ಸಂಗೀತಾ ಕಟ್ಟಿ

ಸಂಗೀತಾ ಕಟ್ಟಿ ಕುಲಕರ್ಣಿ - ಇವರು ಸಂಗೀತಾ ಕಟ್ಟಿ ಎಂಬ ಹೆಸರಿನಲ್ಲಿ ಜನಪ್ರಿಯರಾಗಿರುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸುಪ್ರಸಿದ್ಧ ಗಾಯಕಿ.

ಸುಗಮಸಂಗೀತ ಗಾಯಕಿಯೂ ಚಲನಚಿತ್ರದ ಹಿನ್ನೆಲೆಗಾಯಕಿಯೂ ಹೌದು.

ಸಂಗೀತ ಕಟ್ಟಿ
ಸಂಗೀತಾ ಕಟ್ಟಿ
Sangeeta Katti Receiving Karnataka Rajotsava Award in 2006 From CM & Deputy CM
ಹಿನ್ನೆಲೆ ಮಾಹಿತಿ
ಜನನ07 ಅಕ್ಟೋಬರ್
ಧಾರವಾಡ, ಕರ್ನಾಟಕ, ಭಾರತ
ಸಂಗೀತ ಶೈಲಿಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಹಿನ್ನೆಲೆ ಗಾಯಕಿ
ವೃತ್ತಿಗಾಯಕಿ, musician, composer
ಸಕ್ರಿಯ ವರ್ಷಗಳು1975–present
ಅಧೀಕೃತ ಜಾಲತಾಣwww.sangeetakatti.com
ಸಂಗೀತಾ ಕಟ್ಟಿ
Sangeeta Katti with Famous Singer S.P.Balasubramanyam in one of her recordings
ಸಂಗೀತಾ ಕಟ್ಟಿ
Sangeetha Katti in 2010
ಸಂಗೀತ ಕಟ್ಟಿ (Kulkarni)
Citizenshipಭಾರತ
Title
  • 'ಸಂಗೀತ ಭಾರತಿ'
  • 'ಗಾನಕೋಗಿಲೆ'
Spouseಮನಮೋಹನ್‍ಕುಲಕರ್ಣಿ
Children
  • ಸವನಿ ಕುಲಕರ್ಣಿ (Daughter)
  • ನಿನಾದ ಕುಲಕರ್ಣಿ (Son)
Parents
  • ಹೆಚ್.ಎ.ಕಟ್ಟಿ
  • ಶ್ರಮತಿ ಭಾರತಿಕಟ್ಟಿ
Relatives
  • ಸರಿತ ಕಟ್ಟಿ (Sister)
ಸಂಗೀತಾ ಕಟ್ಟಿ
Sangeeta Katti with Ustad BISMILLA KHAN
ಸಂಗೀತಾ ಕಟ್ಟಿ
Sangeeta Katti with Famous Singer S.Janaki

ಪರಿಚಯ

ಸಂಗೀತಾ ಕಟ್ಟಿಯವರು ಕರ್ನಾಟಕಧಾರವಾಡದಲ್ಲಿ ಅಕ್ಟೋಬರ್ ೭, ೧೯೭೦ರಂದು ಹುಟ್ಟಿದರು. ಇವರು ಡಾ.ಎಚ್.ಎ.ಕಟ್ಟಿ ಮತ್ತು ಶ್ರೀಮತಿ ಭಾರತಿ ಇವರ ಮಗಳು. ಇವರು ದಸರೆಯ ಸರಸ್ವತೀಪೂಜೆಯ ದಿನ ಹುಟ್ಟಿದ್ದು.

