ಅಹಲ್ಯಾ ಬಾಯಿ ಹೋಳ್ಕರ

ಅಹಲ್ಯಾ ಬಾಯಿ ಹೋಳ್ಕರ(೩೦ ಮೇ ೧೭೨೫ – ೧೩ ಆಗಸ್ಟ್ ೧೭೯೫)ಮರಾಠರ ಸಂಸ್ಥಾನ ಮಾಲ್ವಾವನ್ನು ಆಳಿದ ಹೋಳ್ಕರ್ ವಂಶದ ರಾಣಿ.

ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್
ಮಹಾರಾಣಿ ಶ್ರೀಮಂತ ಅಖಂಡ ಸೌಭಾಗ್ಯವತಿ ಅಹಲ್ಯಾಬಾಯಿ ಸಾಹಿಬಾ ಸನ್ನಿಧಾನ

ಅಹಲ್ಯಾ ಬಾಯಿ ಹೋಳ್ಕರ
ಮರಾಠ ಹೋಳ್ಕರ್ ರಾಜಮನೆತನದ ಇಂದೋರ್ ನ ರಾಣಿ
ಮಾಳ್ವ ಸಂಸ್ಥಾನದ ಮಹಾರಾಣಿ
ಆಳ್ವಿಕೆ ೧ ಡಿಸೆಂಬರ್ ೧೭೬೭ - ೧೩ ಆಗಸ್ಟ್ ೧೭೯೫
ಪಟ್ಟಾಭಿಷೇಕ ೧೧ ಡಿಸೆಂಬರ್ ೧೭೬೭
ಪೂರ್ವಾಧಿಕಾರಿ ಮಾಳೇರಾವ್ ಹೋಳ್ಕರ್
ಉತ್ತರಾಧಿಕಾರಿ ಒಂದನೇ ತುಕೋಜಿರಾವ್ ಹೋಳ್ಕರ್
Consort ಖಂಡೇರಾವ್ ಹೋಳ್ಕರ್
ಪೂರ್ಣ ಹೆಸರು
ಅಹಲ್ಯಾಬಾಯಿ ಸಾಹಿಬಾ ಹೋಳ್ಕರ್
ಮನೆತನ ಹೋಳ್ಕರ್ ರಾಜಮನೆತನ
ತಂದೆ ಮಂಕೋಜಿ ಶಿಂಧೆ
ಜನನ ೩೧ ಮೇ ೧೭೨೫
ಗ್ರಾಮ್ ಚೌನ್ದಿ, ಜಾಮಖೇಡ್, ಅಹ್ಮದ್ ನಗರ್, ಮಹಾರಾಷ್ಟ್ರ, ಭಾರತ
ಮರಣ ೧೩ ಆಗಸ್ಟ್ ೧೭೯೫
ಧರ್ಮ ಹಿಂದೂ

ಅಹಲ್ಯಾಬಾಯಿ ಹೋಳ್ಕರ್ ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಸ್ತ್ರೀಯರಲ್ಲಿ ಒಬ್ಬಳು. ಹೋಳ್ಕರ್‍ವಂಶದ ಮುಲ್ಲಾರ್ ರಾವ್ ಹೋಳ್ಕರನ ಮಗ ಖಂಡೇರಾಯನ ಪತ್ನಿ. ಗಂಡ 1754ರಲ್ಲಿ ಕುಂಭೇರ್ ಮುತ್ತಿಗೆಯಲ್ಲಿ ಸತ್ತಾಗ ಈಕೆಯೇ ರಾಜ್ಯಸೂತ್ರಗಳನ್ನು ವಹಿಸಿದಳು (1754-1795). 1767ರಲ್ಲಿ ರಘೋಬ ಐಶ್ವರ್ಯವನ್ನೂ ರಾಜ್ಯವನ್ನೂ ಅಪಹರಿಸಲು ಯತ್ನಿಸಿದಾಗ ಧೃತಿಗೆಡದೆ ಅವನನ್ನು ಎದುರಿಸಿದಳು. ರಘೋಬ ನಾಚಿಕೆಯಿಂದ ಹಿಂದಿರುಗಿದ. ಒಟ್ಟು ಮೂವತ್ತು ವರ್ಷಗಳ ಕಾಲ ರಾಜ್ಯವನ್ನು ಆದರ್ಶ ರೀತಿಯಲ್ಲಿ ಆಳಿದಳು. ಅತ್ಯಂತ ದಕ್ಷತೆಯಿಂದ ಒಳಾಡಳಿತ ಸರ್ಕಾರವನ್ನು ಸ್ಥಾಪಿಸಿ ಶಾಂತಿಯನ್ನು ನೆಲೆಗೊಳಿಸಿದಳು. ಪ್ರಜೆಗಳ ಸೌಖ್ಯಸಾಧನೆಯೇ ಈಕೆಯ ಮುಖ್ಯ ಧ್ಯೇಯವಾಗಿತ್ತು. ಮಾಳವಪ್ರಾಂತ್ಯದಲ್ಲಿ ಎಂದೂ ಕಾಣದಂಥ ಸುಖೀರಾಜ್ಯ ಸ್ಥಾಪನೆ ಮಾಡಿದಳು. ಈಗಿನ ಇಂದೂರು ಪಟ್ಟಣ ಈಕೆಯಿಂದಲೇ ಅಭಿವೃದ್ಧಿಗೆ ಬಂದದ್ದು. ಉದಾರಚರಿತಳೂ, ಧರ್ಮಿಷ್ಠಳೂ ಆಗಿ ಮತಗ್ರಂಥಗಳ ಅಧ್ಯಯನದಲ್ಲಿ ಹೆಚ್ಚುಕಾಲ ಕಳೆಯುತ್ತಿದ್ದಳು. ದುರಭಿಮಾನ ಲವಲೇಶವೂ ಇರಲಿಲ್ಲ. ಸರ್ ಜಾನ್ ಮ್ಯಾಲ್‍ಕೋಮ್ ಅತ್ಯಂತ ಪರಿಶುದ್ಧಳಾದ ಅತ್ಯಂತ ಆದರ್ಶಪ್ರಾಯಳಾದ ರಾಜ್ಯಾಡಳಿತಗಾರಳೆಂದು ಈಕೆಯ ಬಗ್ಗೆ ಹೇಳಿದ್ದಾನೆ.

