ಲಿಯೊ ಟಾಲ್‍ಸ್ಟಾಯ್

ಕೌಂಟ್ ಲಿಯೋ ಟಾಲ್‍ಸ್ಟಾಯ್ (ಸೆಪ್ಟೆಂಬರ್ ೯, ೧೮೨೮ — ನವೆಂಬರ್ ೨೦, ೧೯೧೦) (Лев Никола́евич Толсто́й, ಉಚ್ಛಾರಣೆ (ಸಹಾಯ·ಮಾಹಿತಿ)), ರಷ್ಯಾದ ಒಬ್ಬ ಸಾಹಿತಿ.

ಲಿಯೊ ಟಾಲ್‍ಸ್ಟಾಯ್
ಲಿಯೊ ಟಾಲ್‍ಸ್ಟಾಯ್
ಲಿಯೊ ಟಾಲ್‍ಸ್ಟಾಯ್
ಜನನ: ಸೆಪ್ಟೆಂಬರ್ ೯, ೧೮೨೮
ಜನನ ಸ್ಥಳ: ಯಸ್ನಾಯ ಪೊಲ್ಯಾನ, ರಷ್ಯಾ ಸಾಮ್ರಾಜ್ಯ
ನಿಧನ:ನವೆಂಬರ್ ೨೦, ೧೯೧೦
ಆಸ್ಟಪೊವೊ, ರಷ್ಯಾ ಸಾಮ್ರಾಜ್ಯ
ವೃತ್ತಿ: ಲೇಖಕ
ಸಾಹಿತ್ಯದ ವಿಧ(ಗಳು):
ನೈಜ ಸಾಹಿತ್ಯ
ಪ್ರಮುಖ ಕೃತಿ:ವಾರ್ ಅಂಡ್ ಪೀಸ್
ಆನ್ನಾ ಕರೆನೀನ
ಪ್ರಭಾವಗಳು:ಅಲೆಕ್ಸಾಂಡರ್ ಪುಷ್ಕಿನ್, ಪ್ಲೇಟೊ, ಜಾನ್-ಜಾಕ್ ರೂಸೊ, ನಿಕೊಲಾಯ್ ಗೊಗೊಲ್, ಇತ್ಯಾದಿ
ಪ್ರಭಾವಿತರು:ಮಹಾತ್ಮ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ಜೂನಿಯರ್, ಲುಡ್ವಿಗ್ ವಿಟ್ಜೆನ್‍ಸ್ಟೈನ್, ಇತ್ಯಾದಿ
ಲಿಯೊ ಟಾಲ್‍ಸ್ಟಾಯ್
ಲಿಯೊ ಟಾಲ್‍ಸ್ಟಾಯ್

ಟಾಲ್ ಸ್ಟಾಯ್,ರವರ ಪೂರ್ವ ವೃತ್ತಾಂತ, ಹಾಗೂ ಅವರ ವೃತ್ತಿ-ಜೀವನ :

ಟಾಲ್ ಸ್ಟಾಯ್, "ಯಾಸ್ನ್ಯಾ ಪೊಲ್ಯಾನ," ಎಂಬ ಹಳ್ಳಿಯಲ್ಲಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಟಾಲ್ ಸ್ಟಾಯ್ ಹೆಸರಿನ ಹಿಂದೆ 'ಕೌಂಟ್,' ಅನ್ನುವ ಶಬ್ದ ಸೇರುವುದು ಈ ಕಾರಣದಿಂದಾಗಿ] ಬಾಲ್ಯದಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡ ಟಾಲ್ ಸ್ಟಾಯ್, ಸಾವು-ನೋವುಗಳ ಬಗ್ಗೆ ಆಗಲೇ ತಾತ್ವಿಕ ಚಿಂತನೆ ನಡೆಸಿದ್ದರು. ಕಜಾನ್ ವಿಶ್ವವಿದ್ಯಾಲಯ,ದಲ್ಲಿ ಕಾನೂನು ಅಭ್ಯಾಸಮಾಡಲು ಹೋದ ಟಾಲ್ ಸ್ಟಾಯ್ ಅದನ್ನು, ಅರ್ಧಕ್ಕೇ ಕೈಬಿಟ್ಟು ಊರಿಗೆ ಮರಳಿದರು. ಮನೆಯ ಆಸ್ತಿಪಾಲಾದಾಗ, ಟಾಲ್ ಸ್ಟಾಯ್ ರವರ ಪಾಲಿಗೆ, ೫,೪೦೦ ಎಕರೆ ಭೂಮಿ, ಮತ್ತು ೩೩೦ ಜೀತದಾಳುಗಳು ಬಂದಿದ್ದರು !