ಬಾಲ್ಯ

ಸಂಗೀತದ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಹುಟ್ಟಿದ ಸಂಗೀತಾ ಕಟ್ಟಿ ಪ್ರಾರಂಭದ ಪಾಠಗಳನ್ನು ತಂದೆಯಿಂದಲೇ ಪಡೆದರು. ನಾಲ್ಕು ವರ್ಷದವರಿದ್ದಾಗ ನೌಷಾದ್ ಅಲಿಯವರನ್ನು ಭೇಟಿಯಾಗಿದ್ದು ಅವರ ಬದುಕಿಗೊಂದು ತಿರುವು ಕೊಟ್ಟಿತು. ನೌಷಾದ್ ಅಲಿ ಯವರು ಆಕೆಗೆ ಕೆಲವು ರಾಗಗಳನ್ನು ಹಾಡುವಂತೆ ಸೂಚಿಸಿದರು. ಈ ಬಾಲಪ್ರತಿಭೆಯಿಂದ ಪ್ರಭಾವಿತರಾದ ಅವರು ಆಕೆಯನ್ನು ಶಿಷ್ಯೆಯನ್ನಾಗಿ ಮಾಡಿಕೊಂಡರು. ಶ್ರೀ ಶೇಷಗಿರಿ ದಂಡಾಪುರ ಮತ್ತು ಪಂಡಿತ ಚಂದ್ರಶೇಖರ ಪುರಾಣಿಕಮಠ ಅವರಿಂದ ಆರಂಭಿಕ ತರಬೇತಿ ಪಡೆದು ಆಕೆ ಹೆಚ್ಚಿನ ತರಬೇತಿಯನ್ನು ಕಿರಾಣಾ ಮತ್ತು ಗ್ವಾಲಿಯರ್ ಘರಾಣಾದ ಪದ್ಮಭೂಷಣ ಪಂಡಿತ ಬಸವರಾಜ ರಾಜಗುರು ಅವರಿಂದ ಸುಮಾರು ಹನ್ನೆರಡು ವರ್ಷಗಳ ಕಾಲ ಪಡೆದರು. ಈಗ ಅವರು ಪದ್ಮವಿಭೂಷಣ ಗಾನಸರಸ್ವತಿ ಶ್ರೀಮತಿ ಕಿಶೋರಿ ಅಮೋನ್ಕರ್ ಅವರ ಶಿಷ್ಯೆ.

ಶಿಕ್ಷಣ

ಸಂಗೀತಾ ಅವರು ರಸಾಯನಶಾಸ್ತ್ರ ಪದವಿಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಅವರು ಕನ್ನಡವಷ್ಟೇ ಅಲ್ಲದೆ ಹಿಂದಿ, ಇಂಗ್ಲೀಷ್, ಮರಾಠೀ ಭಾಷೆಗಳನ್ನು ಚೆನ್ನಾಗಿ ಬಲ್ಲರು.

ಇತರ ಮಾಹಿತಿ

ಈವರೆಗೆ ಅವರು ೨೫೦೦ ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮೊದಲ ಕಾರ್ಯಕ್ರಮವನ್ನು ಅವರು ನಾಲ್ಕು ವರ್ಷದವರಿದ್ದಾಗ ಕೊಟ್ಟರು. ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಂ, ಕೆನಡಾ ಮತ್ತು ಇನ್ನೂ ಅನೇಕ ದೇಶಗಳಲ್ಲಿ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಭಾರತದಲ್ಲಿ ಬಹುಮುಖ್ಯ ಸಂಗೀತ ಸಮಾರೋಹಗಳಲ್ಲಿ ಸಾಮಾನ್ಯವಾಗಿ ಅವರ ಕಾರ್ಯಕ್ರಮ ಇದ್ದೇ ಇರುತ್ತದೆ. ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಅವರು ಸಂಗೀತ ವನ್ನು ಕಲಿಸುತ್ತಿದ್ದರು.

