ರಬೀಉಲ್ ಅವ್ವಲ್

ರಬೀಉಲ್ ಅವ್ವಲ್ (ಅರಬ್ಬಿ: ربيع الأول) — ಹಿಜರಿ ಕ್ಯಾಲೆಂಡರ್‌ನ ತೃತೀಯ ತಿಂಗಳು.

ಈ ತಿಂಗಳಿಗೆ ಇಸ್ಲಾಮೀ ಧರ್ಮಶಾಸ್ತ್ರದಲ್ಲಿ ಯಾವುದೇ ವಿಶೇಷ ಮಹತ್ವವಿಲ್ಲದಿದ್ದರೂ ಈ ತಿಂಗಳಲ್ಲಿ ಮುಹಮ್ಮದ್ ಪೈಗಂಬರರು ಜನಿಸಿದ ಕಾರಣ ಈ ತಿಂಗಳಿಗೆ ಮಹತ್ವ ಕಲ್ಪಿಸಲಾಗುತ್ತದೆ.

ಅರ್ಥ

ಅರಬ್ಬಿ ಭಾಷೆಯಲ್ಲಿ ರಬೀಅ್ (ಅರಬ್ಬಿ: ربيع) ಎಂದರೆ ವಸಂತ. ಅವ್ವಲ್ (ಅರಬ್ಬಿ: الأول) ಎಂದರೆ ಪ್ರಥಮ. ರಬೀಉಲ್ ಅವ್ವಲ್ ಎಂದರೆ "ವಸಂತ ಕಾಲದ ಪ್ರಥಮ ತಿಂಗಳು". ಇದನ್ನು ಪ್ರಥಮ ತಿಂಗಳು ಎಂದು ಕರೆದಿರುವುದು ಏಕೆಂದರೆ ಇದರ ನಂತರ ರಬೀಉಲ್ ಆಖಿರ್ (ಅರಬ್ಬಿ: ربيع الآخر) "ವಸಂತ ಕಾಲದ ದ್ವಿತೀಯ ತಿಂಗಳು" ಬರುತ್ತದೆ. ಈ ತಿಂಗಳ ನಿಜವಾದ ಹೆಸರು ಶಹ್ರು ರಬೀಇನಿಲ್ ಅವ್ವಲು (ಅರಬ್ಬಿ: شهر ربيع الأول) ಎಂದು ಭಾಷಾಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಆದರೆ ಸಾಮಾನ್ಯವಾಗಿ ಇದನ್ನು ರಬೀಉಲ್ ಅವ್ವಲ್ ಎಂದು ಕರೆಯಲಾಗುತ್ತದೆ.

ಬಳಕೆ

ಅರಬ್ಬರು ಸಾಮಾನ್ಯವಾಗಿ ಮೂರು ತಿಂಗಳುಗಳಿಗೆ ಮಾತ್ರ ಶಹ್ರ್ (ಅರೇಬಿಕ್ شهر) ಎಂಬ ಪೂರ್ವ ಪ್ರತ್ಯಯವನ್ನು (prefix) ಸೇರಿಸುತ್ತಾರೆ. ರಮದಾನ್, ರಬೀಉಲ್ ಅವ್ವಲ್ ಮತ್ತು ರಬೀಉಲ್ ಆಖಿರ್. ಇತರ ತಿಂಗಳುಗಳಿಗೆ ಅವರು ಶಹ್ರ್ ಸೇರಿಸುವುದಿಲ್ಲ. ಈ ತಿಂಗಳಿಗೆ ಮೊತ್ತಮೊದಲು ನಾಮಕರಣ ಮಾಡುವಾಗ ಅದು ವಸಂತ ಕಾಲವಾಗಿದ್ದರಿಂದ ಇದಕ್ಕೆ ರಬೀಅ್ (ವಸಂತ) ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.

