ಹೋಲೋಕಾಸ್ಟ್: ಅಡಾಲ್ಫ್ ಹಿಟ್ಲರ್ ನ ಹತ್ಯಾಕಾಂಡ

ಈ ಲೇಖನವನ್ನು ಕನ್ನಡ ಹೊರತುಪಡಿಸಿ ಬೇರೆ ಭಾಷೆಯಲ್ಲಿ ಬರೆಯಲಾಗಿದೆ article .

ಸರ್ವನಾಶ, ೨ನೇ ಮಹಾಯುದ್ಧದ ಸಂಧರ್ಭದಲ್ಲಿ ನಡೆದ ಒಂದು ಅತಿದೊಡ್ಡ  ನರಮೇಧ. ಜರ್ಮನ್ ನಾಜಿ ಆಳ್ವಿಕೆಯಡಿಯಲ್ಲಿ ಯಹೂದಿ ಜನಾಂಗದವರ ಸಮೂಹ ಹತ್ಯೆ. ಇದರಲ್ಲಿ ಸುಮಾರು ಆರು ಮಿಲಿಯನ್ ಯುರೋಪಿಯನ್ ಯಹೂದಿಗಳು ಕೊಲ್ಲಲ್ಪಟ್ಟರು. ಅಡಾಲ್ಫ್ ಹಿಟ್ಲರ್ನ ನಾಜಿ ಜರ್ಮನಿ ಮತ್ತು ಅದರ ವಿಶ್ವ ಸಮರ II ಸಹಯೋಗಿಗಳು ಇದರ ರೂವಾರಿಗಳು. 1.5 ಮಿಲಿಯನ್ ಮಕ್ಕಳು, ಮತ್ತು ೯ ಮಿಲಿಯನ್ ಯೂರೋಪಿನ ಯಹೂದಿಗಳ ೨/೩ ಭಾಗ ಇದರ ಸಂತ್ರಸ್ತರು. ಯಹೂದಿಗಳ್ಳದ ಸಂತ್ರಸ್ತರು ಅಂದರೆ: ರೊಮಾನಿ, ಪೋಲಿಷ್, ಜರ್ಮನಿಯ ಹಿಡಿತದಲ್ಲಿದ್ದ ಇತರೇ ದೇಶವಾಸಿಗಳು ಮತ್ತು [[ಅಕ್ಷನ್ ಟಿ೪]]-ನ ರೋಗಿಗಳು (ಮನೋರೋಗಿಗಳು ಹಾಗು ವಿಕಲಾಂಗರು). ಸಲಿಂಗಕಾಮಿಗಳು, ಯೆಹೋವನ ಸಾಕ್ಷಿಗಳು, ಕಪ್ಪುಜನಾಂಗಿಯದವರು, ರಾಜಕೀಯ ನಾಜಿ-ವಿರೋಧಿಗಳು ಮತ್ತು ಹಲವರು ಸಹ ಬಲಿಯಾದರು.

The Holocaust
Part of World War II
ಹೋಲೋಕಾಸ್ಟ್: ವಿಶಿಷ್ಟ ಲಕ್ಷಣಗಳು, ಮೂಲಕಾರಣ , Citations
ಹಂಗೇರಿಯಿನ ಯಾಹೂಡಿಯರನ್ನು ಅನಿಲ ಕೋಣೆಗಳಿಗೆ ಕಳುಹಿಸುವುದಕ್ಕಾಗಿ ಆಯ್ಕೆ ಔಶ್ವಿತ್ಸ್ ಏಕಾಗ್ರತೆ ಶಿಬಿರ, May/June 1944 (Auschwitz Album)
LocationNazi Germany and German-occupied territories
Date1941–1945
Targetಯೂರೋಪಿಯ ಯಹೂದಿಯರು— ಇತರ ಜನರು ಹತ್ಯಾಕಾಂಡದಲ್ಲಿ ಕೊಲ್ಲಲ್ಪಟ್ಟರು
Attack type
Genocide, ethnic cleansing, deportation, mass murder
Deathsaround 6,000,000 Jewish victims
somewhere over 9,000,000 other victims, perhaps more
PerpetratorsNazi Germany and its allies
No. of participants
200,000