ಟಾಲ್ ಸ್ಟಾಯ್, ಸ್ವಲ್ಪಕಾಲ ಕೃಷಿ ಮಾಡಿಸಲು ತೊಡಗಿದ್ದರು. ಹಳ್ಳಿಯ ಮಕ್ಕಳಿಗಾಗಿ ಶಾಲೆ ತೆರೆದರು. ಮತ್ತೆ ಹಳ್ಳಿ ಬಿಟ್ಟು ಸೈನ್ಯಕ್ಕೆ ಸೇರಿದರು. ಈ ಅವಧಿಯಲ್ಲಿ ಅವರಿಗೆ ಕೆಲವು ದುಶ್ಚಟಗಳಿದ್ದವು. ಕೊನೆಗೆ, ತಮ್ಮ ಅದುವರೆಗಿನ ಜೀವನದ ಬಗ್ಗೆ ಪಶ್ಚಾತ್ತಾಪಪಟ್ಟುಕೊಂಡು 'ಸೋನ್ಯ', ಎಂಬವಳನ್ನು ಮದುವೆಯಾಗಿ ಹಳ್ಳಿಗೆ ಹಿಂದಿರುಗಿದರು. ಅವರ ಮುಂದಿನ ಜೀವನವನ್ನೆಲ್ಲ ಹಳ್ಳಿಗರ ಉದ್ಧಾರಕ್ಕಾಗಿ ಮೀಸಲಾಗಿಟ್ಟರು.

ಅವರು ತಮ್ಮನ್ನು ತಾವೇ, "ಋಷಿ," ಯೆಂದು ಭಾವಿಸಿಕೊಂಡು ಅದರಂತೆ ಬದುಕಲು ಪ್ರಯತ್ನಿಸಿದರು. ಕೊನೆಗೆ ಮನೆಬಿಟ್ಟು ಬೈರಾಗಿಯಂತೆ ದೇಶಾಂತರ ಹೋಗಿಟಾಲ್ ಸ್ಟಾಯ್, ತಮ್ಮ ಎರಡು ಕಾದಂಬರಿಗಳು, 'ವಾರ್ ಅಂಡ್ ಪೀಸ್,' [೧೮೬೩-೬೯] ಮತ್ತು ಅನ್ನಾ ಕರೆನಿನಾ' [೧೮೭೫-೭೭] ಮತ್ತು ಸಣ್ಣಕತೆಗಳಿಂದಾಗಿ ಸಾಹಿತ್ಯ ಲೋಕದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ನೀಳ್ಗತೆಗಳು, ಮಕ್ಕಳಿಗಾಗಿ ನಿರೂಪಿಸಿದ ಕಥೆಗಳು, ಹೀಗೆ ಅವರ ಸಾಹಿತ್ಯಸೃಷ್ಟಿ, ಇತರ ಪ್ರಕಾರಗಳಲ್ಲೂ ನಡೆದಿದೆ. ಕೊನೆಗೆ ಅವರು, ರೈಲು ನಿಲ್ದಾಣವೊಂದರಲ್ಲಿ ಕೊನೆಯುಸಿರೆಳೆದರು.


ಟಾಲ್ ಸ್ಟಾಯ್ ಅವರ ಇಪ್ಪತ್ತುಮೂರು ಸಣ್ಣಕತೆಗಳು ವಿಶಿಷ್ಟವಾಗಿವೆ. ಇವುಗಳನ್ನು ಅವರು 'ಮಕ್ಕಳ ಕಥೆಗಳು' ಜನಪ್ರಿಯ ಕಥೆಗಳು, ಒಂದು ಅಪ್ಸರ ಕಥೆ, ಚಲನಚಿತ್ರಗಳಿಗೆ ಬರೆದ ಕಥೆ, ಜಾನಪದ ಕಥೆಗಳ ಮರುನಿರೂಪಣೆ, ಫ್ರೆಂಚಿನಿಂದ ಅನುವಾದಿಸಿದ ಕಥೆಗಳು. ಮತ್ತು ಪೀಡಿಗೆಗೊಳಗಾದ ಯೆಹೂದ್ಯರ ಸಹಾಯಕ್ಕಾಗಿ ಬರೆದುಕೊಟ್ಟ ಕಥೆಗಳು-ಎಂಬ ವಿಭಾಗಗಳಲ್ಲಿ ವಿಂಗಡಿಸಿಕೊಟ್ಟಿದ್ದಾರೆ.

