ವಿಶ್ವಕೋಶಗಳು

ವಿಶ್ವಕೋಶ ಲೋಕಜ್ಞಾನದ ಎಲ್ಲಾ ವಿಷಯಗಳನ್ನು ವ್ಯವಸ್ಥಿತವಾಗಿ ನಿರೂಪಿಸುವ ಗ್ರಂಥವಾಗಿದೆ.

ವಿಶ್ವಕೋಶಗಳು
ಚಿತ್ರ: ಬ್ರಿಟಾನಿಕ ಇಂಗ್ಲಿಷ್‌ ವಿಶ್ವಕೋಶದ ೧೫ನೇ ಆವೃತ್ತಿ (ಕ್ರಿ.ಶ ೧೯೭೪-೨೦೧೦)
ವಿಶ್ವಕೋಶಗಳು
ಚಿತ್ರ: ಇಂದು ಕಂಪ್ಯೂಟರ್‌ನಲ್ಲಿ ಆಂತರ್ಜಾಲದ ಮುಖೇನ ಲಭ್ಯವಿರುವ ವಿಶ್ವಕೋಶ

ಉಗಮ

ವಿಶ್ವಕೋಶ [ಇಂಗ್ಲಿಷ್: Encyclopedia / Encyclopaedia ಎನ್ಸೈಕ್ಲೋಪಿಡಿಯಾ] ಎನ್ನುವುದು ಹಲವು ವಿಷಯಗಳ ಅಥವಾ ಒಂದು ನಿರ್ದಿಷ್ಟ ವಿಷಯದ ಹಲವು ಅಂಶಗಳ ಮಾಹಿತಿಯ ಕುರಿತ ಲೇಖನಗಳ ಒಂದು ಸಂಗ್ರಹವಾಗಿದೆ.