1941ರಿಂದ 1945ವರೆಗೆ,ವ್ಯವಸ್ಥಿತವಾಗಿ ನಡೆದ ಕೊಲೆಗಳು  ಯಹೂದಿಗಳ ನರಮೇಧದ ಭಾಗವಾಗಿದ್ದು, ಯೂರೋಪಿನ ಇತಿಹಾಸದ ಅತಿ ದೊಡ್ಡ ಶೋಷಣೆಯಾಗಿ ದಾಖಲಾಗಿದೆ. ಶುಟ್ಜ್ಸ್ಟಾಫೆಲ್ (Runic "ᛋᛋ" / SS - ನಾಝೀ ಅರೆಸೈನಿಕ ತುಕಡಿ) ಸಹಾಯದೊಂದಿಗೆ, ನಾಝಿ ಪಾರ್ಟಿಯ ಉನ್ನತ ನಾಯಕತ್ವದ ನಿರ್ದೇಶನದ ಅಡಿಯಲ್ಲಿ ವ್ಯವಸ್ಥಿತ, ಸಾಮೂಹಿಕ ಹತ್ಯೆಗಳನ್ನು ಕೈಗೊಳ್ಳಲಾಯಿತು. ಜರ್ಮನ್-ಆಕ್ರಮಿತ ಯುರೋಪ್ನ ಉದ್ದಕ್ಕೂ, ಹಾಗೂ ಆಕ್ಸಿಸ್ ಶಕ್ತಿಗಳ  (ಜರ್ಮನಿ, ಇಟಲಿ ಮತ್ತು ಜಪಾನ್ ಮೈತ್ರಿಕೂಟ) ನಿಯಂತ್ರಣದಲ್ಲಿದ್ದ ಪ್ರದೇಶಗಳಲ್ಲಿಯೂ ಹತ್ಯೆಗಳು ವ್ಯಾಪಕವಾಗಿದ್ದವು.ಸುಮಾರು 42,500 ಬಂಧೀಖಾನೆ ಗಳಲ್ಲಿ  ಸಂತ್ರಸ್ತರನ್ನು  ಕೊಲ್ಲಲು ಒಟ್ಟುಮಾಡಿ, ಎಲ್ಲ ಮಾನವ ಹಕ್ಕುಗಳ  ಉಲ್ಲಂಘನೆ ನಡೆಯಿತು. ಇನ್ನು, ಹತ್ಯಾಕಾಂಡದ ದುಷ್ಕರ್ಮಿಗಳು ಸುಮಾರು 200,000 ಜನರು ಇರಬಹುದೆಂದು ಅಂದಾಜು.

