ಲೆಸೊಥೊ

ಲೆಸೊಥೊ ಆಫ್ರಿಕಾದ ದಕ್ಷಿಣಭಾಗದಲ್ಲಿರುವ ಒಂದು ದೇಶ.

ಇದು ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾ ರಾಷ್ಟ್ರದಿಂದ ಆವೃತವಾಗಿದೆ. ಲೆಸೊಥೊದ ವಿಸ್ತೀರ್ಣ ೩೦,೩೫೫ ಚ.ಕಿ.ಮೀ. ಮತ್ತು ಜನಸಂಖ್ಯೆ ಸುಮಾರು ೨೨ ಲಕ್ಷ. ರಾಷ್ಟ್ರದ ರಾಜಧಾನಿ ಮಸೇರು. ಹಲವು ಬುಡಕಟ್ಟುಗಳ ಪಾಳೆಯಗಾರರಿಂದ ಆಳಲ್ಪಡುತ್ತಿದ್ದ ಈ ಪ್ರದೇಶವು ೧೮೬೮ರಲ್ಲಿ ಬ್ರಿಟನ್ನಿನ ವಸಾಹತಾಯಿತು. ೧೯೬೫ರಲ್ಲಿ ಸ್ವಾಯತ್ತತೆಯನ್ನು ಪಡೆದ ಲೆಸೊಥೊ ೧೯೬೬ರಲ್ಲಿ ಸಂಪೂರ್ಣ ಸ್ವಾತಂತ್ರ್ಯ ಗಳಿಸಿತು. ಲೆಸೊಥೊ ಒಂದು ಸಾಂವಿಧಾನಿಕ ಅರಸೊತ್ತಿಗೆ. ಆದರೆ ಅರಸನ ಪದವಿ ಕೇವಲ ಅಲಂಕಾರಿಕ. ಬಹುಪಕ್ಷೀಯ ಸಂಸತ್ತನ್ನು ಹೊಂದಿರುವ ಲೆಸೊಥೊ ನಲ್ಲಿ ಬುಡಕಟ್ಟುಗಳ ನಾಯಕರಿಗೆ ವಿಶೇಷ ಸ್ಥಾನವಿದೆ. ಲೆಸೊಥೊದ ಎಲ್ಲಾ ಭೂಪ್ರದೇಶಗಳೂ ಸಮುದ್ರಮಟ್ಟದಿಂದ ೧೦೦೦ಮೀ. ಗೂ ಹೆಚ್ಚಿನ ಎತ್ತರದಲ್ಲಿವೆ. ವಿಶ್ವದಲ್ಲಿಯೇ ಇಂತಹ ಏಕೈಕ ಸ್ವತಂತ್ರ ರಾಷ್ಟ್ರ ಲೆಸೊಥೊ. ರಾಷ್ಟ್ರದ ಅರ್ಥ ವ್ಯವಸ್ಥೆಯು ಕೃಷಿ , ಉದ್ದಿಮೆಗಳು ಮತ್ತು ರಫ್ತು ವಹಿವಾಟನ್ನು ಅವಲಂಬಿಸಿದೆ. ನೆರೆಯ ದಕ್ಷಿಣ ಆಫ್ರಿಕಾ ದೇಶಕ್ಕೆ ಲೆಸೊಥೊ ನೀರು ಮತ್ತು ವಿದ್ಯುತ್ತನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸುತ್ತಿದೆ. ರಫ್ತಾಗುವ ಸರಕುಗಳಲ್ಲಿ ಮುಖ್ಯವಾದುವು ವಜ್ರ, ತುಪ್ಪಳ ಮತ್ತು ಚರ್ಮೋತ್ಪನ್ನಗಳು. ನಾಡಿನ ಪ್ರಮುಖ ಭಾಷೆ ಬಂಟು. ರೋಮನ್ ಕ್ಯಾಥೊಲಿಕ್ ಧರ್ಮೀಯರು ಬಹುಸಂಖ್ಯಾತರು. ದೇಶದ ೮೫% ಜನತೆ ಓದುಬರಹ ಬಲ್ಲರು. ಆರೋಗ್ಯ ಮತ್ತು ಸ್ವಾಸ್ಥ್ಯದ ವಿಚಾರದಲ್ಲಿ ಲೆಸೊಥೊ ಬಹಳ ಹಿಂದಿದೆ. ನಾಡಿನ ೨೯% ಜನತೆ ಏಡ್ಸ್ ರೋಗದಿಂದ ಪೀಡಿತರು. ಈ ಆತಂಕಕಾರಿ ಬೆಳವಣಿಗೆ ದೇಶದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಲೆಸೊಥೊ ರಾಜ್ಯ
Muso oa Lesotho
ಮುಸೊ ಒಅ ಲೆಸೊಥೊ
Flag of ಲೆಸೊಥೊ
Flag
Coat of arms of ಲೆಸೊಥೊ
Coat of arms
Motto: "Khotso, Pula, Nala"
(ಸೆಸೊಥೊ ಭಾಷೆಯಲ್ಲಿ: "ಶಾಂತಿ, ಮಳೆ, ಸಮೃದ್ಧಿ")
Anthem: Lesotho Fatse La Bontata Rona
Location of ಲೆಸೊಥೊ
Capital
and largest city
Maseru
Official languagesಸೆಸೊಥೊ ಭಾಷೆ, ಆಂಗ್ಲ
Demonym(s)Mosotho (singular), Basotho (plural)
Governmentಸಾಂವಿಧಾನಿಕ ಅರಸೊತ್ತಿಗೆ
• ರಾಜ
ಮುಮ್ಮಡಿ ಲೆತ್ಸಿ
• ಪ್ರಧಾನ ಮಂತ್ರಿ
ಪಾಲಲಿಥ ಮೊಸಿಸಿಲಿ
ಸ್ವಾತಂತ್ರ್ಯ
ಅಕ್ಟೊಬರ್ ೪, ೧೯೬೬
• Water (%)
negligible
Population
• ಜುಲೈ ೨೦೦೫ estimate
1,795,0001 (146th)
• ೨೦೦೪ census
2,031,348
GDP (PPP)೨೦೦೫ estimate
• Total
$4.996 billion (150th)
• Per capita
$2,113 (139th)
HDI (೨೦೦೩)0.494
low · 149th
Currencyಲೊಟಿ (LSL)
Time zoneUTC+2
Calling code೨೬೬
Internet TLD.ls
1 Estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected.