ಚರಿತ್ರೆ

ವಿಶ್ವಕೋಶಗಳು 
ಚಿತ್ರ: Naturalis Historiæ - ೧೬೬೯ನೇ ಆವೃತ್ತಿಯ ಒಳಗಿನ ಶೀರ್ಷಿಕೆಯ ಪುಟ
  • ವಿಶ್ವಕೋಶಗಳು ಹಾಗೂ ವಿಶ್ವಕೋಶದಂಥ ರಚನೆಗಳು ಸುಮಾರು ೨೦೦೦ ವರ್ಷಗಳಿಗಿಂತ ಮುಂಚೆಯಿಂದಲೂ ಅಸ್ತಿತ್ವದಲ್ಲಿರುವುದು ಕಂಡುಬರುತ್ತದೆ. ಕ್ರಿ.ಪೂ ೧೧೬-೨೭ ರಲ್ಲಿ ರೋಮ್‌ನ ಮಾರ್ಕಸ್ ಟೆರೆನ್ಸಿಅಸ್ ವಾರ್ರೋ (Marcus Terentius Varro) ಎಂಬಾತನು 'ನೈನ್ ಬುಕ್ಸ್ ಆಫ್ಹ್ ಡಿಸಿಪ್ಲೀನ್ಸ್' (Nine Books of Disciplines) ಎಂಬ ವಿಶ್ವಕೋಶದಂತ ಕೃತಿಯನ್ನು ರಚಿಸಿದನು. ಇದು ಮುಂದೆ ವಿಶ್ವಕೋಶಕರ್ತರುಗಳಿಗೆ, ಪ್ರಮುಖವಾಗಿ ಫ್ಲಿನಿ ದಿ ಎಲ್ಡರ್ ಎಂಬಾತನಿಗೆ ಮಾದರಿಯಾಯಿತು.
  • ಕ್ರಿ.ಶ. ೭೭-೭೯ ರಲ್ಲಿ ರೋಮ್‌ನ ಫ್ಲಿನಿ ದಿ ಎಲ್ಡರ್ (Pliny the Elder) 'ನ್ಯಾಚುರಲ್ ಹಿಸ್ಟರಿ' (Natural History, Naturalis Historia) ಎಂಬ ವಿಶ್ವಕೋಶದಂತ ರಚನೆಯನ್ನು ರಚಿಸಿದನು.ಕ್ರಿ.ಶ ೮೦೦ ರಲ್ಲಿ ಚೀನಾದ ಟುಯು ಎಂಬಾತ ರಚಿಸಿದ್ದ ವಿಶ್ವಕೋಶದಲ್ಲಿ ವಿಷಯಗಳನ್ನು ಕ್ರಮಬದ್ದವಾಗಿ ವಿಂಗಡಿಸಲಾಗಿತ್ತು. ಇದು ಚೀನಾದ ಮಹತ್ವಪೂರ್ಣ ವಿಶ್ವಕೋಶವೆನಿಸಿತು.
  • ಕ್ರಿ.ಶ ೯೪೭-೧೦೦೨ ರ ಕಾಲದಲ್ಲಿ ಚೀನಾದ ಉಷು ಎಂಬಾತ ೩೦ ಸಂಪುಟಗಳ ವಿಶ್ವಕೋಶವನ್ನು ರಚಿಸಿದ್ದನೆಂದು ತಿಳಿಯಲಾಗಿದೆ. ಇದು ಚೀನಾ ದೇಶವನ್ನಾಳಿದ ಕ್ರಿ.ಶ ೧೫ನೇ ಶತಮಾನದ ಚಕ್ರವರ್ತಿ ಯುಂಗಲೊ ಮತ್ತು ಕ್ರಿ.ಶ ೧೮ನೇ ಶತಮಾನದ ಕಾಂಗ್ ಹ್ಸಿ ಇವರಿಗಾಗಿ ವಿಶ್ವಕೋಶವನ್ನು ರಚಿಸಲಾಗಿತ್ತೆಂದು ತಿಳಿಯಲಾಗಿದೆ. ಆಧುನಿಕ ವಿಶ್ವಕೋಶಗಳು ನಿಘಂಟುಗಳ ವಿಕಸಿತ ರಚನೆಗಳಾಗಿದ್ದು, ಅವು ಸುಮಾರು ಕ್ರಿ.ಶ ೧೭-೧೮ ನೇ ಶತಮಾನದ ಅವಧಿಯಲ್ಲಿ ರೂಪತಾಳಿದವು.
ವಿಶ್ವಕೋಶಗಳು 
ಚಿತ್ರ: ಬ್ರಿಟಾನಿಕ ಇಂಗ್ಲಿಷ್ ವಿಶ್ವಕೋಶದ ಮೊದಲ ಆವೃತ್ತಿಯ (ಕ್ರಿ.ಶ ೧೭೬೮-೧೭೭೧) ನಕಲು
ವಿಶ್ವಕೋಶಗಳು 
ಚಿತ್ರ: ಬ್ರಿಟಾನಿಕ ಇಂಗ್ಲಿಷ್ ವಿಶ್ವಕೋಶದ ಮೊದಲ ಆವೃತ್ತಿಯ (ಕ್ರಿ.ಶ ೧೭೬೮-೧೭೭೧) ನಕಲಿನ ಒಳಗಿನ ಶೀರ್ಷಿಕೆಯ ಪುಟ
ವಿಶ್ವಕೋಶಗಳು 
ಚಿತ್ರ: ಬ್ರಿಟಾನಿಕ ಇಂಗ್ಲಿಷ್ ವಿಶ್ವಕೋಶದ ಮೊದಲ ಆವೃತ್ತಿಯ (ಕ್ರಿ.ಶ ೧೭೬೮-೧೭೭೧) ನಕಲಿನ ಒಳಗಿನ ಒಂದು ಲೇಖನದ ಪುಟ
ವಿಶ್ವಕೋಶಗಳು 
ಚಿತ್ರ: ಬ್ರಿಟಾನಿಕ ಇಂಗ್ಲಿಷ್ ವಿಶ್ವಕೋಶದ ಮೂರನೇ ಆವೃತ್ತಿ (ಕ್ರಿ.ಶ ೧೭೬೮-೧೭೯೧)
ವಿಶ್ವಕೋಶಗಳು 
ಚಿತ್ರ: Brockhaus Konversations Lexikon - ಜರ್ಮನ್ ಭಾಷೆಯ ವಿಶ್ವಕೋಶದ ೧೪ನೇ ಆವೃತ್ತಿ (ಕ್ರಿ.ಶ 1896–1908)

