯ ಕಣಗಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕ
೧೯೬೬ ಸಂಧ್ಯಾರಾಗ ರಾಜಕುಮಾರ್ ಎಂ.ಸಿ.ನರಸಿಂಹಮೂರ್ತಿ ಜೊತೆಗೂಡಿ ನಿರ್ದೇಶನ. ಅನಕೃ ಅವರ ಕಾದಂಬರಿ.
೧೯೬೮ ಜೇಡರ ಬಲೆ ರಾಜಕುಮಾರ್, ಉದಯಕುಮಾರ್ ದೊರೈರಾಜ್ ಅವರೊಡನೆ ಮೊದಲ ಸಿನೆಮಾ ಹಾಗೂ ಕನ್ನಡದಲ್ಲಿ ಜೇಮ್ಸ್ ಬಾಂಡ್ ಶೈಲಿಯ ಮೊದಲ ಸಿನೆಮಾ
೧೯೬೮ ಗೋವಾದಲ್ಲಿ ಸಿಐಡಿ ೯೯೯ ರಾಜಕುಮಾರ್, ನರಸಿಂಹರಾಜು, ಲಕ್ಷ್ಮಿ
೧೯೬೯ ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿಐಡಿ ೯೯೯ ರಾಜಕುಮಾರ್, ರೇಖಾ, ಕೆ. ಎಸ್. ಅಶ್ವತ್ಥ್, ನರಸಿಂಹರಾಜು, ಸುರೇಖಾ
೧೯೭೧ ಕಸ್ತೂರಿ ನಿವಾಸ ರಾಜಕುಮಾರ್, ಆರತಿ, ಜಯಂತಿ, ರಾಜಾ ಶಂಕರ್
೧೯೭೧ ಪ್ರತಿಧ್ವನಿ ರಾಜಕುಮಾರ್, ರಾಜೇಶ್, ಆರತಿ
೧೯೭೪ ಎರಡು ಕನಸು ರಾಜಕುಮಾರ್, ಕಲ್ಪನ, ಮಂಜುಳ ವಾಣಿ ಅವರ ಕಾದಂಬರಿ
೧೯೭೬ ಬಯಲುದಾರಿ ಅನಂತನಾಗ್, ಕಲ್ಪನ ಭಾರತೀಸುತರ ಕಾದಂಬರಿ
೧೯೭೬ ಮುಗಿಯದ ಕಥೆ ರಾಜೇಶ್, ಸುಮಿತ್ರಾ, ಪಂಡರಿಬಾಯಿ ದೊರೈ ನಿರ್ದೇಶನ
೧೯೭೭ ಗಿರಿಕನ್ಯೆ ರಾಜಕುಮಾರ್, ಜಯಮಾಲಾ ಭಾರತೀಸುತರ ಕಾದಂಬರಿ
೧೯೭೮ ಆಪರೇಷನ್ ಡೈಮಂಡ್ ರಾಕೆಟ್ ರಾಜಕುಮಾರ್, ಪದ್ಮಪ್ರಿಯಾ
೧೯೭೯ ಚಂದನದ ಗೊಂಬೆ ಅನಂತನಾಗ್, ಲಕ್ಷ್ಮಿ, ಲೋಕೇಶ್ ತ.ರಾ.ಸು ಅವರ ಕಾದಂಬರಿ
೧೯೭೯ ನಾನೊಬ್ಬ ಕಳ್ಳ ರಾಜಕುಮಾರ್, ಕಾಂಚನ, ಲಕ್ಷ್ಮಿ
೧೯೮೦ ವಸಂತ ಗೀತ ರಾಜಕುಮಾರ್, ಗಾಯತ್ರಿ ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಾಣ
೧೯೮೧ ಗಾಳಿ ಮಾತು ಲಕ್ಷ್ಮಿ, ಜೈಜಗದೀಶ್, ಕೆ. ಎಸ್. ಅಶ್ವತ್ಥ್ ತ.ರಾ.ಸು ಅವರ ಕಾದಂಬರಿ
೧೯೮೧ ಮುನಿಯನ ಮಾದರಿ ಶಂಕರನಾಗ್, ಮೋಹನ್, ಜಯಮಾಲಾ ಅಶ್ವತ್ಥ ಅವರ ಕಾದಂಬರಿ
