ನೇಗಿಲು

ನೇಗಿಲು ಬೀಜ ಬಿತ್ತುವ ಅಥವಾ ಸಸ್ಯ ನೆಡುವ ತಯಾರಿಕೆಯಲ್ಲಿ ಮಣ್ಣನ್ನು ಸಡಿಲಗೊಳಿಸಲು ಅಥವಾ ತಿರುಗಿಸುವ ಸಲುವಾಗಿ ಮಣ್ಣಿನ ಆರಂಭಿಕ ಸಾಗುವಳಿಗಾಗಿ ಕೃಷಿಯಲ್ಲಿ ಬಳಸಲಾದ ಒಂದು ಉಪಕರಣ ಅಥವಾ ಕೃಷಿ ಸಾಮಗ್ರಿ.

ಸಾಂಪ್ರದಾಯಿಕವಾಗಿ ನೇಗಿಲುಗಳನ್ನು ಕುದುರೆಗಳು ಅಥವಾ ದನಗಳಂತಹ ಕೆಲಸದ ಪ್ರಾಣಿಗಳು ಎಳೆಯುತ್ತಿದ್ದವು, ಆದರೆ ಆಧುನಿಕ ಕಾಲದಲ್ಲಿ ಟ್ರ್ಯಾಕ್ಟರ್‌ಗಳು ಎಳೆಯುತ್ತವೆ. ನೇಗಿಲನ್ನು ಕಟ್ಟಿಗೆ, ಕಬ್ಬಿಣ ಅಥವಾ ಉಕ್ಕಿನಿಂದ ತಯಾರಿಸಬಹುದು. ಕಟ್ಟಿಗೆ, ಕಬ್ಬಿಣ, ಅಥವಾ ಉಕ್ಕಿನ ಚೌಕಟ್ಟಿಗೆ ಮಣ್ಣನ್ನು ಕತ್ತರಿಸಿ ಸಡಿಲಗೊಳಿಸಲು ಬಳಸಲಾದ ಅಲಗು ಅಥವಾ ಕೋಲನ್ನು ಜೋಡಿಸಲಾಗಿರುತ್ತದೆ. ದಾಖಲಿತ ಇತಿಹಾಸದ ಬಹುತೇಕ ಭಾಗದಲ್ಲಿ ಇದು ಒಂದು ಮೂಲಭೂತ ಪರಿಕರವಾಗಿದೆ. ಆದರೆ ಇಂಗ್ಲಿಷ್ ಭಾಷೆಯಲ್ಲಿ ಇದರ ಲಿಕ್ಜಿತ ಉಲ್ಲೇಖಗಳು ಕ್ರಿ.ಶ. ೧೧೦೦ರ ವರೆಗೆ ಕಾಣುವುದಿಲ್ಲ, ಮತ್ತು ಈ ಬಿಂದುವಿನಿಂದ ಇದನ್ನು ಮತ್ತೆ ಮತ್ತೆ ಉಲ್ಲೇಖಿಸಲಾಗುತ್ತದೆ. ನೇಗಿಲು ಮಾನವ ಇತಿಹಾಸದಲ್ಲಿನ ಪ್ರಮುಖ ಕೃಷಿ ಆವಿಷ್ಕಾರಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ.