ವಿಧಗಳು

  1. ಕನ್ನಡ ವಿಶ್ವಕೋಶ
  2. ಕನ್ನಡ ವಿಷಯ ವಿಶ್ವಕೋಶ
  3. ಜಾನಪದ ವಿಶ್ವಕೋಶ
  4. ಜಾನಪದ ವಿಷಯ ವಿಶ್ವಕೋಶ
  5. ವಿಜ್ಞಾನ ವಿಶ್ವಕೋಶ
  6. ಬಾಲಜ್ಞಾನ ಕೋಶ - ಇತ್ತಾದಿ

ಪ್ರಸಿದ್ಧ ವಿಶ್ವಕೋಶಗಳು

  • ಎನ್ಸೈಕ್ಲೊಪೀಡಿಅ ಬ್ರಿಟಾನಿಕ: ಇದು ಇಂಗ್ಲಿಷ್‌ನ ಅತ್ಯಂತ ಹಳೆಯ (ಸಮಕಾಲೀನ) ಸಾಮಾನ್ಯ ವಿಶ್ವಕೋಶವಾಗಿದೆ . ಇದು ಮೊದಲು ಕ್ರಿಶ ೧೭೬೮ ರಲ್ಲಿ ಪ್ರಕಟವಾಯಿತು.
  • ವಿಕಿಪೀಡಿಅ: ಇದು ಒಂದು ಅಂತರ್ಜಾಲ-ಆಧಾರಿತ ವಿಶ್ವಕೋಶವಾಗಿದ್ದು, ಇದರಲ್ಲಿ ಹಲವು ಭಾಷೆಗಳಲ್ಲಿ ಲೇಖನಗಳು ಲಭ್ಯವಿದೆ. ಇದರ ಇಂಗ್ಲಿಷ್ ಆವೃತ್ತಿಯಲ್ಲಿ ಪ್ರಸ್ತುತ ೪.೭ ದಶಲಕ್ಷಕ್ಕಿಂತಲೂ ಹೆಚ್ಚಿನ ಲೇಖನಗಳು ಲಭ್ಯವಿದೆ.