ಈ ಮಹಾಹತ್ಯಾಕಾಂಡವನ್ನು ಹಲವು ಹಂತಗಳಲ್ಲಿ ಕೈಗೊಳ್ಳಲಾಯಿತಲ್ಲದೆ, ಜ್ಯೂಸರ ವಿರುದ್ದದ ನಕಾರಾತ್ಮಕ ಅಲೆಯ ಕೊನೆಯ ಮಜಲೆಂದು ಹೇಳಲಾಯಿತು. ೧೯೩೩ರಲ್ಲಿ  ಹಿಟ್ಲರ್ ಅಧಿಕಾರಕ್ಕೆ ಬಂದಂತೆಯೇ, ಜರ್ಮನ್ ಸರಕಾರ ಯಹೂದಿಗಳ ವಿರುದ್ಧ ಹಲವು ಕಾನೂನುಗಳನ್ನು ಜಾರಿಗೆ ತಂದಿತು.  ಅತ್ಯಂತ ಪ್ರಮುಖವಾಗಿ, ೧೯೩೫ರ ನ್ಯೂರೆಂಬರ್ಗ್ ಕಾನೂನುಗಳ ಮೂಲಕ ಇವರ ನಾಗರಿಕತ್ವ ಹಕ್ಕನ್ನು ನಿರ್ಬಂಧಿಸಲಾಯಿತು. ೧೯೩೩ರಿಂದ ಆರಂಭಿಸಿ ನಾಜಿಗಳು ಸೆರೆ ಶಿಬಿರಗಳನ್ನು, ರಾಜಕೀಯ ವಿರೋಧಿಗಳು ಮತ್ತು 'ಅನಪೇಕ್ಷಿತ' ಜನರಿಗಾಗಿ ತೆರೆಯಲಾಯಿತು. ೧೯೩೯ರ ಪೋಲೆಂಡ್ ದಾಳಿಯ  ನಂತರ, ಯಹೂದಿಗಳನ್ನು ಇತರೇ ನಾಗರಿಕರಿಂದ ಬೇರ್ಪಡಿಸಲು ನಾಜಿ ಘೆಟ್ಟೋ-ಗಳ ನಿರ್ಮಾಣಕ್ಕೆ, ಹಾಗೂ   ಮಹಾನ್ ಜರ್ಮನ್ ಸಾಮ್ರಾಜ್ಯ (ರೀಚ್)ದಿಂದ ನಿರ್ಮೂಲನೆಗೊಳಿಸಲು ಅಡಿಗಲ್ಲು ಹಾಕಿತು. ೧೯೪೧ರಲ್ಲಿ  ಆಪರೇಷನ್ ಬಾರ್ಬೊಸಾ ಮೂಲಕ ಇನ್ನೂ ಹಲವು ಪೂರ್ವ ಪ್ರದೇಶಗಳನ್ನು ವಶಪಡಿಸಿಕೊಂದಂತೆಲ್ಲ, ಯಹೂದೀ ವಿರೋಧಿ ನೀತಿಗಳನ್ನು ಬಲಗೊಳಿಸಲಾಯಿತು. Einsatzgruppen ಎಂಬ ವಿಶೇಷ ಅರೆಸೈನಿಕ ಘಟಕಗಳು, ಒಂದು ವರ್ಷಕ್ಕಿಂತ ಕಡಿಮೆ ಸಮಯದಲ್ಲಿ, ಸುಮಾರು ಎರಡು ಮಿಲಿಯನ್ ಯಹೂದ್ಯರ ಮೇಲೆ ಸಾಮೂಹಿಕ ಗುಂಡಿನ ಮಳೆಗರೆದರು. ೧೯೪೨ರ ಮಧ್ಯದಲ್ಲಿ, ಘೆಟ್ಟೋ ಗಳಿಂದ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು  ಹತ್ಯಾಕಾಂಡದ ರೈಲುಗಳಲ್ಲಿ  ನಿರ್ನಾಮ ಶಿಬಿರಗಳಿಗೆ  ಗಡೀಪಾರು ಮಾಡಲಾಯಿತು. ಸಾವಿರಾರು ಜನರು ಈ ಪ್ರಯಾಣ ಮುಗಿಸುವ ಮೊದಲೇ ಕಣ್ಮುಚ್ಚಿದರು. ಏಪ್ರಿಲ್–ಮೇ ೧೯೪೫ರಲ್ಲಾದ   ೨ನೇ ಮಹಾಸಂಗ್ರಾಮದ ಅಂತ್ಯದವರೆಗೂ ಈ ಅನ್ಯಾಯ ಮುಂದುವರೆಯಿತು.

