ದ್ವೀಪ ಜಾವಾ

Java
Native name: Jawa
ದ್ವೀಪ ಜಾವಾ
Topography of Java
ದ್ವೀಪ ಜಾವಾ
Geography
LocationSoutheast Asia
Coordinates7°30′10″S 111°15′47″E / 7.50278°S 111.26306°E / -7.50278; 111.26306
ArchipelagoGreater Sunda Islands
ವಿಸ್ತೀರ್ಣಟೆಂಪ್ಲೇಟು:Km2 to mi2
Area rank೧೩th
ಸಮುದ್ರ ಮಟ್ಟದಿಂದ ಎತ್ತರಟೆಂಪ್ಲೇಟು:M to ft
ಸಮುದ್ರ ಮಟ್ಟದಿಂದ ಎತ್ತರದ ಸ್ಥಳSemeru
Country
Largest cityJakarta
Demographics
Population೧೨೪ million (as of ೨೦೦೫)
ಸಾಂದ್ರತೆ೯೩೯
Ethnic groupsJavanese, Sundanese, Chinese, Tenggerese, Baduy, Osing, Bantenese, Cirebonese, Betawi, Madurese

ಜಾವಾ ದ್ವೀಪ

ಜಾವಾ ವು (ಇಂಡೋನೇಷ್ಯಾದ:Jawa) ಇಂಡೋನೇಷಿಯಾದಲ್ಲಿನ ಒಂದು ದ್ವೀಪವಾಗಿದೆ ಮತ್ತು ಇದರ ರಾಜಧಾನಿಯು ಜಕಾರ್ತಾ. ಒಂದು ಕಾಲದಲ್ಲಿ ಇದು ಹಿಂದು-ಬೌದ್ಧೀಯರ ರಾಜ್ಯಗಳ, ಇಸ್ಲಾಮಿಕ್ ಸುಲ್ತಾನೇಟ್ಸ್‌ನ ಹಾಗೂ ವಸಾಹತಿಗರಾದ ಡಚ್ ಈಸ್ಟ್ ಇಂಡೀಸ್ ಪ್ರಮುಖ ಕೇಂದ್ರವಾಗಿತ್ತು, ಈಗ ಜಾವಾವು ಇಂಡೊನೇಷಿಯಾದ ಆರ್ಥಿಕ ಹಾಗೂ ರಾಜಕೀಯ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರ ಜನಸಂಖ್ಯೆಯು ೨೦೦೬ರಲ್ಲಿ ೧೩೦ ಮಿಲಿಯನ್‌ನಷ್ಟಿತ್ತು, ಇದು ಜಪಾನ್‌ನ ದ್ವೀಪವಾದ ಹೊಂಶು ನಂತರ ವಿಶ್ವದಲ್ಲೇ ಹೆಚ್ಚು ಜನಸಂಖ್ಯೆಯುಳ್ಳ ದ್ವೀಪವಾಗಿದೆ. ಜಾವಾವು ಭೂಮಿಯ ಮೇಲಿನ ಅತಿ ದಟ್ಟವಾದ ಜನಸಂಖ್ಯೆಯುಳ್ಳ ಪ್ರದೇಶಗಳಾಲ್ಲಿ ಒಂದಾಗಿದೆ.

ಬಹುಶಃ ಇದು ಜ್ವಾಲಾಮುಖಿಯಿಂದ ರೂಪಿತವಾಗಿದೆ, ಜಾವಾವು ವಿಶ್ವದಲ್ಲಿಯೇ 13ನೆಯ ಅತಿದೊಡ್ಡ ದ್ವೀಪವಾಗಿದೆ ಮತ್ತು ಇಂಡೊನೇಷಿಯಾದಲ್ಲಿ ಹದಿನೈದನೆಯ ಅತಿದೊಡ್ಡ ದ್ವೀಪವಾಗಿದೆ. ದ್ವೀಪದುದ್ದಕ್ಕೂ ಜ್ವಾಲಾಮುಖಿ ಪರ್ವತಗಳ ಸರಪಳಿಯು ಪೂರ್ವ-ಪಶ್ಚಿಮಕ್ಕೆ ಬೆನ್ನೆಲುಬಿನಂತೆ ರೂಪುಗೊಂಡಿವೆ. ಇದು ಮೂರು ಪ್ರಮುಖ ಭಾಷೆಗಳನ್ನು ಹೊಂದಿದೆ, ಜವಾನೀಸ್ ಪ್ರಭಾವಶಾಲಿಯಾಗಿದೆ ಮತ್ತು ಇದು ಇಂಡೊನೇಷಿಯಾದ ೬೦ ಮಿಲಿಯನ್ ಜನರ ಮಾತೃಭಾಷೆಯಾಗಿದೆ, ಅದರಲ್ಲಿ ಹೆಚ್ಚಿನವರು ಜಾವದಲಿ ವಾಸಿಸುತ್ತಾರೆ. ಅಲ್ಲಿ ವಾಸಿಸುವ ಹೆಚ್ಚಿನವರು ದ್ವಿಭಾಷಿಗಳಾಗಿದ್ದಾರೆ, ಇಂಡೊನೇಷಿಯನ್ ಅವರ ಮೊದಲ ಅಥವಾ ಎರಡನೆಯ ಭಾಷೆಯಾಗಿರುತ್ತದೆ. ಜಾವಾದಲ್ಲಿ ಹೆಚ್ಚಿನ ಜನಸಂಖ್ಯೆಯು ಮುಸ್ಲಿಮರಾಗಿದ್ದರೂ, ಧಾರ್ಮಿಕ ನಂಬಿಕೆಗಳಲ್ಲಿ, ಸಂಪ್ರದಾಯಗಳಲ್ಲಿ ಮತ್ತು ಸಂಸ್ಕೃತಿಯಲ್ಲಿ ಹೋಲಿಕೆಯಿಲ್ಲದ ಮಿಶ್ರಣವನ್ನು ಜಾವಾ ಹೊಂದಿದೆ.

ವ್ಯುತ್ಪತ್ತಿ

’ಜಾವಾ’ ಶಬ್ಧದ ಮೂಲವು ಸರಿಯಾಗಿ ತಿಳಿದಿಲ್ಲ. ಒಂದು ಸಾಧ್ಯತೆ ಎಂದರೆ ಮೊದಲಿಗೆ ಒಬ್ಬ ಭಾರತದ ಪ್ರವಾಸಿಗನು ಜಾವಾ-ವಟ್ ಸಸ್ಯದಿಂದಾಗಿ ದ್ವೀಪಕ್ಕೆ ಹೆಸರಿಟ್ಟನೆಂಬುದು, ಆ ಕಾಲದಲ್ಲಿ ಹೀಗೆಂದು ಹೇಳುವುದು ಸಾಮಾನ್ಯವಾಗಿತ್ತು, ಅದಕ್ಕಿಂತ ಮೊದಲೇ ಇಂಡೊನೇಷಿಯನ್ ದ್ವೀಪಕ್ಕೆ ಬೇರೆ ಬೇರೆ ಹೆಸರುಗಳಿದ್ದವಂತೆ. ಅಲ್ಲಿ ಇತರೆ ಸಾಧ್ಯವುಳ್ಳ ಮೂಲಗಳಿವೆ: ಶಬ್ಧ ಜಾವ್ ಮತ್ತು ಅದರ ಪರಿವರ್ತನೆಗಳೆಂದರೆ "ಇನ್ನೂಮುಂದಕ್ಕೆ" ಅಥವಾ "ದೂರದ". ಹಾಗೂ, ಸಂಸ್ಕೃತದಲ್ಲಿ ಯವ ಎಂಬುದರ ಅರ್ಥ ಬಾರ್ಲಿ, ದ್ವೀಪವು ಈ ಸಸ್ಯಕ್ಕೆ ಹೆಸರಾಗಿತ್ತು. ಇನ್ನೊಂದು ಮೂಲವು ಹೇಳುವಂತೆ "ಜಾವಾ" ಶಬ್ಧವು ಪ್ರೋಟೊ-ಆಸ್ಟ್ರೊನೇಶಿಯನ್ ಮೂಲದ ಶಬ್ಧ, ಇದರರ್ಥ 'ಮನೆ'.

ಜಿಯೋಗ್ರಫಿ

ದ್ವೀಪ ಜಾವಾ 
ಪೂರ್ವ ಜಾವಾದಲ್ಲಿನ ಮೌಂಟ್ ಸೆಮೆರು ಮತ್ತು ಮೌಂಟ್ ಬ್ರೊಮೊ

ಜಾವಾವು ಪಶ್ಚಿಮಕ್ಕೆ ಸುಮಾತ್ರಾ ಪೂರ್ವಕ್ಕೆ ಮತ್ತು ಬಾಲಿಯ ಮಧ್ಯೆ ಇದೆ. ಬೊರ್ನಿಯೊವು ಉತ್ತರಕ್ಕೆ ಮತ್ತು ಕ್ರಿಸ್‌ಮಸ್ ದ್ವೀಪವು ದಕ್ಷಿಣಕ್ಕೆ ಇವೆ. ಇದು ವಿಶ್ವದ 13ನೆಯ ಅತಿದೊಡ್ಡ ದ್ವೀಪ.