ನೇಗಿಲು

ಮಣ್ಣಿನ ಮೇಲಿನ ಪದರವನ್ನು ತಿರುಗಿಸಿ, ಮೇಲ್ಮೈಗೆ ತಾಜಾ ಪೌಷ್ಟಿಕಾಂಶಗಳನ್ನು ತರುವುದು, ಮತ್ತು ಅದೇ ಸಮಯದಲ್ಲಿ ಕಳೆಗಳು ಮತ್ತು ಹಿಂದಿನ ಬೆಳೆಗಳ ಶೇಷಗಳನ್ನು ಹೂಳುವುದು ಮತ್ತು ವಿಘಟನೆಯಾಗುವುದಕ್ಕೆ ಅವುಗಳಿಗೆ ಆಸ್ಪದ ನೀಡುವುದು ಉಳುವುದರ ಪ್ರಧಾನ ಉದ್ದೇಶವಾಗಿದೆ. ಮಣ್ಣಿನಲ್ಲಿ ನೇಗಿಲನ್ನು ಎಳೆದಾಗ ಅದು ಉಕ್ಕೆ ಸಾಲುಗಳು ಎಂದು ಕರೆಯಲ್ಪಡುವ ಫಲವತ್ತಾದ ಮಣ್ಣಿನ ಉದ್ದ ಅಗಳುಗಳನ್ನು ಸೃಷ್ಟಿಸುತ್ತದೆ. ಆಧುನಿಕ ಬಳಕೆಯಲ್ಲಿ, ಉಳುಮೆ ಮಾಡಿದ ಗದ್ದೆಯನ್ನು ಸಾಮಾನ್ಯವಾಗಿ ಒಣಗಲು ಬಿಡಲಾಗುತ್ತದೆ, ಮತ್ತು ನಂತರ ನೆಡುವ ಮುಂಚೆ ಅದನ್ನು ಕುಂಟೆ ಹೊಡೆಯಲಾಗುತ್ತದೆ. ಮಣ್ಣನ್ನು ಉಳುವುದು ಮತ್ತು ಸಾಗುವಳಿ ಮಾಡುವುದು ಮಣ್ಣಿನ ಮೇಲಿನ ೧೨ ರಿಂದ ೨೫ ಸೆ.ಮಿ. ಅನ್ನು ಏಕರೂಪಗೊಳಿಸಿ ಮತ್ತು ಮಾರ್ಪಾಡು ಮಾಡಿ ಉಳು ಪದರವನ್ನು ರಚಿಸುತ್ತದೆ. ಅನೇಕ ಮಣ್ಣುಗಳಲ್ಲಿ, ನವುರಾದ ಸಸ್ಯ ಪೋಷಕ ಬೇರುಗಳ ಬಹುತೇಕ ಭಾಗವನ್ನು ಮೇಲ್ಮಣ್ಣು ಅಥವಾ ಉಳು ಪದರಿನಲ್ಲಿ ಕಾಣಬಹುದು.

ಆರಂಭದಲ್ಲಿ ನೇಗಿಲುಗಳು ಮಾನವ ಚಾಲಿತವಾಗಿದ್ದವು, ಆದರೆ ಒಮ್ಮೆ ಪ್ರಾಣಿಗಳನ್ನು ಸೇವೆಯಲ್ಲಿ ಒತ್ತಾಯಪಡಿಸಲಾದಾಗ ಈ ಪ್ರಕ್ರಿಯೆಯು ಗಣನೀಯವಾಗಿ ಹೆಚ್ಚು ಫಲಕಾರಿಯಾಯಿತು. ಮೊದಲ ಪ್ರಾಣಿಚಾಲಿತ ನೇಗಿಲುಗಳನ್ನು ನಿಸ್ಸಂಶಯವಾಗಿ ಎತ್ತುಗಳು ಎಳೆಯುತ್ತಿದ್ದವು, ಮತ್ತು ನಂತರ ಅನೇಕ ಪ್ರದೇಶಗಳಲ್ಲಿ ಕುದುರೆಗಳು (ಸಾಮಾನ್ಯವಾಗಿ ಭಾರ ಎಳೆಯುವ ಕುದುರೆಗಳು) ಮತ್ತು ಹೆಸರುಗತ್ತೆಗಳು ಎಳೆಯುತ್ತಿದ್ದವು. ಆದರೆ ಈ ಉದ್ದೇಶಕ್ಕಾಗಿ ವಿವಿಧ ಇತರ ಪ್ರಾಣಿಗಳನ್ನು ಬಳಸಲಾಗಿದೆ. ಕೈಗಾರಿಕೀಕೃತ ದೇಶಗಳಲ್ಲಿ, ನೇಗಿಲನ್ನು ಎಳೆಯುವ ಮೊದಲ ಯಾಂತ್ರಿಕ ಸಾಧನಗಳು ಆವಿಚಾಲಿತವಾಗಿದ್ದವು, ಆದರೆ ಕ್ರಮೇಣ ಆಂತರಿಕ ದಹನ ಚಾಲಿತ ಟ್ರ್ಯಾಕ್ಟರ್‌ಗಳು ಇವುಗಳ ಸ್ಥಾನ ತೆಗೆದುಕೊಂಡವು.