Tags:

ಅರಸಆಫ್ರಿಕಾಏಡ್ಸ್ ರೋಗಕೃಷಿದಕ್ಷಿಣ ಆಫ್ರಿಕಾನೀರುಬುಡಕಟ್ಟುಬ್ರಿಟಿಷ್ ಸಾಮ್ರಾಜ್ಯರಫ್ತುರಾಷ್ಟ್ರವಜ್ರವಿದ್ಯುತ್ಸಂವಿಧಾನಸಂಸತ್ತುಸ್ವಾತಂತ್ರ್ಯ೧೮೬೮೧೯೬೫೧೯೬೬

🔥 Trending searches on Wiki ಕನ್ನಡ:

ಪೂರ್ಣಚಂದ್ರ ತೇಜಸ್ವಿಪಾಂಡವರುಕೆ. ಎಸ್. ನಿಸಾರ್ ಅಹಮದ್ಆದೇಶ ಸಂಧಿಸಿದ್ದಲಿಂಗಯ್ಯ (ಕವಿ)ಟಿ.ಪಿ.ಕೈಲಾಸಂಕರ್ನಾಟಕದ ಮುಖ್ಯಮಂತ್ರಿಗಳುಮಲೆನಾಡುಗಣೇಶ ಚತುರ್ಥಿಭಾರತದ ರಾಷ್ಟ್ರಪತಿಹಿಂದೂ ಧರ್ಮಮೊಹೆಂಜೊ-ದಾರೋಚಾಣಕ್ಯಬೆಲ್ಲತಂತ್ರಜ್ಞಾನಕರ್ನಾಟಕದ ಕಲೆ ಮತ್ತು ಸಂಸ್ಕೃತಿಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಬಂಡಾಯ ಸಾಹಿತ್ಯಪಠ್ಯಪುಸ್ತಕಓಂ (ಚಲನಚಿತ್ರ)ಕೇಶಿರಾಜಭ್ರಷ್ಟಾಚಾರರಗಳೆಮಂಗಳೂರುಭಾರತದ ರಾಷ್ಟ್ರೀಯ ಉದ್ಯಾನಗಳುಕಾವೇರಿ ನದಿಭಾರತದಲ್ಲಿ ಬಡತನರಸ(ಕಾವ್ಯಮೀಮಾಂಸೆ)ಶ್ರೀರಂಗಪಟ್ಟಣಭಾರತೀಯ ಸಂವಿಧಾನದ ತಿದ್ದುಪಡಿರಾಗಿಮಹಾವೀರ ಜಯಂತಿಮಹಾವೀರಆಟಿಸಂಪರಿಸರ ರಕ್ಷಣೆಕಾವ್ಯಮೀಮಾಂಸೆಸಮುದ್ರನೇಮಿಚಂದ್ರ (ಲೇಖಕಿ)ಕೇರಳಸಾರಾ ಅಬೂಬಕ್ಕರ್ಪಂಜೆ ಮಂಗೇಶರಾಯ್ಸವದತ್ತಿಪುನೀತ್ ರಾಜ್‍ಕುಮಾರ್ಶನಿ (ಗ್ರಹ)ಬರಗೂರು ರಾಮಚಂದ್ರಪ್ಪಕಲಿಯುಗಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕುಮಾರವ್ಯಾಸಗೋಕಾಕ್ ಚಳುವಳಿಕನ್ನಡದಲ್ಲಿ ಸಾಂಗತ್ಯಕಾವ್ಯಕನ್ನಡ ಬರಹಗಾರ್ತಿಯರುಕನ್ನಡ ಸಾಹಿತ್ಯ ಸಮ್ಮೇಳನಕನ್ನಡ ಸಾಹಿತ್ಯ ಪರಿಷತ್ತುಭೀಷ್ಮಬಾಹುಬಲಿಕೃಷ್ಣದೇವರಾಯಭಾರತೀಯ ಭಾಷೆಗಳುಭಾರತದ ಬಂದರುಗಳುಯೋಗಕ್ರೈಸ್ತ ಧರ್ಮತಮಿಳುನಾಡುಸರಸ್ವತಿಭಾರತೀಯ ಕಾವ್ಯ ಮೀಮಾಂಸೆಪ್ರಹ್ಲಾದ ಜೋಶಿವಚನಕಾರರ ಅಂಕಿತ ನಾಮಗಳುಭಾರತೀಯ ಭೂಸೇನೆಪಂಜುರ್ಲಿಗಾದೆ ಮಾತುಖೊಖೊಭಾಮಿನೀ ಷಟ್ಪದಿಶುಂಠಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಕೃತಕ ಬುದ್ಧಿಮತ್ತೆಬಾದಾಮಿಭಾರತೀಯ ಸಂಸ್ಕೃತಿಕೆಂಬೂತ-ಘನತೇಜಸ್ವಿ ಸೂರ್ಯಬೇಲೂರು🡆 More