ಜಾವಾವು ಸಂಪೂರ್ಣವಾಗಿ ಜ್ವಾಲಾಮುಖಿಯಿಂದ ಉಗಮವಾಗಿದೆ; ಇದು ಮೂವತ್ತೆಂಟಕ್ಕಿಂತಲೂ ಹೆಚ್ಚು ಪರ್ವತ ಶ್ರೇಣಿಗಳನ್ನು ಪೂರ್ವ-ಪಶ್ಚಿಮ ಸ್ಪೈನ್ ಆಗಿ ನಿಂತಿವೆ ಇವು ಒಂದು ಬಾರಿ ಅಥವಾ ಇನ್ನೊಂದು ಕ್ರಿಯಾಶೀಲ ಅಗ್ನಿಪರ್ವತಗಳಾಗಿವೆ. ಜಾವಾದಲ್ಲಿನ ಅತಿ ಎತ್ತರದ ಅಗ್ನಿಪರ್ವತವೆಂದರೆ ಮೌಂಟ್ ಸೆಮೆರು (೩,೬೭೬ m). ಜಾವಾದ ಹಾಗೂ ಇಂಡೊನೇಷಿಯಾದ ಅತಿ ಹೆಚ್ಚು ಕ್ರಿಯಾಶೀಲ ಅಗ್ನಿಪರ್ವತವೆಂದರೆ ಮೌಂಟ್ ಮೆರಪಿ (೨,೯೬೮ m). ಜಾವಾದ ಅಗ್ನಿಪರ್ವತಗಳನ್ನೂ ನೋಡಿ. ಇನ್ನೂ ಹೆಚ್ಚಾಗಿ ಪರ್ವತಗಳು ಮತ್ತು ಎತ್ತರದ ಪ್ರದೇಸಗಳು ಒಳಭಾಗದಲ್ಲಿ ಪ್ರತ್ಯೇಕವಾದ ಪ್ರದೇಶಗಳ ಶ್ರೇಣಿಯಾಗಿ ಬೇರ್ಪಡಲು ಸಹಕಾರಿಯಾಗಿ ಈ ಪ್ರದೇಶಗಳು ಹಸಿ-ಅಕ್ಕಿ ವ್ಯವಸಾಯಕ್ಕೆ ಅನುಕೂಲಕರವಾಗಿವೆ; ಜಾವಾದ ಅಕ್ಕಿ ಜಮೀನುಗಳು ವಿಶ್ವದಲ್ಲೇ ಹೆಚ್ಚು ಶ್ರೀಮಂತವೆನಿಸಿವೆ. ಜಾವಾವು ೧೬೯೯ರಲ್ಲಿ ಇಂಡೊನೇಷಿಯನ್ ಕಾಫೀ ಬೆಳೆದ ಮೊದಲ ಸ್ಥಳ ಆಗಿದೆ. ಇಂದು, ಚಿಕ್ಕ-ಜಮೀನುಳ್ಳವರು ಮತ್ತು ಅತಿದೊಡ್ಡ ತೋಟವನ್ನು ಹೊಂದಿರುವವರು ಕಾಫೀ ಅರೇಬಿಕಾವನ್ನು ಐಜೆನ್ ಪ್ರಸ್ಥಭೂಮಿಯಲ್ಲಿ ಬೆಳೆಯುತ್ತಾರೆ.

ಜಾವಾದ ವಿಸ್ತೀರ್ಣವು ಅಂದಾಜು ೧೩೯,೦೦೦ km ಗಳಷ್ಟು ಇದೆ. ದ್ವೀಪದ ಅತಿ ಉದ್ದದ ನದಿಯೆಂದರೆ ೬೦೦ km ಉದ್ದವಿರುವ ಬೆಂಗವಾನ್ ಸೊಲೊ ನದಿ. ಮಧ್ಯ ಜಾವಾದ ಲಾವು ಅಗ್ನಿಪರ್ವತದಲ್ಲಿ ಹುಟ್ಟಿ, ನಂತರ ಉತ್ತರಕ್ಕೆ ಹರಿಯುತ್ತದೆ ಮತ್ತು ಪೂರ್ವದೆಡೆಗೆ ಹರಿಯುತ್ತಾ ಸುರಬಾಯಾ ನಗರದ ಹತ್ತಿರ ಜಾವಾ ಸಮುದ್ರಕ್ಕೆ ಸೇರುತ್ತದೆ. ದ್ವೀಪವು ಆಡಳಿತಾತ್ಮಕವಾಗಿ ನಾಲ್ಕು ಪ್ರಾಂತ್ಯಗಳಾಗಿವೆ (ಬ್ಯಾಂಟೆನ್, ಪಶ್ಚಿಮ ಜಾವಾ, ಮಧ್ಯ ಜಾವಾ, ಮತ್ತು ಪೂರ್ವ ಜಾವಾ), ಒಂದು ವಿಶೇಷ ಪ್ರದೇಶ (ಯೋಗ್ಯಕರ್ತ), ಮತ್ತು ಒಂದು ವಿಶೇಷ ರಾಜಧಾನಿ ಜಿಲ್ಲೆ (ಜಕಾರ್ತಾ).

ಇತಿಹಾಸ

ದ್ವೀಪ ಜಾವಾ 
ಮಧ್ಯ ಜಾವಾದಲ್ಲಿನ 9ನೆಯ ಶತಮಾನದ ಬೊರೊಬುದುರ್ ಬೌದ್ಧೀಯರ ಸ್ತೂಪ

ಅಗ್ನಿಪರ್ವತಗಳ ಶ್ರೇಣಿ ಹಾಗೂ ಸಂಬಂಧಿತ ಎತ್ತರದ ಪ್ರದೇಶಗಳ ಸಾಲಿನ ಉದ್ದದಿಂದಾಗಿ ಜಾವಾದಲ್ಲಿ ಆಂತರಿಕ ಪ್ರದೇಸಗಳು ಸೃಷ್ಟಿಯಾಗಿವೆ ಮತ್ತು ಜನರು ಬೇರ್ಪಟ್ಟಿದ್ದಾರೆ ಮತ್ತು ಪ್ರತ್ಯೇಕ ಜೀವನ ನಡೆಸುವಂತಾಗಿದೆ. ಇಸ್ಲಾಮಿಕ್ ರಾಜ್ಯಗಳ ಮತ್ತು ಯೂರೋಪಿಯನ್ ವಸಾಹತುಗಳಿಗಿಂತ ಮೊದಲು, ಜಾವಾದ ಹಲವು ನದಿಗಳು ಸಾಮಾನ್ಯವಾಗಿ ಚಿಕ್ಕದಾಗಿದ್ದರೂ ಈ ನದಿಗಳು ಸಂಪರ್ಕದ ಮುಖ್ಯ ಅರ್ಥವನ್ನು ಒದಗಿಸುತ್ತಿದ್ದವು. ಬ್ರಾಂಟಾಸ್ ಮತ್ತು ಸಾಲಾ ನದಿಗಳು ಮಾತ್ರ ಬಹಳ-ಉದ್ದದ ಸಂಪರ್ಕವನ್ನು ಒದಗಿಸಬಹುದು, ಮತ್ತು ಅವುಗಳ ಕಣಿವೆಗಳು ಪ್ರಮುಖ ರಾಜ್ಯಗಳಿಗೆ ಕೇಂದ್ರಗಳಾಗಿವೆ. ರಸ್ತೆಗಳ ವ್ಯವಸ್ಥೆ, ಶಾಶ್ವತ ಸೇತುವೆಗಳು ಮತ್ತು ಟೋಲ್ ಗೇಟ್‌ಗಳು ಹದಿನೇಳನೆಯ ಶತಮಾನದಲ್ಲಿ ಸ್ತಾಪನೆಯಾಗಿವೆ ಎಂದು ಅಂದಾಜಿಸಲಾಗಿದೆ. ಸ್ಥಳೀಯ ಶಕ್ತಿಯಿಂದ ಒದ್ದೆಯಾದ ಅವಧಿಯಲ್ಲಿ ರಸ್ತೆಮಾರ್ಗಗಳು ಹಾಳಾಗುವಂತೆ ಮಾಡುತ್ತವೆ ಮತ್ತು ರಸ್ತೆಗಳು ನಿರಂತರ ನಿರ್ವಹಣೆಯ ಅವಶ್ಯಕತೆ ಹೊಂದಿವೆ. ಆನಂತರದಲ್ಲಿ, ಜಾವಾದ ಜನಸಂಖ್ಯೆಯ ಮಧ್ಯೆ ಸಂಪರ್ಕವು ಕಷ್ಟವಾಗತೊಡಗಿತು.