೧೯೮೨ ಹೊಸ ಬೆಳಕು ರಾಜಕುಮಾರ್, ಸರಿತಾ, ಕೆ. ಎಸ್. ಅಶ್ವತ್ಥ್ ವಾಣಿ ಆವರ ಕಾದಂಬರಿ
೧೯೮೩ ಬೆಂಕಿಯ ಬಲೆ ಅನಂತನಾಗ್, ಲಕ್ಷ್ಮಿ, ದಿನೇಶ್ ತ.ರಾ.ಸು ಅವರ ಕಾದಂಬರಿ
೧೯೮೪ ಸಮಯದ ಗೊಂಬೆ ರಾಜಕುಮಾರ್, ರೂಪಾದೇವಿ, ಕಾಂಚನ ಚಿತ್ರಲೇಖ ಅವರ ಕಾದಂಬರಿ
೧೯೮೪ ಯಾರಿವನು ರಾಜಕುಮಾರ್, ಬಿ. ಸರೋಜಾದೇವಿ, ಶ್ರೀನಾಥ್
೧೯೮೫ ಬಿಡುಗಡೆಯ ಬೇಡಿ ಅನಂತನಾಗ್, ಲಕ್ಷ್ಮಿ, ಕೆ. ಎಸ್. ಅಶ್ವತ್ಥ್ ತ.ರಾ.ಸು ಅವರ ಕಾದಂಬರಿ
೧೯೮೫ ಸೇಡಿನ ಹಕ್ಕಿ ಅನಂತನಾಗ್, ಲಕ್ಷ್ಮಿ, ಪ್ರಭಾಕರ್ ಟಿ. ಕೆ. ರಾಮರಾವ್ ಅವರ ಕಾದಂಬರಿ
೧೯೮೬ ಹೆಣ್ಣಿನ ಕೂಗು ಸರಿತಾ, ಶ್ರೀಧರ್
೧೯೮೭ ವಿಜಯೋತ್ಸವ ಕುಮಾರ್ ಬಂಗಾರಪ್ಪ
೧೯೭೧ ಗಗನ ಅನಂತನಾಗ್, ಕುಶ್ಬೂ, ಭವ್ಯ, ಲೀಲಾವತಿ ಎನ್. ಪಂಕಜಾ ಅವರ ಕಾದಂಬರಿ
೧೯೯೧ ನೀನು ನಕ್ಕರೆ ಹಾಲು ಸಕ್ಕರೆ ವಿಷ್ಣುವರ್ಧನ್, ರೂಪಿಣಿ, ರಜನಿ, ವಿನಯಾ ಪ್ರಸಾದ್, ಚಂದ್ರಿಕಾ ಅಂಜಲಿ ಸುಧಾಕರ್, ಶ್ರೀನಾಥ, ಉಮೇಶ್
೧೯೯೨ ಜೀವನ ಚೈತ್ರ ರಾಜಕುಮಾರ್, ಮಾಧವಿ, ಸುಧಾರಾಣಿ, ತೂಗುದೀಪ ಶ್ರೀನಿವಾಸ್ ವಿಶಾಲಾಕ್ಷಿ ದಕ್ಷಿಣಮೂರ್ತಿಯವರ ’ವ್ಯಾಪ್ತಿ-ಪ್ರಾಪ್ತಿ’ ಕಾದಂಬರಿ
೧೯೯೩ ಮಾಂಗಲ್ಯ ಬಂಧನ ಅನಂತನಾಗ್, ಮಾಲಾಶ್ರೀ, ಮೂನ್ ಮೂನ್ ಸೇನ್, ಕೆ. ಎಸ್. ಅಶ್ವತ್ಥ್ ಎಸ್. ಕೆ. ಭಗವಾನ್ ನಿರ್ದೇಶನ
೧೯೯೪ ಒಡಹುಟ್ಟಿದವರು ರಾಜಕುಮಾರ್, ಅಂಬರೀಶ್, ಉಮಾಶ್ರೀ, ವಜ್ರಮುನಿ
೧೯೯೫ ಬಾಳೊಂದು ಚದುರಂಗ ಸಾಯಿಕುಮಾರ್, ಸುಧಾರಾಣಿ, ಎಸ್. ಪಿ. ಬಾಲಸುಬ್ರಹ್ಮಣ್ಯಂ
೨೦೧೯ ಆಡುವ ಗೊಂಬೆ ಸಂಚಾರಿ ವಿಜಯ್, ಅನಂತನಾಗ್, ರಿಶಿತಾ ಮಲ್ನಾಡ್, ಸುಧಾ ಬೆಳವಾಡಿ ಎಸ್. ಕೆ. ಭಗವಾನ್ ನಿರ್ದೇಶನ (ಕೊನೆಯ ಚಿತ್ರ)