ಅಹಲ್ಯಾ ಬಾಯಿ ಹೋಳ್ಕರ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಕೈಮಗ್ಗಚಂದ್ರಶೇಖರ ಕಂಬಾರವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಕನ್ನಡದಲ್ಲಿ ಗದ್ಯ ಸಾಹಿತ್ಯಭಾರತದ ಸಂಸತ್ತುಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಭಾರತದಲ್ಲಿ ಬಡತನಭಾರತದ ಪಂಚಾಯತ್ ರಾಜ್ ವ್ಯವಸ್ಥೆಕನ್ನಡ ಸಾಹಿತ್ಯ ಪರಿಷತ್ತುಜೈಮಿನಿ ಭಾರತಜೋಡು ನುಡಿಗಟ್ಟುಡಾ ಬ್ರೋಪ್ಲೇಟೊಕಾರ್ಮಿಕರ ದಿನಾಚರಣೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ಜನಸಂಖ್ಯೆಯ ಬೆಳವಣಿಗೆಶನಿಚಾಮರಸನಿರ್ವಹಣೆ ಪರಿಚಯಕೃಷ್ಣರಾಜಸಾಗರದಾಸ ಸಾಹಿತ್ಯತಾಳೀಕೋಟೆಯ ಯುದ್ಧಉರ್ಜಿತ್ ಪಟೇಲ್ಸಾಕ್ಷಾತ್ಕಾರನವೋದಯಹಣಕಾಸುವಿಜಯನಗರ ಸಾಮ್ರಾಜ್ಯಕದಂಬ ಮನೆತನಚಾಲುಕ್ಯವಿಜಯಪುರವಾಲಿಬಾಲ್ಸಂಭೋಗರಾಘವಾಂಕಲಾವಂಚಭಾರತದ ಇತಿಹಾಸಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕರ್ನಾಟಕದ ವಾಸ್ತುಶಿಲ್ಪತ. ರಾ. ಸುಬ್ಬರಾಯಚರಕಗುರುರಾಜ ಕರಜಗಿಕರ್ನಾಟಕ ಸಶಸ್ತ್ರ ಬಂಡಾಯಮಹಾಲಕ್ಷ್ಮಿ (ನಟಿ)ಭಾರತದ ರಾಷ್ಟ್ರಪತಿಮಾರುಕಟ್ಟೆಸಂಪ್ರದಾಯಡಿ.ಎಲ್.ನರಸಿಂಹಾಚಾರ್ಅರವಿಂದ ಘೋಷ್ಕನ್ನಡ ಸಾಹಿತ್ಯ ಸಮ್ಮೇಳನಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ವೀಳ್ಯದೆಲೆಕರ್ನಾಟಕ ಲೋಕಸೇವಾ ಆಯೋಗಅಮೃತಧಾರೆ (ಕನ್ನಡ ಧಾರಾವಾಹಿ)ಬ್ಲಾಗ್ಲಕ್ಷ್ಮೀಶರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಗೋಪಾಲಕೃಷ್ಣ ಅಡಿಗಬೆಂಗಳೂರುಮಾನವ ಸಂಪನ್ಮೂಲ ನಿರ್ವಹಣೆಅಲ್ಲಮ ಪ್ರಭುಕರ್ನಾಟಕದಲ್ಲಿ ಪಂಚಾಯತ್ ರಾಜ್ಕನ್ನಡ ರಾಜ್ಯೋತ್ಸವಹೃದಯಆಕ್ಟೊಪಸ್ಪುರಂದರದಾಸಗುರುತ್ವಾಕರ್ಷಣೆಯ ಸಿದ್ಧಾಂತದ ಇತಿಹಾಸಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಯೂಟ್ಯೂಬ್‌ಕೃತಕ ಬುದ್ಧಿಮತ್ತೆಭಾರತೀಯ ಸಂಸ್ಕೃತಿಸಹಾಯಧನತೆಲುಗುಕ್ರಿಯಾಪದಕೊಡಗುಕನ್ನಡ ಪತ್ರಿಕೆಗಳುಋಗ್ವೇದಚಿನ್ನಕನ್ನಡ ಬರಹಗಾರ್ತಿಯರುಧರ್ಮ🡆 More