೪ನೆಯ ಹಾಗೂ ೧೬ನೆಯ ಶತಮಾನದ ಮಧ್ಯದಲ್ಲಿ ಜಾವಾದಲ್ಲಿ ಹಿಂದು-ಬೌದ್ಧೀಯರ ರಾಜ್ಯಗಳು ಉದಯವಾದವು. ಜಾವಾದ ಪುರಾತನ ರಾಜ್ಯಗಳಾದ ತರುಮಾನಗರ, ಸುಂದ, ಮಾತರಂ, ಕೆದಿರಿ, ಸಿಂಗಾಸರಿ ಮತ್ತು ಮಜಪಾಹಿತ್‌ಗಳು ಪ್ರಮುಖವಾಗಿ ಅಕ್ಕಿ ವ್ಯವಸಾಯದ ಮೇಲೆ ಅವಲಂಬಿತವಾಗಿವೆ, ಇಂಡೊನೇಷಿಯನ್ ಕುದುರುಗಡಲು ಪ್ರದೇಶದಲ್ಲಿ ವ್ಯಾಪಾರ ನಡೆಸುತ್ತವೆ, ಚೈನಾ ಮತ್ತು ಭಾರತದಲ್ಲಿಯೂ ಕೂಡ. ಈ ಪುರಾತನ ರಾಜ್ಯವು ಪ್ರಖ್ಯಾತ ಸ್ಮಾರಕಗಳನ್ನು ನಿರ್ಮಿಸಿದೆ ಅವೆಂದರೆ ಮಧ್ಯ ಜಾವಾದಲ್ಲಿನ ೯ನೆಯ ಶತಮಾನದ ಬೊರೊಬುದುರ್ ಮತ್ತು ಪ್ರಂಬನನ್.

ದ್ವೀಪ ಜಾವಾ 
ಅಕ್ಕಿ ಹೊಲಗಳಿಂದ ಸುತ್ತುವರೆದಿರುವ ಮೌಂಟ್ ಮೆರ್ಬಬು. ಜಾವಾದ ವೊಲ್ಕ್ಯಾನಿಕ್ ಟೊಪೊಗ್ರಫಿ ಮತ್ತು ಫಲವತ್ತಾದ ವ್ಯವಸಾಯದ ಭೂಮಿಗಳು ಅದರ ಇತಿಹಾಸದ ಮೂಲಭೂತ ಅಂಶಗಳಾಗಿವೆ

೧೬ನೆಯ ಶತಮಾನದ ಅಂತ್ಯದಲ್ಲಿ, ಇಸ್ಲಾಂ ಧರ್ಮವು ಪರಿವರ್ತನೆ ಮಾಡಿಕೊಳ್ಳುವುದರ ಮೂಲಕ ಹಿಂದೂ ಧರ್ಮ ಮತ್ತು ಬೌದ್ಧದರ್ಮವನ್ನು ಆಶ್ಚರ್ಯಗೊಳಿಸಿತು ಹಾಗೂ ಜಾವಾದ ಪ್ರಬಲ ಧರ್ಮವಾಗಿ ಬೆಳೆಯಿತು. ಕಾರ್ನೆಲಿಸ್ ಡಿ ಹೌಟ್‌ಮನ್ ೧೫೯೬ರಲ್ಲಿ, ನಾಲ್ಕು-ಹಡಗುಗಳ ದಂಡಯಾತ್ರೆಯಿಂದ ಇಂಡೊನೇಷಿಯಾದ ಜೊತೆ ಸಂಪರ್ಕ ಬೆಳೆಸಿದ ಮೊದಲ ಡಚ್ ಆಗಿದ್ದಾನೆ. ೧೯ನೆಯ ಶತಮಾನದ ಮೊದಲಲ್ಲಿ ಡಚ್ಚರು ಒಳಪ್ರದೇಶಗಳಲ್ಲಿರುವ ಸುಲ್ತಾನೇಟ್‌ಗಳಿಂದ ಪ್ರಭಾವಿತರಾಗಿದ್ದರು.

೧೮೧೫ರಲ್ಲಿ, ಜಾವಾದಲ್ಲಿ ೫ ಮಿಲಿಯನ್ ಜನರು ವಾಸಿಸುತ್ತಿದ್ದರು. ಹದಿನೆಂಟನೆಯ ಶತಮಾನದ ಎರಡನೆಯ ಅರ್ಧ ಭಾಗದಲ್ಲಿ, ಜಾವಾದ ಉತ್ತರ-ಮಧ್ಯದ ತೀರಪ್ರದೇಶದ ಜಿಲ್ಲೆಗಳಲ್ಲಿ ಜನಸಂಖ್ಯೆಯ ಗತಿ ಹೆಚ್ಚಾಗತೊಡಗಿತು, ಮತ್ತು ಹತ್ತೊಂಬತ್ತನೆಯ ಶತಮಾನದಲ್ಲಿ ದ್ವೀಪದ ಜನಸಂಖ್ಯೆಯು ವೇಗವಾಗಿ ಬೆಳೆಯಿತು. ಜನಸಂಖ್ಯೆ ಅತಿ ಹೆಚ್ಚಾಗಿ ಬೆಳೆಯಲು ಕಾರಣವಾದ ಅಂಶಗಳೆಂದರೆ ಡಚ್ ವಸಾಹತು ಆಡಳಿತ, ಜಾವಾದಲ್ಲಿ ನಡೆದ ಸಿವಿಲ್ ಯುದ್ಧ , ಹೆಚ್ಚಾಗಿ ಬೆಳೆದ ಅಕ್ಕಿ ವ್ಯವಸಾಯ, ಹಾಗೂ ಆಹಾರ ಸಸ್ಯಗಳಾದ ಮರಗೆಣಸು ಮತ್ತು ಮೆಕ್ಕೆಜೋಳಗಳನ್ನು ಪರಿಚಯಿಸಿದ್ದು ಅಕ್ಕಿಯನ್ನು ಬೆಳೇಯಲಾಗದೆ ಇರುವವರಿಗೆ ಸಹಕಾರಿಯಾಯಿತು. ಇತರೆಯವು ತೆರಿಗೆ ಹೊರೆಯನ್ನು ಹೆಚ್ಚಿಸಿದವು ಮತ್ತು ವ್ಯವಸಾಯ ಪದ್ಧತಿಯಲ್ಲಿ ಉದ್ಯೋಗಗಳು ಹೆಚ್ಚಾದವು, ಕುಟುಂಬಗಳು ಹೆಚ್ಚು ತೆರಿಗೆ ಕಟ್ಟುವ ಸಾಮರ್ಥ್ಯ ಹೊಂದಲು ಮತ್ತು ವಸ್ತುಗಳನ್ನು ಕೊಳ್ಳಲು ಮಕ್ಕಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಂಡರು. ಟ್ರಕ್ಕುಗಳನ್ನು ಮತ್ತು ರೈಲ್ವೇಯನ್ನು ಎಮ್ಮೆ ಹಾಗೂ ಎತ್ತುಗಳನ್ನು ಸಾಗಿಸಲು ಬಳಸಲಾಗುತ್ತಿತ್ತು ಮತ್ತು ಟೆಲಿಗ್ರಾಫ್ ವ್ಯವಸ್ಥೆಗಾಗಿಮ್ ಮತ್ತು ವಸಾಹತು ಸರ್ಕಾರದಿಂದಾಗಿ ಬರಗಾಲ ನಿರ್ಮೂಲನೆಯಾಯಿತು, ಹಾಗೂ ಇದರಿಂದಾಗಿ ಜನಸಂಖ್ಯೆ ಬೆಳೆಯಲು ಕಾರಣವಾಯಿತು. ಜಾವಾದಲ್ಲಿ ೧೮೪೦ರಿಂದ ೧೯೪೦ಯಲ್ಲಿ ಜಪಾನೀಯರ ಕೆಲಸಗಳಿಂದಾಗಿ ಈ ಅವಧಿಯಲ್ಲಿ ಮುಖ್ಯವಾದ ಬರಗಾಲಗಳು ಕಾಣಿಸಿಕೊಂಡಿರಲ್ಲಿಲ್ಲ. ಮಾನವ ಜನಾಂಗಗಳ ಅಂಶಗಳೂ ಸಹ ಅವರವರ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಯೋಚಿಸಿದ್ದೂ ಇದಕ್ಕೆ ಹೆಚ್ಚಳಕ್ಕೆ ಕಾರಣವಾಯಿತು. ಜಾವಾದಲ್ಲಿ ಗಂಡು ಮಗುವಿಗೆ ಹೆಚ್ಚಿನ ಆದ್ಯತೆಯೇನೂ ಇರಲಿಲ್ಲ, ಪುರುಷ ಹಾಗೂ ಮಹಿಳಾ ದುಡಿಮೆಗಾರರಿಗೆ ವ್ಯವಸಾಯದಲ್ಲಿ ಉದ್ಯೋಗವಿರುವುದರಿಂದ ಈ ವ್ಯತ್ಯಾಸ ಕಂಡುಬರಲಿಲ್ಲ. ಇನ್ನೂ ಹೆಚ್ಚಾಗಿ, ೧೯ನೆಯ ಶತಮಾನದಲ್ಲಿ ಮದುವೆಯಾಗುವ ವಯಸ್ಸನ್ನು ಕಡಿಮೆ ಮಾಡಿದ್ದರಿಂದ, ಹೆಂಗಸು ಮಕ್ಕಳನ್ನು ಹೆರುವ ಸಾಧ್ಯತೆಗಳಿರುವ ವರ್ಷಗಳು ಹೆಚ್ಚಾದವು.