ಇಷ್ಟೆಲ್ಲಾ ಅನ್ಯಾಯ ನಡೆಯುತ್ತಿದ್ದಾಗ, ಜ್ಯೂಸರು ಒಂದಾಗಿ ನಾಝಿಗಳ ವಿರುದ್ಧ ಹೋರಾಡಲಿಲ್ಲವೇ ಎಂಬ ಕುತೂಹಲ ಮೂಡುವುದು ಸಹಜ. ಸುಮಾರು ೧೦೦ ಸ್ಥಳಗಳಲ್ಲಿ ನಾಝಿಗಳನ್ನು ಎದುರಿಸುವ ಪ್ರಯತ್ನವನ್ನೆಂತೂ, ಯಹೂದಿಗಳು ಕೈಗೊಂಡರು. ಆದರೆ, ಹೆಚ್ಚಿನವರು ಸಾಮಾನ್ಯ ವರ್ತಕರಾಗಿದ್ದರಿಂದ ಅವರ ಬಳಿ ಸಂಪನ್ಮೂಲಗಳ ಕೊರತೆ ಹೆಚ್ಚಾಗಿತ್ತು.   ಅತ್ಯಂತ ಗಮನಾರ್ಹವಾದದ್ದು  ವಾರ್ಸಾ ಘೆಟ್ಟೋ ಅಪ್ರೈಸಿಂಗ್ (೧೯೪೩): ಸಾವಿರಾರು ಯಹೂದಿ ಹೋರಾಟಗಾರರು Waffen-SS ಕೊಲ್ಲಿಯಲ್ಲಿ ನಾಲ್ಕು ವಾರಗಳ ಕಾಲ ಒಂದಾಗಿದ್ದರು . ಅಂದಾಜು 20,000–30,000 ಯಹೂದಿಗಳು ಸಕ್ರಿಯವಾಗಿ ಹೋರಾಡಿದರು. ಫ್ರೆಂಚ್ ಯಹೂದಿಗಳು ಫ್ರೆಂಚ್ ಪ್ರತಿರೋಧದಲ್ಲಿ ಭಾಗವಹಿಸಿದರು. ಕನಿಷ್ಠ ೧೯ ಗುಲಾಮೀ ಕಾರ್ಮಿಕ ಶಿಬಿರಗಳಲ್ಲಿ, ದಂಗೆಯೆದ್ದಿದ್ದರು.

ವಿಶಿಷ್ಟ ಲಕ್ಷಣಗಳು

ಹೋಲೋಕಾಸ್ಟ್: ವಿಶಿಷ್ಟ ಲಕ್ಷಣಗಳು, ಮೂಲಕಾರಣ , Citations 
ನಿರ್ನಾಮ ಶಿಬಿರಗಳಿಗೆ ಸಾಗಿಸುವ ಮುಂದೆ, ಜ್ಯೂಸ್ ರನ್ನು ಹಿಡಿದಿಡಲು ಘೆಟ್ಟೋಸ್ ಗಳನ್ನು ಸ್ಥಾಪಿಸಲಾಯಿತು.

ಮೂಲಕಾರಣ 

ಯೆಹೂದ್ಯ ವಿರೋಧಿ ಅಲೆ ಮತ್ತು ವರ್ಣಭೇದ

ಮಧ್ಯಯುಗದುದ್ದಕ್ಕೂ ಯುರೋಪ್ನಲ್ಲಿ, ಯಹೂದಿಗಳು ಪಕ್ಷಪಾತಕ್ಕೆ  ಒಳಗಾಗುತ್ತಾರೆ. ಕ್ರಿಶ್ಚಿಯನ್ ದೇವಶಾಸ್ತ್ರವನ್ನು ಆಧರಿಸಿ, ಯೇಸುವನ್ನು ಕೊಂದವರೆಂದು ದೂಷಿಸಲಾಯಿತು. ಹಲವಾರು ಸುಧಾರಣಾ ಚಳುವಳಿಗಳ ನಂತರವೂ, ಕಿರುಕುಳ ನಿಲ್ಲಲಿಲ್ಲ.

