ಅಲ್ಟ್ರಾಮರೀನ್

ಹಸುರು ಮತ್ತು ಊದಾಬಣ್ಣದ ಹರಳುಗಳ ರೂಪದಲ್ಲಿ ದೊರೆಯುವ ಖನಿಜ.

ಸ್ವಲ್ಪಾಂಶ ಗಂಧಕ ಇರುವ ಅಲ್ಯೂಮಿನಿಯಂ ಸೋಡಿಯಂ ಸಿಲಿಕೇಟ್ ಇದು ಎಂದು ಭಾವಿಸಲಾಗಿದೆ. ಕೃತಕ ಅಲ್ಟ್ರಾಮರೀನ್ ನೀಲಿಬಣ್ಣದ ವರ್ಣದ್ರವ್ಯ (ಪಿಗ್ಮೆಂಟ್). ಬಿಳಿ ಜೇಡಿಮಣ್ಣು, ಸೋಡ, ಇದ್ದಲು ಮತ್ತು ಗಂಧಕಗಳನ್ನು ಗಾಳಿ ಸಂಪರ್ಕವಿಲ್ಲದಂತೆ ಕಾಸಿದಾಗ ಒಂದು ಹಸಿರು ಬಣ್ಣದ ಪದಾರ್ಥ ಉತ್ಪನ್ನವಾಗುತ್ತದೆ. ಇದನ್ನು ನೀರಿನಲ್ಲಿ ತೊಳೆದು ಒಣಗಿಸಿ ಮತ್ತೆ ಗಂಧಕವನ್ನು ಸೇರಿಸಿ ಬೇಕಾದ ಬಣ್ಣದ ಛಾಯೆ ಬರುವವರೆಗೂ ಗಾಳಿಯಲ್ಲಿ ಕಾಸುತ್ತಾರೆ. ಈ ಪದಾರ್ಥವನ್ನು ನೀಲಿ ಎಂಬ ಹೆಸರಿನಲ್ಲಿ ಬಟ್ಟೆ ಒಗೆದು ಅಲುಬುವಾಗ ಬಳಸುತ್ತಾರೆ. ಪೇಂಟ್ ಲಾಕ್ಕರ್, ಕ್ಯಾಲ್ಸಿಮೈನ್, ಲಿನೋಲಿಯಂ, ಕಾಗದ ತಯಾರಿಕೆ ಇಲ್ಲೆಲ್ಲ ಇದರ ಉಪಯೋಗವಿದೆ. ಯುರೋಪ್ ರಾಷ್ಟ್ರಗಳಿಗೆ ಈ ವಸ್ತುವನ್ನು ಕಡಲಾಚೆಯಿಂದ ಆಮದು ಮಾಡುತ್ತಿದ್ದುದ ರಿಂದ ಅಲ್ಟ್ರಾ (ಆಚೆಯಿಂದ) ಮರೀನ್ (ಕಡಲು) ಎಂಬ ಹೆಸರು ಬಂದಿತು. ಇದರ ಕೃತಕ ತಯಾರಿಕೆ ಯಶಸ್ವಿಯಾದದ್ದು 1820ರಲ್ಲಿ. ಅಲ್ಟ್ರಾಮರೀನಿನ ರಾಸಾಯನಿಕ ರಚನೆ ಸಮಸ್ಯಾತ್ಮಕವಾಗಿತ್ತು. 1929ರಲ್ಲಿ ಎಕ್ಸ್‌-ಕಿರಣಗಳ ಬಳಕೆಯಿಂದ ಇದನ್ನು ನಿರ್ಧರಿಸಿದರು. ಒಂದು ಘನರೂಪದ ಮತ್ತು ವಿಕೃತಶೃಂಗಗಳಿರುವ ಲ್ಯಾಟಿಸ್ ಇದರ ಆಕಾರ. ಅಲ್ಯೂಮಿನಿಯಂ ಮತ್ತು ಸಿಲಿಕಾನ್ ಪರಮಾಣುಗಳು ಇಲ್ಲಿ ಆಕ್ಸಿಜನ್ ಪರಮಾಣುಗಳ ನೆರವಿನಿಂದ ಬಂಧಿತ ವಾಗಿವೆ. ಅಲ್ಯೂಮಿನಿಯಂ ಮತ್ತು ಸಿಲಿಕಾನ್‌ಗಳ ನಿಷ್ಪತ್ತಿ ಮಿತಿಗಳೊಳಗೆ ಬದಲಾಗಬಹುದು; ಆದರೆ ಅವುಗಳ ಒಟ್ಟು ಮೊತ್ತ ಸದಾ 12. ಸಿಲಿಕಾನ್ ಪರಮಾಣುಗಳು ಅಲ್ಯೂಮಿನಿಯಂ ಪರಮಾಣುಗಳ ಸಂಖ್ಯೆಗಿಂತ ಸಾಮಾನ್ಯವಾಗಿ ಅಧಿಕ. ಇವುಗಳನ್ನು ಬಂಧಿಸುವ ಆಕ್ಸಿಜನ್ ಪರಮಾಣು ಸಂಖ್ಯೆ 24. ಲ್ಯಾಟಿಸ್‌ನ ಒಳಗೂ ಒತ್ತೊತ್ತಿಗೆ ಇರುವ ಲ್ಯಾಟ್ಟಿಸ್‌ಗಳ ವಿಕೃತಶೃಂಗ ಗಳು ಒದಗಿಸುವ ಪ್ರದೇಶಗಳಲ್ಲಿಯೂ ಸೋಡಿಯಂ ಮತ್ತು ಗಂಧಕದ ಪರಮಾಣುಗಳಿವೆ. ಇವುಗಳ ಸಂಖ್ಯೆ ಅಥವಾ ಸ್ಥಾನ ನಿರ್ದಿಷ್ಟವಾಗಿಲ್ಲ. ಈ ಮೂಲವಸ್ತುಗಳ ಪ್ರಮಾಣ ಕೆಳಗೆ ತೋರಿಸಿದೆ.