ಜನಸಂಖ್ಯಾಶಾಸ್ತ್ರ

ದ್ವೀಪ ಜಾವಾ 
ಮಧ್ಯ ಜಕಾರ್ತಾ

ಇಂಡೊನೇಷಿಯಾದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಜಾವಾ ಹೊಂದಿದೆ, ದೇಶದ ಜನಸಂಖ್ಯೆ ಅಂದಾಜು ೬೨% , ಹಾಗೂ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದ್ವೀಪವಾಗಿದೆ. ೧೩೦ ಮಿಲಿಯನ್ ಜನರು ವಾಸಿಸುತ್ತಿದ್ದಾರೆ ಪ್ರತಿ km²ಗೆ ೧೦೨೬ಜನರಿದ್ದಾರೆ ವಿಶ್ವದಲ್ಲಿಯೇ ದಟ್ಟವಾದ-ಜನಸಂಖ್ಯೆ ಇರುವ ಭಾಗಗಳಿವೆ. ಇದರಲ್ಲಿರುವ ಚಿಕ್ಕ ನಗರ-ರಾಜ್ಯಗಳನ್ನು ಹೊರತು ಪಡಿಸಿದರೆ ಬಾಂಗ್ಲಾದೇಶಕ್ಕಿಂತಲೂ ಹೆಚ್ಚು ದಟ್ಟವಾದ-ಜನಸಂಖ್ಯೆಯಿರುವ ಎರಡನೆಯ ದೇಶವಾಗುತ್ತಿತ್ತು. ಅಂದಾಜು ೪೫% ರಷ್ಟು ಇಂಡೊನೇಷಿಯಾದ ಜನಸಂಖ್ಯೆಯು ಜಾವನೀಸ್ ಜನಾಂಗೀಯರಾಗಿದ್ದಾರೆ.

೧೯೭೦ರಿಂದ ೧೯೮೮ರಲ್ಲಿ ಸುಹಾರ್ತೊ ಪ್ರಭುತ್ವ ಬೀಳುವವರೆಗೆ, ಇಂಡೊನೇಷಿಯನ್ ಸರ್ಕಾವು ಒಂದು ವಲಸೆ ಹೋಗುವ ಕಾರ್ಯಕ್ರಮವನ್ನು ಇಂಡೊನೇಷಿಯಾದ ಕಡಿಮೆ-ಜನಸಂಖ್ಯೆಯುಳ್ಳ ಪ್ರದೇಶಗಳ ಜನಸಂಖ್ಯೆಯನ್ನು ಸರಿತೂಗಿಸುವುದಕ್ಕಾಗಿ ಜಾರಿಮಾಡಿತು. ಈ ಕಾರ್ಯಕ್ರಮಕ್ಕೆ ಮಿಶ್ರ ಪ್ರತಿಫಲ ಸಿಕ್ಕಿತು; ಕೆಲವು ಬಾರಿ ಸ್ಥಳಿಯರಿಗೂ ಮತ್ತು ಹೊಸದಾಗಿ ಬಂದ ನೆಲೆಗೊಳ್ಳುವವರಿಗೂ ಸಂಘರ್ಷಗಳುಂಟಾದವು.

ಆರ್ಥಿಕತೆ

ದ್ವೀಪ ಜಾವಾ 
ಯೋಗ್ಯಕರ್ತಾ, ಪ್ರಂಬನನ್ ಹತ್ತಿರ ಇರುವ ಅಕ್ಕಿಹೊಲಗಳಲ್ಲಿ ಸಸ್ಯಗಳನ್ನು ನೆಡುತ್ತಿರುವ ಜಾವನೀಸ್ ಹೆಂಗಸರು

ಮೊದಲಿಗೆ ಜಾವಾದ ಆರ್ಥಿಕತೆಯು ಅಕ್ಕಿ ವ್ಯವಸಾಯದ ಮೇಲೆ ಹೆಚ್ಚಿನ ಭರವಸೆ ಇಟ್ಟಿತ್ತು. ಪುರಾತನ ರಾಜ್ಯಗಳಾದ ತರುಮಾನಗರ, ಮಾತರಂ, ಮತ್ತು ಮಜಾಪಾಹಿತ್‌ಗಳು ಅಕ್ಕಿ ಬೆಳೆ ಮತ್ತು ತೆರಿಗೆಗಳ ಮೇಲೆ ಅವಲಂಬಿತವಾಗಿತ್ತು. ಜಾವಾವು ಬಹಳ ಹಿಂದಿನಿಂದಲೂ ಅಕ್ಕಿ ಉತ್ಪಾದನೆ ಮತ್ತು ಅಕ್ಕಿ ರಫ್ತಿಗೆ ಪ್ರಸಿದ್ಧಿಯಾಗಿದೆ, ಮತ್ತು ಅಕ್ಕಿ ವ್ಯವಸಾಯವು ಜಾವಾದ ಜನಸಂಖ್ಯೆ ಹೆಚ್ಚಾಗುವಲ್ಲಿ ಮಹತ್ವದ ಕೊಡುಗೆ ನೀಡಿದೆ. ೪ನೆಯ ಶತಮಾನದಲ್ಲಿಯೇ ಭಾರತ ಹಾಗೂ ಚೀನಾಗಳ ಜೊತೆ ವ್ಯಾಪಾರ ಸಂಬಂಧವನ್ನು ಹೊಂದಿತ್ತು, ಚೈನೀಯರ ಸಿರಾಮಿಕ್‌ಗಳು ದೊರೆತಿರುವುದು ಇದನ್ನು ಸ್ಪಷ್ಟಪಡಿಸುತ್ತದೆ. ಜಾವಾವು ವಿಶ್ವದ ಮಲುಕು ಮಸಾಲೆ ವ್ಯಾಪಾರದಲ್ಲಿ ಮಜಪಾಹಿತ್ ಯುಗದ ಕಾಲದಿಂದಲೂ ಭಾಗವಹಿಸುತ್ತಿದೆ VOC ಯುಗದವರೆಗೂ ಮುಂದುವರೆದಿತ್ತು.

ಡಚ್ ಈಸ್ಟ್ ಇಂಡಿಯಾ ಕಂಪನಿಯು ೧೭ನೆಯ ಶತಮಾನದಲ್ಲಿ ಬಟಾವಿಯಾದಲ್ಲಿ ಕಾಲೂರಿತು ಮತ್ತು ೧೮ನೆಯ ಶತಮಾನದಲ್ಲಿ ನೆದರ್‌ಲ್ಯಾಂಡ್ಸ್ ಈಸ್ಟ್ ಇಂಡೀಸ್‌ನಿಂದ ಯಶಸ್ವಿಯಾಯಿತು. ವಸಾಹತುಗಳ ಸಮಯದಿಂದಲೂ ಡಚ್ಚರು ವ್ಯಾಪಾರದ ಸಸ್ಯಗಳ ವ್ಯವಸಾಯವನ್ನು ಜಾವಾದಲ್ಲಿ ಆರಂಭಿಸಿದರು, ಅವೆಂದರೆ ಕಬ್ಬು, ರಬ್ಬರ್, ಕಾಫೀ, ಟೀ, ಮತ್ತು ಕ್ವಿನೈನ್‌ಗಳು. ೧೯ನೆಯ ಶತಮಾನದಿಂದ ೨೦ನೆಯ ಶತಮಾನದ ಮೊದಲವರೆಗೆ ಜಾವನೀಸ್ ಕಾಫೀಯು ವಿಶ್ವದ ಜನಪ್ರಿಯತೆ ಗಳಿಸಿತು, ಇಂದು "ಜಾವಾ"ವು ಕಾಫೀ ಪದಕ್ಕೆ ಸಮಾನಾರ್ಥಕ ಪದವಾಗಿದೆ.