Tags:

ಬಿತ್ತನೆಮಣ್ಣು

🔥 Trending searches on Wiki ಕನ್ನಡ:

ಪರಶುರಾಮಸರ್ವೆಪಲ್ಲಿ ರಾಧಾಕೃಷ್ಣನ್ಭೂಕಂಪವೈದಿಕ ಯುಗಏಕರೂಪ ನಾಗರಿಕ ನೀತಿಸಂಹಿತೆರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಯುಧಿಷ್ಠಿರಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಬಹುವ್ರೀಹಿ ಸಮಾಸಕದಂಬ ಮನೆತನಕೃಷಿ ಉಪಕರಣಗಳುಜನಮೇಜಯಜಾಗತಿಕ ತಾಪಮಾನಪುಟ್ಟರಾಜ ಗವಾಯಿಬಿಜು ಜನತಾ ದಳಯಜಮಾನ (ಚಲನಚಿತ್ರ)ಮಂಗಳೂರುಜಯಚಾಮರಾಜ ಒಡೆಯರ್ಡಿಸ್ಲೆಕ್ಸಿಯಾದೇವರಾಯನ ದುರ್ಗಗೋಕಾಕ್ ಚಳುವಳಿಭಾರತದ ಬ್ಯಾಂಕುಗಳ ಪಟ್ಟಿಯೋಗಮಲೈ ಮಹದೇಶ್ವರ ಬೆಟ್ಟಹಿಂದೂ ಕೋಡ್ ಬಿಲ್ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಮೈಸೂರು ದಸರಾಸ್ತ್ರೀಸಿಂಧೂತಟದ ನಾಗರೀಕತೆಡಿ. ದೇವರಾಜ ಅರಸ್ಹಾಗಲಕಾಯಿಪಂಚತಂತ್ರರೇಣುಕಚಾಮುಂಡರಾಯಪಠ್ಯಪುಸ್ತಕನಗರವಾಣಿವಿಲಾಸಸಾಗರ ಜಲಾಶಯಹೊಸ ಆರ್ಥಿಕ ನೀತಿ ೧೯೯೧ರವೀಂದ್ರನಾಥ ಠಾಗೋರ್ಛಂದಸ್ಸುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಉಡಗ್ರಾಮ ಪಂಚಾಯತಿಕರ್ಕಾಟಕ ರಾಶಿವಿಕ್ರಮಾರ್ಜುನ ವಿಜಯಇಂದಿರಾ ಗಾಂಧಿಕೃಷ್ಣದೇವರಾಯಕನ್ನಡ ರಾಜ್ಯೋತ್ಸವದಾವಣಗೆರೆಜಾನಪದಶಬ್ದಭರತನಾಟ್ಯದಯಾನಂದ ಸರಸ್ವತಿಜ್ಯೋತಿಬಾ ಫುಲೆಬ್ಯಾಂಕಿಂಗ್ ವ್ಯವಸ್ಥೆಮಹೇಂದ್ರ ಸಿಂಗ್ ಧೋನಿಸಾರಜನಕಅಲ್-ಬಿರುನಿಶಿಶುನಾಳ ಶರೀಫರುಕಬಡ್ಡಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕರ್ನಾಟಕದ ಹಬ್ಬಗಳುದ್ವಿರುಕ್ತಿಕರ್ನಾಟಕದ ಅಣೆಕಟ್ಟುಗಳುಕರಗಭಾರತದ ಉಪ ರಾಷ್ಟ್ರಪತಿತುಮಕೂರುಭಕ್ತಿ ಚಳುವಳಿದಿಕ್ಕುನಾಗರೀಕತೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಜನ್ನದಾಸ ಸಾಹಿತ್ಯಅಶೋಕನ ಶಾಸನಗಳುಮಲ್ಲಿಕಾರ್ಜುನ್ ಖರ್ಗೆಸಂತೆಹಿಂದೂ ಧರ್ಮ🡆 More