ಈ ಕಥೆಗಳು ಹಿಂದಿನ ಕಾಲದ ಸಾಂಪ್ರದಾಯಿಕ ಕಥೆಗಳೋ ಏನೋ ಅನ್ನುವಂತಹ ಸನ್ನಿವೇಶವನ್ನು ಹೊಂದಿವೆ ; ಆದರೆ ಮಾನವನ ಸಾರ್ವಕಾಲಿಕ ಸುಖದುಃಖಗಳಿಗೆ ಮಾದರಿಯಾಗಿವೆ, ಜೊತೆಗೆ ಓದುಗರಿಗೆ ಮಾರ್ಗದರ್ಶಕವಾಗಿವೆ.

೧೯೩೪ ರಲ್ಲಿ, ಶ್ರೀ ಎಲ್. ಗುಂಡಪ್ಪ ನವರು, ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಗಳನ್ನು ಕನ್ನಡ ಪುಸ್ತಕಪ್ರಾಧಿಕಾರ, ಮರು ಮುದ್ರಿಸಿದಾಗ ಮಲ್ಲೇಪುರಂ ವೆಂಕಟೇಶ ರು, ಬೆನ್ನುಡಿಯಲ್ಲಿ ಹೇಳಿದ ಮಾತುಗಳು : " ಟಾಲ್ ಸ್ಟಾಯ್ ಅವರು ಸುಸಂಸ್ಕೃತ ಮನೋಧರ್ಮ, ಅವರ ಧಾರ್ಮಿಕ ನಂಬಿಕೆ, ಜನಪರ ಮನಸ್ಸು, ಉದಾರವಾದ ಮಾನವೀಯತೆ-ಇವೆಲ್ಲವೂ, ಈ ಕಥೆಗಳಲ್ಲಿ ಹರಡಿಕೊಂಡಿವೆ."

ಟಾಲ್ ಸ್ಟಾಯ್,ರವರ ಅತ್ಯಂತ ಪ್ರಮುಖ ಕಾದಂಬರಿಗಳು :

  • How Much Land Does a Man Need ? (ಕಥೆ)
  • ಅನ್ನಾ ಕರೆನಿನಾ
  • ವಾರ್ ಅಂಡ್ ಪೀಸ್ - ಇದು ಸುಮಾರು ೧೫೦೦ ಪುಟಗಳ ಕಾದಂಬರಿಯಾಗಿದ್ದು ಜೀವನದ ವೈಶಾಲ್ಯವನ್ನು ಮತ್ತು ಎಲ್ಲ ಬಗೆಯ ನೋವುನಲಿವುಗಳನ್ನು ಸ್ಪಷ್ಟವಾಗಿ ಮತ್ತು ರಸವತ್ತಾಗಿ ಈಕಾದಂಬರಿಯಷ್ಟು ಬೇರಾವ ಕಾದಂಬರಿಯೂ ತೋರಿಸುವುದಿಲ್ಲ. ಇದರ ಸಂಗ್ರಹವನ್ನು ಇಲ್ಲಿ - 'ಪುಸ್ತಕ ಸಂಗ್ರಹ' ವಿಭಾಗದಲ್ಲಿ ಓದಬಹುದು
  • ರೀಸರ್ರೆಕ್ಷನ್ ( ಇದು 'ಪುನರ್ಜನ್ಮ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದವಾಗಿದೆ)

ಹೆಚ್ಚಿನ ಮಾಹಿತಿಗೆ

ಹೊರಗಿನ ಕೊಂಡಿ

Tags:

ಲಿಯೊ ಟಾಲ್‍ಸ್ಟಾಯ್ ಟಾಲ್ ಸ್ಟಾಯ್,ರವರ ಪೂರ್ವ ವೃತ್ತಾಂತ, ಹಾಗೂ ಅವರ ವೃತ್ತಿ-ಜೀವನ :ಲಿಯೊ ಟಾಲ್‍ಸ್ಟಾಯ್ ಟಾಲ್ ಸ್ಟಾಯ್,ರವರ ಅತ್ಯಂತ ಪ್ರಮುಖ ಕಾದಂಬರಿಗಳು :ಲಿಯೊ ಟಾಲ್‍ಸ್ಟಾಯ್ ಹೆಚ್ಚಿನ ಮಾಹಿತಿಗೆಲಿಯೊ ಟಾಲ್‍ಸ್ಟಾಯ್ ಹೊರಗಿನ ಕೊಂಡಿಲಿಯೊ ಟಾಲ್‍ಸ್ಟಾಯ್Ru-Lev Nikolayevich Tolstoy.oggw:Wikipedia:Media helpಈ ಧ್ವನಿಯ ಬಗ್ಗೆಚಿತ್ರ:Ru-Lev Nikolayevich Tolstoy.oggನವೆಂಬರ್ ೨೦ರಷ್ಯಾಸೆಪ್ಟೆಂಬರ್ ೯೧೮೨೮೧೯೧೦