ಜಾವಾವು ಇಂಡೊನೇಷಿಯಾದಲ್ಲಿಯೇ ನೆದರ್ಲ್ಯಾಂಡ್ಸ್ ಈಸ್ಟ್ ಇಂಡೀಸ್‌ನಿಂದ ಮಾಡರ್ನ್ ರಿಪಬ್ಲಿಕ್ ಆಫ್ ಇಂಡೊನೇಷಿಯಾವರೆಗೆ ಹೆಚ್ಚು ಅಭಿವೃದ್ಧಿ ಹೊಂದಿದ ದ್ವೀಪವಾಗಿದೆ. ರಸ್ತೆ ಸಾರಿಗೆ ವ್ಯವಸ್ಥೆಯು ಪುರಾತನ ಕಾಲದಿಂದಲೂ ಇದೆ, ಇವು ಉತ್ತಮ ಸಂಪರ್ಕವನ್ನು ಕಲ್ಪಿಸುತ್ತವೆ ೧೯ನೆಯ ಶತಮಾನದಲ್ಲಿ ಡೇಂಡೆಲ್ಸ್‌ನಿಂದ ಜಾವಾ ಗ್ರೇಟ್ ಪೋಸ್ಟ್ ರೋಡ್ ನಿರ್ಮಾಣವಾಗಿದೆ. ವಾಣಿಜ್ಯ ಬೆಳೆಗಳಾದ ಕಾಫಿಯಂತಹವನ್ನು ತೋಟಗಳಿಂದ ದ್ವೀಪದ ಒಳಭಾಗಗಳಿಗೆ ಸಾಗಿಸಲು, ತೀರದ ಬಂದರುಗಳಿಗೆ ಸಾಗಿಸಲು ಸಾರಿಗೆ ವ್ಯವಸ್ಥೆಯ ಅವಶ್ಯಕತೆ ಇದೆ. ಇಂದು ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯ, ಜಾವಾದ ಪ್ರಮುಖ ನಗರಗಳಲ್ಲಿ ಮೆರೆದಿವೆ, ಅವೆಂದರೆ ಜಕಾರ್ತಾ, ಸುರಬಾಯ, ಸೆಮರಂಗ್, ಮತ್ತು ಬ್ಯಾಂಡಂಗ್; ಕೆಲವು ಸಾಂಪ್ರದಾಯಿಕ ಸುಲ್ತಾನೇಟ್ ನಗರಗಳಾದ ಯೋಗ್ಯಕರ್ತಾ, ಸುರಕರ್ತಾ, ಮತ್ತು ಸಿರೆಬನ್ ನಗರಗಳು ವೈಭವಯುತ ಸ್ವತ್ತುಗಳನ್ನು ಉಳಿಸಿಕೊಂಡಿವೆ ಮತ್ತು ಕಲೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ಕೇಂದ್ರಗಳಾಗಿವೆ. ಕೈಗಾರಿಕೆಯು ಕೂಡಾ ಜಾವಾದ ಉತ್ತರ ತೀರದಲ್ಲಿ ಬೆಳೆಯುತ್ತಿದೆ, ವಿಶೇಷವಾಗಿ ಸಿಲೆಗನ್, ತಂಗರಾಂಗ್, ಬೆಕಾಸಿ, ಕರವಂಗ್, ಗ್ರೆಸಿಕ್ ಮತ್ತು ಸಿಡೊಯರ್ಜೊ. ಹೆದ್ದಾರಿಯ ಜಾಲದ ಟೋಲ್ ರಸ್ತೆಯು ನಿರ್ಮಾಣವಾಗಿದ್ದು ಸುಹಾರ್ತೊ ಯುಗದಿಂದ ಇಲ್ಲಿಯವರೆಗೆ ವಿಸ್ತರಿಸಲಾಗಿದೆ, ಪ್ರಮುಖ ನಗರ ಕೇಂದ್ರಗಳಾದ ಜಕಾರ್ತಾ ಮತ್ತು ಬ್ಯಾಂಡಂಗ್‌ಗಳೊಡನೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ; ಜೊತೆಗೆ ಸಿರೆಬಾನ್, ಸೆಮರಾಂಗ್ ಮತ್ತು ಸುರಬಾಯಗಳೊಂದಿಗೆ ಕೂಡಾ ಸಂಪರ್ಕ ಕಲ್ಪಿಸುತ್ತದೆ.

ದ್ವೀಪ ಜಾವಾ 

ಜನಾಂಗೀಯತೆ ಮತ್ತು ಸಂಸ್ಕೃತಿ

ಇದು ಹೆಚ್ಚು ಜನಸಂಖ್ಯೆಯನ್ನು ಹೊಂದಿರುವುದಲ್ಲದೆ ಇಂಡೊನೇಷಿಯಾದ ದೊಡ್ಡ ದ್ವೀಪಗಳಿಗೆ ಹೋಲಿಸಿದರೆ ಜಾವಾವು ಜನಾಂಗಗಳ ಕಲೆಯುವಿಕೆಯಲ್ಲಿ ಏಕರೀತಿಯಲ್ಲಿದೆ. ಬರೀ ಎರಡು ಜನಾಂಗೀಯ ಗುಂಪುಗಳು ಸ್ಥಳೀಯ ದ್ವೀಪದ್ದಾಗಿವೆ ಅವೆಂದರೆ— ಜಾವನೀಸ್ ಮತ್ತು ಸುಂದನೀಸ್. ಮೂರನೆಯ ಗುಂಪು ಮದುರೆಸ್, ಜಾವಾದ ಉತ್ತರ ಪೂರ್ವ ತೀರದಲ್ಲಿ ಮದುರಾ ದ್ವೀಪದಲ್ಲಿ ವಾಸಿಸುವ ಜನರು, ಮತ್ತು ಅವರು ಪೂರ್ವ ಜಾವಾ ಹೆಚ್ಚಿನ ಸಂಖ್ಯೆಯಲ್ಲಿ ೧೮ನೆಯ ಶತಮಾನದಿಂದ ವಲಸೆ ಬಂದವರು. ದ್ವೀಪದ ಜನಸಂಖ್ಯೆಯ ಸುಮಾರು ಮೂರನೆಯ-ಎರಡು ಭಾಗದಷ್ಟು ಜಾವಾನೀಸರನ್ನು ಒಳಗೊಂಡಿದೆ, ಅಲ್ಲದೆ ಸುಂದನೇಸ್ ಮತ್ತು ಮದುರೆಸ್‌ನವರು ಕ್ರಮವಾಗಿ ೨೦% ಮತ್ತು ೧೦%ಗಳಷ್ಟಿವೆ.

ದ್ವೀಪದಲ್ಲಿ ನಾಲ್ಕು ಪ್ರಮುಖ ಸಾಂಸ್ಕೃತಿಕ ಪ್ರದೇಶಗಳು ಇವೆ: ಕೆಜಾವೆನ್ ಅಥವಾ ಜಾವನೀಸ್ ಹಾರ್ಟ್‌ಲ್ಯಾಂಡ್, ಪ್ಯಾಸಿಸಿರ್ ಪ್ರದೇಶದ ಉತ್ತರ ಕರಾವಳಿ ತೀರ, ಪಶ್ಚಿಮ ಜಾವಾದ ಸುಂದಾ ಪ್ರದೇಶಗಳು, ಮತ್ತು ಪೂರ್ವದ ಹೊರಚಾಚಿಕೊಂಡಿರುವ ಪ್ರದೇಶ, ಇದನ್ನು ಬ್ಲಂಬ್ಯಾಂಗನ್ ಎಂದೂ ಕರೆಯಲಾಗುತ್ತದೆ. ಜಾವಾದ ತೀರ ಪ್ರದೇಶದ ಜೊತೆಯಲ್ಲಿ ಸಾಂಸ್ಕೃತಿಕವಾಗಿ ಒಟ್ಟಾಗಿ ಸೇರುವ ಐದನೆಯ ಪ್ರದೇಶ ಮದುರಾ ಆಗಿದೆ. ಕೆಜಾವೆಸ್ ಜಾವನೀಸ್ ಸಂಸ್ಕೃತಿಯು ದ್ವೀಪದಲ್ಲಿ ಹೆಚ್ಚು ಪ್ರಬಲವಾಗಿದೆ. ಜಾವಾದ ಉಳಿದ ಉದಾತ್ತತೆಯು ಇಲ್ಲಿಯ ಮೂಲದ್ದೇ ಆಗಿದೆ, ಮತ್ತು ಇಂಡೊನೇಷಿಯಾದ ಸೇನೆ, ವ್ಯಾಪಾರ ಮತ್ತು ರಾಜಕೀಯ ಗಣ್ಯರು ಕೂಡಾ ಇಲ್ಲಿಯ ಮೂಲದವರೇ ಆಗಿದ್ದಾರೆ. ಇದರ ಭಾಷೆ, ಕಲೆ, ಮತ್ತು ಮರ್ಯಾದೆಗಳನ್ನು ದ್ವೀಪದ ಅತಿಹೆಚ್ಚು ಪರಿಷ್ಕೃತ ಮತ್ತು ಅನುಕರಣೀಯ. ಪಶ್ಚಿಮದಲ್ಲಿ ಬನ್ಯುಮಾಸ್ ಕ್ಷೇತ್ರ, ಪೂರ್ವದಲ್ಲಿ ಬ್ಲಿಟರ್ ಕ್ಷೇತ್ರಗಳು ಇಂಡೊನೇಷಿಯಾವು ಹೆಚ್ಚು ಫಲವತ್ತಾಗಲು ಕಾರಣವಾಗಿವೆ ಮತ್ತು ದಟ್ಟವಾದ ಜನಸಂಖ್ಯೆಯುಳ್ಳ ವ್ಯವಸಾಯ ಪ್ರದೇಶವಾಗಿದೆ.