ಪ್ರಶಸ್ತಿಗಳು ಮತ್ತು ಗೌರವಗಳು

  1. ೨೦೦೬-೨೦೦೭ ರ ಸುವರ್ಣಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದರು. ( ಇದು ರಾಜ್ಯದ ಅತ್ಯುನ್ನತ ಗೌರವ).
  2. ಬರೀ ನಾಲ್ಕು ವರ್ಷದವರಿದ್ದಾಗ ಸಂಗೀತ ಸಾಮ್ರಾಟ್ ನೌಷಾದ್ ಸಾಹೇಬರಿಂದ " ಸಂಗೀತದ ಅದ್ಭುತ" ಎಂದು ಹೊಗಳಿಸಿಕೊಂಡರು.
  3. ನವೆಂಬರ್ ೧೯೭೫ ರಲ್ಲಿ ಮಕ್ಕಳದಿನದಂದು ಆಕಾಶವಾಣಿಯಲ್ಲಿ ಬಾಲಪ್ರತಿಭೆಯಾಗಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕೊಟ್ಟರು.
  4. ೧೯೭೭ ರಲ್ಲಿ ಮದರ್ ತೆರೇಸಾರಿಂದ ಆಶೀರ್ವಾದ ಪಡೆದರು.
  5. ದಾಸಮಂಜರಿ ಎಂಬ ಮೊದಲ ಭಜನಸಂಗ್ರಹವನ್ನು ಧ್ವನಿಮುದ್ರಿಸಿದರು.
  6. ಹಿಂದೂಸ್ತಾನಿ ಶಾಸ್ತ್ರೀಯ ಗಾಯನದ ಜ್ಯೂನಿಯರ್ , ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದರು.
  7. ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಸುಗಮ ಸಂಗೀತಗಳಲ್ಲಿ ಆಕಾಶವಾಣಿಯ ವಾರ್ಷಿಕ ಪ್ರಶಸ್ತಿಗಳನ್ನು ಪಡೆದರು.
  8. ನಾಗಪುರದಲ್ಲಿ ೧೯೮೭ ರಲ್ಲಿ ನಡೆದ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದರು.
  9. ೧೯೯೦ ರಲ್ಲಿ CCERT - ನವದೆಹಲಿಯಲ್ಲಿ ನಡೆದ "ರಾಷ್ಟ್ರೀಯ ಸಮಗ್ರತೆಯ ಕ್ಯಾಂಪ್"ನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದಲ್ಲಿ ರಾಜ್ಯವನ್ನು ಪ್ರತಿನಿಧಿಸಿದರು.
  10. ಅಮೇರಿಕ , ಇಂಗ್ಲೆಂಡುಗಳ "ಅಕ್ಕ" ಸಮ್ಮೇಳನಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದರು.
  11. ಮಂಗಲಪಲ್ಲಿ ಬಾಲಮುರಳಿಕೃಷ್ಣ, ಕೆ. ಜೆ. ಯೇಸುದಾಸ್, ಪಿ. ಬಿ. ಶ್ರೀನಿವಾಸ್,ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ರಾಜಕುಮಾರ್ ಅಂತಹ ಪ್ರಸಿದ್ದರೊಡನೆ ಹಾಡಿದ್ದಾರೆ.