ಪ್ರಶಸ್ತಿಗಳು

  • ೨೦೧೭ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಅಕಾಡಮಿ ಪ್ರಶಸ್ತಿ
  • ಕರ್ನಾಟಕ ಸರ್ಕಾರದಿಂದ ೧೯೯೫-೯೬ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ.
  • ೨೦೧೦ರಲ್ಲಿ ರಾಜಕುಮಾರ್ ಸೌಹಾರ್ದ ಪ್ರಶಸ್ತಿ

ಉಲ್ಲೇಖಗಳು

ಹೊರಸಂಪರ್ಕಕೊಂಡಿಗಳು

Tags:

ಎಸ್. ಕೆ. ಭಗವಾನ್‌ ಜೀವನಎಸ್. ಕೆ. ಭಗವಾನ್‌ ಸಿನಿಮಾ ರಂಗದಲ್ಲಿಎಸ್. ಕೆ. ಭಗವಾನ್‌ ಸಿನೆಮಾ ಪಟ್ಟಿಎಸ್. ಕೆ. ಭಗವಾನ್‌ ಪ್ರಶಸ್ತಿಗಳುಎಸ್. ಕೆ. ಭಗವಾನ್‌ ಉಲ್ಲೇಖಗಳುಎಸ್. ಕೆ. ಭಗವಾನ್‌ ಹೊರಸಂಪರ್ಕಕೊಂಡಿಗಳುಎಸ್. ಕೆ. ಭಗವಾನ್‌ದೊರೈ-ಭಗವಾನ್

🔥 Trending searches on Wiki ಕನ್ನಡ:

ಕರ್ನಾಟಕದ ಹಬ್ಬಗಳುಸಾರ್ವಜನಿಕ ಹಣಕಾಸು೧೮೬೨ಕಪ್ಪೆ ಅರಭಟ್ಟಅಡಿಕೆಅಭಿಮನ್ಯುಪಶ್ಚಿಮ ಘಟ್ಟಗಳುಮುದ್ದಣಕೆ. ಅಣ್ಣಾಮಲೈಕರ್ನಾಟಕ ವಿಧಾನ ಪರಿಷತ್ವಿರಾಟ್ ಕೊಹ್ಲಿಮೈಗ್ರೇನ್‌ (ಅರೆತಲೆ ನೋವು)ಗುಪ್ತ ಸಾಮ್ರಾಜ್ಯಜಲ ಮಾಲಿನ್ಯದ್ರಾವಿಡ ಭಾಷೆಗಳುಪ್ರಜ್ವಲ್ ರೇವಣ್ಣಕರ್ನಾಟಕ ಸಂಗೀತತಂತ್ರಜ್ಞಾನದ ಉಪಯೋಗಗಳುದಸರಾವಾಲ್ಮೀಕಿಕಿತ್ತೂರು ಚೆನ್ನಮ್ಮಶುಕ್ರದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಕನಕದಾಸರುಮಾರ್ಕ್ಸ್‌ವಾದನಾಥೂರಾಮ್ ಗೋಡ್ಸೆಚೆನ್ನಕೇಶವ ದೇವಾಲಯ, ಬೇಲೂರುರೇಡಿಯೋರಾಸಾಯನಿಕ ಗೊಬ್ಬರರನ್ನಕರ್ನಾಟಕದಲ್ಲಿ ಪಂಚಾಯತ್ ರಾಜ್ಚನ್ನವೀರ ಕಣವಿದೇಶಚಕ್ರವ್ಯೂಹಮಲ್ಲಿಕಾರ್ಜುನ್ ಖರ್ಗೆಸಂಕಲ್ಪಸಿ ಎನ್ ಮಂಜುನಾಥ್ವೈದೇಹಿತೆಲುಗುಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ಆಟದ್ರೌಪದಿ ಮುರ್ಮುಬಾದಾಮಿ ಗುಹಾಲಯಗಳುಮಾನವ ಸಂಪನ್ಮೂಲ ನಿರ್ವಹಣೆಬನವಾಸಿತಾಜ್ ಮಹಲ್ಮತದಾನಕೂಡಲ ಸಂಗಮ೧೬೦೮ಆಯುರ್ವೇದಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಹೈದರಾಬಾದ್‌, ತೆಲಂಗಾಣಚಿಕ್ಕೋಡಿಬಂಡಾಯ ಸಾಹಿತ್ಯಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಕನ್ನಡಪ್ರಭಕೋಪಪ್ರಜಾಪ್ರಭುತ್ವಅರಿಸ್ಟಾಟಲ್‌ಚೋಳ ವಂಶಇನ್ಸ್ಟಾಗ್ರಾಮ್ಮಲೈ ಮಹದೇಶ್ವರ ಬೆಟ್ಟಪೆಟ್ರೋಮ್ಯಾಕ್ಸ್ (ಚಲನಚಿತ್ರ)ಕೊಡಗಿನ ಗೌರಮ್ಮರಾಮಕೃಷ್ಣ ಪರಮಹಂಸಜಯಪ್ರಕಾಶ ನಾರಾಯಣಜಂತುಹುಳುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮರಾಹುಲ್ ಗಾಂಧಿಅಶ್ವತ್ಥಮರಹಾಸನಬಂಜಾರಗೋಕರ್ಣಚೋಮನ ದುಡಿ (ಸಿನೆಮಾ)ಕರ್ನಾಟಕ ಸ್ವಾತಂತ್ರ್ಯ ಚಳವಳಿಕಾರ್ಲ್ ಮಾರ್ಕ್ಸ್ರೋಸ್‌ಮರಿಎಕರೆ🡆 More