ಮಧ್ಯ ಜಾವಾದ ನೈಋತ್ಯಭಾದಲ್ಲಿ, ಸಾಮಾನ್ಯವಾಗಿ ಇದನ್ನು ಬಾನ್ಯುಮಾಸನ್ ಪ್ರದೇಶವೆಂದು ಹೆಸರಿಸಲಾಗಿದೆ, ಸಾಂಸ್ಕೃತಿಕ ಮಿಶ್ರಣವಾಗಿದೆ; ಜಾವನೀಸ್ ಸಂಸ್ಕೃತಿ ಮತ್ತು ಸುಂದನೇಸ್ ಸಂಸ್ಕೃತಿಗಳನ್ನು ಒಟ್ಟಿಗೆ ಸೇರಿಸಿದ ಮಿಶ್ರಣದಿಂದ ಬ್ಯಾನ್ಯುಮಾಸನ್ ಸಂಸ್ಕೃತಿಯಾಗಿದೆ.[ಸೂಕ್ತ ಉಲ್ಲೇಖನ ಬೇಕು] ಯೋಗ್ಯಕರ್ತಾ ಮತ್ತು ಸುರಕರ್ತಾದ ಮಧ್ಯ ಜಾವನೀಸ್ ನ್ಯಾಯಾಲಯ ನಗರಗಳಾದ ಸಮಕಾಲೀನ ರಾಜರುಗಳು ವಸಾಹತು ಇಸ್ಲಾಮಿಕ್ ರಾಜ್ಯಕ್ಕಿಂತ ಮೊದಲು ಅವರ ವಂಶಾವಳಿಯನ್ನು ಕಂಡುಹಿಡಿದರು, ಆ ಸ್ಥಳಗಳನ್ನು ವಿಶೇಷವಾಗಿ ಜಾವನೀಸ್ ಸಂಸ್ಕೃತಿಯನ್ನು ಬೆಳೆಸಲು ಪ್ರಯತ್ನಿಸಿದರು. ಮಾದರಿಯಾದ ಜಾವಾ ಕಲೆಗಳಲ್ಲಿ ಗೇಮೆಲನ್ ಸಂಗೀತ ಮತ್ತು ವೇಯಾಂಗ್ ಪಪೆಟ್ ಪ್ರದರ್ಶನಗಳು ಸೇರಿವೆ.

ಆಗ್ನೇಯ ಏಷಿಯಾ ಪ್ರದೇಶದದಲ್ಲಿರುವ ಹಲವು ಪ್ರಭಾವಶಾಲಿ ರಾಜ್ಯಗಳಲ್ಲಿ ಒಂದಾಗಿದೆ, ಪರಿಣಾಮವಾಗಿ, ಬಹಳಷ್ಟು ಸಾಹಿತ್ಯವು ಜಾವನೀಸ್ ಲೇಖಕರಿಂದ ರಚಿಸಲ್ಪಟ್ಟಿದೆ. ಇವುಗಳಲ್ಲಿ ಕೆನ್ ಅರೋಕ್ ಮತ್ತು ಕೆನ್ ದೆದೆಸ್ ಒಳಗೊಂಡಿವೆ, ಅನಾಥ ಹುಡುಗನೊಬ್ಬ ರಾಜನಿಂದ ಕಿತ್ತುಕೊಂಡ ಕಥೆಯ್, ಮತ್ತು ಪುರಾತನ ಜಾವನೀಸ್ ರಾಜ್ಯದ ರಾಣಿಯನ್ನು ಮದುವೆಯಾಗಿದ್ದ; ಮತ್ತು ರಾಮಾಯಣ ಮತ್ತು ಮಹಾಭಾರತ ದ ಭಾಷಾಂತರಗಳು. ಪ್ರಮೋದ್ಯ ಅನಂತ ಟೋರ್‌ ಪ್ರಸಿದ್ಧ ಇಂಡೊನೇಶಿಯನ್ ಸಮಕಾಲೀನ ಲೇಖಕರು, ಜಾವಾದಲ್ಲಿ ತಾವು ಹುಟ್ಟಿ ಬೆಳೆದ ಅನುಭವವನ್ನು ಆಧರಿಸಿದ ಹಲವು ಕಥೆಗಳನ್ನು ಬರೆದಿದ್ದಾರೆ, ಮತ್ತು ಜಾವನೀಸ್ ಜನಪದ ಅದ್ಯಯನ ಮತ್ತು ಐತಿಹಾಸಿಕ ದಂತಕಥೆಗಳಲ್ಲಿ ಹಲವು ಅಂಶಗಳನ್ನು ಒಳಗೊಂಡಿದೆ.

ಭಾಷೆಗಳು

ದ್ವೀಪ ಜಾವಾ 
ಜಾವಾ ಮಾತಾಡುವ ಭಾಷೆಗಳು (ಜಾವನೀಸರನ್ನು ಬಿಳಿಯಲ್ಲಿ ತೋರಿಸಲಾಗಿದೆ)

ಜಾವಾದಲ್ಲಿ ಮಾತನಾಡುವ ಮೂರು ಪ್ರಮುಖ ಭಾಷೆಗಳೆಂದರೆ ಜಾವಾನೀಸ್, ಸುಂದನೇಸ್ ಮತ್ತುಮದುರೆಸೆ. ಇಲ್ಲಿ ಮಾತನಾಡುವ ಇತರೆ ಭಾಷೆಗಳೆಂದರೆ ಬೆಟವಿ (ಮಲಯ್ ಸ್ಥಳೀಯ ಜಕಾರ್ತಾ ಪ್ರದೇಶದ ಪ್ರಾಂತಭಾಷೆಯಾಗಿದೆ), ಓಸಿಂಗ್ ಮತ್ತು ಟೆಂಗೆರೆಸ್ಸೆ (ಜಾವನೀಸ್‍ಗೆ ಹತ್ತಿರವಾದ ಸಂಬಂಧ ಹೊಂದಿದೆ), ಬದುಯ್ (ಸುಂದನಿಸ್‌ಗೆ ಸಂಬಂಧಿಸಿದೆ), ಕಂಗೆಯನೀಸ್ (ಮದುರೆಸ್‌ಗೆ ಹತ್ತಿರವಾದದ್ದು), ಬಾಲಿಬೆಸೆ, ಮತ್ತು ಬಾನ್ಯುಮಸನ್ ಹೆಚ್ಚುಪಾಲು ಜನಸಂಖ್ಯೆಯು ಇಂಡೊನೇಶಿಯನ್ ಭಾಷೆಯನ್ನೂ ಮಾತನಾಡುತ್ತಾರೆ, ಅದು ಅವರ ಎರಡನೆಯ ಭಾಷೆಯಾಗಿರುತ್ತದೆ.

ಧರ್ಮ

ಶೇಕಡಾ ೯೦ ಕ್ಕಿಂತಲೂ ಹೆಚ್ಚು ಜಾವಾದ ಜನರು ಮುಸ್ಲಿಮರಾಗಿದ್ದಾರೆ, ಅಬ್ಯಾಂಗನ್ (ನಾಮಮಾತ್ರ ಅಥವಾ ಸಿಂಕ್ರೆಟಿಕ್) ಮತ್ತು ಸಂತ್ರಿ (ಹೆಚ್ಚು ಸಾಂಪ್ರದಾಯಿಕ) ಎರಡು ಜನಾಂಗಗಳ ಮಧ್ಯೆ ವಿಸ್ತಾರವಾದ ವ್ಯತ್ಯಾಸವಿದೆ. ಚಿಕ್ಕ ಹಿಂದು ಪ್ರದೇಶಗಳು ಜಾವಾದುದ್ದಕ್ಕೂ ಅಲ್ಲಲ್ಲಿ ಇವೆ, ಆದರೆ ಬಾಲಿ ನದಿಯ ಪೂರ್ವ ತೀರದಲ್ಲಿ ಹಿಂದು ಜನಸಂಖ್ಯೆ ಇದೆ, ವಿಶೇಷವಾಗಿ ಬಾನ್ಯುವಾಂಗಿ ನಗರದ ಸುತ್ತಮುತ್ತಲೂ. ದೊಡ್ಡ ನಗರಗಳಲ್ಲಿ ಕ್ರಿಶ್ಚಿಯನ್ ಸಮುದಾಯಗಳೂ ಇವೆ, ದಕ್ಷಿಣ ಮಧ್ಯ ಜಾವಾದ ಕೆಲ ಹಳ್ಳಿ ಪ್ರದೇಶಗಳಲ್ಲಿ ರೋಮನ್ ಕ್ಯಾಥೊಲಿಕರು ಇದ್ದಾರೆ. ಪ್ರಮುಖ ನಗರಗಳಲ್ಲಿ ಬುದ್ಧಿಸ್ಟ್ ಸಮುದಾಯಗಳೂ ಇವೆ, ಪ್ರಾಥಮಿಕವಾಗಿ ಚೈನೀಸ್ ಇಂಡೊನೇಷಿಯನ್ ಜನರಲ್ಲಿ ಇವೆ. ಇಂಡೊನೇಷಿಯನ್ ಸಂವಿಧಾನವು ಆರು ಧರ್ಮಗಳನ್ನು ಗುರುತಿಸುತ್ತದೆ. (ಇಂಡೊನೇಷಿಯಾದಲ್ಲಿ ಧರ್ಮಗಳನ್ನು ನೋಡಿ.)