೧೯ನೇ ಶತಮಾನದ ಪ್ರಥಮಾರ್ಧದಲ್ಲಿ,  ಹೂಸ್ಟನ್ ಸ್ಟೀವರ್ಟ್ Chamberlain ಮತ್ತು ಪಾಲ್ ಡಿ ಲಾಗರ್ಡ್ ಇಂತಹ ಚಿಂತಕರು ಜನಸಾಮಾನ್ಯರ ಹಿತಾಸಕ್ತಿಯ ಚಳುವಳಿಯ (völkisch ತತ್ವಗಳ ಆಧಾರಿತ) ಚಿಂತನೆಯನ್ನು ಮಂಡಿಸಿದರು. ಇದು, ಒಂದು ಹುಸಿ-ವೈಜ್ಞಾನಿಕ, ವರ್ಣಭೇದ ಆಧಾರಿತವಾದದ್ದಾಗಿದ್ದು, ಯಹೂದಿಗಳು, ಆರ್ಯನ್ ಜನಾಂಗದೊಂದಿಗೆ ವಿಶ್ವ ವಿಜಯಕ್ಕಾಗಿ ಹೋರಾಡುತ್ತಿದ್ದಾರೆ ಎಂಬ ಸಂದೇಶವನ್ನು ಹೊರಹಾಕಿತು.

ಹೋಲೋಕಾಸ್ಟ್: ವಿಶಿಷ್ಟ ಲಕ್ಷಣಗಳು, ಮೂಲಕಾರಣ , Citations 
ಯೆಹೂದ್ಯ ವಿರೋಧಿ ಜರ್ಮನಿ: SA ಯ ಜನರು ಯಹೂದಿ ವ್ಯವಹಾರಗಳಿಗೆ ರಾಷ್ಟ್ರೀಯ ಬಹಿಷ್ಕಾರಕ್ಕೆ ಕರೆ ಕೊಡುತ್ತಿರುವುದು.   ಇಸ್ರೇಲ್ ಡಿಪಾರ್ಟ್ಮೆಂಟಲ್ ಸ್ಟೋರ್ ಬರ್ಲಿನ್ನ ಹೊರಗೆ, ೧ ಏಪ್ರಿಲ್ ೧೯೩೩. "ಜರ್ಮನ್ನರೇ! ನಿಮ್ಮನ್ನು ನೀವೆ ರಕ್ಷಿಸಿಕೊಳ್ಳಿ! ಯಹೂದಿಗಳಿಂದ ಖರೀದಿ ಮಾಡಬೇಡಿ"

ಜರ್ಮನ್ ಸಾಮ್ರಾಜ್ಯದಲ್ಲಿ, völkisch ತತ್ವಗಳನ್ನು ಮತ್ತು ಹುಸಿ ವೈಜ್ಞಾನಿಕ ವರ್ಣಭೇದವನ್ನು ಸಾಮಾನ್ಯ ಎಂದು ಒಪ್ಪಿಕೊಳ್ಳಲಾಗಿತ್ತು. ವೃತ್ತಿಪರ ತರಗತಿಗಳು ಸಹ ವರ್ಣಭೇದ ನೀತಿಯನ್ನು  ಅನುಸರಿಸುತ್ತಿದ್ದವು. ಮೊದಲಿಗೆ völkisch ಪಕ್ಷಗಳಿಗೆ  ಚುನಾವಣೆಗಳಲ್ಲಿ ಬೆಂಬಲ ದೊರೆತರೂ, 1914ರ ಸುಮಾರಿಗೆ  ಅಪ್ರಭಾವಿಯಾಗಿದ್ದರು. ಇದು ಯೆಹೂದ್ಯ ಪಕ್ಷಪಾತದ ಕೊನೆ ಎಂದೆನಿಸಿದರೂ, ಮುಖ್ಯವಾಹಿನಿ ರಾಜಕೀಯ ಪಕ್ಷಗಳು ಇದನ್ನು ಅಳವಡಿಸಿಕೊಂಡವು.