🔥 Trending searches on Wiki ಕನ್ನಡ:

ಜಾತ್ಯತೀತತೆಬ್ಯಾಂಕಿಂಗ್ ವ್ಯವಸ್ಥೆಭಾರತದಲ್ಲಿನ ಶಿಕ್ಷಣಭಾರತೀಯ ಸಂಸ್ಕೃತಿಹತ್ತಿಎನ್ ಆರ್ ನಾರಾಯಣಮೂರ್ತಿಭಾರತದ ಬುಡಕಟ್ಟು ಜನಾಂಗಗಳುಆನೆನಾಗವರ್ಮ-೧ಕೊರಿಯನ್ ಯುದ್ಧಕಾಜೊಲ್ತತ್ತ್ವಶಾಸ್ತ್ರನೀರುಶಿವಮೊಗ್ಗಕಳಿಂಗ ಯುದ್ದ ಕ್ರಿ.ಪೂ.261ಗಾದೆಮೇರಿ ಕೋಮ್ರಂಜಾನ್ಭಾರತದ ಆರ್ಥಿಕ ವ್ಯವಸ್ಥೆರಿಕಾಪುಹನುಮಾನ್ ಚಾಲೀಸಭಾಷೆಅಂತಿಮ ಸಂಸ್ಕಾರಗುರು (ಗ್ರಹ)ಪ್ರಬಂಧಮುದ್ದಣರೋಸ್‌ಮರಿಐಹೊಳೆಶ್ರೀವಿಜಯಕನ್ನಡ ವ್ಯಾಕರಣನಾಟಕಪ್ಲಾಸಿ ಕದನಗೀತಾ ನಾಗಭೂಷಣಗೋವಭಾರತೀಯ ಮೂಲಭೂತ ಹಕ್ಕುಗಳುಕರ್ನಾಟಕದ ಮುಖ್ಯಮಂತ್ರಿಗಳುನಾಗರೀಕತೆಕನ್ನಡದಲ್ಲಿ ನವ್ಯಕಾವ್ಯಶೀತಲ ಸಮರಸಾವಿತ್ರಿಬಾಯಿ ಫುಲೆಹಳೆಗನ್ನಡವಿನಾಯಕ ಕೃಷ್ಣ ಗೋಕಾಕಕಾದಂಬರಿಮಾಟ - ಮಂತ್ರಅದಿಲಾಬಾದ್ ಜಿಲ್ಲೆಗದ್ದಕಟ್ಟುಡಿ. ದೇವರಾಜ ಅರಸ್ಅಭಿಮನ್ಯುದಿಕ್ಸೂಚಿಮಣ್ಣಿನ ಸವಕಳಿಶ್ರೀಕೃಷ್ಣದೇವರಾಯವರ್ಣತಂತು (ಕ್ರೋಮೋಸೋಮ್)ಕಪಾಲ ನರಶೂಲೆಬ್ಯಾಡ್ಮಿಂಟನ್‌ಕರ್ನಾಟಕ ಜನಪದ ನೃತ್ಯಉಡುಪಿ ಜಿಲ್ಲೆಯು.ಆರ್.ಅನಂತಮೂರ್ತಿವಸಾಹತುಕನ್ನಡದಲ್ಲಿ ವಚನ ಸಾಹಿತ್ಯಕನ್ನಡ ಸಾಹಿತ್ಯ ಪ್ರಕಾರಗಳುವಾಟ್ಸ್ ಆಪ್ ಮೆಸ್ಸೆಂಜರ್ಜಾಗತಿಕ ತಾಪಮಾನಸೌರಮಂಡಲಕನ್ನಡ ರಂಗಭೂಮಿಛಂದಸ್ಸುತುಂಬೆಗಿಡಭಾರತದ ಮಾನವ ಹಕ್ಕುಗಳುನಾಯಕನಹಟ್ಟಿಶಾಂತಕವಿಬೇವುಒಲಂಪಿಕ್ ಕ್ರೀಡಾಕೂಟಲೆಕ್ಕ ಪರಿಶೋಧನೆಭಾರತದ ರಾಷ್ಟ್ರೀಯ ಚಿಹ್ನೆರವೀಂದ್ರನಾಥ ಠಾಗೋರ್ಮೈಟೋಕಾಂಡ್ರಿಯನ್ಕಾಳಿಗೌತಮ ಬುದ್ಧಪಂಚಾಂಗ🡆 More