ಜಾವಾವು ಧರ್ಮಗಳ ಮತ್ತು ಸಂಸ್ಕೃತಿಗಳ ಸಮ್ಮಿಳನ ಸ್ಥಾನವಾಗಿದೆ, ಇದರಿಂದಾಗಿ ವಿಸ್ತಾರವಾದ ಧಾರ್ಮಿಕ ನಂಬಿಕೆಗಳು ಸೃಷ್ಟಿಯಾಗಿವೆ. ಸಮಾಜದಲ್ಲಿರುವ ಎರಡು ಧರ್ಮಗಳಾದ ಶೈವಿಸಂ ಮತ್ತು ಬುದ್ಧಿಸಂಗಳು ಭಾರತೀಯ ಪ್ರಭಾವವನ್ನು ಹೊಂದಿವೆ, ಅವು ಸ್ಥಳೀಯ ಸಂಪ್ರದಾಯ ಮತ್ತು ಸಂಸ್ಕೃತಿಗಳೊಂದಿಗೆ ಮಿಶ್ರವಾಗಿವೆ. ಇದಕ್ಕೆ ಒಂದು ಸೇತುವೆ ಎಂದರೆ ಅಸೆಟಿಕ್‌ರು, ರೇಸಿ ಎಂದು ಕರೆಯಲ್ಪಡುವ ಇವರು ಅತೀಂದ್ರಿಯ ಅಭ್ಯಾಸಗಳನ್ನು ಹೇಳಿಕೊಟ್ಟರು. ಗುರುವಿನ ಪ್ರತಿನಿತ್ಯದ ಅಗತ್ಯಗಳನ್ನು ಪೂರೈಸುವ ವಿದ್ಯಾರ್ಥಿಗಳ ಮಧ್ಯೆ ರೇಸಿ ಇರುತ್ತಾನೆ. ರೇಸಿಯ ಅಧಿಕಾರವು ಕೇವಲ ಔಪಚಾರಿಕವಾದದ್ದು. ನ್ಯಾಯಾಲಯಗಳಲ್ಲಿ, ಬ್ರಾಹ್ಮಣ ಪಾದ್ರಿಗಳು ಮತ್ತು ಪುಡ್ಜಂಗಾ (ಪವಿತ್ರ ಗ್ರಂಥಕರ್ತರು) ಕಾನೂನು ಅಧಿಕಾರಿಗಳು ಮತ್ತು ಹಿಂದು ಕಾಸ್ಮಾಲಜಿಯನ್ನು ಅವರ ರಾಜಕೀಯ ಅಗತ್ಯಗಳಿಗೆ ಬಳಸಿಕೊಳ್ಳುತ್ತಾರೆ.

ಹಿಂದೂ ಧರ್ಮದ ನಂತರ ಬಂದಂತಹ ಇಸ್ಲಾಂ ಧರ್ಮ, ಸಾಂಪ್ರದಾಯಿಕ ಧಾರ್ಮಿಕ ನಮೂನೆಗಳಲ್ಲಿ ಬಲವಾಗಿ ಬೇರೂರಿತು. ಅಜ್ಞಾ ಪತ್ರ (ಕ್ಯಾಯಿ )ಯ ಮುಸ್ಲಿಂ ವಿದ್ಯಾರ್ಥಿಯು ಹೊಸ ಧಾರ್ಮಿಕ ಗಣ್ಯರಾದರು ಆಗ ಹಿಂದು ಪ್ರಭಾವಗಳು ಹಿಂದೆ ಸರಿದವು. ಇಸ್ಲಾಂ‌ನಲ್ಲಿ ಧಾರ್ಮಿಕ ನಾಯಕರ ವರ್ಗ ಶ್ರೇಣಿಯಿಲ್ಲ ಮತ್ತು ಮೂಲಭೂತ ಪೌರೋಹಿತ್ಯ ಕೂಡಾ ಇಲ್ಲ, ಆದರೆ ಡಚ್ ವಸಾಹತು ಸರ್ಕಾರವು ಮಸೀದಿ ಹಾಗೂ ಇಸ್ಲಾಮಿಕ್ ಶಾಲೆಗಳಿಗೆ ವಿಸ್ತಾರವಾದ ಶ್ರೇಣಿಯನ್ನು ಸ್ಥಾಪಿಸಿತು. ಜಾನಾನೀಸ್ ಪೆಸೇಂಟ್ರೆನ್ (ಇಸ್ಲಾಮಿಕ್ ಶಾಲೆಗಳು)ನಲ್ಲಿ, ಕ್ಯಾಯಿ ಯು ರೇಸಿ ಸಂಪ್ರದಾಯವನ್ನು ಶಾಶ್ವತಗೊಳಿಸಿದನು. ಅವನ ಸುತ್ತಮುತ್ತ ಇರುವ ವಿದ್ಯಾರ್ಥಿಗಳು ಅಗತ್ಯಗಳನ್ನು ಪೂರೈಸುತ್ತಾರೆ, ಹಾಗೂ ಶಾಲೆಯ ಸುತ್ತಮುತ್ತಲಿರುವ ರೈತರು ಕೂಡಾ.

ಇಸ್ಲಾಮಿಕ್‌ಗಿಂತಲೂ ಮೊದಲಿನ ಜಾವನ್ ಸಂಪ್ರದಾಯಗಳು ಇಸ್ಲಾಂ ಧರ್ಮವನ್ನು ಒಂದು ಅತೀತ ದಿಕ್ಕಿನಲ್ಲಿ ಪ್ರೋತ್ಸಾಹಿಸಿದವು. ಧಾರ್ಮಿಕ ನಾಯಕತ್ವದಲ್ಲಿ ಸಡಿಲವಾದ ರಚನೆ ಹೊಂದಿದ ಜಾವಾ ಸಮಾಜ ಸೃಷ್ಟಿಯಾಯಿತು, ಕ್ಯಾಯಿಸ್‌ ಗಳ ಮಧ್ಯೆ ಸುತ್ತುತ್ತಾ ಇಸ್ಲಾಮಿಕ್‌ಗಿಂತ ಮೊದಲಿನ ಮತ್ತು ಇಸ್ಲಾಮಿಕ್ ಸಿದ್ಧಾಂತ, ನಂಬಿಕೆ ಆಚಾರಗಳಲ್ಲಿ ಸಾಕಷ್ಟು ಏರುಪೇರುಗಳಾದವು. ಹಳ್ಳಿಗಳ ಜನರ ಮತ್ತು ಅಲೌಕಿಕ ಲೋಕಗಳ ಮಧ್ಯೆ ಕ್ಯಾಯೀಗಳು ಮಧ್ಯಸ್ಥಿಕೆ ವಹಿಸುತ್ತಾರೆ. ಆದಾಗ್ಯೂ, ಕ್ಯಾಯಿ ನಾಯಕತ್ವದ ರಚನೆಯಲ್ಲಿ ಬಿಗಿಯಾಗಿಲ್ಲದಿರುವಿಕೆಯ ಕಾರಣ ಅದು ಸ್ಚಿಸ್ಮ್‌ಗೆ ಉತ್ತೇಜನ ಸಿಕ್ಕಿತು. ಸಂಪ್ರದಾಯವಾದಿ ಕ್ಯಾಯಿಸ್‌ಗಳ ಮಧ್ಯೆ ತೀಕ್ಷ್ಣವಾದ ವಿಭಾಗಗಳಿವೆ, ಇಸ್ಲಾಮಿಕ್ ಕಾನೂನಿನಲ್ಲಿ ಮಿಸ್ಟಿಸಿಸಂ ಭೋದಿಸುವವರಿಗೆ ಅದನ್ನು ಬೋಧಿಸಲಾಗುತ್ತದೆ. ಇದಕ್ಕೆ ಪ್ರತಿಫಲವಾಗಿ, ಇಸ್ಲಾಮಿಕ್‌ನಲ್ಲಿ ನಂಬಿಕೆ ಇರುವ ಸಂತ್ರಿ ಮತ್ತು ಇಸ್ಲಾಮಿಕ್ ಅನಿಮಿಸ್ಟಿಕ್ ಮತ್ತು ಹಿಂದು-ಭಾರತೀಯ ನಂಬಿಕೆಗಳಲ್ಲಿ ವಿಶ್ವಾಸವಿರುವ ಅಬ್ಯಾಂಗನ್‌ ನಡುವೆ ವಿಭಾಗವಾಗಿದೆ.