ಇದನ್ನೂ ನೋಡಿ

ಉಲ್ಲೇಖಗಳು

Tags:

ರಬೀಉಲ್ ಅವ್ವಲ್ ಅರ್ಥರಬೀಉಲ್ ಅವ್ವಲ್ ಬಳಕೆರಬೀಉಲ್ ಅವ್ವಲ್ ಇದನ್ನೂ ನೋಡಿರಬೀಉಲ್ ಅವ್ವಲ್ ಉಲ್ಲೇಖಗಳುರಬೀಉಲ್ ಅವ್ವಲ್ಹಿಜರಿ ಕ್ಯಾಲೆಂಡರು

🔥 Trending searches on Wiki ಕನ್ನಡ:

ಕ್ಷಯಉಪ್ಪಿನ ಸತ್ಯಾಗ್ರಹಕೃಷ್ಣದೇವರಾಯಅಗ್ನಿ(ಹಿಂದೂ ದೇವತೆ)ಕುವೆಂಪುಜ್ವರಕಾವೇರಿ ನದಿಭಾರತದ ವಿಜ್ಞಾನಿಗಳುಸಂವತ್ಸರಗಳುಕರ್ಣಗಣಿತನಾಟಕಹಂಪೆಸಂಸ್ಕೃತಮೀರಾಬಾಯಿಭಾರತದ ಆರ್ಥಿಕ ವ್ಯವಸ್ಥೆಚಿನ್ನಊಳಿಗಮಾನ ಪದ್ಧತಿಕನ್ನಡಬೆಂಗಳೂರುಕರ್ನಾಟಕದ ಏಕೀಕರಣಅರಬ್ಬೀ ಸಮುದ್ರಭಾರತದಲ್ಲಿ ಪಂಚಾಯತ್ ರಾಜ್ಭೂಮಿಯ ವಾಯುಮಂಡಲರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಔರಂಗಜೇಬ್ಬಸವೇಶ್ವರಉಡುಪಿ ಜಿಲ್ಲೆಪಂಜಾಬ್ಕನ್ನಡ ಸಾಹಿತ್ಯ ಪರಿಷತ್ತುಕೊಡವರುಕೇಶಿರಾಜಭಾರತದ ರೂಪಾಯಿಸೌರಮಂಡಲಶನಿನರೇಂದ್ರ ಮೋದಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಟೊಮೇಟೊಅಬೂ ಬಕರ್ಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್‌ಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಗೀಳು ಮನೋರೋಗಸಗಟು ವ್ಯಾಪಾರದ್ರಾವಿಡ ಭಾಷೆಗಳುಅಲೆಕ್ಸಾಂಡರ್ಮಂಗಳೂರುವ್ಯವಸಾಯಶಿರ್ಡಿ ಸಾಯಿ ಬಾಬಾವಿಜಯದಾಸರುಅಕ್ಬರ್ಅನುಭೋಗಹಣ್ಣುಪಂಚಾಂಗಅಂತರ್ಜಲಇಮ್ಮಡಿ ಬಿಜ್ಜಳಮಲೆನಾಡುಆರ್ಯ ಸಮಾಜತ್ರಿಕೋನಮಿತಿಯ ಇತಿಹಾಸವೃತ್ತಪತ್ರಿಕೆಅಲ್ಲಮ ಪ್ರಭುಭಗತ್ ಸಿಂಗ್ಚಾಲುಕ್ಯತೇಜಸ್ವಿನಿ ಗೌಡಜಾಗತಿಕ ತಾಪಮಾನ ಏರಿಕೆಗ್ರಹರಾಷ್ಟ್ರಕೂಟಮಕ್ಕಳ ಸಾಹಿತ್ಯದಿ ಡೋರ್ಸ್‌ಬಿಲ್ಹಣತೆರಿಗೆಪ್ರಜಾಪ್ರಭುತ್ವಕೆಂಪು ರಕ್ತ ಕಣಕನ್ನಡ ಸಾಹಿತ್ಯ ಪ್ರಕಾರಗಳುಜೀವಕೋಶಆತ್ಮಚರಿತ್ರೆಹಣಕರ್ನಾಟಕ ಲೋಕಸೇವಾ ಆಯೋಗ🡆 More