Notes

Citations

Tags:

ಹೋಲೋಕಾಸ್ಟ್ ವಿಶಿಷ್ಟ ಲಕ್ಷಣಗಳುಹೋಲೋಕಾಸ್ಟ್ ಮೂಲಕಾರಣ ಹೋಲೋಕಾಸ್ಟ್ Citationsಹೋಲೋಕಾಸ್ಟ್meta:List of Wikipedias

🔥 Trending searches on Wiki ಕನ್ನಡ:

ವಿವಾಹಜಾತ್ರೆಹಿಂದೂ ಧರ್ಮಅಲಾವುದ್ದೀನ್ ಖಿಲ್ಜಿಪೈಥಾಗರಸ್ಪಿತ್ತಕೋಶಗೋಪಾಲಕೃಷ್ಣ ಅಡಿಗದೂರದರ್ಶನಕನ್ನಡ ಕಾಗುಣಿತಭರತೇಶ ವೈಭವದಕ್ಷಿಣ ಭಾರತದ ಇತಿಹಾಸಉತ್ತರ ಪ್ರದೇಶವಿದ್ಯಾರ್ಥಿಪಾಕಿಸ್ತಾನಹುಣಸೆಕೋರೇಗಾಂವ್ ಯುದ್ಧಎ.ಎನ್.ಮೂರ್ತಿರಾವ್ಹಲಸುಅಕ್ಕಮಹಾದೇವಿಹರಿಹರ (ಕವಿ)ಪು. ತಿ. ನರಸಿಂಹಾಚಾರ್ಮಣ್ಣುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಯಣ್ ಸಂಧಿಮೈಸೂರು ದಸರಾಒಂದನೆಯ ಮಹಾಯುದ್ಧನಿರುದ್ಯೋಗಕಾದಂಬರಿಇಬ್ಬನಿತೋಟಗಾರಿಕೆಕೊಡಗಿನ ಗೌರಮ್ಮಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಭಾರತದ ಬಂದರುಗಳುಉಡತಾಳಗುಂದ ಶಾಸನಭಾರತೀಯ ಶಾಸ್ತ್ರೀಯ ನೃತ್ಯಯಕ್ಷಗಾನದ್ವಿರುಕ್ತಿನೇಮಿಚಂದ್ರ (ಲೇಖಕಿ)ಭಾರತದ ರಾಷ್ಟ್ರಪತಿಕರ್ನಾಟಕದ ತಾಲೂಕುಗಳುಡಾ ಬ್ರೋಕವಿಗಳ ಕಾವ್ಯನಾಮಬೆಳವಲಏಪ್ರಿಲ್ ೧೪ಭಾರತದ ಸ್ವಾತಂತ್ರ್ಯ ದಿನಾಚರಣೆಪರ್ವತಜೈಜಗದೀಶ್ಕನ್ನಡ ಸಾಹಿತ್ಯ ಸಮ್ಮೇಳನಸಾರಾ ಅಬೂಬಕ್ಕರ್ಧರ್ಮಸಾಮ್ರಾಟ್ ಅಶೋಕಹನುಮಂತಹಂಸಲೇಖಭಾರತದ ಸಂವಿಧಾನ ರಚನಾ ಸಭೆಸವದತ್ತಿರಾಮವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭಾರತದಲ್ಲಿ ಬಡತನಜವಾಹರ‌ಲಾಲ್ ನೆಹರುಸ್ನೇಹಿತರು (ಚಲನಚಿತ್ರ)ವಶೀಕರಣ ಶಕ್ತಿಇಮ್ಮಡಿ ಪುಲಿಕೇಶಿಕನ್ನಡ ಬರಹಗಾರ್ತಿಯರುರಾಜಧಾನಿಗಳ ಪಟ್ಟಿಸಜ್ಜೆಗಾಯಕನ್ನಡದಲ್ಲಿ ಸಣ್ಣ ಕಥೆಗಳುಟಿಪ್ಪು ಸುಲ್ತಾನ್ಮಹಾಭಾರತಭಾರತದ ಸರ್ವೋಚ್ಛ ನ್ಯಾಯಾಲಯಉಪ್ಪಿನ ಸತ್ಯಾಗ್ರಹಕೇಟೀ ಜಾರ್ಜ್ಕರ್ನಾಟಕ ಲೋಕಸೇವಾ ಆಯೋಗಆಯ್ದಕ್ಕಿ ಲಕ್ಕಮ್ಮತಾಪಮಾನಪ್ರಬಂಧ ರಚನೆಭಾರತದಲ್ಲಿನ ಚುನಾವಣೆಗಳು🡆 More