ಇದರ ವಿಸ್ತಾರವಾದ ಪರಿಣಾಮವೆಂದರೆ ಬಿನ್ನಪಂಥಗಳ ಸಂಖ್ಯೆ. ೧೯೫೬ರ ಮಧ್ಯಭಾಗದಲ್ಲಿ, ಧಾರ್ಮಿಕ ಪ್ರಕರಣಗಳ ಶಾಖೆ ಯೋಗ್ಯಕರ್ತಾ ಅಧಿಕೃತ ಇಂಡೊನೇಷಿಯನ್ ಧರ್ಮಗಳಲ್ಲದೆ ಜಾವಾದಲ್ಲಿ ೬೩ ಧಾರ್ಮಿಕ ಒಳಪಂಗಡಗಳನ್ನು ದಾಖಲಿಸಿದೆ. ಇದರಲ್ಲಿ, ೩೫ ಮಧ್ಯ ಜಾವಾದಲ್ಲಿ, ೨೨ ಪಶ್ಚಿಮ ಜಾವಾದಲ್ಲಿ ಮತ್ತು ೬ ಪೂರ್ವ ಜಾವಾದಲ್ಲಿ ಇವೆ. ಅದರಲ್ಲಿ ಕೆಜಾವೆನ್, ಸುಮರಾಹ್, ಸುಬುದ್, ಇತ್ಯಾದಿಗಳೂ ಸೇರಿವೆ. ಅವುಗಳ ಒಟ್ಟು ಸದಸ್ಯರನ್ನು ಅಂದಾಜಿಸುವುದು ಕಷ್ಟ, ಏಕೆಂದರೆ ಅದರಲ್ಲಿ ಕೆಲವರು ಅಧಿಕೃತ ಧರ್ಮವನ್ನು ಪಾಲಿಸುತ್ತಿರುವುದಾಗಿ ಹೇಳುತ್ತಾರೆ.

ಟಿಪ್ಪಣಿಗಳು

ಆಕರಗಳು

  • Taylor, Jean Gelman (2003). Indonesia: Peoples and Histories. New Haven and London: Yale University Press. ISBN 0-300-10518-5.

ಹೆಚ್ಚಿನ ಓದಿಗಾಗಿ

  • Cribb, Robert (2000). Historical Atlas of Indonesia. London and Honolulu: RoutledgeCurzon Press, University of Hawaii Press. ISBN 0-8248-2111-4.

ಬಾಹ್ಯ ಕೊಂಡಿಗಳು

  1. REDIRECT Template:Provinces of Indonesia

Tags:

ದ್ವೀಪ ಜಾವಾ ಜಾವಾ ದ್ವೀಪದ್ವೀಪ ಜಾವಾ ವ್ಯುತ್ಪತ್ತಿದ್ವೀಪ ಜಾವಾ ಜಿಯೋಗ್ರಫಿದ್ವೀಪ ಜಾವಾ ಇತಿಹಾಸದ್ವೀಪ ಜಾವಾ ಜನಸಂಖ್ಯಾಶಾಸ್ತ್ರದ್ವೀಪ ಜಾವಾ ಆರ್ಥಿಕತೆದ್ವೀಪ ಜಾವಾ ಜನಾಂಗೀಯತೆ ಮತ್ತು ಸಂಸ್ಕೃತಿದ್ವೀಪ ಜಾವಾ ಭಾಷೆಗಳುದ್ವೀಪ ಜಾವಾ ಧರ್ಮದ್ವೀಪ ಜಾವಾ ಟಿಪ್ಪಣಿಗಳುದ್ವೀಪ ಜಾವಾ ಆಕರಗಳುದ್ವೀಪ ಜಾವಾ ಹೆಚ್ಚಿನ ಓದಿಗಾಗಿದ್ವೀಪ ಜಾವಾ ಬಾಹ್ಯ ಕೊಂಡಿಗಳುದ್ವೀಪ ಜಾವಾ

🔥 Trending searches on Wiki ಕನ್ನಡ:

ಅಡಿಕೆಕರಡಿಅನುವಂಶಿಕ ಕ್ರಮಾವಳಿಸಂಯುಕ್ತ ರಾಷ್ಟ್ರ ಸಂಸ್ಥೆಮಡಿವಾಳ ಮಾಚಿದೇವವೀಣೆಯಶವಂತ ಚಿತ್ತಾಲಹೆಳವನಕಟ್ಟೆ ಗಿರಿಯಮ್ಮಚಾಲುಕ್ಯಸಾಲುಮರದ ತಿಮ್ಮಕ್ಕವಿರಾಮ ಚಿಹ್ನೆರಚಿತಾ ರಾಮ್ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರಾಜೇಶ್ ಕುಮಾರ್ (ಏರ್ ಮಾರ್ಷಲ್)ಜವಾಹರ‌ಲಾಲ್ ನೆಹರುಊಳಿಗಮಾನ ಪದ್ಧತಿದಾಸ ಸಾಹಿತ್ಯಶಾಸನಗಳುಓಂ ನಮಃ ಶಿವಾಯತ್ರಿವೇಣಿಚಂದ್ರಗುಪ್ತ ಮೌರ್ಯದಾನ ಶಾಸನಸಾತ್ವಿಕಕರ್ನಾಟಕದ ಇತಿಹಾಸಅರ್ಜುನಡಾ ಬ್ರೋಭಾರತದ ರಾಜ್ಯಗಳ ಜನಸಂಖ್ಯೆಮುದ್ದಣಗೌತಮ ಬುದ್ಧಮಲೆನಾಡುತತ್ಪುರುಷ ಸಮಾಸಬಿ. ಆರ್. ಅಂಬೇಡ್ಕರ್ನಳಂದಭಾರತದ ಸಂಗೀತಭಾರತೀಯ ಭೂಸೇನೆಮುರುಡೇಶ್ವರಒಂದನೆಯ ಮಹಾಯುದ್ಧಗ್ರಂಥಾಲಯಗಳುವಾಸ್ತವಿಕವಾದಕಯ್ಯಾರ ಕಿಞ್ಞಣ್ಣ ರೈಬ್ರಾಹ್ಮಣಜಲಿಯನ್‍ವಾಲಾ ಬಾಗ್ ಹತ್ಯಾಕಾಂಡತೀರ್ಥಕ್ಷೇತ್ರಮಧ್ವಾಚಾರ್ಯವಿಕ್ರಮಾರ್ಜುನ ವಿಜಯಚೆನ್ನಕೇಶವ ದೇವಾಲಯ, ಬೇಲೂರುಸಂಧಿಮೊಘಲ್ ಸಾಮ್ರಾಜ್ಯಅಗಸ್ಟ ಕಾಂಟ್ಕನ್ನಡ ವ್ಯಾಕರಣಸಹಕಾರಿ ಸಂಘಗಳುವಿಜಯ ಕರ್ನಾಟಕಇಸ್ಲಾಂ ಧರ್ಮಶಾಲೆವಿಷ್ಣುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕರ್ನಾಟಕ ಲೋಕಸೇವಾ ಆಯೋಗಪ್ರಬಂಧ ರಚನೆಕರ್ನಾಟಕದ ಜಾನಪದ ಕಲೆಗಳುಕರ್ನಾಟಕದ ಮುಖ್ಯಮಂತ್ರಿಗಳುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ದ್ರಾವಿಡ ಭಾಷೆಗಳುಹೊಯ್ಸಳ ವಾಸ್ತುಶಿಲ್ಪಕಾದಂಬರಿಬಿ.ಎಫ್. ಸ್ಕಿನ್ನರ್ರೈತವಾರಿ ಪದ್ಧತಿಚಂದ್ರಶೇಖರ ಕಂಬಾರಸ್ವಚ್ಛ ಭಾರತ ಅಭಿಯಾನಸಾಮಾಜಿಕ ಸಮಸ್ಯೆಗಳುವಿರೂಪಾಕ್ಷ ದೇವಾಲಯಶಿವಮೊಗ್ಗಸುಧಾ ಮೂರ್ತಿಭಾರತೀಯ ರಿಸರ್ವ್ ಬ್ಯಾಂಕ್ದೇವರ/ಜೇಡರ ದಾಸಿಮಯ್ಯಕಲ್ಲಂಗಡಿಕರ್ನಾಟಕ ಹೈ ಕೋರ್ಟ್ಬಾಲಕಾಂಡಬನವಾಸಿ🡆 More