  12. ದಕ್ಷಿಣ ಭಾರತದ ಹೆಸರಾಂತ ಸಂಗೀತನಿರ್ದೇಶಕರಾದ ಉಪೇಂದ್ರಕುಮಾರ್, ಎಮ್. ರಂಗರಾವ್ , ವಿಜಯಭಾಸ್ಕರ್, ರಾಜನ್ ನಾಗೇಂದ್ರ, ಸಿ. ಅಶ್ವತ್ಥ್ ಎಂ. ಎಂ. ಕೀರ್ವಾಣಿ, ಹಂಸಲೇಖಾ, ಮನೋಹರ್ ಮುಂತಾದವರೊಡಗೂಡಿ ಕೆಲಸ ಮಾಡಿದ್ದಾರೆ.
  13. ಬೆಂಗಳೂರು ಆಕಾಶವಾಣಿಗಾಗಿ ಭಾರತರತ್ನ ಪಂಡಿತ್ ರವಿಶಂಕರ್ ಅವರ ಠುಮರಿ ರಚನೆಗಳನ್ನು ಹಾಡಿದ್ದಕ್ಕಾಗಿ ಅವರಿಂದ ಪ್ರಶಂಸೆ ಪಡೆದಿದ್ದಾರೆ
  14. ಬೆಂಗಳೂರಿನಲ್ಲಿ ನಡೆದ ೬೨ನೇ ಎಐಸಿಸಿ ಸಮಾವೇಶದಲ್ಲಿ "ವಂದೇಮಾತರಂ" ಹಾಡಿದುದಕ್ಕಾಗಿ ಎಐಸಿಸಿ ಅಧ್ಯಕ್ಷೆ ಸ್ರೀಮತಿ ಸೋನಿಯಾಗಾಂಧಿ ಅವರಿಂದ ವೈಯುಕ್ತಿಕ ಅಭಿನಂದನೆಗಳನ್ನು ಪಡೆದಿದ್ದಾರೆ.
  15. ಅಮೇರಿಕದ ಓಹಿಯೋ ವಿಶ್ವವಿದ್ಯಾನಿಲಯದಲ್ಲಿ , ಸಂಗೀತದಲ್ಲಿ ಮಹಿಳೆಯ ಪಾತ್ರ ಮತ್ತು ಭಾರತೀಯ ಸಂಗೀತದ ಮಹತ್ವ ಕುರಿತು ಭಾಷಣ ಮಾಡಿದರು.
  16. ಅನೇಕ ಕಾರ್ಯಕ್ರಮಗಳು ಮತ್ತು ಆಲ್ಬಂಗಳಿಗೆ ಸಂಯೋಜನೆ ಮಾಡಿದರು. ಸಂಗೀತಸರಿತಾ ಎಂಬ ಶಾಸ್ತ್ರೀಯ ಸಂಗೀತ ರಾಗಗಳನ್ನು ಭಾರತೀಯ ಸಿನೇಮಾ ಮೂಲಕ ಪರಿಚಯಿಸುವ ಕಾರ್ಯಕ್ರಮಕ್ಕಾಗಿ ಸಂಶೋಧನೆ ಮಾಡಿದರು. ಈ ಕಾರ್ಯಕ್ರಮ ವನ್ನು ಜಗತ್ತಿನಾದ್ಯಂತ ಯಶಸ್ವಿಯಾಗಿ ನೀಡಿದರು. ಶ್ರೀಮತಿ ಸಂಗೀತಾ ಕಟ್ಟಿ ಕುಲ್ಕರ್ಣಿಯವರು ಪ್ರತಿ ವರ್ಷ ಮಾಘ ಮಾಸದಲ್ಲ ಬಿಜಾಪುರ ಜಿಲ್ಹೆಯ ಯಲಗೂರಕ್ಕೆಸ್ವಯಂ ಪ್ರೇರಣೆಯಿಂದ ಯಲಗೂರೇಶನಿಗೆ ಸಂಗೀತ ಸೇವೆ ಮಾಡುವರು.
ಸಂಗೀತಾ ಕಟ್ಟಿ 
First Concert at age 4
ಸಂಗೀತಾ ಕಟ್ಟಿ 
Sangeeta Katti being blessed by Mother Teresa
ಸಂಗೀತಾ ಕಟ್ಟಿ 
Sangeeta Katti as Chief Guest at one of the functions in her Childhood, Dharwad
ಸಂಗೀತಾ ಕಟ್ಟಿ 
Sangeeta Katti With Shankar Mahadevan