ಸಿಲಿಕಾನ್ 17.75%-20.0% ಭಾರದಲ್ಲಿ
ಅಲ್ಯೂಮಿನಿಯಂ 12.30%-15.5% ಭಾರದಲ್ಲಿ
ಸೋಡಿಯಂ 12.80%-15.3% ಭಾರದಲ್ಲಿ
ಗಂಧಕ 10.00%-14.0% ಭಾರದಲ್ಲಿ

ಆಕ್ಸಿಜನ್ ಉಳಿದ ಅಂಶ (ಅತ್ಯಲ್ಪಾಂಶ ನೀರು ಮತ್ತು ಕಲ್ಮಷಗಳೂ ಸೇರಿವೆ) ಮೂಲವಸ್ತುಗಳ ಪ್ರಮಾಣದಲ್ಲಿ ವ್ಯತ್ಯಾಸ ಸಾಧ್ಯವಾಗಿರುವುದರಿಂದ ಭಿನ್ನ ಗುಣಗಳ ಅಲ್ಟ್ರಾಮರೀನ್‌ಗಳು ಉಂಟಾಗುತ್ತವೆ.

ಅಲ್ಟ್ರಾಮರೀನ್
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

🔥 Trending searches on Wiki ಕನ್ನಡ:

ಶ್ರೀ ರಾಘವೇಂದ್ರ ಸ್ವಾಮಿಗಳುಭಾರತೀಯ ಕಾವ್ಯ ಮೀಮಾಂಸೆಸಮಾಸವರ್ಗೀಯ ವ್ಯಂಜನಮುಖ್ಯ ಪುಟಮುಂಬಯಿ ವಿಶ್ವವಿದ್ಯಾಲಯನೆಟ್‍ಫ್ಲಿಕ್ಸ್ರೈತದುಂಡು ಮೇಜಿನ ಸಭೆ(ಭಾರತ)ದಾಸವಾಳಸೂರ್ಯನೀತಿ ಆಯೋಗಕೆ. ಅಣ್ಣಾಮಲೈವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುವಿಷುವತ್ ಸಂಕ್ರಾಂತಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಹರ್ಡೇಕರ ಮಂಜಪ್ಪಧೀರೂಭಾಯಿ ಅಂಬಾನಿಶೂದ್ರ ತಪಸ್ವಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುನಯಸೇನಕರಗಕಿತ್ತೂರು ಚೆನ್ನಮ್ಮಆಟರಾಜಧಾನಿಗಳ ಪಟ್ಟಿಬ್ಯಾಡ್ಮಿಂಟನ್‌ಮೇರಿ ಕೋಮ್ಹರಿಹರ (ಕವಿ)ಮೊದಲನೆಯ ಕೆಂಪೇಗೌಡಪಂಜಾಬ್ಸ್ವಾಮಿ ವಿವೇಕಾನಂದಭರತನಾಟ್ಯನವೋದಯಫ್ರೆಂಚ್ ಕ್ರಾಂತಿಯೇಸು ಕ್ರಿಸ್ತಜಾತ್ರೆಚಂದನಾ ಅನಂತಕೃಷ್ಣಟಿ.ಪಿ.ಕೈಲಾಸಂಗೌತಮ ಬುದ್ಧಕರ್ನಾಟಕದ ತಾಲೂಕುಗಳುಸೂರ್ಯ ಗ್ರಹಣವಿತ್ತೀಯ ನೀತಿಶಿಶುನಾಳ ಶರೀಫರುಭಾರತದಲ್ಲಿ ಮೀಸಲಾತಿಬೆಂಗಳೂರುದ.ರಾ.ಬೇಂದ್ರೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಯೋನಿಸಮಾಜಶಾಸ್ತ್ರಮಡಿಲಗಣಕ ಅಥವಾ ಲ್ಯಾಪ್‌ಟಾಪ್ಸಂಭೋಗಪೆರಿಯಾರ್ ರಾಮಸ್ವಾಮಿಛತ್ರಪತಿ ಶಿವಾಜಿವಸಾಹತು ಭಾರತಏಲಕ್ಕಿಕಪ್ಪುಕೊಪ್ಪಳಸ್ತ್ರೀಭಾರತ ಬಿಟ್ಟು ತೊಲಗಿ ಚಳುವಳಿದಾಸ ಸಾಹಿತ್ಯಇಂಡಿಯನ್ ಪ್ರೀಮಿಯರ್ ಲೀಗ್ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿತೆರಿಗೆಭಾರತದ ಬಂದರುಗಳುಕೃಷಿ ಸಸ್ಯಶಾಸ್ತ್ರತಲೆಮಾವಂಜಿಕರ್ನಾಟಕಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿಭೂಕಂಪಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಹಿಂದೂ ಮಾಸಗಳುಗೃಹರಕ್ಷಕ ದಳರುಕ್ಮಾಬಾಯಿಡಿಎನ್ಎ -(DNA)ಜೋಳಕಲ್ಯಾಣ ಕರ್ನಾಟಕವಾಣಿಜ್ಯ ಪತ್ರ🡆 More