ಭಾರತದಲ್ಲಿ ವಿಶ್ವಕೋಶಗಳ ರಚನೆ

  1. ಪೌರಾಣಿಕ ವಿಷಯಗಳೊಡನೆ ವೈದ್ಯಕೀಯ, ವ್ಯಾಕರಣ, ನಾಟ್ಯ, ಸಂಗೀತ, ಜ್ಯೋತಿಶಾಸ್ತ್ರ ಮುಂತಾದ ವಿಷಯಗಳನ್ನೊಳಗೊಂಡ 'ಗರುಡ ಪುರಾಣ', 'ಅಗ್ನಿಪುರಾಣ' ಮತ್ತು 'ನಾರದ ಪುರಾಣ'ಗಳನ್ನು "ವಾಙ್ಮಯ ವಿಶ್ವಕೋಶಗಳು" ಎನ್ನಲಾಗುತ್ತದೆ.
  2. 'ಷಡ್ದರ್ಶನ ಸಮುಚ್ಚಯ' ಎಂಬ ಆಯುರ್ವೇದ ಗ್ರಂಥ ಸಹ ವಿಶ್ವಕೋಶ ಸ್ವರೂಪದ್ದು ಎನ್ನಲಾಗಿದೆ. ಅಲ್ಲದೆ 'ಆಗ್ನೇಯ ಪುರಾಣ'ವನ್ನು ಸರ್ವವಿದ್ಯಾಸಂಗ್ರಹವೆಂದು ಕರೆದು ಅದರ ವಿಶ್ವಕೋಶ ಸ್ವರೂಪವನ್ನು ತಿಳಿಸಲಾಗಿದೆ.
  3. ಕ್ರಿ.ಶ ೧೯೦೨-೧೯೧೧ ರಲ್ಲಿ ಬಂಗಾಳದಲ್ಲಿ ರಂಗಲಾಲ್ ಮುಖರ್ಜಿ ಮತ್ತು ನಾಗೇಂದ್ರನಾಥಬಸು ಇವರ ಸಂಪಾದಕತ್ವದಲ್ಲಿ ಪ್ರಟವಾದ ಬಂಗಾಳಿಭಾಷೆಯ ೨೨ ಸಂಪುಟಗಳ ವಿಶ್ವಕೋಶವೆ ಭಾರತದ ಪ್ರಪ್ರಥಮ ವಿಶ್ವಕೋಶ ಎನ್ನಲಾಗಿದೆ.
  4. ಕ್ರಿ.ಶ ೧೯೧೩ ರಲ್ಲಿ ಕೊಮರಾಜು ವೆಂಕಟಲಕ್ಷ್ಮಣರಾವ್ ಎಂಬುವವರು ಎನ್ಸೈಕ್ಲೊಪೀಡಿಅ ಬ್ರಿಟಾನಿಕ ಮಾದರಿಯಲ್ಲಿ, ತೆಲುಗಿನಲ್ಲಿ ವಿಶ್ವಕೋಶ ಪ್ರಕಟಿಸಲು ಪ್ರಯತ್ನಿಸಿದ್ದರು.
  5. ಕ್ರಿ.ಶ ೧೯೫೪-೧೯೬೩ ರಲ್ಲಿ ತಮಿಳುನಾಡಿನ ಚೆನೈನಲ್ಲಿರುವ ತಮಿಳು ಆಭಿವೃದ್ಧಿಸಂಸ್ಥೆಯು ೯ ಸಂಪುಟಗಳ ತಮಿಳು ವಿಶ್ವಕೋಶವನ್ನು ಪ್ರಕಟಿಸಿರುತ್ತದೆ.
  6. ಕ್ರಿ.ಶ ೧೯೭೨ ರಲ್ಲಿ ಕೇರಳ ಸರ್ಕಾರ ವಿಶ್ವಕೋಶ ಇಲಾಖೆಯೊಂದನ್ನು ಸ್ಥಾಪಿಸಿ ಸರ್ವವಿಜ್ಞಾನಕೋಶಮ್ ಎಂಬ ೨೦ ಸಂಪುಟಗಳ ವಿಶ್ವಕೋಶವನ್ನು ಪ್ರಕಟಿಸಿರುತ್ತದೆ.
  7. ಕಾಶ್ಮೀರ, ಅಸ್ಸಾಂ, ಒಡಿಶಾ, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಬಂಗಾಳ ಮುಂತಾದ ರಾಜ್ಯಗಳು ಅವುಗಳ ರಾಜ್ಯ ಭಾಷೆಯಲ್ಲಿ ವಿಶ್ವಕೋಶಗಳನ್ನು ಪ್ರಕಟಿಸುತ್ತಿವೆ.

ಕನ್ನಡದಲ್ಲಿ ವಿಶ್ವಕೋಶಗಳ ರಚನೆ

  1. ಕ್ರಿ.ಶ ೧೫೦೦ ರಲ್ಲಿ ನಿಜಗುಣಶಿವಯೋಗಿ ರಚಿಸಿದ 'ವಿವೇಕ ಚಿಂತಾಮಣಿ' ಕನ್ನಡದ ಅತ್ಯಂತ ಹಳೆಯ ವಿಶ್ವಕೋಶದಂತ ರಚನೆಯಾಗಿದೆ.
  2. ಕ್ರಿಶ ೧೯೬೯ ನವೆಂಬರ್ ೨೧ ರಂದು 'ಕನ್ನಡ ವಿಶ್ವಕೋಶ' ಸಂಪುಟಗಳು ಬಿಡುಗಡೆಯಾದವು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Notes

Tags:

ವಿಶ್ವಕೋಶಗಳು ಉಗಮವಿಶ್ವಕೋಶಗಳು ಚರಿತ್ರೆವಿಶ್ವಕೋಶಗಳು ವಿಧಗಳುವಿಶ್ವಕೋಶಗಳು ಪ್ರಸಿದ್ಧ ವಿಶ್ವಕೋಶಗಳು ಭಾರತದಲ್ಲಿ ವಿಶ್ವಕೋಶಗಳ ರಚನೆವಿಶ್ವಕೋಶಗಳು ಕನ್ನಡದಲ್ಲಿ ವಿಶ್ವಕೋಶಗಳ ರಚನೆವಿಶ್ವಕೋಶಗಳು ಉಲ್ಲೇಖಗಳುವಿಶ್ವಕೋಶಗಳು ಬಾಹ್ಯ ಸಂಪರ್ಕಗಳುವಿಶ್ವಕೋಶಗಳು