ಉಲ್ಲೇಖ

ಹೊರಗಿನ ಕೊಂಡಿಗಳು

Tags:

ಸಂಗೀತಾ ಕಟ್ಟಿ ಪರಿಚಯಸಂಗೀತಾ ಕಟ್ಟಿ ಬಾಲ್ಯಸಂಗೀತಾ ಕಟ್ಟಿ ಶಿಕ್ಷಣಸಂಗೀತಾ ಕಟ್ಟಿ ಇತರ ಮಾಹಿತಿಸಂಗೀತಾ ಕಟ್ಟಿ ಪ್ರಶಸ್ತಿಗಳು ಮತ್ತು ಗೌರವಗಳುಸಂಗೀತಾ ಕಟ್ಟಿ ಉಲ್ಲೇಖಸಂಗೀತಾ ಕಟ್ಟಿ ಹೊರಗಿನ ಕೊಂಡಿಗಳುಸಂಗೀತಾ ಕಟ್ಟಿ

🔥 Trending searches on Wiki ಕನ್ನಡ:

ಪ್ರೀತಿ೧೯೭೧ರ ಭಾರತ-ಪಾಕಿಸ್ತಾನ ಯುದ್ಧಆದಿ ಶಂಕರಶಬ್ದಮಣಿದರ್ಪಣಯೇತಿದ.ರಾ.ಬೇಂದ್ರೆಹಿಂದೂ ಮಾಸಗಳುಶಬ್ದನಾಯಕತ್ವಮುಂಬಯಿ ವಿಶ್ವವಿದ್ಯಾಲಯಕನ್ನಡದಲ್ಲಿ ಸಣ್ಣ ಕಥೆಗಳುಕಾರ್ಯಾಂಗರೊಸಾಲಿನ್ ಸುಸ್ಮಾನ್ ಯಲೋವ್ಇಟಲಿಸರ್ವಜ್ಞವಿರಾಟ್ ಕೊಹ್ಲಿಹುಣಸೆಕನ್ನಡ ಕಾವ್ಯಬಿ. ಎಂ. ಶ್ರೀಕಂಠಯ್ಯಭಗತ್ ಸಿಂಗ್ನಿರ್ಮಲಾ ಸೀತಾರಾಮನ್ಸಂಚಿ ಹೊನ್ನಮ್ಮಗಣಿತಬೌದ್ಧ ಧರ್ಮಅದ್ವೈತಮುಖ್ಯ ಪುಟಭಾರತೀಯ ಜನತಾ ಪಕ್ಷರಾಜಸ್ಥಾನ್ ರಾಯಲ್ಸ್ತ್ಯಾಜ್ಯ ನಿರ್ವಹಣೆಮಲೈ ಮಹದೇಶ್ವರ ಬೆಟ್ಟಆಮದು ಮತ್ತು ರಫ್ತುಜಾರ್ಜ್‌ ಆರ್ವೆಲ್‌ಸಾವಿತ್ರಿಬಾಯಿ ಫುಲೆಉಡುಪಿ ಜಿಲ್ಲೆಮೂಲವ್ಯಾಧಿಪಂಜಾಬ್ಹೊನಗೊನ್ನೆ ಸೊಪ್ಪುಸಂಸ್ಕೃತಲೋಕೋಪಯೋಗಿ ಶಿಲ್ಪ ವಿಜ್ಞಾನಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಗೃಹರಕ್ಷಕ ದಳಭಾರತದಲ್ಲಿ ಮೀಸಲಾತಿಅನುಭೋಗಪೌರತ್ವಡಿಜಿಟಲ್ ಇಂಡಿಯಾಸರ್ಪ ಸುತ್ತುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿದಯಾನಂದ ಸರಸ್ವತಿಸವದತ್ತಿಕಲ್ಯಾಣಿದಿಕ್ಸೂಚಿಮಾಲಿನ್ಯಮೈಗ್ರೇನ್‌ (ಅರೆತಲೆ ನೋವು)ಗಂಗ (ರಾಜಮನೆತನ)ಯೋಗ ಮತ್ತು ಅಧ್ಯಾತ್ಮರಮ್ಯಾನಯಾಗರ ಜಲಪಾತತ್ರಿಪದಿಶ್ರೀಕೃಷ್ಣದೇವರಾಯಚೀನಾಆಡಮ್ ಸ್ಮಿತ್ವಿಭಕ್ತಿ ಪ್ರತ್ಯಯಗಳುಈಸ್ಟರ್ಆಸ್ಪತ್ರೆಚಿನ್ನದ ಗಣಿಗಾರಿಕೆಕರ್ನಾಟಕದ ಏಕೀಕರಣಕೇಶಿರಾಜಒಕ್ಕಲಿಗಪ್ರವಾಸಿಗರ ತಾಣವಾದ ಕರ್ನಾಟಕಮಾನವನ ಪಚನ ವ್ಯವಸ್ಥೆಪಾರ್ವತಿಅರ ಕನ್ನಡಒಲಂಪಿಕ್ ಕ್ರೀಡಾಕೂಟಬ್ಯಾಸ್ಕೆಟ್‌ಬಾಲ್‌🡆 More