🔥 Trending searches on Wiki ಕನ್ನಡ:

ಜೇನು ಹುಳುಮಹಾತ್ಮ ಗಾಂಧಿಚಾರ್ಲಿ ಚಾಪ್ಲಿನ್ಆಯತ (ಆಕಾರ)ಶಿವಕುಮಾರ ಸ್ವಾಮಿಕನಕದಾಸರುಟಿ.ಪಿ.ಕೈಲಾಸಂಉಡುಪಿ ಜಿಲ್ಲೆಒಡೆಯರ್ರಾಷ್ಟ್ರೀಯ ಸೇವಾ ಯೋಜನೆವ್ಯಕ್ತಿತ್ವಮೈಗ್ರೇನ್‌ (ಅರೆತಲೆ ನೋವು)ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಅಮ್ಮೊನೈಟ್ಮತದಾನಅರಿಸ್ಟಾಟಲ್‌ಉತ್ತರ ಕರ್ನಾಟಕಅಲಿಪ್ತ ಚಳುವಳಿದ್ವಿಗು ಸಮಾಸಸಿದ್ಧಯ್ಯ ಪುರಾಣಿಕಭಾರತದ ಸ್ವಾತಂತ್ರ್ಯ ಚಳುವಳಿವಿನಾಯಕ ಕೃಷ್ಣ ಗೋಕಾಕಜಾಗತಿಕ ತಾಪಮಾನಪತ್ನಿ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತಮೊದಲನೇ ಅಮೋಘವರ್ಷಗುಪ್ತಗಾಮಿನಿ (ಧಾರಾವಾಹಿ)ಯುನೈಟೆಡ್ ಕಿಂಗ್‌ಡಂಭಾರತಕುಬೇರಬೆಳಗಾವಿಚಂಪಾರಣ್ ಸತ್ಯಾಗ್ರಹಕಾಜೊಲ್ವಸಾಹತುಭಾರತದ ಸಂಸತ್ತುತಂತ್ರಜ್ಞಾನಸ್ಯಾಮ್‌ಸಂಗ್‌ಉಪನಯನಪರಿಮಾಣ ವಾಚಕಗಳುದುರ್ವಿನೀತಚದುರಂಗದ ನಿಯಮಗಳುಸೌರಮಂಡಲಗಾದೆಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಜೋಗಿ (ಚಲನಚಿತ್ರ)ಪರಿಸರ ರಕ್ಷಣೆಲೋಪಸಂಧಿಕಾಂತಾರ (ಚಲನಚಿತ್ರ)ಮಳೆನೀರು ಕೊಯ್ಲುಬೌದ್ಧ ಧರ್ಮಜೀವವೈವಿಧ್ಯಭೂಮಿಸಾರ್ವಜನಿಕ ಹಣಕಾಸುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಡಾ ಬ್ರೋಹನುಮಂತಭಾರತದ ರಾಷ್ಟ್ರೀಯ ಉದ್ಯಾನಗಳುದಿಯಾ (ಚಲನಚಿತ್ರ)ಫುಟ್ ಬಾಲ್ಕರ್ನಾಟಕದ ತಾಲೂಕುಗಳುರಮ್ಯಾಸಾವಿತ್ರಿಬಾಯಿ ಫುಲೆನವಣೆನೀರುಹೊಯ್ಸಳಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಮೆಂತೆದರ್ಶನ್ ತೂಗುದೀಪ್ಬೃಂದಾವನ (ಕನ್ನಡ ಧಾರಾವಾಹಿ)ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ21ನೇ ಶತಮಾನದ ಕೌಶಲ್ಯಗಳುಬಂಡಾಯ ಸಾಹಿತ್ಯಹಣ್ಣುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಕಲಾಕೃತಿ (ಸಾಂಸ್ಕೃತಿಕ ಉತ್ಸವ)ಉತ್ತರ ಕನ್ನಡಮಾರುಕಟ್ಟೆಬಿ.ಜಯಶ್ರೀ🡆 More